ಯೆಹೋವನು, ಮಹತ್ಕಾರ್ಯಗಳನ್ನು ನಡಿಸುವಾತನು
“ಮಹೋನ್ನತನೂ ಮಹತ್ಕಾರ್ಯಗಳನ್ನು ನಡಿಸುವವನೂ ನೀನು; ದೇವರು ನೀನೊಬ್ಬನೇ.”—ಕೀರ್ತನೆ 86:10.
1, 2. (ಎ)ಮಾನವನ ಸಂಶೋಧನೆಗಳು ಲೋಕದ ಮೇಲೆ ಹೇಗೆ ಪರಿಣಾಮಬೀರಿವೆ? (ಬಿ)ಉತ್ತಮ ವಿಷಯಗಳ ನಿರೀಕ್ಷೆಯನ್ನು ನಾವು ಎಲ್ಲಿ ಕಂಡುಕೊಳ್ಲಬಹುದು?
ಆಧುನಿಕ ಮಾನವನು ತನ್ನ ಸಂಶೋಧನಗೆಳನ್ನು ಮಹತ್ಕಾರ್ಯಗಳು—ವಿದ್ಯುತ್ತಿನ ಸಾಧನಗಳು, ದೂರಸಂಪರ್ಕಗಳು, ವಿಡಿಯೋ, ಸ್ವಯಂಚಾಲಿತ ವಾಹನ, ಜೆಟ್ ವಿಮಾನ ಸಂಚಾರ, ಮತ್ತು ಕಂಪ್ಯೂಟರನ್ನೊಳಗೂಡಿದ ತಂತ್ರಜ್ಞಾನ—ಎಂದು ಕೊಚ್ಚಿಕೊಳ್ಳಬಹುದು. ಇವುಗಳು ಪ್ರಪಂಚವನ್ನು ಒಂದು ಹತ್ತಿರದ ನೆರೆಹೊರೆಯನ್ನಾಗಿ ಮಾಡಿವೆ. ಆದರೆ ಎಂಥಾ ನೆರೆಹೊರೆ! ಶಾಂತಿ, ಅಭ್ಯುದಯ, ಮತ್ತು ಎಲ್ಲರಿಗೆ ಸಮೃದ್ಧಿಯ ಬದಲಿಗೆ, ಮಾನವ ಕುಲವು ಹತಿಸುವ ಯುದ್ಧಗಳು, ದುಷ್ಕರ್ಮಗಳು, ಭಯವಾದ, ಮಾಲಿನ್ಯ, ರೋಗಗಳು, ಮತ್ತು ದಾರಿದ್ರ್ಯದಿಂದ ಬಾಧಿಸಲ್ಪಟ್ಟಿದೆ. ಮತ್ತು ಲೋಕದಲ್ಲೆಲ್ಲಾ ಹರಡಿರುವ ಅಣ್ವಸ್ತ್ರ ಆಯುಧಗಳು, ಸಂಖ್ಯೆಯಲ್ಲಿ ಕಡಿಮೆಗೊಳಿಸಲ್ಪಟ್ಟರೂ, ಇನ್ನೂ ಮಾನವ ಕುಲವನ್ನು ಹಲವಾರು ಬಾರಿ ನಿರ್ಮೂಲಗೊಳಿಸಶಕ್ತವಾಗಿವೆ. ಮೃತ್ಯುವಿನ ವ್ಯಾಪಾರಿಗಳು, ಶಸ್ತ್ರಾಯುಧಗಳ ತಯಾರಕರು ಭೂಮಿಯ ಮೇಲೆ ತಮ್ಮ ವ್ಯವಹಾರವನ್ನು ನಡಿಸುವುದನ್ನು ಮುಂದರಿಸುತ್ತಾ ಇದ್ದಾರೆ. ಶ್ರೀಮಂತರು ಇನ್ನಷ್ಟು ಶ್ರೀಮಂತಿಕೆಯಲ್ಲಿ ಬೆಳೆಯುತ್ತಿದ್ದಾರೆ, ಮತ್ತು ಬಡವರು ಇನ್ನಷ್ಟು ಬಡವರಾಗುತ್ತಾ ಇದ್ದಾರೆ. ಇದಕ್ಕೊಂದು ಪರಿಹಾರವನ್ನು ಯಾರಾದರೂ ಕಂಡುಕೊಳ್ಳಶಕ್ತರೋ?
2 ಹೌದು! ಬಿಡುಗಡೆಯನ್ನು ಖಾತ್ರಿಮಾಡಿರುವ ಒಬ್ಬನು, “ಉನ್ನತೋನ್ನತನಾದ” ಯೆಹೋವ ದೇವರು ಇದ್ದಾನೆ. (ಪ್ರಸಂಗಿ 5:8) ಸಂಕಟದ ಸಮಯಗಳಿಗಾಗಿ ಬಹಳಷ್ಟು ಸಂತೈಸುವಿಕೆ ಮತ್ತು ವಿವೇಕಭರಿತ ಬುದ್ಧಿವಾದವನ್ನು ಕೊಡುವ ಕೀರ್ತನೆಗಳನ್ನು ಅವನು ಬರೆಯಲು ಪ್ರೇರೇಪಣೆ ಕೊಟ್ಟನು. ಅವುಗಳಲ್ಲಿ ಕೀರ್ತನೆ 86 ಒಂದಾಗಿದೆ, ಇದರ ಸರಳ ಮೇಲು ಬರಹವು ಹೀಗಿದೆ: “ದಾವೀದನ ಪ್ರಾರ್ಥನೆ.” ಈ ಪ್ರಾರ್ಥನೆಯನ್ನು ನಿಮ್ಮ ಸ್ವಂತದ್ದಾಗಿಯೂ ಮಾಡಬಹುದಾಗಿದೆ.
ಬಾಧಿಸಲ್ಪಟ್ಟನು ಆದರೆ ನಿಷ್ಠೆಯವನು
3. ಈ ಸಮಯಗಳಲ್ಲಿ, ದಾವೀದನು ನಮಗೋಸ್ಕರ ಯಾವ ಉತ್ತೇಜಕ ಉದಾಹರಣೆಯನ್ನು ಒದಗಿಸಿದ್ದಾನೆ?
3 ಬಾಧೆಯ ಕೆಳಗೆ ಇದ್ದಾಗ ದಾವೀದನು ಈ ಕೀರ್ತನೆಯನ್ನು ಬರೆದನು. ಇಂದು ನಾವು ಸೈತಾನನ ವ್ಯವಸ್ಥೆಯ “ಕಡೇ ದಿನಗಳಲ್ಲಿ” ಜೀವಿಸುತ್ತಿರುವವರು ಈ “ಕಠಿಣಕಾಲಗಳೊಂದಿಗೆ ವ್ಯವಹರಿಸ”ಬೇಕಾಗಿದ್ದು ತದ್ರೀತಿಯ ಶೋಧನೆಗಳನ್ನು ಎದುರಿಸುತ್ತೇವೆ. (2 ತಿಮೊಥೆಯ 3:1, [NW]; ಇದನ್ನೂ ನೋಡಿರಿ ಮತ್ತಾಯ 24:9-13.) ನಮ್ಮಂತೆ, ಅವನನ್ನು ಬಾಧಿಸುತ್ತಿದ್ದ ಸಮಸ್ಯೆಗಳ ಕಾರಣ, ದಾವೀದನು ವ್ಯಾಕುಲತೆಗಳಿಂದ ಮತ್ತು ಖಿನ್ನತೆಯಿಂದ ಸಂಕಷ್ಟಕ್ಕೊಳಗಾದನು. ಆದರೆ ತನ್ನ ನಿರ್ಮಾಣಿಕನಲ್ಲಿ ಅವನಿಗಿದ್ದ ನಿಷ್ಟೆಯ ಭರವಸೆಯನ್ನು ಆ ಶೋಧನೆಗಳು ದುರ್ಬಲಗೊಳಿಸುವಂತೆ ಅವನೆಂದೂ ಬಿಟ್ಟುಕೊಡಲಿಲ್ಲ. ಅವನು ಮೊರೆಯಿಟ್ಟದ್ದು: “ಯೆಹೋವನೇ, ಕಿವಿಗೊಡು; ನನಗೆ ಸದುತ್ತರವನ್ನು ದಯಪಾಲಿಸು; ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ. ನಾನು ನಿನ್ನ ಭಕ್ತನು; ನನ್ನ ಪ್ರಾಣವನ್ನು ಉಳಿಸು; ನೀನೇ ನನ್ನ ದೇವರು; ನಿನ್ನಲ್ಲಿ ಭರವಸವಿಟ್ಟಿರುವ ನಿನ್ನ ಸೇವಕನನ್ನು ರಕ್ಷಿಸು.”—ಕೀರ್ತ. 86:1, 2.
4. ನಮ್ಮ ಭರವಸವನ್ನು ನಾವು ಹೇಗೆ ತೋರಿಸತಕ್ಕದ್ದು?
4 ನಾವು ದಾವೀದನಂತೆ “ಸಕಲವಿಧವಾಗಿ ಸಂತೈಸುವ ದೇವರು,” ಯೆಹೋವನು ಭೂಮಿಯೆಡೆಗೆ ತನ್ನ ಕಿವಿಯನ್ನು ತಿರುಗಿಸಿ, ನಮ್ಮ ನಮ್ರತೆಯ ಪ್ರಾರ್ಥನೆಗಳನ್ನು ಆಲಿಸುವನೆಂಬ ಭರವಸೆಯಿಂದಿರಬಲ್ಲೆವು. (2 ಕೊರಿಂಥ 1:3, 4) ಪೂರ್ಣವಿಶ್ವಾಸದಿಂದ ನಮ್ಮ ದೇವರಲ್ಲಿ ಭರವಸೆಯನ್ನಿಡುವದರ ಮೂಲಕ, ನಾವು ದಾವೀದನ ಸಲಹೆಯನ್ನು ಅನುಸರಿಸಬಹುದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”—ಕೀರ್ತನೆ 55:22.
ಯೆಹೋವನೊಂದಿಗೆ ಆಪ್ತತೆ
5. (ಎ)ಯೆಹೂದ್ಯ ಶಾಸ್ತ್ರಿಗಳ ತಪ್ಪುಗಳನ್ನು ಕೆಲವು ಜಾಗ್ರತೆಯ ತರ್ಜುಮೆಗಳು ಹೇಗೆ ವಿಪರ್ಯಸ್ತಗೊಳಿಸಿವೆ? (ಬಿ)ಯೆಹೋವನನ್ನು 85ನೆಯ ಮತ್ತು 86ನೆಯ ಕೀರ್ತನೆಗಳು ಯಾವ ರೀತಿಯಲ್ಲಿ ಮಹಿಮೆಪಡಿಸುತ್ತವೆ? (ಪಾದಟಿಪ್ಪಣಿಯನ್ನು ನೋಡಿರಿ.)
5 ಕೀರ್ತನೆ 86 ರಲ್ಲಿ ದಾವೀದನು “ಯೆಹೋವನೇ” ಎಂಬ ಪದವನ್ನು 11 ಬಾರಿ ಉಪಯೋಗಿಸುತ್ತಾನೆ. ದಾವೀದನ ಪ್ರಾರ್ಥನೆಯು ಎಷ್ಟೊಂದು ಕಟ್ಟಾಸಕ್ತಿಯದ್ದಾಗಿದೆ ಮತ್ತು ಯೆಹೋವನೊಂದಿಗೆ ಅವನ ಆಪ್ತಸಂಬಂಧವು ಎಷ್ಟೊಂದು ನಿಕಟವಾಗಿದೆ! ನಂತರದಲ್ಲಿ, ಯೆಹೂದ್ಯ ಶಾಸ್ತ್ರಿಗಳಲ್ಲಿ, ಗಮನಾರ್ಹವಾಗಿ ಸೋಫರಿಮ್ರಲ್ಲಿ ದೇವರ ನಾಮದ ಅಷ್ಟು ಸಾಮೀಪ್ಯದ ಬಳಕೆಯು ಅರುಚಿಯದ್ದಾಗಿ ಪರಿಣಮಿಸಿತು. ನಾಮದ ದುರ್ಬಳಕೆಯಾಗಬಹುದೆಂಬ ಮೂಢನಂಬಿಕೆಯ ಹೆದರಿಕೆಯನ್ನು ಅವರು ಪೋಷಿಸಿದರು. ದೇವರ ಸ್ವರೂಪದಲ್ಲಿ ಮನುಷ್ಯನು ನಿರ್ಮಿಸಲ್ವಟ್ಟಿದ್ದಾನೆಂಬ ವಾಸ್ತವಾಂಶವನ್ನು ಅವರು ಅಲಕ್ಷಿಸಿ, ಮಾನವರು ಕೂಡ ಪ್ರದರ್ಶಿಸುವ ಗುಣಲಕ್ಷಣಗಳು ದೇವರಿಗೆ ಸೇರಿದುದೆಂದು ಎಣಿಸಲು ಅವರು ನಿರಾಕರಿಸಿದುರು. ಆದುದರಿಂದ ಈ ಒಂದು ಕೀರ್ತನೆಯ ಹೀಬ್ರು ಗ್ರಂಥದಲ್ಲಿ ಬರುವ ದೈವಿಕ ನಾಮದ 11 ಸಂಭವಗಳಲ್ಲಿ 7 ಬಾರಿ YHWH (Jehovah, ಯೆಹೋವ) ಹೆಸರಿನ ಬದಲಿಗೆ ʹAdho-naiʼ (Lord, ಕರ್ತ) ಎಂಬ ಬಿರುದನ್ನು ಹಾಕಿದರು. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಮತ್ತು ಇನ್ನಿತರ ಅನೇಕ ಜಾಗ್ರತೆಯ ತರ್ಜುಮೆಗಳು ದೈವಿಕ ನಾಮವನ್ನು ದೇವರ ವಾಕ್ಯದಲ್ಲಿ ಅದರ ಹಕ್ಕಿನ ಸ್ಥಾನದಲ್ಲಿ ಪುನಃ ಸ್ಥಾಪಿಸಿದ್ದಕ್ಕಾಗಿ ನಾವು ಆಭಾರಿಗಳಾಗಿರಬಲ್ಲೆವು. ಇದರ ಫಲವಾಗಿ, ಎಷ್ಟು ಇರತಕ್ಕದ್ದೋ ಅಷ್ಟು ಯೆಹೋವನೊಂದಿಗೆ ನಮ್ಮ ಸಂಬಂಧ ಇರುವಂತೆ ಒತ್ತರವನ್ನು ಹಾಕಲಾಗಿದೆ.a
6. ನಮಗೆ ಯೆಹೋವನ ನಾಮವು ಅತ್ಯಮೂಲ್ಯವಾದದ್ದು ಎಂದು ನಾವು ಯಾವ ವಿಧಗಳಲ್ಲಿ ತೋರಿಸಬಲ್ಲೆವು?
6 ದಾವೀದನ ಪ್ರಾರ್ಥನೆಯು ಮುಂದರಿಯುವುದು: “ಕರ್ತನೇ, [ಯೆಹೋವನೇ, NW] ಕರುಣಿಸು; ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ. ಕರ್ತನೇ, [ಯೆಹೋವನೇ, NW] ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು; ನಿನ್ನನ್ನೇ ನಿರೀಕ್ಷಿಸುತ್ತಿರುವೆನಲ್ಲಾ.” (ಕೀರ್ತನೆ 86:3,4) “ದಿನವೆಲ್ಲಾ” ದಾವೀದನು ಯೆಹೋವನನ್ನು ಕರೆಯುತ್ತಾ ಇದ್ದನು ಎಂಬುದನ್ನು ಗಮನಿಸಿರಿ. ಖಂಡಿತವಾಗಿಯೂ, ಅವನು ಅರಣ್ಯದಲ್ಲಿ ದೇಶಭೃಷ್ಟನೋಪಾದಿ ಇದ್ದಾಗ, ರಾತ್ರಿಯಲ್ಲಿಲ್ಲಾ ಅವನು ಆಗಾಗ್ಗೆ ಪ್ರಾರ್ಥಿಸಿದ್ದನು. (ಕೀರ್ತನೆ 63:6, 7) ತದ್ರೇತಿಯಲ್ಲಿ ಇಂದು, ಬಲತ್ಕಾರಸಂಭೋಗ ಯಾ ಇತರ ಪಾತಕದ ಆಕ್ರಮಣದ ಬೆದರಿಕೆಗೊಳಪಟ್ಟಾಗ, ಕೆಲವು ಸಾಕ್ಷಿಗಳು ಯೆಹೋವನಿಗೆ ಗಟ್ಟಿಯಾಗಿ ಮೊರೆಯಿಟ್ಟಿದ್ದಾರೆ. ಕೆಲವೊಮ್ಮೆ ಆನಂದದ ಫಲಿತಾಂಶದಿಂದಾಗಿ ಅವರು ಆಶ್ಚರ್ಯಪಟ್ಟಿದ್ದಾರೆ.b ಯೆಹೋವನ ಹೆಸರು, “ದಾವೀದನ ಮಗನಾದ ಯೇಸು ಕ್ರಿಸ್ತ”ನಿಗೆ ಭೂಮಿಯಲ್ಲಿದ್ದಾಗ ಇದ್ದಂತೆ, ನಮಗೆ ಕೂಡ ಅತ್ಯಮೂಲ್ಯವಾಗಿದೆ. ಯೆಹೋವನ ಹೆಸರಿನ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸುವಂತೆ ಯೇಸುವು ತನ್ನ ಶಿಷ್ಯರಿಗೆ ಕಲಿಸಿದನು ಮತ್ತು ಆ ಹೆಸರು ಯಾವುದನ್ನು ಪ್ರತಿನಿಧಿಸುತ್ತದೆ ಎಂದು ಅವರಿಗೆ ತಿಳಿಯಪಡಿಸಿದನು.—ಮತ್ತಾಯ 1:1; 6:9; ಯೋಹಾನ 17:6, 25, 26.
7. ತನ್ನ ಸೇವಕರ ಆತ್ಮಗಳೇ ಸಂತೋಷಪಡುವಂತೆ ಯೆಹೋವನು ಕಾರಣವಾದ ಯಾವ ಉದಾಹರಣೆಗಳು ನಮಗೆ ಇವೆ, ಮತ್ತು ನಾವು ಹೇಗೆ ಪ್ರತಿವರ್ತಿಸಬೇಕು?
7 ದಾವೀದನು ತನ್ನಾತ್ಮವನ್ನು, ಸಂಪೂರ್ಣವಾಗಿ ತನ್ನನ್ನು ಯೆಹೋವನಿಗೆ ವಹಿಸಿಕೂಟ್ಟಿದ್ದನು. ನಾವು ಹಾಗೆ ಮಾಡುವಂತೆ ನಮ್ಮನ್ನು ಅವನು ಉತ್ತೇಜಿಸುತ್ತಾ, ಕೀರ್ತನೆ 37:5 ರಲ್ಲಿ ಹೇಳುವದು: “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.” ಹೇಗೆ, ನಮ್ಮ ಆತ್ಮವನ್ನು ಆನಂದಗೊಳಿಸುವಂತೆ ಮಾಡುವ ನಮ್ಮ ವಿನಂತಿಯನ್ನು ಯೆಹೋವನು ಉತ್ತರಿಸದೆ ಬಿಡುವದಿಲ್ಲ. ಯೆಹೋವನ ಯಥಾರ್ಥತ್ವ—ಪಾಲಕರಾದ ಅನೇಕ ಸೇವಕರು ಅವನ ಸೇವೆಯಲ್ಲಿ—ಕಷ್ಟಗಳ, ಹಿಂಸೆಗಳ, ಮತ್ತು ರೋಗಗಳ ನಡುವೆಯೂ—ಮಹಾ ಆನಂದವನ್ನು ಕಂಡುಕೊಳ್ಳುವದನ್ನು ಮುಂದರಿಸಿದ್ದರೆ. ಆಂಗೋಲಾ, ಲೈಬಿರೇಯ, ಮೊಸಂಬೀಕ್, ಮತ್ತು ಸೈಯ್ರೇ ಮುಂತಾದ ಆಫ್ರಿಕಾದ ಯುದ್ಧ—ಛಿದ್ರ ಪ್ರದೇಶಗಳಲ್ಲಿರುವ ನಮ್ಮ ಸಹೋದರರು ಅವರ ಜೀವಿತಗಳಲ್ಲಿ ಯೆಹೋವನ ಸೇವೆಯನ್ನು ಪ್ರಥಮವಾಗಿರಿಸುವದನ್ನು ಮುಂದರಿಸಿದ್ದಾರೆ.c ವಿಪುಲವಾದ ಆತ್ಮಿಕ ಕೊಯ್ಲಿನಲ್ಲಿ ಅವರು ಆನಂದಿಸುವಂತೆ ಅವನು ಖಂಡಿತವಾಗಿ ಕಾರಣನಾಗಿದ್ದಾನೆ. ಅವರು ತಾಳಿಕೊಂಡಿದ್ದಂತೆಯೇ, ನಾವು ಇರತಕ್ಕದ್ದು. (ರೋಮಾಪುರ 5:3-5) ಮತ್ತು ನಾವು ತಾಳಿಕೂಂಡಿದ್ದಂತೆಯೇ, ನಮಗೆ ಆಶ್ವಾಸನೆಯನ್ನೀಯಲಾಗಿದೆ: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ [ಅಂತ್ಯಕ್ಕೆ, NW] ತ್ವರೆಪಡುತ್ತದೆ. . . . . ತಾಮಸವಾಗದು.” (ಹಬಕ್ಕೂಕ 2:3) ಯೆಹೋವನಲ್ಲಿ ಸಂಪೂರ್ಣ ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ, “ಪರಿಣಾಮಕ್ಕೆ [ಅಂತ್ಯಕ್ಯೆ, NW] ತ್ವರೆಪಡುವದನ್ನು” ನಾವು ಕೂಡ ಮಾಡುತ್ತಿರೋಣ.
ಯೆಹೋವನ ಒಳ್ಲೇತನ
8. ಯೆಹೋವನೊಂದಿಗೆ ನಮಗೆ ಯಾವ ಆಪ್ತತೆ ಇರಸಾಧ್ಯವಿದೆ, ಮತ್ತು ತನ್ನ ಒಳ್ಳೇತನವನ್ನು ಅವನು ಹೇಗೆ ವ್ಯಕ್ತಪಡಿಸಿದ್ದಾನೆ?
8 ದಾವೀದನು ಇನ್ನೂ ಉದ್ರೇಕದಿಂದ ಬಲವಾದ ವಿನಂತಿಯನ್ನು ಮಾಡುತ್ತಾನೆ: “ಕರ್ತನೇ, [ಯೆಹೋವನೇ, NW] ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ. ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಶಬ್ದವನ್ನು ಲಾಲಿಸು. ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.” (ಕೀರ್ತನೆ 86:5-7) “ಯೆಹೋವನೇ,” ಎಂಬ ಈ ಪದ ಆಪ್ತತೆಯಿಂದ ನಾವು ಪುನಃ ಪುನಃ ಪುಳಕಿತಗೊಳ್ಳುತ್ತೇವೆ! ಪ್ರಾರ್ಥನೆಯ ಮೂಲಕ ನಿರಿಂತರವೂ ನಾವು ಬೆಳೆಸಬಹುದಾದ ಆಪ್ತತೆಯು ಆದಾಗಿರುತ್ತದೆ. ಇನ್ನೊಂದು ಸಂದರ್ಭದಲ್ಲಿ ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ದ್ರೋಹಗಳನ್ನು ಮನಸ್ಸಿನಲ್ಲಿಡದೆ ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಸು.” (ಕೀರ್ತನೆ 25:7) ಯೇಸುವಿನ ವಿಮೋಚನೆಯನ್ನು ಒದಗಿಸುವದರಲ್ಲಿ, ಪಶ್ಚಾತ್ತಾಪ ಪಟ್ಟ ಪಾಪಿಗಳಿಗೆ ಕರುಣೆಯನ್ನು ತೋರಿಸಿದ್ದರಲ್ಲಿ, ಮತ್ತು ಅವನ ನಿಷ್ಠೆಯ ಮತ್ತು ಗಣ್ಯತೆಯುಳ್ಳ ಸಾಕ್ಷಿಗಳಿಗೆ ಪ್ರೀತಿ-ದಯೆಗಳನ್ನು ಸುರಿಸಿದ್ದರಲ್ಲಿ, ಯೆಹೋವನು ಒಳ್ಳೇತನದ ಸಾರವೇ ಆಗಿದ್ದಾನೆ.—ಕೀರ್ತನೆ 100:3-5; ಮಲಾಕಿಯ 3:10.
9. ಪಶ್ಚಾತ್ತಾಪ ಪಟ್ಟ ಪಾಪಿಗಳು ತಮ್ಮ ಹೃದಯಕ್ಕೆ ತಕ್ಕೊಳ್ಳಬೇಕಾದ ಆಶ್ವಾಸನೆ ಏನಾಗಿದೆ?
9 ನಮ್ಮ ಹಿಂದಿನ ಪಾಪಗಳಿಗಾಗಿ ಪರಿತಪಿಸುತ್ತಿರಬೇಕೋ? ಈಗ ನಮ್ಮ ಕಾಲುಗಳನ್ನು ನೇರವಾದ ಮಾರ್ಗದಲ್ಲಿ ನಡಿಸುತ್ತಿರುವುದಾದರೆ, ಪಶ್ಚಾತ್ತಾಪ ಪಟ್ಟವರಿಗೆ ಯೆಹೋವನಿಂದ “ವಿಶ್ರಾಂತಿಕಾಲಗಳು” ಬರುವದರ ಕುರಿತು ಅಪೊಸ್ತಲ ಪೇತ್ರನ ಆಶ್ವಾಸನೆಯು ನಮ್ಮ ನೆನಪಿಗೆ ತರುವಾಗ, ನಾವು ಮೇಲೆತ್ತಲ್ಪಡುತ್ತೇವೆ. (ಅ. ಕೃತ್ಯಗಳು 3:19) ಯೆಹೋವನಿಗೆ ಪ್ರಾರ್ಥನೆಯಲ್ಲಿ ನಿಕಟವಾಗಿ, ನಮ್ಮನ್ನು ಪ್ರೀತಿಯಿಂದ ಕರೆದಾತನಾದ ನಮ್ಮ ವಿಮೋಚಕನಾದ ಯೇಸುವಿನ ಮೂಲಕ ಇಟ್ಟುಕೊಳ್ಳೋಣ, ಆತನು ಪ್ರೀತಿಯಿಂದ ಅಂದದ್ದು: “ಎಲೈಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.” ಇಂದು ನಿಷ್ಠ ಸಾಕ್ಷಿಗಳು ಯೇಸುವಿನ ಅಮೂಲ್ಯವಾದ ಹೆಸರಿನಲ್ಲಿ ಯೆಹೋವನಿಗೆ ಪ್ರಾರ್ಥಿಸುತ್ತಿರುವಲ್ಲಿ, ಅವರು ಖಂಡಿತವಾಗಿಯೂ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಾರೆ.—ಮತ್ತಾಯ 11:28, 29; ಯೋಹಾನ 15:16.
10. ಯೆಹೋವನ ಕೃಪೆಗೆ ಕೀರ್ತನೆಗಳ ಪುಸ್ತಕವು ಎಂತಹ ಪ್ರಾಧಾನ್ಯತೆಯನ್ನು ಕೊಡುತ್ತದೆ?
10 ಕೀರ್ತನೆಗಳ ಪುಸ್ತಕವು ಯೆಹೋವನ “ಕೃಪೆ, [ಪ್ರೀತಿ-ದಯೆ, NW]”ಯನ್ನು ನೂರಕ್ಕಿಂತಲೂ ಹೆಚ್ಚು ಬಾರಿ ಸೂಚಿಸುತ್ತದೆ. ಅಂಥಾ ಪ್ರೀತಿ-ದಯೆಯು ಖಂಡಿತವಾಗಿಯೂ ವಿಫುಲವಾಗಿದೆ! ಅದರ ಮೊದಲ ನಾಲ್ಕು ವಚನಗಳಲ್ಲಿ, 118ನೆಯ ಕೀರ್ತನೆಯು, ನಾಲ್ಕು ಬಾರಿ “ಆತನ ಕೃಪೆಯು ಶಾಶ್ವತ”ವೆಂದು ಪುನರಾವರ್ತಿಸುತ್ತಾ ಯೆಹೋವನಿಗೆ ಉಪಕಾರ ಸಲ್ಲಿಸಲು ದೇವರ ಸೇವಕರಿಗೆ ಅಪೀಲ್ ಮಾಡುತ್ತದೆ. ಕೀರ್ತನೆ 136ರಲ್ಲಿ ಈ “ಕೃಪೆ”ಯ ಮೊಹಕವಾಗ ಗುಣವನ್ನು 26 ಬಾರಿ ಹೇಳುತ್ತಾ ಒತ್ತರವನ್ನು ಹಾಕುತ್ತದೆ. ಯಾವುದೇ ವಿಧದಲ್ಲಿ ನಾವು ತಪ್ಪುಗೈಯುವುದಾದರೂ—ಯಾಕೋಬ 3:2 ರಲ್ಲಿ “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.” ಹೇಳುವಂತೆ—ಅವನ ಕರುಣೆ ಮತ್ತು ಪ್ರೀತಿ-ದಯೆಯ ಪೂರ್ಣವಿಶ್ವಾಸವುಳ್ಳವರಾಗಿ ಯೆಹೋವನ ಕ್ಷಮಾಪಣೆಯನ್ನು ಹುಡುಕಲು ನಾವು ಸಿದ್ಧರಾಗಿರೋಣ. ಅವನ ಪ್ರೀತಿಪಾತ್ರ-ದಯೆಯು ನಮ್ಮೆಡೆಗಿನ ಅವನ ನಿಷ್ಠೆಯುಳ್ಳ ಪ್ರೀತಿಯ ವ್ಯಕ್ತಪಡಿಸುವಿಕೆಯಾಗಿದೆ ನಾವು ನಿಷ್ಠೆಯಿಂದ ದೇವರ ಚಿತ್ತವನ್ನು ಮಾಡುವುದನ್ನು ಮುಂದರಿಸುವುದಾದರೆ, ಪ್ರತಿಯೊಂದು ಶೋಧನೆಯನ್ನು ನಿಭಾಯಿಸಿಕೊಳ್ಳಲು ನಮ್ಮನ್ನು ಬಲಪಡಿಸುವದರಲ್ಲಿ ಆತನು ತನ್ನ ನಿಷ್ಠೆಯುಳ್ಳ ಪ್ರೀತಿಯನ್ನು ತೋರಿಸುವನು.—1 ಕೊರಿಂಥ 10:13.
11. ಅಪರಾಧ ಭಾವನೆಗಳನ್ನು ತೆಗೆಯಲು ಹಿರಿಯರ ಕ್ರಿಯೆಯು ಹೇಗೆ ಸಹಾಯಮಾಡಬಹುದು?
11 ಇತರಿಂದ ನಾವು ಎಡವಿಬೀಳುವ ಸಂದರ್ಭಗಳು ಅನೇಕವಿರಬಹುದು. ಬಾಲ್ಯದ ಸಮಯದಲ್ಲಿ ನಡೆದ ಭಾವನಾತ್ಮಕ ಯಾ ದೈಹಿಕ ದುರುಪಯೋಗಗಳು ಕೆಲವರ ಮೇಲೆ ತಪ್ಪಿನ ಯಾ ತೀರ ನಿಷ್ಪ್ರಯೋಜಕತೆಯ ಭಾವನೆಯನ್ನು ಬಿಟ್ಟುಹೋಗಿರಬಹುದು. ಹಾಗೆ ಬಲಿಯಾದವನು, ತನಗೆ ಯೆಹೋವನು ಉತ್ತರವನ್ನೀಯುವನು ಎಂಬ ಭರವಸೆಯಿಂದ ಅವನಿಗೆ ಮೊರೆಯಿಡಬಹುದು. (ಕೀರ್ತನೆ 55:16, 17) ಹಾಗೆ ಬಲಿಯಾದವನ ದೋಷವಲ್ಲವೆಂಬ ವಾಸ್ತವಾಂಶವನ್ನು ಅಂಥವನು ಸ್ವೀಕರಿಸುವಂತೆ ಸಹಾಯಮಾಡುವದರಲ್ಲಿ, ದಯಾಭರಿತ ಹಿರಿಯನೊಬ್ಬನು ಅಭಿರುಚಿಯನ್ನು ತಕ್ಕೊಳ್ಳಬಹುದು. ಅದರನಂತರ, ಅವನು (ಯಾ ಅವಳು) ಕಟ್ಟಕಡೆಗೆ ‘ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳ’ಲು ಸಾಧ್ಯವಾಗುವ ತನಕ ಹಿರಿಯನಿಂದ ಒಂದು ನಿಯತಕಾಲಿಕ ಸ್ನೇಹಪರಪೋನ್ ಕರೆಯು ಸಹಾಯ ನೀಡಬಲ್ಲದು.—ಗಲಾತ್ಯ 6:2, 5.
12. ಸಂಕಟಗಳು ಹೇಗೆ ಬಹುಸಂಖ್ಯಾತವಾಗಿವೆ, ಆದರೆ ಅವುಗಳನ್ನು ಯಶಸ್ವಿಯಾಗಿ ನಾವು ಹೇಗೆ ನಿಭಾಯಿಸಬಹುದು?
12 ಇಂದು ಯೆಹೋವನ ಜನರು ಹೋರಾಡಲಿರುವ ಇನ್ನಿತರ ಅನೇಕ ಸಂಕಟಮಯ ಪರಿಸ್ಥಿತಿಗಳು ಇವೆ. ಮೊದಲನೆಯ ಲೋಕ ಯುದ್ಧವು 1914 ರಲ್ಲಿ ಆರಂಭಿಸಿದಂದಿನಿಂದ, ಪ್ರಧಾನ ವಿಪತ್ತುಗಳು ಲೋಕವನ್ನು ಬಾಧಿಸಲು ಆರಂಭಿಸಿವೆ. ಯೇಸುವಿನಿಂದ ಮುಂತಿಳಿಸಲ್ವಟ್ಟಂತೆ, ಅವುಗಳು “ಪ್ರಸವವೇದನೆಯ ಪ್ರಾರಂಭ”ವಾಗಿದ್ದವು. “ಯುಗದ ಸಮಾಪ್ತಿಯ”ಲ್ಲಿ ಇನ್ನಷ್ಟು ಆಳಕ್ಕೆ ನಾವು ಮುಂದರಿದಂತೆ, ಸಂಕಟಗಳು ವೃದ್ಧಿಯಾದವು. (ಮತ್ತಾಯ 24:3, 8) ಪಿಶಾಚನ “ಕೊಂಚ ಸಮಯವು” ಅದರ ಪರಾಕಾಷ್ಠೆಯ ಅಂತ್ಯದೆಡೆಗೆ ಕೊನೆಮುಟ್ಟುತ್ತಾ ಇದೆ. (ಪ್ರಕಟನೆ 12:12) ಬೇಟೆಯಾಹಾರದ ಹುಡುಕುವಿಕೆಯಲ್ಲಿ “ಗರ್ಜಿಸುತ್ತಿರುವ ಸಿಂಹದೋಪಾದಿ”, ದೇವರ ಮಂದೆಯಿಂದ ನಮ್ಮನ್ನು ಪ್ರತ್ಯೇಕಿಸಲು ಮತ್ತು ನಾಶಮಾಡಲು ಮಹಾ ವೈರಿಯು ದೊರಕುವಂಥಾ ಪ್ರತಿಯೊಂದು ಕುಯುಕ್ತಿಯನ್ನು ಉಪಯೋಗಿಸುತ್ತಿದ್ದಾನೆ. (1 ಪೇತ್ರ 5:8) ಆದರೆ ಅವನು ಯಶಸ್ವಿಯಾಗುವುದಿಲ್ಲ! ಯಾಕಂದರೆ, ದಾವೀದನಂತೆ ನಾವು ಏಕದೇವರಾದ ಯೆಹೋವನಲ್ಲಿ ನಮ್ಮ ಸಂಪೂರ್ಣ ಭರವಸದ ಲಂಗರವನ್ನು ಹಾಕಿದ್ದೇವೆ.
13. ಹೆತ್ತವರು ಮತ್ತು ಅವರ ಮಕ್ಕಳು ಯೆಹೋವನ ಒಳ್ಳೇತನವನ್ನು ತಾವಾಗಿಯೇ ಹೇಗೆ ದೊರಕಿಸಿಕೊಳ್ಳಬಹುದು?
13 ನಿಸ್ಸಂದೇಹವಾಗಿ, ಯೆಹೋವನ ಒಳ್ಳೇತನದ ಮೇಲೆ ಆತುಕೊಳ್ಳುವ ಅವಶ್ಯಕತೆಯ ಕುರಿತು ದಾವೀದನು ತನ್ನ ಮಗನಾದ ಸೊಲೊಮೋನನ ಹೃದಯದಲ್ಲಿ ನೆಟ್ಟಿದ್ದನು. ಹೀಗೆ, ಸೊಲೊಮೋನನು ತನ್ನ ಸ್ವಂತ ಮಗನಿಗೆ ಹೇಗೆ ಹೇಳಶಕ್ತನಾದನು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.” (ಜ್ಞಾನೋಕ್ತಿ 3:5-7) ತದ್ರೀತಿಯಲ್ಲಿ ಹೆತ್ತವರು ಇಂದು, ಯೆಹೋವನೊಡನೆ ಭರವಸಪೂರ್ವಕವಾಗಿ ಹೇಗೆ ಪ್ರಾರ್ಥಿಸುವದು ಮತ್ತು ನಿರ್ದಯಿ ಲೋಕದ ಆಕ್ರಮಣಗಳನ್ನು—ಶಾಲೆಯಲ್ಲಿ ಸಂಗಾತಿಗಳ ಒತ್ತಡ ಮತ್ತು ಅನೈತಿಕತೆಯನ್ನು ಮಾಡಲು ಶೊಧನೆಗಳು ಇವೇ ಮುಂತಾದವುಗಳನ್ನು—ನಿಭಾಯಿಸುವುದು ಹೇಗೆ ಎಂದು ತಮ್ಮ ಚಿಕ್ಕಮಕ್ಕಳಿಗೆ ಕಲಿಸಬೇಕಾಗಿದೆ. ಪ್ರತಿದಿನ ಸತ್ಯಕ್ಕನುಸಾರ ನಿಮ್ಮ ಮಕ್ಕಳೊಡನೆ ಜೀವಿಸುವದು ಅವರ ಎಳೆಯ ಹೃದಯಗಳಲ್ಲಿ ಯೆಹೋವನಿಗಾಗಿ ನಿಜ ಪ್ರೀತಿ ಮತ್ತು ಅವನ ಮೇಲೆ ಪ್ರಾರ್ಥನಾಪೂರ್ವಕ ಆತುಕೊಳ್ಳುವಿಕೆಯ ಪ್ರಭಾವವನ್ನು ಒತ್ತಬಹುದು.—ಧರ್ಮೊಪದೇಶಕಾಂಡ 6:4-9; 11:18, 19.
ಯೆಹೋವನ ಅಸದೃಶ ಕಾರ್ಯಗಳು
14, 15. ಯೆಹೋವನ ಅಸದೃಶವಾದ ಕೆಲವು ಕೃತ್ಯಗಳು ಯಾವುವು?
14 ಆಳವಾದ ಮನವರಿಕೆಯಿಂದ ದಾವೀದನು ಹೇಳುವದು: “ಕರ್ತನೇ, [ಯೆಹೋವನೇ, NW] ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.” (ಕೀರ್ತನ 86:8) ಯೆಹೋವನ ಕಾರ್ಯಗಳು ಯಾವನೇ ಮಾನವನು ಊಹಿಸಲು ಸಾಧ್ಯವಿರುವದಕ್ಕಿಂತಲೂ ಭಾರಿಯಾದದ್ದೂ, ಮಹತ್ತಾದದ್ದೂ, ಘನ ಗಾಂಭೀರ್ಯದ್ದೂ ಅಗಿವೆ. ಆಧುನಿಕ ವಿಜ್ಞಾನದಿಂದ ಕ್ಷಣಿಕವಾಗಿ ನೋಡಿರುವಂತೆ, ಸೃಷ್ಟಿಸಲ್ಪಟ್ಟ ವಿಶ್ವವು—ಅದರ ವಿಸ್ತಾರತೆ, ಅದರ ಸಾಮರಸ್ಯವು, ಅದರ ಘನಗಾಂಭೀರ್ಯವು—ದಾವೀದನು ಗ್ರಹಿಸಿಕೊಂಡದ್ದಕ್ಕಿಂತಲೂ ಎಷ್ಟೋ ಅಧಿಕ ಬೃಹತ್ಗಾತ್ರದಾಗಿದೆ ಎಂದು ರುಜುಪಡಿಸಿದೆ, ಆದರೂ, ಅವನೂ ಕೂಡ ಹೇಗೆ ಹೇಳುವಂತೆ ನಡಿಸಲ್ವಟ್ಟನು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.”—ಕೀರ್ತನ 19:1.
15 ಹಗಲು, ರಾತ್ರಿಗಳು, ಋತುಗಳು, ಬೀಜಬಿತ್ತುವ ಸಮಯ ಮತ್ತು ಕೊಯ್ಲು, ಮತ್ತು ಭವಿಷ್ಯದಲ್ಲಿ ಮಾನವ ಸಂತೋಷಕ್ಕೆ ಬೇಕಾದ ಅನೇಕಾನೇಕ ಹಿಗ್ಗುಗಳನ್ನು ಒದಗಿಸುತ್ತಾ, ಭೂಮಿಯ ನೆಲೆಗೊಳಿಸಿಟ್ಟ ಮತ್ತು ಸಿದ್ಧಮಾಡಿದ ರೀತಿಯಿಂದಲೂ ಕೂಡ ಯೆಹೋವನ ಕೃತ್ಯಗಳು ಬೆರಗೆಗೊಳಿಸುವ ವಿಧದಲ್ಲಿ ಚಿತ್ರಿಸಲ್ಪಟ್ಟಿವೆ. ಮತ್ತು ಸ್ವತಃ ನಾವು ಎಷ್ಟೊಂದು ಆಶ್ಚರ್ಯಕರ ರೀತಿಯಲ್ಲಿ ಮಾಡಲ್ಪಟ್ಟಿದ್ದೇವೆ ಮತ್ತು ಅಣಿಗೊಳಿಸಲ್ವಟ್ಟಿದ್ದೇವೆ, ಆ ಮೂಲಕ ನಮ್ಮ ಸುತ್ತಲಿರುವ ಯೆಹೋವನ ಕಾರ್ಯಗಳಲ್ಲಿ ನಾವು ಆನಂದಿಸಶಕ್ತರಾಗಿದ್ದೇವೆ!—ಆದಿಕಾಂಡ 2:7-9; 8:22; ಕೀರ್ತನೆ 139:14.
16. ಯೆಹೋವನ ಒಳ್ಳೇತನದ ಮಹತ್ತಾದ ವ್ಯಕ್ತಪಡಿಸುವಿಕೆ ಯಾವುದು, ಯಾವ ಅಸದೃಶವಾದ ಕಾರ್ಯಗಳಿಗೆ ನಡಿಸುತ್ತದೆ?
16 ಇಂದಿನ ತನಕ ಭೂಮಿಯನ್ನು ಬಾಧಿಸುತ್ತಿರುವ ಸಂಕಟಗಳಿಗೆ ಚಾಲನೆಯನ್ನಿತ್ತ ನಮ್ಮ ಮೊದಲ ಹೆತ್ತವರು ದೇವರಿಗೆ ಅವಿಧೇಯರಾದನಂತರ, ಯೆಹೋವನು ತನ್ನ ಪ್ರೀತಿಯ ನಿಮಿತ್ತ ದೇವರ ರಾಜ್ಯವನ್ನು ಘೋಷಿಸಲು ಮತ್ತು ಮಾನವಕುಲಕ್ಕಾಗಿ ವಿಮೋಚನೆಯೋಪಾದಿ ಸಾಯಲು ಭೂಮಿಯ ಮೇಲೆ ತನ್ನ ಮಗನನ್ನು ಕಳುಹಿಸಿದ್ದರಲ್ಲಿ ಒಂದು ಮಹತ್ಕಾರ್ಯವನ್ನು ನಡಿಸಿದನು. ಮತ್ತು ಆಶ್ಚರ್ಯಗಳಲ್ಲಿ ಆಶ್ಚರ್ಯ! ತನ್ನ ಸಂಗಾತಿ ಆಯ್ದ-ಅರಸನಾಗಲು ಕ್ರಿಸ್ತನನ್ನು ಯೆಹೋವನು ನಂತರ ಪುನರುತ್ಥಾನಗೊಳಿಸಿದನು. (ಮತ್ತಾಯ 20:28; ಅ. ಕೃತ್ಯಗಳು 2:32, 34) ಕೋಟಿಗಟ್ಟಲೆ ಪುನರುತ್ಥಿತ ಮಾನವರು ಸೇರಿರುವ “ನೂತನ ಭೂಮಂಡಲ” ಸಮಾಜದ ಮೇಲೆ ಒಳ್ಳೆಯದನ್ನು ಮಾಡುವ “ನೂತನ ಆಕಾಶಮಂಡಲ”ದೋಪಾದಿ ಕ್ರಿಸ್ತನೊಂದಿಗೆ ಆಳಲಿರುವ, ನಿಷ್ಠೆಯ ಮಾನವರೊಳಗಿಂದ ದೇವರು ಒಂದು “ನೂತನ ಸೃಷ್ಟಿ”ಯನ್ನು ಕೂಡ ಆರಿಸಿದ್ದಾನೆ. (2 ಕೊರಿಂಥ 5:17; ಪ್ರಕಟನೆ 21:1, 5-7; 1 ಕೊರಿಂಥ 15:22-26) ಈ ರೀತಿಯಲ್ಲಿ ಯೆಹೋವನ ಕಾರ್ಯಗಳು ಒಂದು ಪರಾಕಾಷ್ಠೆಗೆ ತಲುಪುವವು! ನಿಜವಾಗಿಯೂ ನಾವು ಹೇಗೆ ಘೋಷಿಸಬಲ್ಲೆವು: “ಯೆಹೋವನೇ, . . . . ಸದ್ಭಕ್ತರಿಗೋಸ್ಕರ ನೀನು ಇಟ್ಟುಕೊಂಡಿರುವ ಮೇಲೂ ಆಶ್ರಿತರಿಗೋಸ್ಕರ ನೀನು ಎಲ್ಲರ ಮುಂದೆ ಮಾಡಿದ ಉಪಕಾರಗಳೂ ಎಷ್ಟೋ ವಿಶೇಷವಾಗಿವೆ.”—ಕೀರ್ತನೆ 31:17-19.
17. ಯೆಹೋವನ ಕಾರ್ಯಗಳ ಕುರಿತಾಗಿ, ಕೀರ್ತನೆ 86:9 ಈಗ ಹೇಗೆ ನೆರವೇರುತ್ತಾ ಇದೆ?
17 ಯೆಹೋವನ ಆಧುನಿಕ ದಿನಗಳ ಕಾರ್ಯಗಳು ಕೀರ್ತನೆ 86:9 ರಲ್ಲಿ ದಾವೀದನು ವರ್ಣಿಸಿದ್ದರಲ್ಲಿ ಒಳಗೂಡಿವ: “ಕರ್ತನೇ, [ಯೆಹೋವನೇ, NW] ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವರು.” ತನ್ನ ನೂತನ ಸೃಷ್ಟಿಯ—ರಾಜ್ಯದ ಬಾಧ್ಯಸ್ಥರ “ಚಿಕ್ಕ ಹಿಂಡು”—ಉಳಿದವರನ್ನು ಮಾನವಕುಲದಿಂದ ಕರೆದಾದ ಮೇಲೆ, “ಎಲ್ಲಾ ಜನಾಂಗಗಳಿಂದ” ಯೇಸುವಿನ ಸುರಿದ ರಕ್ತದ ಮೇಲೆ ನಂಬಿಕೆಯನ್ನು ಪ್ರದರ್ಶಿಸುವ ಲಕ್ಷಾಂತರ “ಬೇರೆ ಕುರಿ”ಗಳ “ಮಹಾಸಮೂಹ”ವನ್ನು ಒಟ್ಟುಗೂಡಿಸಲು ಯೆಹೋವನು ಮುಂದರಿದಿದ್ದಾನೆ. ಇವುಗಳನ್ನು ಅವನು ಒಂದು ಶಕ್ತಿಶಾಲಿ ಸಂಸ್ಥಾಪನೆಯಾಗಿ, ಇಂದು ಭೂಮಿಯ ಮೇಲೆ ಶಾಂತಿಪ್ರಿಯರ ಏಕಮಾತ್ರ ಭೌಗೋಳಿಕ ಸಮಾಜವಾಗಿ ಕಟ್ಟಿದ್ದಾನೆ. ಇದನ್ನು ಅವಲೋಕಿಸಿ, ಪರಲೋಕದ ದೇವದೂತರು ಯೆಹೋವನ ಮುಂದೆ ಅಡ್ಡಬಿದ್ದು, ಘೋಷಿಸುವದು: “ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾ ಸ್ತುತಿಯೂ ಮಾನವೂ ಬಲವೂ ಶಕ್ತಿಯೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ.” ಮಹಾ ಸಮೂಹವು ಕೂಡ ಈ ಲೋಕದ ಅಂತ್ಯವನ್ನು ಪಾರಾಗಿ, ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯೊಂದಿಗೆ ಯೆಹೋವನ ಹೆಸರನ್ನು ಮಹಿಮೆಪಡಿಸುತ್ತಾ, “ಹಗಲಿರುಳು” ಅವನನ್ನು ಸೇವಿಸುತ್ತಾ ಇದ್ದಾರೆ.—ಲೂಕ 12:32; ಪ್ರಕಟನೆ 7:9-17; ಯೋಹಾನ 10:16.
ಯೆಹೋವನ ಮಹತ್ವ
18. ಅವನು ‘ಒಬ್ಬನೇ ದೇವರು’ ಎಂದು ಯೆಹೋವನು ಹೇಗೆ ತೋರ್ಪಡಿಸಿದ್ದಾನೆ?
18 ತದನಂತರ ದಾವೀದನು ಯೆಹೋವನ ದೇವತ್ವದ ಕಡೆಗೆ ಗಮನಸೆಳೆಯುತ್ತಾ ಹೇಳುವದು: “ಮಹೋನ್ನತನೂ ಮಹತ್ಕಾರ್ಯಗಳನ್ನು ನಡಿಸುವವನೂ ನೀನು; ದೇವರು ನೀನೊಬ್ಬನೇ.” (ಕೀರ್ತನೆ 86:10) ಪುರಾತನದಿಂದಲೂ ಯೆಹೋವನು ಖಂಡಿತವಾಗಿಯೂ ‘ಒಬ್ಬನೇ ದೇವರು’ ಎಂದು ಪ್ರದರ್ಶಿಸುತ್ತಿದ್ದನು. ಮೋಶೆಗೆ ಎದೆಗಾರಿಕೆಯಿಂದ ಪಣವೊಡ್ಡಿದವನು ಐಗುಪ್ತದ ನಿರಂಕುಶಧಿಕಾರಿ ಫರೋಹನು ಆಗಿದ್ದನು: “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ.” ಆದರೆ ಯೆಹೋವನು ಎಷ್ಟು ಮಹತ್ತಾದವನೆಂದು ಅವನು ಬಲು ಬೇಗನೆ ಕಲಿಯುವಂತೆ ನಡಿಸಲ್ಪಟ್ಟನು! ಸರ್ವಶಕ್ತನಾದ ದೇವರು ವಿಪತ್ಕಾರಕ ಬಾಧೆಗಳನ್ನು ತರಿಸುವದರ ಮೂಲಕ, ಐಗುಪ್ತದ ಚೊಚ್ಚಲಪುತ್ರರುಗಳನ್ನು ಹತಿಸುವದರ ಮೂಲಕ, ಮತ್ತು ಕೆಂಪು ಸಮುದ್ರದಲ್ಲಿ ಫರೋಹ ಮತ್ತು ಅವನ ಪ್ರತಿಷ್ಠೆಯ ಸೇನೆಯನ್ನು ನಿರ್ಮೂಲಗೊಳಿಸುವ ಮೂಲಕ ಐಗುಪ್ತದ ದೇವರುಗಳ ಮತ್ತು ಮಂತ್ರತಂತ್ರಗಳನ್ನು ಮಾಡುತ್ತಿದ್ದ ಜೋಯಿಸರ ಸೊಕ್ಕಡಗಿಸಿದನು. ನಿಜವಾಗಿಯೂ, ದೇವರುಗಳ ನಡುವೆ ಯೆಹೋವನಿಗೆ ಸರಿಸಮಾನನು ಯಾವನೂ ಇಲ್ಲ!—ವಿಮೋಚನಕಾಂಡ 5:2; 15:11, 12.
19, 20 (ಎ)ಪ್ರಕಟನೆ 15:3, 4ರ ಹಾಡು ಅದರ ಅತಿ ಮಹತ್ತಾದ ವ್ಯಕ್ತಪಡಿಸುವಿಕೆಯನ್ನು ಯಾವಾಗ ಪಡೆಯುವುದು? (ಬಿ)ಯೆಹೋವನ ಕೃತ್ಯದಲ್ಲಿ ನಾವು ಈಗಲೂ ಕೂಡ ಹೇಗೆ ಪಾಲಿಗರಾಗಬಹುದು?
19 ಏಕದೇವರೋಪಾದಿ, ಆಧುನಿಕ ಐಗುಪ್ತ—ಸೈತಾನನ ಲೋಕ—ದಿಂದ ತನ್ನ ವಿಧೇಯ ಆರಾಧಕರನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿ ಯೆಹೋವನು ಮಹತ್ಕಾರ್ಯಗಳನ್ನು ನಡಿಸಲು ಮುಂದರಿದಿದ್ದಾನೆ. ಇತಿಹಾಸದಲ್ಲೇ ಅತಿ ವ್ಯಾಪಕವಾದ ಸಾರುವ ಚಟುವಟಿಕೆಯ ಮೂಲಕ ಸಾಕ್ಷಿಗಾಗಿ ಭೂಮಿಯ ಮೇಲೆಲ್ಲಾ ತನ್ನ ದೈವಿಕ ನ್ಯಾಯತೀರ್ಪುಗಳು ಘೋಷಿಸಲ್ಪಡುವಂತೆ ಆತನು ಮಾಡಿದ್ದಾನೆ, ಹೇಗೆ ಮತ್ತಾಯ 24:14ರ ಯೇಸುವಿನ ಪ್ರವಾದನೆಯು ನೆರವೇರಿದೆ, ಶೀಘ್ರದಲ್ಲಿಯೇ, “ಅಂತ್ಯವು” ಬರಬೇಕು, ಆಗ ಭೂಮಿಯ ಮೇಲಿನ ಎಲ್ಲಾ ದುಷ್ಟತನವನ್ನು ಅಳಿಸಿಬಿಡುವ ಮೂಲಕ ಹಿಂದೆಂದೂ ಆಗದ ಪ್ರಮಾಣದಲ್ಲಿ ಯೆಹೋವನು ತನ್ನ ಮಹೋನ್ನತೆಯನ್ನು ತೋರ್ಪಡಿಸಲಿರುವನು. (ಕೀರ್ತನೆ 145:20) ಆಗ, ಮೋಶೆಯ ಹಾಡೂ, ಯಜ್ಞದಕುರಿಯಾದಾತನ ಹಾಡೂ ತುತ್ತತುದಿಗೆ ಮುಟ್ಟಲಿರುವದು: “ದೇವರಾದ ಕರ್ತನೇ, [ಯೆಹೋವ ದೇವರೇ, NW] ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ, [ಯೆಹೋವನೇ, NW] ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು.”—ಪ್ರಕಟನೆ 15:3, 4.
20 ದೇವರ ಈ ಮಹತ್ತಾದ ಉದ್ದೇಶಗಳ ಕುರಿತು ಇತರರೊಂದಿಗೆ ಮಾತಾಡುವದರಲ್ಲಿ ನಮ್ಮ ವತಿಯಿಂದ ನಾವು ಹುರುಪುಳ್ಳವರಾಗಿರೋಣ. (ಹೋಲಿಸಿರಿ ಅ. ಕೃತ್ಯಗಳು 2:11) ನಮ್ಮ ದಿನಗಳಲ್ಲಿ ಮತ್ತು ಮುಂದಿನ ಲೇಖನ ವರ್ಣಿಸುವಂತೆ ಭವಿಷ್ಯತ್ತಿನಲ್ಲೂ, ಯೆಹೋವನು ಮಹತ್ತಾದ ಮತ್ತು ಆಶ್ಚರ್ಯಕರವಾದ ವಿಷಯಗಳನ್ನು ನಡಿಸುವದನ್ನು ಮುಂದುವರಿಸುವನು.
[ಅಧ್ಯಯನ ಪ್ರಶ್ನೆಗಳು]
a ಒಂದು 1874ರ ಬೈಬಲ್ ವ್ಯಾಖ್ಯಾನವು ಆಂಡ್ರ್ಯೂ ಎ. ಬೊನಾರ್ ಹೀಗೆ ಹೇಳಿದ್ದನ್ನು ಉದ್ಧರಿಸಿದ: “ದೇವರ ವಿಶಿಷ್ಟವಾದ ಗುಣಸ್ವಭಾವದ, ಅವನ ಮಹಿಮೆಯ ನಾಮದ ಕುರಿತು ಬಹಳಷ್ಟು, ಅಧಿಕ ಹೆಚ್ಚು ಕೊನೆಯ [85 ನೆಯ] ಕೀರ್ತನೆಯ ಸಮಾಪ್ತಿಯಲ್ಲಿ ಪ್ರಕಟಿತವಾಗಿದೆ. ಇದು ಇನ್ನೊಂದರೊಂದಿಗೆ ಹಿಂಬಾಲಿಸಿ ಬರುವ ‘ದಾವೀದನ ಪ್ರಾರ್ಥನೆ’ಗೆ ಬಹುಮಟ್ಟಿಗೆ ಯೆಹೋವನ ಗುಣಸ್ವಭಾವದಿಂದ ಸಮಪ್ರಮಾಣದಲ್ಲಿ ಪೂರಿತವಾಗಿರುವ ಕಾರಣವನ್ನು ತೋರಿಸುತ್ತಿರಬಹುದು. ಈ [86 ನೆಯ] ಕೀರ್ತನೆಯ ಮುಖ್ಯ ವಿಚಾರವು ಯೆಹೋವನ ನಾಮವಾಗಿದೆ.”
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಆಫ್ ನ್ಯೂ ಯೋರ್ಕ್, ಸಂಘಟಿತ, ಇವರಿಂದ ಪ್ರಕಾಶಿಸಲ್ಪಟ್ಟ ಜೂನ್ 22, 1984ರ ವಿವೀಕ್! ಸಂಚಿಕೆಯ 28 ನೆಯ ಪುಟ ನೋಡಿರಿ.
c ಸವಿವರಗಳಿಗಾಗಿ, ಜನವರಿ 1, 1993ರ ವಾಚ್ಟವರ್ (ಕಾವಲಿನಬುರುಜು) ನಲ್ಲಿ ಕಂಡುಬರುವ “ಲೋಕವ್ಯಾಪಕ ಯೆಹೋವನ ಸಾಕ್ಷಿಗಳ 1992 ಸೇವಾ ವರ್ಷದ ವರದಿ”ಯ ತಖ್ತೆಯನ್ನು ನೋಡಿರಿ.
ನೀವು ನೆನಪಿಸಬಲ್ಲಿರೋ?
◻ ಕೀರ್ತನೆ 86ರ ಪ್ರಾರ್ಥನೆಯನ್ನು ನಾವು ನಮ್ಮ ಸ್ವಂತದ್ದಾಗಿ ಯಾಕೆ ಮಾಡತಕ್ಕದ್ದು?
◻ ಯೆಹೋವನೊಂದಿಗೆ ನಾವು ಆಪ್ತತೆಯನ್ನು ಹೇಗೆ ಕಂಡುಕೊಳ್ಳಬಹುದು?
◻ ತನ್ನ ಒಳ್ಳೇತನವನ್ನು ನಮ್ಮೆಡೆಗೆ ಯೆಹೋವನು ಹೇಗೆ ವ್ಯಕ್ತಪಡಿಸುತ್ತಾನೆ?
◻ ಯೆಹೋವನ ಕೆಲವು ಆಸದೃಶ್ಯ ಕಾರ್ಯಗಳು ಯಾವುವು?
◻ ಮಹತ್ವದ ವಿಷಯದಲ್ಲಿ ಯೆಹೋವನು ‘ಒಬ್ಬನೇ ದೇವರು’ ಹೇಗೆ?
[ಪುಟ 15 ರಲ್ಲಿರುವ ಚಿತ್ರ]
ಬರಲಿರುವ “ನೂತನ ಭೂಮಂಡಲ”ದಲ್ಲಿ ಯೆಹೋವನ ಆಶ್ಚರ್ಯಕರ ಕೃತ್ಯಗಳು ಅವನ ಪ್ರಭಾವ ಮತ್ತು ಒಳ್ಳೇತನಕ್ಕೆ ಸಾಕ್ಷ್ಯವನ್ನೀಯುವವು