“ಇರುವೆಯ ಹತ್ತಿರ ಹೋಗು”
“ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ” ಎಂದು ರಾಜ ಸೊಲೊಮೋನನು ಬರೆದನು. ಒಬ್ಬ ಸೋಮಾರಿಯು ಅಥವಾ ಆ ವಿಷಯದಲ್ಲಿ ಯಾವುದೇ ಒಬ್ಬ ವ್ಯಕ್ತಿಯು—ಇರುವೆಯೊಂದರಿಂದ ಏನನ್ನು ಕಲಿಯಬಹುದು? ಸೊಲೊಮೋನನು ಮುಂದುವರಿಸಿದ್ದು: “ಅದಕ್ಕೆ ನಾಯಕ ಅಧಿಕಾರಿ ಪ್ರಭುಗಳಿಲ್ಲದ್ದಿದರೂ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವದು.”—ಜ್ಞಾನೋಕ್ತಿ 6:6-8.
ಆ ಬುದ್ಧಿವಂತ ಅರಸನು ಪ್ರಾಯಶಃ ಕೊಯ್ಲಿನ ಇರುವೆಯನ್ನು ಸೂಚಿಸುತ್ತಿದ್ದನು. ಇತರ ಹಲವಾರು ಸ್ಥಳಗಳಲ್ಲಿರುವಂತೆ, ಇಸ್ರಾಯೇಲಿನಲ್ಲಿ, ಸಾಧಾರಣವಾಗಿ ತನ್ನಷ್ಟೇ ದೊಡ್ಡದಾಗಿರುವ ಕಾಳನ್ನು ಎತ್ತುತ್ತಾ, ಅತ್ತಿತ್ತು ಓಡುತ್ತಿರುವ ಕೊಯ್ಲು ಇರುವೆಯನ್ನು ನೋಡುವದು ಒಂದು ಸಾಮಾನ್ಯ ದೃಶ್ಯವಾಗಿದೆ. (ಮೇಲೆ ಎಡಗಡೆ ನೋಡಿರಿ.) ಒಟ್ಟುಗೂಡಿಸಲ್ಪಟ್ಟ ಆಹಾರ ಶೇಖರಣೆಯನ್ನು ಅದು ನೆಲದ ಕೆಳಗಿನ ಉಗ್ರಾಣಕ್ಕೆ ಕೊಂಡೊಯ್ಯುತ್ತದೆ.
ನೆಲದಡಿ ಇರುವದರಿಂದ, ಮಳೆಗಾಲದಲ್ಲಿ “ಕಣಜವು” ತುಂಬಾ ತೇವವಾಗಬಹುದು ಮತ್ತು ಅವುಗಳನ್ನು ಹಾಗೆಯೇ ಬಿಟ್ಟರೆ ಕಾಳುಗಳು ಚಿಗುರಬಹುದು ಅಥವಾ ಬೂಷ್ಟು ಹಿಡಿಯಬಹುದು. ಆದುದರಿಂದ ಇರುವೆಗಳಿಗೆ ಹೆಚ್ಚು ಕೆಲಸ ಮಾಡಲಿಕ್ಕಿದೆ. ಸೂರ್ಯನು ಹೊರ ಬಂದ ಕೂಡಲೇ, ಕಾರ್ಮಿಕ ಇರುವೆಗಳು ಹೊರಗಿನ ಗಾಳಿಯಲ್ಲಿ ಅವುಗಳು ಒಣಗಲ್ಪಡಲಿಕ್ಕಾಗಿ ಕಾಳುಗಳನ್ನು ಹೊರಗೆ ತರುತ್ತವೆ. (ಮೇಲೆ ನೋಡಿರಿ.) ಮತ್ತು ಸೂರ್ಯನು ಅಸ್ತಮಿಸುವದರೊಳಗೆ, ಇರುವೆಗಳು ಎಲ್ಲಾ ಕಾಳುಗಳನ್ನು ಪುನಃ ಒಳಗೆ ಕೊಂಡೊಯ್ಯಬೇಕಾಗಿದೆ. ಕೆಲವು ಇರುವೆಗಳು, ಅವುಗಳು ಶೇಖರಿಸಿದ ಕೂಡಲೇ ಅಥವಾ ಚಿಗುರಲು ಪ್ರಾರಂಭಿಸುವಾಗಲೇ ಅದರ ಬೆಳೆಯುತ್ತಿರುವ ತುದಿಯನ್ನು ತುಂಡುಮಾಡುವಷ್ಟು ಬುದ್ಧಿವಂತಿಕೆಯುಳ್ಳವುಗಳಾಗಿವೆ.
ಇರುವೆಗಳ ಕೆಲಸವು ಆಹಾರವನ್ನು ತಯಾರಿಸುವದರೊಂದಿಗೆ ಅಂತ್ಯಗೊಳ್ಳುವದಿಲ್ಲ. ಅದರ ಮರಿಗಳನ್ನು ಆರೈಕೆ ಮಾಡುವ ಮನೆಗೆಲಸ ಅವರಿಗೆ ಇರುತ್ತದೆ. ಮೊಟ್ಟೆಗಳನ್ನು ಅಚ್ಚುಗಟ್ಟಾದ ಮೂಟೆಗಳಲ್ಲಿ ಹಾಕಬೇಕಾಗಿದೆ. ಮೊಟ್ಟೆಗಳಿಂದ ಹೊರಬರುವ ಮರಿಹುಳಗಳನ್ನು ಉಣಿಸಬೇಕಾಗಿದೆ. ಪೊರೆಹುಳುಗಳಿಗೆ ಲಕ್ಷ್ಯಗೊಡಬೇಕಾಗಿದೆ. ಕೆಲವು ಇರುವೆಗಳು ವಾತಾಯನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ. ಹಗಲಿನಲ್ಲಿ ಸೆಖೆಯಾದಾಗ ಅವರು ಪೊರೆಹುಳಗಳನ್ನು ತಮ್ಮ ಗೂಡಿನಲ್ಲಿ ಇನ್ನೂ ಆಳಕ್ಕೆ ಕೊಂಡೊಯ್ಯುತ್ತವೆ. ಸಾಯಂಕಾಲದ ತಂಪು ಆಗಮಿಸುವಾಗ, ಅವುಗಳು ಪೊರೆಹುಳಗಳನ್ನು ಪುನಃ ಮೇಲಕ್ಕೆ ತರುತ್ತವೆ. ತುಂಬಾ ಕೆಲಸ, ಅಲ್ಲವೇ?
ವಸಾಹತು ಬೆಳೆಯುತ್ತಿದ್ದಂತೆ, ಹೊಸ ಕೊಠಡಿಗಳನ್ನು ಕಟ್ಟಬೇಕಾಗುತ್ತದೆ. ಕಾರ್ಮಿಕ ಇರುವೆಗಳು ಮಣ್ಣನ್ನು ಅಗೆಯಲು ಮತ್ತು ಹೊರಗೊಯ್ಯಲು ತಮ್ಮ ದವಡೆಗಳನ್ನು ಉಪಯೋಗಿಸುತ್ತಾರೆ. ಅವರು ಹೆಚ್ಚಾಗಿ ಒಂದು ಮಳೆಯ ನಂತರ, ಮಣ್ಣು ಮೆತ್ತಗೆ ಇರುವಾಗ ಇದನ್ನು ಮಾಡುತ್ತಾರೆ. ಅವರ ವಾಸ್ತುಯಂತ್ರಶಿಲ್ಪ ಯೋಜನೆಗಳು—ನೆಲದ ಕೆಳಗಿನ ಅವರ ಸುರಂಗಗಳಿಗೆ ಮತ್ತು ಕೋಣೆಗಳಿಗೆ ಗೋಡೆಗಳನ್ನು ಮತ್ತು ಮಾಳಿಗೆಗಳನ್ನು ಕಟಲ್ಟಿಕ್ಕಾಗಿ ಅವರು ಮಣ್ಣನ್ನು “ಇಟ್ಟಿಗೆ”ಗಳನ್ನಾಗಿಯೂ ರೂಪಿಸುತ್ತವೆ.
ಇರುವೆಗಳು ಇದೆಲ್ಲವನ್ನೂ “ನಾಯಕ, ಅಧಿಕಾರಿ, ಪ್ರಭುಗಳಿಲ್ಲದೆ” ಮಾಡುತ್ತಾರೆ. ರಾಣಿಯ ಕುರಿತಾಗಿ ಏನು? ಅವಳು ಯಾವ ಆಜ್ಞೆಯನ್ನೂ ಕೊಡುವದಿಲ್ಲ. ಅವಳು ಕೇವಲ ಮೊಟ್ಟೆಗಳನ್ನು ಇಡುತ್ತಾಳೆ ಮತ್ತು ಅವಳು ಆ ವಸಾಹತಿನ ತಾಯಿಯಾಗಿರುವದರಿಂದ, ಆ ಅರ್ಥದಲ್ಲಿ ರಾಣಿಯಾಗಿರುತ್ತಾಳೆ. (ಮೇಲೆ ನೋಡಿ.) ಅವರನ್ನು ಅಂಕೆಯಲ್ಲಿಡಲು ಒಬ್ಬ ಮೇಲ್ವಿಚಾರಕ ಅಥವಾ ಅವರನ್ನು ಬಲವಂತವಾಗಿ ಅಟ್ಟಲು ಮುಖ್ಯಸ್ಥನೊಬ್ಬನು ಇಲ್ಲದಿದ್ದರೂ, ಇರುವೆಗಳು ಶ್ರಮದಿಂದ ತಮ್ಮ ಕೆಲಸವನ್ನು ಮಾಡುತ್ತವೆ. ಇರುವೆಯೊಂದು ಬೆಳಿಗ್ಯೆ ಆರರಿಂದ ರಾತ್ರಿ ಹತ್ತು ಘಂಟೆಯ ತನಕ ಕೆಲಸಮಾಡುವದನ್ನು ಕಂಡಿರುತ್ತಾರೆ.
ಇರುವೆಯನ್ನು ಗಮನಿಸುವದರಿಂದ ನೀವು ಒಂದು ಪಾಠವನ್ನು ಕಲಿಯಬಲ್ಲಿರೋ? ಇತರರಿಂದ ಎಚ್ಚರಿಕೆ ಕೊಡಲ್ಪಡಲಿ ಯಾ ಕೊಡಲ್ಪಡದೇ ಇರಲಿ, ನೀವು ಪರಿಶ್ರಮದಿಂದ ಕೆಲಸ ಮಾಡುತ್ತೀರೋ ಮತ್ತು ನಿಮ್ಮ ಕೆಲಸವನ್ನು ಉತ್ತಮಗೊಳಿಸಲು ಶ್ರಮಿಸುತ್ತೀರೋ? (ಜ್ಞಾನೋಕ್ತಿ 22:29) ನಿಮ್ಮ ಧಣಿಯು ಅದನ್ನು ಗಮನಿಸದಿದ್ದರೂ ನಿಮಗೆ ಕೊನೆಯಲ್ಲಿ ಬಹುಮಾನ ಸಿಗುವದು. ನೀವು ಒಂದು ಶುದ್ಧ ಮನಸ್ಸಾಕ್ಷಿ ಮತ್ತು ವೈಯಕಿಕ್ತ ತೃಪ್ತಿಯನ್ನು ಆನಂದಿಸಬಹುದು. ಸೊಲೊಮೋನನು ಗಮನಿಸಿದಂತೆ ಅದಿದೆ: “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚು ಉಣ್ಣಲಿ, ಹಾಯಾಗಿ ನಿದ್ರಿಸುವನು.”—ಪ್ರಸಂಗಿ 5:12.
ಇರುವೆಯಿಂದ ನಾವು ಕೇವಲ ಇಷ್ಟನ್ನೇ ಕಲಿಯುವುದಿಲ್ಲ. ಇರುವೆಗಳು ಹುಟ್ಟರಿವಿನಿಂದಾಗಿ ಕಷ್ಟದಿಂದ ಕೆಲಸಮಾಡುತ್ತವೆ. ವಾಸ್ತವದಲ್ಲಿ, ಕೆಲವು ಇರುವೆಗಳು ಬೇರೆಯವರು ಬಿಟ್ಟು ಹೋಗಿರುವ ದಾರಿಯನ್ನು ಅಂಧತೆಯಿಂದ ಹಿಂಬಾಲಿಸುವದನ್ನು ಗಮನಿಸಲಾಗಿದೆ. ಅವರು ಬಿದ್ದು ಸಾಯುವ ತನಕ, ಒಂದು ವೃತ್ತದಲ್ಲಿ ಸುತ್ತಸುತ್ತಲೂ ಓಡುತ್ತಾ ಕೊನೆಗಾಣುತ್ತವೆ.
ಯಾವಾಗಲೂ ಕಾರ್ಯಮಗ್ನರು ಮತ್ತು ಆಯಾಸಗೊಳ್ಳುವರು ಆಗಿ, ಎಲ್ಲಿಯೂ ತಲುಪದೇ, ಒಂದು ವೃತ್ತದಲ್ಲಿ ನೀವು ಓಡುತ್ತಿರುವಂತೆ ನಿಮಗೆ ಕೆಲವೊಮ್ಮೆ ಭಾಸವಾಗುತ್ತದೋ? ಹಾಗಿದ್ದಲ್ಲಿ, ನಿಮ್ಮ ಪರಿಶ್ರಮದ ಕೆಲಸದ ಉದ್ದೇಶವನ್ನು ಪರೀಕ್ಷಿಸುವ ಮತ್ತು ನಿಮ್ಮ ಗುರಿಗಳ ನಿಜವಾದ ಮೌಲ್ಯವನ್ನು ಅಂದಾಜುಮಾಡುವ ಸಮಯ ಇದಾಗಿರುತ್ತದೆ. ಅರಸನಾದ ಸೊಲೊಮೋನನ ವಿವೇಕದ ಸಲಹೆಯನ್ನು ನೆನಪಿಸಿರಿ: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ ಕರ್ತವ್ಯವು ಇದೇ.”—ಪ್ರಸಂಗಿ 12:13. (g90 6/8)