-
“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”ಕಾವಲಿನಬುರುಜು—2000 | ನವೆಂಬರ್ 15
-
-
ಅರಸನಾದ ಸೊಲೊಮೋನನು ಪಿತೃಸಹಜವಾದ ಈ ಬುದ್ಧಿವಾದದಿಂದ ತನ್ನ ಮಾತುಗಳನ್ನು ಆರಂಭಿಸುತ್ತಾನೆ: “ಕಂದಾ, ನನ್ನ ಮಾತುಗಳನ್ನು ಅನುಸರಿಸು, ನನ್ನ ಆಜ್ಞೆಗಳನ್ನು ಮನಸ್ಸಿನಲ್ಲಿಟ್ಟುಕೋ. ನನ್ನ ಉಪದೇಶವನ್ನು ಕೈಕೊಂಡು ಬಾಳು. ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಇಟ್ಟುಕೋ, ಹೃದಯದ ಹಲಗೆಯಲ್ಲಿ ಬರೆ.” (ಎಲ್ಲ ಓರೆ ಅಕ್ಷರಗಳು ನಮ್ಮವು.)—ಜ್ಞಾನೋಕ್ತಿ 7:1, 2.
-
-
“ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು”ಕಾವಲಿನಬುರುಜು—2000 | ನವೆಂಬರ್ 15
-
-
ಹೆತ್ತವರ ಬೋಧನೆಯಲ್ಲಿ, ಇತರ ನಿಬಂಧನೆಗಳು, ಅಂದರೆ ಕುಟುಂಬದ ನಿಯಮಗಳು ಸಹ ಒಳಗೂಡಿರಬಹುದು. ಇವೆಲ್ಲವೂ ಕುಟುಂಬದ ಸದಸ್ಯರ ಒಳಿತಿಗಾಗಿವೆ. ಕುಟುಂಬದ ಆವಶ್ಯಕತೆಗಳ ಮೇಲೆ ಹೊಂದಿಕೊಂಡು, ನಿಯಮಗಳು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ವ್ಯತ್ಯಾಸಮಯವಾಗಿರಬಹುದು ಎಂಬುದು ನಿಜ. ಆದರೂ, ತಮ್ಮ ಸ್ವಂತ ಕುಟುಂಬಕ್ಕೆ ಯಾವುದು ಅತ್ಯುತ್ತಮವಾದದ್ದಾಗಿದೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಹೆತ್ತವರಿಗೆ ವಹಿಸಲ್ಪಟ್ಟಿದೆ. ಮತ್ತು ಅವರು ಮಾಡುವಂತಹ ನಿಯಮಗಳು, ಸಾಮಾನ್ಯವಾಗಿ ಅವರ ನಿಜವಾದ ಪ್ರೀತಿ ಹಾಗೂ ಕಾಳಜಿಯ ಅಭಿವ್ಯಕ್ತಿಯಾಗಿರುತ್ತವೆ. ತಮ್ಮ ಹೆತ್ತವರಿಂದ ಕೊಡಲ್ಪಡುವ ಶಾಸ್ತ್ರೀಯ ಬೋಧನೆಗಳ ಜೊತೆಗೆ, ಈ ನಿಯಮಗಳನ್ನು ಸಹ ಅನುಸರಿಸಿರಿ ಎಂಬುದೇ ಎಳೆಯರಿಗೆ ಕೊಡಲ್ಪಟ್ಟಿರುವ ಸಲಹೆಯಾಗಿದೆ. ಹೌದು, ಅಂತಹ ಉಪದೇಶಗಳನ್ನು “ಕಣ್ಣುಗುಡ್ಡಿನಂತೆ,” ಅಂದರೆ ತುಂಬ ಮುತುವರ್ಜಿಯಿಂದ ಕಾಪಾಡಿಕೊಳ್ಳುವ ಆವಶ್ಯಕತೆಯಿದೆ. ಯೆಹೋವನ ಮಟ್ಟಗಳನ್ನು ಅಲಕ್ಷಿಸುವುದರಿಂದ ಅನುಭವಿಸಬಹುದಾದ ಮಾರಕ ಪರಿಣಾಮಗಳಿಂದ ದೂರವಿದ್ದು, ‘ಬಾಳುವುದನ್ನು’ ಮುಂದುವರಿಸುವ ವಿಧಾನವು ಇದೇ ಆಗಿದೆ.
-