ಪಾಠ 37
ಹಣ ಮತ್ತು ಕೆಲಸದ ಬಗ್ಗೆ ಬೈಬಲ್ ಏನು ಹೇಳುತ್ತೆ?
ಒಂದು ಒಳ್ಳೇ ಕೆಲಸವನ್ನ ಹೇಗೆ ಹುಡುಕಲಿ, ಹಣ ಸಂಪಾದನೆಯನ್ನ ಹೇಗೆ ಮಾಡಲಿ ಅನ್ನೋ ಚಿಂತೆಯಿಂದ ನೀವು ಯಾವತ್ತಾದರೂ ಕುಗ್ಗಿ ಹೋಗಿದ್ದೀರಾ? ನಮ್ಮ ಅಗತ್ಯಗಳನ್ನ ನೋಡಿಕೊಳ್ಳುವುದರ ಜೊತೆಗೆ ಯೆಹೋವನ ಸೇವೆಗೆ ಪ್ರಾಮುಖ್ಯತೆ ಕೊಡಲು ಕೆಲವೊಮ್ಮೆ ಕಷ್ಟವಾಗಬಹುದು. ಆದರೆ ಇವೆರಡನ್ನು ಹೊಂದಿಸಿಕೊಂಡು ಹೋಗೋಕೆ ಬೈಬಲ್ ನಮಗೆ ಸಹಾಯ ಮಾಡುತ್ತೆ.
1. ಕೆಲಸದ ಬಗ್ಗೆ ಬೈಬಲ್ ಏನು ಹೇಳುತ್ತೆ?
ನಾವು ಮಾಡುವ ಕೆಲಸದಲ್ಲಿ ಖುಷಿ ಪಡೆದುಕೊಳ್ಳಬೇಕು ಅಂತ ಯೆಹೋವ ದೇವರು ಬಯಸುತ್ತಾನೆ. “ಕಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಸಂತೋಷ ಪಡಿಯೋದು, ಇದಕ್ಕಿಂತ ಒಳ್ಳೇದು ಮನುಷ್ಯನಿಗೆ ಬೇರೆ ಯಾವುದೂ ಇಲ್ಲ” ಅಂತ ಬೈಬಲ್ ಹೇಳುತ್ತೆ. (ಪ್ರಸಂಗಿ 2:24) ಯೆಹೋವ ದೇವರು ತುಂಬ ಕೆಲಸ ಮಾಡ್ತಾನೆ. ನಾವು ಯೆಹೋವನ ತರ ಶ್ರಮಪಟ್ಟು ಕೆಲಸಮಾಡುವಾಗ ಆತನಿಗೆ ತುಂಬ ಖುಷಿಯಾಗುತ್ತೆ ಮತ್ತು ನಾವೂ ಖುಷಿಯಾಗಿರುತ್ತೇವೆ.
ನಾವೆಲ್ಲರೂ ಕೆಲಸ ಮಾಡಲೇಬೇಕು ನಿಜ. ಆದರೆ ಅದು ಯಾವತ್ತೂ ಆರಾಧನೆಗಿಂತ ಮುಖ್ಯವಾಗಿರಬಾರದು. (ಯೋಹಾನ 6:27) ನಾವು ಯೆಹೋವ ದೇವರ ಆರಾಧನೆಗೆ ಪ್ರಾಮುಖ್ಯತೆ ಕೊಟ್ಟರೆ, ಆತನು ನಮಗೆ ‘ಅಗತ್ಯವಿರೋದನ್ನ ಕೊಡುತ್ತೇನೆ’ ಅಂತ ಮಾತು ಕೊಟ್ಟಿದ್ದಾನೆ.
2. ಹಣ ಎಷ್ಟು ಪ್ರಾಮುಖ್ಯ?
‘ಹಣ ಸಂರಕ್ಷಣೆ ಕೊಡುತ್ತೆ’ ಅಂತ ಬೈಬಲ್ ಹೇಳುತ್ತೆ. ಆದರೆ ನಾವು ಖುಷಿಯಾಗಿರಲು ಹಣ ಮಾತ್ರ ಇದ್ದರೆ ಸಾಕಾಗಲ್ಲ ಅಂತಾನೂ ಬೈಬಲ್ ಹೇಳುತ್ತೆ. (ಪ್ರಸಂಗಿ 7:12) ನಾವು ಹಣದ ಬಗ್ಗೆ ಹೆಚ್ಚು ಆಸೆ ಬೆಳಸಿಕೊಳ್ಳದೆ ‘ಇರೋದ್ರಲ್ಲೇ ತೃಪ್ತಿಪಡಬೇಕು’ ಅಂತ ಬೈಬಲ್ ಹೇಳುತ್ತೆ. (ಇಬ್ರಿಯ 13:5 ಓದಿ.) ನಾವು ಇರುವುದರಲ್ಲೇ ತೃಪ್ತರಾಗಿದ್ದರೆ ಇನ್ನೂ ಬೇಕು, ಇನ್ನೂ ಬೇಕು ಅನ್ನೋ ಆಸೆಯಿಂದ ದೂರ ಇರುತ್ತೇವೆ. ಹೀಗೆ ಮಾಡೋದಾದ್ರೆ ನಾವು ಸಾಲದಲ್ಲಿ ಮುಳುಗಲ್ಲ. (ಜ್ಞಾನೋಕ್ತಿ 22:7) ಅಷ್ಟೇ ಅಲ್ಲ, ಜೂಜಾಟ ಮತ್ತು ದಿಢೀರ್ ಶ್ರೀಮಂತರಾಗೋ ಯೋಜನೆಗಳ (ಸ್ಕೀಮ್ಗಳಲ್ಲಿ) ಅಪಾಯದಲ್ಲಿ ಸಿಕ್ಕಿ ಹಾಕಿಕೊಳ್ಳಲ್ಲ.
3. ಬೇರೆಯವರ ಪ್ರಯೋಜನಕ್ಕಾಗಿ ನಮ್ಮ ಹಣವನ್ನ ಹೇಗೆ ಬಳಸಬಹುದು?
ಯೆಹೋವ ಉದಾರತೆ ತೋರಿಸೋ ದೇವರು. ನಾವು ಆತನನ್ನ ಅನುಕರಿಸುವುದಾದರೆ “ಧಾರಾಳ ಮನಸ್ಸಿನವರು ಹಂಚ್ಕೊಳ್ಳೋ ಮನಸ್ಸಿನವರು” ಆಗುತ್ತೇವೆ. (1 ತಿಮೊತಿ 6:18) ನಾವು ನಮ್ಮ ಹಣವನ್ನ ಸಭೆಗಾಗಿ ಮತ್ತು ಅಗತ್ಯದಲ್ಲಿರುವವರಿಗೆ ಅದರಲ್ಲೂ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡುವ ಮೂಲಕ ಬಳಸಬಹುದು. ನಾವು ಎಷ್ಟು ಹಣ ಕೊಡುತ್ತೇವೆ ಅನ್ನೋದು ಯೆಹೋವನಿಗೆ ಮುಖ್ಯವಲ್ಲ. ಸಂತೋಷದಿಂದ ಕೊಡುತ್ತೇವಾ ಅನ್ನೋದು ಮುಖ್ಯ. ನಾವು ಮನಸ್ಸಾರೆ ಕೊಡೋದಾದ್ರೆ ಯೆಹೋವನಿಗೂ ಮತ್ತು ನಮಗೂ ತುಂಬ ಖುಷಿಯಾಗುತ್ತೆ.—ಅಪೊಸ್ತಲರ ಕಾರ್ಯ 20:35 ಓದಿ.
ಹೆಚ್ಚನ್ನ ತಿಳಿಯೋಣ
ಆರಾಧನೆಗಿಂತ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡದೇ ಇರೋದ್ರಿಂದ ಏನು ಪ್ರಯೋಜನವಿದೆ ಅನ್ನೋದನ್ನ ಕಲಿಯಿರಿ. ಇರೋದ್ರಲ್ಲೇ ತೃಪ್ತರಾಗಿ ಇರೋದರಿಂದ ಸಿಗೋ ಪ್ರಯೋಜನಗಳ ಬಗ್ಗೆನೂ ಕಲಿಯಿರಿ.
4. ನಾವು ಒಳ್ಳೇ ರೀತೀಲಿ ಕೆಲಸ ಮಾಡುವಾಗ ಯೆಹೋವನಿಗೆ ಗೌರವ ಸಿಗುತ್ತೆ
ನಾವು ಯೆಹೋವ ದೇವರನ್ನ ಪ್ರೀತಿಸೋದಾದ್ರೆ ಕೆಲಸವನ್ನ ಆತನು ನೋಡುವ ರೀತಿಯಲ್ಲೇ ನೋಡುತ್ತೇವೆ. ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
ಕೆಲಸದ ಜಾಗದಲ್ಲಿ ಜೇಸನ್ ನಡೆದುಕೊಂಡ ರೀತಿಯಿಂದ ನೀವೇನು ಕಲಿತ್ರಿ?
ಆರಾಧನೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲು ಆ ಸಹೋದರ ಏನು ಮಾಡಿದ್ರು?
ಕೊಲೊಸ್ಸೆ 3:23, 24 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಶ್ರಮಪಟ್ಟು ಕೆಲಸ ಮಾಡೋದು ಯಾಕೆ ಮುಖ್ಯ?
ಕೆಲಸ ಮುಖ್ಯಾನೇ, ಆದರೆ ಅದು ಯಾವತ್ತೂ ಆರಾಧನೆಗಿಂತ ಹೆಚ್ಚಾಗಿರಬಾರದು
5. ಇರೋದರಲ್ಲೇ ತೃಪ್ತರಾಗಿ ಇರೋದ್ರಿಂದ ಪ್ರಯೋಜನ ಇದೆ
ತುಂಬ ಜನರು ಎಷ್ಟು ಸಾಧ್ಯನೋ ಅಷ್ಟು ಹೆಚ್ಚು ಹಣವನ್ನ ಕೂಡಿಸಿಡಲು ಪ್ರಯತ್ನಿಸ್ತಾರೆ. ಆದರೆ ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ? 1 ತಿಮೊತಿ 6:6-8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಾವು ಹೇಗಿರಬೇಕು ಅಂತ ಬೈಬಲ್ ಹೇಳುತ್ತೆ?
ನಾವು ತೀರಾ ಬಡವರಾಗಿದ್ದರೂ ಖುಷಿಯಾಗಿರಬಹುದು. ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
ವಿಡಿಯೋದಲ್ಲಿ ನೋಡಿದ ಕುಟುಂಬದ ಹತ್ತಿರ ಕಡಿಮೆ ಹಣ ಇದ್ದರೂ ಖುಷಿಯಾಗಿ ಇರೋಕೆ ಯಾವುದು ಸಹಾಯ ಮಾಡಿತು?
ನಮ್ಮ ಹತ್ತಿರ ಈಗಾಗಲೇ ಸಾಕಷ್ಟು ಹಣ ಇದ್ದರೂ ನಮಗೆ ಇನ್ನೂ ಹೆಚ್ಚು ಬೇಕು ಅಂತ ಅನಿಸಬಹುದು. ಆದರೆ ಈ ಆಸೆ ಎಷ್ಟು ಅಪಾಯಕಾರಿ ಅಂತ ತಿಳಿದುಕೊಳ್ಳೋಕೆ ಯೇಸು ಕೊಟ್ಟ ಉದಾಹರಣೆಯನ್ನ ನೋಡಿ. ಲೂಕ 12:15-21 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೇಸು ಕೊಟ್ಟ ಉದಾಹರಣೆಯಿಂದ ನೀವೇನು ಕಲಿತಿರಿ?—ವಚನ 15 ನೋಡಿ.
ಜ್ಞಾನೋಕ್ತಿ 10:22 ಮತ್ತು 1 ತಿಮೊತಿ 6:10 ಓದಿ ಮತ್ತು ಹೋಲಿಸಿ ನೋಡಿ. ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಿಮಗೆ ಹಣ ಮುಖ್ಯನಾ ಅಥವಾ ಯೆಹೋವನೊಟ್ಟಿಗಿನ ಸ್ನೇಹ ಮುಖ್ಯನಾ? ಯಾಕೆ?
ಹಣದ ಹಿಂದೆ ಹೋಗೋದ್ರಿಂದ ಯಾವೆಲ್ಲಾ ಅಪಾಯಗಳಿರುತ್ತೆ?
6. ಯೆಹೋವ ನಿಮ್ಮ ಅಗತ್ಯಗಳನ್ನೆಲ್ಲಾ ನೋಡಿಕೊಳ್ತಾನೆ
ನಮ್ಮ ಕೈಯಲ್ಲಿ ಸಾಕಷ್ಟು ದುಡ್ಡಿಲ್ಲದೆ ಇದ್ದಾಗ ಮತ್ತು ಕೆಲಸದ ಸಮಸ್ಯೆಗಳಿರುವಾಗ ಯೆಹೋವ ದೇವರ ಮೇಲೆ ಭರವಸೆ ಇಡುತ್ತೇವಾ ಇಲ್ವಾ ಅನ್ನೋ ಪರೀಕ್ಷೆ ಬರುತ್ತೆ. ಈ ರೀತಿ ಸಮಸ್ಯೆಗಳು ಬಂದಾಗ ನಾವೇನು ಮಾಡಬೇಕು ಅಂತ ತಿಳಿಯಲು ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.
ಈ ವಿಡಿಯೋದಲ್ಲಿದ್ದ ಸಹೋದರನಿಗೆ ಯಾವ ಸಮಸ್ಯೆ ಬಂತು?
ಆ ಪರೀಕ್ಷೆಯನ್ನ ನಿಭಾಯಿಸೋಕೆ ಅವರಿಗೆ ಯಾವುದು ಸಹಾಯ ಮಾಡಿತು?
ಮತ್ತಾಯ 6:25-34 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಾವು ಯೆಹೋವನಿಗೆ ಮೊದಲ ಸ್ಥಾನ ಕೊಟ್ಟರೆ ಆತನು ಏನು ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ?
ಕೆಲವರು ಹೀಗಂತಾರೆ: “ಕೆಲಸಕ್ಕೆ ಹೋದ್ರೆ ಮಾತ್ರ ಮನೆ ನಡೆಯೋದು ಹಾಗಾಗಿ ಪ್ರತಿವಾರ ನಂಗೆ ಮೀಟಿಂಗಿಗೆ ಬರಕ್ಕಾಗಲ್ಲ.”
ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಡಬೇಕು ಅಂತ ನಿಮಗೆ ಯಾವ ವಚನದಿಂದ ಗೊತ್ತಾಯ್ತು?
ನಾವೇನು ಕಲಿತ್ವಿ
ನಮಗೆ ಕೆಲಸ ಮತ್ತು ಹಣ ಬೇಕು ನಿಜ, ಆದರೆ ಅದು ಯಾವತ್ತೂ ಯೆಹೋವ ದೇವರಿಗಿಂತ ಪ್ರಾಮುಖ್ಯ ಆಗಿರಬಾರದು.
ನೆನಪಿದೆಯಾ
ಕೆಲಸಕ್ಕೆ ತುಂಬ ಪ್ರಾಮುಖ್ಯತೆ ಕೊಡದೇ ಇರಕ್ಕೆ ಯಾವುದು ಸಹಾಯ ಮಾಡುತ್ತೆ?
ಇರೋದ್ರಲ್ಲೇ ತೃಪ್ತಿಯಿಂದ ಇದ್ದರೆ ನಿಮಗೇನು ಪ್ರಯೋಜನ?
ನಮ್ಮ ಅಗತ್ಯಗಳನ್ನೆಲ್ಲಾ ಯೆಹೋವ ದೇವರು ಪೂರೈಸುತ್ತಾನೆ ಅನ್ನೋ ಮಾತನ್ನ ನಂಬುತ್ತೇವೆ ಅಂತ ಹೇಗೆ ತೋರಿಸಬಹುದು?
ಇದನ್ನೂ ನೋಡಿ
ಹಣ ಕೆಟ್ಟದ್ದು ಅಂತ ಬೈಬಲ್ ಹೇಳುತ್ತಾ?
ದುಡ್ಡನ್ನ ಯಾವ ರೀತಿಯಲ್ಲಿ ಉಪಯೋಗಿಸಿದರೆ ಯೆಹೋವನಿಗೆ ಖುಷಿಯಾಗುತ್ತೆ ಅನ್ನೋದನ್ನ ಕಲಿಯಿರಿ.
“ಬೇರೆಯವರಿಗೆ ಸಹಾಯ ಮಾಡೋದ್ರ ಬಗ್ಗೆ ಬೈಬಲ್ ಏನ್ ಹೇಳುತ್ತೆ?” (jw.org ಲೇಖನ)
ಜೂಜಾಟ ಬರೀ “ಟೈಂಪಾಸಿಗೆ” ಆಡುವ ಒಂದು ಆಟನಾ?
ಜೂಜಾಟ ಆಡುತ್ತಿದ್ದ ಮತ್ತು ಕದಿಯುತ್ತಿದ್ದ ಒಬ್ಬ ವ್ಯಕ್ತಿಗೆ ತನ್ನ ಜೀವನವನ್ನ ಬದಲಾಯಿಸಲು ಯಾವುದು ಸಹಾಯಮಾಡಿತು ಅಂತ ನೋಡಿ.
“ನನಗೆ ಕುದುರೆ ಜೂಜಿನ ಚಟವಿತ್ತು.” (ಕಾವಲಿನಬುರುಜು, ಏಪ್ರಿಲ್ 1, 2012)