“ನೆಲೆ ತಪ್ಪಿಸಲು ಸಾಧ್ಯವಾಗದ ಬೇರುಗಳು”
ಲೋಕದ ಅತ್ಯಂತ ದೊಡ್ಡ ಮತ್ತು ಅತ್ಯಂತ ಹಳೆಯ ಜೀವಿಸುವ ವಸ್ತುಗಳಲ್ಲಿ ಕ್ಯಾಲಿರ್ಫೋನಿಯ ಸಿಕ್ವಾಯಾ ಮರಗಳೂ ಸೇರಿವೆ. ಈ ಎತ್ತರವಾಗಿರುವ ಅದ್ಭುತ ಮರಗಳು ಪಕ್ವವಾದಾಗ ಸುಮಾರು 90 ಮೀಟರುಗಳ ಎತ್ತರಕ್ಕೆ ನಿಲ್ಲುತ್ತವೆ ಮತ್ತು 3,000 ವರ್ಷಗಳಿಗಿಂತಲೂ ದೀರ್ಘವಾಗಿ ಜೀವಿಸಬಲ್ಲವು.
ಒಂದು ಸಿಕ್ವಾಯಾ ಮರದ ನೋಟವು ಭಯ ಹುಟ್ಟಿಸುವಂಥದ್ದಾಗಿದ್ದರೂ, ಅದರ ಕಾಣಲಾಗದ ಬೇರಿನ ವ್ಯವಸ್ಥೆಯೂ ಸಮವಾಗಿ ಪ್ರಭಾವಕಾರಿಯಾಗಿದೆ. ಮೂರು ಅಥವಾ ನಾಲ್ಕು ಎಕ್ರೆಗಳಷ್ಟು ದೊಡ್ಡ ಕ್ಷೇತ್ರವನ್ನು ಆವರಿಸಬಹುದಾದ, ಬೇರುಗಳ ಒಂದು ಚಪ್ಪಟೆ ಚಾಪೆಯನ್ನು ಸಿಕ್ವಾಯಾ ಮರವು ಹೊಂದಿದೆ. ಬಹು ವಿಸ್ತಾರವಾದ ಈ ಬೇರಿನ ವ್ಯವಸ್ಥೆಯ, ನೆರೆಗಳ ಯಾ ತೀವ್ರವಾದ ಗಾಳಿಗಳ ಎದುರಿನಲ್ಲಿಯೂ ಬಲಿಷ್ಠವಾದ ಆಧಾರವನ್ನು ಒದಗಿಸುತ್ತದೆ. ಒಂದು ಶಕ್ತಿಶಾಲಿಯಾದ ಭೂಕಂಪವನ್ನು ಎದುರಿಸಲು ಸಹ ಸಿಕ್ವಾಯಾ ಮರಕ್ಕೆ ಸಾಧ್ಯವಿದೆ!
ರಾಜ ಸೊಲೊಮೋನನು ಒಂದು ಮರದ ಬಲವಾದ ಬೇರಿನ ವ್ಯವಸ್ಥೆಯನ್ನು ಒಂದು ರೂಪಕದಂತೆ ತನ್ನ ಜ್ಞಾನೋಕ್ತಿಗಳಲ್ಲೊಂದರಲ್ಲಿ ಆರಿಸಿದನು. “ಯಾವನೂ ದುಷ್ಟತನದಿಂದ ಸ್ಥಿರನಾಗನು,” ಅವನಂದದ್ದು, “ಆದರೆ ಶಿಷ್ಟರಿಗೆ ನೆಲೆ ತಪ್ಪಿಸಲು ಸಾಧ್ಯವಾಗದ ಬೇರುಗಳಿವೆ.” (ಜ್ಞಾನೋಕ್ತಿ 12:3, ದ ನ್ಯೂ ಇಂಗ್ಲಿಷ್ ಬೈಬಲ್) ಹೌದು, ದುಷ್ಟರು ಅಸ್ಥಿರ ನೆಲದ ಮೇಲೆ ಇದ್ದಾರೆ. ಅವರು ಸಾಧಿಸುವಂತೆ ತೋರುವ ಯಾವುದೇ ಯಶಸ್ಸು ಕೇವಲ ತಾತ್ಕಾಲಿಕವಾಗಿದೆ, ಯಾಕೆಂದರೆ “ದುಷ್ಟನ ನಿರೀಕ್ಷೆ ನಿಷ್ಫಲ” ವಾಗುವುದೆಂದು ಯೆಹೋವನು ವಾಗ್ದಾನಿಸುತ್ತಾನೆ.—ಜ್ಞಾನೋಕ್ತಿ 10:28.
ಕ್ರೈಸ್ತರೆಂದು ಹೇಳಿಕೊಳ್ಳುವವರಿಗೆ ಇದೊಂದು ಎಚ್ಚರಿಕೆಯಾಗಿದೆ, ಯಾಕೆಂದರೆ ಕೆಲವರಿಗೆ ತಮ್ಮಲ್ಲಿಯೇ “ಬೇರು ಇಲ್ಲ”ದೆ ಇರುವುದೆಂದು ಮತ್ತು ಅವರು ಮುಗ್ಗರಿಸುವರೆಂದು ಯೇಸು ಹೇಳಿದನು. (ಮತ್ತಾಯ 13:21) ಇನ್ನೂ ಹೆಚ್ಚಾಗಿ, “ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತು ನೂಕಿಸಿಕೊಂಡು ಹೋಗುವ” ವ್ಯಕ್ತಿಗಳ ಕುರಿತು ಅಪೊಸ್ತಲ ಪೌಲನು ಬರೆದನು. (ಎಫೆಸ 4:14) ಇದನ್ನು ಹೇಗೆ ತಡೆಯಸಾಧ್ಯವಿದೆ?
ಭೂಮಿಯ ಪೋಷಿಸುವಂತಹ ಮಣ್ಣಿನಲ್ಲಿ ಸಿಕ್ವಾಯಾ ಮರದ ಬೇರುಗಳು ವಿಸ್ತಾರವಾಗಿ ಹರಡುವಂತೆಯೇ ನಮ್ಮ ಮನಸ್ಸುಗಳು ಮತ್ತು ಹೃದಯಗಳು ದೇವರ ವಾಕ್ಯವನ್ನು ವಿಸ್ತಾರವಾಗಿ ಪರಿಶೋಧಿಸಬೇಕು ಮತ್ತು ಅದರ ಜೀವಕೊಡುವ ನೀರುಗಳಿಂದ ಸೆಳೆದುಕೊಳ್ಳಬೇಕು. ಸ್ಥಿರವಾಗಿ ಬೇರೂರಿದ ನಂಬಿಕೆಯನ್ನು ವಿಕಸಿಸಲು ಇದು ನಮಗೆ ಸಹಾಯ ಮಾಡುವುದು. ಬಿರುಗಾಳಿಗಳಂಥ ಕಷ್ಟಗಳ ಪರಿಣಾಮಗಳನ್ನು ನಾವು ಅನುಭವಿಸುವುದು ನಿಶ್ಚಯ. ವಿಪತ್ತಿನ ಎದುರಿನಲ್ಲಿ ನಾವು ಒಂದು ಮರದಂತೆ ನಡುಗಲೂಬಹುದು. ಆದರೆ ನಮ್ಮ ನಂಬಿಕೆಯು ಸರಿಯಾಗಿ ಬೇರೂರಿರುವುದಾದರೆ, ನಾವು “ನೆಲೆ ತಪ್ಪಿಸಲು ಸಾಧ್ಯವಾಗದ ಬೇರು” ಗಳಿರುವವರಾಗಿ ಪರಿಣಮಿಸುವೆವು.—ಹೋಲಿಸಿ ಇಬ್ರಿಯ 6:19.