ಯಶಸ್ವಿಯಾದ ಕುಟುಂಬ ಜೀವನಕ್ಕೆ ಕೀಲಿ ಕೈ
“ನಮ್ಮಲ್ಲಿ ಕ್ಷಯಿಸುತ್ತಿರುವ ಕುಟುಂಬ ಏಕಾಂಶವಿದೆ,” ಎಂದು ಗಮನಿಸಿದರು ಕಳೆದ ವರ್ಷ ಅಮೆರಿಕದ ಅಧ್ಯಕ್ಷತನಕ್ಕಾಗಿ ನಿಂತ ಒಬ್ಬ ಉಮೇದ್ವಾರರು. ಕುಟುಂಬ ಕ್ಷಯಿಸುವಿಕೆಯ ಮಟ್ಟವು ಖಂಡಿತವಾಗಿಯೂ ಧಕ್ಕೆ ಬರಿಸುವಂಥಾದ್ದಾಗಿದೆ. “ಅದೇ ಅವಧಿಯ ಆರ್ಥಿಕ ಯಾ ಉದ್ಯಮ ಮಾಹಿತಿಯಲ್ಲಿ ತದ್ರೀತಿಯ ಪ್ರಮಾಣದ ಬದಲಾವಣೆಗಳು ನಮ್ಮನ್ನು ಅಚ್ಚರಿಯಿಂದ ಬಾಯಿಬಿರಿಯುವಂತೆ ಮಾಡುವುದು,” ಎಂದು ವರದಿಸಿತು ಫಾರ್ಟ್ಯೂನ್ ಪತ್ರಿಕೆ.
ಬೈಬಲ್ ತತ್ವಗಳನ್ನು ಅನುಸರಿಸಲು ಪ್ರಯತ್ನಿಸುವ ಕುಟುಂಬಗಳು ಸಹ ಆಗಿಂದಾಗ್ಗೆ ಶೋಚನೀಯವಾಗಿ ಬಾಧಿತವಾಗುತ್ತವೆ. ಕೆಲವು ವರ್ಷಗಳ ಹಿಂದೆ, ಹದಿಹರಯಕ್ಕೆ ಮುಂಚಿನ ವಯಸ್ಸಿನ ಆರು ಮಕ್ಕಳ ತಂದೆಗೆ ಸದುದ್ದೇಶದ ಒಬ್ಬ ಜೊತೆ ಕ್ರೈಸ್ತನು ಹೇಳಿದ್ದು: “ನಿನ್ನ ಮಕ್ಕಳಲ್ಲಿ ನಾಲ್ವರು ಸತ್ಯದಲ್ಲಿ ಉಳಿಯರೆಂಬದನ್ನು ನೀನು ನಿರೀಕ್ಷಿಸಬಹುದು.” ಆದರೂ, ಈ ತಂದೆಯು ತನ್ನ ಮಕ್ಕಳಲ್ಲಿ ಒಬ್ಬನಿಗಾದರೂ ಅದು ಸಂಭವಿಸಬೇಕೆಂದು ನಂಬಲಿಲ್ಲ. ಅದೇಕೆಂದು ಅವನು ವಿವರಿಸಿದನು.
“ನಮ್ಮ ಮಕ್ಕಳು ನಿಜವಾಗಿಯೂ ನಮ್ಮವಲ್ಲ,” ಎಂದನವನು. “ಅವು ನನ್ನ ಪತ್ನಿ ಮತ್ತು ನನ್ನ ವಶಕ್ಕೆ ಯೆಹೋವನಿಂದ ಕೊಡಲ್ಪಟ್ಟಿರುವ ಒಂದು ‘ಸ್ವಾಸ್ತ್ಯ,’ ಯಾ ಆತನ ಒಂದು ದಾನವಾಗಿದೆ. ಮತ್ತು ನಾವು ಅವರನ್ನು ಯೋಗ್ಯ ಮಾರ್ಗದಲ್ಲಿ ತರಬೇತು ಮಾಡಿದರೆ, ‘ಅವರು ಅದರಿಂದ ಓರೆಯಾಗಲಾರರು,’ ಎಂದು ಅವನು ಹೇಳಿದನು. ಆದುದರಿಂದ ನಾವು ಯಾವಾಗಲೂ ಅವರನ್ನು ಯೆಹೋವನವರೋ ಎಂಬಂತೆ ಪರಿಪಾಲಿಸಲು ಪ್ರಯತ್ನಿಸಿದ್ದೇವೆ.”—ಕೀರ್ತನೆ 127:3; ಜ್ಞಾನೋಕ್ತಿ 22:6.
ಯಶಸ್ವಿಯಾದ ಕುಟುಂಬ ಜೀವನಕ್ಕೆ ಒಂದು ಕೀಲಿ ಕೈಯನ್ನು ಆ ತಂದೆಯು ಇಲ್ಲಿ ಗುರುತಿಸಿದನು—ಹೆತ್ತವರು ತಮ್ಮ ಮಕ್ಕಳನ್ನು, ದೇವರ ಸ್ವತ್ತನ್ನು ಪರಿಪಾಲಿಸುತ್ತಾರೋ ಎಂಬಂತೆ ಪರಾಮರಿಕೆ ಮಾಡತಕ್ಕದ್ದು. ಮಕ್ಕಳು ಪ್ರತಿಯೊಂದು ಸಂದರ್ಭದಲ್ಲಿ ನಿಮ್ಮ ಉತ್ತಮ ಮಾರ್ಗದರ್ಶನವನ್ನು ಪಾಲಿಸುವರೆಂದು ಇದರ ಅರ್ಥವಲವ್ಲಾದರೂ, ದೇವರು ನಿಮ್ಮ ವಶಕ್ಕೆ ಕೊಟ್ಟಿರುವ ಮಕ್ಕಳನ್ನು ಪರಾಮರಿಕೆ ಮಾಡುವ ಜವಾಬ್ದಾರಿಯು ನಿಮಗಿದೆ.
ಒಂದು ಗಂಭೀರವಾದ ಜವಾಬ್ದಾರಿ
ನೀವು ಈ ಪರಾಮರಿಕೆಯನ್ನು ನಿರ್ಲಕ್ಷ್ಯ ಯಾ ಉದಾಸೀನತೆಯಿಂದಲ್ಲ, ಭಯಭಕ್ತಿ ಮತ್ತು ಆಳವಾದ ಗಮನದಿಂದ ಯೋಗ್ಯವಾಗಿ ಒದಗಿಸುತ್ತೀರಿ. ದೇವರ ಸ್ವಾಸ್ತ್ಯಕ್ಕಾಗಿ ಅಥವಾ ಆತನು ನಿಮಗೆ ಕೊಟ್ಟ ದಾನಕ್ಕಾಗಿ ನೀವು ಹೊಣೆಗಾರರು ಎಂಬ ಗ್ರಹಿಕೆಯೊಂದಿಗೆ ನೀವದರಲ್ಲಿ ಕಾರ್ಯನಡಿಸುತ್ತೀರಿ. ಮಕ್ಕಳ ಬೆಳೆಸುವಿಕೆಯ ವಿವಿಧ ವಿಧಾನಗಳೊಂದಿಗೆ ಪ್ರಯೋಗ ಪರೀಕ್ಷೆ ಮಾಡುವ ಅಗತ್ಯವಿಲ್ಲ. ಹೆತ್ತವರಿಗೆ ದೇವರ ವಾಕ್ಯವಾದ ಬೈಬಲಿನಲ್ಲಿ ದೇವರು ಒದಗಿಸಿರುವ ಸೂಚನೆಗಳು ಮಾತ್ರವೇ ಬೇಕಾಗಿವೆ ಮತ್ತು ಅವರು ಅವನ್ನು ಜಾಗ್ರತೆಯಿಂದ ಅನುಸರಿಸಬೇಕು.
ಇದು ಯೆಹೋವ ದೇವರ ಉಪದೇಶವಾಗಿದೆ: “ಇವುಗಳನ್ನು [ನನ್ನ ಮಾತುಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು. ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು. ನಿಮ್ಮ ಮನೆಬಾಗಲಿನ ನಿಲುವು ಪಟ್ಟಿಗಳಲಿಯ್ಲೂ ತಲೆಬಾಗಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು.” ಬೈಬಲ್ ಮತ್ತೂ ಪ್ರೇರೇಪಿಸುವುದು: “ತಂದೆಗಳೇ, . . . [ನಿಮ್ಮ ಮಕ್ಕಳನ್ನು] ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮ-ಪಡಿಸುವಿಕೆಯಲ್ಲಿ ಸಾಕಿಸಲಹಿರಿ.”—ಧರ್ಮೋಪದೇಶಕಾಂಡ 6:7-9; ಎಫೆಸ 6:4, NW.
ಹೀಗೆ ಮಕ್ಕಳ ಪರಿಪಾಲನೆಗಾಗಿ ದಿನನಿತ್ಯದ ಗಮನವು ಆವಶ್ಯಕವಾಗಿದೆ; ಹೌದು, ಅವರಿಗೆ ಎಡೆಬಿಡದೆ ಸಮಯವನ್ನು ಮತ್ತು ವಿಶೇಷವಾಗಿ ನಿಮ್ಮ ಪ್ರೀತಿ ಮತ್ತು ಆಳವಾದ ಗಮನವನ್ನು ಕೊಡುವದೆಂದು ಇದರ ಅರ್ಥವಾಗಿದೆ. ಈ ಮೂಲಭೂತ ಅಗತ್ಯತೆಗಳನ್ನು ತಮ್ಮ ಮಕ್ಕಳಿಗೆ ಕೊಡುವ ಹೆತ್ತವರು, ಯಶಸ್ವಿಯಾದ ಕುಟುಂಬ ಜೀವನದಲ್ಲಿ ಆನಂದಿಸಲು ಯಾವುದು ಆವಶ್ಯಕವೆಂದು ದೇವರು ಅನ್ನುತ್ತಾನೋ ಅದನ್ನು ಮಾಡುವವರಾಗಿದ್ದಾರೆ.
ಇದು ತೀರ ಹೆಚ್ಚಿನ ಕೇಳಿಕೊಳ್ಳುವಿಕೆ ಎಂದು ನೀವು ನಂಬುತ್ತೀರೋ? ಅದು ಹಾಗೆಂದು ಅನೇಕ ಹೆತ್ತವರು ತಮ್ಮ ಕ್ರಿಯೆಗಳ ಮೂಲಕ ಸೂಚಿಸುತ್ತಾರೆ. ಆದರೂ, ದೇವರ ಈ ದಾನಗಳು—ನಿಮ್ಮ ಮಕ್ಕಳು—ನಿಜವಾಗಿ ಅಧಿಕ-ವಿಶೇಷ ಗಮನಕ್ಕೆ ಅರ್ಹರು.
ಅವರನ್ನು ಆರೈಕೆ ಮಾಡುವ ವಿಧ
ತಮ್ಮ ಮಕ್ಕಳನ್ನು ಬೆಳೆಯಿಸುವುದರಲ್ಲಿ ಯಶಸ್ಸನ್ನು ಆನಂದಿಸಿದವರ ಉದಾಹರಣೆಯನ್ನು ಪರಿಗಣಿಸಿರಿ. ಒಂದು ಪತ್ರಿಕೆಯು “ಅಚ್ಚರಿಗೊಳಿಸುವ ಕುಟುಂಬಗಳು” ಎಂಬ ತನ್ನ ರಕ್ಷಾವರಣ ಕಥೆಯಲ್ಲಿ, ಯುವಜನರನ್ನು ಯಶಸ್ವಿಯಾಗಿ ಬೆಳೆಯಿಸುವುದರಲ್ಲಿ ನಾಲ್ಕು ಪ್ರಾಮುಖ್ಯ ವಿಷಯಗಳನ್ನು ಗಮನಿಸಿತು: “[1] ಮನಸ್ಸನ್ನು ಹುರಿದುಂಬಿಸುವ ಊಟದ-ಸಮಯದ ಸಂಭಾಷಣೆ, [2] ಒಳ್ಳೇ ಪುಸ್ತಕಗಳ ವಾಚನ, [3] ರಚನಾತ್ಮಕ ಹಾಗೂ ಅನುಕರಣಯೋಗ್ಯ ಮನಸ್ಸುಗಳಿರುವ ವಿಚಾರವಂತ ಜನರ ಪ್ರೇರೇಪಣೆ, [4] ಕಾಪಾಡಲು ಒಂದು ಕುಟುಂಬ ಸಂಪ್ರದಾಯವು ಇದೆ ಎಂಬುದರ ಗ್ರಹಿಕೆ.”—ಯು. ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್, ದಶಂಬರ 12, 1988.
“ಊಟದ-ಸಮಯದ ಸಂಭಾಷಣೆ” ಯ ಕುರಿತಾಗಿ, ಹೆತ್ತವರು ಮಕ್ಕಳಿಗೆ ಮನೆಯಲ್ಲಿ ಕೂತಿರುವಾಗಲೂ ಕಲಿಸುವಂತೆ ದೇವರು ಉಪದೇಶ ಮಾಡುವುದನ್ನು ನೆನಪಿಗೆ ತನ್ನಿರಿ. ನಿಮ್ಮ ಕುಟುಂಬವು ಕ್ರಮವಾಗಿ ಒಂದುಗೂಡಿ ಊಟಮಾಡುತ್ತಾ, ಹೀಗೆ ಸಾಹಚರ್ಯಕ್ಕೆ ಮತ್ತು ಹುರಿದುಂಬಿಸುವ ಸಂಭಾಷಣೆಗಳಿಗೆ ದಿನದಿನವೂ ಸಂದರ್ಭಗಳನ್ನು ಒದಗಿಸುತ್ತದೋ? ಇಂಥ ಸಮಯಗಳು ಮಕ್ಕಳಿಗೆ ಅತ್ಯಾವಶ್ಯಕವೂ ಸ್ಮರಣೀಯವೂ ಆಗಿದ್ದು, ಸ್ಥಿರತೆ ಮತ್ತು ಸುರಕ್ಷೆಯ ಅನಿಸಿಕೆಯನ್ನು ಅವರಿಗೆ ನೀಡುತ್ತವೆ. ಊಟದ ವೇಳೆಗಳು ತನಗಿಷ್ಟವೆಂದು ಆರು ವರ್ಷದವನೊಬ್ಬನು ಹೇಳಿದನು “ಯಾಕಂದರೆ” ಎಲ್ಲರೂ ಒಟ್ಟಿಗಿರುವುದರಿಂದ “ಒಬ್ಬರ ಕುರಿತು ಒಬ್ಬರು ಚಿಂತಿಸುವ ಅಗತ್ಯವಿಲ್ಲ.”
ನಿಮ್ಮ ಊಟದ ವೇಳೆಯ ಸಂಭಾಷಣೆಯ ಗುಣಮಟ್ಟದ ಕುರಿತೇನು? ಅದು ಅಡಿಗಡಿಗೆ ಬೈಬಲ್ ಮತ್ತು ಬೈಬಲಾಧಾರಿತ ಸಾಹಿತ್ಯವೂ ಸೇರಿರುವ “ಒಳ್ಳೇ ಪುಸ್ತಕಗಳ” ವಿಷಯಗಳ ಮೇಲೆ, ದೇವರಿಗೆ ನಮ್ಮ ಸೇವೆಯ ಯಾ ದೇವರ ಸೃಷ್ಟಿಗೆ ಸಂಬಂಧಿಸಿದ ವಿಷಯಗಳ ಚರ್ಚೆಯ ಮೇಲೆ ಕೇಂದ್ರಿತವಾಗಿದೆಯೇ? ಈ ರೀತಿಯ ಊಟದ ವೇಳೆಯ ಸಂಭಾಷಣೆಗೆ ಸೇರಿಸಿ, ಕ್ರಮದ ಅಭ್ಯಾಸದ ಕಾರ್ಯಕ್ರಮದ ಮೂಲಕ, ಹೆತ್ತವರು ತಮ್ಮ ಮಕ್ಕಳಲ್ಲಿ ಯೆಹೋವನೆಡೆಗೆ ಮತ್ತು ಆತನ ನೀತಿಯ ನಿಯಮಗಳೆಡೆಗೆ ಪ್ರೀತಿಯನ್ನು ಬೆಳೆಯಿಸುವ ಅಗತ್ಯವಿದೆ.
“ಕ್ರಮವಾಗಿ ಒಂದುಗೂಡಿ ಊಟಮಾಡುವುದೇನೂ ಸಮಸ್ಯೆಯಾಗಿರಲಿಲ್ಲ,” ಎಂದು ವಿವರಿಸಿದನು ಆರಂಭದಲ್ಲಿ ತಿಳಿಸಿದ ಆ ಆರು ಮಕ್ಕಳ ತಂದೆ. “ಇದು ಯಂತ್ರಸದೃಶವಾಗಿತ್ತು ಮತ್ತು ನಮ್ಮನ್ನು ಐಕ್ಯಗೊಳಿಸಲು ಕಾರ್ಯನಡಿಸಿತು. ಆದರೆ ಬೈಬಲ್ ಅಭ್ಯಾಸದ ಒಂದು ಕ್ರಮದ ಕಾರ್ಯಕ್ರಮ ಇರುವುದು ಕಷ್ಟಕರವಾಗಿತ್ತು.” ದಿನದ ಪರಿಶ್ರಮದ ದುಡಿತದ ಅನಂತರ ತೀರ ದಣಿವಿನ ಕಾರಣ, ಕೆಲವೊಮ್ಮೆ ಅಭ್ಯಾಸದ ವೇಳೆ ಅವನು ನಿದ್ರೆ ಹೋಗುತ್ತಿದ್ದನು. ಆದರೂ, ಮಕ್ಕಳೊಂದಿಗೆ ಒಂದು ಕ್ರಮದ ಬೈಬಲಭ್ಯಾಸ ನಡಿಸುವುದನ್ನು ಅವನೆಂದೂ ಬಿಟ್ಟುಬಿಡಲಿಲ್ಲ, ಮತ್ತು ಅವರೊಂದಿಗೆ ವ್ಯಕ್ತಿಪರವಾಗಿ ಅವನು ಕ್ರಮವಾಗಿ ಮಾತಾಡಿದನು ಮತ್ತು ದೀರ್ಘಾವಧಿಗಳ ತನಕ ಅವರಿಗೆ ಕಿವಿಗೊಟ್ಟನು.
ಅರ್ಥಭರಿತವಾದ ಊಟದ ವೇಳೆಯ ಸಂಭಾಷಣೆಯಲ್ಲಿ ಮುಂದಾಳುತನವನ್ನು ವಹಿಸುವುದು ಮತ್ತು ಒಳ್ಳೇ ಪುಸ್ತಕಗಳ ಸಾಹಚರ್ಯವನ್ನು ಒದಗಿಸುವುದಲ್ಲದೆ, “ರಚನಾತ್ಮಕ ಹಾಗೂ ಅನುಕರಣಯೋಗ್ಯರಾದ ವಿಚಾರವಂತ ಜನರ ಪ್ರೇರೇಪಣೆ” ಯನ್ನು ನಿಮ್ಮ ಮಕ್ಕಳು ಪಡೆಯುವಂತೆ ನೀವು ನೋಡುತ್ತೀರೋ? ಸತ್ಯ ಸಂಗತಿಯೇನಂದರೆ, ನಿಮ್ಮ ಮಕ್ಕಳು ಯಶಸ್ವಿಯಾದ ಪ್ರೌಢರಾಗಬೇಕಾದರೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಾದ ಯೇಸು ಕ್ರಿಸ್ತನನ್ನು ಅನುಕರಿಸುವವರೊಂದಿಗೆ ಅವರು ಕ್ರಮವಾಗಿ ಸಹವಾಸ ಮಾಡುವಂತೆ ಏರ್ಪಡಿಸುವದು ಅತ್ಯಾವಶ್ಯಕವು.
ಕೊನೆಯದಾಗಿ, “ಕಾಪಾಡಲು ಒಂದು ಕುಟುಂಬ ಸಂಪ್ರದಾಯವಿದೆ ಎಂಬ ಗ್ರಹಿಕೆ”ಯ ಕುರಿತೇನು? ಅವರು ಕಾಪಾಡುವಂತೆ ಅಪೇಕ್ಷಿಸಲ್ಪಡುವ ಕುಟುಂಬ ಮಟ್ಟಗಳು ಇವೆಯೆಂದೂ—ನಿರ್ದಿಷ್ಟ ನಡತೆ, ಮಾತು, ಉಡುಪು, ವರ್ತನೆಗಳೇ ಮುಂತಾದವುಗಳು ಅಸ್ವೀಕರಣೀಯವೂ ಕುಟುಂಬ ಸಂಪ್ರದಾಯವನ್ನು ಉಲ್ಲಂಘಿಸುವುವುಗಳೂ ಆಗಿವೆಯೆಂದು ನಿಮ್ಮ ಮಕ್ಕಳು ತಿಳುಕೊಳ್ಳುವ ಅಗತ್ಯವಿದೆ. ಕುಟುಂಬ ಸಂಪ್ರದಾಯವನ್ನು ಉಲ್ಲಂಘಿಸುವುದು ಒಂದು ಗಂಭೀರವಾದ ವಿಷಯವೆಂದೂ—ಯಾರ ಪುತ್ರರು ತಮ್ಮ ಲಜ್ಜಾಸ್ಪದ ನಡವಳಿಕೆಯ ಮೂಲಕ ಅವನ ಹೆಸರನ್ನು ದೇಶದ ನಿವಾಸಿಗಳಲ್ಲಿ “ದುರ್ವಾಸನೆಯಾಗುವಂತೆ ಮಾಡಿ” ದರೋ ಆ ಪ್ರಾಚೀನ ಮೂಲಪಿತೃ ಯಾಕೋಬನಂತೆ, ನೀವು ಭೀಕರ ನೋವಿಗೆ ಒಳಗಾಗುವಿರೆಂದೂ ಅವರು ಸ್ಪಷ್ಟವಾಗಿಗಿ ತಿಳಿಯುವ ಅಗತ್ಯವಿದೆ.—ಆದಿಕಾಂಡ 34:30.
ಯಾರು ತನ್ನ ಮಕ್ಕಳನ್ನು ದೇವರ ಸ್ವಾಸ್ತ್ಯವೆಂದು ವೀಕ್ಷಿಸಿದನೋ ಆ ಆರು ಮಕ್ಕಳ ತಂದೆ “ಕುಟುಂಬ ಸಂಪ್ರದಾಯ” ವನ್ನು ವಿಶೇಷವಾಗಿ ಒತ್ತಿಹೇಳಿದನು. ಕುಟುಂಬ ಮಟ್ಟದ ಉಡುಪು, ನೀಟುತನ, ಮತ್ತು ಲೋಕದ ಮಾರ್ಗಗಳಿಂದ ಪ್ರತ್ಯೇಕತೆಯ ನಿರ್ಮಾಣಿಕನಾದ ಯೆಹೋವ ದೇವರ ಆತ್ಮ ಮತ್ತು ಮಾರ್ಗದರ್ಶನದೊಂದಿಗೆ ಹೇಗೆ ಹೊಂದಿಕೆಯಲ್ಲಿವೆಯೆಂದು ಅವನು ಎಡೆಬಿಡದೆ ತನ್ನ ಮಕ್ಕಳೊಂದಿಗೆ ವಿವೇಚಿಸಿದನು. ಅವರಿಗೆ ಕೊಡಲ್ಪಟ್ಟ ಮಹಾ ಮೊತ್ತದ ಸಮಯ, ಪ್ರೀತಿ ಮತ್ತು ಆಳವಾದ ಗಮನದ ಫಲವಾಗಿ—ನಡೆಯಬೇಕಾದ ಮಾರ್ಗಕ್ಕೆ ತಕ್ಕ ಹಾಗೆ ತರಬೇತು ಹೊಂದಿದವರಾಗಿ—ಎಲ್ಲಾ ಆರು ಮಕ್ಕಳು ‘ಆ ಮಾರ್ಗದಿಂದ ಓರೆಯಾಗಿ ಹೋಗದ’ ಮೂಲಕ ಪ್ರತಿಕ್ರಿಯೆಯನ್ನು ತೋರಿಸಿದರು.—ಜ್ಞಾನೋಕ್ತಿ 22:6.
ಲೋಕ ವ್ಯಾಪಕವಾಗಿ ಅಂತಹ ಸಾವಿರಾರು ದೃಢವಾದ ಕುಟುಂಬ ಏಕಾಂಶಗಳಿವೆ. ಅವರ ಸೃಷ್ಟಿಕರ್ತನಿಗೆ ಇವರು ಎಂತಹ ಒಂದು ಸ್ತುತಿಯಾಗಿದ್ದಾರೆ, ಮತ್ತು ನಿಸ್ವಾರ್ಥಿಗಳೂ ಪ್ರೀತಿಯುಳ್ಳವರೂ ಆದ ಹೆತ್ತವರಿಗೆ ಎಂತಹ ಬಹುಮಾನವಾಗಿದ್ದಾರೆ! ವರ್ಷಗಳು ಗತಿಸಿಹೋದಂತೆ, ಅವರ ಪ್ರಯತ್ನಗಳಿಂದ ಪ್ರಯೋಜನ ಪಡೆದ ಮಕ್ಕಳಿಂದ ಅಂಥ ಹೆತ್ತವರು ಅಧಿಕಾಧಿಕವಾಗಿ ಗಣ್ಯಮಾಡಲ್ಪಟ್ಟಿದ್ದಾರೆ. ದೇವಭಕ್ತ ಹೆತ್ತವರಿಂದ ಬೆಳೆಯಿಸಲ್ಪಟ್ಟ ಒಬ್ಬಾಕೆ ಸ್ತ್ರೀಯ ಕಥೆಯನ್ನು ಮುಂದೆ ದಯವಿಟ್ಟು ಪರಿಗಣಿಸಿರಿ, ಮತ್ತು ಅದರಿಂದ ಕಲಿಯಲ್ಪಡಬಲ್ಲ ಬೆಲೆಯುಳ್ಳ ಪಾಠಗಳನ್ನು ಗಮನಿಸಿರಿ.