ಹಣದಾಸೆಯಲ್ಲಿ ತಪ್ಪೇನು?
ಪೌಲ್ ಮತ್ತು ಮೇರಿ ಒಂದು ಬಡ ಆಫ್ರಿಕನ್ ಸಮಾಜದಲ್ಲಿ ಒಂದು ಸೂಪರ್ ಮಾರ್ಕೆಟನ್ನು ನಡಿಸುತ್ತಿದ್ದರು.a ರಾತ್ರಿಯೂ ಹಗಲೂ ಕಷ್ಟಪಟ್ಟು ದುಡಿದು, ಅವರು ತುಂಬಾ ಹಣ ಮಾಡಿದರು. ತಕ್ಕ ಸಮಯದಲ್ಲಿ ಮೇರಿ ಬಹಳ ಬೆಲೆಯ ಪೀಠೋಪಕರಣಗಳಿಂದ ತುಂಬಿದ ಒಂದು ದೊಡ್ಡ ಹೊಸ ಮನೆಯನ್ನು ಪಡೆಯುವುದರಲ್ಲಿ ಹೆಮ್ಮೆಪಟಳ್ಟು. ಪೌಲನಾದರೋ, ಒಂದು ಸುಖ ಭೋಗದ ಕಾರಿನಲ್ಲಿ ತಿರುಗಾಡ ಶಕ್ತನಾದನು.
ಒಂದು ದಿನ ಪೌಲ್ ಸರಕಾರಕ್ಕೆ ವಿರುದ್ಧವಾಗಿದ್ದ ಒಂದು ಗುಂಪಿನಿಂದ ಗೋಚರಿಸಲ್ಪಟ್ಟನು. ಅವರು ನಿರ್ಬಂಧಿಸಿದ್ದು: “ನಮ್ಮ ಹೇತುವಿನ ಬೆಂಬಲಕ್ಕಾಗಿ ನಿನ್ನ ವ್ಯಾಪಾರವು ತಿಂಗಳಿಗೆ 100 ಅಮೆರಿಕನ್ ಡಾಲರುಗಳನ್ನು ದಾನಕೊಡಬೇಕು.” ರಾಜಕೀಯ ಹೋರಾಟಗಳಲ್ಲಿ ಪಕ್ಷ ವಹಿಸುವುದಕ್ಕೆ ಮನಸ್ಸಿಲ್ಲದೆ, ಪೌಲ್ ಮತ್ತು ಮೇರಿ ಧೈರ್ಯದಿಂದ ನಿರಾಕರಿಸಿದರು. ಅವರ ತಟಸ್ಥ ನಿಲುವಿನಿಂದಾಗಿ, ಸರಕಾರದಿಂದ ಅವರು ಆರ್ಥಿಕ ನೆರವನ್ನು ಪಡೆಯುತ್ತಾರೆಂದು ಸಂಶಯಿಸಲಾಯಿತು. ಒಂದು ವಾರಾಂತ್ಯದಲ್ಲಿ ಪೌಲ್ ಮತ್ತು ಮೇರಿ ಊರಿನ ಹೊರಗೆ ಹೋಗಿದ್ದಾಗ, ಅವರ ಅಂಗಡಿಯನ್ನು ಸೂರೆಮಾಡಲಾಯಿತು, ಮತ್ತು ಅವರ ಕಾರು ಮತ್ತು ಸುಂದರವಾದ ಮನೆಗೆ ಕಿಚ್ಚಿಡಲಾಯಿತು.
ಒಂದು ವಿಷಾದಕರ ವೃತ್ತಾಂತ ನಿಶ್ಚಯ, ಆದರೆ ನಾವದರಿಂದ ಕಲಿಯಬಲ್ಲೆವೋ? ಐಶ್ವರ್ಯವಂತರಾಗಲು ಕಷ್ಟಪಟ್ಟು ದುಡಿದ ಹೆಚ್ಚಿನವರು ಅವರ ಐಶ್ವರ್ಯವನ್ನೆಲ್ಲಾ ಅಪಹರಿಸಿದ ಒಂದು ವಿಪತ್ತಿನಿಂದ ಹೊಡೆಯಲ್ಪಟ್ಟಿರದಿರಬಹುದು. ಆದರೂ ಭವಿಷ್ಯತ್ತಿನ ಕುರಿತೇನು? “ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ,” ಎಂದು ಬೈಬಲು ಹೇಳುವುದೇಕೆ?—1 ತಿಮೊಥೆಯ 6:9.
ಹಣದ ಒಂದು ಸಮತೂಕದ ನೋಟ
ಬೈಬಲಿಗೆ ಅನುಸಾರವಾಗಿ, ನಿಜ ಕ್ರೈಸ್ತರು ಅವನ ಅಥವಾ ಅವಳ ಮೇಲೆ ಆತುಕೊಂಡಿರುವ ಕುಟುಂಬ ಸದಸ್ಯರ ಭೌತಿಕ ಆಗತ್ಯತೆಗಳನ್ನು ಒದಗಿಸಲೇಬೇಕಾಗಿದೆ. ನಿರುದ್ಯೋಗ ಅಥವಾ ಆರೋಗ್ಯ ಸಮಸ್ಯೆಗಳಂಥ ಪರಿಸ್ಥಿತಿಗಳು ಇದನ್ನು ಕೆಲವೊಮ್ಮೆ ಕಷ್ಟಕರವನ್ನಾಗಿ ಮಾಡಬಲ್ಲವು. ಇನ್ನೊಂದು ಕಡೆಯಲ್ಲಿ, ತನ್ನ ಕುಟುಂಬಕ್ಕೆ ಒದಗಿಸಲು ಬೇಕುಬೇಕೆಂದು ದುರ್ಲಕ್ಷಿಸುವ ಕ್ರೈಸ್ತನು, “ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.
ಕೆಲವು ಗ್ರಾಮೀಣ ಸಮಾಜಗಳಲ್ಲಿ, ಜನರು ತಮ್ಮ ಸ್ವಂತ ಆಹಾರವನ್ನು ಬೆಳೆಸುವ ಮೂಲಕ ಮತ್ತು ದನಕರುಗಳನ್ನು ಸಾಕುವ ಮೂಲಕ ವ್ಯವಸಾಯದಿಂದ ಜೀವನೋಪಾಯ ನಡಿಸುತ್ತಾರೆ. ವಸ್ತುಗಳ ಮತ್ತು ಸೇವೆಗಳ ವಿನಿಮಯದ ಮೂಲಕ ಜೀವನಾವಶ್ಯಕತೆಗಳನ್ನು ಪಡೆಯುತ್ತಾ, ಕೆಲವರು ಹಣದ ಕೊಂಚವೇ ಉಪಯೋಗವನ್ನು ಮಾಡುತ್ತಾರೆ. ಆದರೂ ಕುಟುಂಬ ಪೋಷಣೆಮಾಡುವವರು ತಮ್ಮ ಕುಟುಂಬಗಳಿಗೆ ಒದಗಿಸುವ ಅತ್ಯಂತ ಸಾಮಾನ್ಯ ಮಾರ್ಗವು, ಕೆಲವೊಂದು ವಿಧದ ಉದ್ಯೋಗದಲ್ಲಿ ಭಾಗವಹಿಸಿ ವೇತನಗಳನ್ನು ಪಡೆಯುವ ಮೂಲಕವೇ. ಗಳಿಸಲ್ಪಟ್ಟ ಹಣವನ್ನು ಆಹಾರ ಮತ್ತು ಕುಟುಂಬದ ಸುಕ್ಷೇಮಕ್ಕಾಗಿ ನೆರವಾಗುವ ಇತರ ವಸ್ತುಗಳನ್ನು ಖರೀದಿಸಲಿಕ್ಕಾಗಿ ಅವರು ಬಳಸುತ್ತಾರೆ. ಅದಲ್ಲದೆ, ವಿವೇಕದಿಂದ ಕೂಡಿಸಿಟ್ಟ ಹಣವು ಕಷ್ಟಗಳ ಯಾ ಆಪತ್ತುಗಳ ಸಮಯಗಳಲ್ಲಿ ತುಸು ಪ್ರಮಾಣದ ಭದ್ರತೆಯನ್ನು ಕೊಡಬಲ್ಲದು. ಉದಾಹರಣೆಗಾಗಿ, ವೈದ್ಯಕೀಯ ಖರ್ಚುಗಳನ್ನು ಆವರಿಸಲು ಅಥವಾ ಒಬ್ಬನ ಮನೆಗೆ ಅತ್ಯಾವಶ್ಯಕವಾದ ದುರುಸ್ತಿಗಳನ್ನು ಮಾಡಲು ಅದನ್ನುಪಯೋಗಿಸಬಹುದು. ಆದುದರಿಂದಲೇ ಬೈಬಲ್ ವಾಸ್ತವಿಕವಾಗಿ ಹೇಳುವುದು: “ಧನವು . . . ಆಶ್ರಯ” ಮತ್ತು ಅದು “ಎಲ್ಲವನ್ನೂ ಒದಗಿಸಿಕೊಡುವದು.”—ಪ್ರಸಂಗಿ 7:12; 10:19.
ಹಣವು ಬಹಳಷ್ಟನ್ನು ನಿರ್ವಹಿಸುತ್ತದಾದ್ದರಿಂದ, ಅದರ ಶಕ್ತಿಯ ಒಂದು ಅವಾಸ್ತವಿಕ ನೋಟವನ್ನು ವಿಕಾಸಿಸುವ ಅಪಾಯವು ಇದೆ. ಇತರ ಹೆಚ್ಚು ಮಹತ್ವದ ವಿಷಯಗಳೊಂದಿಗೆ ತುಲನೆಯಲ್ಲಿ ಕ್ರೈಸ್ತನಿಗೆ ಅದರ ಇತಿಮಿತಿಗಳನ್ನು ಅರಿತಿರುವ ಅಗತ್ಯವಿದೆ. ದೃಷ್ಟಾಂತಕ್ಕಾಗಿ, ಹಣದ ಮೂಲ್ಯವನ್ನು ಬೈಬಲು ದೈವಿಕ ವಿವೇಕದೊಂದಿಗೆ ಹೋಲಿಸುತ್ತಾ, ಅನ್ನುವುದು: “ಧನವು ಹೇಗೋ ಹಾಗೆ ಜ್ಞಾನವೂ [ವಿವೇಕವೂ, NW] ಆಶ್ರಯ. ಜ್ಞಾನಕ್ಕೆ [ವಿವೇಕಕ್ಕೆ, NW] ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಯಾವ ರೀತಿಯಲ್ಲಿ ಈ ದೈವಿಕ ವಿವೇಕಕ್ಕೆ ಹಣದ ಮೇಲೆ ಈ ಮೇಲ್ಮೆ ಇದೆ?
ಗತಕಾಲದಿಂದ ಒಂದು ಪಾಠ
ಹಣದ ಮೇಲೆ ದೈವಿಕ ವಿವೇಕದ ಮೇಲ್ಮೆಯನ್ನು, ಸಾ.ಶ. 66 ನೆಯ ವರ್ಷದಲ್ಲಿ ಯೆರೂಸಲೇಮಿನಲ್ಲಿ ನಡೆದ ಘಟನೆಗಳು ಚಿತ್ರಿಸುತ್ತವೆ. ಆಕ್ರಮಿಸಿದ ರೋಮನ್ ಸೇನೆಯನ್ನು ಹಿಂದಕ್ಕೆ ಅಟ್ಟಿದ ನಂತರ, ವ್ಯಾಪಾರದ ಪ್ರತೀಕ್ಷೆಗಳೀಗ ಉತ್ತಮವಾಗಿದ್ದವೆಂದು ಯೆರೂಸಲೇಮಿನ ಯೆಹೂದ್ಯರು ನಂಬಿದ್ದರೆಂದು ವ್ಯಕ್ತ. ನಿಶ್ಚಯವಾಗಿ, ಹೊಸದಾಗಿ ಕಂಡುಕೊಂಡ ತಮ್ಮ ಬಿಡುಗಡೆಯ ಆಚರಣೆಯಲ್ಲಿ ಅವರು ತಮ್ಮ ಸ್ವಂತ ಹಣವನ್ನು ಅಚ್ಚುಮಾಡಲಾರಂಭಿಸಿದರು. ಅವರ ನಾಣ್ಯಗಳು ಹೀಬ್ರುವಿನಲ್ಲಿ ಮುದ್ರೆಯೊತ್ತಲ್ಪಟ್ಟವುಗಳಾಗಿದ್ದು, “ಚೀಯೋನಿನ ಬಿಡುಗಡೆಗಾಗಿ” ಮತ್ತು “ಪವಿತ್ರ ಯೆರೂಸಲೇಮ್” ಎಂಬಂಥ ಅಭಿವ್ಯಂಜಕಗಳಿಂದ ಕೂಡಿದ್ದವು. ಪ್ರತಿ ಹೊಸ ವರ್ಷ ಅವರು “ವರ್ಷ ಎರಡು,” “ವರ್ಷ ಮೂರು,” ಮತ್ತು “ವರ್ಷ ನಾಲ್ಕು” ಎಂಬ ಬರಹಗಳಿಂದ ಗುರುತಿಸುವ ಹೊಸ ನಾಣ್ಯಗಳನ್ನು ಮಾಡಿದರು. ಸಾ.ಶ. 70 ನೆಯ ವರ್ಷಕ್ಕೆ ಅನುರೂಪವಾದ “ವರ್ಷ ಐದು” ಎಂಬ ಬರಹವುಳ್ಳ ಕೆಲವು ಅಪೂರ್ವ ನಾಣ್ಯಗಳನ್ನು ಸಹ ಅಗೆತ ಶಾಸ್ತ್ರಜ್ಞರು ಸಂಶೋಧಿಸಿದ್ದಾರೆ. ಯೆಹೂದ್ಯ ಕ್ರೈಸ್ತರು ಹೊಸ ಯೆಹೂದ್ಯ ಹಣವನ್ನು ಬಾಳುವ ಬಿಡುಗಡೆಯ ದೃಢ ಕುರುಹಾಗಿ ನೋಡಿದರೋ?
ಇಲ್ಲ. ಯಾಕಂದರೆ ಅವರು ತಮ್ಮ ಬೋಧಕನ ವಿವೇಕವುಳ್ಳ ಮಾತುಗಳನ್ನು ಮನಸ್ಸಿನಲ್ಲಿಟ್ಟಿದ್ದರು. ಯೇಸುವು ಸಾ.ಶ. 66 ರಲ್ಲಿ ಸಂಭವಿಸಿದ್ದ ರೋಮನ್ ಆಕ್ರಮಣವನ್ನು ಮುಂತಿಳಿಸಿದ್ದನು. ಅದು ಸಂಭವಿಸಿದಾಗ, ‘ಯೆರೂಸಲೇಮ್ . . . ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗ’ ಬೇಕೆಂದು ಆತನು ತನ್ನ ಹಿಂಬಾಲಕರಿಗೆ ಸಲಹೆಯಿತ್ತಿದ್ದನು. (ಲೂಕ 21:20-22) ಯೆಹೂದ್ಯ ಕ್ರೈಸ್ತರು ಹಾಗೆಯೇ ಮಾಡಿದರೆಂದು ಇತಿಹಾಸವು ಸಾಕ್ಷಿಕೊಡುತ್ತದೆ. ಯೆರೂಸಲೇಮನ್ನು ಬಿಟ್ಟುಹೋಗುವುದರಿಂದ ಉಂಟಾಗುವ ಆಸ್ತಿಯ, ಸೊತ್ತುಗಳ, ಮತ್ತು ವ್ಯಾಪಾರ ಸಂದರ್ಭಗಳ ನಷ್ಟವನ್ನು ಅನುಭವಿಸಲು ಅವರು ಸಿದ್ಧರಾಗಿದ್ದರೆಂಬದು ವ್ಯಕ್ತ. ನಾಲ್ಕು ವರ್ಷಗಳ ತರುವಾಯ, ರೋಮನ್ ಸೇನೆಗಳು ಹಿಂತಿರುಗಿದವು ಮತ್ತು ಪಟ್ಟಣಕ್ಕೆ ಮುತ್ತಿಗೆಯನ್ನು ಹಾಕಿದವು.
ಕಣ್ಣಾರೆ ಕಂಡ ಸಾಕ್ಷಿಯಾದ, ಇತಿಹಾಸಕಾರ ಜೊಸೀಫಸ್ನಿಗೆ ಅನುಸಾರವಾಗಿ “ಪಟ್ಟಣದಲ್ಲಿ ಬಹಳಷ್ಟು ಚಿನ್ನವಿತ್ತು.” ಆದರೆ ಹಣದ ಭಾರಿ ಮೊತ್ತವು ಯೆರೂಸಲೇಮನ್ನು ಕ್ಷಾಮದಿಂದ ರಕ್ಷಿಸ ಶಕವ್ತಾಗಲಿಲ್ಲ, ಅದು ಏಕಪ್ರಕಾರವಾಗಿ “ಕೆಡುತ್ತಾ ಬಂತು” ಮತ್ತು “ಇಡೀ ಮನೆವಾರ್ತೆಗಳನ್ನು ಮತ್ತು ಕುಟುಂಬಗಳನ್ನು ಕಬಳಿಸಿತು.” ಕೆಲವು ನಿವಾಸಿಗಳು ಚಿನ್ನದ ನಾಣ್ಯಗಳನ್ನು ನುಂಗಿದರು ಮತ್ತು ಪಟ್ಟಣದಿಂದ ಪಲಾಯನಗೈಯಲು ಪ್ರಯತ್ನಿಸಿದರು. ಆದರೆ ಹಣವನ್ನು ಕಿತ್ತುಕೊಳ್ಳಲಿಕ್ಕಾಗಿ ಅವರ ಹೊಟ್ಟೆಗಳನ್ನೇ ಸಿಗಿದು ತೆರೆದ ಅವರ ಶತ್ರುಗಳಿಂದ ಅವರು ಕೊಲ್ಲಲ್ಪಟ್ಟರು. “ಐಶ್ವರ್ಯವಂತರಿಗೆ,” ಜೊಸೀಫಸ್ ವಿವರಿಸುವುದು, “ಪಟ್ಟಣದಲ್ಲಿ ಉಳಿಯುವುದು ಅದನ್ನು ಬಿಟ್ಟುಹೋಗುವಷ್ಟೇ ಅಪಾಯಕರವಾಗಿತ್ತು; ಯಾಕಂದರೆ ಪರಿತ್ಯಜಿಸಿ ಹೋಗುವವರೆಂಬ ನೆಪದಿಂದ ಅನೇಕ ಪುರುಷರನ್ನು ಅವರ ಹಣಕ್ಕಾಗಿ ಕೊಲಲ್ಲಾಯಿತು.”
ಮುತ್ತಿಗೆಯ ಪ್ರಾರಂಭದಿಂದ ಆರು ತಿಂಗಳಿಗಿಂತ ಕಡಿಮೆ ಸಮಯದೊಳಗೆ, ಯೆರೂಸಲೇಮ್ ನಾಶವಾಯಿತು, ಮತ್ತು ಅದರ ನಿವಾಸಿಗಳಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಕ್ಷಾಮ, ಸೋಂಕುರೋಗ ಮತ್ತು ಖಡ್ಗದಿಂದ ಸತ್ತರು. ವಿವೇಕದ ಮಾತುಗಳ ಅನ್ವಯಿಸುವಿಕೆಯು ಯೆಹೂದ್ಯ ಕ್ರೈಸ್ತರನ್ನು ಪಾರಾಗುವಂತೆ ಶಕ್ತರನ್ನಾಗಿ ಮಾಡಿದಾಗ, ಹಣದಾಸೆಯಾದರೋ ಅನೇಕರನ್ನು ಕುರುಡರನ್ನಾಗಿ ಮಾಡಿ, ನಾಶನ ಮತ್ತು ಧ್ವಂಸದೊಳಗೆ ಮುಳುಗಿಸಿಬಿಟ್ಟಿತು.
ಬಿಕ್ಕಟ್ಟಿನ ಸಮಯದಲ್ಲಿ ಹಣವು ಜನರ ಕೈಬಿಟ್ಟದ್ದಕ್ಕೆ ಇತಿಹಾಸದಲ್ಲಿ ಅದೊಂದೇ ನಿದರ್ಶನವಲ್ಲ. ಹಣದಾಸೆಯು ಎಂತಹ ಕ್ರೂರ ಯಜಮಾನನಾಗಿರಬಲ್ಲದು! (ಮತ್ತಾಯ 6:24) ಅದಲ್ಲದೆ, ಅದು ನಿಮ್ಮ ಪ್ರಸ್ತುತ ಸಂತೋಷವನ್ನು ಸಹ ಅಪಹರಿಸಬಲ್ಲದು.
ಹಣವು ಖರೀದಿಸಲಾರದ ಆನಂದಗಳು
ಐಶ್ವರ್ಯವಂತನಾಗಬೇಕೆಂಬ ಭ್ರಾಂತಿಯು ಒಬ್ಬನನ್ನು ಬಹಳ ಹಣದ ಆವಶ್ಯಕತೆ ಇರದ ಅನೇಕ ಆನಂದಗಳಿಗೆ ಕುರುಡನನ್ನಾಗಿ ಮಾಡಬಲ್ಲದು. ದೃಷ್ಟಾಂತಕ್ಕಾಗಿ, ಸಂತೋಷದ ಕುಟುಂಬ ಸಂಬಂಧಗಳು, ನಿಜ ಸ್ನೇಹಿತರು, ನೈಸರ್ಗಿಕ ಅದ್ಭುತಗಳು, ನಯನ ಮನೋಹರ ಸೂರ್ಯಾಸ್ತಮಾನ, ಮನತಟ್ಟುವ ಗುಡುಗು ಮಳೆ, ನಕ್ಷತ್ರಮಯ ಗಗನ, ಪ್ರಾಣಿಗಳ ವಿಕಟ ಚೇಷ್ಟೆ, ಅಥವಾ ಹಾಳುಗೆಡವದ ಅರಣ್ಯದಲ್ಲಿನ ಹೂವುಗಳು ಮತ್ತು ವೃಕ್ಷಗಳನ್ನು ಪರಿಗಣಿಸಿರಿ.
ಕೆಲವು ಐಶ್ವರ್ಯವಂತರಿಗೆ ಮೇಲಿನ ಆನಂದಗಳನ್ನು ಅನುಭವಿಸಲು ಹೆಚ್ಚಿನ ಸಮಯವಿದೆ ನಿಜ, ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಐಶ್ವರ್ಯವನ್ನು ಕಾಪಾಡಲು ಮತ್ತು ವೃದ್ಧಿಸಲು ಪ್ರಯತ್ನಿಸುವುದರಲ್ಲಿ ಅತಿರೇಕ ಕಾರ್ಯಮಗ್ನರಾಗಿದ್ದಾರೆ. ಸುಖಭೋಗವಿದವ್ದರನ್ನು ಸಹ ಸಂತೋಷವು ಆಗಾಗ ನುಣುಚಿಕೊಳ್ಳುತ್ತದೆಂಬದು ಆಶ್ಚರ್ಯವಾಗಿ ತೋರಬಹುದು. ಇದು ಆಧುನಿಕ ಸಂಶೋಧಕರನ್ನು ಅಚ್ಚರಿಗೊಳಿಸುತ್ತದೆ. “ಅಷ್ಟೊಂದು ಜನರಿಂದ ಅಷ್ಟು ಆತುರದಿಂದ ಅಪೇಕ್ಷಿಸಲ್ಪಟ್ಟ, ಮತ್ತು ಒಂದು ತೆರದ ಸರ್ವ-ಪರಿಹಾರಕವೆಂದು ನಂಬಲಾದ ಒಂದು ವಿಷಯವು, ಲಭಿಸಿದಾಗ ಮಾತ್ರ, ನಿರಾಶೆಯಿಂದ ರೋಗಾವಸ್ಥೆಗೆ ನಡಿಸುವ ವಿವಿಧ ಪರಿಣಾಮಗಳ ಶ್ರೇಣಿಯನ್ನು ತರುವ ನಿಜತ್ವವನ್ನು ನಾವು ಹೇಗೆ ವಿವರಿಸಿಯೇವು?” ಎಂದು ಕೇಳುತ್ತಾನೆ ಥಾಮಸ್ ವೈಸ್ಮ್ಯಾನ್, ತನ್ನ ಪುಸ್ತಕವಾದ ದ ಮನಿ ಮೋಟಿವ್—ಎ ಸಡ್ಟಿ ಆಫ್ ಆ್ಯನ್ ಆಬ್ಸೆಸ್ನ್.
ಐಶ್ವರ್ಯವಂತ ವ್ಯಕ್ತಿಯ ಆನಂದವನ್ನು ಅಪಹರಿಸಬಲ್ಲ ಒಂದು ವಿಷಯವು ಯಾವುದೆಂದರೆ ಅವನ ನಿಜ ಸ್ನೇಹಿತರು ಯಾರೆಂದು ತಿಳಿಯುವುದರಲ್ಲಿರುವ ಕಷ್ಟವೇ. ಧನಿಕ ರಾಜ ಸೊಲೊಮೋನನು, “ಸೊತ್ತು ಹೆಚ್ಚಿದರೆ ಅನುಭವಿಸುವವರ ಸಂಖ್ಯೆಯೂ ಹೆಚ್ಚುವದು” ಎಂಬದನ್ನು ಅನುಭವಿಸಿದ್ದನು. (ಪ್ರಸಂಗಿ 5:11) ತಮ್ಮ ಐಶ್ವರ್ಯದ ಮೌಲ್ಯವನ್ನು ಕಾಪಾಡಲು ಯಾ ಹೆಚ್ಚಿಸಲು ಪ್ರಯತ್ನಿಸುವಲ್ಲಿ, ಅನೇಕ ಧನವಂತರು ಸಹ ಚಿಂತೆಯನ್ನು ಅನುಭವಿಸುತ್ತಾರೆ. ಇದು ಆಗಿಂದಾಗ್ಗೆ ಅವರ ಆನಂದಕರ ನಿದ್ದೆಯನ್ನು ಅಪಹರಿಸುತ್ತದೆ. ಬೈಬಲ್ ವಿವರಿಸುವುದು: “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು. ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.”—ಪ್ರಸಂಗಿ 5:12.
ಹಣದಾಸೆಯು ಕುಟುಂಬ ಮತ್ತು ಮಿತ್ರರ ನಡುವಣ ಸಂಬಂಧಗಳನ್ನು ಹಾಳುಮಾಡಬಲ್ಲದು, ಯಾಕಂದರೆ ಅದು ಯಾರನ್ನಾದರೂ ಅಪ್ರಾಮಾಣಿಕತೆ ಮತ್ತು ಪಾತಕದ ಕೃತ್ಯಗಳಿಗೆ ಪ್ರೇರೇಪಿಸಬಹುದು. ಹಸದಾಸೆಯವರು ಹೆಚ್ಚಾಗಿ ಜೂಜಾಡುವಿಕೆಗೆ ಇಳಿಯುತ್ತಾರೆ. ಕೇವಲ ಇನ್ನೊಂದು ಸಾರಿ ಜೂಜಾಡುವ ಅನುಭವಕ್ಕಾಗಿ ಹಂಬಲವು ಅನೇಕರನ್ನು ಸಾಲದೊಳಕ್ಕೆ ಇಳಿಸುವುದು ಶೋಚನೀಯವು. “ನನ್ನ ಬಳಿಗೆ ಅವರು ಬರುವುದರೊಳಗೆ,” ಎಂದನು ದಕ್ಷಿಣ ಆಫ್ರಿಕದ ಒಬ್ಬ ಮನೋರೋಗ ಚಿಕಿತ್ಸಕನು, “ಜೂಜಿನ ಗೀಳಿಗೆ ಗುರಿಯಾದವರು ಸಾಮಾನ್ಯವಾಗಿ ಪಲ್ಲಟಿಸಲಾಗದವರು ಅಥವಾ ಇನ್ನು ಮುಂದೆ ಸಹಾಯ ಕೊಡಲಾಗದವರು ಆಗಿರುತ್ತಾರೆ, ಅವರು ಕೆಲಸಗಳನ್ನು, ವ್ಯಾಪಾರಗಳನ್ನು, ಮನೆಗಳನ್ನು ಕಳಕೊಂಡಿರುತ್ತಾರೆ, ಮತ್ತು ಅವರ ಕುಟುಂಬಗಳು ಹೆಚ್ಚಾಗಿ ಅವರನ್ನು ಬಿಟ್ಟುಹೋಗಿರುತ್ತವೆ.” ಬೈಬಲಿನ ಎಚ್ಚರಿಕೆಯು ಅದೆಷ್ಟು ಸತ್ಯವು: “ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು; ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದಿರನು.”—ಜ್ಞಾನೋಕ್ತಿ 28:20.
“ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ . . . ಹಾರಿ” ಹೋಗುತ್ತದೆ
ಹಣದಾಸೆಯು ಅಷ್ಟು ಅಪಾಯಕರವಾಗಿರುವುದಕ್ಕೆ ಇನ್ನೊಂದು ಕಾರಣವು, ಹಣವು ಅಂತರ್ರಾಷ್ಟ್ರೀಯವಾಗಿ ಒಂದು ಸ್ಥಿರ ಮೌಲ್ಯವನ್ನು ಉಳಿಸುವಂತೆ ಪೂರ್ಣವಾಗಿ ಸಹಕರಿಸಲು ಅಥವಾ ಖಾತ್ರಿಕೊಡಲು ಮಾನವ ಸರಕಾರಗಳು ಅಶಕ್ತರಾಗಿ ರುಜುವಾಗಿರುವುದೇ; ಹಿಂಜರಿತಗಳು, ಮುಗ್ಗಟ್ಟುಗಳು, ಮತ್ತು ಬಂಡವಾಳ ಪೇಟೆಯ ಕುಸಿತಗಳನ್ನು ಸಹ ತಡೆಯಲು ಅವು ಶಕವ್ತಾಗಿಲ್ಲ. ವಂಚನೆ, ಕಳ್ಳತನ, ಮತ್ತು ಬೆಲೆಯುಬ್ಬರ ಸಹ ಪ್ರೇರಿತ ಮಾತುಗಳ ಸತ್ಯತೆಯನ್ನು ಒತ್ತಿಹೇಳುತ್ತವೆ: “ದುಡ್ಡಿನಾಸೆಯಿಂದ ದುಡಿಯಬೇಡ; ಸ್ವಬುದ್ಧಿಯನ್ನೇ ಆಶ್ರಯಿಸಬೇಡ. ನಿನ್ನ ದೃಷ್ಟಿಯು ಧನದ ಮೇಲೆ ಎರಗುತ್ತದೋ? ಧನವು ಅಷ್ಟರೊಳಗೆ ಮಾಯವಾಗುವದು; ಆಕಾಶದ ಕಡೆಗೆ ಹಾರುವ ಹದ್ದಿನಂತೆ ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.”—ಜ್ಞಾನೋಕ್ತಿ 23:4, 5.
ಬೆಲೆಯುಬ್ಬರ. ಆ ಸಮಸ್ಯೆಯು ಖಂಡಿತವಾಗಿಯೂ ಬಡ ದೇಶಗಳಿಗೆ ಸೀಮಿತವಾಗಿಲ್ಲ. ಈ ಶತಮಾನದ ಆರಂಭದಲ್ಲಿ, ದೌಡೋಡುವ ಬೆಲೆಯುಬ್ಬರವು ಮಧ್ಯ ಯೂರೋಪಿನ ಔದ್ಯೋಗಿಕ ರಾಷ್ಟ್ರಗಳನ್ನು ಹೊಡೆಯಿತು. ದೃಷ್ಟಾಂತಕ್ಕೆ, ಒಂದನೆಯ ಲೋಕ ಯುದ್ಧಕ್ಕೆ ಮುಂಚೆ, ಒಂದು ಜರ್ಮನ್ ಮಾರ್ಕ್, ಸುಮಾರು ಒಂದು ಬ್ರಿಟಿಷ್ ಷಿಲಿಂಗ್ಗೆ, ಒಂದು ಫ್ರೆಂಚ್ ಫ್ರ್ಯಾಂಕಿಗೆ, ಯಾ ಇಟ್ಯಾಲಿಯನ್ ಲೀರಕ್ಕೆ ಸಮ ಮೊತ್ತವಾಗಿತ್ತು. ಹತ್ತು ವರ್ಷಗಳ ಅನಂತರ, ಷಿಲಿಂಗ್, ಫ್ರ್ಯಾಂಕ್ ಮತ್ತು ಲೀರಗಳು ಹೆಚ್ಚು ಕಡಿಮೆ 1,00,000,00,00,000 ಮಾರ್ಕ್ಗಳಿಗೆ ಸಮ ಮೊತ್ತವಾದವು. ಗಗನಕ್ಕೇರುತ್ತಿರುವ ಬೆಲೆಯುಬ್ಬರವು ಧನಿಕ ಸಮಾಜಗಳ ಜನರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ? “ಕೇಂದ್ರ ಶಕಿಗ್ತಳಿಗೆ 1920 ರ ಆರಂಭದಲ್ಲಿ ಏನು ಸಂಭವಿಸಿತೋ ಅದರಿಂದ ತೀರ್ಮಾನಿಸುವುದಾದರೆ,” ಅಂದದ್ದು ಆ್ಯಡಮ್ ಫರ್ಗ್ಯುಸನ್ ತನ್ನ ಪುಸ್ತಕವಾದ ವೆನ್ ಮನೀ ಡೈಸ್ ನಲ್ಲಿ, “ಬಹಳವಾದ ಭಯದಿಂದ ಹುಟ್ಟುವ ಎಷ್ಟೊಂದು ಹೆಚ್ಚು ದುರಾಶೆ, ಹಿಂಸಾಚಾರ, ಅಸಂತೋಷ, ಮತ್ತು ದ್ವೇಷವನ್ನು ಅದು [ಆರ್ಥಿಕ ಕುಸಿತ] ಬಿಡುಗಡೆ ಮಾಡುತ್ತದೆಂದರೆ ಯಾವ ಸಮಾಜವಾದರೂ ಕುಂಟಾಗದ ಮತ್ತು ಮಾರ್ಪಡದ ಹೊರತು ಪಾರಾಗಲಾರದು.”
ಜರ್ಮನಿಯು 1923 ರಲ್ಲಿ, ಹನ್ನೆರಡು ಸೊನ್ನೆಗಳನ್ನು ಹೊಡೆದುಹಾಕುವ ಮೂಲಕ ತನ್ನ ಹಣದ ಮೌಲ್ಯವನ್ನು ಏರಿಸಿ, 1,00,000,00,00,000 ಹಳೇ ಮಾರ್ಕ್ಗಳು ದಿಢೀರನೇ ಒಂದು ಹೊಸ ಮಾರ್ಕ್ಗೆ ಸಮ ಮೊತ್ತವಾಗುವಂತೆ ಮಾಡಿತು. ಈ ಉಪಾಯವು ಬೆಲೆಯುಬ್ಬರವನ್ನು ತಡೆಯಿತಾದರೂ, ಬೇರೆ ವಿಪತ್ಕಾರಕ ಫಲಿತಾಂಶಗಳನ್ನು ಬರಮಾಡಿತು. ಫರ್ಗ್ಯುಸನ್ ವಿವರಿಸುವುದು: “ಹಣಕಾಸಿನ ಸ್ಥಿರತೆಯ ಪುನಃ-ಸ್ಥಾಪನೆಯು ಸಾವಿರಾರು ಜನರನ್ನು ದಿವಾಳಿಮಾಡಿತು, ಲಕ್ಷಾಂತರ ಜನರ ಜೀವನೋಪಾಯಗಳನ್ನು ಅಪಹರಿಸಿತು, ಇನ್ನೂ ಹೆಚ್ಚು ಲಕ್ಷಾಂತರ ಜನರ ನಿರೀಕ್ಷೆಗಳನ್ನು ಕೊಂದುಹಾಕಿತು, ಇಡೀ ಲೋಕವು ತೆರಬೇಕಾದ ಒಂದು ಹೆಚ್ಚು ಭೀಕರ ಬೆಲೆಯನ್ನು ಅಪರೋಕ್ಷವಾಗಿ ಸುಲಿಯಿತು.” ಗ್ರಂಥಕರ್ತನ ಮನಸ್ಸಿನಲ್ಲಿದ್ದ ಆ “ಭೀಕರ ಬೆಲೆಯು” ನಾಜೀವಾದದ ಏಳಿಕೆ ಮತ್ತು ಎರಡನೆಯ ಲೋಕಯುದ್ಧವಾಗಿತ್ತೆಂಬದು ವ್ಯಕ್ತ.
ಗತಕಾಲದಲ್ಲಿ ಭಾರೀ ಮೊತ್ತದ ಬ್ಯಾಂಕ್ ಖಾತೆಗಳು ಎಷ್ಟೋ ಜನರ ಕೈಬಿಟ್ಟದ್ದು ಈ ಲೋಕವ್ಯಾಪಕ ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಗಂಭೀರ ಎಚ್ಚರಿಕೆಯಾಗಿ ಇರಬೇಕು. ಧನವು ಕೈಬಿಡುವುದೆಂದು ದೇವರ ಕುಮಾರನು ತಾನೇ ಎಚ್ಚರಿಕೆ ನೀಡಿದ್ದಾನೆ, ಅದನ್ನು ಖಂಡಿತವಾಗಿಯೂ ಅದು ಎಷ್ಟೋ ಸಲ ಮಾಡಿದೆ. (ಲೂಕ 16:9) ಆದರೆ ಅತಿ ಮಹತ್ತಾದ ಮತ್ತು ಅತ್ಯಂತ ವ್ಯಾಪಕವಾದ ಹಣಕಾಸಿನ ಸೋಲು, ಈ ದುಷ್ಟ ಲೋಕಕ್ಕೆ ಯೆಹೋವ ದೇವರು ತೀರ್ಪನ್ನು ನಿರ್ವಹಿಸುವಾಗ ಬರಲಿದೆ. “ಧನವು ಕೋಪದ ದಿನದಲ್ಲಿ ವ್ಯರ್ಥ; ಧರ್ಮವು ಮರಣವಿಮೋಚಕ.”—ಜ್ಞಾನೋಕ್ತಿ 11:4.
ಆದುದರಿಂದ ನಾವು ಪ್ರತಿಯೊಬ್ಬರು, ನಮ್ಮ ನಿಜ ಸ್ನೇಹಿತರಾದ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನೊಂದಿಗೆ ಒಂದು ನೀತಿಯುಕ್ತ ನಿಲುವನ್ನು ಕಾಪಾಡುವುದಕ್ಕಾಗಿ ಶ್ರಮಿಸುವುದು ಅದೆಷ್ಟು ಪ್ರಾಮುಖ್ಯವು!
ಬಾಳುವ ಸಂತೋಷದ ಮೂಲ
ಪ್ರಾರಂಭದಲ್ಲಿ ತಿಳಿಸಿದ ಪೌಲ್ ಮತ್ತು ಮೇರಿ, ಯೆಹೋವನ ಸಾಕ್ಷಿಗಳಾಗಿದ್ದರು. ಅನೇಕ ವರ್ಷಗಳ ತನಕ ಅವರು ಪೂರ್ಣ ಸಮಯದ ಸೌವಾರ್ತಿಕ ಸೇವೆಯಲ್ಲಿ ಪಾಲಿಗರಾಗಿದ್ದರು. ಆದರೂ, ಐಶ್ವರ್ಯಕ್ಕಾಗಿ ಅವರ ಅಭಿಲಾಷೆಯು ಅವರನ್ನು ಕ್ರೈಸ್ತ ಸಭಾ ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸುವಂತೆ ಮಾಡಿತು, ಮತ್ತು ಅವರು ಬಹಿರಂಗ ಶುಶ್ರೂಷೆಯಲ್ಲಿ ತಮ್ಮ ನಂಬಿಕೆಯನ್ನು ಹಂಚುವುದನ್ನು ನಿಲ್ಲಿಸಿದರು. ಆದರೆ ಅವರು ಆತ್ಮಿಕವಾಗಿ ಎಚ್ಚತ್ತರು. “ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಹೋಗಬಲ್ಲ ಒಂದು ವಿಷಯಕ್ಕಾಗಿ ನನ್ನೆಲ್ಲಾ ಸಮಯ ಮತ್ತು ಶಕ್ತಿಯನ್ನು ವ್ಯಯಿಸುವುದು ಅದೆಷ್ಟು ಮೂರ್ಖತನವೆಂದು ನಾನೀಗ ಕಾಣಬಲ್ಲೆ,” ಎಂದಳು ಮೇರಿ, ಸೂರೆಮಾಡಲ್ಪಟ್ಟ ಬಳಿಕ ಮತ್ತು ಅವಳ ಮನೆಯು ವಿಧ್ವಂಸಗೊಂಡಾದ ಮೇಲೆ. ಸಂತೋಷಕರವಾಗಿಯೇ, ವೇಳೆ ತೀರಾ ಮೀರಿಹೋಗುವ ಮೊದಲೇ ಈ ದಂಪತಿಗಳು ಒಂದು ಪಾಠವನ್ನು ಕಲಿತರು. ಹೌದು, ಹಣದಾಸೆಯು ತರಬಲ್ಲ ಮಹತ್ತಾದ ಹಾನಿಯು, ಯೆಹೋವ ದೇವರೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ಒಂದು ಮೆಚ್ಚಿಗೆಯ ಸಂಬಂಧವನ್ನು ವ್ಯಕ್ತಿಯಿಂದ ಅಪಹರಿಸುವುದೇ. ಈ ಸ್ನೇಹಿತರ ಹೊರತು, ಈ ದುಷ್ಟ ಲೋಕದ ಅಂತ್ಯವನ್ನು ಪಾರಾಗಿ ನೀತಿಯುಳ್ಳ ವಾಗ್ದತ್ತ ಹೊಸ ಲೋಕದೊಳಗೆ ಸೇರುವ ಯಾವ ನಿರೀಕ್ಷೆಯು ನಮಗಿರಬಲ್ಲದು?—ಮತ್ತಾಯ 6:19-21, 31-34; 2 ಪೇತ್ರ 3:13.
ಹೀಗೆ ನೀವು ನಿಮ್ಮನ್ನು ಐಶ್ವರ್ಯವಂತರಾಗಿ ಯಾ ಬಡವರಾಗಿ—ಹೇಗೆಯೇ ಪರಿಗಣಿಸಿರಿ, ಹಣದಾಸೆಯನ್ನು ವಿಕಾಸಗೊಳಿಸುವ ವಿರುದ್ಧ ಎಚ್ಚರವುಳ್ಳವರಾಗಿರಿ. ಅತ್ಯಂತ ಮಹತ್ತಾದ ನಿಕ್ಷೇಪವನ್ನು—ಯೆಹೋವ ದೇವರಿಂದ ಮೆಚ್ಚಲ್ಪಡುವ ಒಂದು ನಿಲುವನ್ನು—ಗಳಿಸುವುದಕ್ಕಾಗಿ ಮತ್ತು ಕಾಪಾಡುವುದಕ್ಕಾಗಿ ಕಾರ್ಯನಡಿಸಿರಿ. ಇದನ್ನು ನೀವು ಈ ಜರೂರಿಯ ಆಮಂತ್ರಣಕ್ಕೆ ಎಡೆಬಿಡದೆ ಗಮನಕೊಡುವ ಮೂಲಕ ಮಾಡಬಲ್ಲಿರಿ: “ಆತ್ಮನೂ ಮದಲಗಿತ್ತಿಯೂ—ಬಾ ಅನ್ನುತ್ತಾರೆ. ಕೇಳುವವನು—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”—ಪ್ರಕಟನೆ 22:17.
[ಅಧ್ಯಯನ ಪ್ರಶ್ನೆಗಳು]
a ಅವರ ನಿಜ ಹೆಸರುಗಳನ್ನು ಬಳಸಿಲ್ಲ.
[ಪುಟ 8,9 ರಲ್ಲಿರುವಚಿತ್ರಗಳು]
ಯೆಹೂದ್ಯ ದಂಗೆಯ ಸಮಯದಲ್ಲಿ, “ವರ್ಷ ಎರಡು” ಬರಹದೊಂದಿಗೆ ಅಚ್ಚುಮಾಡಲ್ಪಟ್ಟ ಒಂದು ನಾಣ್ಯದ ಎರಡೂ ಪಕ್ಕಗಳು
[ಕೃಪೆ]
Pictorial Archive (Near Eastern History) Est.