-
“ನೀವು ನನ್ನ ಸಾಕ್ಷಿ”!ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
11. ಯೆಹೋವನು ತನ್ನ ಸೇವಕನಿಗೆ ಯಾವ ನೇಮಕವನ್ನು ಕೊಡುತ್ತಾನೆ, ಮತ್ತು ಯೆಹೋವನು ತನ್ನ ದೇವತ್ವದ ಕುರಿತು ಏನನ್ನು ತಿಳಿಯಪಡಿಸುತ್ತಾನೆ?
11 ಶಕ್ತಿಹೀನರಾಗಿರುವ ಕಾರಣ ಸುಳ್ಳು ದೇವರುಗಳಿಗೆ ಸಾಕ್ಷಿಗಳನ್ನು ಮುಂತರಲು ಆಗುವುದಿಲ್ಲ. ಆದಕಾರಣ ಖಾಲಿಯಾಗಿ ನಿಂತಿರುವ ಸಾಕ್ಷಿ ಕಟ್ಟೆಯು ನಾಚಿಕೆಯ ಸಂಗತಿ. ಆದರೆ ಈಗ, ತನ್ನ ದೇವತ್ವವನ್ನು ದೃಢೀಕರಿಸಲು ಯೆಹೋವನ ಸಮಯವು ಬರುತ್ತದೆ. ತನ್ನ ಜನರ ಕಡೆಗೆ ನೋಡುತ್ತ ಆತನು ಹೇಳುವುದು: “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಇದನ್ನು ನಡಿಸಿದೆನು]; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ. ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು; ಹೌದು, ಇಂದಿನಿಂದ ನಾನೇ ಪರಮಾತ್ಮನು; ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ; ನನ್ನ ಕೆಲಸಕ್ಕೆ ಯಾರು ಅಡ್ಡಬಂದಾರು? ಎಂಬದೇ ಯೆಹೋವನ ಮಾತು.”—ಯೆಶಾಯ 43:10-13.
-
-
“ನೀವು ನನ್ನ ಸಾಕ್ಷಿ”!ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
14. ಯೆಹೋವನು ಇಸ್ರಾಯೇಲ್ಯರಿಗೆ ಏನನ್ನು ಮರುಜ್ಞಾಪಿಸುತ್ತಾನೆ, ಮತ್ತು ಈ ಮರುಜ್ಞಾಪನ ಸಮಯೋಚಿತವೇಕೆ?
14 ಯೆಹೋವನು ತನ್ನ ನಾಮವನ್ನು ಗೌರವದಿಂದ ಧರಿಸುವವರ ಬಗ್ಗೆ ಕಾಳಜಿತೋರಿಸುತ್ತಾನೆ ಮತ್ತು ಅವರನ್ನು ತನ್ನ “ಕಣ್ಣುಗುಡ್ಡಿನಂತೆ” ನೋಡಿಕೊಳ್ಳುತ್ತಾನೆ. ತಾನು ಇಸ್ರಾಯೇಲ್ಯರನ್ನು ಐಗುಪ್ತದಿಂದ ರಕ್ಷಿಸಿದ ವಿಧವನ್ನೂ ಅರಣ್ಯದಲ್ಲಿ ಅವರನ್ನು ಸುರಕ್ಷಿತವಾಗಿ ಕಾಪಾಡಿದ ವಿಧವನ್ನೂ ಅವರಿಗೆ ಹೇಳುತ್ತಾ, ಆತನು ಅವರಿಗೆ ಇದರ ಕುರಿತು ಜ್ಞಾಪಕ ಹುಟ್ಟಿಸುತ್ತಾನೆ. (ಧರ್ಮೋಪದೇಶಕಾಂಡ 32:10, 12) ಆ ಸಮಯದಲ್ಲಿ ಅವರಿಗೆ ಅನ್ಯ ದೇವರಾರೂ ಇರಲಿಲ್ಲ. ಏಕೆಂದರೆ ಅವರು ಸ್ವತಃ ಐಗುಪ್ತದ ಸಕಲ ದೇವರುಗಳಿಗಾದ ವಿಪರೀತ ಅವಮಾನವನ್ನು ನೋಡಿದ್ದರು. ಹೌದು, ಐಗುಪ್ತದ ಇಡೀ ದೇವತಾ ಸಮೂಹಕ್ಕೆ ಐಗುಪ್ತವನ್ನು ರಕ್ಷಿಸಲೂ ಸಾಧ್ಯವಾಗಲಿಲ್ಲ, ಮತ್ತು ಇಸ್ರಾಯೇಲಿನ ನಿರ್ಗಮನವನ್ನು ತಡೆಯಲೂ ಸಾಧ್ಯವಾಗಲಿಲ್ಲ. (ವಿಮೋಚನಕಾಂಡ 12:12) ಅದೇ ರೀತಿ, ನಗರದಲ್ಲಿ ಸುಳ್ಳು ದೇವರುಗಳ ಕಡಿಮೆಪಕ್ಷ 50 ದೇವಸ್ಥಾನಗಳಾದರೂ ಇರುವ ಬಲಾಢ್ಯವಾದ ಬಾಬೆಲು ಸಹ, ಸರ್ವಶಕ್ತ ದೇವರು ತನ್ನ ಜನರನ್ನು ವಿಮೋಚಿಸುವಾಗ ಆತನ ಹಸ್ತವನ್ನು ತಡೆದು ಹಿಡಿಯಲು ಅಶಕ್ತವಾಗಿರುವುದು. ಯೆಹೋವನ “ಹೊರತು ಯಾವ ರಕ್ಷಕನೂ ಇಲ್ಲ” ಎಂಬುದು ವ್ಯಕ್ತ.
-