-
“ಪ್ರಸನ್ನತೆಯ ಕಾಲ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
6. ಮೆಸ್ಸೀಯನ ಬಾಯಿ ಯಾವ ವಿಧದಲ್ಲಿ ಹದವಾದ ಖಡ್ಗವಾಗಿದೆ, ಮತ್ತು ಅದು ಮರೆಮಾಡಲ್ಪಡುವುದು ಅಥವಾ ಮುಚ್ಚಿಡಲ್ಪಡುವುದು ಹೇಗೆ?
6 ಮೆಸ್ಸೀಯನ ಪ್ರವಾದನ ಮಾತುಗಳು ಮುಂದುವರಿಯುತ್ತವೆ: “ನನ್ನ ಬಾಯನ್ನು ಹದವಾದ ಖಡ್ಗವನ್ನಾಗಿ ಮಾಡಿ ತನ್ನ ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ; ನನ್ನನ್ನು ಚೂಪಾದ [“ಮೆರುಗುಪಡೆದ,” NW] ಬಾಣವನ್ನಾಗಿ ರೂಪಿಸಿ ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ.” (ಯೆಶಾಯ 49:2) ಯೆಹೋವನ ಮೆಸ್ಸೀಯನಿಗೆ ತನ್ನ ಭೂಶುಶ್ರೂಷೆಯನ್ನು ಮಾಡುವ ಸಮಯವು ಸಾ.ಶ. 29ರಲ್ಲಿ ಬರುವಾಗ, ಯೇಸುವಿನ ಮಾತುಗಳೂ ಕ್ರಿಯೆಗಳೂ ಚೂಪಾದ, ಮೆರುಗು ಕೊಟ್ಟಿರುವ ಆಯುಧಗಳಾಗಿ, ಅವನ ಕೇಳುಗರ ಹೃದಯಗಳನ್ನು ತೂರಿಹೋಗಲು ಶಕ್ತವಾಗುತ್ತವೆ ಎಂಬುದು ನಿಶ್ಚಯ. (ಲೂಕ 4:31, 32) ಅವನ ಮಾತುಗಳೂ ಕಾರ್ಯಗಳೂ ಯೆಹೋವನ ಮಹಾ ಶತ್ರುವಾದ ಸೈತಾನನನ್ನೂ ಅವನ ಪ್ರತಿನಿಧಿಗಳನ್ನೂ ಕೋಪಕ್ಕೆಬ್ಬಿಸುತ್ತವೆ. ಯೇಸುವಿನ ಜನನದ ಸಮಯದಿಂದ ಹಿಡಿದು ಸೈತಾನನು ಅವನ ಜೀವವನ್ನು ತೆಗೆಯಲು ಪ್ರಯತ್ನಿಸಿದರೂ, ಯೇಸು ಯೆಹೋವನ ಸ್ವಂತ ಬತ್ತಳಿಕೆಯಲ್ಲಿ ಮುಚ್ಚಿಟ್ಟ ಬಾಣದಂತಿದ್ದಾನೆ.a ಅವನು ತನ್ನ ತಂದೆಯ ಸಂರಕ್ಷಣಾ ಸಾಮರ್ಥ್ಯದಲ್ಲಿ ಭರವಸವಿಡಬಲ್ಲನು. (ಕೀರ್ತನೆ 91:1; ಲೂಕ 1:35) ನೇಮಿತ ಸಮಯದಲ್ಲಿ ಯೇಸು ಮಾನವಕುಲದ ಪರವಾಗಿ ತನ್ನ ಜೀವವನ್ನು ಕೊಡುತ್ತಾನೆ. ಆದರೆ ಅವನು ಬಲಾಢ್ಯನಾದ ಸ್ವರ್ಗೀಯ ಯುದ್ಧವೀರನಾಗಿ ಯುದ್ಧಕ್ಕಿಳಿಯುವ ಸಮಯವು ಬರಲಿದೆ. ಆಗ ಅವನು ಭಿನ್ನವಾದ ಅರ್ಥದಲ್ಲಿ, ಬಾಯಿಯಿಂದ ಹದವಾದ ಖಡ್ಗವನ್ನು ಹೊರಡಿಸುವವನಾಗಿ ಬರುವನು. ಆದರೆ ಈ ಬಾರಿ, ಆ ಹದವಾದ ಖಡ್ಗವು ಯೆಹೋವನ ವೈರಿಗಳ ವಿರುದ್ಧ ನ್ಯಾಯತೀರಿಸಿ ಅದನ್ನು ಜಾರಿಗೆ ತರಲು ಯೇಸುವಿಗಿರುವ ಅಧಿಕಾರವನ್ನು ಪ್ರತಿನಿಧಿಸುವುದು.—ಪ್ರಕಟನೆ 1:16.
-
-
“ಪ್ರಸನ್ನತೆಯ ಕಾಲ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
a “ಯೇಸುವನ್ನು ದೇವರ ಮಗನೆಂದೂ ತನ್ನ ತಲೆಯನ್ನು ಜಜ್ಜಲಿರುವ (ಆದಿ 3:15) ಪ್ರವಾದಿತ ವ್ಯಕ್ತಿಯೆಂದೂ ಗುರುತಿಸಿದ ಸೈತಾನನು, ಅವನನ್ನು ಹತಿಸಲು ತನಗೆ ಸಾಧ್ಯವಿರುವುದನ್ನೆಲ್ಲ ಮಾಡಿದನು. ಆದರೆ ಮರಿಯಳಲ್ಲಿ ಯೇಸುವಿನ ಗರ್ಭಧಾರಣೆಯನ್ನು ಪ್ರಕಟಿಸುತ್ತ ಗಬ್ರಿಯೇಲ ದೇವದೂತನು ಅವಳಿಗೆ ಹೇಳಿದ್ದು: ‘ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.’ (ಲೂಕ 1:35) ಯೆಹೋವನು ತನ್ನ ಪುತ್ರನನ್ನು ಕಾಪಾಡಿದನು. ಶಿಶುವಾಗಿದ್ದಾಗ ಯೇಸುವನ್ನು ಹತಿಸುವುದಕ್ಕಾಗಿ ಮಾಡಿದ ಪ್ರಯತ್ನಗಳು ವಿಫಲವಾದವು.”—ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಶಾಸ್ತ್ರಗಳ ಕುರಿತ ಒಳನೋಟ (ಇಂಗ್ಲಿಷ್), ಸಂಪುಟ 2, ಪುಟ 868.
-