-
“ಪ್ರಭುಗಳಲ್ಲಿ ಭರವಸವಿಡಬೇಡಿರಿ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
13. ಯೇಸುವಿಗೆ ಮುಂದೆ ಏನು ಕಾದಿದೆ, ಆದರೆ ತಾನು ಧೈರ್ಯವಂತನೆಂದು ಅವನು ಹೇಗೆ ತೋರಿಸಿಕೊಡುತ್ತಾನೆ?
13 ಯೆಹೋವನ ಏಕಜಾತ ಪುತ್ರನನ್ನು ನಿರಾಕರಿಸುವ ಕೆಲವರು ಅವನಿಗೆ ಹಿಂಸೆ ಕೊಡುತ್ತಾರೆ. ಇದು ಸಹ ಮುಂತಿಳಿಸಲ್ಪಟ್ಟಿದೆ: “ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ.” (ಯೆಶಾಯ 50:6) ಈ ಪ್ರವಾದನೆಗನುಸಾರ, ವಿರೋಧಿಗಳ ಕೈಯಿಂದ ಮೆಸ್ಸೀಯನು ನೋವು ಮತ್ತು ಅವಮಾನವನ್ನು ಅನುಭವಿಸುವನು. ಯೇಸುವಿಗೆ ಇದು ತಿಳಿದದೆ. ಮತ್ತು ಈ ಹಿಂಸೆ ಎಷ್ಟರ ತನಕ ಮುಂದುವರಿಯುತ್ತದೆಂದೂ ಅವನಿಗೆ ಗೊತ್ತಿದೆ. ಹೀಗಿದ್ದರೂ, ಅವನ ಭೂಜೀವನದ ಅಂತ್ಯವು ಹತ್ತರಿಸುತ್ತಿದ್ದಾಗ ಅವನು ಕಿಂಚಿತ್ತೂ ಭಯವನ್ನು ತೋರಿಸುವುದಿಲ್ಲ. ಕಗ್ಗಲ್ಲಿಗೆ ಸಮಾನವಾದ ದೃಢನಿರ್ಧಾರದಿಂದ ಅವನು ತನ್ನ ಮಾನವ ಜೀವಿತವು ಎಲ್ಲಿ ಕೊನೆಗೊಳ್ಳಲಿಕ್ಕಿತ್ತೊ ಆ ಯೆರೂಸಲೇಮಿಗೆ ಹೊರಡುತ್ತಾನೆ. ಅಲ್ಲಿಗೆ ಹೋಗುವ ದಾರಿಯಲ್ಲಿ ಯೇಸು ತನ್ನ ಶಿಷ್ಯರಿಗನ್ನುವುದು: “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ. ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯರ ಕೈಗೆ ಒಪ್ಪಿಸುವರು. ಇವರು ಅವನನ್ನು ಅಪಹಾಸ್ಯಮಾಡುವರು, ಅವನ ಮೇಲೆ ಉಗುಳುವರು, ಅವನನ್ನು ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು, ಅವನು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವನು.” (ಮಾರ್ಕ 10:33, 34) ಈ ಎಲ್ಲ ದುರ್ವರ್ತನೆಗಳು, ಯೇಸುವೇ ವಾಗ್ದತ್ತ ಮೆಸ್ಸೀಯನೆಂಬುದನ್ನು ಪ್ರವಾದನೆಗಳಿಂದ ಹೆಚ್ಚು ಉತ್ತಮವಾಗಿ ತಿಳಿದವರಾಗಬೇಕಾಗಿದ್ದ ಮಹಾಯಾಜಕರು ಮತ್ತು ಶಾಸ್ತ್ರಿಗಳ ಪ್ರೇರಣೆಯಿಂದ ನಡೆಯಲಿಕ್ಕಿದ್ದವು.
14, 15. ಯೇಸುವನ್ನು ಹೊಡೆದು ಅವಮಾನಿಸಲಾಗುವುದೆಂದು ಹೇಳಿದ ಯೆಶಾಯನ ಮಾತುಗಳು ಹೇಗೆ ನೆರವೇರಿದವು?
14 ಸಾ.ಶ. 33ರ ನೈಸಾನ್ 14ರ ರಾತ್ರಿ, ಯೇಸು ತನ್ನ ಕೆಲವರು ಶಿಷ್ಯರೊಂದಿಗೆ ಗೆತ್ಸೇಮನೆ ತೋಟದಲ್ಲಿದ್ದಾನೆ. ಅವನು ಪ್ರಾರ್ಥಿಸುತ್ತಿದ್ದಾನೆ. ಆಗ ಥಟ್ಟನೆ ಜನರ ಗುಂಪೊಂದು ಬಂದು ಅವನನ್ನು ಸೆರೆಹಿಡಿಯುತ್ತದೆ. ಆದರೆ ಅವನು ಭಯಪಡುವುದಿಲ್ಲ. ಯೆಹೋವನು ತನ್ನೊಂದಿಗಿದ್ದಾನೆಂಬುದು ಅವನಿಗೆ ತಿಳಿದದೆ. ಯೇಸು ತನ್ನ ಭಯಭೀತ ಶಿಷ್ಯರಿಗೆ, ತನಗೆ ಮನಸ್ಸಿರುವಲ್ಲಿ ತನ್ನನ್ನು ರಕ್ಷಿಸಲಿಕ್ಕಾಗಿ ಹನ್ನೆರಡು ಗಣ ದೇವದೂತರನ್ನು ಕಳುಹಿಸುವಂತೆ ತನ್ನ ತಂದೆಯನ್ನು ಕೇಳಿಕೊಳ್ಳಬಲ್ಲೆನೆಂದು ಹೇಳುತ್ತಾನೆ. ಆದರೆ ಅವನು ಕೂಡಿಸಿ ಹೇಳುವುದು: “ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ”?—ಮತ್ತಾಯ 26:36, 47, 53, 54.
15 ಯೇಸುವಿನ ನ್ಯಾಯವಿಚಾರಣೆ ಮತ್ತು ಮರಣದ ಕುರಿತು ಮುಂತಿಳಿಸಲ್ಪಟ್ಟ ಎಲ್ಲ ಸಂಗತಿಗಳು ನೆರವೇರುತ್ತವೆ. ಹಿರೀಸಭೆಯ ಮುಂದೆ ನಡೆದ ಮೋಸದ ನ್ಯಾಯವಿಚಾರಣೆಯ ಅನಂತರ, ಪೊಂತ್ಯ ಪಿಲಾತನು ಯೇಸುವನ್ನು ವಿಚಾರಿಸಿ, ಚಾವಟಿಯಿಂದ ಹೊಡೆಸುತ್ತಾನೆ. ರೋಮನ್ ಸೈನಿಕರು, “ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ”ಬಿಡುತ್ತಾರೆ. ಹೀಗೆ ಯೆಶಾಯನ ಮಾತುಗಳು ನೆರವೇರುತ್ತವೆ. (ಮಾರ್ಕ 14:65; 15:19; ಮತ್ತಾಯ 26:67, 68) ಗಡ್ಡದ ಕೂದಲನ್ನು ಕೀಳುವುದು ವಿಪರೀತ ಅವಮಾನದ ಸಂಕೇತವಾಗಿತ್ತು. ಇದನ್ನು ನಿಜವಾಗಿಯೂ ಯೇಸುವಿನೊಂದಿಗೆ ಮಾಡಲಾಗಿತ್ತೆಂದು ಬೈಬಲು ಹೇಳುವುದಿಲ್ಲವಾದರೂ, ಯೆಶಾಯನು ಹೇಳಿದಂತೆಯೇ ಇದೂ ಸಂಭವಿಸಿತೆಂಬುದರಲ್ಲಿ ಸಂದೇಹವಿಲ್ಲ.c—ನೆಹೆಮೀಯ 13:25.
-
-
“ಪ್ರಭುಗಳಲ್ಲಿ ಭರವಸವಿಡಬೇಡಿರಿ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
c ಆಸಕ್ತಿಕರವಾಗಿಯೇ, ಸೆಪ್ಟ್ಯುಅಜಿಂಟ್ನಲ್ಲಿ ಯೆಶಾಯ 50:6 ಹೇಳುವುದು: “ನನ್ನ ಬೆನ್ನನ್ನು ಹೊಡೆತಗಳಿಗೂ ನನ್ನ ಗಲ್ಲಗಳನ್ನು ಪೆಟ್ಟುಗಳಿಗೂ ಒಡ್ಡಿದೆನು.”
-