-
“ಒಟ್ಟಿಗೆ ಹರ್ಷಧ್ವನಿಗೈಯಿರಿ”!ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
7. ಯೆಹೋವನ ಜನರ ಬಂಧನವು ಆತನ ಹೆಸರಿನ ಮೇಲೆ ಯಾವ ಪರಿಣಾಮವನ್ನು ಬೀರಿದೆ?
7 ಪ್ರವಾದನೆಯು ತೋರಿಸುವಂತೆ, ಯೆಹೋವನ ಜನರ ಬಂದಿವಾಸದ ಸ್ಥಿತಿಯು ಆತನ ಹೆಸರಿನ ಮೇಲೆ ಪರಿಣಾಮ ಬೀರುತ್ತದೆ: “ಈಗಲೂ ಅನ್ಯರು ನನ್ನ ಜನರನ್ನು ಹಕ್ಕಿಲ್ಲದೆ ಒಯ್ದಿರಲು ನಾನು ಇಲ್ಲಿ ಸುಮ್ಮನಿರುವದು ಹೇಗೆ? ನನ್ನ ಪ್ರಜೆಯನ್ನು ಆಳುವವರು [ರೌದ್ರದಿಂದ] ಕಿರಚುತ್ತಾರೆ; ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ. ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದು [ತಮ್ಮ ಸಂಗಡ] ಮಾತಾಡುವವನು ನಾನೇ, ಹೌದು ನಾನೇ, ಎಂದು [ರಕ್ಷಣೆಯ] ಆ ದಿನದಲ್ಲಿ ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು. ಇದೇ ಯೆಹೋವನ ನುಡಿ.” (ಯೆಶಾಯ 52:5, 6) ಈ ಸನ್ನಿವೇಶದಲ್ಲಿ ಯೆಹೋವನಿಗೆ ಏಕೆ ಆಸಕ್ತಿಯಿದೆ? ಇಸ್ರಾಯೇಲ್ಯರು ಬಾಬೆಲಿನಲ್ಲಿ ದಾಸರಾಗಿದ್ದರೆ ಆತನೇಕೆ ಚಿಂತೆ ತೋರಿಸಬೇಕು? ಏಕೆಂದರೆ, ಬಾಬೆಲು ಆತನ ಜನರನ್ನು ಸೆರೆಯಾಳುಗಳಾಗಿ ಮಾಡಿಕೊಂಡಿರುವುದು ಮಾತ್ರವಲ್ಲ ಅವರನ್ನು ಗೆದ್ದುದಕ್ಕಾಗಿ ಜಯಘೋಷವನ್ನೂ ಮಾಡಿದೆ. ಇಂತಹ ಜಂಬಕೊಚ್ಚುವಿಕೆಯು, ಯೆಹೋವನ ನಾಮಕ್ಕೆ ಬಾಬೆಲು ಅಗೌರವ ತೋರಿಸುವಂತೆ ನಡೆಸಿದೆ. (ಯೆಹೆಜ್ಕೇಲ 36:20, 21) ಯೆರೂಸಲೇಮಿನ ಹಾಳುಬಿದ್ದಿರುವ ಸ್ಥಿತಿಗೆ ಕಾರಣವು ತನ್ನ ಜನರ ಕಡೆಗೆ ಯೆಹೋವನಿಗಿರುವ ಅಸಮ್ಮತಿಯೇ ಆಗಿದೆ ಎಂಬುದನ್ನು ಗುರುತಿಸಲು ಅದು ತಪ್ಪಿಹೋಗಿದೆ. ಬದಲಿಗೆ, ಯೆಹೂದ್ಯರ ಬಂಧಿವಾಸವು ಅವರ ದೇವರ ಬಲಹೀನತೆಯ ಪುರಾವೆಯಾಗಿದೆ ಎಂಬುದು ಬಾಬೆಲಿನ ದೃಷ್ಟಿಕೋನವಾಗಿದೆ. ಬಾಬೆಲಿನ ಜೊತೆರಾಜನಾದ ಬೇಲ್ಶಚ್ಚರನು, ಬಾಬೆಲಿನ ದೇವತೆಗಳ ಸನ್ಮಾನಕ್ಕಾಗಿ ಏರ್ಪಡಿಸಿದ ಔತಣದಲ್ಲಿ ಯೆಹೋವನ ಆಲಯದಿಂದ ತಂದಿದ್ದ ಪಾತ್ರೆಗಳನ್ನು ಉಪಯೋಗಿಸಿ ಆತನನ್ನು ಮೂದಲಿಸುವಷ್ಟರ ವರೆಗೆ ಮುಂದುವರಿದಿದ್ದಾನೆ.—ದಾನಿಯೇಲ 5:1-4.
-
-
“ಒಟ್ಟಿಗೆ ಹರ್ಷಧ್ವನಿಗೈಯಿರಿ”!ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
9, 10. ಆಧುನಿಕ ಸಮಯದ ಯೆಹೋವನ ಒಡಂಬಡಿಕೆಯ ಜನರು ಯೆಹೋವನ ನೈತಿಕ ಮಟ್ಟಗಳು ಮತ್ತು ಆತನ ನಾಮದ ಕುರಿತು ಯಾವ ಆಳವಾದ ತಿಳಿವಳಿಕೆಯನ್ನು ಪಡೆದರು?
9 ಮಹಾ ಕೋರೆಷನಾದ ಯೇಸು ಕ್ರಿಸ್ತನು, 1919ರಲ್ಲಿ ದೇವರ ಒಡಂಬಡಿಕೆಯ ಜನರನ್ನು ಮಹಾ ಬಾಬೆಲಿನ ಬಂಧನದಿಂದ ಬಿಡಿಸಿದಾಗ, ಅವರಿಗೆ ಯೆಹೋವನ ಆವಶ್ಯಕತೆಗಳ ಕುರಿತು ಹೆಚ್ಚು ಉತ್ತಮವಾದ ತಿಳಿವಳಿಕೆ ದೊರೆಯಿತು. ತ್ರಯೈಕ್ಯ, ಆತ್ಮದ ಅಮರತ್ವ ಮತ್ತು ಅಗ್ನಿಮಯ ನರಕದಲ್ಲಿ ನಿತ್ಯ ಯಾತನೆಗಳಂತಹ ಕ್ರೈಸ್ತಪೂರ್ವ ವಿಧರ್ಮದಲ್ಲಿ ಬೇರೂರಿರುವ ಕ್ರೈಸ್ತಪ್ರಪಂಚದ ಅನೇಕ ಬೋಧನೆಗಳಿಂದ ಈಗಾಗಲೇ ಅವರು ತಮ್ಮನ್ನು ಶುದ್ಧೀಕರಿಸಿಕೊಂಡಿದ್ದರು. ಈಗ ಅವರು ಬಾಬೆಲಿನ ಪ್ರಭಾವದ ಪ್ರತಿಯೊಂದು ಕುರುಹನ್ನೂ ಕಳಚಿಹಾಕತೊಡಗಿದರು. ಈ ಲೋಕದ ಪಕ್ಷಾಭಿಮಾನಿ ವಿಚಾರಗಳ ವಿಷಯದಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನೂ ಅವರು ಗ್ರಹಿಸಿದರು. ಅವರಲ್ಲಿ ಕೆಲವರ ಮೇಲೆ ಯಾವುದೇ ರಕ್ತಾಪರಾಧವು ಬಂದಿರುವಲ್ಲಿ ಅದರಿಂದಲೂ ಶುದ್ಧರಾಗಿರಲು ಅವರು ಬಯಸಿದರು.
10 ದೇವರ ಆಧುನಿಕ ದಿನಗಳ ಸೇವಕರು, ಯೆಹೋವನ ನಾಮವು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದರ ಆಳವಾದ ತಿಳಿವಳಿಕೆಯನ್ನೂ ಪಡೆದರು. ಅವರು 1931ರಲ್ಲಿ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಅಂಗೀಕರಿಸಿದರು ಮತ್ತು ಹೀಗೆ ತಾವು ಯೆಹೋವನನ್ನೂ ಆತನ ನಾಮವನ್ನೂ ಬೆಂಬಲಿಸುತ್ತೇವೆಂಬುದನ್ನು ಬಹಿರಂಗವಾಗಿ ಪ್ರಕಟಿಸಿದರು. ಇದಲ್ಲದೆ, 1950ರಿಂದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲನ್ನು ಪ್ರಕಾಶಿಸುವುದರ ಮೂಲಕ ಯೆಹೋವನ ಸಾಕ್ಷಿಗಳು, ಆ ದೈವಿಕ ಹೆಸರನ್ನು ಬೈಬಲಿನಲ್ಲಿ ಅದಕ್ಕಿರುವ ಯೋಗ್ಯ ಸ್ಥಾನದಲ್ಲಿ ಪುನಸ್ಸ್ಥಾಪಿಸಿದ್ದಾರೆ. ಹೌದು, ಅವರು ಯೆಹೋವನ ನಾಮವನ್ನು ಗಣ್ಯಮಾಡತೊಡಗಿದ್ದಾರೆ ಮತ್ತು ಅದನ್ನು ಭೂಮಿಯ ಕಟ್ಟಕಡೆಯ ವರೆಗೆ ಪ್ರಕಟಿಸುತ್ತಿದ್ದಾರೆ.
-