-
ಯೆಹೋವನ ಕೈ ಮೋಟುಗೈಯಲ್ಲಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
17. ಚೀಯೋನನ್ನು ವಿಮೋಚಿಸುವವನಾರು, ಮತ್ತು ಆತನು ಚೀಯೋನನ್ನು ಯಾವಾಗ ವಿಮೋಚಿಸುತ್ತಾನೆ?
17 ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಇಸ್ರಾಯೇಲ್ಯನು ತನ್ನನ್ನೇ ದಾಸತ್ವಕ್ಕೆ ಮಾರಿಕೊಂಡರೆ, ವಿಮೋಚಕನಾದ ಒಬ್ಬ ವ್ಯಕ್ತಿಯು ಅವನಿಗಾಗಿ ಈಡುಕೊಟ್ಟು ಅವನನ್ನು ದಾಸತ್ವದಿಂದ ಬಿಡಿಸಿಕೊಳ್ಳಬಹುದಿತ್ತು. ಈ ಹಿಂದೆ, ಯೆಶಾಯನ ಪ್ರವಾದನ ಪುಸ್ತಕದಲ್ಲಿ ಯೆಹೋವನನ್ನು ಪಶ್ಚಾತ್ತಾಪಪಡುವ ವ್ಯಕ್ತಿಗಳ ವಿಮೋಚಕನಾಗಿ ಚಿತ್ರಿಸಲಾಗಿತ್ತು. (ಯೆಶಾಯ 48:17) ಈಗ ಪುನಃ ಒಮ್ಮೆ ಆತನನ್ನು ಪಶ್ಚತ್ತಾಪಪಡುವವರ ವಿಮೋಚಕನಾಗಿ ವರ್ಣಿಸಲಾಗುತ್ತದೆ. ಯೆಹೋವನ ವಾಗ್ದಾನವನ್ನು ಯೆಶಾಯನು ದಾಖಲಿಸುತ್ತಾನೆ: “ಆದರೆ ಚೀಯೋನಿಗೂ ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ವಿಮೋಚಕನಾಗಿ ಬರುವನು. ಯೆಹೋವನೇ ಇದನ್ನು ನುಡಿದಿದ್ದಾನೆ.” (ಯೆಶಾಯ 59:20) ಪುನರಾಶ್ವಾಸನೆಯನ್ನು ಕೊಡುವ ಈ ವಾಗ್ದಾನವು ಸಾ.ಶ.ಪೂ. 537ರಲ್ಲಿ ನೆರವೇರಿತಾದರೂ, ಅದಕ್ಕೆ ಇನ್ನೊಂದು ನೆರವೇರಿಕೆಯಿದೆ. ಈ ಮಾತುಗಳನ್ನು ಅಪೊಸ್ತಲ ಪೌಲನು ಸೆಪ್ಟ್ಯುಅಜಿಂಟ್ ಭಾಷಾಂತರದಿಂದ ಉಲ್ಲೇಖಿಸಿ, ಅವುಗಳನ್ನು ಕ್ರೈಸ್ತರಿಗೆ ಅನ್ವಯಿಸಿದ್ದಾನೆ. ಅವನು ಬರೆದುದು: “ಆ ಮೇಲೆ ಇಸ್ರಾಯೇಲ್ ಜನವೆಲ್ಲಾ ರಕ್ಷಣೆಹೊಂದುವದು. ಇದಕ್ಕೆ ಆಧಾರವಾಗಿ ಶಾಸ್ತ್ರದಲ್ಲಿ—ಬಿಡಿಸುವವನು ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆಮಾಡುವನು. ನಾನು ಅವರ ಸಂಗಡ ಮಾಡಿಕೊಂಡ ಈ ಒಡಂಬಡಿಕೆಯು ನಾನು ಅವರ ಪಾಪಗಳನ್ನು ಪರಿಹರಿಸುವಾಗ ನೆರವೇರುವದು ಎಂದು ಬರೆದದೆ.” (ರೋಮಾಪುರ 11:26, 27) ಹೌದು, ಯೆಶಾಯನ ಪ್ರವಾದನೆಗೆ ಹೆಚ್ಚು ವಿಸ್ತಾರವಾದ ಅನ್ವಯವಿದೆ, ಅಂದರೆ ನಮ್ಮ ದಿನಗಳ ವರೆಗೂ ಮುಟ್ಟಿ ಅದನ್ನು ದಾಟಿಹೋಗುವ ಅನ್ವಯವಿದೆ. ಅದು ಹೇಗೆ?
-
-
ಯೆಹೋವನ ಕೈ ಮೋಟುಗೈಯಲ್ಲಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
19. ದೇವರ ಇಸ್ರಾಯೇಲಿನೊಂದಿಗೆ ಯೆಹೋವನು ಯಾವ ಒಡಂಬಡಿಕೆಯನ್ನು ಮಾಡುತ್ತಾನೆ?
19 ಈಗ ಯೆಹೋವನು ದೇವರ ಇಸ್ರಾಯೇಲಿನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುತ್ತಾನೆ. ನಾವು ಓದುವುದು: “ನಾನಂತೂ ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು, ನೋಡಿರಿ; ನಿಮ್ಮಲ್ಲಿ ಆವೇಶಿಸಿರುವ ನನ್ನ ಆತ್ಮವೂ ನಿಮ್ಮ ಬಾಯಿಗೆ ನಾನು ಕೊಟ್ಟಿರುವ ಮಾತುಗಳೂ ನಿಮ್ಮ ಬಾಯಿಂದಾಗಲಿ ನಿಮ್ಮ ಸಂತತಿಯ ಬಾಯಿಂದಾಗಲಿ ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ ಇಂದಿನಿಂದ ಎಂದಿಗೂ ತೊಲಗುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾಯ 59:21) ಈ ಮಾತುಗಳು ಸ್ವತಃ ಯೆಶಾಯನಿಗೆ ಅನ್ವಯಿಸಿರಲಿ ಇಲ್ಲದಿರಲಿ, ಅವು ಖಂಡಿತವಾಗಿಯೂ ‘ಅವನು ತನ್ನ ಸಂತಾನವನ್ನು ನೋಡುವನು’ ಎಂಬ ಆಶ್ವಾಸನೆಯನ್ನು ಪಡೆದ ಯೇಸುವಿನಲ್ಲಿ ನೆರವೇರಿದವು. (ಯೆಶಾಯ 53:10) ಯೇಸು ಯೆಹೋವನಿಂದ ಕಲಿತಿದ್ದ ಮಾತುಗಳನ್ನು ಹೇಳಿದನು ಮತ್ತು ಅವನ ಮೇಲೆ ಯೆಹೋವನ ಆತ್ಮವು ನೆಲೆಸಿತು. (ಯೋಹಾನ 1:18; 7:16) ಯೋಗ್ಯವಾಗಿಯೇ, ಅವನ ಸಹೋದರರೂ ಜೊತೆ ಬಾಧ್ಯಸ್ಥರೂ ಆದ ದೇವರ ಇಸ್ರಾಯೇಲಿನ ಸದಸ್ಯರು ಸಹ ಯೆಹೋವನ ಪವಿತ್ರಾತ್ಮವನ್ನು ಪಡೆಯುತ್ತಾರೆ ಮತ್ತು ತಮ್ಮ ಸ್ವರ್ಗೀಯ ಪಿತನಿಂದ ಅವರು ಕಲಿತಿರುವ ಸಂದೇಶವೊಂದನ್ನು ಸಾರುತ್ತಾರೆ. ಅವರೆಲ್ಲರೂ “ಯೆಹೋವನಿಂದ ಶಿಕ್ಷಿತರಾಗಿರುವ” ವ್ಯಕ್ತಿಗಳಾಗಿದ್ದಾರೆ. (ಯೆಶಾಯ 54:13; ಲೂಕ 12:12; ಅ. ಕೃತ್ಯಗಳು 2:38) ಒಂದೊ ಯೆಶಾಯನ ಮೂಲಕ ಇಲ್ಲವೆ ಯೆಶಾಯನು ಪ್ರವಾದನಾರೂಪವಾಗಿ ಚಿತ್ರಿಸಿದ ಯೇಸುವಿನ ಮೂಲಕ ಯೆಹೋವನು ಈಗ ಒಂದು ಒಡಂಬಡಿಕೆಯನ್ನು ಮಾಡುತ್ತಾನೆ. ಅದೇನೆಂದರೆ, ಇನ್ನೆಂದಿಗೂ ಅವರ ಸ್ಥಾನಪಲ್ಲಟಗೊಳಿಸದೇ ಅವರನ್ನು ಸದಾಕಾಲಕ್ಕೂ ತನ್ನ ಸಾಕ್ಷಿಗಳಾಗಿ ಉಪಯೋಗಿಸುವನೆಂಬುದೇ. (ಯೆಶಾಯ 43:10) ಆದರೆ ಈ ಒಡಂಬಡಿಕೆಯಿಂದ ಪ್ರಯೋಜನ ಪಡೆಯುವ ಅವರ “ಸಂತಾನ”ದವರು ಯಾರಾಗಿದ್ದಾರೆ?
20. ಯೆಹೋವನು ಅಬ್ರಹಾಮನಿಗೆ ಕೊಟ್ಟಿದ್ದ ವಾಗ್ದಾನವು ಒಂದನೆಯ ಶತಮಾನದಲ್ಲಿ ಹೇಗೆ ನೆರವೇರಿತು?
20 ಪುರಾತನ ಕಾಲದಲ್ಲಿ ಯೆಹೋವನು ಅಬ್ರಹಾಮನಿಗೆ, “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು” ಎಂಬ ವಾಗ್ದಾನ ಮಾಡಿದನು. (ಆದಿಕಾಂಡ 22:18) ಇದಕ್ಕೆ ಹೊಂದಿಕೆಯಲ್ಲಿ, ಮೆಸ್ಸೀಯನನ್ನು ಅಂಗೀಕರಿಸಿದ ಮಾಂಸಿಕ ಇಸ್ರಾಯೇಲ್ಯರ ಚಿಕ್ಕ ಜನಶೇಷವು, ಅನೇಕ ಜನಾಂಗಗಳಿಗೆ ಹೋಗಿ ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಸಾರಿತು. ಕೊರ್ನೇಲ್ಯನಿಂದ ಆರಂಭಿಸಿ, ಸುನ್ನತಿಯಾಗಿರದ ಅನೇಕ ಮಂದಿ ಅನ್ಯರು ಅಬ್ರಹಾಮನ ಸಂತಾನವಾದ ಯೇಸುವಿನ ಮೂಲಕ ತಮ್ಮನ್ನು ‘ಆಶೀರ್ವದಿಸಿ’ಕೊಂಡರು. ಅವರು ದೇವರ ಇಸ್ರಾಯೇಲಿನ ಭಾಗವೂ ಅಬ್ರಹಾಮನ ಸಂತಾನದ ದ್ವಿತೀಯ ಭಾಗವೂ ಆದರು. ಅವರು ಯೆಹೋವನ “ಪವಿತ್ರ ಜನಾಂಗ”ದ ಭಾಗವಾಗಿದ್ದು, ‘ಅವರನ್ನು ಕತ್ತಲೆಯೊಳಗಿಂದ ಕರೆದು ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ ಮಾಡುವುದೇ’ ಅವರ ನೇಮಕವಾಗಿದೆ.—1 ಪೇತ್ರ 2:9, NW; ಗಲಾತ್ಯ 3:7-9, 14, 26-29.
21. (ಎ) ದೇವರ ಇಸ್ರಾಯೇಲ್ ಈ ಆಧುನಿಕ ದಿನಗಳಲ್ಲಿ ಯಾವ “ಸಂತಾನ”ವನ್ನು ಹುಟ್ಟಿಸಿದೆ? (ಬಿ) ಯೆಹೋವನು ದೇವರ ಇಸ್ರಾಯೇಲಿನೊಂದಿಗೆ ಮಾಡಿದ ಒಡಂಬಡಿಕೆ ಅಥವಾ ಒಪ್ಪಂದದಿಂದ ಆ “ಸಂತಾನ”ವು ಹೇಗೆ ಸಂತೈಸಲ್ಪಡುತ್ತದೆ?
21 ಇಂದು ದೇವರ ಇಸ್ರಾಯೇಲಿನ ಪೂರ್ಣ ಸಂಖ್ಯೆಯು ಒಟ್ಟುಗೂಡಿಸಲ್ಪಟ್ಟಿರುವಂತೆ ತೋರುತ್ತದೆ. ಆದರೂ ಜನಾಂಗಗಳು ದೊಡ್ಡ ಪ್ರಮಾಣದಲ್ಲಿ ಆಶೀರ್ವದಿಸಲ್ಪಡುತ್ತ ಇವೆ. ಅದು ಹೇಗೆ? ಹೇಗಂದರೆ, ದೇವರ ಇಸ್ರಾಯೇಲಿಗೆ “ಸಂತಾನ” ಹುಟ್ಟಿದೆ. ಭೂಪರದೈಸಿನಲ್ಲಿ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯುಳ್ಳ ಯೇಸುವಿನ ಶಿಷ್ಯರೇ ಇವರಾಗಿದ್ದಾರೆ. (ಕೀರ್ತನೆ 37:11, 29) ಈ “ಸಂತಾನ” ಸಹ ಯೆಹೋವನಿಂದ ಕಲಿಸಲ್ಪಟ್ಟಿದೆ ಮತ್ತು ಆತನ ಮಾರ್ಗಗಳ ಕುರಿತು ಉಪದೇಶವನ್ನು ಪಡೆದಿದೆ. (ಯೆಶಾಯ 2:2-4) ಇವರಿಗೆ ಪವಿತ್ರಾತ್ಮದಿಂದ ದೀಕ್ಷಾಸ್ನಾನವಾಗಿಲ್ಲವಾದರೂ ಇವರು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವುದಿಲ್ಲವಾದರೂ, ಸೈತಾನನು ಅವರ ಸಾರುವ ಕಾರ್ಯದ ಮುಂದೆ ಹಾಕಿರುವ ಸಕಲ ತಡೆಗಳನ್ನು ಜಯಿಸುವಂತೆ ಯೆಹೋವನ ಪವಿತ್ರಾತ್ಮವು ಅವರನ್ನು ಬಲಪಡಿಸುತ್ತದೆ. (ಯೆಶಾಯ 40:28-31) ಅವರ ಸಂಖ್ಯೆಯು ಈಗ ದಶಲಕ್ಷಗಳನ್ನು ತಲಪಿದೆ ಮತ್ತು ಅವರು ತಮ್ಮದೇ ಆದ ಸಂತಾನವನ್ನು ಪಡೆಯುತ್ತಿರುವಾಗ ಅದು ವೃದ್ಧಿಯಾಗುತ್ತ ಹೋಗುತ್ತದೆ. ಅಭಿಷಿಕ್ತರೊಂದಿಗೆ ಯೆಹೋವನು ಮಾಡಿರುವ ಒಡಂಬಡಿಕೆ ಅಥವಾ ಒಪ್ಪಂದವು, ಯೆಹೋವನು ತಮ್ಮನ್ನು ಸಹ ಆತನ ವದನಕರಾಗಿ ಸದಾಕಾಲಕ್ಕೂ ಉಪಯೋಗಿಸುತ್ತ ಮುಂದುವರಿಯುವನೆಂಬ ಭರವಸೆಯನ್ನು ಈ ‘ಸಂತಾನಕ್ಕೆ’ ಕೊಡುತ್ತದೆ.—ಪ್ರಕಟನೆ 21:3, 4, 7.
-