-
ಯೆಹೋವನು ತನಗಾಗಿ ಸುಂದರ ನಾಮವನ್ನು ಗಳಿಸಿಕೊಳ್ಳುತ್ತಾನೆಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
11. (ಎ) ಯೆಹೋವನು “ಮುಯ್ಯಿ ತೀರಿಸುವ ದಿನ”ವನ್ನು ತರುವುದೇಕೆ? (ಬಿ) ಪುರಾತನ ಕಾಲದಲ್ಲಿ “ಮರುಕೊಳ್ಳಲ್ಪಟ್ಟವರು” ಯಾರಾಗಿದ್ದರು, ಮತ್ತು ಇಂದು ಯಾರಾಗಿದ್ದಾರೆ?
11 ಸ್ವತಃ ತಾನೇ ಆ ಕೆಲಸವನ್ನು ಮಾಡುವುದರ ಕಾರಣವನ್ನು ಯೆಹೋವನು ಇನ್ನೂ ವಿವರಿಸುತ್ತ ಹೇಳುವುದು: “ಏಕಂದರೆ ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಸಿದ್ಧವಾಗಿತ್ತು, ನನ್ನ ಜನರನ್ನು [“ಮರುಕೊಳ್ಳಲ್ಪಟ್ಟವರನ್ನು,” NW] ವಿಮೋಚಿಸುವ ವರುಷವು ಒದಗಿತ್ತು.” (ಯೆಶಾಯ 63:4)b ತನ್ನ ಜನರಿಗೆ ಹಾನಿಮಾಡುವವರ ಮೇಲೆ ಸೇಡು ತೀರಿಸುವ ಹಕ್ಕು ಯೆಹೋವನಿಗೆ ಮಾತ್ರ ಇದೆ. (ಧರ್ಮೋಪದೇಶಕಾಂಡ 32:35) ಪುರಾತನ ಕಾಲದಲ್ಲಿ ಬಾಬೆಲಿನವರ ಕೈಯಿಂದ ಕಷ್ಟಾನುಭವಿಸುತ್ತಿದ್ದ ಯೆಹೂದ್ಯರು “ಮರುಕೊಳ್ಳಲ್ಪಟ್ಟವರು” ಆಗಿದ್ದರು. (ಯೆಶಾಯ 35:10; 43:1; 48:20) ಆಧುನಿಕ ಸಮಯಗಳಲ್ಲಿ ಇವರು ಅಭಿಷಿಕ್ತ ಉಳಿಕೆಯವರಾಗಿದ್ದಾರೆ. (ಪ್ರಕಟನೆ 12:17) ಅವರ ಪ್ರಾಚೀನಕಾಲದ ಪ್ರತಿರೂಪಗಳಂತೆ ಇವರನ್ನೂ ಧಾರ್ಮಿಕ ಬಂಧನದಿಂದ ಮರುಕೊಳ್ಳಲಾಗಿದೆ. ಮತ್ತು ಆ ಯೆಹೂದ್ಯರಂತೆ, ಅಭಿಷಿಕ್ತರೂ ಅವರ “ಬೇರೆ ಕುರಿ” ಸಂಗಾತಿಗಳೂ ಹಿಂಸೆ ಮತ್ತು ವಿರೋಧಗಳಿಗೆ ಬಲಿಯಾಗಿದ್ದಾರೆ. (ಯೋಹಾನ 10:16) ಹೀಗೆ, ಯೆಶಾಯನ ಪ್ರವಾದನೆಯು ಇಂದಿನ ಕ್ರೈಸ್ತರಿಗೆ, ದೇವರು ಕ್ಲುಪ್ತ ಸಮಯದಲ್ಲಿ ಅವರ ಪರವಾಗಿ ಹಸ್ತಕ್ಷೇಪಮಾಡುವನೆಂಬ ಆಶ್ವಾಸನೆಯನ್ನು ನೀಡುತ್ತದೆ.
-
-
ಯೆಹೋವನು ತನಗಾಗಿ ಸುಂದರ ನಾಮವನ್ನು ಗಳಿಸಿಕೊಳ್ಳುತ್ತಾನೆಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
b “ನನ್ನ ಮರುಕೊಳ್ಳಲ್ಪಟ್ಟವರನ್ನು ವಿಮೋಚಿಸುವ ವರುಷ” ಎಂಬ ಮಾತುಗಳು, “ಮುಯ್ಯಿ ತೀರಿಸುವ ದಿನ” ಎಂಬ ಮಾತುಗಳು ಸೂಚಿಸುವಷ್ಟೇ ಕಾಲಾವಧಿಯನ್ನು ಸೂಚಿಸಬಹುದು. ತದ್ರೀತಿಯ ಮಾತುಗಳು ಸಮಾಂತರವಾಗಿ ಉಪಯೋಗಿಸಲ್ಪಟ್ಟಿರುವುದನ್ನು ಯೆಶಾಯ 34:8ರಲ್ಲಿ ಗಮನಿಸಿ.
-