-
“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
29. (ಎ) ಪುನಸ್ಸ್ಥಾಪಿತ ಯೆಹೂದ ದೇಶದಲ್ಲಿ ದೇವರ ವಿಧೇಯ ಜನರಿಗೆ ಯಾವ ಸಂತೋಷಗಳಿರುವವು? (ಬಿ) ಮರಗಳು ದೀರ್ಘಾಯುಷ್ಯಕ್ಕೆ ಯೋಗ್ಯ ದೃಷ್ಟಾಂತಗಳಾಗಿವೆಯೇಕೆ? (ಪಾದಟಿಪ್ಪಣಿಯನ್ನು ನೋಡಿ.)
29 ಪುನಸ್ಸ್ಥಾಪಿತ ಯೆಹೂದ ದೇಶದಲ್ಲಿ ಇರಲಿದ್ದ ಪರಿಸ್ಥಿತಿಗಳ ಕುರಿತಾದ ತನ್ನ ವರ್ಣನೆಯನ್ನು ಯೆಹೋವನು ಮುಂದುವರಿಸುತ್ತಾನೆ: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:21, 22) ಹಾಳು ಬಿದ್ದಿದ್ದ ಮತ್ತು ಮನೆಗಳಾಗಲಿ ದ್ರಾಕ್ಷಾಲತೆಗಳಾಗಲಿ ಇಲ್ಲದಿದ್ದ ಯೆಹೂದ ದೇಶಕ್ಕೆ ಹಿಂದಿರುಗಿದ ಬಳಿಕ, ದೇವರ ವಿಧೇಯ ಜನರಿಗೆ ತಮ್ಮದೇ ಆದ ಮನೆಗಳಲ್ಲಿ ಜೀವಿಸುವ ಮತ್ತು ತಮ್ಮದೇ ಆದ ದ್ರಾಕ್ಷಾತೋಟಗಳ ಫಲವನ್ನು ತಿನ್ನುವ ಆನಂದವಿರುವುದು. ದೇವರು ಅವರ ಕೆಲಸವನ್ನು ಆಶೀರ್ವದಿಸುವನು. ಅವರು ಮರದ ಆಯುಷ್ಯದಂತೆ ದೀರ್ಘಾಯುಷಿಗಳಾಗಿ ತಮ್ಮ ಕೆಲಸದ ಫಲಗಳನ್ನು ಅನುಭವಿಸುವರು.e
30. ಇಂದು ಯೆಹೋವನ ಸೇವಕರು ಯಾವ ಸಂತೋಷದ ಸ್ಥಿತಿಯನ್ನು ಅನುಭವಿಸುತ್ತಾರೆ, ಮತ್ತು ಹೊಸ ಲೋಕದಲ್ಲಿ ಅವರು ಏನನ್ನು ಅನುಭವಿಸುವರು?
30 ಈ ಪ್ರವಾದನೆಯ ಒಂದು ನೆರವೇರಿಕೆ ನಮ್ಮ ದಿನಗಳಲ್ಲಿ ನಡೆದಿದೆ. ಯೆಹೋವನ ಜನರು 1919ರಲ್ಲಿ ಆತ್ಮಿಕ ಬಂಧಿವಾಸದಿಂದ ಹೊರಬಂದು, ತಮ್ಮ “ದೇಶ”ವನ್ನು ಅಥವಾ ಚಟುವಟಿಕೆ ಮತ್ತು ಆರಾಧನೆಯ ಕ್ಷೇತ್ರವನ್ನು ಪುನಸ್ಸ್ಥಾಪಿಸತೊಡಗಿದರು. ಅವರು ಸಭೆಗಳನ್ನು ರಚಿಸಿದರು ಮತ್ತು ಆತ್ಮಿಕ ಫಲೋತ್ಪಾದನೆಯನ್ನು ಮಾಡತೊಡಗಿದರು. ಇದರ ಫಲವಾಗಿ, ಈಗಲೂ ಯೆಹೋವನ ಜನರು ಆತ್ಮಿಕ ಪರದೈಸನ್ನು ಮತ್ತು ದೇವದತ್ತ ಶಾಂತಿಯನ್ನು ಅನುಭವಿಸುತ್ತಾರೆ. ಇಂತಹ ಶಾಂತಿಯು ಭೌತಿಕ ಪರದೈಸಿನಲ್ಲಿಯೂ ಮುಂದುವರಿಯುವುದೆಂಬುದರ ಬಗ್ಗೆ ನಾವು ಖಾತ್ರಿಯಿಂದಿರಬಲ್ಲೆವು. ಯೆಹೋವನು ನೂತನ ಲೋಕದಲ್ಲಿ ತನ್ನ ಆರಾಧಕರ ಸಿದ್ಧ ಹೃದಯಗಳು ಮತ್ತು ಹಸ್ತಗಳ ಮೂಲಕ ಯಾವ ವಿಷಯಗಳನ್ನೆಲ್ಲ ಸಾಧಿಸುವನೆಂಬುದನ್ನು ನಾವು ನಿಖರವಾಗಿ ಹೇಳುವುದು ಅಸಾಧ್ಯ. ನಮ್ಮ ಸ್ವಂತ ಮನೆಯನ್ನು ಕಟ್ಟಿ, ಅದರಲ್ಲಿ ಜೀವಿಸುವುದು ಅದೆಷ್ಟು ಸಂತೋಷಕರವಾದ ವಿಷಯ! ರಾಜ್ಯದಾಳಿಕೆಯಲ್ಲಿ ತೃಪ್ತಿಕರವಾದ ಕೆಲಸದ ಅಭಾವವೇ ಇರದು. ನಮ್ಮ ಸ್ವಂತ ಕೆಲಸಗಳ ಫಲದ ಕಾರಣ ಯಾವಾಗಲೂ “ಸುಖವನ್ನನುಭವಿಸುವುದು” ಎಷ್ಟು ಪ್ರತಿಫಲದಾಯಕ! (ಪ್ರಸಂಗಿ 3:13) ನಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸಲು ನಮಗೆ ಅಲ್ಲಿ ಸಮಯವಿದ್ದೀತೊ? ಹೌದು, ನಿಶ್ಚಯವಾಗಿ! ನಂಬಿಗಸ್ತ ಮಾನವರ ಅನಂತ ಜೀವನಗಳು ‘ವೃಕ್ಷದ ಆಯುಸ್ಸಿನಂತಿರುವವು,’ ಸಾವಿರಾರು ವರುಷಗಳಷ್ಟು ಮತ್ತು ಅದಕ್ಕಿಂತಲೂ ಹೆಚ್ಚಾಗಿರುವವು!
-
-
“ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ”ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು II
-
-
e ಮರಗಳು ದೀರ್ಘಾಯುಷ್ಯಕ್ಕೆ ಉಚಿತ ದೃಷ್ಟಾಂತಗಳಾಗಿವೆ. ಏಕೆಂದರೆ ಈ ವರೆಗೂ ತಿಳಿದುಬಂದಿರುವ ಸಜೀವ ವಸ್ತುಗಳಲ್ಲಿ ಅವು ಅತಿ ಹೆಚ್ಚು ಕಾಲ ಬಾಳುವವುಗಳಾಗಿವೆ. ಉದಾಹರಣೆಗೆ, ಒಂದು ಆಲಿವ್ ಮರವು ನೂರಾರು ವರ್ಷಗಳ ವರೆಗೆ ಫಲಬಿಡುತ್ತ ಒಂದು ಸಾವಿರ ವರ್ಷಗಳ ತನಕ ಜೀವಿಸಬಹುದು.
-