-
ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳುಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
-
-
19, 20. (ಎ) ಎಲ್ಯಾಕೀಮನು ತನ್ನ ಜನರಿಗೆ ಆಶೀರ್ವಾದವಾಗಿರುವುದು ಹೇಗೆ? (ಬಿ) ಮಾರ್ಗದರ್ಶನಕ್ಕಾಗಿ ಶೆಬ್ನನನ್ನು ಎದುರುನೋಡುವವರಿಗೆ ಏನು ಸಂಭವಿಸುವುದು?
19 ಶೆಬ್ನನಿಂದ ಅಧಿಕಾರವನ್ನು ಕಿತ್ತು ಎಲ್ಯಾಕೀಮನಿಗೆ ಕೊಡುವ ಸಂಗತಿಯನ್ನು ಯೆಹೋವನು ಸಾಂಕೇತಿಕ ಭಾಷೆಯಲ್ಲಿ ವಿವರಿಸುತ್ತಾನೆ. ಆತನು ಹೇಳುವುದು: “ಗಟ್ಟಿಯಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು. ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣಪಾತ್ರೆಗಳನ್ನು ಅಂದರೆ ತಂದೆಯ ಸಂತಾನ ಸಂತತಿಯಾದ ಅವನ ವಂಶದ ಭಾರವನ್ನೆಲ್ಲಾ ಅವನಿಗೆ ತಗಲುಹಾಕುವರು. ಸೇನಾಧೀಶ್ವರನಾದ ಯೆಹೋವನು ಹೇಳುವದೇನಂದರೆ—ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು [ಶೆಬ್ನ] ಆ ದಿನದಲ್ಲಿ ಕುಸಿದು ಹೋಗುವದು. ಅದು ಬಡಿಯಲ್ಪಟ್ಟು ಬೀಳಲಾಗಿ ಅದಕ್ಕೆ ತಗಲುಹಾಕಿದ ಭಾರವೂ ನಾಶವಾಗುವದು. ಇದೇ ಯೆಹೋವನಾದ ನನ್ನ ನುಡಿ ಎಂಬದೇ.”—ಯೆಶಾಯ 22:23-25.
20 ಈ ವಚನಗಳಲ್ಲಿ ತಿಳಿಸಲ್ಪಟ್ಟಿರುವ ಮೊದಲನೆಯ ಮೊಳೆಯು ಎಲ್ಯಾಕೀಮನು. ಇವನು ತನ್ನ ತಂದೆಯಾದ ಹಿಲ್ಕೀಯನ ವಂಶಕ್ಕೆ “ಗೌರವಪೀಠವಾಗಿರುವನು.” ಶೆಬ್ನನಂತೆ ಇವನು ತನ್ನ ತಂದೆಯ ವಂಶಕ್ಕೆ ಇಲ್ಲವೆ ಖ್ಯಾತಿಗೆ ಕುಂದುತರಲಾರನು. ಎಲ್ಯಾಕೀಮನು ರಾಜನ ಸೇವೆಯಲ್ಲಿರುವ ಇತರರಿಗೆ, ಅಂದರೆ ಸಕಲ ಸಾಧಾರಣಪಾತ್ರೆಗಳಿಗೆ ಶಾಶ್ವತವಾದ ಬೆಂಬಲವಾಗಿರುವನು. (2 ತಿಮೊಥೆಯ 2:20, 21) ಎರಡನೆಯ ಮೊಳೆಯು ಶೆಬ್ನನನ್ನು ಸೂಚಿಸುತ್ತದೆ. ಅವನು ಭದ್ರವಾಗಿ ನೆಲೆವೂರಿರುವಂತೆ ತೋರಿದರೂ, ತನ್ನ ಸ್ಥಾನದಿಂದ ಕೀಳಲ್ಪಡುವನು. ಅವನ ಮಾರ್ಗದರ್ಶನಕ್ಕಾಗಿ ಎದುರುನೋಡುವವರು ಸಹ ಬಿದ್ದುಹೋಗುವರು.
-
-
ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳುಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
-
-
[ಪುಟ 239ರಲ್ಲಿರುವ ಚಿತ್ರ]
ಹಿಜ್ಕೀಯನು ಎಲ್ಯಾಕೀಮನನ್ನು ‘ಗಟ್ಟಿಯಾದ ಸ್ಥಳದಲ್ಲಿರುವ ಮೊಳೆಯಾಗಿ’ ಮಾಡುತ್ತಾನೆ
-