ಸುಳ್ಳು ಪ್ರವಾದಿಗಳು ಇಂದು!
ಯೆರೆಮೀಯನು ಯೆರೂಸಲೇಮಿನಲ್ಲಿ ದೇವರ ಪ್ರವಾದಿಯಾಗಿ ಕೆಲಸ ಮಾಡಿದ್ದಾಗ ಆ ಶಹರವು ಮೂರ್ತಿಪೂಜೆ, ಅನೈತಿಕತೆ, ಭ್ರಷ್ಟಾಚಾರ ಮತ್ತು ನಿರಪಾಧಿಗಳ ರಕ್ತಸುರಿಸುವಿಕೆ ಮುಂತಾದುವುಗಳಿಂದ ತುಂಬಿಹೋಗಿತ್ತು. (ಯೆರೆಮೀಯ 7:8-11) ಆ ಸಮಯದಲ್ಲಿ ಕ್ರಿಯಾಶೀಲನಾಗಿದ್ದ ಪ್ರವಾದಿಯು ಅವನೊಬ್ಬನು ಮಾತ್ರವೇ ಅಲ್ಲ, ಆದರೆ ಅವರಲ್ಲಿ ಹೆಚ್ಚಿನವರು ಸ್ವಾರ್ಥಚಿಂತಕರೂ ಭ್ರಷ್ಟರೂ ಆಗಿದ್ದರು. ಯಾವ ರೀತಿಯಲ್ಲಿ? ಯೆಹೋವನು ಘೋಷಿಸಿದ್ದು: “ಪ್ರವಾದಿಗಳು ಮೊದಲಾಗಿ ಯಾಜಕರ ವರೆಗೆ ಸಕಲರು ಮೋಸ ಮಾಡುತ್ತಾರೆ. ಶಾಂತಿ ಇಲ್ಲದಿದ್ದರೂ ‘ಶಾಂತಿ!’ ‘ಶಾಂತಿ!’ ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.”—ಯೆರೆಮೀಯ 6:13, 14, NW.
ದೇಶದಲ್ಲಿ ತುಂಬಿದ್ದ ಎಲ್ಲಾ ಭ್ರಷ್ಟತೆಯ ನಡುವೆಯೂ ಎಲ್ಲವೂ ಸರಿಯಾಗಿವೆ, ಮತ್ತು ಜನರು ದೇವರೊಂದಿಗೆ ಶಾಂತಿಯಲ್ಲಿದ್ದಾರೆ ಎಂದು ತೋರುವಂತೆ ಮಾಡಲು ಆ ಸುಳ್ಳು ಪ್ರವಾದಿಗಳು ಪ್ರಯತ್ನಿಸಿದ್ದರು; ಆದರೆ ವಿಷಯವು ಹಾಗಿರಲಿಲ್ಲ. ಯೆರೆಮೀಯನು ನಿರ್ಭೀತಿಯಿಂದ ಘೋಷಿಸಿದ್ದ ಪ್ರಕಾರವೇ, ದೇವರ ತೀರ್ಪು ಅವರನ್ನು ಕಾದಿತ್ತು. ಯೆರೂಸಲೇಮು ಸಾ.ಶ.ಪೂ. 607ರಲ್ಲಿ ಬೆಬಿಲೋನ್ಯರಿಂದ ದ್ವಂಸ ಮಾಡಲ್ಪಟ್ಟು ಅದರ ಆಲಯವು ನಾಶವಾದಾಗ ಮತ್ತು ದೇಶವಾಸಿಗಳು ಕೊಲ್ಲಲ್ಪಟ್ಟು ಇಲ್ಲವೆ ಸೆರೆವಾಸಿಗಳಾಗಿ ದೂರದ ಬೆಬಿಲೋನಿಗೆ ಒಯ್ಯಲ್ಪಟ್ಟಾಗ, ನಿಜಪ್ರವಾದಿಯಾದ ಯೆರೆಮೀಯನ ಸತ್ಯತ್ವ ಸ್ಥಾಪಿತವಾಯಿತು, ಸುಳ್ಳು ಪ್ರವಾದಿಗಳದ್ದು ಅಲ್ಲ. ದೇಶದಲ್ಲಿ ಬಿಡಲ್ಪಟ್ಟ ಕರುಣಾರ್ಹರಾದ ಕೆಲವರು ಇಜಿಪ್ಟಿಗೆ ಓಡಿಹೋದರು.—ಯೆರೆಮೀಯ 39:6-9; 43:4-7.
ಸುಳ್ಳು ಪ್ರವಾದಿಗಳು ಏನು ಮಾಡಿದ್ದರು? “ನನ್ನ ಮಾತುಗಳನ್ನು ತಮ್ಮ ತಮ್ಮ ಸಂಗಡಿಗರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧವಾಗಿದ್ದೇನೆ, ಇದು ಯೆಹೋವನ ನುಡಿ.” (ಯೆರೆಮೀಯ 23:30) ದೇವರಿಂದ ಬಂದ ಸತ್ಯ ಎಚ್ಚರಿಕೆಗೆ ಕಿವಿಗೊಡುವ ಬದಲಿಗೆ ಸುಳ್ಳಿಗೆ ಕಿವಿಗೊಡುವಂತೆ ಜನರನ್ನು ಉತ್ತೇಜಿಸಿದ ಮೂಲಕ ಸುಳ್ಳು ಪ್ರವಾದಿಗಳು ದೇವರ ವಾಕ್ಯದ ಬಲವನ್ನು ಮತ್ತು ಪರಿಣಾಮಕಾರತೆಯನ್ನು ಕದ್ದುಕೊಂಡರು. ಅವರು “ದೇವರ ಮಹತ್ತುಗಳ ಕುರಿತಾಗಿ” ತಿಳಿಸತ್ತಿರಲಿಲ್ಲ, ಬದಲಾಗಿ ತಮ್ಮ ಸ್ವಂತ ವಿಚಾರಗಳನ್ನು, ಜನರು ಕೇಳ ಬಯಸುತ್ತಿದ್ದ ವಿಷಯಗಳನ್ನು ತಿಳಿಸುತ್ತಿದ್ದರು. ಯೆರೆಮೀಯನ ಸಂದೇಶವು ನಿಜವಾಗಿ ದೇವರಿಂದ ಬಂದದ್ದಾಗಿತ್ತು ಮತ್ತು ಇಸ್ರಾಯೇಲ್ಯರು ಆತನ ಮಾತುಗಳಿಗನುಸಾರ ನಡೆದಿದ್ದರೆ, ಪಾರಾಗುತ್ತಿದ್ದರು. ಸುಳ್ಳು ಪ್ರವಾದಿಗಳು ‘ದೇವರ ವಾಕ್ಯವನ್ನು ಕದ್ದರು’ ಮತ್ತು ಜನರನ್ನು ವಿಪತ್ತಿನೊಳಗೆ ನಡಿಸಿದರು. ಅದು, ತನ್ನ ದಿನಗಳ ಅಪನಂಬಿಗಸ್ತ ಧಾರ್ಮಿಕ ಮುಖಂಡರ ಕುರಿತು ಯೇಸು ಏನಂದನೋ ಅಂತೆಯೇ ಇತ್ತು: “ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು.”—ಅಪೊಸ್ತಲರ ಕೃತ್ಯಗಳು 2:11; ಮತ್ತಾಯ 15:14.
ಯೆರೆಮೀಯನ ದಿನಗಳಂತೆ ಇಂದೂ ಬೈಬಲಿನ ದೇವರನ್ನು ತಾವು ಪ್ರತಿನಿಧಿಸುತ್ತೇವೆ ಎಂದನ್ನುವ ಸುಳ್ಳು ಪ್ರವಾದಿಗಳು ಅಸ್ತಿತ್ವದಲ್ಲಿದ್ದಾರೆ; ಮತ್ತು ದೇವರು ಬೈಬಲಿನ ಮೂಲಕ ನಿಜವಾಗಿ ಏನನ್ನುತ್ತಾನೋ ಅದರಿಂದ ಜನರನ್ನು ಅಪಕರ್ಷಿಸುವ ವಿಷಯಗಳನ್ನು ಸಾರುವ ಮೂಲಕ ಅವರೂ ದೇವರ ವಾಕ್ಯವನ್ನು ಕದಿಯುತ್ತಾರೆ. ಯಾವ ರೀತಿಯಲ್ಲಿ? ನಾವು ಆ ಪ್ರಶ್ನೆಯನ್ನು, ಬೈಬಲಿನ ಮೂಲಭೂತ ಬೋಧನೆಯಾದ ದೇವರ ರಾಜ್ಯವನ್ನು ಒರೆಗಲ್ಲಾಗಿ ಉಪಯೋಗಿಸುವ ಮೂಲಕ ಉತ್ತರಿಸೋಣ.
ದೇವರ ರಾಜ್ಯದ ಕುರಿತಾದ ಸತ್ಯ
ದೇವರ ರಾಜ್ಯವು ಕ್ರಿಸ್ತನ ಕಲಿಸುವಿಕೆಯ ಪ್ರಧಾನ ವಿಷಯವಾಗಿತ್ತು ಮತ್ತು ಸುವಾರ್ತೆಗಳಲ್ಲಿ ಅದು ನೂರಕ್ಕಿಂತಲೂ ಹೆಚ್ಚು ಸಾರಿ ತಿಳಿಸಲ್ಪಟ್ಟಿದೆ. ತನ್ನ ಶುಶ್ರೂಷೆಯ ಆರಂಭದಲ್ಲೇ ಯೇಸು ಹೇಳಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳಬೇಕಾಗಿದೆ. . . . ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” ಅವನು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸಲು ಕಲಿಸಿದನು: “ನಿನ್ನ ರಾಜ್ಯವು ಬರಲಿ.”—ಲೂಕ 4:43; 11:2.
ಹಾಗಾದರೆ, ದೇವರ ರಾಜ್ಯ ಎಂದರೇನು? ದ ನ್ಯೂ ಥೇಯರ್ಸ್ ಗ್ರೀಕ್ ಇಂಗ್ಲಿಷ್ ಲೆಕ್ಸಿಕನ್, ಬೈಬಲಿನಲ್ಲಿ “ರಾಜ್ಯ” ಎಂಬದಾಗಿ ತರ್ಜುಮೆಯಾದ ಗ್ರೀಕ್ ಶಬ್ದ ಪ್ರಥಮವಾಗಿ, “ರಾಜಾಧಿಕಾರ, ರಾಜತ್ವ, ಆಡಳಿತ, ಆಳಿಕೆ” ಮತ್ತು ದ್ವಿತೀಯವಾಗಿ, “ಒಬ್ಬ ರಾಜನ ಆಳಿಕೆಗೆ ಅಧೀನವಾದ ಕ್ಷೇತ್ರ” ಎಂಬರ್ಥವನ್ನು ಕೊಡುತ್ತದೆ. ಇದರಿಂದ ನಾವು ನ್ಯಾಯಸಮ್ಮತವಾಗಿ ತೀರ್ಮಾನಿಸುತ್ತೇವೆ ಏನಂದರೆ ದೇವರ ರಾಜ್ಯವು ಒಬ್ಬ ಅರಸನಿಂದ ರಾಜ್ಯಭಾರ ಮಾಡಲ್ಪಡುವ ಒಂದು ಅಕ್ಷರಾರ್ಥಕ ಸರಕಾರ ಎಂಬದಾಗಿ. ವಿಷಯವು ಹಾಗಿದೆಯೇ?
ಹೌದು, ಹಾಗಿದೆ, ಮತ್ತು ಆ ಅರಸನು ಬೇರೆ ಯಾರೂ ಅಲ್ಲದೆ ಯೇಸು ಕ್ರಿಸ್ತನು ತಾನೇ ಆಗಿದ್ದಾನೆ. ಯೇಸುವಿನ ಜನನಕ್ಕೆ ಮುಂಚೆ ಗಬ್ರಿಯೇಲ ದೂತನು ಮರಿಯಳಿಗೆ ಹೇಳಿದ್ದು: “ಆತನು ಮಹಾ ಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು [ಯೆಹೋವನು, NW ] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.” (ಲೂಕ 1:32) ಯೇಸುವಿಗೆ ಸಿಂಹಾಸನವು ದೊರಕಲಿದ್ದದ್ದು ಆತನೊಬ್ಬ ಅರಸನು, ಒಂದು ಸರಕಾರದ ಅಧಿಪತಿಯು ಎಂಬದನ್ನು ರುಜುಪಡಿಸುತ್ತದೆ. ಅಲ್ಲದೆ, ರಾಜ್ಯವು ಒಂದು ಅಕ್ಷರಾರ್ಥಕ ಸರಕಾರವೆಂಬದನ್ನು ಯೆಶಾಯನ ಪ್ರವಾದನೆ ರುಜುಪಡಿಸುತ್ತದೆ: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು. ಸರಕಾರವು ಅವನ ಬಾಹುವಿನ ಮೇಲಿರುವುದು. . . . ಅವನ ಸರಕಾರದ ಅಭಿವೃದ್ಧಿಗೆ ಮತ್ತು ಶಾಂತಿಗೆ ಅಂತ್ಯವಿರದು.”—ಯೆಶಾಯ 9:6, 7, ಕಿಂಗ್ ಜೇಮ್ಸ್ ವರ್ಷನ್.
ಯೇಸು ಆಳುವುದು ಎಲ್ಲಿ? ಯೊರೂಸಲೇಮಿನಲ್ಲೋ? ಅಲ್ಲ. ಪ್ರವಾದಿ ದಾನಿಯೇಲನು ಯೇಸು ರಾಜ್ಯವನ್ನು ಪಡೆಯುವ ಒಂದು ದರ್ಶನವನ್ನು ಕಂಡನು, ಮತ್ತು ಅವನ ದರ್ಶನವು ಯೇಸುವನ್ನು ಪರಲೋಕದಲ್ಲಿ ಕಾಣಿಸುತ್ತದೆ. (ದಾನಿಯೇಲ 7:13, 14) ಇದು ಯೇಸು ರಾಜ್ಯದ ಕುರಿತಾಗಿ ಮಾತಾಡಿದ ವಿಧಾನಕ್ಕೆ ಸಹಮತದಲ್ಲಿದೆ. ಆಗಿಂದಾಗ್ಯೆ ಆತನು ಅದನ್ನು “ಪರಲೋಕ ರಾಜ್ಯ” ಎಂದು ಕರೆದನು. (ಮತ್ತಾಯ 10:7; 11:11, 12) ಯೇಸು ಪಿಲಾತನ ಮುಂದೆ ವಿಚಾರಣೆಗಾಗಿ ನಿಂತಿದ್ದಾಗ ಯೇಸು ಆತನಿಗಂದ ಮಾತುಗಳೊಂದಿಗೂ ಇದು ಸಹಮತದಲ್ಲಿದೆ: “ನನ್ನ ರಾಜ್ಯವು ಈ ಲೋಕದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾಪಾಡುತ್ತಿದ್ದರು. ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ನಿಮ್ಮ ಪಾದ್ರಿ ಅಥವಾ ಗುರುಗಳು ಯೇಸುವಿನ ರಾಜ್ಯವು ಪರಲೋಕದಿಂದ ಆಳುವ ಒಂದು ನಿಜ ಸರಕಾರವೆಂದು ಕಲಿಸಿದ್ದಾರೋ? ಅಥವಾ ರಾಜ್ಯವು ಕೇವಲ ಹೃದಯದಲ್ಲಿ ಅಸ್ತಿತ್ವದಲ್ಲಿರುವ ಒಂದು ವಿಷಯವೆಂದು ಅವರು ಕಲಿಸಿದ್ದಾರೋ? ಹಾಗೆ ಕಲಿಸಿದ್ದರೆ, ಅವರು ನಿಮ್ಮಿಂದ ದೇವರ ವಾಕ್ಯವನ್ನು ಕದಿಯುತ್ತಿದ್ದಾರೆ.
ದೇವರ ರಾಜ್ಯ ಸರಕಾರ ಮತ್ತು ಮಾನವ ಸರಕಾರದ ಎಲ್ಲಾ ವಿವಿಧ ರೂಪಗಳ ನಡುವಣ ಸಂಬಂಧವೇನು? ಮೀರ್ಚೊ ಎಲೀಯೊಡ್ರ ಪರಿಷ್ಕರಿತ ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ಗೆ ಅನುಸಾರ, ಮತ ಸುಧಾರಕ ಮಾರ್ಟಿನ್ ಲುಥರ್, ದೇವರ ರಾಜ್ಯವನ್ನು ಚರ್ಚಿಸುವಾಗ, ಹೀಗೆಂದು ಸೂಚಿಸಿದ್ದನು: “ಲೌಕಿಕ ಸರಕಾರವನ್ನು . . . ಸಹಾ ದೇವರ ರಾಜ್ಯವೆಂದು ಕರೆಯಬಹುದು.” ಮಾನವರು ತಮ್ಮ ಸ್ವಂತ ಪ್ರಯತ್ನದಿಂದ ಮಾನವ ಸರಕಾರಗಳನ್ನು ದೇವರ ರಾಜ್ಯಕ್ಕೆ ಹತ್ತಿರ ತರಬಹುದು ಎಂದು ಕೆಲವರು ಕಲಿಸುತ್ತಾರೆ. 1983ರಲ್ಲಿ ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ ದೃಢೀಕರಿಸಿದ್ದು: “ಶಾಂತಿಗಾಗಿ ನಮ್ಮ ನಿಜ ಅಪೇಕ್ಷೆಗೆ ವಿಶಿಷ್ಟ ಕ್ರಿಯೆಗಳಿಂದ ನಾವು ಸಾಕ್ಷ್ಯ ಕೊಡುವಾಗ, ಈ ಲೋಕದ ರಾಜ್ಯಗಳನ್ನು ದೇವರ ರಾಜ್ಯಕ್ಕೆ ಹತ್ತಿರ ತರುವಂತೆ ದೇವರ ಆತ್ಮವು ನಮ್ಮ ನಿರ್ಬಲ ಪ್ರಯತ್ನಗಳನ್ನು ಉಪಯೋಗಿಸಬಲ್ಲದು.”
ಆದರೂ ಕರ್ತನ ಪ್ರಾರ್ಥನೆ (“ನಮ್ಮ ತಂದೆಯೇ”) ಯಲ್ಲಿ ಯೇಸು ತನ್ನ ಹಿಂಬಾಲಕರಿಗೆ ದೇವರ ರಾಜ್ಯವು ಬರಲಿ ಎಂದು ಪ್ರಾರ್ಥಿಸಲು ಕಲಿಸಿದನು ಮತ್ತು ಆಗ ಮಾತ್ರವೇ ಹೀಗೆಂದು ಪ್ರಾರ್ಥಿಸಬೇಕೆಂದು ಹೇಳಿದನು: “ನಿನ್ನ [ದೇವರ] ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” (ಮತ್ತಾಯ 6:10) ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಮನುಷ್ಯರು ದೇವರ ಚಿತ್ತವನ್ನು ಮಾಡುವ ಮೂಲಕ ದೇವರ ರಾಜ್ಯವನ್ನು ತರಲಾರರು. ದೇವರ ರಾಜ್ಯದ ಬರೋಣವೇ ಭೂಮಿಯ ಮೇಲೆ ದೇವರ ಚಿತ್ತವನ್ನು ನೆರವೇರುವಂತೆ ಮಾಡುವುದು. ಹೇಗೆ?
ದಾನಿಯೇಲ 2 ನೆಯ ಅಧ್ಯಾಯ 44 ನೆಯ ವಚನ ಏನನ್ನುತ್ತದೆಂದು ಕಿವಿಗೊಡಿರಿ: “ಆ ರಾಜರ [ಅಂತ್ಯಕಾಲದಲ್ಲಿ ಮಾನವ ರಾಜರ] ಕಾಲದಲ್ಲಿ ಪರಲೋಕ ದೇವರು ಎಂದೂ ಅಳಿಯದ ಒಂದು ರಾಜ್ಯವನ್ನು ಸ್ಥಾಪಿಸುವನು. . . . ಅದು ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ, ಅಂತ್ಯಗೊಳಿಸುವುದು.” ಹೀಗೆ ತನ್ನ ರಾಜ್ಯವು ಈ ಲೋಕದ್ದಲ್ಲವೆಂದು ಯೇಸು ಹೇಳಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಬದಲಿಗೆ ದೇವರ ರಾಜ್ಯವು ಈ ಭೂಮಿಯ ರಾಜ್ಯಗಳನ್ನು, ಸರಕಾರಗಳನ್ನು ನಾಶಮಾಡಲಿದೆ ಮತ್ತು ಮಾನವರನ್ನು ಆಳುವುದರಲ್ಲಿ ಅವುಗಳ ಸ್ಥಾನವನ್ನು ತಕ್ಕೊಳ್ಳಲಿದೆ. ಮಾನವ ಕುಲದ ದೇವ-ದತ್ತ ಸರಕಾರದೋಪಾದಿ, ಅದು ದೇವರ ಚಿತ್ತವು ಭೂಮಿಯ ಮೇಲೆ ನೆರವೇರುವಂತೆ ಆ ಮೇಲೆ ನೋಡಿಕೊಳ್ಳುವುದು.
ಈ ಲೋಕವು ಯಾರ ಅಧೀನದಲ್ಲಿದೆ ಎಂದು ನಾವು ಪರಿಗಣಿಸುವಾಗ ದೇವರ ರಾಜ್ಯದ ಅಂಥ ತೀಕ ಕ್ರಿಯೆಗೆ ಕಾರಣವು ನಮಗೆ ಅಧಿಕ ಸ್ಪಷ್ಟವಾಗಿಗುತ್ತದೆ. ಅಪೊಸ್ತಲ ಯೋಹಾನನು ಬರೆದದ್ದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ಯಾರನ್ನು ಪೌಲನು “ಈ ವಿಷಯ ವ್ಯವಸ್ಥೆಯ ದೇವರು” ಎಂದು ಕರೆದಿರುವನೋ ಆ ಪಿಶಾಚನಾದ ಸೈತಾನನೇ ಆ “ಕೆಡುಕನು.” (2 ಕೊರಿಂಥ 4:4) ಯಾರ ದೇವರು ಪಿಶಾಚನಾದ ಸೈತಾನನಾಗಿದ್ದಾನೋ ಆ ಒಂದು ಲೋಕದಲ್ಲಿನ ಸಂಘಟನೆಗಳು ದೇವರ ರಾಜ್ಯದೊಂದಿಗೆ ಗುರುತಿಸಲ್ಪಡಬಲ್ಲ ಯಾವ ಮಾರ್ಗವೂ ಇರುವುದಿಲ್ಲ.
ಯೇಸು ರಾಜಕೀಯದಲ್ಲಿ ಒಳಗೂಡದೆ ಇದ್ದದ್ದು ಏಕೆಂಬದಕ್ಕೆ ಇದೊಂದು ಕಾರಣವು. ಯೆಹೂದಿ ರಾಷ್ಟ್ರವಾದಿಗಳು ಅವನನ್ನು ರಾಜನಾಗಿ ಮಾಡಲು ಪ್ರಯತ್ನಿಸಿದಾಗ, ಅವನು ಅದನ್ನು ವರ್ಜಿಸಿದನು. (ಯೋಹಾನ 6:15) ನಾವು ನೋಡಿದ ಪ್ರಕಾರ, ಅವನು ಪಿಲಾತನಿಗೆ ಸರಳವಾಗಿ ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ.” ಮತ್ತು ಇದಕ್ಕೆ ಹೊಂದಿಕೆಯಲ್ಲಿ, ತನ್ನ ಹಿಂಬಾಲಕರ ಕುರಿತು ಆತನು ಅಂದದ್ದು: “ನಾನು ಲೋಕದವನ್ನಲ್ಲದೆ ಇರುವ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.” (ಯೋಹಾನ 17:16) ಆದುದರಿಂದ, ಈ ವಿಷಯ ವ್ಯವಸ್ಥೆಯೊಳಗಣ ಸುಧಾರಣೆಯಿಂದಾಗಿ ದೇವರ ರಾಜ್ಯದ ಬರುವಿಕೆಯು ತ್ವರಿತಗೊಳ್ಳುವುದು ಎಂದು ಕಲಿಸುವ ಮತ್ತು ತಮ್ಮ ಹಿಂಡನ್ನು ಆ ಗುರಿಗಾಗಿ ಕಾರ್ಯನಡಿಸುವಂತೆ ಉತ್ತೇಜಿಸುವ ಧಾರ್ಮಿಕ ಮುಖಂಡರು ಸುಳ್ಳು ಪ್ರವಾದಿಗಳು. ಬೈಬಲ್ ನಿಜವಾಗಿ ಏನನ್ನುತ್ತದೋ ಅದರ ಬಲ ಮತ್ತು ಪರಿಣಾಮಕಾರತೆಯನ್ನು ಅವರು ಕದಿಯುತ್ತಿದ್ದಾರೆ.
ಅದು ಮಹತ್ವವುಳ್ಳದೇಕ್ದೆ?
ಇವೆಲ್ಲವು ಕೇವಲ ಒಂದು ಚತುರಬುದ್ಧಿಯ ವಾಗ್ವಾದವೂ? ಅಲ್ಲವೇ ಅಲ್ಲ. ದೇವರ ರಾಜ್ಯದ ಕುರಿತಾದ ತಪ್ಪು ಬೋಧನೆಯು ಅನೇಕರನ್ನು ತಪ್ಪು ದಾರಿಗೆ ನಡಿಸಿದೆ ಮತ್ತು ಇತಿಹಾಸದ ಮಾರ್ಗಕ್ರಮದ ಮೇಲೂ ಪ್ರಭಾವ ಬೀರಿದೆ. ದೃಷ್ಟಾಂತಕ್ಕಾಗಿ, ರೋಮನ್ ಕ್ಯಾಥ್ಲಿಕ್ ಎನ್ಸೈಕ್ಲೊಪೀಡಿಯ ಥಿಯೋ ಎಂಬ ಸಾಹಿತ್ಯವು ಅನ್ನುವುದು: “ದೇವಜನರು ಕ್ರಿಸ್ತನಿಂದ ಭೂಮಿಯಲ್ಲಿ ಉಪಕ್ರಮಿಸಲ್ಪಡುವ ಒಂದು ದೇವರ ರಾಜ್ಯದ ಕಡೆಗೆ ಮುನ್ನಡೆಯುತ್ತಾ ಇದ್ದಾರೆ. . . . ಚರ್ಚು ಈ ರಾಜ್ಯದ ಬೀಜವಾಗಿದೆ.” ಕ್ಯಾಥ್ಲಿಕ್ ಚರ್ಚನ್ನು ದೇವರ ರಾಜ್ಯದೊಂದಿಗೆ ಈ ಗುರುತಿಸುವಿಕೆಯು ಚರ್ಚಿಗೆ ಮೂಢಭಕ್ತಿಯ ಮಧ್ಯಯುಗಗಳಲ್ಲಿ ಅಪಾರವಾದ ಐಹಿಕ ಶಕ್ತಿಯನ್ನು ಕೊಟ್ಟಿತು. ಇಂದು ಸಹಾ ಚರ್ಚ್ ಅಧಿಕಾರಿಗಳು ಕೆಲವು ರಾಜಕೀಯ ವ್ಯವಸ್ಥೆಗಳ ಪರವಾಗಿ, ಮತ್ತು ಇತರರ ವಿರುದ್ಧವಾಗಿ ಕಾರ್ಯನಡಿಸುವ ಮೂಲಕ, ಲೋಕದ ಕಾರ್ಯಾಧಿಗಳ ಮೇಲೆ ಪ್ರಭಾವ ಹಾಕಲು ಪ್ರಯತ್ನಿಸುತ್ತಿವೆ.
ಒಬ್ಬ ವ್ಯಾಖ್ಯಾನಗಾರನು ಇಂದು ಬಹಳವಾಗಿ ಹಬ್ಬಿರುವ ಇನ್ನೊಂದು ನೋಟವನ್ನು ನೀಡುತ್ತಾ ಹೇಳಿದ್ದು: “ಕ್ರಾಂತಿಯ ಮಾರ್ಗವು ದೇವರ ರಾಜ್ಯವೇ ಯಾಕಂದರೆ ಸತ್ಯ ಪುರುಷನಾದ—ಯೇಸು . . . ಗಾಂಧಿ . . . ಮತ್ತು ಬೆರೆಗನ್ರಿಂದ ಕೊಡಲ್ಪಟ್ಟ ಒಂದು ದೈವಿಕ ಸಂಕೇತದಿಂದ ಪ್ರಚೋದಿಸಲ್ಪಟ್ಟ ಜನರು ಒಂದು ಹೊಸ ಮಾನವತ್ವದಲ್ಲಿ ಒಟ್ಟಾಗಿ ಕೂಡಿಬರುವುದೇ ಕ್ರಾಂತಿಯು.” ರಾಜಕೀಯ ಚಟುವಟಿಕೆಗಳಿಂದಾಗಿ ದೇವರ ರಾಜ್ಯವು ಊರ್ಜಿತಕ್ಕೆ ಬರಲಿದೆ ಎಂಬ ಕಲಿಸುವಿಕೆ ಮತ್ತು ರಾಜ್ಯದ ಕುರಿತಾದ ನಿಜ ಸಂಗತಿಗಳನ್ನು ದುರ್ಲಕ್ಷ್ಯ ಮಾಡುವಿಕೆಯು ಧಾರ್ಮಿಕ ಗುರುಗಳನ್ನು ರಾಜಕೀಯ ಸ್ಥಾನಗಳ ಬೆನ್ನಟ್ಟುವಂತೆ ನಡಿಸಿದೆ. ಇತರರನ್ನು ಅದು ಪ್ರಜಾ ಅಶಾಂತಿ ಕಾರ್ಯಗಳಲ್ಲಿ ಒಳಗೂಡುವಂತೆ ಮತ್ತು ಕಿರುಕುಳ ಕಾಳಗ (ಗೆರಿಲ) ನಡಿಸುವಂತೆಯೂ ಮಾಡಿರುತ್ತದೆ. ದೇವರ ರಾಜ್ಯವು ಈ ಲೋಕದ್ದಲ್ಲ ಎಂಬ ಸತ್ಯದೊಂದಿಗೆ ಇದು ಯಾವುದೂ ಹೊಂದಿಕೆಯಲ್ಲಿಲ್ಲ. ಮತ್ತು ರಾಜಕೀಯದಲ್ಲಿ ಅಷ್ಟು ಆಳವಾಗಿ ಒಳಗೂಡುವ ಧಾರ್ಮಿಕ ಮುಖಂಡರು ಲೋಕದ ಭಾಗವಾಗದೇ ಇರುವುದಕ್ಕಿಂತ ಎಷ್ಟೋ ಹಿಂದಿದ್ದಾರೆ, ತನ್ನ ನಿಜ ಶಿಷ್ಯರಾದರೋ ಲೋಕದ ಭಾಗವಾಗಿರುವುದಿಲ್ಲವೆಂದು ಯೇಸು ಹೇಳಿರುವನು. ದೇವರ ರಾಜ್ಯವು ರಾಜಕೀಯ ಚಟುವಟಿಕೆಯಿಂದಾಗಿ ಪ್ರಾಪ್ತಿಸುವುದೆಂದು ಕಲಿಸುವವರು ಸುಳ್ಳು ಪ್ರವಾದಿಗಳು. ಅವರು ಜನರಿಂದ ದೇವರ ವಾಕ್ಯವನ್ನು ಕದಿಯುತ್ತಾ ಇದ್ದಾರೆ.
ಬೈಬಲ್ ಏನನ್ನುತ್ತದೋ ಅದನ್ನು ಧಾರ್ಮಿಕ ಮುಖಂಡರು ನಿಜವಾಗಿ ಕಲಿಸಿದದ್ದಾದರೆ, ದೇವರ ರಾಜ್ಯವು ನಿಜವಾಗಿಯೂ ಬಡತನ, ರೋಗ, ಜಾತೀಯ ಭಿನ್ನತೆ ಮತ್ತು ದಬ್ಬಾಳಿಕೆ ಮುಂತಾದ ಸಮಸ್ಯೆಗಳನ್ನು ಖಂಡಿತವಾಗಿ ಪರಿಹರಿಸುವುದೆಂದು ಅವರ ಮಂದೆಗೆ ತಿಳಿದಿರುತ್ತಿತ್ತು. ಆದರೆ ಅದು ದೇವರ ಕ್ಲುಪ್ತ ಸಮಯದಲ್ಲಿ ಮತ್ತು ದೇವರ ವಿಧಾನಕ್ಕೆ ಅನುಸಾರವಾಗಿ ನಡೆಯುವದು. ರಾಜಕೀಯ ವ್ಯವಸ್ಥೆಗಳ ಸುಧಾರಣೆಗಳ ಮೂಲಕವಾಗಿ ಅದು ಬರಲಾರದು ಯಾಕಂದರೆ ದೇವರ ರಾಜ್ಯವು ಬರುವಾಗ ಈ ರಾಜ್ಯಗಳೆಲ್ಲಾ ಅಂತ್ಯಗೊಳ್ಳುವವು. ಈ ವೈದಿಕರು ನಿಜ ಪ್ರವಾದಿಗಳು ಆಗಿದ್ದರೆ, ದೇವರ ರಾಜ್ಯವು ಕ್ರಿಯೆಗೈಯುವ ತನಕ ಕಾಯುತ್ತಾ ಇರುವ ಅದೇ ಸಮಯದಲ್ಲಿ, ಈ ಲೋಕದ ಭಿನ್ನತೆಗಳು ಉಂಟುಮಾಡುವ ಸಮಸ್ಯೆಗಳನ್ನು ನಿಭಾಯಿಸಲು ನೈಜ, ದೇವ-ದತ್ತ, ವ್ಯಾವಹಾರ್ಯ ಸಹಾಯವನ್ನು ಅವರು ಕಂಡುಕೊಳ್ಳಶಕ್ತರು ಎಂಬದನ್ನು ತಮ್ಮ ಮಂದೆಗೆ ಕಲಿಸುತ್ತಿದ್ದರು.
ಕೊನೆಯದಾಗಿ, ಇಷ್ಟು ಸಂಕಷ್ಟವನ್ನು ಉಂಟುಮಾಡುತ್ತಿರುವ ಭೂಮಿಯ ಕೆಟ್ಟ ಪರಿಸ್ಥಿತಿಗಳು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿವೆ ಮತ್ತು ಅವು ದೇವರ ರಾಜ್ಯದ ಬರುವಿಕೆ ಹತ್ತರವಿದೆ ಎಂಬದಕ್ಕೆ ಒಂದು ಸೂಚನೆ ಎಂಬದಾಗಿ ಕಲಿಸುತ್ತಿದ್ದರು. ಹೌದು, ದೇವರ ರಾಜ್ಯವು ಶೀಘ್ರವಾಗಿಯೇ ಹಸ್ತಕ್ಷೇಪ ಮಾಡಿ, ಸದ್ಯದ ರಾಜಕೀಯ ಪರಿಸ್ಧಿತಿಗಳ ಬುಡಗಟ್ಟುಗಳನ್ನು ಸ್ಥಾನಪಲ್ಲಟಗೊಳಿಸುವುದು. ಅದೆಂಥ ಆಶೀರ್ವಾದವಾಗಿ ಪರಿಣಮಿಸಲಿದೆ!—ಮತ್ತಾಯ 24:21, 22, 36-39; 2 ಪೇತ್ರ 3:7; ಪ್ರಕಟನೆ 19:11-21.
ದೇವರ ರಾಜ್ಯದ ಕೆಳಗೆ ಮಾನವಕುಲ
ದೇವರ ರಾಜ್ಯದ ಬರುವಿಕೆಯು ಮಾನವ ಕುಲಕ್ಕೆ ಯಾವ ಅರ್ಥದಲ್ಲಿರುವುದು? ಒಳ್ಳೇದು, ಪೂರ್ಣ ಸಚೇತನ ಶಕಿಯ್ತಿಂದ ಪ್ರತಿದಿನ ಬೆಳಿಗ್ಗೆ ಏಳುವುದನ್ನು ನೀವು ಊಹಿಸಬಲ್ಲಿರೋ? ನೀವು ತಿಳಿದಿರುವ ಯಾವನೂ ಅಸ್ವಸ್ಥನಿರನು ಅಥವಾ ಸಾಯುತ್ತಿರನು. ಒಂದು ಪುನರುತ್ಥಾನದ ಮೂಲಕ ನಿಮ್ಮ ಪ್ರಿಯ ಮೃತ ಜನರು ಸಹಾ ಹಿಂದಿರುಗಿರುವರು. (ಯೆಶಾಯ 35:5, 6; ಯೋಹಾನ 5:28, 29) ಸ್ವಾರ್ಧಪರ ವ್ಯಾಪಾರ ಮತ್ತು ಅಸಮ ಆರ್ಥಿಕ ವ್ಯವಸ್ಥೆಯಿಂದ ಉಂಟಾಗಿರುವ ಆರ್ಥಿಕ ಚಿಂತೆಗಳು ಇನ್ನು ಮುಂದೆ ಇಲ್ಲ. ನಿಮಗೆ ನಿಮ್ಮ ಸ್ವಂತ ಆರಾಮವಾದ ಮನೆಯಿದೆ ಮತ್ತು ನಿಮ್ಮ ಕುಟುಂಬವನ್ನು ಉಣಿಸಲು ಬೇಕಾದಷ್ಟು ಬೆಳೆಯನ್ನು ಬೆಳೆಸಲು ವಿಪುಲವಾದ ಜಮೀನು ಇದೆ. (ಯೆಶಾಯ 65:21-23) ದಿನದ ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ಆಕ್ರಮಣದ ಯಾವ ಭಯವೂ ಇಲ್ಲದೆ ನೀವು ಎಲ್ಲಿಯೂ ಅಡಾಡ್ಡ ಬಲ್ಲಿರಿ. ಇನ್ನು ಮುಂದೆ ಯುದ್ಧಗಳಿಲ್ಲ—ನಿಮ್ಮ ಭದ್ರತೆಯನ್ನು ಯಾವುದೂ ಬೆದರಿಸಲಾರದು. ಪ್ರತಿಯೊಬ್ಬರು ನಿಮ್ಮ ಹಿತಚಿಂತಕರೇ ಆಗಿರುವರು. ದುಷ್ಟರು ನಾಶವಾಗಿರುವರು. ಪ್ರೀತಿ ಮತ್ತು ನೀತಿಯು ಆಳುವುದು. ಅಂಥ ಒಂದು ಸಮಯವನ್ನು ನೀವು ಊಹಿಸಬಲ್ಲಿರೋ? ದೇವರ ರಾಜ್ಯವು ಈ ರೀತಿಯ ಲೋಕವನ್ನೇ ಬರಮಾಡಲಿದೆ.—ಕೀರ್ತನೆ 37:10, 11; 85:10-13; ಮೀಕ 4:3, 4.
ಇದು ಕೇವಲ ಒಂದು ಹಗಲುಗನಸೋ? ಅಲ್ಲ. ಹಿಂದಿನ ಪ್ಯಾರಗ್ರಾಫಿನಲ್ಲಿ ತಿಳಿಸಲಾದ ಶಾಸ್ತ್ರವಚನಗಳನ್ನು ಓದಿನೋಡಿರಿ, ಮತ್ತು ಅಲ್ಲಿ ತಿಳಿಸಿರುವುದೆಲ್ಲವೂ ದೇವರ ನಿಶ್ಚಿತ ವಾಗ್ದಾನಗಳನ್ನು ಪ್ರತಿಬಿಂಬಿಸುತ್ತವೆ ಎಂಬದನ್ನು ನೀವು ಕಂಡುಕೊಳ್ಳುವಿರಿ. ದೇವರ ರಾಜ್ಯವು ಮಾನವ ಕುಲಕ್ಕೆ ಏನನ್ನು ಮಾಡಬಲ್ಲದು ಮತ್ತು ಮಾಡಲಿದೆ ಎಂಬ ಈ ನೈಜ ಚಿತ್ರವು ನಿಮಗೆ ಈ ತನಕವೂ ಕೊಡಲ್ಪಟ್ಟಿಲ್ಲವಾದರೆ, ಆಗ ಯಾರಾದರೂ ನಿಮ್ಮಿಂದ ದೇವರ ವಾಕ್ಯಗಳನ್ನು ಕದ್ದಿರಬೇಕು.
ಸಂತೋಷಕರವಾಗಿ, ವಿಷಯಗಳು ಆ ರೀತಿ ಉಳಿಯಬೇಕೆಂಬ ಅಗತ್ಯವಿಲ್ಲ. ಯೇಸು ಹೇಳಿದ್ದೇನಂದರೆ ನಮ್ಮ ದಿನಗಳಲ್ಲಿ “ದೇವರ ರಾಜ್ಯದ ಸುವಾರ್ತೆಯು ಎಲ್ಲಾ ನಿವಾಸಿತ ಭೂಮಿಯಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು.” (ಮತ್ತಾಯ 24:14) ನೀವು ಓದುತ್ತಿರುವ ಈ ಪತ್ರಿಕೆಯು ಆ ಸಾರುವ ಕಾರ್ಯದ ಅಂಶವಾಗಿದೆ. ಸುಳ್ಳು ಪ್ರವಾದಿಗಳಿಂದ ಮೋಸ ಹೋಗುವುದರಿಂದ ದೂರವಿರುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ದೇವರ ರಾಜ್ಯದ ಕುರಿತಾದ ಸತ್ಯವನ್ನು ಕಂಡುಕೊಳ್ಳಲು ದೇವರ ವಾಕ್ಯವನ್ನು ಆಳವಾಗಿ ಆನ್ವೇಷಿಸಿರಿ. ಅನಂತರ, ಮಹಾ ಕುರುಬನಾದ ಯೆಹೋವ ದೇವರ ಒದಗಿಸುವಿಕೆಯಾದ ಆ ರಾಜ್ಯಕ್ಕೆ ನಿಮ್ಮನ್ನು ಅಧೀನ ಪಡಿಸಿರಿ. ವಾಸ್ತವದಲ್ಲಿ, ಅದು ಮನುಷ್ಯನ ಏಕಮಾತ್ರ ನಿರೀಕ್ಷೆಯು, ಅದು ಎಂದೂ ಕೈಬಿಡಲಾರದು. (w92 2/1)
[ಪುಟ 5 ರಲ್ಲಿರುವ ಚಿತ್ರ]
ಮಾನವ ಸರಕಾರವನ್ನು ದೇವರ ರಾಜ್ಯವೆಂದೆಣಿಸಬಹುದೆಂದು ಲುಥರನು ಕಲಿಸಿದನು
[ಕೃಪೆ]
Courtesy of the Trustees of the British Museum
[ಪುಟ 7 ರಲ್ಲಿರುವ ಚಿತ್ರ]
ಪ್ರೀತಿಯ ಕುರುಬನೋಪಾದಿ, ಯಾವ ಮನುಷ್ಯನೂ ತರಶಕ್ತನಾಗಿರದ ಪರಿಸ್ಥಿತಿಯನ್ನು ಯೆಹೋವನು ಅವನ ರಾಜ್ಯದ ಮೂಲಕ ತರುವನು