ಯುವ ಜನರು ಪ್ರಶ್ನಿಸುವುದು
ಬೈಬಲ್ ಓದುವುದರಲ್ಲಿ ಹೇಗೆ ಆನಂದಿಸಲಿ?
ಬೈಬಲನ್ನು ನೀವು ಎಷ್ಟು ಬಾರಿ ಓದುತ್ತೀರಿ? (ಒಂದನ್ನು ಟಿಕ್ ಮಾಡಿ)
❑ ದಿನಾಲೂ
❑ ವಾರಕ್ಕೊಮ್ಮೆ
❑ ಇತರೆ ....
ಕೆಳಗಿನ ವಾಕ್ಯವನ್ನು ಪೂರ್ತಿಗೊಳಿಸಿ
ಬೈಬಲ್ ಓದಲು ನನಗೆ ಸಾಮಾನ್ಯವಾಗಿ ಇಷ್ಟವಿಲ್ಲ ಏಕೆಂದರೆ . . . (ಅನ್ವಯವಾಗುವ ವಿಷಯಕ್ಕೆ ಟಿಕ್ ಮಾಡಿ)
❑ ‘ಬೋರ್’ ಆಗುತ್ತದೆ
❑ ಅರ್ಥವಾಗುವುದಿಲ್ಲ
❑ ಮನಸ್ಸು ಬೇರೆ ಕಡೆ ಹೋಗುತ್ತದೆ
❑ ಇತರೆ .....
ಬೈಬಲ್ ಓದಲು ನಿಮ್ಮಲ್ಲಿ ಹುಮ್ಮಸ್ಸು ಇಲ್ಲವೋ? ಹಾಗಾದರೆ 18 ವರ್ಷದ ವಿಲ್ ಎಂಬ ಹುಡುಗ ಹೇಳುವುದನ್ನು ಕೇಳಿ. “ಬೈಬಲ್ ಓದೋದು ‘ಬೋರಿಂಗ್’ ಆಗಿರಬಲ್ಲದು. ಯಾವಾಗ ಅಂದರೆ ಅದನ್ನು ಹೇಗೆ ಓದುವುದು ಎಂದು ನಿಮಗೆ ತಿಳಿಯದಾಗಲೇ.”
ಬೈಬಲನ್ನು ಓದುವುದು ಹೇಗೆಂದು ಏಕೆ ತಿಳಿಯಬೇಕು? ಏಕೆಂದರೆ ಈ ಕೆಳಗಿನ ವಿಷಯಗಳ ಕುರಿತು ನೀವು ಹೆಚ್ಚನ್ನು ತಿಳಿಯುವುದಕ್ಕಾಗಿಯೇ.
◼ ಸರಿಯಾದ ನಿರ್ಣಯಗಳನ್ನು ಮಾಡುವ ಕುರಿತು
◼ ನಿಜ ಮಿತ್ರರನ್ನು ಕಂಡುಕೊಳ್ಳುವ ಕುರಿತು
◼ ಒತ್ತಡವನ್ನು ನಿಭಾಯಿಸುವ ಕುರಿತು
ಬೈಬಲಿನಲ್ಲಿ ಮೇಲಿನ ವಿಷಯಗಳೂ ಮತ್ತು ಇತರ ಅನೇಕ ವಿಷಯಗಳ ಕುರಿತ ವಿವೇಕಯುತ ನುಡಿಮುತ್ತುಗಳೂ ಇವೆ. ಈ ಮುತ್ತುಗಳನ್ನು ಕಂಡುಕೊಳ್ಳಲು ಪ್ರಯತ್ನ ಬೇಕೆಂಬುದು ನಿಜ. ಅಂಥ ಪ್ರಯತ್ನ ಮಾಡುವುದು ನಿಕ್ಷೇಪವನ್ನು ಹುಡುಕುವುದಕ್ಕೆ ಸಮಾನ. ಈ ಹುಡುಕಾಟವು ಕಷ್ಟಕರವಾದಷ್ಟೇ ರೋಮಾಂಚಕವೂ ಹೌದು!—ಜ್ಞಾನೋಕ್ತಿ 2:1-6.
ಬೈಬಲಿನಲ್ಲಿ ನಿಕ್ಷೇಪವನ್ನು ನೀವು ಕಂಡುಕೊಳ್ಳುವುದು ಹೇಗೆ? ಬಲಬದಿಯಲ್ಲಿ ‘ಕತ್ತರಿಸಿ ತೆಗೆಯುವ ಚೌಕ’ ಒಂದಿದೆ. ಅದು, ಬೈಬಲನ್ನು ಹೇಗೆ ಓದುವುದೆಂದೂ ಮತ್ತು ಮುಂದಿನ ಪುಟವು ಅದನ್ನು ಯಾವ ಕ್ರಮದಲ್ಲಿ ಓದಬೇಕೆಂದೂ ನಿಮಗೆ ತಿಳಿಸುತ್ತದೆ. ಅಲ್ಲದೆ, ಇತರ ಪುಟಗಳಲ್ಲಿರುವ ಇನ್ನಿತರ ಸಲಹೆಗಳಲ್ಲಿ ನಿಮಗೆ ಇಷ್ಟವಾದದ್ದನ್ನು ಅನ್ವಯಿಸಿ ನೋಡಿ.
ಇಂಟರ್ನೆಟ್ ಸೌಲಭ್ಯ ನಿಮಗಿರುವುದಾದರೆ ಬೈಬಲನ್ನು ನೀವು www.watchtower.org/e/bible ಆನ್ಲೈನ್ನಲ್ಲಿ ಓದಬಹುದು.
“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್ಸೈಟ್ನಲ್ಲಿ ಕಂಡುಕೊಳ್ಳಬಹುದು
ಯೋಚಿಸಿ
ಪರಿಶ್ರಮಪಟ್ಟಷ್ಟೇ ಪ್ರತಿಫಲ ದೊರೆಯುತ್ತದೆ ಎಂದು ಹೇಳುವುದುಂಟು.
◼ ಬೈಬಲ್ ವಾಚನದ ಸಂಬಂಧದಲ್ಲಿ ಅದು ಹೇಗೆ ಸತ್ಯ?
◼ ವೈಯಕ್ತಿಕ ಬೈಬಲ್ ವಾಚನಕ್ಕಾಗಿ ಯಾವಾಗ ಸಮಯ ಬದಿಗಿಡುತ್ತೀರಿ?
[ಪುಟ 13ರಲ್ಲಿರುವ ಚೌಕ/ಚಿತ್ರ]
ಬೈಬಲನ್ನು ಓದುವುದು ಹೇಗೆ?
ಓದುವ ಮುಂಚೆ . . .
◼ ಏಕಾಗ್ರತೆಯಿಂದ ಓದಲು ನಿಮ್ಮ ಸುತ್ತಮುತ್ತ ನಿಶಬ್ದವಾಗಿರುವಂತೆ ನೋಡಿ.
◼ ತಿಳಿವಳಿಕೆಗಾಗಿ ಪ್ರಾರ್ಥಿಸಿರಿ.
ಓದುತ್ತಿರುವಾಗ. . .
◼ ಬೈಬಲ್ ದೃಶ್ಯಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಬೈಬಲ್ ವೃತ್ತಾಂತಗಳ ನಕ್ಷೆಗಳನ್ನು ಮತ್ತು ಚಿತ್ರಗಳನ್ನು ಉಪಯೋಗಿಸಿ.
◼ ಸನ್ನಿವೇಶವನ್ನು ಮನಸ್ಸಿನಲ್ಲಿಟ್ಟು ವಿವರಗಳನ್ನು ಪರಿಗಣಿಸಿ.
◼ ಪಾದಟಿಪ್ಪಣಿ ಮತ್ತು ಕ್ರಾಸ್ ರೆಫರೆನ್ಸನ್ನು ಓದಿರಿ.
◼ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಿ:
ನಿಜತ್ವ: ಇದು ಯಾವಾಗ ಸಂಭವಿಸಿತು? ಈ ಮಾತುಗಳನ್ನು ಹೇಳಿದವರು ಯಾರು? ಯಾರಿಗೆ ಹೇಳಿದರು?
ಅರ್ಥ: ನಾನಿದನ್ನು ಬೇರೆಯವರಿಗೆ ಹೇಗೆ ವಿವರಿಸುವೆ?
ಮಹತ್ವ: ಯೆಹೋವ ದೇವರು ತನ್ನ ವಾಕ್ಯದಲ್ಲಿ ಈ ವೃತ್ತಾಂತವನ್ನು ಸೇರಿಸಿದ್ದು ಏಕೆ? ಅದು ಆತನ ವ್ಯಕ್ತಿತ್ವದ ಕುರಿತು ಅಥವಾ ಆತನು ಕಾರ್ಯವೆಸಗುವ ರೀತಿಯ ಕುರಿತು ಏನನ್ನು ತಿಳಿಯಪಡಿಸುತ್ತದೆ? ನಾನು ನನ್ನ ಜೀವನದಲ್ಲಿ ಯಾವ ಪಾಠಗಳನ್ನು ಅನ್ವಯಿಸಬಲ್ಲೆ?
ಓದಿದ ಬಳಿಕ . . .
◼ ಇನ್ನೂ ಹೆಚ್ಚು ರಿಸರ್ಚ್ ಮಾಡಿ. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ ಮುಂತಾದ ಸಾಹಿತ್ಯಗಳನ್ನು ಉಪಯೋಗಿಸಿ.
◼ ಪುನಃ ಪ್ರಾರ್ಥನೆ ಮಾಡಿ. ನೀವೇನು ಕಲಿತಿರಿ ಮತ್ತು ಅದನ್ನು ಹೇಗೆ ಉಪಯೋಗಿಸ ಬಯಸುತ್ತೀರಿ ಎಂದು ಯೆಹೋವನಿಗೆ ತಿಳಿಸಿರಿ. ಆತನ ವಾಕ್ಯವಾದ ಬೈಬಲಿಗಾಗಿ ಕೃತಜ್ಞತೆ ಹೇಳಿ.
[ಪುಟ 14ರಲ್ಲಿರುವ ಚೌಕ/ಚಿತ್ರ]
ಬೈಬಲನ್ನು ಯಾವ ಕ್ರಮದಲ್ಲಿ ಓದುವಿರಿ?
ಆಯ್ಕೆಗಳು . . .
❑ ಆರಂಭದಿಂದಲೇ ಶುರುಮಾಡಿ.
❑ ಕಾಲಾನುಕ್ರಮಕ್ಕೆ ಅನುಗುಣವಾಗಿ ಓದಿರಿ. ಅಂದರೆ ಒಂದೋ ಪುಸ್ತಕಗಳು ಬರೆಯಲ್ಪಟ್ಟ ಸಮಯಕ್ಕೆ ಅನುಗುಣವಾಗಿ ಇಲ್ಲವೆ ಆ ಘಟನೆಗಳು ಸಂಭವಿಸಿದ ಕ್ರಮಾನುಸಾರವಾಗಿ.
❑ ಪ್ರತಿದಿನ ಬೈಬಲಿನ ಬೇರೆ ಬೇರೆ ಭಾಗಗಳನ್ನು ಓದಿ. ಉದಾಹರಣೆಗೆ:
ಸೋಮವಾರ: ಕೌತುಕಭರಿತ ಇತಿಹಾಸ (ಆದಿಕಾಂಡ - ಎಸ್ತೇರಳು)
ಮಂಗಳವಾರ: ಯೇಸುವಿನ ಜೀವನ ಮತ್ತು ಬೋಧನೆಗಳು (ಮತ್ತಾಯ - ಯೋಹಾನ)
ಬುಧವಾರ: ಕ್ರೈಸ್ತತ್ವದ ಆರಂಭದ ದಿನಗಳು (ಅಪೊಸ್ತಲರ ಕಾರ್ಯಗಳು)
ಗುರುವಾರ: ಪ್ರವಾದನೆಗಳು ಮತ್ತು ನೈತಿಕ ಮಾರ್ಗದರ್ಶನ (ಯೆಶಾಯ – ಮಲಾಕಿಯ, ಪ್ರಕಟನೆ)
ಶುಕ್ರವಾರ: ಮನಸ್ಪರ್ಶಿ ಕಾವ್ಯಗಳು ಮತ್ತು ಗೀತೆಗಳು (ಯೋಬ, ಕೀರ್ತನೆ, ಪರಮ ಗೀತ)
ಶನಿವಾರ: ದಿನನಿತ್ಯ ಜೀವನಕ್ಕೆ ವಿವೇಕದ ನುಡಿಮುತ್ತುಗಳು (ಜ್ಞಾನೋಕ್ತಿ, ಪ್ರಸಂಗಿ)
ಭಾನುವಾರ: ಸಭೆಗಳಿಗೆ ಬರೆದ ಪತ್ರಗಳು (ರೋಮನ್ನರಿಗೆ - ಯೂದ)
ನೀವು ಯಾವುದೇ ಕ್ರಮವನ್ನು ಅನುಸರಿಸಬಹುದು. ಆದರೆ ವಾಚನವನ್ನು ಎಲ್ಲಿ ನಿಲ್ಲಿಸಿದ್ದಿರೆಂದು ಮಾತ್ರ ಗುರುತಿಡಿರಿ! ಪ್ರತಿ ಅಧ್ಯಾಯವನ್ನು ಓದಿ ಮುಗಿಸಿದ ನಂತರ ಅದಕ್ಕೆ ✔ ಹಾಕಿರಿ ಅಥವಾ ಬೇರೆ ರೀತಿಯಲ್ಲಿ ಗುರುತು ಮಾಡಿರಿ.
ಇದನ್ನು ಕತ್ತರಿಸಿ ನಿಮ್ಮ ಬೈಬಲಿನಲ್ಲಿ ಇಟ್ಟುಕೊಳ್ಳಿರಿ.
[ಪುಟ 14ರಲ್ಲಿರುವ ಚೌಕ/ರೇಖಾಕೃತಿ]
ಶಾಸ್ತ್ರವಚನಗಳಿಗೆ ಜೀವಕಳೆ ತುಂಬಿರಿ!
ನೀವೇನು ಓದುತ್ತೀರೋ ಅದನ್ನು ನಿಮಗೆ ಆಸಕ್ತಿಯುಳ್ಳದ್ದಾಗಿ ಮಾಡಿ. ಉದಾಹರಣೆಗಾಗಿ:
❑ ಹೆಸರುಗಳನ್ನು ಆಯಾ ವಂಶಾನುಸಾರ ಪಟ್ಟಿ ಮಾಡಿ.
❑ ನಕ್ಷೆಯ ಮೂಲಕ ನಿರೂಪಿಸಿ. ಉದಾಹರಣೆಗೆ ಒಬ್ಬ ನಂಬಿಗಸ್ತ ವ್ಯಕ್ತಿಯ ಕುರಿತು ನೀವು ಓದುವಾಗ ಆ ವ್ಯಕ್ತಿಯ ಗುಣ ಮತ್ತು ನಡತೆಗೆ ಹೇಗೆ ಆಶೀರ್ವಾದಗಳು ದೊರೆತವು ಎಂಬದನ್ನು ಗಮನಿಸಿ.—ಜ್ಞಾನೋಕ್ತಿ 28:20.
[ರೇಖಾಕೃತಿ]
ದೇವರ ಸ್ನೇಹಿತ
↑ ವಿಧೇಯ
↑ ನಂಬಿಗಸ್ತ
↑ ↑
ಅಬ್ರಹಾಮ
❑ ಆ ವೃತ್ತಾಂತವನ್ನು ದೃಷ್ಟಾಂತಿಸಲು ಚಿತ್ರಗಳನ್ನು ಬಿಡಿಸಿ.
❑ ಘಟನೆಗಳ ಕ್ರಮಾನುಗತಿಯನ್ನು ಸರಳ ಚಿತ್ರಗಳನ್ನು ಬಿಡಿಸಿ ತೋರಿಸಿ. ಪ್ರತಿಯೊಂದು ದೃಶ್ಯದಲ್ಲಿ ಏನು ಸಂಭವಿಸುತ್ತಿದೆಯೆಂದು ವಿವರಿಸಿ.
❑ ನೋಹನ ನಾವೆಯೇ ಮುಂತಾದವುಗಳ ಮಾದರಿ ಆಕೃತಿಯನ್ನು ಮಾಡಿರಿ. ಉದಾಹರಣೆಗೆ 2007ರ ಜನವರಿ ತಿಂಗಳ ಎಚ್ಚರ! (ಇಂಗ್ಲಿಷ್) ಪುಟ 22 ನೋಡಿ.
❑ ನಿಮ್ಮ ಸ್ನೇಹಿತರು ಅಥವಾ ಮನೆಮಂದಿಯೊಂದಿಗೆ ಗಟ್ಟಿಯಾಗಿ ಓದಿ. ನಿರೂಪಣೆಯನ್ನು ಓದಲು ಒಬ್ಬನಿಗೆ ವಹಿಸಿ. ಬೇರೆ ಪಾತ್ರಗಳನ್ನು ಇತರರು ಒಬ್ಬೊಬ್ಬರಾಗಿ ಓದಬಹುದು.
❑ ಒಂದು ವೃತ್ತಾಂತವನ್ನು ಆರಿಸಿಕೊಳ್ಳಿ. ಅದನ್ನು ವಾರ್ತಾ ವರದಿಯಾಗಿ ಮಾಡಿರಿ. ಮುಖ್ಯ ಪಾತ್ರಧಾರಿಗಳ ಮತ್ತು ಪ್ರತ್ಯಕ್ಷಸಾಕ್ಷಿಗಳ “ಸಂದರ್ಶನ” ಮಾಡುವ ಮೂಲಕ ವಿವಿಧ ದೃಷ್ಟಿಕೋನಗಳಿಂದ ಆ ಘಟನೆಯನ್ನು ವರದಿಸಿರಿ.
❑ ಅವಿವೇಕದ ನಿರ್ಣಯವನ್ನು ಮಾಡಿದ ಒಬ್ಬ ವ್ಯಕ್ತಿಯ ವೃತ್ತಾಂತವನ್ನು ತೆಗೆದುಕೊಳ್ಳಿ. ಆ ವೃತ್ತಾಂತವು ಬೇರೆ ರೀತಿಯಲ್ಲಿ ಮುಕ್ತಾಯಗೊಂಡಲ್ಲಿ ಹೇಗಿರುವುದು ಎಂದು ಕಲ್ಪಿಸಿಕೊಳ್ಳಿ! ಉದಾಹರಣೆಗೆ ಪೇತ್ರನು ಯೇಸುವನ್ನು ಅಲ್ಲಗಳೆದ ವಿಷಯವನ್ನು ಪರಿಗಣಿಸಿ. (ಮಾರ್ಕ 14:66-72) ಆ ಸನ್ನಿವೇಶದಲ್ಲಿ ಬಂದ ಒತ್ತಡಕ್ಕೆ ಪೇತ್ರನು ಉತ್ತಮವಾಗಿ ಪ್ರತಿಕ್ರಿಯಿಸಿದ್ದಲ್ಲಿ ಹೇಗಿದ್ದಿರಬಹುದಿತ್ತು ಎಂದು ಕಲ್ಪಿಸಿಕೊಳ್ಳಿ.
❑ ಬೈಬಲ್ ಡ್ರಾಮಗಳ ವಿಡಿಯೋ ನೋಡಿರಿ ಅಥವಾ ರೆಕಾರ್ಡಿಂಗ್ಸ್ಗೆ ಕಿವಿಗೊಡಿ.
❑ ನೀವೇ ಒಂದು ಸ್ವಂತ ಡ್ರಾಮ ಬರೆಯಿರಿ. ಆ ವೃತ್ತಾಂತದಿಂದ ಕಲಿಯಬಲ್ಲ ಪಾಠಗಳನ್ನೂ ಅದರಲ್ಲಿ ಸೇರಿಸಿ.—ರೋಮನ್ನರಿಗೆ 15:4.
ಸಲಹೆ: ಆ ಡ್ರಾಮವನ್ನು ನಿಮ್ಮ ಕೆಲವು ಸ್ನೇಹಿತರೊಂದಿಗೆ ಅಭಿನಯಿಸಬಹುದು.
[ಪುಟ 15ರಲ್ಲಿರುವ ಚೌಕ/ಚಿತ್ರ]
ಸ್ಫೂರ್ತಿ ಪಡೆಯಲು. . .
◼ ಗುರಿಯನ್ನಿಡಿರಿ! ಬೈಬಲ್ ಓದುವಿಕೆಯನ್ನು ಯಾವ ತಾರೀಕಿನಿಂದ ನೀವು ಪ್ರಾರಂಭಿಸುವಿರೆಂದು ಕೆಳಗೆ ಬರೆಯಿರಿ.
.....
◼ ನಿಮಗೆ ಆಸಕ್ತಿಕರವಾದ ಒಂದು ಬೈಬಲ್ ಭಾಗವನ್ನು ಆರಿಸಿಕೊಳ್ಳಿ. (“ಬೈಬಲನ್ನು ಯಾವ ಕ್ರಮದಲ್ಲಿ ಓದುವಿರಿ?” ಚೌಕ ನೋಡಿ.) ಅನಂತರ ನೀವು ಮೊದಲಾಗಿ ಓದಬಯಸುವ ಭಾಗವನ್ನು ಕೆಳಗೆ ಬರೆಯಿರಿ.
.....
◼ ಮೊದಮೊದಲು ಓದಲು ಸ್ವಲ್ಪವೇ ಸಮಯ ಕೊಡಿ. 15 ನಿಮಿಷ ಕೊಟ್ಟರೂ ಸಾಕು. ನೀವೆಷ್ಟು ಸಮಯವನ್ನು ಬದಿಗಿರಿಸಬಲ್ಲಿರೆಂದು ಕೆಳಗೆ ನಮೂದಿಸಿ.
.....
ಸೂಚನೆ: ಅಧ್ಯಯನಕ್ಕೆಂದೇ ಒಂದು ಬೈಬಲ್ ಇರಲಿ. ಅದರಲ್ಲಿ ಟಿಪ್ಪಣಿ ಬರೆಯಿರಿ. ನಿಮಗೆ ಹೆಚ್ಚು ಉಪಯುಕ್ತವೆಂದು ಕಾಣುವ ವಚನಗಳನ್ನು ಗುರುತಿಸಿ.
[ಪುಟ 15ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮವಯಸ್ಕರು ಹೇಳುವುದು. . .
“ನಾನು ಪ್ರತಿರಾತ್ರಿ ಮಲಗುವ ಮುಂಚೆ ಬೈಬ ಲನ್ನು ಸ್ವಲ್ಪವಾದರೂ ಓದಲು ಪ್ರಯತ್ನಿಸುತ್ತೇನೆ. ಇದು ನನಗೆ ಒಳ್ಳೊಳ್ಳೇ ವಿಷಯಗಳ ಕುರಿತು ನೆನಸುತ್ತಾ ನಿದ್ದೆಹೋಗುವಂತೆ ಮಾಡುತ್ತದೆ.”—ಮೇಗನ್.
“ನಾನು ಒಂದು ವಚನದ ಮೇಲೆ 15 ನಿಮಿಷ ಮನಸ್ಸು ಕೇಂದ್ರೀಕರಿಸುತ್ತೇನೆ. ಪ್ರತಿಯೊಂದು ಪಾದಟಿಪ್ಪಣಿ ಓದುತ್ತೇನೆ, ಕ್ರಾಸ್ ರೆಫರೆನ್ಸ್ ನೋಡುತ್ತೇನೆ. ಹೆಚ್ಚಿನ ರಿಸರ್ಚ್ ಮಾಡುತ್ತೇನೆ. ಕೆಲವೊಮ್ಮೆ ಅಧ್ಯಯನದ ಇಡೀ ಸಮಯದಲ್ಲಿ ಒಂದು ವಚನದ ಅಭ್ಯಾಸ ಸಹ ಮುಗಿಯುವುದಿಲ್ಲ. ಆದರೆ ಈ ವಿಧಾನದ ಓದುವಿಕೆಯಿಂದ ನನಗೆ ದೊರೆಯುವ ಪ್ರಯೋಜನವಾದರೋ ಮಹತ್ತರ.”—ಕಾರೀ.
“ಒಮ್ಮೆ ನಾನು ಹತ್ತು ತಿಂಗಳಲ್ಲಿ ಬೈಬಲನ್ನು ಓದಿ ಮುಗಿಸಿದೆ. ಆ ವೇಗದಲ್ಲಿ ಓದಿದ ಕಾರಣ ಬೈಬಲಿನ ವಿವಿಧ ಭಾಗಗಳ ನಡುವಣ ಸಂಬಂಧವು ನನಗೆ ತಿಳಿದುಬಂತು. ಹಿಂದೆಂದೂ ನಾನದನ್ನು ಗಮನಿಸಿರಲಿಲ್ಲ.”—ಜಾನ್.
[ಪುಟ 15ರಲ್ಲಿರುವ ಚೌಕ]
ಆಯ್ಕೆಗೆ ಅವಕಾಶವಿದೆ!
❑ ಹೆಕ್ಕಿ ತೆಗೆಯಿರಿ. ಬೈಬಲ್ ನಿಜ ಜೀವನ ಕಥೆಗಳಿಂದ ತುಂಬಿದೆ. ನಿಮಗೆ ಆಸಕ್ತಿಕರವಾದ ವೃತ್ತಾಂತವೊಂದನ್ನು ಹೆಕ್ಕಿ ತೆಗೆದು ಅದನ್ನು ಆದ್ಯಂತವಾಗಿ ಓದಿರಿ.
❑ ಸುವಾರ್ತೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ. (ಬರೆಯಲ್ಪಟ್ಟ ಮೊದಲನೆಯ ಸುವಾರ್ತೆ) ಮತ್ತಾಯ, (ಅನೇಕ ರೋಮಾಂಚಕ ಘಟನೆಗಳಿಗೆ ಪ್ರಖ್ಯಾತವಾದ) ಮಾರ್ಕ, (ಪ್ರಾರ್ಥನೆ ಮತ್ತು ಮಹಿಳೆಯರಿಗೆ ವಿಶೇಷ ಒತ್ತು ನೀಡುವ) ಲೂಕ, (ಇತರ ಸುವಾರ್ತಾ ಪುಸ್ತಕಗಳಲ್ಲಿರದ ಎಷ್ಟೋ ವಿಷಯಗಳಿರುವ) ಯೋಹಾನ ಓದಿ.
ಸೂಚನೆ: ಯಾವುದೇ ಸುವಾರ್ತಾ ಪುಸ್ತಕವನ್ನು ಓದುವ ಮುಂಚೆ ಅದರಲ್ಲಿರುವ ಮಾಹಿತಿ ಮತ್ತು ಬರಹಗಾರನ ಕುರಿತು ಸಂಕ್ಷಿಪ್ತವಾಗಿ ಪರಿಗಣಿಸಿ. ಹೀಗೆ ಮಾಡುವುದರಿಂದ ಅದು ಇತರ ಸುವಾರ್ತಾ ಪುಸ್ತಕಕ್ಕಿಂತ ಹೇಗೆ ಭಿನ್ನವಾಗಿದೆಯೆಂದು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ.
❑ ಕೀರ್ತನೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ. ಉದಾಹರಣೆಗಾಗಿ,
ಒಂಟಿಗರು, ಸ್ನೇಹಿತರಿಲ್ಲ ಎಂದು ನಿಮಗೆ ಅನಿಸುವಲ್ಲಿ ಕೀರ್ತನೆ 142 ಓದಿ.
ನಿಮ್ಮ ಬಲಹೀನತೆಗಳ ಕುರಿತು ನೀವು ಮನಗುಂದಿ ಹೋದಲ್ಲಿ ಕೀರ್ತನೆ 51 ಓದಿ.
ದೇವರ ಮಟ್ಟಗಳ ಮೌಲ್ಯದ ಕುರಿತು ನೀವು ಸಂದೇಹಿಸುವುದಾದರೆ ಕೀರ್ತನೆ 73 ಓದಿ.
ಸೂಚನೆ: ನೀವು ಓದಿರುವ ಕೀರ್ತನೆಗಳಲ್ಲಿ ನಿಮಗೆ ವಿಶೇಷ ಉತ್ತೇಜನವನ್ನು ಕೊಟ್ಟ ಕೀರ್ತನೆಗಳ ಪಟ್ಟಿಮಾಡಿ.
[ಪುಟ 16ರಲ್ಲಿರುವ ಚೌಕ]
ಆಳವಾಗಿ ಪರಿಶೀಲಿಸಿ
◼ ಸನ್ನಿವೇಶವನ್ನು ಮನಸ್ಸಿಗೆ ತಂದುಕೊಳ್ಳಿ. ಒಂದು ವಾಕ್ಯದಲ್ಲಿ ಒಳಗೊಂಡಿರುವ ಸ್ಥಳ, ಸಮಯ, ಸನ್ನಿವೇಶಗಳನ್ನು ಪರೀಕ್ಷಿಸಿ.
ಉದಾಹರಣೆ: ಯೆಹೆಜ್ಕೇಲ 14:14 ಓದಿ. ನೋಹ ಮತ್ತು ಯೋಬನೊಂದಿಗೆ ದಾನಿಯೇಲನನ್ನು ಯೆಹೋವನು ಒಂದು ಮಾದರಿಯಾಗಿ ತಿಳಿಸಿದಾಗ ದಾನಿಯೇಲನಿಗೆ ಸುಮಾರು ಎಷ್ಟು ಪ್ರಾಯ?
ಸುಳಿವು: ಯೆಹೆಜ್ಕೇಲ 14ನೇ ಅಧ್ಯಾಯವು ದಾಖಲೆಯಾದದ್ದು ದಾನಿಯೇಲನು ಬಾಬೆಲಿನಲ್ಲಿ ಬಂಧಿವಾಸಿಯಾದ ಕೇವಲ 5 ವರ್ಷಗಳಲ್ಲೇ. ಆಗ ಅವನು ಹದಿವಯಸ್ಸಿನವನು ಆಗಿದ್ದಿರಬಹುದು.
ಅಡಗಿರುವ ಮುತ್ತು: ದಾನಿಯೇಲನ ನಂಬಿಗಸ್ತಿಕೆಯನ್ನು ಯೆಹೋವನು ಗಮನಿಸಿದಾಗ ಅವನು ತೀರ ಚಿಕ್ಕವನಾಗಿದ್ದನೋ? ಅವನು ಮಾಡಿದ ಯಾವ ಸರಿಯಾದ ನಿರ್ಣಯಗಳು ಆಶೀರ್ವಾದಗಳನ್ನು ತಂದವು? (ದಾನಿಯೇಲ 1:8-17) ದಾನಿಯೇಲನ ಮಾದರಿಯು ಸರಿಯಾದ ನಿರ್ಣಯಗಳನ್ನು ಮಾಡಲು ನಿಮಗೆ ಹೇಗೆ ಸಹಾಯಕಾರಿ?
◼ ವಿವರಗಳನ್ನು ವಿಶ್ಲೇಷಿಸಿ. ಕೆಲವೊಮ್ಮೆ ಪ್ರಾಮುಖ್ಯವಾಗಿರುವುದು ಕೇವಲ ಒಂದೆರಡು ಪದಗಳೇ.
ಉದಾಹರಣೆ: ಮತ್ತಾಯ 28:7ನ್ನು ಮಾರ್ಕ 16:7ರೊಂದಿಗೆ ಹೋಲಿಸಿ. ಯೇಸು ತನ್ನ ಶಿಷ್ಯರಿಗೆ ಅಷ್ಟೇಅಲ್ಲ “ಪೇತ್ರನಿಗೂ” ಕಾಣಿಸಿಕೊಳ್ಳುವನೆಂಬ ವಿವರವನ್ನು ಮಾರ್ಕನು ಕೂಡಿಸಿದ್ದೇಕೆ?
ಸುಳಿವು: ಮಾರ್ಕನು ಆ ಘಟನೆಗಳನ್ನು ಕಣ್ಣಾರೆ ಕಂಡಿರಲಿಲ್ಲ. ಅವನು ಪೇತ್ರನಿಂದ ಮಾಹಿತಿಯನ್ನು ಪಡೆದಿರಬೇಕು ಎಂಬುದು ವ್ಯಕ್ತ.
ಅಡಗಿರುವ ಮುತ್ತು: ಯೇಸು ತನ್ನನ್ನು ಪುನಃ ನೋಡಲು ಬಯಸುತ್ತಾನೆಂಬ ಸುದ್ದಿ ಕೇಳಿ ಪೇತ್ರನು ಪ್ರೋತ್ಸಾಹ ಹೊಂದಿದ್ದು ಏಕೆ? (ಮಾರ್ಕ 14:66-72) ಯೇಸು ಪೇತ್ರನಿಗೆ ತಾನು ನಿಜ ಮಿತ್ರನೆಂದು ಹೇಗೆ ತೋರಿಸಿಕೊಟ್ಟನು? ನೀವು ಯೇಸುವನ್ನು ಅನುಸರಿಸುತ್ತಾ ಇತರರಿಗೆ ಹೇಗೆ ನಿಜ ಮಿತ್ರರಾಗಿರಬಲ್ಲಿರಿ?
◼ ಇನ್ನೂ ಹೆಚ್ಚು ರಿಸರ್ಚ್ ಮಾಡಿ. ವಿವರಣೆಗಳಿಗಾಗಿ ಬೈಬಲ್ ಪ್ರಕಾಶನಗಳನ್ನು ನೋಡಿ.
ಉದಾಹರಣೆ: ಮತ್ತಾಯ 2:7-15 ಓದಿ. ಜ್ಯೋತಿಷಿಗಳು ಯೇಸುವನ್ನು ಭೇಟಿಯಾದದ್ದು ಯಾವಾಗ?
ಸುಳಿವು: ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ 2008, ಜನವರಿ 1ರ ಕಾವಲಿನಬುರುಜು ಪತ್ರಿಕೆಯ ಪುಟ 31 ನೋಡಿ.
ಅಡಗಿರುವ ಮುತ್ತು: ಯೇಸುವಿನ ಕುಟುಂಬವು ಈಜಿಪ್ಟ್ನಲ್ಲಿದ್ದಾಗ ಯೆಹೋವನು ಅವರಿಗೆ ಭೌತಿಕ ಸಹಾಯವನ್ನು ಹೇಗೆ ಒದಗಿಸಿದ್ದಿರಬಹುದು? ಒತ್ತಡಭರಿತ ಪರಿಸ್ಥಿತಿಗಳನ್ನು ನಿಭಾಯಿಸಲು ನೀವು ದೇವರ ಸಹಾಯದಲ್ಲಿ ಹೇಗೆ ಭರವಸೆಯಿಡಬಲ್ಲಿರಿ?—ಮತ್ತಾಯ 6:33, 34. (g 4/09)