ಪಾಠ 19
ಯೆಹೋವನ ಸಾಕ್ಷಿಗಳು ನಿಜ ಕ್ರೈಸ್ತರಾ?
ಯೆಹೋವನ ಸಾಕ್ಷಿಗಳಾದ ನಾವು ನಿಜ ಕ್ರೈಸ್ತರು ಅಂತ ನಂಬುತ್ತೇವೆ. ನಾವು ಯಾಕೆ ಹಾಗೆ ಹೇಳುತ್ತೇವೆ? ಇದನ್ನ ಅರ್ಥಮಾಡಿಕೊಳ್ಳೋಕೆ, ನಮ್ಮ ನಂಬಿಕೆಗಳ ಬಗ್ಗೆ, ನಮ್ಮ ಹೆಸರಿನ ವಿಶೇಷತೆಯ ಬಗ್ಗೆ ಮತ್ತು ನಾವು ಯಾಕೆ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಅನ್ನೋದರ ಬಗ್ಗೆ ಕಲಿಯಿರಿ.
1. ಯೆಹೋವನ ಸಾಕ್ಷಿಗಳ ನಂಬಿಕೆಗಳಿಗೆ ಆಧಾರ ಏನು?
“[ದೇವರ] ಮಾತುಗಳೇ ಸತ್ಯ” ಅಂತ ಯೇಸು ಹೇಳಿದನು. (ಯೋಹಾನ 17:17) ಯೇಸುವಿನಂತೆ ಯೆಹೋವನ ಸಾಕ್ಷಿಗಳು ಸಹ ಬೈಬಲಿನಲ್ಲಿ ಇರೋದನ್ನೇ ನಂಬುತ್ತಾರೆ. ಉದಾಹರಣೆಗೆ ನಮ್ಮ ಇತಿಹಾಸದ ಬಗ್ಗೆ ನೋಡಿ. ಹಿಂದೆ ಯೆಹೋವನ ಸಾಕ್ಷಿಗಳಿಗೆ ಬೈಬಲ್ ವಿದ್ಯಾರ್ಥಿಗಳು ಅನ್ನೋ ಹೆಸರಿತ್ತು. ಸುಮಾರು 1870 ರಷ್ಟಕ್ಕೆ ಬೈಬಲ್ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪು ಬೈಬಲ್ ನಿಜವಾಗಿ ಏನು ಹೇಳುತ್ತೆ ಅಂತ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸಿದರು. ಅವರು ಕಲಿಸುತ್ತಿದ್ದ ವಿಷಯಗಳಿಗೂ ಚರ್ಚ್ನಲ್ಲಿ ಕಲಿಸುತ್ತಿದ್ದ ವಿಷಯಗಳಿಗೂ ತುಂಬ ವ್ಯತ್ಯಾಸ ಇತ್ತು. ಆದ್ರೂ ಅವರು ಬೈಬಲ್ ಏನು ಹೇಳುತ್ತೋ ಅದನ್ನೇ ನಂಬಿದರು ಮತ್ತು ಕಲಿತ ಸತ್ಯಗಳನ್ನ ಬೇರೆಯವರಿಗೂ ತಿಳಿಸಿದರು.a
2. ನಮಗೆ ಯಾಕೆ ಯೆಹೋವನ ಸಾಕ್ಷಿಗಳು ಅನ್ನೋ ಹೆಸರಿದೆ?
ಯೆಹೋವನ ಆರಾಧಕರು ಆತನ ಬಗ್ಗೆ ಸತ್ಯವನ್ನ ಕಲಿಸುತ್ತಾರೆ. ಹಾಗಾಗಿ ಯೆಹೋವ ಅವರನ್ನ ತನ್ನ ಸಾಕ್ಷಿಗಳು ಅಂತ ಕರೆಯುತ್ತಾನೆ. (ಇಬ್ರಿಯ 11:4–12:1) ಉದಾಹರಣೆಗೆ, ಹಿಂದಿನ ಕಾಲದಲ್ಲಿ ದೇವರು ತನ್ನ ಜನರಿಗೆ, “ನೀವು ನನ್ನ ಸಾಕ್ಷಿಗಳು” ಅಂತ ಹೇಳಿದನು. (ಯೆಶಾಯ 43:10 ಓದಿ.) ಯೇಸು “ನಂಬಿಗಸ್ತ ಸಾಕ್ಷಿ” ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 1:5) ಈ ಕಾರಣಗಳಿಂದಾಗಿ 1931 ರಲ್ಲಿ ನಮ್ಮ ಹೆಸರನ್ನ ಯೆಹೋವನ ಸಾಕ್ಷಿಗಳು ಅಂತ ಬದಲಾಯಿಸಿಕೊಂಡ್ವಿ. ಆ ಹೆಸರು ನಮಗೆ ಇರೋದಕ್ಕೆ ತುಂಬ ಹೆಮ್ಮೆ ಆಗುತ್ತೆ.
3. ಯೆಹೋವನ ಸಾಕ್ಷಿಗಳು ಹೇಗೆ ಯೇಸುವಿನಂತೆ ಪ್ರೀತಿ ತೋರಿಸುತ್ತಾರೆ?
ಯೇಸು ತನ್ನ ಶಿಷ್ಯರನ್ನ ತುಂಬ ಪ್ರೀತಿಸಿದನು. ಅವರೆಲ್ಲರೂ ಆತನಿಗೆ ಸ್ವಂತ ಮನೆಯವರಂತೆ ಇದ್ದರು. (ಮಾರ್ಕ 3:35 ಓದಿ.) ಯೆಹೋವನ ಸಾಕ್ಷಿಗಳು ಲೋಕದ ಎಲ್ಲಾ ಕಡೆ ಇದ್ದಾರೆ. ಹಾಗಿದ್ದರೂ ನಾವು ಒಂದೇ ಕುಟುಂಬದಂತೆ ಐಕ್ಯರಾಗಿದ್ದೇವೆ. ಅದಕ್ಕೆ ನಾವು ಒಬ್ಬರನ್ನೊಬ್ಬರು ಸಹೋದರ ಸಹೋದರಿ ಅಂತ ಕರೆಯುತ್ತೇವೆ. (ಫಿಲೆಮೋನ 1, 2) “ಲೋಕದಲ್ಲಿ ಎಲ್ಲ ಕಡೆ ಇರೋ ಸಹೋದರರನ್ನ ಪ್ರೀತಿಸಿ” ಅನ್ನೋ ಬೈಬಲ್ ಆಜ್ಞೆಯನ್ನ ನಾವು ಪಾಲಿಸ್ತೇವೆ. (1 ಪೇತ್ರ 2:17) ನಮ್ಮ ಸಹೋದರ ಸಹೋದರಿಯರು ಎಲ್ಲೇ ಇರಲಿ ಅವರಿಗೆ ಅಗತ್ಯವಿದ್ದಾಗ ಸಹಾಯ ಮಾಡ್ತೇವೆ. ಹೀಗೆ ನಾವು ನಮ್ಮ ಪ್ರೀತಿಯನ್ನ ತೋರಿಸ್ತೇವೆ.
ಹೆಚ್ಚನ್ನ ತಿಳಿಯೋಣ
ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚನ್ನ ತಿಳಿಯಿರಿ. ನಾವು ನಿಜ ಕ್ರೈಸ್ತರು ಅನ್ನೋದಕ್ಕಿರೋ ಇನ್ನಷ್ಟು ಆಧಾರಗಳನ್ನ ನೋಡಿ.
4. ನಮ್ಮ ನಂಬಿಕೆಗಳಿಗೆ ಬೈಬಲೇ ಆಧಾರ
ಬೈಬಲಿನಲ್ಲಿರೋ ಸತ್ಯದ ತಿಳುವಳಿಕೆ ಅಂತ್ಯ ಕಾಲದಲ್ಲಿ ಹೆಚ್ಚಾಗುತ್ತೆ ಅಂತ ಯೆಹೋವನು ಮುಂಚೆನೇ ತಿಳಿಸಿದ್ದನು. ದಾನಿಯೇಲ 12:4 ಮತ್ತು ಪಾದಟಿಪ್ಪಣಿ ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ದೇವಜನರು ಬೈಬಲನ್ನ ಕಲಿಯುವಾಗ ಯಾವುದು “ತುಂಬಿ ತುಳುಕುತ್ತೆ”?
ಚಾರ್ಲ್ಸ್ ರಸಲ್ ಮತ್ತು ಬೈಬಲ್ ವಿದ್ಯಾರ್ಥಿಗಳ ಒಂದು ಗುಂಪು ಹೇಗೆ ಬೈಬಲನ್ನ ಕಲಿಯಲು ಶುರು ಮಾಡಿತು ಅಂತ ತಿಳಿಯಲು ವಿಡಿಯೋ ನೋಡಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ.
ಚಾರ್ಲ್ಸ್ ರಸಲ್ ಮತ್ತು ಅವರ ಸಂಗಡಿಗರು ಹೇಗೆ ಬೈಬಲನ್ನ ಅಧ್ಯಯನ ಮಾಡಿದರು?
ನಿಮಗೆ ಗೊತ್ತಿತ್ತಾ?
ಕೆಲವೊಮ್ಮೆ ನಮ್ಮ ನಂಬಿಕೆಗಳಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಂಡಿದ್ದೇವೆ, ಯಾಕೆ? ಬೈಬಲ್ ಸತ್ಯಗಳನ್ನ ಸೂರ್ಯನ ಕಿರಣಗಳಿಗೆ ಹೋಲಿಸಬಹುದು. ಸೂರ್ಯನ ಕಿರಣಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಹೆಚ್ಚಾಗುತ್ತಾ ಹೋಗುತ್ತೆ. ಆಗ ನಮಗೆ ಎಲ್ಲಾ ಸ್ಪಷ್ಟವಾಗಿ ಕಾಣಿಸುತ್ತೆ. ಅದೇ ತರ ನಮಗಿರೋ ಬೈಬಲ್ ಸತ್ಯಗಳ ತಿಳುವಳಿಕೆಯನ್ನ ಯೆಹೋವ ದೇವರು ಹಂತ ಹಂತವಾಗಿ ಹೆಚ್ಚಿಸುತ್ತಾನೆ. (ಜ್ಞಾನೋಕ್ತಿ 4:18 ಓದಿ.) ಬೈಬಲ್ ಸತ್ಯಗಳು ಯಾವತ್ತೂ ಬದಲಾಗಲ್ಲ. ಆದರೆ ನಾವು ಬೈಬಲನ್ನ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವಾಗ ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ.
5. ನಾವು ನಮ್ಮ ಹೆಸರಿನಂತೆ ನಡೆದುಕೊಳ್ಳುತ್ತೇವೆ
ನಾವು ಯಾಕೆ ಯೆಹೋವನ ಸಾಕ್ಷಿಗಳು ಅನ್ನೋ ಹೆಸರನ್ನ ಇಟ್ಟುಕೊಂಡಿದ್ದೇವೆ? ಇದರ ಬಗ್ಗೆ ತಿಳಿಯಲು ವಿಡಿಯೋ ನೋಡಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ.
ನಮಗೆ ಯೆಹೋವನ ಸಾಕ್ಷಿಗಳು ಅನ್ನೋ ಹೆಸರು ಯಾಕೆ ಸೂಕ್ತವಾಗಿದೆ?
ಯೆಹೋವ ದೇವರು ಯಾಕೆ ಕೆಲವರನ್ನ ತನ್ನ ಸಾಕ್ಷಿಗಳಾಗಿ ಆರಿಸಿಕೊಂಡಿದ್ದಾನೆ? ಯಾಕಂದ್ರೆ ಜನರು ದೇವರ ಬಗ್ಗೆ ತುಂಬ ಸುಳ್ಳುಗಳನ್ನ ಹೇಳ್ತಿದ್ದಾರೆ. ಅದಕ್ಕೆ ಯೆಹೋವ ದೇವರು ತನ್ನ ಪರವಾಗಿ ಮಾತಾಡೋಕೆ ಸಾಕ್ಷಿಗಳನ್ನ ಆರಿಸಿಕೊಂಡಿದ್ದಾನೆ. ಈಗ ನಾವು, ಜನರು ದೇವರ ಬಗ್ಗೆ ಹೇಳುತ್ತಿರುವ ಎರಡು ಸುಳ್ಳಿನ ಬಗ್ಗೆ ನೋಡೋಣ.
ನಾವು ಮೂರ್ತಿ ಪೂಜೆ ಮಾಡಬೇಕು ಅಂತ ದೇವರು ಬಯಸುತ್ತಾನೆ ಅಂತ ಕೆಲವು ಧರ್ಮಗಳು ಕಲಿಸುತ್ತವೆ. ಆದರೆ ಇದು ಸತ್ಯನಾ? ಯಾಜಕಕಾಂಡ 26:1 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಸತ್ಯ ಏನು? ಯೆಹೋವನು ಏನು ಮಾಡಬಾರದು ಅಂತ ಹೇಳಿದ್ದಾನೆ?
ಯೆಹೋವ ದೇವರೇ ಯೇಸು ಅಂತ ಕೆಲವು ಧರ್ಮ ಗುರುಗಳು ಕಲಿಸುತ್ತಾರೆ. ಆದರೆ ಇದು ಸತ್ಯನಾ? ಯೋಹಾನ 20:17 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಸತ್ಯ ಏನು? ಯೆಹೋವ ದೇವರೇ ಯೇಸು ಅಂತ ಬೈಬಲ್ ಕಲಿಸುತ್ತಾ?
ಯೆಹೋವ ದೇವರು ತನ್ನ ಬಗ್ಗೆ ಮತ್ತು ತನ್ನ ಮಗನ ಬಗ್ಗೆ ಸತ್ಯವನ್ನ ತಿಳಿಸಲಿಕ್ಕಾಗಿ ತನ್ನ ಸಾಕ್ಷಿಗಳನ್ನ ನಿಮ್ಮ ಹತ್ತಿರ ಕಳುಹಿಸಿದ್ದಾನೆ. ಇದರ ಬಗ್ಗೆ ತಿಳಿದುಕೊಂಡಾಗ ನಿಮಗೆ ಹೇಗನಿಸುತ್ತೆ?
6. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ
ಬೈಬಲ್ ಕ್ರೈಸ್ತರನ್ನ ಮಾನವ ದೇಹದ ಬೇರೆಬೇರೆ ಅಂಗಗಳಿಗೆ ಹೋಲಿಸುತ್ತೆ. 1 ಕೊರಿಂಥ 12:25, 26 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಮ್ಮ ಸಹೋದರ ಸಹೋದರಿಯರಿಗೆ ಕಷ್ಟಗಳು ಬಂದಾಗ ನಾವೇನು ಮಾಡುತ್ತೇವೆ?
ಯೆಹೋವನ ಸಾಕ್ಷಿಗಳು ತೋರಿಸುವ ಪ್ರೀತಿಯನ್ನ ನೋಡುವಾಗ ನಿಮಗೆ ಹೇಗನಿಸುತ್ತೆ?
ಸಹೋದರರು ಎಲ್ಲೇ ಇರಲಿ ಅವರು ಕಷ್ಟದಲ್ಲಿದ್ದಾರೆ ಅಂತ ಗೊತ್ತಾದಾಗ ಯೆಹೋವನ ಸಾಕ್ಷಿಗಳು ಕೂಡಲೇ ಸಹಾಯ ಮಾಡ್ತಾರೆ. ವಿಡಿಯೋ ನೋಡಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ.
ಯೆಹೋವನ ಸಾಕ್ಷಿಗಳು ಮಾಡುವ ವಿಪತ್ತು ಪರಿಹಾರ ಕೆಲಸ ಪ್ರೀತಿಯ ಪುರಾವೆಯಾಗಿದೆ ಹೇಗೆ?
ಕೆಲವರು ಹೀಗಂತಾರೆ: “ಯೆಹೋವನ ಸಾಕ್ಷಿಗಳು ಈಗಷ್ಟೇ ಹುಟ್ಟಿಕೊಂಡ ಒಂದು ಹೊಸ ಪಂಗಡ.”
ಯೆಹೋವ ದೇವರು ತನ್ನ ಜನರನ್ನ ಆತನ ಸಾಕ್ಷಿಗಳು ಅಂತ ಯಾವಾಗಿಂದ ಕರೆಯೋಕೆ ಶುರುಮಾಡಿದನು?
ನಾವೇನು ಕಲಿತ್ವಿ
ಯೆಹೋವನ ಸಾಕ್ಷಿಗಳು ನಿಜ ಕ್ರೈಸ್ತರು. ನಾವು ಒಂದು ಲೋಕವ್ಯಾಪಕ ಕುಟುಂಬ. ನಮ್ಮ ನಂಬಿಕೆಗಳಿಗೆ ಬೈಬಲ್ ಆಧಾರ. ನಾವು ಯೆಹೋವ ದೇವರ ಬಗ್ಗೆ ಇರೋ ಸತ್ಯವನ್ನ ಎಲ್ಲರಿಗೂ ತಿಳಿಸುತ್ತೇವೆ.
ನೆನಪಿದೆಯಾ
ನಮಗೆ ಯಾಕೆ ಯೆಹೋವನ ಸಾಕ್ಷಿಗಳು ಅನ್ನೋ ಹೆಸರಿದೆ?
ನಾವು ಸಹೋದರ ಸಹೋದರಿಯರಿಗೆ ಹೇಗೆ ಪ್ರೀತಿ ತೋರಿಸ್ತೇವೆ?
ಯೆಹೋವನ ಸಾಕ್ಷಿಗಳು ನಿಜ ಕ್ರೈಸ್ತರು ಅಂತ ನಿಮಗೆ ಅನಿಸುತ್ತಾ?
ಇದನ್ನೂ ನೋಡಿ
ನಮ್ಮ ಇತಿಹಾಸದ ಬಗ್ಗೆ ಹೆಚ್ಚನ್ನ ತಿಳಿಯಿರಿ.
ಯೆಹೋವನ ಸಾಕ್ಷಿಗಳು ಮತ್ತವರ ಅಚಲ ನಂಬಿಕೆ ಭಾಗ 1: ಕತ್ತಲೆಯಿಂದ ಬೆಳಕಿಗೆ (1:00:53)
ಯೆಹೋವನ ಸಾಕ್ಷಿಗಳು ಸುಳ್ಳು ಬೋಧನೆಗಳನ್ನ ಬಯಲು ಮಾಡಿದ್ದಾರೆ ಅನ್ನೋದಕ್ಕೆ ಒಂದು ಉದಾಹರಣೆಯನ್ನ ನೋಡಿ.
ಯೆಹೋವನ ಸಾಕ್ಷಿಗಳ ಬಗ್ಗೆ ನಿಮಗಿರೋ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ.
“ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು” (ಲೇಖನ ಸರಣಿಗಳು)
ಸ್ಟೀವನ್ ಬೇರೆ ಜನಾಂಗದ ಜನರನ್ನ ಎಷ್ಟರ ಮಟ್ಟಿಗೆ ದ್ವೇಷಿಸ್ತಿದ್ದ ಅಂದರೆ ಅವರ ಮೇಲೆ ಹಲ್ಲೆ ಮಾಡ್ತಿದ್ದ. ಆದರೆ ಯೆಹೋವನ ಸಾಕ್ಷಿಗಳ ಜೊತೆ ಸ್ಟಡಿ ಮಾಡಿದ ಮೇಲೆ ತನ್ನ ಜೀವನದಲ್ಲಿ ಹೇಗೆ ಬದಲಾವಣೆ ಮಾಡಿಕೊಂಡ ಅಂತ ನೋಡಿ.
a ಯೆಹೋವನ ಸಾಕ್ಷಿಗಳು 1879 ರಿಂದ ಕಾವಲಿನಬುರುಜು ಪತ್ರಿಕೆ ಮೂಲಕ ಬೈಬಲಿನಲ್ಲಿರುವ ಸತ್ಯಗಳನ್ನ ಜನರಿಗೆ ಕಲಿಸುತ್ತಿದ್ದಾರೆ.