-
ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ!ಕಾವಲಿನಬುರುಜು—2001 | ಫೆಬ್ರವರಿ 15
-
-
11. ಚೆಫನ್ಯ 1:8-11ರ ಸಾರಾಂಶವೇನು?
11 ಯೆಹೋವನ ದಿನದ ಕುರಿತು ಚೆಫನ್ಯ 1:8-11 ಹೀಗೆ ಕೂಡಿಸಿ ಹೇಳುತ್ತದೆ: “ಯೆಹೋವನ ಆ ಯಜ್ಞದಿನದಲ್ಲಿ ನಾನು ದೇಶಾಧಿಪತಿಗಳನ್ನೂ ರಾಜವಂಶದವರನ್ನೂ ವಿದೇಶವಸ್ತ್ರಧಾರಿಗಳೆಲ್ಲರನ್ನೂ ದಂಡಿಸುವೆನು. ಹೊಸ್ತಿಲಹಾರಿ ನುಗ್ಗಿ ಮೋಸಹಿಂಸೆಗಳಿಂದ ದೋಚಿದ್ದನ್ನು ತಮ್ಮ ಒಡೆಯನ ಮನೆಯೊಳಗೆ ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು. ಅದೇ ದಿನದಲ್ಲಿ ಮೀನುಬಾಗಲಿಂದ ಕೂಗಾಟ, ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿಂದ ಧಡಮ್ ಎನ್ನುವ ಶಬ್ದ, ಅಂತು ದೊಡ್ಡ ಗದ್ದಲವಾಗುವದು; ಇದು ಯೆಹೋವನ ನುಡಿ. ಒರಳ ಕೇರಿಯವರೇ, ಕಿರಚಿರಿ, ಎಲ್ಲಾ ಸಾಹುಕಾರರು ಹಾಳಾದರು, ಹೊರೆಬೆಳ್ಳಿಯವರೆಲ್ಲರು ನಾಶವಾದರು.”
-
-
ಯೆಹೋವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ!ಕಾವಲಿನಬುರುಜು—2001 | ಫೆಬ್ರವರಿ 15
-
-
13. ಚೆಫನ್ಯನ ಪ್ರವಾದನೆಗೆ ಹೊಂದಿಕೆಯಲ್ಲಿ, ಬಾಬೆಲಿನವರು ಯೆರೂಸಲೇಮಿಗೆ ಮುತ್ತಿಗೆಹಾಕುವಾಗ ಏನು ಸಂಭವಿಸಲಿತ್ತು?
13 ಯೆಹೂದವು ಲೆಕ್ಕವೊಪ್ಪಿಸಬೇಕಾಗಿದ್ದ ‘ಆ ದಿನವು,’ ತನ್ನ ವೈರಿಗಳ ಮೇಲೆ ನ್ಯಾಯತೀರಿಸುವ, ದುಷ್ಟತನವನ್ನು ಕೊನೆಗಾಣಿಸುವ, ಮತ್ತು ತನ್ನ ಪರಮಾಧಿಕಾರವನ್ನು ರುಜುಪಡಿಸುವ ಯೆಹೋವನ ದಿನಕ್ಕೆ ಅನುರೂಪವಾಗಿದೆ. ಬಾಬೆಲಿನವರು ಯೆರೂಸಲೇಮಿನ ಮೇಲೆ ದಾಳಿಮಾಡುವಾಗ, ಮೀನು ಬಾಗಲಿನಿಂದ ಕೂಗಾಟವು ಕೇಳಿಬರಲಿತ್ತು. ಆ ಬಾಗಿಲು ಮೀನಿನ ಮಾರುಕಟ್ಟೆಯ ಬಳಿಯಿದ್ದದರಿಂದ ಅದಕ್ಕೆ ಈ ಹೆಸರು ಬಂದಿರಬಹುದು. (ನೆಹೆಮೀಯ 13:16) ಬಾಬೆಲಿನ ಸೈನ್ಯವು, ಎರಡನೆಯ ಕೇರಿ ಎಂಬುದಾಗಿ ಕರೆಯಲ್ಪಡುವ ಸ್ಥಳದಿಂದ ಪ್ರವೇಶಿಸಲಿತ್ತು. ಮತ್ತು ‘ಗುಡ್ಡಗಳ ಮೇಲಿಂದ ಧಡಮ್ ಎನ್ನುವ ಶಬ್ದವು,’ ನುಗ್ಗಿಬರುತ್ತಿರುವ ಕಸ್ದೀಯರ ಶಬ್ದವನ್ನು ಸೂಚಿಸುತ್ತಿರಬಹುದು. ಒರಳ ಕೇರಿಯ ನಿವಾಸಿಗಳು, ಅಂದರೆ ತೂರ್ಯ ಕಣಿವೆಯ ಮೇಲ್ಭಾಗದಲ್ಲಿರುವವರು ‘ಕಿರುಚಾಡಲಿದ್ದರು.’ ಅವರು ಏಕೆ ಕಿರುಚಾಡಲಿದ್ದರು? ಏಕೆಂದರೆ ಅಲ್ಲಿ ಎಲ್ಲ ವ್ಯಾಪಾರದೊಂದಿಗೆ ‘ಬೆಳ್ಳಿ’ ಮಾರುವವರ ವ್ಯಾಪಾರವು ಸಹ ನಿಂತುಹೋಗಲಿತ್ತು.
-