ಪಾಠ 42
ಅವಿವಾಹಿತ ಸ್ಥಿತಿ ಮತ್ತು ಮದುವೆ ಬಗ್ಗೆ ಬೈಬಲ್ ಏನು ಹೇಳುತ್ತೆ?
ಮದುವೆಯಾದ್ರೆ ಮಾತ್ರ ಖುಷಿಯಾಗಿ ಇರಬಹುದು ಅಂತ ಕೆಲವರು ಅಂದುಕೊಳ್ಳುತ್ತಾರೆ. ಆದರೆ ಮದುವೆ ಆಗಿರೋರೆಲ್ಲಾ ಖುಷಿಯಾಗಿದ್ದಾರೆ ಅಥವಾ ಮದುವೆ ಆಗದೇ ಇರೋರು ಖುಷಿಯಾಗಿಲ್ಲ ಅಂತ ಅಲ್ಲ. ಮದುವೆ ಆಗಿದ್ದರೂ ಆಗದೇ ಇದ್ದರೂ ಪ್ರಯೋಜನ ಇದೆ ಅಂತ ಬೈಬಲ್ ಹೇಳುತ್ತೆ.
1. ಮದುವೆ ಆಗದೇ ಇರೋದ್ರಿಂದ ಏನೆಲ್ಲಾ ಪ್ರಯೋಜನ ಇದೆ?
“ಮದುವೆ ಆದ್ರೂ ಪ್ರಯೋಜನ ಇದೆ. ಮದುವೆ ಆಗದೇ ಇದ್ರೆ ಇನ್ನೂ ಪ್ರಯೋಜನ ಇದೆ” ಅಂತ ಬೈಬಲ್ ಹೇಳುತ್ತೆ. (1 ಕೊರಿಂಥ 7:32, 33, 38 ಓದಿ.) ಹಾಗಾದರೆ ಮದುವೆ ಆಗದೆ ಇದ್ದರೆ ‘ಇನ್ನೂ ಯಾವೆಲ್ಲಾ ಪ್ರಯೋಜನ’ ಇದೆ? ಮದುವೆ ಆಗದೇ ಇರೋರಿಗೆ ಹೆಚ್ಚು ಸ್ವಾತಂತ್ರ್ಯ ಇರುತ್ತೆ, ಅವರಿಗೆ ತಮ್ಮ ಸಂಗಾತಿಯ ಅವಶ್ಯಕತೆಗಳನ್ನ ಪೂರೈಸುವ ಅಗತ್ಯ ಇರಲ್ಲ. ಹಾಗಾಗಿ ಅವರು ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡುವ ಮೂಲಕ ಯೆಹೋವ ದೇವರ ಸೇವೆಯನ್ನ ಹೆಚ್ಚು ಮಾಡಬಹುದು. ಅಷ್ಟೇ ಅಲ್ಲ ಅವರಿಗೆ ಯೆಹೋವ ದೇವರ ಜೊತೆ ಆಪ್ತ ಸಂಬಂಧವನ್ನ ಬೆಳೆಸಿಕೊಳ್ಳೋಕೆ ಹೆಚ್ಚು ಸಮಯ ಸಿಗುತ್ತೆ.
2. ಕಾನೂನಿನ ಪ್ರಕಾರ ಮದುವೆ ಆಗೋದರಿಂದ ಸಿಗುವ ಪ್ರಯೋಜನಗಳು ಯಾವುವು?
ಮದುವೆ ಆಗದೇ ಇದ್ದರೂ ಮದುವೆ ಆಗಿದ್ದರೂ ಅದರದ್ದೇ ಆದ ಪ್ರಯೋಜನಗಳಿವೆ. “ಒಬ್ಬನಿಗಿಂತ ಇಬ್ರು ಉತ್ತಮ” ಅಂತ ಬೈಬಲ್ ಹೇಳುತ್ತೆ. (ಪ್ರಸಂಗಿ 4:9) ಬೈಬಲಿನಲ್ಲಿರುವ ನೀತಿನಿಯಮಗಳ ಪ್ರಕಾರ ಬದುಕುವ ಕ್ರೈಸ್ತ ದಂಪತಿಗಳ ವಿಷಯದಲ್ಲಿ ಈ ಮಾತು ನಿಜ ಆಗಿದೆ. ಕಾನೂನಿನ ಪ್ರಕಾರ ಮದುವೆ ಆಗಿರುವ ದಂಪತಿಗಳು, ‘ಒಬ್ಬರಿಗೊಬ್ಬರು ಪ್ರೀತಿಸ್ತೇವೆ, ಗೌರವಿಸುತ್ತೇವೆ ಮತ್ತು ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಅಂತ ಮಾತು ಕೊಟ್ಟಿರುತ್ತಾರೆ. ಮದುವೆ ಆಗದೆ ಒಟ್ಟಿಗೆ ಜೀವಿಸುವವರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಆದರೆ ಮದುವೆಯಾಗಿ ಒಟ್ಟಿಗೆ ಜೀವಿಸುವವರಿಗೆ ಭದ್ರತೆ ಇರುತ್ತೆ. ಅಂಥ ಕುಟುಂಬದಲ್ಲಿ ಬೆಳೆದ ಮಕ್ಕಳು ಸುರಕ್ಷಿತರಾಗಿ, ಭಯ ಇಲ್ಲದೆ ಇರುತ್ತಾರೆ.
3. ಮದುವೆ ಜೀವನ ಹೇಗಿರಬೇಕು ಅಂತ ಯೆಹೋವನು ಬಯಸ್ತಾನೆ?
ಯೆಹೋವ ದೇವರು ಆದಾಮನಿಗೆ ಹವ್ವಳನ್ನ ಹೆಂಡತಿಯಾಗಿ ಕೊಟ್ಟಾಗ, “ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ” ಅಂತ ಹೇಳಿದನು. (ಆದಿಕಾಂಡ 2:24) ಗಂಡ ಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾ, ಜೀವ ಇರುವವರೆಗೂ ಒಟ್ಟಿಗೆ ಇರಬೇಕು ಅಂತ ಯೆಹೋವ ದೇವರು ಇಷ್ಟಪಡುತ್ತಾನೆ. ಗಂಡ ಅಥವಾ ಹೆಂಡತಿ ಇವರಿಬ್ಬರಲ್ಲಿ ಯಾರಾದ್ರು ಒಬ್ಬರು ವ್ಯಭಿಚಾರ ಮಾಡಿದ್ರೆ ವಿವಾಹ ವಿಚ್ಛೇದನ (ಡೈವೋರ್ಸ್) ಕೊಡಬಹುದು ಅಂತ ಯೆಹೋವನು ಅನುಮತಿ ಕೊಟ್ಟಿದ್ದಾನೆ. ಆದರೆ ಡೈವೋರ್ಸ್ ಕೊಡಬೇಕಾ ಬೇಡ್ವಾ ಅನ್ನೋ ತೀರ್ಮಾನ ಮಾಡುವ ಹಕ್ಕನ್ನ ಯೆಹೋವ ದೇವರು ತಪ್ಪು ಮಾಡದೇ ಇರುವ ಸಂಗಾತಿಗೆ ಮಾತ್ರ ಕೊಟ್ಟಿದ್ದಾನೆ.a (ಮತ್ತಾಯ 19:9) ಕ್ರೈಸ್ತರು ಒಬ್ಬರಿಗಿಂತ ಹೆಚ್ಚು ಸಂಗಾತಿಗಳನ್ನ ಮದುವೆ (ಬಹುಪತ್ನಿತ್ವ) ಮಾಡಿಕೊಳ್ಳಬಾರದು ಅಂತ ಯೆಹೋವ ದೇವರು ಹೇಳಿದ್ದಾನೆ.—1 ತಿಮೊತಿ 3:2.
ಹೆಚ್ಚನ್ನ ತಿಳಿಯೋಣ
ನಿಮಗೆ ಮದುವೆ ಆಗಿದ್ದರೂ ಆಗದಿದ್ದರೂ ಹೇಗೆ ಖುಷಿಯಾಗಿ ಇರಬಹುದು ಮತ್ತು ಯೆಹೋವನನ್ನು ಹೇಗೆ ಖುಷಿಪಡಿಸಬಹುದು ಅಂತ ತಿಳಿಯಿರಿ.
4. ಮದುವೆ ಆಗದೇ ಇರುವವರೂ ತಮ್ಮ ಜೀವನವನ್ನ ಆನಂದಿಸಬಹುದು
ಮದುವೆ ಆಗದೇ ಇರೋದು ಒಂದು ವರ ಅಂತ ಯೇಸು ಹೇಳಿದನು. (ಮತ್ತಾಯ 19:11, 12) ಮತ್ತಾಯ 4:23 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೇಸು ಮದುವೆ ಆಗದೇ ಇದ್ದಿದ್ದರಿಂದ ಯೆಹೋವನ ಸೇವೆಯನ್ನ ಜಾಸ್ತಿ ಮಾಡಕ್ಕೆ ಮತ್ತು ಬೇರೆಯವರಿಗೆ ಸಹಾಯ ಮಾಡಕ್ಕೆ ಹೇಗೆ ಸಾಧ್ಯ ಆಯಿತು?
ಮದುವೆ ಆಗದೇ ಇರೋರು ಸಹ ಯೇಸುವಿನಂತೆ ತಮ್ಮ ಜೀವನದಲ್ಲಿ ಸಂತೋಷವಾಗಿ ಇರೋಕೆ ಸಾಧ್ಯ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಮದುವೆ ಆಗದ ಕ್ರೈಸ್ತರಿಗೆ ಯೆಹೋವನ ಸೇವೆಯಲ್ಲಿ ಯಾವೆಲ್ಲಾ ಅವಕಾಶಗಳಿವೆ?
ನಿಮಗೆ ಗೊತ್ತಿತ್ತಾ?
‘ಈ ವಯಸ್ಸಲ್ಲೇ ಮದುವೆ ಆಗಬೇಕು’ ಅಂತ ಬೈಬಲಿನಲ್ಲಿ ಎಲ್ಲೂ ಹೇಳಿಲ್ಲ. ಆದರೆ ಮದುವೆ ಆಗಲು ‘ಯುವಪ್ರಾಯ ದಾಟುವ’ ವರೆಗೆ ಕಾಯಬೇಕು ಅಂತ ಹೇಳುತ್ತೆ. ಯಾಕಂದ್ರೆ ಈ ವಯಸ್ಸಲ್ಲಿ ಲೈಂಗಿಕ ಬಯಕೆಗಳು ಜಾಸ್ತಿ ಇರೋದರಿಂದ ಒಬ್ಬ ವ್ಯಕ್ತಿ ಸರಿಯಾದ ತೀರ್ಮಾನಗಳನ್ನ ಮಾಡಕ್ಕೆ ಆಗಲ್ಲ.—1 ಕೊರಿಂಥ 7:36.
5. ನಿಮ್ಮ ಸಂಗಾತಿಯನ್ನ ವಿವೇಕದಿಂದ ಆಯ್ಕೆ ಮಾಡಿ
ನಿಮ್ಮ ಬಾಳ ಸಂಗಾತಿಯನ್ನ ಆಯ್ಕೆ ಮಾಡೋದು ನಿಮ್ಮ ಜೀವನದಲ್ಲಿ ಮಾಡುವ ಪ್ರಾಮುಖ್ಯ ಆಯ್ಕೆಗಳಲ್ಲಿ ಒಂದಾಗಿದೆ. ಮತ್ತಾಯ 19:4-6, 9 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಹಿಂದೆ ಮುಂದೆ ಯೋಚಿಸದೆ ಯಾಕೆ ಮದುವೆ ಆಗಬಾರದು?
ಎಂಥ ಗುಣಗಳಿರೋ ವ್ಯಕ್ತಿಯನ್ನ ನೀವು ಮದುವೆ ಆಗಬೇಕು ಅಂತ ತಿಳಿದುಕೊಳ್ಳೋಕೆ ಬೈಬಲ್ ಸಹಾಯ ಮಾಡುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನನ್ನು ಪ್ರೀತಿಸುವ ಒಬ್ಬ ಸಂಗಾತಿಯನ್ನ ಆಯ್ಕೆ ಮಾಡೋದೇ ಮುಖ್ಯ.b 1 ಕೊರಿಂಥ 7:39 ಮತ್ತು 2 ಕೊರಿಂಥ 6:14 ಓದಿ. ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಸತ್ಯದಲ್ಲಿ ಇರುವವರನ್ನೇ ಯಾಕೆ ಮದುವೆ ಆಗಬೇಕು?
ಯೆಹೋವನನ್ನು ಪ್ರೀತಿಸದ ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ಬಯಸೋದಾದ್ರೆ ದೇವರಿಗೆ ಹೇಗನಿಸುತ್ತೆ?
6. ಮದುವೆ ಬಂಧವನ್ನ ಯೆಹೋವ ದೇವರು ಗೌರವಿಸುವ ತರ ಗೌರವಿಸಿ
ಇಸ್ರಾಯೇಲಿನಲ್ಲಿದ್ದ ಪುರುಷರು ಸ್ವಾರ್ಥ ಕಾರಣಗಳಿಗಾಗಿ ಹೆಂಡತಿಯರಿಗೆ ವಿಚ್ಛೇದನ ಕೊಡುತ್ತಿದ್ರು. ಮಲಾಕಿ 2:13, 14, 16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ವ್ಯಭಿಚಾರದ ಕಾರಣ ಅಲ್ಲದೆ ಒಬ್ಬರು ತಮ್ಮ ಸಂಗಾತಿಗೆ ವಿಚ್ಛೇದನ ಕೊಟ್ಟರೆ ಯೆಹೋವ ದೇವರು ಅದನ್ನ ದ್ವೇಷಿಸ್ತಾನೆ, ಯಾಕೆ?
ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ನೀವು ಯೆಹೋವನ ಸಾಕ್ಷಿಯಲ್ಲದ ಒಬ್ಬರನ್ನ ಮದುವೆ ಆಗಿರೋದಾದ್ರೆ ನಿಮ್ಮ ಮದುವೆ ಜೀವನದಲ್ಲಿ ಖುಷಿಯಾಗಿರಲು ಏನು ಮಾಡಬಹುದು?
7. ಮದುವೆ ಬಗ್ಗೆ ಯೆಹೋವನು ಇಟ್ಟಿರುವ ನೀತಿನಿಯಮಗಳನ್ನ ಪಾಲಿಸಿ
ಮದುವೆ ಬಗ್ಗೆ ಯೆಹೋವನು ಇಟ್ಟಿರುವ ನೀತಿನಿಯಮಗಳನ್ನ ಪಾಲಿಸೋಕೆ ಒಬ್ಬ ವ್ಯಕ್ತಿ ತುಂಬ ಪ್ರಯತ್ನ ಮಾಡಬೇಕಾಗಬಹುದು.c ಆ ಪ್ರಯತ್ನಗಳನ್ನ ದೇವರು ಖಂಡಿತ ಆಶೀರ್ವದಿಸುತ್ತಾನೆ. ವಿಡಿಯೋ ನೋಡಿ.
ಇಬ್ರಿಯ 13:4 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಮದುವೆ ಬಗ್ಗೆ ಯೆಹೋವ ದೇವರು ಇಟ್ಟಿರುವ ನೀತಿನಿಯಮಗಳು ಸರಿಯಾಗಿವೆ ಅಂತ ನಿಮಗೆ ಅನಿಸುತ್ತಾ? ಯಾಕೆ?
ಮದುವೆ ಆಗೋದಾದ್ರೂ ಡೈವೋರ್ಸ್ ಮಾಡೋದಾದ್ರೂ ಅದು ಕಾನೂನು ಒಪ್ಪುವ ರೀತಿಯಲ್ಲಿ ಇರಬೇಕು ಅಂತ ಯೆಹೋವನು ಬಯಸುತ್ತಾನೆ. ತೀತ 3:1 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಿಮಗೆ ಮದುವೆ ಆಗಿದ್ದರೆ, ಅದು ಕಾನೂನು ಒಪ್ಪುವ ರೀತಿಯಲ್ಲಿ ಆಗಿದೆ ಅಂತ ದೃಢವಾಗಿ ಹೇಳಕ್ಕಾಗುತ್ತಾ?
ಕೆಲವರು ಹೀಗೆ ಕೇಳಬಹುದು: “ಮದುವೆ ಆಗದೆ ಇಬ್ಬರೂ ಒಟ್ಟಿಗೆ ಜೀವನ ಮಾಡೋದ್ರಲ್ಲಿ ತಪ್ಪೇನಿದೆ?”
ನೀವೇನು ಹೇಳ್ತೀರಾ?
ನಾವೇನು ಕಲಿತ್ವಿ
ಯೆಹೋವ ದೇವರ ಇಷ್ಟದ ಪ್ರಕಾರ ಜೀವಿಸೋದಾದ್ರೆ ಮದುವೆ ಆಗಲಿ ಆಗದೇ ಇರಲಿ ಎಲ್ಲರೂ ಸಂತೋಷ, ಸಂತೃಪ್ತಿಯಿಂದ ಇರುತ್ತಾರೆ.
ನೆನಪಿದೆಯಾ
ಮದುವೆ ಆಗದೇ ಇರೋ ವ್ಯಕ್ತಿ ಹೇಗೆ ಜೀವನವನ್ನ ಆನಂದಿಸಬಹುದು?
ಯೆಹೋವನ ಆರಾಧಕರನ್ನೇ ಮದುವೆಯಾಗಬೇಕು ಅಂತ ಬೈಬಲ್ ಹೇಳುತ್ತೆ, ಯಾಕೆ?
ವಿವಾಹ ವಿಚ್ಛೇದನಕ್ಕೆ ಬೈಬಲ್ ಕೊಡುವ ಒಂದೇ ಒಂದು ಕಾರಣ ಯಾವುದು?
ಇದನ್ನೂ ನೋಡಿ
“ಸತ್ಯದಲ್ಲಿ ಇರುವವ್ರನ್ನ ಮಾತ್ರ ಮದುವೆ ಆಗಬೇಕು” ಅನ್ನೋದರ ಅರ್ಥವೇನು?
ಮದುವೆ ವಿಷಯದಲ್ಲಿ ಒಳ್ಳೇ ತೀರ್ಮಾನಗಳನ್ನ ಮಾಡಲು ಸಹಾಯ ಮಾಡುವ ನಾಟಕ ರೂಪದ ವಿಡಿಯೋದಲ್ಲಿರುವ 2 ಸನ್ನಿವೇಶಗಳನ್ನ ನೋಡಿ.
ಯೆಹೋವ ದೇವರು ಕೊಟ್ಟಿರುವ ಆಶೀರ್ವಾದಗಳ ಮುಂದೆ ತಾನು ಮಾಡಿರುವ ತ್ಯಾಗ ಏನೇನೂ ಅಲ್ಲ ಅಂತ ಒಬ್ಬ ವ್ಯಕ್ತಿಗೆ ಯಾಕೆ ಅನಿಸಿತು ಅಂತ ನೋಡಿ.
ವಿವಾಹ ವಿಚ್ಛೇದನ ಅಥವಾ ಪ್ರತ್ಯೇಕವಾಸದ ಬಗ್ಗೆ ತೀರ್ಮಾನ ಮಾಡುವ ಒಬ್ಬ ವ್ಯಕ್ತಿ ಯಾವೆಲ್ಲಾ ವಿಷಯಗಳನ್ನ ಮನಸ್ಸಿನಲ್ಲಿಡಬೇಕು.
“‘ದೇವರು ಒಟ್ಟುಗೂಡಿಸಿದ್ದನ್ನು’ ಗೌರವಿಸಿ” (ಕಾವಲಿನಬುರುಜು, ಡಿಸೆಂಬರ್ 2018)
a ವ್ಯಭಿಚಾರದ ಕಾರಣದಿಂದ ಅಲ್ಲದೆ ಒಬ್ಬರು ತಮ್ಮ ಸಂಗಾತಿಯಿಂದ ಬೇರೆ ಇರಲು ಇರುವ ಕಾರಣಗಳ ಬಗ್ಗೆ ತಿಳಿದುಕೊಳ್ಳಲು ಟಿಪ್ಪಣಿ 4 ನೋಡಿ.
b ಕೆಲವೊಂದು ಸಂಸ್ಕೃತಿಗಳಲ್ಲಿ ಹೆತ್ತವರು ತಮ್ಮ ಮಗ ಅಥವಾ ಮಗಳಿಗೆ ಸಂಗಾತಿಯನ್ನ ಹುಡುಕೋಕೆ ಸಹಾಯ ಮಾಡ್ತಾರೆ. ಹೀಗೆ ಹುಡುಕುವವರು ಮೊದಲು ಆ ಹುಡುಗ ಅಥವಾ ಹುಡುಗಿ ಯೆಹೋವ ದೇವರನ್ನ ಪ್ರೀತಿಸುತ್ತಾರಾ ಇಲ್ವಾ ಅಂತ ನೋಡಬೇಕೇ ಹೊರತು ಅವರ ಹಿನ್ನೆಲೆ ಮತ್ತು ಆಸ್ತಿ ಅಂತಸ್ತನ್ನಲ್ಲ.
c ಒಂದುವೇಳೆ ನೀವು ಮದುವೆಯಾಗದೆ ಒಬ್ಬರ ಜೊತೆ ಜೀವನ ಮಾಡುತ್ತಿದ್ದರೆ ಅವರನ್ನ ಮದುವೆಯಾಗಬೇಕಾ ಅಥವಾ ಬಿಟ್ಟುಬಿಡಬೇಕಾ ಅನ್ನೋ ತೀರ್ಮಾನವನ್ನ ನೀವೇ ಮಾಡಬೇಕು.