-
ಯಾವುದು ಸಫಲವಾಗುವುದೋ ನಿಮಗೆ ತಿಳಿಯದುಕಾವಲಿನಬುರುಜು—2008 | ಜುಲೈ 15
-
-
ಒಂದು ಬಲೆ
15 ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುವವರ ಸಂಖ್ಯೆಗಿಂತ ಅವರ ಗುಣಮಟ್ಟ ಹೆಚ್ಚು ಮುಖ್ಯವಾಗಿದೆ. ರಾಜ್ಯದ ಬೆಳವಣಿಗೆಯ ಈ ಅಂಶಕ್ಕೆ ಸೂಚಿಸುತ್ತಾ ಯೇಸು ಒಂದು ಬಲೆಯ ಸಾಮ್ಯವನ್ನು ಕೊಟ್ಟನು. ಆತನಂದದ್ದು: “ಪರಲೋಕರಾಜ್ಯವು ಒಂದು ಬಲೆಗೆ ಹೋಲಿಕೆಯಾಗಿದೆ. ಅದನ್ನು ಸಮುದ್ರದಲ್ಲಿ ಹಾಕಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿದರು.”—ಮತ್ತಾ. 13:47.
16 ರಾಜ್ಯ ಸಾರುವಿಕೆಯ ಕೆಲಸವನ್ನು ಪ್ರತಿನಿಧಿಸುವ ಬಲೆಯು ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತದೆ. ಯೇಸು ತಿಳಿಸಿದ್ದು: “ಅದು [ಬಲೆ] ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು. ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವದು. ದೇವದೂತರು ಹೊರಟುಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆಮಾಡಿ ಅವರನ್ನು ಬೆಂಕೀಕೊಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.”—ಮತ್ತಾ. 13:48-50.
17 ಈ ಪ್ರತ್ಯೇಕಿಸುವಿಕೆಯು, ಯೇಸು ತನ್ನ ಮಹಿಮೆಯಲ್ಲಿ ಬರುವಾಗ ನಡೆಯುವ ಆಡು ಮತ್ತು ಕುರಿಗಳ ಅಂತಿಮ ನ್ಯಾಯತೀರ್ಪನ್ನು ಸೂಚಿಸುತ್ತದೋ? (ಮತ್ತಾ. 25:31-33) ಇಲ್ಲ. ಆ ಅಂತಿಮ ನ್ಯಾಯತೀರ್ಪು, ಮಹಾ ಸಂಕಟದ ಸಮಯದಲ್ಲಿ ಯೇಸುವಿನ ಬರೋಣದ ವೇಳೆ ನಡೆಯುವುದು. ಆದರೆ ಬಲೆಯ ಕುರಿತ ಸಾಮ್ಯದಲ್ಲಿ ತಿಳಿಸಲಾದ ಪ್ರತ್ಯೇಕಿಸುವಿಕೆಯು ‘ಯುಗದ’ ಇಲ್ಲವೆ ಈ ವಿಷಯ ವ್ಯವಸ್ಥೆಯ ಸಮಾಪ್ತಿಯಲ್ಲಿ ನಡೆಯುತ್ತದೆ.b ನಾವೀಗ ಯುಗದ ಸಮಾಪ್ತಿಯಲ್ಲಿ ಜೀವಿಸುತ್ತಿದ್ದೇವೆ ಮತ್ತು ಈ ದಿನಗಳೇ ಮಹಾ ಸಂಕಟಕ್ಕೆ ನಡೆಸುವವು. ಹಾಗಾದರೆ ಪ್ರತ್ಯೇಕಿಸುವ ಕೆಲಸವು ಇಂದು ಹೇಗೆ ನಡೆಯುತ್ತಿದೆ?
18 ಆಧುನಿಕ ಸಮಯಗಳಲ್ಲಿ ಮಾನವಕುಲವೆಂಬ ಸಮುದ್ರದಿಂದ ಸಾಂಕೇತಿಕವಾಗಿ ಮೀನುಗಳಂತಿರುವ ಲಕ್ಷಾಂತರ ಮಂದಿ ಯೆಹೋವನ ಸಭೆಗೆ ಆಕರ್ಷಿತರಾಗಿದ್ದಾರೆ. ಕೆಲವರು ಜ್ಞಾಪಕಾಚರಣೆಗೆ ಹಾಜರಾಗುತ್ತಾರೆ. ಇತರರು ನಮ್ಮ ಕೂಟಗಳಿಗೆ ಬರುತ್ತಾರೆ. ಇನ್ನೂ ಕೆಲವರು ಸಂತೋಷದಿಂದ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಿದ್ದಾರೆ. ಇವರೆಲ್ಲರೂ ಮುಂದೆ ನಿಜ ಕ್ರೈಸ್ತರಾಗುತ್ತಾರೋ? ಅವರೆಲ್ಲರನ್ನು “ದಡಕ್ಕೆ ಎಳೆದು” ಹಾಕಲಾಗಿರಬಹುದು ನಿಜ, ಆದರೆ “ಒಳ್ಳೆಯ ಮೀನುಗಳನ್ನು” ಮಾತ್ರ ಪುಟ್ಟಿಗಳಲ್ಲಿ ತುಂಬಿಸಲಾಗುವುದೆಂದು ಯೇಸು ತಿಳಿಸಿದನು. ಈ ಪುಟ್ಟಿಗಳು ಕ್ರೈಸ್ತ ಸಭೆಗಳನ್ನು ಪ್ರತಿನಿಧಿಸುತ್ತವೆ. ಕೆಟ್ಟ ಮೀನುಗಳಂತಿರುವವರನ್ನು ಬಿಸಾಡಿಬಿಡಲಾಗುವುದು ಮತ್ತು ಕಟ್ಟಕಡೆಗೆ ಅಂಥವರನ್ನು ಭವಿಷ್ಯದಲ್ಲಾಗುವ ನಾಶಕ್ಕೆ ಸೂಚಿಸುವ ಸಾಂಕೇತಿಕ ಬೆಂಕೀಕೊಂಡದಲ್ಲಿ ಹಾಕಲಾಗುವುದು.
19 ಪುಟ್ಟಿಗೆ ಸೇರಿಸಲ್ಪಡದ ಕೆಟ್ಟ ಮೀನುಗಳಂತೆ, ಹಿಂದೊಮ್ಮೆ ಯೆಹೋವನ ಸಾಕ್ಷಿಗಳಿಂದ ಬೈಬಲನ್ನು ಕಲಿಯುತ್ತಿದ್ದ ಅನೇಕರು ಈಗ ಅಧ್ಯಯನವನ್ನು ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೆ ಕ್ರೈಸ್ತ ಹೆತ್ತವರಿರುವ ಕೆಲವರು ಯೇಸುವಿನ ನಿಕಟ ಹಿಂಬಾಲಕರಾಗಲು ಇಷ್ಟಪಡದೆ ಒಂದೋ ಯೆಹೋವನನ್ನು ಸೇವಿಸಬೇಕೆಂಬ ನಿರ್ಣಯ ಮಾಡುವುದಿಲ್ಲ ಅಥವಾ ಸ್ವಲ್ಪ ಸಮಯ ಆತನನ್ನು ಸೇವಿಸಿ ನಂತರ ಬಿಟ್ಟುಬಿಡುತ್ತಾರೆ.c (ಯೆಹೆ. 33:32, 33) ಏನೇ ಆಗಲಿ, ಅಂತಿಮ ನ್ಯಾಯತೀರ್ಪಿನ ದಿನ ಬರುವ ಮುಂಚೆ ಪುಟ್ಟಿಯಂಥ ಸಭೆಗಳಲ್ಲಿ ಸೇರಿಸಲ್ಪಡುವಂತೆ ಎಲ್ಲ ಸಹೃದಯದ ಜನರು ಎಡೆಮಾಡಿಕೊಡಬೇಕು ಮತ್ತು ಸುರಕ್ಷಿತ ತಾಣದಲ್ಲೇ ಉಳಿಯಬೇಕು.
-
-
ಯಾವುದು ಸಫಲವಾಗುವುದೋ ನಿಮಗೆ ತಿಳಿಯದುಕಾವಲಿನಬುರುಜು—2008 | ಜುಲೈ 15
-
-
20 ಹಾಗಾದರೆ, ಬೆಳವಣಿಗೆಯ ಕುರಿತಾದ ಯೇಸುವಿನ ಸಾಮ್ಯಗಳ ಚುಟುಕಾದ ವಿಮರ್ಶೆಯಿಂದ ನಾವೇನನ್ನು ಕಲಿತೆವು? ಮೊದಲನೆಯದಾಗಿ, ಸಾಸಿವೆಕಾಳಿನ ಬೆಳವಣಿಗೆಯಂತೆ, ಭೂಮಿಯಲ್ಲಿ ರಾಜ್ಯ ಸಂದೇಶಕ್ಕೆ ಕಿವಿಗೊಡುವವರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಯೆಹೋವನ ಕೆಲಸವು ವೃದ್ಧಿಯಾಗುವುದನ್ನು ಯಾವುದೂ ತಡೆಯಲಾರದು! (ಯೆಶಾ. 54:17) ಅಲ್ಲದೆ, ‘ಮರದ ನೆರಳಿನಲ್ಲಿ ವಾಸಮಾಡುವದಕ್ಕೆ’ ಬರುವವರಿಗೆ ಆಧ್ಯಾತ್ಮಿಕ ಸಂರಕ್ಷಣೆ ದೊರಕಿದೆ. ಎರಡನೆಯದಾಗಿ, ಬೆಳೆಸುವವನು ದೇವರೇ. ಕಣ್ಣಿಗೆ ಮರೆಯಾಗಿರುವ ಹುಳಿಯು ಹೇಗೆ ಹಿಟ್ಟನ್ನೆಲ್ಲಾ ವ್ಯಾಪಿಸಿಕೊಳ್ಳುತ್ತದೋ ಹಾಗೆಯೇ ಈ ಬೆಳವಣಿಗೆ ನಮ್ಮ ಕಣ್ಣಿಗೆ ಗೋಚರವಾಗದಿದ್ದರೂ ಅಥವಾ ನಮಗೆ ಅರ್ಥವಾಗದಿದ್ದರೂ, ಅದು ಖಂಡಿತ ನಡೆಯುತ್ತಿದೆ! ಮೂರನೆಯದಾಗಿ, ಪ್ರತಿಕ್ರಿಯೆ ತೋರಿಸುವ ಎಲ್ಲರೂ ಒಳ್ಳೆಯವರಾಗಿ ಪರಿಣಮಿಸಲಿಕ್ಕಿಲ್ಲ. ಕೆಲವರು ಯೇಸುವಿನ ಸಾಮ್ಯದ ಕೆಟ್ಟ ಮೀನುಗಳಂತಿರುವರು.
-
-
ಯಾವುದು ಸಫಲವಾಗುವುದೋ ನಿಮಗೆ ತಿಳಿಯದುಕಾವಲಿನಬುರುಜು—2008 | ಜುಲೈ 15
-
-
b ಮತ್ತಾಯ 13:39-43 ರಾಜ್ಯ ಸಾರುವ ಕೆಲಸದ ಬೇರೊಂದು ಅಂಶಕ್ಕೆ ಸೂಚಿಸುತ್ತದಾದರೂ, ಆ ಸಾಮ್ಯದ ನೆರವೇರಿಕೆಯ ಸಮಯಾವಧಿಯು ಬಲೆಯ ಕುರಿತ ಸಾಮ್ಯದ ನೆರವೇರಿಕೆಯ ಸಮಯದೊಂದಿಗೆ ತಾಳೆಬೀಳುತ್ತದೆ. ಈ ಎರಡೂ ಸಾಮ್ಯಗಳು “ಯುಗದ ಸಮಾಪ್ತಿಯ” ಸಮಯಾವಧಿಯಲ್ಲಿ ನೆರವೇರುತ್ತವೆ. ಬಿತ್ತುವ ಮತ್ತು ಕೊಯ್ಯುವ ಕೆಲಸವು ಹೇಗೆ ಈ ಸಮಯಾವಧಿಯಲ್ಲಿ ನಡೆಯುತ್ತಾ ಇರುತ್ತದೋ ಹಾಗೆಯೇ ಸಾಂಕೇತಿಕ ಮೀನುಗಳನ್ನು ಪ್ರತ್ಯೇಕಿಸುವ ಕೆಲಸವೂ ನಡೆಯುತ್ತಿರುತ್ತದೆ.—2000, ಅಕ್ಟೋಬರ್ 15ರ ಕಾವಲಿನಬುರುಜು, ಪುಟ 25-26; ಒಬ್ಬನೇ ಸತ್ಯದೇವರನ್ನು ಆರಾಧಿಸಿರಿ, ಪುಟ 178-181, ಪ್ಯಾರ 8-11.
-