-
ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದವನುಅವರ ನಂಬಿಕೆಯನ್ನು ಅನುಕರಿಸಿ
-
-
ತಿದ್ದಲ್ಪಟ್ಟಾಗಲೂ ಯೇಸುವಿಗೆ ನಿಷ್ಠನು
11. ಯೇಸು ತನ್ನ ಹಿಂಬಾಲಕರನ್ನು ಎಲ್ಲಿಗೆ ಕರೆದೊಯ್ದನು? (ಪಾದಟಿಪ್ಪಣಿ ಸಹ ನೋಡಿ.)
11 ಯೇಸು ತುಂಬ ಕಾರ್ಯಮಗ್ನನಾಗಿದ್ದ ಆ ಸಂದರ್ಭದ ಸ್ವಲ್ಪ ಸಮಯಾನಂತರ ಅವನು ತನ್ನ ಅಪೊಸ್ತಲರು ಮತ್ತು ಕೆಲವು ಶಿಷ್ಯರೊಂದಿಗೆ ಕೈಸರೈಯ ಫಿಲಿಪ್ಪಿಗೆ ಸಮೀಪದ ಹಳ್ಳಿಗಳಿಗೆ ಹೊರಟನು.b ಕಾಲ್ನಡಿಗೆಯಲ್ಲಿ ಹೋಗಲು ಅವರಿಗೆ ಕೆಲವು ದಿನಗಳೇ ತಗಲಿರಬೇಕು. ಕೈಸರೈಯ ಫಿಲಿಪ್ಪಿಯಿಂದ ಸ್ವಲ್ಪ ದೂರದಲ್ಲಿ ಅಂದರೆ ವಾಗ್ದತ್ತ ದೇಶದ ಉತ್ತರದಿಕ್ಕಿನ ಮೂಲೆಯಲ್ಲಿ ಹೆರ್ಮೋನ್ ಬೆಟ್ಟವಿತ್ತು. ಅದರ ಹಿಮಾವೃತ ಶಿಖರವು ಗಲಿಲಾಯ ಸಮುದ್ರದಿಂದ ಒಮ್ಮೊಮ್ಮೆ ಕಾಣಿಸುತ್ತಿತ್ತು. ಯೇಸು ಮತ್ತು ಅವನ ಹಿಂಬಾಲಕರು ಪ್ರಯಾಣ ಮಾಡುತ್ತಾ ಕೈಸರೈಯ ಫಿಲಿಪ್ಪಿ ಬಳಿ ಎತ್ತರ ಪ್ರದೇಶದಲ್ಲಿದ್ದ ಹಳ್ಳಿಗಳಿಗೆ ಬಂದರು. ಅಲ್ಲಿಂದ ಹೆರ್ಮೋನ್ ಬೆಟ್ಟ ಪೂರ್ಣವಾಗಿ ಕಾಣುತ್ತಿತ್ತು. ದಕ್ಷಿಣಕ್ಕೆ ವಾಗ್ದತ್ತ ದೇಶದ ಬಹುಭಾಗ ಕಾಣುತ್ತಿತ್ತು. ಅದೊಂದು ರಮಣೀಯ ದೃಶ್ಯ. ಕಣ್ಮನ ತಣಿಸುವ ಇಂಥ ಮನೋಹರ ಸುತ್ತುಗಟ್ಟಿನಲ್ಲಿ ಯೇಸು ತನ್ನ ಹಿಂಬಾಲಕರಿಗೆ ಒಂದು ಮುಖ್ಯ ಪ್ರಶ್ನೆ ಕೇಳಿದನು.
12, 13. (1) ತಾನು ಯಾರೆಂಬುದರ ಬಗ್ಗೆ ಜನರ ಅಭಿಪ್ರಾಯವೇನೆಂದು ಯೇಸು ತಿಳಿಯಲಿಚ್ಛಿಸಿದ್ದು ಏಕೆ? (2) ಪೇತ್ರ ಯೇಸುವಿಗೆ ಕೊಟ್ಟ ಉತ್ತರದಲ್ಲಿ ಅವನ ಯಥಾರ್ಥ ನಂಬಿಕೆ ಹೇಗೆ ತೋರಿಬರುತ್ತದೆ?
12 “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಯೇಸು ಕೇಳಿದ. ಅವನ ಚುರುಕು ಕಣ್ಣುಗಳನ್ನು ಪೇತ್ರ ನೋಡುತ್ತಿರುವುದನ್ನು ಊಹಿಸಿಕೊಳ್ಳಿ. ತನ್ನ ಕರ್ತನಲ್ಲಿದ್ದ ದಯೆ, ಬುದ್ಧಿವಂತಿಕೆಯನ್ನು ಈ ಸಂದರ್ಭದಲ್ಲೂ ಪೇತ್ರ ಗ್ರಹಿಸಿದ. ಯೇಸುವಿಗೆ ಜನರು ತನ್ನನ್ನು ಯಾರೆಂದು ನೆನಸಿದ್ದಾರೆ, ತಾನು ಮಾಡಿದ ಹೇಳಿದ ವಿಷಯಗಳಿಂದ ಯಾರೆಂದು ಗುರುತಿಸಿದ್ದಾರೆ ಎಂದು ತಿಳಿಯುವ ತವಕವಿತ್ತು. ಆಗ ಶಿಷ್ಯರು ಹೆಚ್ಚಿನ ಜನರಿಗಿದ್ದ ತಪ್ಪಭಿಪ್ರಾಯಗಳನ್ನು ಒಂದೊಂದಾಗಿ ಹೇಳಿದರು. ತನ್ನ ಅತ್ಯಾಪ್ತ ಹಿಂಬಾಲಕರು ಸಹ ಅಂಥದ್ದೇ ತಪ್ಪು ನಿರ್ಣಯಕ್ಕೆ ಬಂದಿದ್ದಾರೋ ಎಂದಾತ ತಿಳಿಯಲಿಚ್ಛಿಸಿದ. ಹಾಗಾಗಿ “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದ.—ಲೂಕ 9:18-20.
-
-
ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದವನುಅವರ ನಂಬಿಕೆಯನ್ನು ಅನುಕರಿಸಿ
-
-
b ಈ ಪ್ರಯಾಣ 50 ಕಿ.ಮೀ. ದೂರದ್ದಾಗಿತ್ತು. ಅವರು ಗಲಿಲಾಯ ಸಮುದ್ರ ತೀರದಿಂದ ಪ್ರಯಾಣ ಆರಂಭಿಸಿದರು. ಇದು ಸಮುದ್ರ ಮಟ್ಟದಿಂದ 700 ಅಡಿ ಕೆಳಗಿತ್ತು. ಹೋದ ಸ್ಥಳ ಸಮುದ್ರ ಮಟ್ಟದಿಂದ 1,150 ಅಡಿ ಎತ್ತರದಲ್ಲಿತ್ತು. ಪ್ರಕೃತಿ ಸೌಂದರ್ಯವನ್ನು ಮೈವೆತ್ತಿ ನಿಂತ ರಮಣೀಯ ಪ್ರದೇಶಗಳನ್ನು ಅವರು ಹಾದುಹೋದರು.
-