-
ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿಕಾವಲಿನಬುರುಜು—2000 | ಏಪ್ರಿಲ್ 1
-
-
6. (ಎ) ಯೇಸು ರೂಪಾಂತರವನ್ನು ಏಕೆ ಒಂದು ದರ್ಶನವೆಂದು ಕರೆದನು? (ಬಿ) ರೂಪಾಂತರವು ಯಾವುದರ ಮುನ್ನೋಟವಾಗಿತ್ತು?
6 ಈ ಭಯಚಕಿತಗೊಳಿಸುವ ಘಟನೆಯು, ಯೇಸು ಮತ್ತು ಅವನ ಮೂವರು ಅಪೊಸ್ತಲರು ಬಹುಶಃ ಆ ರಾತ್ರಿ ತಂಗಿದ್ದ ಹರ್ಮೋನ್ ಬೆಟ್ಟದ ಸಮತಟ್ಟಾದ ಪ್ರದೇಶದಲ್ಲಿ ನಡೆದಿರಬೇಕು. ಈ ರೂಪಾಂತರವು ರಾತ್ರಿಯ ವೇಳೆಯಲ್ಲಿ ನಡೆದಿರಬಹುದು, ಆದುದರಿಂದಲೇ ಅದು ಮತ್ತಷ್ಟೂ ಸುಸ್ಪಷ್ಟವಾಗಿತ್ತು. ಯೇಸು ಅದನ್ನು ಒಂದು “ದರ್ಶನ”ವೆಂದು ಕರೆಯಲು ಇದು ಒಂದು ಕಾರಣವಾಗಿದೆ: ಬಹಳ ಸಮಯದ ಹಿಂದೆಯೇ ಮೃತರಾಗಿದ್ದ ಮೋಶೆ ಮತ್ತು ಎಲೀಯರು ಅಕ್ಷರಾರ್ಥವಾಗಿ ಅಲ್ಲಿ ಉಪಸ್ಥಿತರಿರಲಿಲ್ಲ. ವಾಸ್ತವದಲ್ಲಿ ಕೇವಲ ಕ್ರಿಸ್ತನು ಮಾತ್ರ ಅಲ್ಲಿ ನಿಜವಾಗಿಯೂ ಉಪಸ್ಥಿತನಿದ್ದನು. (ಮತ್ತಾಯ 17:8, 9) ಆ ಕಣ್ಣುಕುಕ್ಕುವಂತಹ ಪ್ರದರ್ಶನವು, ಪೇತ್ರ, ಯಾಕೋಬ ಮತ್ತು ಯೋಹಾನರಿಗೆ ರಾಜ್ಯಾಧಿಕಾರದಲ್ಲಿ ಯೇಸುವಿನ ಮಹಿಮಾಭರಿತ ಸಾನ್ನಿಧ್ಯದ ಪ್ರೇಕ್ಷಣೀಯ ಮುನ್ನೋಟವನ್ನು ಕೊಟ್ಟಿತು. ಮೋಶೆ ಮತ್ತು ಎಲೀಯರು, ಯೇಸುವಿನ ಅಭಿಷಿಕ್ತ ಜೊತೆ ಬಾಧ್ಯಸ್ಥರನ್ನು ಚಿತ್ರಿಸಿದರು. ಮತ್ತು ಆ ದರ್ಶನವು, ಯೇಸುವಿನ ರಾಜ್ಯದ ಹಾಗೂ ಅವನ ಭಾವೀ ರಾಜತ್ವದ ಕುರಿತು ಅವನು ನೀಡಿದ ಸಾಕ್ಷ್ಯವನ್ನು ಪ್ರಬಲವಾಗಿ ದೃಢಪಡಿಸಿತು.
-
-
ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿಕಾವಲಿನಬುರುಜು—2000 | ಏಪ್ರಿಲ್ 1
-
-
8. (ಎ) ದೇವರು ತನ್ನ ಪುತ್ರನ ಕುರಿತಾಗಿ ಮಾಡಿದ ಘೋಷಣೆಯು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸಿತು? (ಬಿ) ರೂಪಾಂತರದಲ್ಲಿ ಕಂಡುಬಂದ ಮೋಡವು ಏನನ್ನು ಸೂಚಿಸಿತು?
8 ಅತಿ ಪ್ರಾಮುಖ್ಯ ಸಂಗತಿಯು ದೇವರ ಈ ಘೋಷಣೆಯೇ ಆಗಿತ್ತು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” ಈ ಹೇಳಿಕೆಯು, ದೇವರಿಂದ ಸಿಂಹಾಸನಾರೂಢನಾಗಿರುವ ಅರಸನಾದ ಯೇಸುವಿನ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಈತನಿಗೆ ಸರ್ವ ಸೃಷ್ಟಿಯೂ ವಿಧೇಯತೆಯನ್ನು ತೋರಿಸಬೇಕು. ಕವಿದಿದ್ದ ಮೋಡವು, ಈ ದರ್ಶನದ ನೆರವೇರಿಕೆಯು ಅದೃಶ್ಯವಾಗಿರುವುದೆಂಬುದನ್ನು ಸೂಚಿಸಿತು. ಆದರೆ ರಾಜ್ಯಾಧಿಕಾರದಲ್ಲಿ ಯೇಸುವಿನ ಅದೃಶ್ಯ ಸನ್ನಿಧಿಯ “ಸೂಚನೆ”ಯನ್ನು ಗ್ರಹಿಸಬಲ್ಲವರ ತಿಳುವಳಿಕೆಯ ಕಣ್ಣುಗಳಿಗೆ ಮಾತ್ರ ಅದು ಗೋಚರವಾಗಿರಲಿತ್ತು. (ಮತ್ತಾಯ 24:3) ವಾಸ್ತವದಲ್ಲಿ, ತಾನು ಸತ್ತವರಿಂದ ಎಬ್ಬಿಸಲ್ಪಡುವ ವರೆಗೆ ಈ ದರ್ಶನವನ್ನು ಯಾರಿಗೂ ಹೇಳಬೇಡಿ ಎಂದು ಯೇಸು ಅವರಿಗೆ ಕೊಟ್ಟ ಸೂಚನೆಯು, ಅವನ ಪುನರುತ್ಥಾನದ ನಂತರವೇ ಅವನು ಉನ್ನತಕ್ಕೇರಿಸಲ್ಪಡುವನು ಮತ್ತು ವೈಭವೀಕರಿಸಲ್ಪಡುವನು ಎಂಬುದನ್ನು ತೋರಿಸುತ್ತದೆ.
-