-
ದ್ರಾಕ್ಷೆತೋಟದಲ್ಲಿ ಕೆಲಸಗಾರರುಅತ್ಯಂತ ಮಹಾನ್ ಪುರುಷ
-
-
“ಬಹು ಮಂದಿ ಮೊದಲಿನವರು,” ಯೇಸುವು ಈಗಾಗಲೇ ಹೇಳಿದ್ದನು, “ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು.” ಈಗ ಅವನು ಇದನ್ನು ಒಂದು ಕಥೆಯನ್ನು ಹೇಳುವದರ ಮೂಲಕ ಉದಾಹರಿಸುತ್ತಾನೆ. “ಪರಲೋಕ ರಾಜ್ಯವು” ಅವನು ಆರಂಭಿಸುವದು, “ಒಬ್ಬ ಮನೆಯ ಯಜಮಾನನಿಗೆ ಹೋಲಿಕೆಯಾಗಿದೆ. ಅವನು ತನ್ನ ದ್ರಾಕ್ಷೇತೋಟಕ್ಕೆ ಕೂಲೀ ಆಳುಗಳನ್ನು ಕರೆಯುವದಕ್ಕೆ ಬೆಳಿಗ್ಗೆ ಹೊರಟನು.”
-
-
ದ್ರಾಕ್ಷೆತೋಟದಲ್ಲಿ ಕೆಲಸಗಾರರುಅತ್ಯಂತ ಮಹಾನ್ ಪುರುಷ
-
-
ಮನೆಯ ಯಜಮಾನನು ಅಥವಾ ದ್ರಾಕ್ಷೇತೋಟದ ಧನಿಯು ಯೆಹೋವ ದೇವರಾಗಿದ್ದಾನೆ, ಮತ್ತು ಇಸ್ರಾಯೇಲ್ ಜನಾಂಗವು ಆ ದ್ರಾಕ್ಷೇತೋಟವಾಗಿದೆ. ದ್ರಾಕ್ಷೇತೋಟದಲ್ಲಿ ಕೂಲೀ ಆಳುಗಳು ನಿಯಮಶಾಸ್ತ್ರದೊಳಗೆ ತರಲ್ಪಟ್ಟ ಜನರಾಗಿದ್ದಾರೆ; ವಿಶೇಷವಾಗಿ ಅವರು ಅಪೊಸ್ತಲರ ದಿನಗಳಲ್ಲಿ ಜೀವಿಸುತ್ತಿದ್ದ ಯೆಹೂದ್ಯರಾಗಿರುತ್ತಾರೆ. ಪೂರ್ಣದಿನದ ಕೆಲಸಗಾರರೊಡನೆ ಮಾತ್ರ ಸಂಬಳದ ಕರಾರನ್ನು ಮಾಡಲಾಗಿತ್ತು. ಒಂದು ದಿನದ ಕೆಲಸಕ್ಕೆ ಕೂಲಿಯು ಒಂದು ಪಾವಲಿಯಾಗಿತ್ತು. “ಮೂರನೆಯ ಘಂಟೆ” ಅಂದರೆ ಬೆಳಿಗ್ಯೆ 9.00 ಆಗಿರುವದರಿಂದ, ಮೂರನೆಯ, ಆರನೆಯ, ಒಂಭತ್ತನೆಯ ಮತ್ತು ಹನ್ನೊಂದನೆಯ ಘಂಟೆಗೆ ಕೆಲಸಕ್ಕೆ ಕರೆಯಲ್ಪಟ್ಟವರು, ಯಥಾಪ್ರಕಾರ ಕೇವಲ 9, 6, 3, ಮತ್ತು 1 ಘಂಟೆ ಕೆಲಸಮಾಡಿರುತ್ತಾರೆ.
-