ದೈವಿಕ ದಾನಿಗಳಿಗೆ ನಿತ್ಯ ಸಂತೋಷವು ಕಾದಿದೆ
“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಏಕ-ಜಾತ ಪುತ್ರನನ್ನು ಕೊಟ್ಟನು, ಯಾಕಂದರೆ ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯುವಂತೆಯೇ.”—ಯೋಹಾನ 3:16,
1, 2. (ಎ) ಅತ್ಯಂತ ಮಹಾನ್ ದಾನಿಯು ಯಾರು, ಮತ್ತು ಮಾನವ ಕುಲಕ್ಕೆ ಆತನ ಅತ್ಯಂತ ಮಹಾ ದಾನವು ಯಾವುದು? (ಬಿ) ತನ್ನ ಮಹತ್ತಾದ ದಾನವನ್ನು ಕೊಡುವಲ್ಲಿ, ಯಾವ ಗುಣವನ್ನು ದೇವರು ಪ್ರದರ್ಶಿಸಿದನು?
ಯೆಹೋವ ದೇವರು ಎಲ್ಲರಿಗಿಂತಲೂ ಮಹಾನ್ ದಾನಿಯಾಗಿರುತ್ತಾನೆ. ಭೂಪರಲೋಕಗಳ ನಿರ್ಮಾಣಿಕನಾದ ಆತನ ಕುರಿತೇ ಕ್ರೈಸ್ತ ಶಿಷ್ಯನಾದ ಯಾಕೋಬನು ಬರೆದದ್ದು: “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಬರುತ್ತವೆ ಯಾಕಂದರೆ ಅವು ದಿವ್ಯ ಬೆಳಕಿನ ತಂದೆಯಾದಾತನಿಂದ ಇಳಿದು ಬರುತ್ತವೆ ಮತ್ತು ಆತನಲ್ಲಿ ನೆರಳಿನ ಓಲಿನಷ್ಟು ವ್ಯತ್ಯಾಸ ಸೂಚನೆಯೂ ಇಲ್ಲ.” (ಯಾಕೋಬ 1:17, NW) ಕೊಡಶಕ್ತನಾದವುಗಳಲ್ಲಿ ಅತ್ಯಂತ ಮಹತ್ತಾದ ದಾನವನ್ನು ಕೊಟ್ಟವನೂ ಯೆಹೋವನಾಗಿರುತ್ತಾನೆ. ಮಾನವ ಕುಲಕ್ಕೆ ಆತನ ಮಹಾ ದಾನದ ಕುರಿತು ಹೇಳಲ್ಪಟ್ಟದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಏಕ-ಜಾತ ಪುತ್ರನನ್ನು ಕೊಟ್ಟನು, ಯಾಕಂದರೆ ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯುವಂತೆಯೇ.”—ಯೋಹಾನ 3:16, NW.
2 ಆ ಮಾತುಗಳನ್ನು ನುಡಿದವನು ಬೇರೆ ಯಾರೂ ಅಲ್ಲದೆ ದೇವರ ಏಕ-ಜಾತ ಪುತ್ರನೇ ಆಗಿರುತ್ತಾನೆ. ಒಬ್ಬ ತಂದೆಯ ಏಕ-ಜಾತ ಪುತ್ರನು ಸ್ವಾಭಾವಿಕವಾಗಿಯೇ ಅಂಥ ಒಬ್ಬ ತಂದೆಯನ್ನು ತನ್ನ ಜೀವದ ಮೂಲವಾಗಿ ಮತ್ತು ತನ್ನ ಜೀವದಾನಂದಕ್ಕಾಗಿ ಒದಗಿಸಿದ ಎಲ್ಲಾ ಒಳ್ಳೇ ವಿಷಯಗಳಿಗಾಗಿ, ಗಣ್ಯಮಾಡುವನು ಮತ್ತು ಪ್ರೀತಿಸುವನು. ಆದರೆ ದೇವರ ಪ್ರೀತಿಯು ಈ ಒಬ್ಬ ಮಗನಿಗಾಗಿ ಮಾತ್ರವೇ ಸೀಮಿತವಾಗಿರಲಿಲ್ಲ. ಅಂಥ ಒಂದು ದಾನವನ್ನು ತನ್ನ ಸೃಷ್ಟಿಜೀವಿಗಳಲ್ಲಿ ಇತರರ ಕಡೆಗೂ ವಿಸ್ತರಿಸುವುದು ದೇವರ ಪ್ರೀತಿ ತೋರಿಸುವಿಕೆಯನ್ನು ಒಂದು ಅಸಾಧಾರಣ ಮಟ್ಟಕ್ಕೆ ಏರಿಸುವುದು. (ರೋಮಾಪುರ 5:8-10ಕ್ಕೆ ಹೋಲಿಸಿ.) ಈ ಸಂದರ್ಭದಲ್ಲಿ “ಕೊಟ್ಟನು” ಎಂಬ ಶಬ್ದದ ನಿಜಾರ್ಥವು ಏನೆಂದು ನಾವು ಪರೀಕ್ಷಿಸುವಲ್ಲಿ ಅದು ಇನ್ನಷ್ಟು ಹೆಚ್ಚಾಗಿ ತೋರಿಬರುತ್ತದೆ.
“ತನ್ನ ಪ್ರೀತಿಯ ಕುಮಾರನ” ದೇವರ ದಾನ
3. “ದೇವರ ಪ್ರೀತಿಯ ಕುಮಾರ”ನಲ್ಲದೆ ಬೇರೆ ಯಾರು ಸ್ವರ್ಗೀಯ ತಂದೆಯ ಪ್ರೀತಿಯನ್ನು ಆನಂದಿಸಿದ್ದರು?
3 ಒಂದು ಅನಿರ್ದೇಶಿತ ಕಾಲಾವಧಿಯ ತನಕ ದೇವರು ತನ್ನ ಏಕ-ಜಾತ ಪುತ್ರನೊಂದಿಗೆ—“ತನ್ನ ಪ್ರೀತಿಯ ಕುಮಾರ”ನೊಂದಿಗೆ—ಪರಲೋಕದಲ್ಲಿ ವೈಯಕ್ತಿಕ ಸಹವಾಸದಲ್ಲಿ ಆನಂದಿಸಿದ್ದನು. (ಕೊಲೊಸ್ಸೆ 1:13) ಆ ಸಮಯದಲ್ಲೆಲ್ಲಾ, ತಂದೆ ಮತ್ತು ಮಗನು ಒಬ್ಬರಿಗೊಬ್ಬರು ಪ್ರೀತಿ ಮತ್ತು ವಾತ್ಸಲ್ಯದಲ್ಲಿ ಎಷ್ಟು ಬೆಳೆದಿದ್ದರೆಂದರೆ ಅವರಂಥ ಪರಸ್ಪರ ಪ್ರೀತಿಯು ಬೇರೆ ಯಾವುದೂ ಅಸ್ತಿತ್ವದಲ್ಲಿರಲಿಲ್ಲ. ತನ್ನ ಏಕ-ಜಾತ ಪುತ್ರನ ಮೂಲಕವಾಗಿ ದೇವರು ಅಸ್ತಿತ್ವಕ್ಕೆ ತಂದ ಬೇರೆ ಸೃಷ್ಟಿಜೀವಿಗಳು ಸಹಾ ಯೆಹೋವನ ದೈವಿಕ ಕುಟುಂಬದ ಸದಸ್ಯರೋಪಾದಿ ಪ್ರೀತಿಸಲ್ಪಟ್ಟರು. ಹೀಗೆ ಪ್ರೀತಿಯು ದೇವರ ಇಡೀ ಕುಟುಂಬವನ್ನು ಆಳಿತು. “ದೇವರು ಪ್ರೀತಿಸ್ವರೂಪಿ” ಎಂದು ಪವಿತ್ರ ಶಾಸ್ತ್ರದಲ್ಲಿ ಸರಿಯಾಗಿಯೇ ತಿಳಿಸಲ್ಪಟ್ಟಿದೆ. (1 ಯೋಹಾನ 4:8) ಆದುದರಿಂದ, ಆ ದೆವಿಕ ಕುಟುಂಬವು ತಂದೆಯಾದ ಯೆಹೋವ ದೇವರಿಂದ ಪ್ರೀತಿಸಲ್ಪಟ್ಟವರಿಂದ ಮಾಡಲ್ಪಟ್ಟಿರುವುದು.
4. ದೇವರು ತನ್ನ ಕುಮಾರನನ್ನು ಕೊಟ್ಟದ್ದರಲ್ಲಿ ವೈಯಕ್ತಿಕ ಸಹವಾಸ ನಷ್ಟಕ್ಕಿಂತ ಹೆಚ್ಚು ಒಳಗೂಡಿರುವದು ಹೇಗೆ, ಮತ್ತು ಯಾರ ಪರವಾಗಿ?
4 ಯೆಹೋವ ಮತ್ತು ಆತನ ಜ್ಯೇಷ್ಠ ಪುತ್ರನ ನಡುವೆ ಎಷ್ಟು ಆಪ್ತ ಬಂಧಗಳು ಇದ್ದವೆಂದರೆ ಅಂಥ ಅತ್ಯಾಪ್ತ ಸಹವಾಸವನ್ನು ತಮಗಾಗಿ ತಪ್ಪಿಸುವುದು ತಾನೇ ಒಂದು ಮಹತ್ತಾದ ನಷ್ಟವಾಗಿರುವುದು. (ಕೊಲೊಸ್ಸೆ 1:15) ಆದರೆ “ತನ್ನ ಪ್ರೀತಿಯ ಕುಮಾರನ” ವೈಯಕ್ತಿಕ ಸಹವಾಸವನ್ನು ತನಗಾಗಿ ತಪ್ಪಿಸುವುದಕ್ಕಿಂತಲೂ, ಈ ಏಕ-ಜಾತ ಪುತ್ರನ ‘ಕೊಡುವಿಕೆ’ಯು ದೇವರಿಗೆ ಹೆಚ್ಚು ಮಹತ್ವಾರ್ಥದಲ್ಲಿತ್ತು. ಯೆಹೋವನು ತನ್ನ ಮಗನಿಗೆ ಮರಣವನ್ನು ಅನುಭವಿಸಲು ಮತ್ತು ಹೀಗೆ ದೇವರ ವಿಶ್ವ ಕುಟುಂಬದ ಒಬ್ಬ ಸದಸ್ಯನಾಗಿ ಅವನ ಅಸ್ತಿತ್ವವನ್ನು ತಾತ್ಕಾಲಿಕವಾಗಿ ತೆಗೆದುಬಿಡಲು ಅನುಮತಿಸುವ ಮಟ್ಟಿಗೂ ಅದು ಹೋಯಿತು. ಈ ಮರಣವು ದೇವರ ಕುಟುಂಬದ ಸದಸ್ಯರು ಎಂದೂ ಆಗಿರದಿದವ್ದರ ಪರವಾಗಿ ಇತ್ತು. ಯಾರನ್ನು ಶಾಸ್ತ್ರವಚನಗಳು “ದೇವರ ಸೃಷ್ಟಿಯ ಪ್ರಾರಂಭನು” ಎಂದು ಸಹಾ ಗುರುತಿಸುತ್ತದೋ ಆ ತನ್ನ ಏಕ-ಜಾತ ಪುತ್ರನನ್ನು, ಮಾನವ ಕುಲದ ಅಗತ್ಯತೆಯ ಪರವಾಗಿ ಕೊಟ್ಟದಕ್ಕಿಂತ ಮಹತ್ತಾದ ಬೇರೆ ಯಾವ ದಾನವನ್ನೂ ಯೆಹೋವನು ಮಾಡ ಸಾಧ್ಯವಿರಲಿಲ್ಲ.—ಪ್ರಕಟನೆ 3:14.
5. (ಎ) ಆದಾಮನ ಸಂತತಿಯ ಪಾಡು ಏನಾಗಿತ್ತು, ಮತ್ತು ದೇವರ ನಂಬಿಗಸ್ತ ಪುತ್ರರಲ್ಲಿ ಒಬ್ಬನ ವಿಷಯದಲ್ಲಿ ದೇವರ ನ್ಯಾಯವು ಏನನ್ನು ಆವಶ್ಯಪಡಿಸಿತು? (ಬಿ) ದೇವರ ಸ್ವಂತ ವಿಷಯದಲ್ಲಿ ಆತನ ಮಹತ್ತಾದ ದಾನವು ಏನನ್ನು ಅವಶ್ಯಪಡಿಸಿತು?
5 ಪ್ರಥಮ ಮಾನವ ಜೊತೆಯಾದ ಆದಾಮ ಮತ್ತು ಹವ್ವರು, ದೇವರ ಕುಟುಂಬದ ಸದಸ್ಯರೋಪಾದಿ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ತಪ್ಪಿಹೋದರು. ದೇವರ ವಿರುದ್ಧವಾಗಿ ಪಾಪ ಮಾಡಿದ ಕಾರಣ ಏದೆನ್ ತೋಟದಿಂದ ಹೊರಗಟ್ಟಲ್ಪಟ್ಟ ಮೇಲೆ, ಅವರು ತಮ್ಮನ್ನು ಆ ಸ್ಥಿತಿಯಲ್ಲಿ ಕಂಡುಕೊಂಡರು. ಅವರು ಇನ್ನು ಮುಂದೆ ದೇವರ ಕುಟುಂಬದ ಸದಸ್ಯರಾಗಿರಲಿಲ್ಲ ಮಾತ್ರವೇ ಅಲ್ಲ ಮರಣದ ಶಿಕ್ಷೆಯ ಕೆಳಗೆ ಸಹಾ ಅವರು ಬಂದಿದ್ದರು. ಆದುದರಿಂದ, ತಮ್ಮ ಸಂತತಿಯನ್ನು ದೇವರ ಕುಟುಂಬದ ಸದಸ್ಯರಾಗಿ ದೇವರ ಮೆಚ್ಚಿಗೆಗೆ ಪುನಃಸ್ಥಾಪಿಸಿಕೊಳ್ಳುವ ಸಮಸ್ಯೆ ಮಾತ್ರವೇ ಅಲ್ಲ ಮರಣದ ದೈವಿಕ ಶಿಕ್ಷೆಯನ್ನು ಅವರಿಂದ ತೆಗೆದು ಹಾಕುವುದು ಕೂಡಾ ಸೇರಿತ್ತು. ದೈವಿಕ ನ್ಯಾಯದ ಕಾರ್ಯಗತಿಗನುಸಾರ, ಯೆಹೋವನ ನಂಬಿಗಸ್ತ ಪುತ್ರರಲ್ಲಿ ಒಬ್ಬನು ಅದಕ್ಕಾಗಿ ಒಂದು ಬದಲಿಯಾಗಿ ಅಥವಾ ಈಡಾಗಿ ಮರಣವನ್ನು ಅನುಭವಿಸುವುದನ್ನು ಆವಶ್ಯಪಡಿಸಿತು. ಆದಕಾರಣ ಮಹತ್ವದ ಪ್ರಶ್ನೆ ಏನಂದರೆ, ಆಯ್ದುಕೊಂಡ ಆ ವ್ಯಕ್ತಿಯು ಪಾಪಿ ಮಾನವರ ಪರವಾಗಿ ಅಂಥ ಒಂದು ಬದಲಿ ಮರಣವನ್ನು ಅನುಭವಿಸಲು ಸಿದ್ಧನಾಗಿರುವನೋ? ಅದಲ್ಲದೆ, ಇದನ್ನು ಕಾರ್ಯರೂಪಕ್ಕೆ ತರಲು ಸರ್ವಶಕ್ತನಾದ ದೇವರಿಗೆ ಒಂದು ಅದ್ಭುತವನ್ನು ಮಾಡುವುದನ್ನು ಅದು ಅವಶ್ಯಪಡಿಸುವುದು. ಒಂದು ಅಸದೃಶ್ಯ ಮಟ್ಟದ ದೈವಿಕ ಪ್ರೀತಿಯ ಒಂದು ಅಭಿವ್ಯಂಜಕವನ್ನು ಸಹಾ ಅದ ಕೇಳಿಕೊಳ್ಳಲಿಕ್ಕಿತ್ತು.—ರೋಮಾಪುರ 8:32.
6. ಪಾಪಿ ಮಾನವರನ್ನು ಒಳಗೂಡಿದ್ದ ಪರಿಸ್ಥಿತಿಯ ಅಗತ್ಯತೆಗಳ ಅಳತೆಗೋಲನ್ನು ದೇವ ಕುಮಾರನು ಹೇಗೆ ಮುಟ್ಟಶಕ್ತನಾಗಿದ್ದನು, ಈ ವಿಷಯದಲ್ಲಿ ಅವನು ಅಂದದೇನ್ದು?
6 ಯೆಹೋವನ ಜ್ಯೇಷ್ಠ ಪುತ್ರನು ಮಾತ್ರವೇ ಪಾಪಿ ಮಾನವ ಕುಲವನ್ನು ಒಳಗೂಡಿದ್ದ ಆ ಪರಿಸ್ಥಿತಿಯ ವಿಶೇಷ ಅಗತ್ಯತೆಗಳ ಅಳತೇಗೋಲನ್ನು ಮುಟ್ಟಶಕ್ತನಿದ್ದನು. ದೈವಿಕವಾಗಿ ಉತ್ಪಾದಿಸಲ್ಪಟ್ಟ ಕುಟುಂಬದ ಸದಸ್ಯರಿಗೆ ವಾತ್ಸಲ್ಯವನ್ನು ತೋರಿಸುವುದರಲ್ಲಿ ಅವನು ತನ್ನ ಸ್ವರ್ಗೀಯ ತಂದೆಯ ಎಂಥ ಪ್ರತಿರೂಪನಾಗಿದ್ದನೆಂದರೆ ದೇವಪುತ್ರರಲ್ಲಿ ಅವನಿಗೆ ತುಲ್ಯರೇ ಇರಲಿಲ್ಲ. ಬೇರೆ ಎಲ್ಲಾ ಬುದ್ಧಿಯುಳ್ಳ ಜೀವಿಗಳು ಆತನ ಮೂಲಕವಾಗಿ ಅಸ್ತಿತ್ವಕ್ಕೆ ತರಲ್ಪಟ್ಟದರ್ದಿಂದ, ಅವರಿಗಾಗಿ ಆತನ ವಾತ್ಸಲ್ಯವು ಖಂಡಿತವಾಗಿಯೂ ಹೇರಳವಾಗಿರುವುದು. ಅದಲ್ಲದೆ, ಯೆಹೋವನ ಏಕ-ಜಾತ ಪುತ್ರನಾದ ಯೇಸು ಕ್ರಿಸ್ತನಲ್ಲಿ ಪ್ರೀತಿಯು ಒಂದು ಪ್ರಧಾನ ಗುಣವಾಗಿತ್ತು ಯಾಕಂದರೆ ಆತನು “ದೇವರ ಮಹಿಮೆಯ ಪ್ರತಿಫಲನವೂ ಆತನ ವ್ಯಕ್ತಿತ್ವದ ಪಡಿಯಚ್ಚೂ” ಆಗಿದ್ದಾನೆ. (ಇಬ್ರಿಯ 1:3, NW) ಪಾಪಿಗಳಾದ ಮಾನವರಿಗಾಗಿ ತನ್ನ ಸ್ವಂತ ಜೀವವನ್ನು ಕೊಡುವ ಮೂಲಕ ಈ ಪ್ರೀತಿಯ ಮಹತ್ತಮ ಬಿಂದುವನ್ನು ವ್ಯಕ್ತಪಡಿಸಲು ಸಿದ್ಧ ಮನಸ್ಸನ್ನು ತೋರಿಸುತ್ತಾ, ಯೇಸು ತನ್ನ 12 ಅಪೊಸ್ತಲರಿಗೆ ಅಂದದ್ದು: “ಮನುಷ್ಯಕುಮಾರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆ ಮಾಡುವುದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.”—ಮಾರ್ಕ 10:45; ಯೋಹಾನ 15:13ನ್ನೂ ನೋಡಿರಿ.
7, 8. (ಎ) ಮಾನವ ಕುಲದ ಲೋಕದೊಳಗೆ ಯೇಸುವನ್ನು ಕಳುಹಿಸುವುದರಲ್ಲಿ ಯೆಹೋವನ ಹೇತು ಏನಾಗಿತ್ತು? (ಬಿ) ಯಾವ ರೀತಿಯ ನಿಯೋಗದ ಮೇಲೆ ದೇವರು ತನ್ನ ಏಕ-ಜಾತ ಪುತ್ರನನ್ನು ಕಳುಹಿಸಿದನು?
7 ಈ ದುರ್ಬಲ ಮಾನವ ಕುಲದ ಲೋಕಕ್ಕೆ ಯೇಸುವನ್ನು ಕಳುಹಿಸಲಿಕ್ಕೆ ಯೆಹೋವ ದೇವರಿಗೆ ಒಂದು ವಿಶೇಷ ಕಾರಣವಿತ್ತು. ದಿವ್ಯ ಪ್ರೀತಿಯೇ ಅದರ ಪ್ರೇರೇಪಣೆಯಾಗಿತ್ತು, ಯಾಕಂದರೆ ಯೇಸು ತಾನೇ ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಏಕ-ಜಾತ ಪುತ್ರನನ್ನು ಕೊಟ್ಟನು, ಯಾಕಂದರೆ ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯುವಂತೆಯೇ. ದೇವರು ತನ್ನ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದು ಲೋಕಕ್ಕೆ ತೀರ್ಪು ಮಾಡಲಿಕ್ಕಾಗಿ ಅಲ್ಲ, ಅವನ ಮೂಲಕವಾಗಿ ಲೋಕವು ರಕ್ಷಣೆ ಹೊಂದುವಂತೆ ಕಳುಹಿಸಿಕೊಟ್ಟನು.”—ಯೋಹಾನ 3:16, 17, NW.
8 ಒಂದು ರಕ್ಷಣೆಯ ನಿಯೋಗದ ಮೇಲೆ ಯೆಹೋವನು ಪ್ರೀತಿಯಿಂದ ತನ್ನ ಏಕ-ಜಾತ ಪುತ್ರನನ್ನು ಕಳುಹಿಸಿಕೊಟ್ಟನು. ಲೋಕವನ್ನು ತೀರ್ಪು ಮಾಡಲಿಕ್ಕಾಗಿ ದೇವರು ತನ್ನ ಮಗನನ್ನು ಇಲ್ಲಿಗೆ ಕಳುಹಿಸಲಿಲ್ಲ. ಅಂಥ ಒಂದು ನ್ಯಾಯ ನಿರ್ಣಾಯಕ ನಿಯೋಗದ ಮೇಲೆ ದೇವರ ಪುತ್ರನು ಇಲ್ಲಿಗೆ ಕಳುಹಿಸಲ್ಪಟ್ಟಿದ್ದಲ್ಲಿ, ಮಾನವ ಕುಲದವರೆಲ್ಲರ ಹೊರನೋಟವು ಆಶಾಶೂನ್ಯವಾಗಿರುತ್ತಿತ್ತು. ಮಾನವ ಕುಟುಂಬದ ಮೇಲೆ ಯೇಸು ಕ್ರಿಸ್ತನಿಂದ ವಿಧಿಸಲ್ಪಡುತ್ತಿದ್ದ ಆ ಪ್ರತಿಕೂಲ ತೀರ್ಪಿನ ಶಿಕ್ಷೆಯು ಮರಣದ ತೀರ್ಪಾಗಿ ಪರಿಣಮಿಸುತ್ತಿತ್ತು. (ರೋಮಾಪುರ 5:12) ಹೀಗೆ, ದಿವ್ಯ ಪ್ರೀತಿಯ ಈ ಅಸದೃಶ ಅಭಿವ್ಯಂಜಕದ ಮೂಲಕ, ಸರಳ ನ್ಯಾಯವು ಅವಶ್ಯಪಡಿಸುತ್ತಿದ್ದ ಆ ಮರಣ ಶಿಕ್ಷೆಯನ್ನು ದೇವರು ಮಾರ್ತೂಕಗೊಳಿಸಿದನು.
9. ಯೆಹೋವನ ಕೊಡುವಿಕೆಯ ಕುರಿತು ಕೀರ್ತನೆಗಾರ ದಾವೀದನ ಅನಿಸಿಕೆ ಹೇಗಿತ್ತು?
9 ಎಲ್ಲಾ ವಿಷಯಗಳಲ್ಲಿ ಯೆಹೋವ ದೇವರು ಪ್ರೀತಿಯನ್ನು ತನ್ನ ವ್ಯಕ್ತಿತ್ವದ ಉತ್ಕೃಷ್ಟ ಗುಣಾತಿಶಯವಾಗಿ ವ್ಯಕ್ತಪಡಿಸುತ್ತಾನೆ ಮತ್ತು ತೋರಿಸುತ್ತಾನೆ. ಒಳ್ಳೇ ವಿಷಯಗಳ ಸಂಬಂಧದಲ್ಲಿಯಾದರೋ ದೇವರು ಭೂಮಿಯಲ್ಲಿರುವ ತನ್ನ ನಂಬಿಗಸ್ತ ಆರಾಧಕರಿಗೆ ಬೇಕಾಗುವುದಕ್ಕಿಂತ ಹೆಚ್ಚನ್ನು ಕೊಡುತ್ತಾನೆಂದು ಯಥಾರ್ಥವಾಗಿ ಹೇಳಬಹುದು. ಕೀರ್ತನೆಗಾರ ದಾವೀದನಿಗೆ ಆ ವಿಷಯವಾಗಿ ಅದೇ ಅನಿಸಿಕೆ ಇದದ್ದರಿಂದ ದೇವರಿಗೆ ಅವನಂದದ್ದು: “ನಿನ್ನ ಭಯಭಕ್ತರಿಗಾಗಿ ನೀನು ಕಾದಿರಿಸಿದ ನಿನ್ನ ಒಳ್ಳೇತನವು ಎಷ್ಟು ಅಪಾರ! ನಿನ್ನಲ್ಲಿ ಆಶ್ರಯವಿಟ್ಟವರಿಗೆ ಎಲ್ಲರ ಮುಂದೆ ಅವನ್ನು ಸಲ್ಲಿಸಿರುತ್ತೀ.” (ಕೀರ್ತನೆ 31:19, NW) ಇಸ್ರಾಯೇಲ್ ಜನಾಂಗದ ಮೇಲೆ ದಾವೀದನ ರಾಜ್ಯಾಡಳಿತದ ಸಮಯದಲ್ಲಿ—ಹೌದು, ದೇವರಿಂದ ವಿಶಿಷ್ಟವಾಗಿ ಆಯ್ಕೆಗೊಂಡ ಆ ಜನಾಂಗದ ಸದಸ್ಯನಾಗಿದ್ದ ಅವನ ಜೀವಮಾನದಲ್ಲೆಲ್ಲಾ—ಆಗಿಂದಾಗ್ಯೆ ಅವನು ದೇವರ ಒಳ್ಳೇತನವನ್ನು ಅನುಭವಿಸಿದ್ದನು. ಮತ್ತು ಅದು ಹೇರಳವಾಗಿದ್ದದ್ದನ್ನು ದಾವೀದನು ಕಂಡುಕೊಂಡನು.
ದೇವರ ಒಂದು ಮಹಾ ದಾನವನ್ನು ಇಸ್ರಾಯೇಲು ನಷ್ಟಮಾಡಿದ್ದು
10. ಪ್ರಾಚೀನ ಇಸ್ರಾಯೇಲು ಭೂಮಿಯ ಬೇರೆ ಯಾವುದೇ ಜನಾಂಗಕ್ಕಿಂತ ಏಕೆ ಅಸದೃಶವಾಗಿತ್ತು?
10 ಯೆಹೋವನೇ ಅದರ ದೇವರಾಗಿ ಇದ್ದುದರಲ್ಲಿ, ಇಸ್ರಾಯೇಲು ಭೂಮಿಯ ಮೇಲಣ ಬೇರೆ ಯಾವುದೇ ಜನಾಂಗಕ್ಕಿಂತ ಅಸದೃಶವಾಗಿತ್ತು. ಪ್ರವಾದಿ ಮೋಶೆಯ ಮಧ್ಯಸಿಕ್ಥೆಯ ಮೂಲಕವಾಗಿ, ಯೆಹೋವನು ಅಬ್ರಹಾಮ, ಇಸಾಕ ಮತ್ತು ಯಾಕೋಬರ ಸಂತತಿಯವರನ್ನು ತನ್ನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಗೆ ತಂದನು. ಈ ನಮೂನೆಯಲ್ಲಿ ಅವನು ಬೇರೆ ಯಾವುದೇ ಜನಾಂಗದೊಂದಿಗೆ ವ್ಯವಹಾರವನ್ನು ಮಾಡಿರಲಿಲ್ಲ. ಆದುದರಿಂದ, ಪ್ರೇರಿತ ಕೀರ್ತನೆಗಾರನು ಹೀಗೆಂದು ಉದ್ಗರಿಸ ಶಕ್ತನಾದನು: “ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ; ತನ್ನ ನಿಯಮ ವಿಧಿಗಳನ್ನು ಇಸ್ರಾಯೇಲ್ಯರಿಗೆ ಪ್ರಕಟಿಸುತ್ತಾನೆ. ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ; ಆತನ ನ್ಯಾಯವಿಧಿಗಳನ್ನು ಅವರು ಅರಿಯರು. ಯಾಹುವಿಗೆ ಸ್ತೋತ್ರ!”—ಕೀರ್ತನೆ 147:19, 20.
11. ಇಸ್ರಾಯೇಲು ದೇವರೊಂದಿಗೆ ತನ್ನ ಅನುಗ್ರಹದ ಸ್ಥಾನವನ್ನು ಎಷ್ಟರತನಕ ಆನಂದಿಸಿತು, ಮತ್ತು ಅವರ ಸಂಬಂಧದಲ್ಲಿ ಬದಲಾವಣೆಯನ್ನು ಯೇಸು ಹೇಗೆ ವ್ಯಕ್ತಪಡಿಸಿದನು?
11 ಮಾಂಸಿಕ ಇಸ್ರಾಯೇಲ್ಯ ಜನಾಂಗವು ನಮ್ಮ ಸಾಮಾನ್ಯ ಶಕದ 33ನೆಯ ವರ್ಷದಲ್ಲಿ ಯೇಸು ಕ್ರಿಸ್ತನನ್ನು ಮೆಸ್ಸೀಯನಾಗಿ ತಿರಸ್ಕರಿಸುವ ತನಕ ದೇವರೊಂದಿಗೆ ತನ್ನ ಅನುಗ್ರಹಿತ ಸಂಬಂಧದಲ್ಲಿ ಮುಂದುವರಿಯಿತು. ಈ ಶೋಕಭರಿತ ಉದ್ಗಾರಕ್ಕೆ ಯೇಸು ಎಡೆಗೊಟ್ಟ ಆ ದಿನವು ನಿಜವಾಗಿ ಇಸ್ರಾಯೇಲಿಗೆ ಖೇಧಕರವು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.” (ಮತ್ತಾಯ 23:37, 38) ಇಸ್ರಾಯೇಲ್ ಜನಾಂಗವು, ಹಿಂದೆ ಯೆಹೋವನ ಮೆಚ್ಚಿಕೆಯ ಸ್ಥಾನದಲ್ಲಿದ್ದರೂ, ದೇವರಿಂದ ಬಂದ ಒಂದು ವಿಶೇಷ ದಾನವನ್ನು ಕಳಕೊಂಡಿತ್ತು. ಅದು ಹೇಗೆ?
12. ‘ಯೆರೂಸಲೇಮಿನ ಮಕ್ಕಳು’ ಯಾರು, ಮತ್ತು ಅವರನ್ನು ಕೂಡಿಸಿಕೊಳ್ಳುವುದು ಯೇಸುವಿಗೆ ಯಾವುದರ ಅರ್ಥದಲ್ಲಿರುತ್ತಿತ್ತು?
12 “ಮಕ್ಕಳು” ಎಂಬ ಶಬ್ದವನ್ನು ಉಪಯೋಗಿಸಿದ ಮೂಲಕ, ಯೇಸು ಯೆರೂಸಲೇಮಿನಲ್ಲಿ ವಾಸಿಸಿದ್ದ ಸುನ್ನತಿಯಾದ ಮತ್ತು ಇಡೀ ಯೆಹೂದಿ ಜನಾಂಗವನ್ನು ಪ್ರತಿನಿಧಿಸಿದ್ದ ಮಾಂಸಿಕ ಯೆಹೂದ್ಯರಿಗೆ ಮಾತ್ರವೇ ಸೂಚಿಸಿದ್ದನು. ‘ಯೆರೂಸಲೇಮಿನ ಮಕ್ಕಳನ್ನು’ ಯೇಸು ಕೂಡಿಸಿಕೊಳ್ಳಬೇಕಾದರೆ ಆ “ಮಕ್ಕಳನ್ನು” ದೇವರೊಂದಿಗೆ ಒಂದು ಹೊಸ ಒಡಂಬಂಡಿಕೆಯೊಳಗೆ ತರಬೇಕಾದ ಅರ್ಥದಲ್ಲಿತ್ತು, ಮತ್ತು ಅವನು ತಾನೇ ಯೆಹೋವ ದೇವರ ಮತ್ತು ಮಾಂಸಿಕ ಯೆಹೂದ್ಯರ ನಡುವೆ ಮಧ್ಯಸ್ಥನಾಗಿ ಸೇವೆಮಾಡಬೇಕಿತ್ತು. (ಯೆರೆಮೀಯ 31:31-34) ಇದು ಪಾಪಗಳ ಕ್ಷಮೆಯನ್ನು ಉಂಟುಮಾಡುತ್ತಿತ್ತು ಯಾಕಂದರೆ ದೇವರ ಪ್ರೀತಿಯು ಅಷ್ಟು ವಿಸ್ತಾರವಾಗಿತ್ತು. (ಮಲಾಕಿಯ 1:2ಕ್ಕೆ ಹೋಲಿಸಿ.) ಇದು ನಿಜವಾಗಿಯೂ ಒಂದು ಮಹಾ ದಾನವಾಗಿರುತ್ತದೆ.
13. ಇಸ್ರಾಯೇಲು ದೇವ ಕುಮಾರನನ್ನು ತಿರಸ್ಕರಿಸಿದ್ದು ಯಾವ ನಷ್ಟದಲ್ಲಿ ಕೊನೆಗೊಂಡಿತು, ಆದರೆ ಯೆಹೋವನ ಸಂತೋಷವು ಕಡಿಮೆಯಾಗಲಿಲ್ಲವೇಕೆ?
13 ಅವನ ಪ್ರವಾದನಾ ಮಾತುಗಳಿಗೆ ಹೊಂದಿಕೆಯಲ್ಲಿ, ಹೊಸ ಒಡಬಂಡಿಕೆಯಲ್ಲಿ ಪಾಲಿಗರಾಗುವ ದಾನವನ್ನು ಯೆಹೂದ್ಯೇತರಿಗೆ ನೀಡುವುದಕ್ಕೆ ಮುಂಚೆ ಎಷ್ಟರತನಕ ನ್ಯಾಯೋಚಿತವೂ ಆ ತನಕ ಯೆಹೋವನು ಕಾದನು. ಆದರೆ ದೇವರ ಸ್ವಂತ ಕುಮಾರನನ್ನು, ಮೆಸ್ಸೀಯನನ್ನು, ಮಾಂಸಿಕ ಇಸ್ರಾಯೇಲ್ ಜನಾಂಗವು ತಿರಸ್ಕರಿಸಿದ ಮೂಲಕ, ಈ ಮಹಾ ದಾನವನ್ನು ತನಗಾಗಿ ನಷ್ಟಪಡಿಸಿಕೊಂಡಿತು. ಆದುದರಿಂದ ಯೆಹೋವ ದೇವರು ಈ ದಾನವನ್ನು ಯೆಹೂದಿ ಜನಾಂಗದ ಆಚೇ ಕಡೆಯ ಜನರಿಗೆ ವಿಸ್ತರಿಸಿದ ಮೂಲಕ ತನ್ನ ಮಗನ ತಿರಸ್ಕರಿಸುವಿಕೆಗೆ ಮಾರ್ತೂಕವನ್ನು ಹಾಕಿದನು. ಆ ರೀತಿಯಲ್ಲಿ, ಮಹಾ ದಾನಿಯಾದ ಯೆಹೋವನ ಸಂತೋಷವು ಕೊಂಚವೂ ಕಡಿಮೆಯಾಗದೆ ಮುಂದರಿಯಿತು.
ಕೊಡುವುದರಲ್ಲಿ ಸಂತೋಷ
14. ಯೇಸು ಕ್ರಿಸ್ತನು ವಿಶ್ವದಲ್ಲೆಲ್ಲಾ ಅತ್ಯಂತ ಸಂತೋಷವುಳ್ಳ ಜೀವಿಯೇಕೆ?
14 ಯೆಹೋವನು “ಸಂತೋಷವುಳ್ಳ ದೇವರು.” (1 ತಿಮೋಥಿ 1:11) ಬೇರೆಯವರಿಗೆ ಕೊಡುವುದು ಅವನನ್ನು ಸಂತೋಷ ಪಡಿಸುವ ಒಂದು ಸಂಗತಿಯಾಗಿದೆ. ಮತ್ತು ಸಾ.ಶ. ಮೊದಲನೆಯ ಶತಮಾನದಲ್ಲಿ, ಆತನ ಏಕ-ಜಾತ ಪುತ್ರನು ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅಪೊಸ್ತಲರ ಕೃತ್ಯಗಳು 20:35, NW) ಈ ತತ್ವಕ್ಕೆ ಹೊಂದಿಕೆಯಲ್ಲಿ, ಯೇಸು ಇಡೀ ವಿಶ್ವದ ನಿರ್ಮಾಣಿಕನ ಅತ್ಯಂತ ಸಂತೋಷಿತ ಜೀವಿಯಾಗಿ ಪರಿಣಮಿಸಿದ್ದಾನೆ. ಅದು ಹೇಗೆ? ಒಳ್ಳೆದು, ಯೆಹೋವ ದೇವರಿಗೆ ದ್ವಿತೀಯತೆಯಲ್ಲಿ, ಯೇಸು ಕ್ರಿಸ್ತನು ಮಾನವ ಕುಲದ ಪ್ರಯೋಜನಕ್ಕಾಗಿ ತನ್ನ ಜೀವವನ್ನೇ ಕೊಟ್ಟ ಮೂಲಕ ಎಲ್ಲರಿಗಿಂತಲೂ ಮಹತ್ತಾದ ದಾನವನ್ನು ಕೊಟ್ಟಾತನಾಗಿದ್ದಾನೆ. ವಾಸ್ತವದಲ್ಲಿ, ಅವನು “ಸಂತೋಷವುಳ್ಳ ಏಕಾಧಿಪತಿ” ಆಗಿರುತ್ತಾನೆ. (1 ತಿಮೊಥಿ 6:15, NW) ಹೀಗೆ, ಕೊಡುವುದರಲ್ಲಿರುವ ಹೆಚ್ಚಿನ ಸಂತೋಷದ ಕುರಿತು ಏನಂದನೋ ಅದನ್ನು ಯೇಸು ಕ್ರಿಯೆಯಲ್ಲಿ ಮಾದರಿಯಾಗಿ ತೋರಿಸಿದ್ದಾನೆ.
15. ಯಾವುದರ ಆದರ್ಶ ಮಾದರಿಯಾಗಿರುವುದರಿಂದ ಯೆಹೋವನೆಂದೂ ತಪ್ಪಲಾರನು, ಮತ್ತು ಅವನ ಬುದ್ಧಿಯುಳ್ಳ ಸೃಷ್ಟಿಜೀವಿಗಳು ಆತನ ಸಂತೋಷವನ್ನು ಅಂಶಿಕವಾಗಿ ಆನುಭವಿಸಬಲ್ಲರು ಹೇಗೆ?
15 ಯೇಸು ಕ್ರಿಸ್ತನ ಮೂಲಕವಾಗಿ ಯೆಹೋವ ದೇವರು ತನ್ನ ಬುದ್ಧಿಯುಳ್ಳ ಸೃಷ್ಟಿಜೀವಿಗಳಿಗೆಲ್ಲಾ ಉದಾರಿಯಾದ ದಾನಿಯಾಗಿರಲು ಎಂದೂ ತಪ್ಪಲಾರನು ಮತ್ತು ಕೊಡುವುದರಲ್ಲಿ ಯಾವಾಗಲೂ ಅವರ ಆದರ್ಶ ಮಾದರಿಯಾಗಿ ಇರುವನು. ಇತರರಿಗೆ ಒಳ್ಳೇ ದಾನಗಳನ್ನು ಕೊಡುವುದರಲ್ಲಿ ದೇವರು ಸಂತೋಷವನ್ನು ಕಂಡುಕೊಳ್ಳುತ್ತಿರುವಂತೆ, ಭೂಮಿಯಲ್ಲಿರುವ ತನ್ನ ಬುದ್ಧಿಯುಳ್ಳ ಜೀವಿಗಳ ಹೃದಯದಲ್ಲೂ ಆತನು ಈ ಔದಾರ್ಯದ ಆತ್ಮವನ್ನು ಹಾಕಿರುತ್ತಾನೆ. ಆ ರೀತಿಯಲ್ಲಿ ಅವರು ಆತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಾರೆ ಮತ್ತು ಅನುಕರಿಸುತ್ತಾರೆ ಮತ್ತು ಆತನ ಸಂತೋಷವನ್ನು ಅಂಶಿಕವಾಗಿ ಅನುಭವಿಸುತ್ತಾರೆ. (ಆದಿಕಾಂಡ 1:26; ಎಫೆಸ 5:1) ಇದಕ್ಕೆ ಹೊಂದಿಕೆಯಲ್ಲಿ, ಯೇಸು ತನ್ನ ಹಿಂಬಾಲಕರಿಗೆ ಅಂದದ್ದು: “ಕೊಡಿರಿ, ಆಗ ನಿಮಗೂ ಕೊಡುವರು. ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು, ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.”—ಲೂಕ 6:38.
16. ಲೂಕ 6:38ರಲ್ಲಿ ಯಾವ ಕೊಡುವಿಕೆಗೆ ಯೇಸು ನಿರ್ದೇಶಿಸಿರುತ್ತಾನೆ?
16 ಕೊಡುವ ಕ್ರಮವನ್ನು ಒಂದು ಹವ್ಯಾಸವನ್ನಾಗಿ ಮಾಡಲು ತನ ಶಿಷ್ಯರಿಗೆ ಯೇಸುವು ಒಂದು ಉತ್ಕೃಷ್ಟ ಮಾದರಿಯನ್ನಿಟ್ಟನು. ಅಂತಹ ನೀಡುವಿಕೆಯ ಮೂಲಕ ಪಡೆದುಕೊಳ್ಳುವವರಿಂದ ಒಂದು ಉತ್ತಮ ಪ್ರತಿಕ್ರಿಯೆ ಬರುವುದು ಎಂದು ಅವನು ಹೇಳಿದನು. ಲೂಕ 6:38ರಲ್ಲಿ, ಐಹಿಕ ದಾನಗಳನ್ನು ಕೊಡುವದಕ್ಕೆ ಮಾತ್ರವೇ ಸೂಚಿಸಿ ಮಾತಾಡುವುದಿಲ್ಲ. ಅವರನ್ನು ಐಹಿಕವಾಗಿ ಬಡತನಕ್ಕೆ ನಡಿಸುವ ಒಂದು ಮಾರ್ಗಕ್ರಮವನ್ನು ಆತನ ಶಿಷ್ಯರು ಹಿಂಬಾಲಿಸಬೇಕೆಂದು ಯೇಸುವು ಇಲ್ಲಿ ಮಾತಾಡುವದಿಲ್ಲ. ಬದಲಿಗೆ, ಆತ್ಮಿಕ ಪೂರೈಸುವಿಕೆಯ ಭಾವವನ್ನು ಅವರಿಗೆ ಕೊಡಲಿರುವ ಒಂದು ಮಾರ್ಗಕ್ರಮದೆಡೆಗೆ ಅವನು ಅವರನ್ನು ಮಾರ್ಗದರ್ಶಿಸುತ್ತಿದ್ದನು.
ನಿತ್ಯ ಸಂತೋಷವು ವಾಗ್ದಾನಿಸಲ್ಪಟ್ಟಿದೆ
17. ಈ ಕಡೇ ದಿನಗಳಲ್ಲಿ ದೇವರು ತನ್ನ ಸಾಕ್ಷಿಗಳಿಗೆ ಯಾವ ಆಶ್ಚರ್ಯಕರ ದಾನವನ್ನು ದಯಪಾಲಿಸಿದ್ದಾನೆ?
17 ಸೃಷ್ಟಿಯೆಲ್ಲಾದರ ಶಿರಸ್ಸಾದ ಯೆಹೋವ ದೇವರು ಈ ಕಡೇ ದಿನಗಳಲ್ಲಿ ತನ್ನ ಸಾಕ್ಷಿಗಳ ಮೇಲೆ ಎಂಥ ಒಂದು ಆಶ್ಚರ್ಯಕರವಾದ ದಾನವನ್ನು ದಯಪಾಲಿಸಿರುತ್ತಾನೆ! ಆತನ ರಾಜ್ಯದ ಸುವಾರ್ತೆಯನ್ನು ಆತನು ನಮಗೆ ಕೊಟ್ಟಿದ್ದಾನೆ. ಆತನ ಆಳುವ ರಾಜನಾದ ಯೇಸು ಕ್ರಿಸ್ತನ ಹಸ್ತದಲ್ಲಿರುವ ಆ ಸ್ಥಾಪಿತ ದೇವರ ರಾಜ್ಯವನ್ನು ಸಾರುವ ಮಹಾ ಸೌಭಾಗ್ಯವು ನಮಗಿದೆ. (ಮತ್ತಾಯ 24:14; ಮಾರ್ಕ 13:10) ಮಹೋನ್ನತನಾದ ದೇವರ ವಾಚಿಕ ಸಾಕ್ಷಿಗಳಾಗಿ ಮಾಡಲ್ಪಟ್ಟಿರುವುದು ಒಂದು ಎಣೆಯಿಲ್ಲದ ದಾನವು, ಮತ್ತು ದೇವರ ಅನುಕರಣೆಯಲ್ಲಿ ನಾವು ಕೊಡುವ ಹವ್ಯಾಸವನ್ನು ಮಾಡುವ ಅತ್ಯುತ್ತಮ ವಿಧಾನವು, ಈ ದುಷ್ಟ ವ್ಯವಸ್ಥೆಯ ಅಂತ್ಯವು ಬರುವ ಮುಂಚೆ ಇತರರೊಂದಿಗೆ ರಾಜ್ಯದ ಸಂದೇಶವನ್ನು ಹಂಚುವದರಿಂದಲೇ.
18. ಯೆಹೋವನ ಸಾಕ್ಷಿಗಳೋಪಾದಿ, ಇತರರಿಗೆ ನಾವೇನನ್ನು ಕೊಡಬೇಕು?
18 ಇತರರಿಗೆ ರಾಜ್ಯದ ಸಂದೇಶವನ್ನು ಸಾರುವಾಗ ತಾನು ಗುರಿಯಾಗಿದ್ದ ಕಷ್ಟಾನುಭಗಳ ಕುರಿತು ಅಪೊಸ್ತಲ ಪೌಲನು ನಿರ್ದೇಶಿಸಿದ್ದಾನೆ. (2 ಕೊರಿಂಥ 11:23-27) ಯೆಹೋವನ ಆಧುನಿಕ ಸಾಕ್ಷಿಗಳಿಗೆ ಸಹಾ ಕಷ್ಟಾನುಭವವನ್ನು ಸಹಿಸಲಿಕ್ಕಿದೆ ಮತ್ತು ಇತರರಿಗೆ ರಾಜ್ಯದ ನಿರೀಕ್ಷೆಯನ್ನು ಕೊಡುವ ಪ್ರಯತ್ನದಲ್ಲಿ ವೈಯಕ್ತಿಕ ಇಷ್ಟಗಳನ್ನು ಪಕ್ಕಕ್ಕೆ ತಳ್ಳಲಿಕ್ಕದೆ. ವಿಶೇಷವಾಗಿ ನಾಚುವ ಸ್ವಭಾವ ನಮಗಿದ್ದಲ್ಲಿ, ಜನರ ಮನೆ ಬಾಗಲಿಗೆ ಹೋಗುವ ಪ್ರವೃತ್ತಿ ನಮಗಿರಲಿಕ್ಕಿಲ್ಲ. ಆದರೆ ಕ್ರಿಸ್ತನ ಹಿಂಬಾಲಕರೋಪಾದಿ, “ರಾಜ್ಯದ ಈ ಸುವಾರ್ತೆಯನ್ನು” ಸಾರುವ ಮೂಲಕ ಇತರರಿಗೆ ಅತ್ಮಿಕ ವಿಷಯಗಳನ್ನು ಕೊಡುವ ಸುಯೋಗವನ್ನು ನಾವು ವರ್ಜಿಸಲಾರೆವು, ಬದಿಗೊತ್ತಲಾರೆವು. (ಮತ್ತಾಯ 24:14) ಯೇಸುವಿನಲ್ಲಿದ್ದ ಅದೇ ಮನೋಭಾವವು ನಮ್ಮಲ್ಲಿರುವ ಅಗತ್ಯವಿದೆ. ಮರಣವು ಎದುರಿಗಿದ್ದಾಗಲೂ, ಅವನು ಪ್ರಾರ್ಥಿಸಿದ್ದು: “ನನ್ನ ತಂದೆಯೇ, . . . ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ.” (ಮತ್ತಾಯ 26:39) ರಾಜ್ಯದ ಸುವಾರ್ತೆಯನ್ನು ಇತರರಿಗೆ ಕೊಡುವ ವಿಷಯದಲ್ಲಿ, ಯೆಹೋವನ ಸೇವಕರು ದೇವರ ಚಿತ್ತವನ್ನು ಮಾಡಬೇಕು, ತಮ್ಮ ಚಿತ್ತವನ್ನಲ್ಲ—ಆತನು ಬಯಸುವುದನ್ನು ಮಾಡಬೇಕು, ತಾವು ಬಯಸುವುದನ್ನಲ್ಲ.
19. “ಶಾಶ್ವತವಾದ ನಿವಾಸಸ್ಥಾನಗಳ” ಒಡೆಯರು ಯಾರು, ಮತ್ತು ಅವರೊಂದಿಗೆ ನಾವು ಹೇಗೆ ಸ್ನೇಹವನ್ನು ಮಾಡಬಲ್ಲೆವು?
19 ಅಂಥ ಕೊಡುವಿಕೆಯು ನಮ್ಮ ಸಮಯ ಮತ್ತು ಸಾಧನಸಂಪತ್ತನ್ನು ಒಳಗೂಡಿರುತ್ತದೆ. ಆದರೆ ದೇವಭಕ್ತ ದಾನಿಗಳಾಗಿರುವ ಮೂಲಕ, ನಮ್ಮ ಸಂತೋಷವು ನಿತ್ಯವಾಗಿ ಇರುವ ನಿಶ್ಚಯತೆ ನಮಗಿರಬಲ್ಲದು. ಏಕೆ? ಏಕೆಂದರೆ ಯೇಸು ಅಂದದ್ದು: “ಅನ್ಯಾಯದ ಧನದ [“ಲೌಕಿಕ ಐಶ್ವರ್ಯ,” ನ್ಯೂ ಇಂಟರ್ನೇಶನಲ್ ವರ್ಶನ್] ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟು ಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು.” (ಲೂಕ 16:9) “ಶಾಶ್ವತವಾದ ವಾಸಸ್ಥಾನಗಳ” ಒಡೆತನವಿರುವವರ ಸ್ನೇಹವನ್ನು ಮಾಡಿಕೊಳ್ಳುವುದಕ್ಕೆ “ಅನ್ಯಾಯದ ಧನವನ್ನು” ಬಳಸುವುದು ನಮ್ಮ ಗುರಿಯಾಗಿರಬೇಕು. ನಿರ್ಮಾಣಿಕನೋಪಾದಿ, ಎಲ್ಲವೂ ಯೆಹೋವನ ಒಡೆತನದ್ದು, ಮತ್ತು ಎಲ್ಲಕ್ಕೂ ಬಾಧ್ಯನಾಗಿರುವ ಆತನ ಜ್ಯೇಷ್ಠ ಪುತ್ರನು ಆ ಒಡೆತನದಲ್ಲಿ ಸಹಭಾಗಿಯಾಗಿದ್ದಾನೆ. (ಕೀರ್ತನೆ 50:10-12; ಇಬ್ರಿಯ 1:1, 2) ಅವರೊಂದಿಗೆ ಸ್ನೇಹವನ್ನು ಮಾಡಲು, ನಾವು ಧನವನ್ನು ಅವರ ಮೆಚ್ಚಿಗೆಯನ್ನು ತರುವಂಥ ರೀತಿಯಲ್ಲಿ ಉಪಯೋಗಿಸಬೇಕು. ಇದರಲ್ಲಿ ಪ್ರಾಪಂಚಿಕ ವಸ್ತುಗಳನ್ನು ಇತರರ ಪ್ರಯೋಜನಾರ್ಥವಾಗಿ ಉಪಯೋಗಿಸುವ ಯೋಗ್ಯ ಮನೋಭಾವವು ಸೇರಿರುತ್ತದೆ. (ಹೋಲಿಸಿರಿ ಮತ್ತಾಯ 6:3, 4; 2 ಕೊರಿಂಥ 9:7.) ಯೆಹೋವ ದೇವರೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ನಮ್ಮ ಸ್ನೇಹವನ್ನು ದೃಢಗೊಳಿಸಲು ಒಂದು ಯೋಗ್ಯ ರೀತಿಯಲ್ಲಿ ನಾವು ಹಣವನ್ನು ಉಪಯೋಗಿಸಬಹುದು. ಉದಾಹರಣೆಗೆ, ನಿಜವಾಗಿ ಕೊರತೆಯಲ್ಲಿರುವ ಜನರ ಸಹಾಯಕ್ಕಾಗಿ ನಮ್ಮಲ್ಲಿ ಏನಿದೆಯೇ ಅದನ್ನು ಸಂತೋಷವಾಗಿ ಬಳಸುವ ಮೂಲಕ ಮತ್ತು ದೇವರ ರಾಜ್ಯಭಿರುಚಿಗಳನ್ನು ವರ್ಧಿಸಲು ನಮ್ಮ ಸಾಧನ ಸಂಪತ್ತನ್ನು ವ್ಯಯಿಸುವ ಮೂಲಕ ನಾವಿದನ್ನು ಮಾಡುತ್ತೇವೆ.—ಜ್ಞಾನೋಕ್ತಿ 19:17; ಮತ್ತಾಯ 6:33.
20. ಯೆಹೋವ ಮತ್ತು ಯೇಸುವು ನಮ್ಮನ್ನು “ಶಾಶ್ವತವಾದ ವಾಸಸ್ಥಾನಗಳ” ಒಳಗೆ ನಡಿಸಬಲ್ಲರೇಕೆ, ಮತ್ತು ಈ ಸ್ಥಳಗಳು ಎಲ್ಲಿರಬಹುದಾಗಿದೆ? (ಬಿ) ಯಾವ ಸೌಭಾಗ್ಯವು ನಿತ್ಯ ನಿರಂತರಕ್ಕೂ ನಮ್ಮದಾಗಿರುವುದು?
20 ಅವರ ಅಮರತ್ವದ ಕಾರಣ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ನಿತ್ಯವಾಗಿ ನಮ್ಮ ಸ್ನೇಹಿತರಾಗಿರಬಲ್ಲರು ಮತ್ತು “ಶಾಶ್ವತವಾದ ವಾಸಸ್ಥಾನಗಳಿಗೆ” ನಮ್ಮನ್ನು ನಡಿಸಬಲ್ಲರು. ಈ ಸ್ಥಳಗಳು ಎಲ್ಲಾ ಪರಿಶುದ್ಧ ದೇವದೂತರೊಂದಿಗೆ ಪರಲೋಕದಲ್ಲಿರಲಿ, ಅಥವಾ ಪರದೈಸವಾಗಿ ಪುನಃಸ್ಥಾಪಿತವಾಗುವ ಈ ಭೂಮಿಯಲ್ಲಿರಲಿ, ವಿಷಯವು ಹಾಗಿರುವುದು. (ಲೂಕ 23:43) ಇವೆಲ್ಲವನ್ನು ಶಕ್ಯವಾಗಿ ಮಾಡಿದ್ದು ದೇವರ ಪ್ರೀತಿಯುಕ್ತವಾದ ಯೇಸು ಕ್ರಿಸ್ತನ ದಾನವೇ. (ಯೋಹಾನ 3:16) ಮತ್ತು ಯೇಸು ಸಮಸ್ತ ಸೃಷ್ಟಿಗೆ ದಾನಕೊಡುತ್ತಾ ಇರುವಂತೆ ಯೆಹೋವ ದೇವರು ಅವನನ್ನು ಉಪಯೋಗಿಸುವನು, ಆತನ ಸ್ವಂತ ಅಸದೃಶ್ಯ ಸಂತೋಷಕ್ಕಾಗಿ. ವಾಸ್ತವದಲ್ಲಿ ನಮಗೆ ಸಥ್ವಾ, ಯೆಹೋವ ದೇವರ ಪರಮಾಧಿಕಾರದ ಕೆಳಗೆ ಮತ್ತು ಆತನ ಏಕ-ಜಾತ ಪುತ್ರನೂ, ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ರಾಜತ್ವದ ಕೆಳಗೆ ನಿತ್ಯ ನಿರಂತರವೂ ಕೊಡುತ್ತಾ ಇರುವ ಸೌಭಾಗ್ಯವು ಇರುವುದು. ಇದರ ಫಲಿತಾಂಶವಾಗಿ ಎಲ್ಲಾ ದೈವಿಕ ದಾನಿಗಳಿಗೆ ನಿತ್ಯವಾದ ಸಂತೋಷವು ಲಭಿಸುವುದು. (w92 1/15)
ನಿಮಗೆ ನೆನಪಿದೆಯೇ?
▫ ದೇವರ ಮಹತ್ತಾದ ದಾನವು ಆತನಿಂದ ಏನನ್ನು ಅವಶ್ಯಪಡಿಸುವುದು?
▫ ದೇವರು ತನ್ನ ಕುಮಾರನನ್ನು ಯಾವ ರೀತಿಯ ನಿಯೋಗದ ಮೇಲೆ ಕಳುಹಿಸಿದನು?
▫ ಯಾರು ವಿಶ್ವದಲ್ಲೆಲ್ಲಾ ಅತ್ಯಂತ ಸಂತೋಷವುಳ್ಳ ಜೀವಿಯು ಮತ್ತು ಏಕೆ?
▫ ದೈವಿಕ ದಾನಿಗಳು ನಿತ್ಯವಾದ ಸಂತೋಷವನ್ನು ಹೇಗೆ ಅನುಭವಿಸುವರು?
[ಪುಟ 10 ರಲ್ಲಿರುವ ಚಿತ್ರ]
ತನ್ನ ಮಗನನ್ನು ಒಂದು ವಿಮೋಚನಾ ಯಜ್ಞವಾಗಿ ಕೊಟ್ಟ ದೇವರ ದಾನವನ್ನು ನೀವು ಗಣ್ಯಮಾಡುತ್ತೀರೋ?
[ಪುಟ 12 ರಲ್ಲಿರುವ ಚಿತ್ರಗಳು]
ಸುವಾರ್ತೆಯನ್ನು ಸಾರುವ ಮೂಲಕ ಮತ್ತು ಆ ಕಾರ್ಯವನ್ನು ನಿಮ್ಮ ಸಾಧನ ಸಂಪತ್ತಿನಿಂದ ಬೆಂಬಲಿಸುವ ಮೂಲಕ ನೀವು ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತೀರೋ?