“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಸಾರಲಾಗುತ್ತೆ”
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.”—ಮತ್ತಾಯ 24:14.
ಈ ಮಾತಿನ ಅರ್ಥ: “ಯೇಸು ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದನು” ಅಂತ ಲೂಕ ಬರೆದನು. (ಲೂಕ 8:1) “ನಾನು ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ” ಅಂತ ಯೇಸು ಹೇಳಿದನು. (ಲೂಕ 4:43) ಅವನು ತನ್ನ ಶಿಷ್ಯರನ್ನ ಸುವಾರ್ತೆ ಸಾರೋಕೆ ಪಟ್ಟಣಗಳಿಗೆ ಮತ್ತು ಹಳ್ಳಿಗಳಿಗೆ ಕಳಿಸಿದನು. “ನೀವು . . . ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಅವರಿಗೆ ಆಜ್ಞೆ ಕೊಟ್ಟನು.—ಅಪೊಸ್ತಲರ ಕಾರ್ಯ 1:8; ಲೂಕ 10:1.
ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಸಿಹಿಸುದ್ದಿಯನ್ನ ಸಾರುತ್ತಿದ್ದರು: ಯೇಸು ತಮಗೆ ಕೊಟ್ಟ ಕೆಲಸವನ್ನ ಆತನ ಶಿಷ್ಯರು ಹುರುಪಿನಿಂದ ಮಾಡುತ್ತಾ ಇದ್ದರು. “ಅವರು ಪ್ರತಿದಿನ ದೇವಾಲಯದಲ್ಲಿ, ಮನೆಮನೆಗೆ ಹೋಗಿ ಜನ್ರಿಗೆ ಕಲಿಸ್ತಾ ಇದ್ರು. ಕ್ರಿಸ್ತನ ಬಗ್ಗೆ ಅಂದ್ರೆ ಯೇಸು ಬಗ್ಗೆ ಸಿಹಿಸುದ್ದಿಯನ್ನ ಹೇಳ್ತಾ ಇದ್ರು.” (ಅಪೊಸ್ತಲರ ಕಾರ್ಯ 5:42) ಸಿಹಿಸುದ್ದಿಯನ್ನ ಸಭೆಯಲ್ಲಿರೋ ವಿಶೇಷವಾದ ಗುಂಪಿನವರು ಮಾತ್ರ ಅಲ್ಲ ಎಲ್ಲರೂ ಸಾರುತ್ತಾ ಇದ್ದರು. ಇತಿಹಾಸಗಾರನಾದ ನಿಯಾಂಡರ್ ಕ್ರೈಸ್ತರ ವಿರುದ್ಧ ಮೊದಲನೆ ಸಲ ಬರೆದ ಸೆಲ್ಸಸ್ನ ಬಗ್ಗೆ ಹೀಗೆ ಹೇಳ್ತಾನೆ: “ಹುರುಪಿನಿಂದ ಸುವಾರ್ತೆ ಸಾರಿದವರೆಲ್ಲಾ ಉಣ್ಣೆ ಕೆಲಸಗಾರರು, ಚಮ್ಮಾರರು, ಚರ್ಮದ ಕೆಲಸಗಾರರು, ವಿದ್ಯಾಭ್ಯಾಸ ಇಲ್ಲದವರು ಹಾಗೂ ಸಾಧಾರಣ ಜನರು ಅಂತ ಸೆಲ್ಸಸ್ ವ್ಯಂಗ್ಯವಾಗಿ ಮಾತಾಡುತ್ತಾನೆ.” ದ ಅರ್ಲಿ ಸೆಂಚುರಿಸ್ ಆಫ್ ದ ಚರ್ಚ್ ಅನ್ನೋ ಪುಸ್ತಕದಲ್ಲಿ ಜೀನ್ ಬರ್ನಾಡಿ ಹೀಗೆ ಹೇಳ್ತಾನೆ: “[ಕ್ರೈಸ್ತರು] ರಸ್ತೆಗಳಲ್ಲಿ, ಪಟ್ಟಣಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಮನೆಗಳಲ್ಲಿ ಸಿಗೋ ಎಲ್ಲ ಜನರಿಗೆ ಸಿಹಿಸುದ್ದಿಯನ್ನ ಸಾರಬೇಕಿತ್ತು. ಜನ ಕೇಳಿ ಬಿಡಲಿ . . . ಅವರು ಇಡೀ ಭೂಮಿಯಲ್ಲಿ ಸಾರಬೇಕಾಗಿತ್ತು” ಅಂತ ಹೇಳ್ತಾನೆ.
ಇವತ್ತು ಯಾರು ಸಿಹಿಸುದ್ದಿಯನ್ನ ಸಾರುತ್ತಿದ್ದಾರೆ? “ಚರ್ಚಿನವರು ದೇವರ ವಾಕ್ಯದಲ್ಲಿರುವ ಸಿಹಿಸುದ್ದಿಯನ್ನ ಸಾರುತ್ತಿಲ್ಲ ಮತ್ತು ಕಲಿಸುತ್ತಿಲ್ಲ. ಹಾಗಾಗಿ ಇವತ್ತು ಜನರಿಗೆ ದೇವರ ಮೇಲೆ ಆಸಕ್ತಿನೇ ಇಲ್ಲ” ಅಂತ ಆಂಗ್ಲಿಕನ್ ಪಾದ್ರಿ ಡೇವಿಡ್ ವ್ಯಾಟ್ಸನ್ ಹೇಳ್ತಾನೆ. ಹೋಸೆ ಲೂಯಿಸ್ ಪೆರೇಜ್ ಗ್ವಾಡೆಲೋಪ್ ಬರೆದ ವೈ ಆರ್ ದ ಕ್ಯಾಥೊಲಿಕ್ಸ್ ಲೀವಿಂಗ್? ಅನ್ನೋ ಪುಸ್ತಕದಲ್ಲಿ, ಇವಾಂಜೆಲಿಕಲ್ಸ್, ಅಡ್ವೆಂಟಿಸ್ಟ್ ಮತ್ತು ಇತರರು “ಮನೆಮನೆ ಸೇವೆನ ಮಾಡೋದಿಲ್ಲ.” ಆದರೆ ಯೆಹೋವನ ಸಾಕ್ಷಿಗಳು “ತಪ್ಪದೆ ಮನೆಮನೆ ಸೇವೆಯನ್ನ ಮಾಡ್ತಾರೆ” ಅಂತ ಹೇಳ್ತಾನೆ.
ಕ್ಯಾಟೊ ಸುಪ್ರೀಂ ಕೋರ್ಟ್ ರಿವ್ಯೂ, 2001-2002 ಅನ್ನೋ ಪ್ರಕಾಶನದಲ್ಲಿ ಜೊನಾಥನ್ ಟರ್ಲಿ ಹೀಗೆ ಹೇಳ್ತಾನೆ: ‘ಯೆಹೋವನ ಸಾಕ್ಷಿಗಳು ಅಂತ ಕೇಳಿದ ಕೂಡಲೆ ಹೆಚ್ಚಿನವರಿಗೆ ತಾವು ಬ್ಯುಸಿ ಆಗಿರೋ ಸಮಯದಲ್ಲೇ ಬಂದು ಬೈಬಲ್ ಬಗ್ಗೆ ಸಾರೋಕೆ ಬರುವವರು ಅಂತ ನೆನಸುತ್ತಾರೆ. ಸಿಹಿಸುದ್ದಿ ಸಾರೋದು ತಮ್ಮ ನಂಬಿಕೆಯನ್ನ ವ್ಯಕ್ತಪಡಿಸೋ ಕೆಲಸ ಅಂತ ಮಾತ್ರ ಅಲ್ಲ. ಅದು ಜೀವ ಉಳಿಸುವ ಪ್ರಾಮುಖ್ಯ ಸೇವೆ ಅಂತ ಅವರು ನಂಬುತ್ತಾರೆ.’
[ಚೌಕ]
ನಿಜ ಕ್ರೈಸ್ತರು ಯಾರು ಅಂತ ಕಂಡುಹಿಡಿದ್ರಾ?
ಇಲ್ಲಿವರೆಗೂ ನಾವು ನಿಜ ಕ್ರೈಸ್ತರ ಗುರುತುಗಳೇನು ಅಂತ ನೋಡಿದ್ದೀವಿ. ಹಾಗಾದ್ರೆ ಅವರು ಯಾರು ಅಂತ ನಿಮಗೀಗ ಗೊತ್ತಾಯ್ತಾ? ಇವತ್ತು ಸಾವಿರಾರು ಪಂಗಡಗಳು ತಾವು ಕ್ರೈಸ್ತರು ಅಂತ ಹೇಳಿಕೊಳ್ಳುತ್ತವೆ. ಆದ್ರೆ ಯೇಸು ತನ್ನ ಶಿಷ್ಯರಿಗೆ ಏನು ಹೇಳಿದ ಅಂತ ನೆನಪಿಟ್ಟುಕೊಳ್ಳಿ: “ನನ್ನನ್ನ ‘ಸ್ವಾಮಿ, ಸ್ವಾಮಿ’ ಅಂತ ಹೇಳೋರೆಲ್ಲ ದೇವರ ಆಳ್ವಿಕೆಯಲ್ಲಿ ಇರ್ತಾರಂತ ಅಂದ್ಕೊಬೇಡಿ. ಸ್ವರ್ಗದಲ್ಲಿರೋ ನನ್ನ ತಂದೆ ಇಷ್ಟದ ಪ್ರಕಾರ ಯಾರು ಮಾಡ್ತಾರೋ ಅವ್ರೇ ಇರ್ತಾರೆ.” (ಮತ್ತಾಯ 7:21) ಯೆಹೋವ ದೇವರ ಇಷ್ಟವನ್ನ ಯಾರು ಮಾಡ್ತಾರೆ ಅಂತ ತಿಳಿದುಕೊಂಡು ಅವರ ಜೊತೆ ಸಹವಾಸ ಮಾಡೋದಾದ್ರೆ ಆತನ ಆಳ್ವಿಕೆಯಲ್ಲಿ ನೀವು ಶಾಶ್ವತ ಜೀವವನ್ನು ಆನಂದಿಸುತ್ತೀರ. ದೇವರ ಆಳ್ವಿಕೆಯ ಬಗ್ಗೆ ಮತ್ತು ಅದರಿಂದ ಸಿಗೋ ಆಶೀರ್ವಾದಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಯೆಹೋವನ ಸಾಕ್ಷಿಗಳ ಹತ್ತಿರ ಕೇಳಿ.—ಲೂಕ 4:43.