-
“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?
ಬೈಬಲ್ ಕೊಡೋ ಉತ್ತರ
ಯೇಸು ಹುಟ್ಟಿದ ನಂತರ ಅವನನ್ನ ನೋಡಲು ಹೋದಂಥ “ಮೂವರು ಜ್ಞಾನಿಗಳು” ಅಥವಾ “ಮೂವರು ರಾಜರ” ಬಗ್ಗೆ ಕ್ರಿಸ್ಮಸ್ ಆಚರಣೆಯ ಸಮಯದಲ್ಲಿ ಜನ ಮಾತಾಡ್ತಾರೆ. ಆದರೆ ಬೈಬಲ್ ಇವರನ್ನ ಆ ರೀತಿ ಹೇಳಲ್ಲ. (ಮತ್ತಾಯ 2:1) ಬದಲಿಗೆ ಸುವಾರ್ತಾ ಪುಸ್ತಕವನ್ನ ಬರೆದ ಮತ್ತಾಯ, ಈ ವ್ಯಕ್ತಿಗಳ ಬಗ್ಗೆ ತಿಳಿಸುವಾಗ ಮಾಗೋಯ್ ಅನ್ನೋ ಪದವನ್ನ ಬಳಸಿದ್ದಾನೆ. ಈ ಪದ ಜೋತಿಷ್ಯ ಮತ್ತು ಮಂತ್ರ ತಂತ್ರಗಳನ್ನ ಮಾಡೋ ನಿಪುಣರನ್ನ ಸೂಚಿಸಿ ಮಾತಾಡುತ್ತೆ.a ಹೆಚ್ಚಿನ ಬೈಬಲ್ ಭಾಷಾಂತರಗಳಲ್ಲಿ ಅವರನ್ನ “ಜ್ಯೋತಿಷಿಗಳು” ಅಥವಾ “ಮೇಜೈ” ಅಂತ ಕರೆಯಲಾಗಿದೆ.b
-
-
“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ಎಷ್ಟು ಮಂದಿ “ಜ್ಞಾನಿಗಳು” ಇದ್ರು?
ಇದರ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದರೆ ಒಬ್ಬೊಬ್ಬರು ಒಂದೊಂದು ತರ ಹೇಳ್ತಾರೆ. ಎನ್ಸೈಕ್ಲಪೀಡಿಯ ಬ್ರಿಟಾನಿಕ “ಏಷ್ಯಾದ ಜನರು 12 ಜನ ಅಂತ ಹೇಳ್ತಾರೆ, ಆದರೆ ಅಮೇರಿಕ ಮತ್ತು ಯೂರೋಪಿನವರು ಮೂರು ಜನ ಅಂತ ನಂಬ್ತಾರೆ. ಯಾಕಂದ್ರೆ ಬೈಬಲ್ನಲ್ಲಿ ಮೂರು ರೀತಿಯ ಉಡುಗೊರೆಗಳಾದ ‘ಚಿನ್ನ ಧೂಪ ಮತ್ತು ರಕ್ತಬೋಳಗಳನ್ನು’ (ಮತ್ತಾಯ 2:11) ಯೇಸುಗೆ ಕೊಡಲು ಅವ್ರು ತಂದ್ರು” ಅಂತ ಹೇಳುತ್ತೆ.
ಆ “ಜ್ಞಾನಿಗಳು” ರಾಜರಾಗಿದ್ರಾ?
ಕ್ರಿಸ್ಮಸ್ ಬಗ್ಗೆ ಇರೋ ಕಥೆಗಳಲ್ಲಿ ಜನ ಅವರನ್ನ ರಾಜರು ಅಂತ ಹೇಳ್ತಾರೆ, ಆದರೆ ಬೈಬಲ್ ಎಲ್ಲೂ ಅವರನ್ನ ರಾಜರು ಅಂತ ಹೇಳಲ್ಲ. ಎನ್ಸೈಕ್ಲಪೀಡಿಯ ಬ್ರಿಟಾನಿಕ ಪ್ರಕಾರ ಯೇಸು ಹುಟ್ಟಿ ನೂರಾರು ವರ್ಷಗಳಾದ ಮೇಲೆ ಜನ ಯೇಸುವಿನ ಜನನದ ಬಗ್ಗೆ ಅವರದ್ದೇ ಆದ ಕಲ್ಪನೆಗಳನ್ನ ಮಾಡಿಕೊಂಡ್ರು. ಯೇಸುನ ನೋಡೋಕೆ ಬಂದವ್ರನ್ನ ರಾಜರು ಅಂತ ಹೇಳೋಕೆ ಶುರು ಮಾಡಿದ್ರು.
ಅವರ ಹೆಸರುಗಳೇನು?
ಆ ಜ್ಯೋತಿಷಿಗಳ ಹೆಸರುಗಳನ್ನ ಬೈಬಲ್ನಲ್ಲಿ ಎಲ್ಲೂ ತಿಳಿಸಿಲ್ಲ. ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲಪೀಡಿಯ ಪ್ರಕಾರ “ಅವರ ಕಲ್ಪಿತ ಕಥೆಗಳಲ್ಲಿ ಅವರ ಹೆಸರುಗಳು ಹೀಗಿದೆ: ಗಾಸ್ಪಾರ್, ಮೆಲ್ಕಿಯೊರ್ ಮತ್ತು ಬಾಲ್ಟಾಜಾರ್.”
-
-
“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
a ಕ್ರಿ.ಪೂ. ಐದನೇ ಶತಮಾನದಲ್ಲಿದ್ದ ಗ್ರೀಕ್ ಇತಿಹಾಸಕಾರ ಹೆರಾಡಟಸ್, ಅವನ ಕಾಲದಲ್ಲಿ ಇದ್ದಂತಹ ಮಾಗೋಯ್ ಮೇದ್ಯ (ಪರ್ಶಿಯನ್) ಜನಾಂಗಕ್ಕೆ ಸೇರಿದವರಾಗಿದ್ದು, ಜ್ಯೋತಿಷ್ಯ ಮತ್ತು ಕನಸುಗಳ ಅರ್ಥವನ್ನ ವಿವರಿಸೋದರಲ್ಲಿ ನಿಪುಣರಾಗಿದ್ರು ಅಂತ ಹೇಳಿದ್ದಾನೆ.
b ನ್ಯೂ ಅಮೆರಿಕನ್ ಸ್ಟ್ಯಾಂಡರ್ಡ್ ಬೈಬಲ್, ದ ನ್ಯೂ ಅಮೆರಿಕನ್ ಬೈಬಲ್, ದ ನ್ಯೂ ಇಂಗ್ಲೀಷ್ ಬೈಬಲ್, ನ್ಯೂ ಇಂಟರ್ನ್ಯಾಷನಲ್ ವರ್ಷನ್ ಸ್ಟಡಿ ಬೈಬಲ್ಗಳನ್ನ ನೋಡಿ. ಕಿಂಗ್ ಜೇಮ್ಸ್ ವರ್ಷನ್ ಇವರನ್ನ “ಜ್ಞಾನಿಗಳು” ಅಂತ ಹೇಳುತ್ತೇ ಆದ್ರೆ ಅವರು ಮೂರು ಜನ ಅಂತ ಹೇಳಲ್ಲ.
-