ಪಾಠ 54
“ನಂಬಿಗಸ್ತ, ವಿವೇಕಿ ಆದ ಆಳು” ಯಾರು ಮತ್ತು ಯಾವ ಕೆಲಸ ಮಾಡುತ್ತಿದೆ?
ಕ್ರೈಸ್ತ ಸಭೆಯ ಯಜಮಾನ ಯೇಸು. (ಎಫೆಸ 5:23) ಸ್ವರ್ಗದಲ್ಲಿ ರಾಜನಾಗಿರುವ ಯೇಸು ಭೂಮಿಯಲ್ಲಿರುವ ತನ್ನ ಶಿಷ್ಯರನ್ನ ಮಾರ್ಗದರ್ಶಿಸುತ್ತಿದ್ದಾನೆ. ಅದಕ್ಕಾಗಿ ಆತನು ‘ನಂಬಿಗಸ್ತ, ವಿವೇಕಿ ಆದ ಆಳನ್ನು’ ಬಳಸುತ್ತಾನೆ. (ಮತ್ತಾಯ 24:45 ಓದಿ.) ಈ ಆಳು ಯೇಸು ಕ್ರಿಸ್ತನಿಂದ ನೇಮಕವನ್ನ ಪಡೆದಿದೆ. ಈ ಆಳಿಗೆ ಸ್ವಲ್ಪಮಟ್ಟಿಗಿನ ಅಧಿಕಾರ ಇರೋದಾದ್ರೂ ಯೇಸು ಕ್ರಿಸ್ತನಿಗೆ ಅಧೀನವಾಗಿದ್ದು, ಅಭಿಷಿಕ್ತ ಸಹೋದರರಿಗೆ ಸಹಾಯ ಮಾಡುತ್ತದೆ. ಈ ಆಳು ಯಾರು? ಮತ್ತು ಈ ಆಳು ನಮ್ಮನ್ನ ಹೇಗೆ ನೋಡಿಕೊಳ್ಳುತ್ತಿದೆ?
1. “ನಂಬಿಗಸ್ತ, ವಿವೇಕಿ ಆದ ಆಳು” ಯಾರು?
ಯೆಹೋವನು ಹಿಂದಿನ ಕಾಲದಿಂದಲೂ ತನ್ನ ಜನರನ್ನ ನೋಡಿಕೊಳ್ಳೋಕೆ ಒಬ್ಬ ವ್ಯಕ್ತಿಯನ್ನ ಅಥವಾ ಕೆಲವು ಪುರುಷರನ್ನ ನೇಮಿಸುತ್ತಾ ಬಂದಿದ್ದಾನೆ. (ಮಲಾಕಿ 2:7; ಇಬ್ರಿಯ 1:1) ಯೇಸುವಿನ ಮರಣದ ನಂತರ ಯೆರೂಸಲೇಮಿನಲ್ಲಿದ್ದ ಹಿರಿಯರು ಮತ್ತು ಅಪೊಸ್ತಲರು ಈ ಕೆಲಸವನ್ನ ಮಾಡಿದ್ದರು. (ಅಪೊಸ್ತಲರ ಕಾರ್ಯ 15:2) ಅದೇ ರೀತಿ ಇವತ್ತೂ ಕೂಡ ಹಿರಿಯರ ಒಂದು ಚಿಕ್ಕ ಗುಂಪು ಯೆಹೋವನ ಜನರಿಗೆ ಮಾರ್ಗದರ್ಶನವನ್ನ ಕೊಡುತ್ತಿದೆ. ಈ ಗುಂಪನ್ನ ಆಡಳಿತ ಮಂಡಲಿ ಅಂತ ಕರೆಯುತ್ತಾರೆ. ಈ ಗುಂಪು ಯೆಹೋವನ ಜನರಿಗೆ ಅಧ್ಯಾತ್ಮಿಕ ಆಹಾರವನ್ನ ಕೊಡುತ್ತಿದೆ ಮತ್ತು ಸಾರುವ ಕೆಲಸವನ್ನ ಮಾರ್ಗದರ್ಶಿಸುತ್ತಿದೆ. ಇದೇ “ಯಜಮಾನ [ಯೇಸು] ನೇಮಿಸಿದ ನಂಬಿಗಸ್ತ, ವಿವೇಕಿ ಆದ ಆಳು.” (ಮತ್ತಾಯ 24:45ಬಿ) ಆಡಳಿತ ಮಂಡಲಿಯಲ್ಲಿರುವ ಪ್ರತಿಯೊಬ್ಬರು ಅಭಿಷಿಕ್ತ ಕ್ರೈಸ್ತರಾಗಿರುತ್ತಾರೆ. ಅವರನ್ನ ಯೆಹೋವ ದೇವರು ಪವಿತ್ರ ಶಕ್ತಿಯಿಂದ ಆರಿಸಿಕೊಂಡಿದ್ದಾನೆ. ಅವರು ತೀರಿಹೋದ ಮೇಲೆ ಸ್ವರ್ಗಕ್ಕೆ ಹೋಗಿ ಸಮಯಾನಂತರ ಕ್ರಿಸ್ತನ ಜೊತೆ ಭೂಮಿಯ ಮೇಲೆ ಆಳ್ವಿಕೆ ಮಾಡುತ್ತಾರೆ.
2. ನಂಬಿಗಸ್ತ ಆಳು ಆಧ್ಯಾತ್ಮಿಕ ಆಹಾರವನ್ನ ಹೇಗೆಲ್ಲಾ ಕೊಡುತ್ತಿದೆ?
ನಂಬಿಗಸ್ತ ಆಳು ‘ಜೊತೆ ಕ್ರೈಸ್ತರಿಗೆ ತಕ್ಕ ಸಮಯಕ್ಕೆ ಆಹಾರ ಕೊಡುತ್ತೆ’ ಅಂತ ಯೇಸು ಹೇಳಿದನು. (ಮತ್ತಾಯ 24:45ಎ) ಆ ಆಹಾರ ಯಾವುದು? ಅದು ಆಧ್ಯಾತ್ಮಿಕ ಆಹಾರ. ಅದನ್ನ ನಾವು ಬೈಬಲಿನ ಮೂಲಕ ಪಡೆದುಕೊಳ್ಳುತ್ತೇವೆ. ನಾವು ತಿನ್ನುವ ಆಹಾರದಿಂದ ನಮಗೆ ಶಕ್ತಿ ಮತ್ತು ಆರೋಗ್ಯ ಸಿಗುತ್ತೆ. ಅದೇ ತರ ಯೆಹೋವ ದೇವರು ಕೊಡುವ ಆಧ್ಯಾತ್ಮಿಕ ಆಹಾರ ಸಹ ಬಲ ಕೊಡುತ್ತೆ. ನಾವು ಯೆಹೋವನಿಗೆ ನಂಬಿಗಸ್ತರಾಗಿ ಇರಲು ಮತ್ತು ಯೇಸು ಕೊಟ್ಟ ಕೆಲಸವನ್ನ ಒಳ್ಳೇ ರೀತಿಯಲ್ಲಿ ಮಾಡಲು ಈ ಆಳು ಸಹಾಯ ಮಾಡುತ್ತೆ. (1 ತಿಮೊತಿ 4:6) ಕೂಟಗಳ, ಸಮ್ಮೇಳನಗಳ, ಅಧಿವೇಶನಗಳ, ಬೈಬಲ್ ಆಧಾರಿತ ಪ್ರಕಾಶನಗಳ ಮತ್ತು ವಿಡಿಯೋಗಳ ಮೂಲಕ ನಮಗೆ ಆಧ್ಯಾತ್ಮಿಕ ಆಹಾರವನ್ನ ಕೊಡುತ್ತಿದೆ. ಈ ಏರ್ಪಾಡು ಯೆಹೋವ ದೇವರ ಬಗ್ಗೆ ತಿಳಿದುಕೊಳ್ಳಲು ಮತ್ತು ಆತನ ಜೊತೆ ಆಪ್ತ ಸ್ನೇಹವನ್ನ ಬೆಳಸಿಕೊಳ್ಳಲು ಸಹಾಯ ಮಾಡುತ್ತೆ.
ಹೆಚ್ಚನ್ನ ತಿಳಿಯೋಣ
ನಮಗೆ ಯಾಕೆ ‘ನಂಬಿಗಸ್ತ, ವಿವೇಕಿ ಆದ ಆಳಿನ’ ಅಥವಾ ಆಡಳಿತ ಮಂಡಲಿಯ ಸಹಾಯ ಬೇಕು ಅಂತ ತಿಳಿದುಕೊಳ್ಳಿ.
3. ಯೆಹೋವನ ಜನರು ಸಂಘಟಿತರಾಗಿ ಇರಲೇಬೇಕು
ಯೇಸು ಕ್ರಿಸ್ತನ ನಿರ್ದೇಶನದಂತೆ ಆಡಳಿತ ಮಂಡಲಿ ಯೆಹೋವನ ಸಾಕ್ಷಿಗಳ ಕೆಲಸವನ್ನ ವ್ಯವಸ್ಥಿತವಾಗಿ ಮಾಡುತ್ತಿದೆ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರನ್ನ ಕೂಡ ಯೇಸು ಇದೇ ರೀತಿ ಮಾರ್ಗದರ್ಶಿಸುತ್ತಿದ್ದನು. ವಿಡಿಯೋ ನೋಡಿ.
1 ಕೊರಿಂಥ 14:33, 40 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ.
ತನ್ನ ಜನರು ಸಂಘಟಿತರಾಗಿ ಇರಬೇಕು ಅನ್ನೋದು ಯೆಹೋವನ ಇಷ್ಟ ಅಂತ ಈ ವಚನಗಳಿಂದ ನಮಗೆ ಹೇಗೆ ಗೊತ್ತಾಗುತ್ತೆ?
4. ನಂಬಿಗಸ್ತ ಆಳು ಸಾರುವ ಕೆಲಸವನ್ನ ಸಂಘಟಿಸುತ್ತಿದೆ
ಒಂದನೇ ಶತಮಾನದ ಕ್ರೈಸ್ತರು ಸಿಹಿಸುದ್ದಿ ಸಾರಕ್ಕೆ ತುಂಬ ಪ್ರಾಮುಖ್ಯತೆ ಕೊಡುತ್ತಿದ್ದರು. ಅಪೊಸ್ತಲರ ಕಾರ್ಯ 8:14, 25 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಒಂದನೇ ಶತಮಾನದ ಕ್ರೈಸ್ತರನ್ನ ಸಿಹಿಸುದ್ದಿ ಸಾರಲಿಕ್ಕೆ ಯಾರು ಮಾರ್ಗದರ್ಶಿಸುತ್ತಿದ್ದರು?
ಜೊತೆ ಅಪೊಸ್ತಲರು ಕೊಟ್ಟ ನಿರ್ದೇಶನಗಳನ್ನ ಪೇತ್ರ ಮತ್ತು ಯೋಹಾನ ಹೇಗೆ ಪಾಲಿಸಿದರು?
ಆಡಳಿತ ಮಂಡಲಿ ಸಿಹಿಸುದ್ದಿ ಸಾರುವ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೆ ಮತ್ತು ಆ ಕೆಲಸ ವ್ಯವಸ್ಥಿತವಾಗಿ ನಡೆಯಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡುತ್ತೆ. ವಿಡಿಯೋ ನೋಡಿ.
ಸಿಹಿಸುದ್ದಿ ಸಾರೋದು ತುಂಬ ಪ್ರಾಮುಖ್ಯ ಅಂತ ಯೇಸು ಹೇಳಿದನು. ಮಾರ್ಕ 13:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಆಡಳಿತ ಮಂಡಲಿ ಸಾರುವ ಕೆಲಸಕ್ಕೆ ಯಾಕಷ್ಟು ಪ್ರಾಮುಖ್ಯತೆ ಕೊಡುತ್ತೆ?
ಇಡೀ ಭೂಮಿಯಲ್ಲಿ ಸಿಹಿಸುದ್ದಿಯನ್ನ ವ್ಯವಸ್ಥಿತವಾಗಿ ಸಾರಕ್ಕೆ ನಮಗೆ, ‘ನಂಬಿಗಸ್ತ, ವಿವೇಕಿ ಆದ ಆಳಿನ’ ಸಹಾಯ ಯಾಕೆ ಬೇಕು?
5. ನಂಬಿಗಸ್ತ ಆಳು ನಿರ್ದೇಶನಗಳನ್ನ ಕೊಡುತ್ತೆ
ಇಡೀ ಭೂಮಿಯಲ್ಲಿರುವ ಯೆಹೋವನ ಜನರಿಗೆ ಆಡಳಿತ ಮಂಡಲಿ ನಿರ್ದೇಶನಗಳನ್ನ ಕೊಡುತ್ತೆ. ಯಾವ ರೀತಿಯ ನಿರ್ದೇಶನಗಳನ್ನ ಕೊಡಬೇಕು ಅಂತ ಈ ಮಂಡಲಿ ಹೇಗೆ ತೀರ್ಮಾನ ಮಾಡುತ್ತೆ? ಇದರ ಬಗ್ಗೆ ತಿಳಿದುಕೊಳ್ಳಲು ಒಂದನೇ ಶತಮಾನದ ಆಡಳಿತ ಮಂಡಲಿಯ ಬಗ್ಗೆ ನೋಡೋಣ. ಅಪೊಸ್ತಲರ ಕಾರ್ಯ 15:1, 2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಒಂದನೇ ಶತಮಾನದ ಕ್ರೈಸ್ತರ ಮಧ್ಯೆ ಯಾವ ಸಮಸ್ಯೆ ಬಂತು?
ಆ ಸಮಸ್ಯೆಯನ್ನ ಬಗೆಹರಿಸಲಿಕ್ಕಾಗಿ ಪೌಲ, ಬಾರ್ನಬ ಮತ್ತು ಇತರರು ಯಾರ ಹತ್ತಿರ ಹೋದರು?
ಅಪೊಸ್ತಲರ ಕಾರ್ಯ 15:12-18, 23-29 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಒಂದು ತೀರ್ಮಾನಕ್ಕೆ ಬರುವ ಮೊದಲು ಆಗಿನ ಆಡಳಿತ ಮಂಡಲಿ ದೇವರ ಮಾರ್ಗದರ್ಶನ ಪಡೆಯಲಿಕ್ಕೆ ಏನು ಮಾಡಿತು?—ವಚನ 12, 15 ಮತ್ತು 28 ನೋಡಿ.
ಅಪೊಸ್ತಲರ ಕಾರ್ಯ 15:30, 31 ಮತ್ತು 16:4, 5 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಆಡಳಿತ ಮಂಡಲಿ ಮಾರ್ಗದರ್ಶನವನ್ನ ಕೊಟ್ಟಾಗ ಒಂದನೇ ಶತಮಾನದ ಕ್ರೈಸ್ತರು ಏನು ಮಾಡಿದರು?
ಆ ನಿರ್ದೇಶನಗಳನ್ನ ಪಾಲಿಸಿದ್ರಿಂದ ಯೆಹೋವನು ಅವರನ್ನ ಹೇಗೆ ಆಶೀರ್ವದಿಸಿದನು?
2 ತಿಮೊತಿ 3:16 ಮತ್ತು ಯಾಕೋಬ 1:5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಈಗ ಇರುವ ಆಡಳಿತ ಮಂಡಲಿ ಒಂದು ತೀರ್ಮಾನವನ್ನ ತೆಗೆದುಕೊಳ್ಳುವ ಮುಂಚೆ ಎಲ್ಲಿಂದ ಮಾರ್ಗದರ್ಶನವನ್ನ ಪಡೆದುಕೊಳ್ಳುತ್ತೆ?
ಕೆಲವರು ಹೀಗಂತಾರೆ: “ನಾವು ಆಡಳಿತ ಮಂಡಲಿಯ ಮಾತನ್ನ ಕೇಳಿದ್ರೆ ಮನುಷ್ಯರನ್ನ ಹಿಂಬಾಲಿಸಿದಂತೆ ಆಗುತ್ತೆ.”
ಆಡಳಿತ ಮಂಡಲಿಯನ್ನ ಯೇಸು ಕ್ರಿಸ್ತನೇ ಮಾರ್ಗದರ್ಶಿಸುತ್ತಿದ್ದಾನೆ ಅಂತ ನಿಮಗೆ ಅನಿಸುತ್ತಾ? ಯಾಕೆ?
ನಾವೇನು ಕಲಿತ್ವಿ
ಈಗಿರುವ ಆಡಳಿತ ಮಂಡಲಿನೇ “ನಂಬಿಗಸ್ತ, ವಿವೇಕಿ ಆದ ಆಳು.” ಈ ಆಳನ್ನ ಯೇಸು ಕ್ರಿಸ್ತ ನೇಮಿಸಿದ್ದಾನೆ. ಈ ಗುಂಪು ಇಡೀ ಭೂಮಿಯಲ್ಲಿರುವ ಯೆಹೋವನ ಜನರಿಗೆ ಆಧ್ಯಾತ್ಮಿಕ ಆಹಾರವನ್ನ ಮತ್ತು ನಿರ್ದೇಶನಗಳನ್ನ ಕೊಡುತ್ತಿದೆ.
ನೆನಪಿದೆಯಾ
‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸಿದ್ದು ಯಾರು?
ಆಡಳಿತ ಮಂಡಲಿ ನಮ್ಮನ್ನ ಹೇಗೆ ನೋಡಿಕೊಳ್ಳುತ್ತಿದೆ?
ಆಡಳಿತ ಮಂಡಲಿನೇ “ನಂಬಿಗಸ್ತ, ವಿವೇಕಿ ಆದ ಆಳು” ಅಂತ ನೀವು ನಂಬುತ್ತೀರಾ?
ಇದನ್ನೂ ನೋಡಿ
ಆಡಳಿತ ಮಂಡಲಿ ಹೇಗೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಅಂತ ತಿಳಿದುಕೊಳ್ಳಿ.
ಸರಿಯಾದ ಮಾಹಿತಿಯನ್ನೇ ಕೊಡಲಿಕ್ಕಾಗಿ ಆಡಳಿತ ಮಂಡಲಿ ಏನೆಲ್ಲಾ ಮಾಡುತ್ತಿದೆ ಅಂತ ತಿಳಿದುಕೊಳ್ಳಿ.
ಯೇಸು ಕೊಟ್ಟ ಕೆಲಸದ ಬಗ್ಗೆ ಆಡಳಿತ ಮಂಡಲಿಗೆ ಹೇಗನಿಸುತ್ತೆ ಅಂತ ತಿಳಿದುಕೊಳ್ಳಿ.
ಯೆಹೋವ ದೇವರು ಆಡಳಿತ ಮಂಡಲಿಯನ್ನ ಮಾರ್ಗದರ್ಶಿಸುತ್ತಿದ್ದಾನೆ ಅಂತ ಕೂಟಗಳು ಮತ್ತು ಅಧಿವೇಶನಗಳು ಹೇಗೆ ತೋರಿಸುತ್ತೆ ಅಂತ ನೋಡಿ.