-
“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ಎಷ್ಟು ಮಂದಿ “ಜ್ಞಾನಿಗಳು” ಇದ್ರು?
ಇದರ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದರೆ ಒಬ್ಬೊಬ್ಬರು ಒಂದೊಂದು ತರ ಹೇಳ್ತಾರೆ. ಎನ್ಸೈಕ್ಲಪೀಡಿಯ ಬ್ರಿಟಾನಿಕ “ಏಷ್ಯಾದ ಜನರು 12 ಜನ ಅಂತ ಹೇಳ್ತಾರೆ, ಆದರೆ ಅಮೇರಿಕ ಮತ್ತು ಯೂರೋಪಿನವರು ಮೂರು ಜನ ಅಂತ ನಂಬ್ತಾರೆ. ಯಾಕಂದ್ರೆ ಬೈಬಲ್ನಲ್ಲಿ ಮೂರು ರೀತಿಯ ಉಡುಗೊರೆಗಳಾದ ‘ಚಿನ್ನ ಧೂಪ ಮತ್ತು ರಕ್ತಬೋಳಗಳನ್ನು’ (ಮತ್ತಾಯ 2:11) ಯೇಸುಗೆ ಕೊಡಲು ಅವ್ರು ತಂದ್ರು” ಅಂತ ಹೇಳುತ್ತೆ.
-
-
“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ಜ್ಯೋತಿಷಿಗಳು ಯೇಸು ಹುಟ್ಟಿದ ಅದೇ ರಾತ್ರಿ ಆತನನ್ನ ಭೇಟಿ ಮಾಡಲಿಲ್ಲ. ‘ಅವರು ಮನೆಯೊಳಗೆ ಹೋದಾಗ ಚಿಕ್ಕ ಮಗುವನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡರು’ ಅಂತ ಬೈಬಲ್ ಹೇಳುತ್ತೆ. (ಮತ್ತಾಯ 2:11) ಇದರಿಂದ ನಮಗೆ ಏನು ಗೊತ್ತಾಗುತ್ತೆ ಅಂದ್ರೆ ಅವರು ಯೇಸುನ ಭೇಟಿಮಾಡಿದಾಗ ಯೇಸು ಗೊದಲಿಯಲ್ಲಿ ಇರಲಿಲ್ಲ. ಬದಲಾಗಿ ಅವರ ಕುಟುಂಬ ಒಂದು ಮನೆಯಲ್ಲಿ ಇತ್ತು.—ಲೂಕ 2:16.
-