-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು—2014 | ಡಿಸೆಂಬರ್ 15
-
-
“ಯೆಹೋವನು ಇಂತೆನ್ನುತ್ತಾನೆ—‘ರಾಮದಲ್ಲಿ ಬೊಬ್ಬೆಯು ಕೇಳಿಸುತ್ತದೆ, ಗೋಳಾಟವೂ ಘೋರರೋದನವೂ ಉಂಟಾಗಿವೆ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು ಅವರು ಇಲ್ಲದೆಹೋದದ್ದಕ್ಕಾಗಿ ಸಮಾಧಾನಹೊಂದಲೊಲ್ಲದೆ ಇದ್ದಾಳೆ’” ಎಂದು ಯೆರೆಮೀಯ 31:15ರಲ್ಲಿ ತಿಳಿಸಲಾಗಿದೆ.
-
-
ವಾಚಕರಿಂದ ಪ್ರಶ್ನೆಗಳುಕಾವಲಿನಬುರುಜು—2014 | ಡಿಸೆಂಬರ್ 15
-
-
ರಾಹೇಲಳು ಅಳುವುದರ ಕುರಿತು ಯೆರೆಮೀಯನು ಹೇಳಿದ ವಿಷಯ ಒಂದು ಪ್ರವಾದನೆ ಸಹ ಆಗಿದೆ. ಈ ಪ್ರವಾದನೆ ಪುಟ್ಟ ಮಗು ಯೇಸುವಿನ ಪ್ರಾಣಕ್ಕೆ ಅಪಾಯ ಬಂದ ಸಂದರ್ಭದಲ್ಲಿ ನೆರವೇರಿತು. ದಕ್ಷಿಣ ಯೆರೂಸಲೇಮಿನ ಬೇತ್ಲೆಹೇಮ್ ಊರಿನಲ್ಲಿರುವ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳನ್ನು ಕೊಲ್ಲುವಂತೆ ಅರಸ ಹೆರೋದನು ಆಜ್ಞೆ ಹೊರಡಿಸಿದನು. ಪರಿಣಾಮವಾಗಿ ಆ ವಯಸ್ಸಿನ ಗಂಡು ಮಕ್ಕಳನ್ನೆಲ್ಲಾ ಸಾಯಿಸಿದರು. ಆಗ ಆ ಮಕ್ಕಳ ತಾಯಂದಿರು ಎಷ್ಟು ಅತ್ತಿರಬಹುದೆಂದು ಸ್ಪಲ್ಪ ಯೋಚಿಸಿ. ಅವರ ಅಳು ಉತ್ತರ ಯೆರೂಸಲೇಮಿನ ರಾಮವನ್ನು ಮುಟ್ಟುವಷ್ಟಿತ್ತು.—ಮತ್ತಾ. 2:16-18.
ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಿದ್ದಾಳೆ ಎಂದು ಯೆರೆಮೀಯನು ಬರೆದ ವಿಷಯ ಸೂಕ್ತವಾಗಿಯೇ ಎರಡು ಸಂದರ್ಭಗಳಿಗೆ ಸೂಚಿಸುತ್ತದೆ. ಒಂದು ಯೆರೆಮೀಯನ ಸಮಯದಲ್ಲಿ, ಇನ್ನೊಂದು ಪ್ರಥಮ ಶತಮಾನದಲ್ಲಿ. ಈ ಎರಡೂ ಸಂದರ್ಭದಲ್ಲಿ ಯೆಹೂದಿ ತಾಯಂದಿರು ತಮ್ಮ ಮಕ್ಕಳು ಹತರಾಗಿದ್ದಕ್ಕಾಗಿ ಅಳುವುದನ್ನು ಸೂಚಿಸುತ್ತದೆ. ಆದರೆ ಯಾರು ಸತ್ತಿದ್ದಾರೋ ಅವರು ‘ಶತ್ರುವಿನ ದೇಶಕ್ಕೆ’ ಹೋದಂತಿದ್ದಾರೆ. ಪುನರುತ್ಥಾನವಾಗುವಾಗ ಮರಣವೆಂಬ ಆ ಶತ್ರುವಿನ ಹಿಡಿತದಿಂದ ಅವರು ತಪ್ಪಿಸಿಕೊಳ್ಳುವರು.—ಯೆರೆ. 31:16; 1 ಕೊರಿಂ. 15:26.
-