ವಾಗ್ದಾನ ದೇಶದಿಂದ ದೃಶ್ಯಗಳು
ನಜರೇತ್—ಪ್ರವಾದಿಯ ಮನೆ
“ಜನರ ಗುಂಪಿನವರು- ಈತನು ಆ ಪ್ರವಾದಿ, ಗಲಿಲಾಯದ ನಜರೇತಿನ ಯೇಸು ಅಂದರು!” ಹೌದು, ಯೇಸುವಿನ ಶುಶ್ರೂಷೆಯ ಸಮಯದಲ್ಲಿ, ಅವನನ್ನು ಕೇವಲ ಉಲ್ಲೇಖಿಸುವದು ತಾನೇ ಈಗ ಪ್ರಖ್ಯಾತ ನಗರವಾದ ನಜರೇತನ್ನು ಮನಸ್ಸಿಗೆ ತರುತ್ತಿತ್ತು. ಆದದರಿಂದ ಅವನನ್ನು ಸೆರೆಹಿಡಿಯಲು ಬಂದವರು, ತಾವು ಯೇಸುವನ್ನು ಹುಡುಕುತ್ತೇವೆಂದು ಹೇಳದೆ “ನಜರೇತಿನ ಯೇಸುವನ್ನು” ಹುಡುಕುತ್ತೇವೆ ಅಂದರು.—ಮತ್ತಾಯ 21:11; 26:71; ಯೋಹಾನ 18:3-5; ಅ. ಕೃತ್ಯ 26:9.
ಮೇಲಿನ ಚಿತ್ರವು, ನೀವಿಂದು ನಜರೇತನ್ನು ಭೇಟಿಯಾದರೆ ನೀವು ಕಾಣುವ ನಗರವಾಗಿದೆ. ಇದು, “ಗಲಿಲಾಯ ಸೀಮೆಯ ನಜರೇತೆಂಬ” ಊರಿಗೆ ದೇವದೂತನು, ದೇವರ ಮಗನನ್ನು ಅವಳು ಹೆರಲಿದ್ದಾಳೆಂದು ಮರಿಯಳಿಗೆ ಹೇಳಲು ಬಂದ ಸಮಯಕ್ಕಿಂತಲೂ ಎಷ್ಟೋ ದೊಡ್ಡದಾಗಿರುತ್ತದೆ. (ಲೂಕ 1:26-33) ಮುಂದಿನ ಪುಟದಲ್ಲಿ ತೋರಿಸಿದಂತೆ, ಆಗಿನ ನಜರೇತು, ಬಹುಪಕ್ಷ ಒಂದು ಊರಾಗಿದ್ದು, ಬೆಟ್ಟದ ಪಕ್ಕದಲ್ಲಿ ಚಚ್ಚೌಕ ಮನೆಗಳು ಗುಂಪಾಗಿ ಇದ್ದವು. ಯೋಸೇಫನೂ ಮರಿಯಳೂ ಇಲ್ಲಿರುವಂತಹ ಮನೆಗಳೊಂದರಲ್ಲಿ ವಾಸಿಸಿದ್ದಿರಬಹುದು. ಆದರೆ ಮರಿಯಳು ಹೆರುವ ಸ್ವಲ್ಪ ಮುಂಚೆ ಅವರು ದಕ್ಷಿಣದ ಬೆತ್ಲೆಹೇಮಿಗೆ ಹೋಗಬೇಕಾಯಿತು ಮತ್ತು ಯೇಸುವು ಅಲ್ಲಿ ಜನಿಸಿದನು. ಹೆರೋದನ ಕೊಲೆಗೈಯುವ ತಂತ್ರಗಳಿಂದ ಮಗುವನ್ನು ರಕ್ಷಿಸಲು ಅವರು ಅನಂತರ ಐಗುಪ್ತ್ಯಕ್ಕೆ ಓಡಿಹೋಗಬೇಕಾಯಿತು. ಅನಂತರ, “ಗಲಿಲಾಯಕ್ಕೆ ಸೇರಿದ ನಜರೇತೆಂಬ ತಮ್ಮ ಊರಿಗೆ ಹಿಂತಿರುಗಿ ಹೋದರು.”—ಲೂಕ 2: 4, 39; ಮತ್ತಾಯ 2:13-23.
ಈ ರೀತಿ ಯೇಸುವು ಗೊಂದಲದ ಕೇಂದ್ರವಾಗಿದ್ದ ಯೆರೂಸಲೇಮಿನಲ್ಲಾಗಲಿ, ತಿಬೇರಿಯನ್ನಲ್ಲಾಗಲಿ ಬೆಳೆಯದೆ, ಶಾಂತ ಪ್ರದೇಶದಲ್ಲಿ ಬೆಳೆದನು. ಕೆಳ ಗಲಿಲಾಯದ ಬೆಟ್ಟಗಳಿಂದಾವೃತ ನಜರೇತು ಒಂದು ಜಲಾನಯನ ಭೂಮಿಯಾಗಿದ್ದು ದವಸಧಾನ್ಯ, ದ್ರಾಕ್ಷೆ, ಆಲಿವ್ ಮತ್ತು ಅಂಜೂರಗಳಿಂದ ಸಮೃದ್ಧವಾಗಿತ್ತು. ಅಲ್ಲಿನ ತಣ್ಣಗಿನ ಬೇಸಗೆಕಾಲ ಆಹ್ಲಾದಕರವಾಗಿತ್ತು, ಆದರೂ ಮೇಲಿನ ಗಲಿಲಾಯದಂತೆ, ಚಳಿಗಾಲವು ಅಷ್ಟೊಂದು ತೀಕ್ಷ್ಣವಾಗಿರಲಿಲ್ಲ.
ಬಡಗಿಯಾಗಿ ಕೆಲಸ ಮಾಡುತ್ತಾ ಯೋಸೇಫನು ತನ್ನ ಹೆಂಡತಿ, ಪುತ್ರಪುತ್ರಿಯರ ಪೋಷಣೆ ಮಾಡುತ್ತಿದ್ದನು, ಪ್ರಾಯಶ: ಆಧುನಿಕ ನಜರೇತಿನಲ್ಲಿದ್ದಂತೆ ಒಂದು ಅಂಗಡಿ ಇದ್ದಿರಬಹುದು. ಅವನು ನಗರದಲ್ಲಿನ ಮನೆಗಳಿಗೆ ಮಾಡಿನ ತೊಲೆಗಳನ್ನು, ಮರದ ಬಾಗಿಲುಗಳನ್ನು, ಮೇಜುಗಳನ್ನು, ಕುರ್ಚಿಗಳನ್ನು ಮತ್ತು ಇತರ ಪೀಠೋಪಕರಣಗಳನ್ನು ಮಾಡಿದ್ದಿರಬಹುದು. ಯೇಸು ಇದನ್ನೆಲ್ಲಾ ನೋಡಿದನು ಮತ್ತು ಕಲಿತನೆಂದು ನಾವು ಬಲ್ಲೆವು, ಯಾಕಂದರೆ ಅವನೂ “ಒಬ್ಬ ಬಡಗಿ” ಎಂದು ಕರೆಯಲ್ಪಡುತ್ತಿದ್ದನು. (ಮಾರ್ಕ 6:3; ಮತ್ತಾಯ 13:55) ನಜರೇತಿನ ಆಸುಪಾಸಿನ ವ್ಯವಸಾಯದ ಕೆಲಸವು ಇತರ ವೃತ್ತಿಗಳಿಗೂ ನಡಿಸಿದ್ದಿರಬಹುದು. ಪ್ರಾಯಶಃ ಯೇಸುವು ಪ್ರಾಣಿಗಳ ಮೇಲಿಡುವ ನೊಗವನ್ನು ರಚಿಸಿದ್ದಿರಬಹುದು. ಅದೇ ಸಮಯದಲ್ಲಿ ಯೋಸೇಫನು ತನ್ನ ಉಪಕರಣಗಳನ್ನು ಬಳಸಿ, ನೇಗಿಲುಗಳನ್ನು ಇಲ್ಲವೇ, ನೊಗದ ಹಿಂದೆ ಎಳೆಯಲ್ಪಡುವ ಹಂತೀಕುಂಟೆಗಳನ್ನು ಮಾಡಿದ್ದಿರಬಹುದು.—2 ಸಮುವೇಲ 24:22; ಯೆಶಾಯ 44:13.
ಹುಡುಗನೋಪಾದಿ ಯೇಸುವು ಉತ್ತರದಲ್ಲಿ 8 ಮೈಲು ದೂರವಿರುವ “ಗಲಿಲಾಯದ ಕಾನಾ” ದಂತಹ ನಜರೇತಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚರಿಸಿದ್ದಿರಬಹುದು. ಇಲ್ಲಿ ಅವನ ಪ್ರಥಮ ಅದ್ಭುತವನ್ನು ಯೇಸುವು ಅನಂತರ ನಡಿಸಿದನು. (ಯೋಹಾನ 2:1-12) ಆಗ್ನೇಯಕ್ಕೆ ಸುಮಾರು ಆರು ಮೈಲು ನಡೆದರೆ ಇಜ್ರೇಲಿನ ಕಣಿವೆ ಮತ್ತು ಮೋರೆ ಗುಡ್ಡ ಸಿಕ್ಕುತ್ತದೆ, ಅಲ್ಲಿ 11ನೇ ಪುಟದಲ್ಲಿ ತೋರಿಸಿದಂತೆ ನಾಯಿನ ಎಂಬ ಊರಿಗೆ ಯೇಸು ತಲಪಬಹುದು.a (ನ್ಯಾಯಸ್ಥಾಪಕರು 6:33; 7:1) ನೆನಪಿಗೆ ತನ್ನಿರಿ, ಅವನ ಮೊದಲ ಸಾರುವ ಪ್ರಯಾಣದಲ್ಲಿ, ಯೇಸುವಿಗೆ ನಾಯೀನದ ಹತ್ತಿರ ಒಂದು ಶವ ಹೊತ್ತು ಹೋಗುವವರ ಮೆರವಣಿಗೆ ಭೇಟಿಯಾಯಿತು. ಕನಿಕರಪಟ್ಟು, ವಿಧವೆಯ ಮಗನನ್ನು ಅವನು ಪುನರುತ್ಥಾನ ಮಾಡಿದನು.—ಲೂಕ 7:11-16.
ದೇಶದ ಯಾವುದೇ ಹೆದ್ದಾರಿಗಳಲ್ಲಿ ನಜರೇತು ಇರಲಿಲ್ಲವಾದರೂ, ಅಂತಹ ಹೆದ್ದಾರಿಗಳನ್ನು ತಲಪಲು ಅದಕ್ಕೆ ಸುಲಭ ಹಾದಿಗಳಿದ್ದವು. ಯೆಹೋವನ ಸಾಕ್ಷಿಗಳ 1990ರ ಕ್ಯಾಲೆಂಡರ್ನ ಆವರಣದ ಭೂಪಟದಲ್ಲಿ ನೀವಿದನ್ನು ಕಾಣಬಹುದು, ಇದರಲ್ಲಿ ಇಂದಿನ ನಜರೇತಿನ ಒಂದು ದೊಡ್ಡ ಚಿತ್ರವು ಇದೆ. ಪೂರ್ವ-ಪಶ್ಚಿಮ ದಾರಿಗಳು ಇಜ್ರೇಲಿನ ತಗ್ಗಿನ ಮೂಲಕ ಅಕ್ರಾ ಹಡಗು ಬಂದರನ್ನು, ಯಾ ಟೋಲಿಮಯಸ್ನ್ನು ಗಲಿಲಾಯ ಸಮುದ್ರ ಮತ್ತು ಯೋರ್ದಾನ್ ಕಣಿವೆಯನ್ನು ಜೋಡಿಸುತ್ತದೆ. ಅದರ ನಡುವೆ ದಕ್ಷಿಣದ ದಮಾಸ್ಕನಿಂದ ಸಮಾರ್ಯದ ಮೂಲಕ ಯೆರೂಸಲೇಮಿಗೆ ಹೋಗುವ ಒಂದು ದಾರಿಯು ಇದೆ.
ನಜರೇತಿನಲಿ ಅದರದ್ದೇ ಸಭಾಮಂದಿರವಿತ್ತು, ತನ್ನ ಆರಂಭದ ಶುಶ್ರೂಷೆಯ ಸಮಯದಲ್ಲಿ ಯೇಸುವು “ತನ್ನ ವಾಡಿಕೆಯ ಪ್ರಕಾರ” ಅಲ್ಲಿಗೆ ಹೋಗಿದ್ದನು. ತನಗೇ ಅನ್ವಯಿಸಿ ಅವನು ಯೆಶಾಯ 61:1, 2ನ್ನು ಓದಿದನು. ಆ ಊರಿನ ಜನರು ಹೇಗೆ ಪ್ರತಿವರ್ತಿಸಿದರು? ಅವರಲ್ಲಿ ಕೆಲವರು ಅಲಿ ಅವನು ಬೆಳೆದಿರುವದನ್ನು ಕಂಡಿದ್ದರು ಮತ್ತು ಅವನ ಬಡಗಿಯ ಕೆಲಸಕ್ಕೆ ಹಣವನ್ನೂ ತೆತ್ತಿರಬಹುದು? ಅವರು ಕೋಪಗೊಂಡು ಗುಡ್ಡದ ಕಡಿದಾದ ಸ್ಥಳದಲ್ಲಿ ದೊಬ್ಬಬೇಕೆಂದಿದ್ದರು, ಆದರೆ ಯೇಸು ಅಲ್ಲಿಂದ ಪಾರಾದನು. (ಲೂಕ 4:16-30) ನಾಯೀನದಲ್ಲಿ ಮತ್ತು ಬೇರೆ ಕಡೆಗಳಲ್ಲಿ ಅನಂತರ ಅವನೇನು ಮಾಡಿದ್ದನೆಂಬದು ನಜರೇತಿಗೆ ತಲಪಿರಬೇಕು, ಯಾಕಂದರೆ ಪುನ: ಅವನು ಬಂದು ಸ್ಥಳೀಕ ಸಭಾಮಂದಿರದಲ್ಲಿ ಉಪದೇಶಿಸಿದಾಗ, ಅವನನ್ನು ಕೊಲ್ಲುವ ವಿಷಯದಲ್ಲಿ ಯಾರೂ ಮಾತಾಡಲಿಲ್ಲ. ಆದರೂ, “ಅವನು ಅಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲ“ ಯಾಕೆಂದರೆ ನಜರೇತಿನ ಪರಿಚಯಸ್ಥರು ಅವನನ್ನು ಪ್ರವಾದಿಯೆಂದು ನಂಬಲಿಲ್ಲ.—ಮತ್ತಾಯ 13:53-58.
ಯೇಸುವಿನ ಪ್ರತಿಕ್ರಿಯೆಯನ್ನು ಮಾರ್ಕನು ದಾಖಲೆಮಾಡುತ್ತಾನೆ. “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ.” ನಜರೇತಿನ ಅನೇಕರ ವಿಷಯದಲ್ಲಿ ಇದು ಸತ್ಯವಾಗಿದ್ದದ್ದು ಎಷ್ಟೊಂದು ಶೋಚನೀಯ. ನಾವು ಮರ್ಯಾದೆ ತೋರಿಸಲು ಆರಿಸುವ ಪ್ರವಾದಿಯ ಮನೆಯಾಗಿ ಆ ನಗರದ ಕುರಿತು ನಾವು ಯೋಚಿಸ ಶಕ್ತರಾಗಿದ್ದೇವೆ.—ಮಾರ್ಕ 6:4. (w90 3/1)
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳ 1990ರ ಕ್ಯಾಲೆಂಡರ್ನ ಆವರಣದ ಭೂಪಟದಲ್ಲಿ ನಜರೇತ್ #2ರಲ್ಲಿದೆ. ಮೋರೆ ಗುಡ್ಡಗಳು #3 ಕೆಳಗಡೆ ಕಾಣಿಸುತ್ತವೆ.
[ಪುಟ 10 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 17 ರಲ್ಲಿರುವಚಿತ್ರ]
[ಪುಟ 17 ರಲ್ಲಿರುವಚಿತ್ರ]
[ಪುಟ 17 ರಲ್ಲಿರುವಚಿತ್ರ]