ಪಾಠ 13
ಧರ್ಮಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ?
ದೇವರು ಪ್ರೀತಿಯಾಗಿದ್ದಾನೆ ಅಂತ ನಾವು ಕಲಿತ್ವಿ. ಆದ್ರೆ ದೇವರ ಬಗ್ಗೆ ಕಲಿಸುವ ತುಂಬ ಧರ್ಮಗಳು ಕೆಟ್ಟಕೆಟ್ಟ ಕೆಲಸಗಳನ್ನೇ ಮಾಡ್ತಿವೆ. ಅವು ದೇವರ ಬಗ್ಗೆ ಸುಳ್ಳನ್ನೂ ಕಲಿಸುತ್ತಿವೆ. ಧರ್ಮಗಳು ದೇವರ ಬಗ್ಗೆ ಯಾವೆಲ್ಲಾ ಸುಳ್ಳನ್ನ ಕಲಿಸುತ್ತಿವೆ? ದೇವರಿಗೆ ಅದರ ಬಗ್ಗೆ ಹೇಗನಿಸುತ್ತೆ? ಅದನ್ನೆಲ್ಲಾ ಸರಿ ಮಾಡೋಕೆ ದೇವರು ಏನು ಮಾಡ್ತಾನೆ?
1. ಧರ್ಮಗಳು ದೇವರ ಬಗ್ಗೆ ಯಾವ ಸುಳ್ಳನ್ನ ಕಲಿಸುತ್ತಿವೆ?
ತುಂಬ ಧರ್ಮಗಳು, ‘ದೇವರ ಬಗ್ಗೆ ಇರೋ ಸತ್ಯವನ್ನ ನಂಬದೆ ಸುಳ್ಳನ್ನೇ ನಂಬುತ್ತಿವೆ,’ ಅದನ್ನೇ ಜನರಿಗೆ ಕಲಿಸುತ್ತಿವೆ. (ರೋಮನ್ನರಿಗೆ 1:25) ಉದಾಹರಣೆಗೆ ತುಂಬ ಧರ್ಮಗಳು ಜನರಿಗೆ ದೇವರ ಹೆಸರು ಯೆಹೋವ ಅಂತ ಕಲಿಸ್ತಾ ಇಲ್ಲ. ಆದ್ರೆ ದೇವರ ಹೆಸರನ್ನ ಉಪಯೋಗಿಸಲೇಬೇಕು ಅಂತ ಬೈಬಲ್ ಕಲಿಸುತ್ತೆ. (ರೋಮನ್ನರಿಗೆ 10:13, 14) ಏನಾದ್ರೂ ಕೆಟ್ಟದ್ದು ನಡೆದಾಗ ಕೆಲವೊಮ್ಮೆ ಧರ್ಮ ಗುರುಗಳು ‘ಇದು ದೇವರ ಇಚ್ಛೆ’ ಅಂತ ಹೇಳುತ್ತಾರೆ. ಹೀಗೆ ಇದಕ್ಕೆಲ್ಲಾ ದೇವರೇ ಕಾರಣ ಅಂತ ಜನರು ಯೋಚಿಸೋ ತರ ಮಾಡ್ತಾರೆ. ಆದ್ರೆ ಅದು ಶುದ್ಧ ಸುಳ್ಳು. ದೇವರು ಯಾವತ್ತೂ ಕೆಟ್ಟದ್ದನ್ನ ಮಾಡಲ್ಲ. (ಯಾಕೋಬ 1:13 ಓದಿ.) ಧರ್ಮಗಳು ಕಲಿಸುವ ಸುಳ್ಳುಗಳನ್ನ ನಂಬಿ ಜನ ದೇವರಿಂದ ತುಂಬ ದೂರ ಹೋಗಿದ್ದಾರೆ.
2. ಧರ್ಮಗಳು ಯಾವೆಲ್ಲಾ ತಪ್ಪು ಕೆಲಸಗಳನ್ನ ಮಾಡ್ತಿವೆ?
ತುಂಬ ಧರ್ಮಗಳು ಯೆಹೋವ ದೇವರು ಹೇಳುವ ತರ ನಡೆದುಕೊಳ್ಳುತ್ತಿಲ್ಲ. ದೇವರ ಹೆಸರಲ್ಲಿ ಧರ್ಮ ಗುರುಗಳು ಕೆಟ್ಟ ಕೆಲಸಗಳನ್ನ ಮಾಡ್ತಿದ್ದಾರೆ. ಅವರ “ಪಾಪದ ಪಟ್ಟಿ ಆಕಾಶ ಮುಟ್ತಿದೆ” ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 18:5) ನೂರಾರು ವರ್ಷಗಳಿಂದ ಧರ್ಮ ಗುರುಗಳು ರಾಜಕೀಯದಲ್ಲಿ ತಲೆ ಹಾಕಿದ್ದಾರೆ, ಯುದ್ಧಗಳನ್ನ ಬೆಂಬಲಿಸಿದ್ದಾರೆ ಮತ್ತು ಕೆಲವು ಯುದ್ಧಗಳಿಗೆ ಅವರೇ ಕಾರಣರಾಗಿದ್ದಾರೆ. ಹೀಗೆ ಲೆಕ್ಕವಿಲ್ಲದಷ್ಟು ಜನರ ಸಾವಿಗೆ ಹೊಣೆಯಾಗಿದ್ದಾರೆ. ಇನ್ನೂ ಕೆಲವರು, ಜನರಿಂದ ಹಣ ವಸೂಲಿ ಮಾಡಿ ಆಡಂಬರದ ಜೀವನ ನಡೆಸ್ತಿದ್ದಾರೆ. ಈ ಕಾರಣಗಳಿಂದ ಅವರಿಗೆ ದೇವರ ಬಗ್ಗೆ ಒಂಚೂರೂ ಗೊತ್ತಿಲ್ಲ ಅಂತ ಚೆನ್ನಾಗಿ ಅರ್ಥವಾಗುತ್ತೆ. ಹಾಗಾಗಿ ಅವರಿಗೆ ದೇವರ ಬಗ್ಗೆ ಕಲಿಸುವ ಅರ್ಹತೆನೇ ಇಲ್ಲ.—1 ಯೋಹಾನ 4:8 ಓದಿ.
3. ಇಂಥ ಧರ್ಮಗಳ ಬಗ್ಗೆ ದೇವರ ಅನಿಸಿಕೆಯೇನು?
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೆಟ್ಟ ಕೆಲಸಗಳನ್ನ ನೋಡಿ ನಿಮಗೇ ಕೋಪ ಬರುತ್ತೆ ಅಂದಮೇಲೆ ಯೆಹೋವನಿಗೆ ಇನ್ನೆಷ್ಟು ಕೋಪ ಬರಬಹುದು? ದೇವರು ಜನರನ್ನ ಪ್ರೀತಿಸ್ತಾನೆ. ಆದ್ರೆ ತನ್ನ ಬಗ್ಗೆ ತಪ್ಪಾಗಿ ಕಲಿಸುವ, ಜನರ ಮೇಲೆ ದಬ್ಬಾಳಿಕೆ ಮಾಡುವ ಧರ್ಮಗಳನ್ನ ನೋಡಿದ್ರೆ ಆತನಿಗೆ ಕೋಪ ಬರುತ್ತೆ. ಅಂಥ ಧರ್ಮಗಳು ನಾಶ ಆಗುತ್ತೆ ಮತ್ತು “ಇನ್ಯಾವತ್ತೂ ಕಾಣಿಸಲ್ಲ” ಅಂತ ಆತನು ಮಾತು ಕೊಟ್ಟಿದ್ದಾನೆ. (ಪ್ರಕಟನೆ 18:21) ದೇವರು ಆದಷ್ಟು ಬೇಗ ಅವುಗಳನ್ನ ನಾಶ ಮಾಡಲಿದ್ದಾನೆ.—ಪ್ರಕಟನೆ 18:8.
ಹೆಚ್ಚನ್ನ ತಿಳಿಯೋಣ
ಧರ್ಮಗಳು ಏನು ಮಾಡಿವೆ ಮತ್ತು ಅವುಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ ಅಂತ ಇನ್ನಷ್ಟು ತಿಳಿಯಿರಿ. ಧರ್ಮಗಳು ಮಾಡೋದನ್ನ ನೋಡಿ ಬೇಜಾರಾಗಿ ಯೆಹೋವನ ಬಗ್ಗೆ ಕಲಿಯೋದನ್ನ ನಾವು ಯಾಕೆ ನಿಲ್ಲಿಸಬಾರದು ಅಂತನೂ ಕಲಿಯಿರಿ.
4. ದೇವರು ಎಲ್ಲಾ ಧರ್ಮಗಳನ್ನ ಮೆಚ್ಚುವುದಿಲ್ಲ
‘ಯಾವ ಧರ್ಮ ಬೇಕಾದ್ರೂ ಪಾಲಿಸಬಹುದು. ಯಾಕಂದ್ರೆ ಎಲ್ಲಾ ದಾರಿ ದೇವರ ಕಡೆಗೇ ನಡೆಸುತ್ತೆ’ ಅಂತ ಅನೇಕರು ನಂಬುತ್ತಾರೆ. ಆದ್ರೆ ಅದು ಸತ್ಯನಾ? ಮತ್ತಾಯ 7:13, 14 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಜೀವಕ್ಕೆ ನಡೆಸುವ ದಾರಿಯ ಬಗ್ಗೆ ಬೈಬಲ್ ಏನು ಹೇಳುತ್ತೆ?
ವಿಡಿಯೋ ನೋಡಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ.
ದೇವರಿಗೆ ಇಷ್ಟ ಆಗುವ ತುಂಬ ಧರ್ಮಗಳಿವೆ ಅಂತ ಬೈಬಲ್ ಹೇಳುತ್ತಾ?
5. ನಮ್ಮ ಮೇಲೆ ಪ್ರೀತಿಯಿರೋ ದೇವರು ಹೇಳೋ ತರ ಅನೇಕ ಧರ್ಮಗಳು ಮಾಡ್ತಿಲ್ಲ
ಧರ್ಮಗಳು ದೇವರ ಬಗ್ಗೆ ತುಂಬ ಸುಳ್ಳುಗಳನ್ನ ಕಲಿಸ್ತಿವೆ. ಅದಕ್ಕೆ ಇಂಥ ಧರ್ಮಗಳನ್ನ ಸುಳ್ಳು ಧರ್ಮಗಳು ಅಂತ ಹೇಳಬಹುದು. ಧರ್ಮಗಳು ಯುದ್ಧಗಳಲ್ಲಿ ಭಾಗವಹಿಸೋ ಮೂಲಕ ಕೆಟ್ಟದ್ದನ್ನ ಮಾಡ್ತಿವೆ. ಉದಾಹರಣೆಗೆ ಈ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ.
ಎರಡನೇ ಮಹಾಯುದ್ಧದ ಸಮಯದಲ್ಲಿ ತುಂಬ ಚರ್ಚುಗಳು ಏನು ಮಾಡಿದವು?
ಇದರ ಬಗ್ಗೆ ನಿಮಗೆ ಹೇಗನಿಸುತ್ತೆ?
ಯೋಹಾನ 13:34, 35 ಮತ್ತು 17:16 ಓದಿ, ನಂತರ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಧರ್ಮ ಗುರುಗಳು ಯುದ್ಧಗಳನ್ನ ಬೆಂಬಲಿಸುವಾಗ ಯೆಹೋವ ದೇವರಿಗೆ ಹೇಗನಿಸುತ್ತೆ?
ಲೋಕದಲ್ಲಿ ನಡೆಯೋ ಎಷ್ಟೋ ಕೆಟ್ಟ ವಿಷಯಗಳಿಗೆ ಧರ್ಮಗಳೇ ಕಾರಣ. ಧರ್ಮಗಳು ಮಾಡಿರೋ ಯಾವ ಕೆಟ್ಟ ಕೆಲಸಗಳನ್ನ ನೀವು ನೋಡಿದ್ದೀರಾ?
6. ಇಂಥ ಧರ್ಮಗಳ ಬಿಗಿಮುಷ್ಠಿಯಿಂದ ಜನರನ್ನ ಬಿಡಿಸೋಕೆ ದೇವರು ಬಯಸುತ್ತಾನೆ
ಪ್ರಕಟನೆ 18:4a ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸುಳ್ಳು ಧರ್ಮದಿಂದ ದಾರಿ ತಪ್ಪಿದ ಜನರನ್ನ ದೇವರು ಸರಿದಾರಿಗೆ ತರಲು ಬಯಸ್ತಾನೆ, ಇದರ ಬಗ್ಗೆ ನಿಮಗೆ ಹೇಗನಿಸುತ್ತೆ?
7. ಯೆಹೋವ ದೇವರ ಬಗ್ಗೆ ಕಲಿಯೋದನ್ನ ಮುಂದುವರಿಸಿ
ಸುಳ್ಳು ಧರ್ಮಗಳು ಮಾಡೋದನ್ನ ನೋಡಿ ನೀವು ಯೆಹೋವನ ಮೇಲೆ ಕೋಪ ಮಾಡಿಕೊಳ್ಳಬೇಕಾ? ಒಬ್ಬ ತಂದೆ ಮತ್ತು ಮಗನ ಉದಾಹರಣೆಯನ್ನ ನೋಡಿ. ಮಗ ತಂದೆಯ ಮಾತನ್ನ ಕೇಳದೆ ಮನೆ ಬಿಟ್ಟು ಹೋಗ್ತಾನೆ. ಅವನು ಕೆಟ್ಟ ಕೆಲಸಗಳನ್ನ ಮಾಡ್ತಾನೆ. ಮಗ ಮಾಡೋ ಕೆಲಸಗಳು ತಂದೆಗೆ ಒಂಚೂರೂ ಇಷ್ಟ ಆಗಲ್ಲ. ಅವನು ದಾರಿತಪ್ಪಿ ಹೋಗಿದ್ದಕ್ಕೆ ತಂದೆಯನ್ನ ದೂರುವುದು ಸರಿನಾ? ನಿಮಗೇನು ಅನಿಸುತ್ತೆ?
ಸುಳ್ಳು ಧರ್ಮಗಳು ಮಾಡೋ ಕೆಟ್ಟ ಕೆಲಸಕ್ಕೆ ನಾವು ಯೆಹೋವನನ್ನು ದೂರುವುದು ಮತ್ತು ಆತನ ಬಗ್ಗೆ ಕಲಿಯೋದನ್ನ ನಿಲ್ಲಿಸೋದು ಸರಿನಾ? ನಿಮಗೇನು ಅನಿಸುತ್ತೆ?
ಕೆಲವರು ಹೀಗಂತಾರೆ: “ಧರ್ಮಗಳು ಮಾಡೋ ಕೆಟ್ಟ ಕೆಲಸ ನೋಡಿದ್ರೆ, ದೇವರೇ ಬೇಡ ಅಂತ ಅನಿಸಿಬಿಡುತ್ತೆ.”
ನಿಮಗೂ ಹಾಗನಿಸುತ್ತಾ?
ಧರ್ಮಗಳು ಮಾಡೋದನ್ನ ನೋಡಿ ನೀವು ಯೆಹೋವನ ಮೇಲೆ ಯಾಕೆ ಕೋಪ ಮಾಡಿಕೊಳ್ಳಬಾರದು?
ನಾವೇನು ಕಲಿತ್ವಿ
‘ನಾವು ದೇವರನ್ನ ಆರಾಧಿಸ್ತೇವೆ’ ಅಂತ ಸುಳ್ಳು ಧರ್ಮಗಳು ಹೇಳಿಕೊಳ್ಳುತ್ತಿವೆ. ಆದ್ರೆ ಅವು ದೇವರ ಬಗ್ಗೆ ಸುಳ್ಳನ್ನೇ ಕಲಿಸುತ್ತಿವೆ ಮತ್ತು ಆತನಿಗೆ ಇಷ್ಟ ಇಲ್ಲದ ಕೆಲಸಗಳನ್ನ ಮಾಡುತ್ತಿವೆ. ಇಂಥ ಸುಳ್ಳು ಧರ್ಮಗಳನ್ನೆಲ್ಲಾ ದೇವರು ನಾಶ ಮಾಡ್ತಾನೆ.
ನೆನಪಿದೆಯಾ
ಸುಳ್ಳು ಧರ್ಮಗಳು ಕಲಿಸುವ ತಪ್ಪುಗಳ ಬಗ್ಗೆ, ಮಾಡುವ ಕೆಟ್ಟ ಕೆಲಸಗಳ ಬಗ್ಗೆ ನಿಮಗೆ ಹೇಗನಿಸುತ್ತೆ?
ಸುಳ್ಳು ಧರ್ಮಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?
ಸುಳ್ಳು ಧರ್ಮಗಳನ್ನ ಯೆಹೋವನು ಏನು ಮಾಡ್ತಾನೆ?
ಇದನ್ನೂ ನೋಡಿ
ಬೇರೆಬೇರೆ ಧರ್ಮಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ?
“ಎಲ್ಲಾ ಧರ್ಮಗಳು ಒಂದೇನಾ? ಅವು ಸತ್ಯ ದೇವರನ್ನ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತಾ?” (jw.org ಲೇಖನ)
ನಾವು ಸಭೆಯಾಗಿ ಸೇರಿ ಯೆಹೋವನನ್ನು ಆರಾಧಿಸಬೇಕು ಅಂತ ಆತನು ಯಾಕೆ ಬಯಸ್ತಾನೆ?
ಒಬ್ಬ ಪಾದ್ರಿಗೆ ತನ್ನ ಧರ್ಮದಲ್ಲಿ ನಡೆಯುತ್ತಿರೋ ಕೆಲವು ವಿಷಯಗಳು ಇಷ್ಟ ಆಗಲಿಲ್ಲ. ಹಾಗಂತ ಆ ಪಾದ್ರಿ ದೇವರ ಬಗ್ಗೆ ಸತ್ಯ ಕಲಿಯೋದನ್ನ ನಿಲ್ಲಿಸಲಿಲ್ಲ.
ತುಂಬ ವರ್ಷಗಳಿಂದ ಧರ್ಮಗಳು ದೇವರ ಬಗ್ಗೆ ಸುಳ್ಳನ್ನೇ ಕಲಿಸುತ್ತಿವೆ. ಇದರಿಂದ ಜನರು, ‘ದೇವರು ಕ್ರೂರಿ, ನಮ್ಮ ಬಗ್ಗೆ ಚಿಂತೆ ಮಾಡಲ್ಲ’ ಅಂತ ನಂಬುತ್ತಿದ್ದಾರೆ. ಆದರೆ ನಿಜ ಏನಂತ ನೋಡಿ.