ಯೆಹೋವ—ಕೋಮಲವಾಗಿ ಕನಿಕರಿಸುವ ನಮ್ಮ ತಂದೆ
“ಯೆಹೋವನು ವಾತ್ಸಲ್ಯದಲ್ಲಿ ಅತಿ ಕೋಮಲನೂ, ಕನಿಕರನೂ ಆಗಿದ್ದಾನೆ.”—ಯಾಕೋಬ 5:11, NW, ಪಾದಟಿಪ್ಪಣಿ.
1. ನಮ್ರ ಜನರು ಯೆಹೋವ ದೇವರ ಬಳಿಗೆ ಯಾಕೆ ಸೆಳೆಯಲ್ಪಡುತ್ತಾರೆ?
ವಿಶ್ವವು ಎಷ್ಟು ಅಪಾರವಾಗಿದೆಯೆಂದರೆ, ಅದರಲ್ಲಿರುವ ಎಲ್ಲಾ ತಾರಾಪುಂಜಗಳನ್ನು ಲೆಕ್ಕಿಸಲಾರಂಭಿಸುವುದೂ ಖಗೋಳಶಾಸ್ತ್ರಜ್ಞರಿಗೆ ಅಸಾಧ್ಯವಾಗಿದೆ. ಕ್ಷೀರಪಥವೆಂದು ಕರೆಯಲ್ಪಡುವ ನಮ್ಮ ತಾರಾಪುಂಜವು ಎಷ್ಟು ವಿಸ್ತಾರವಾಗಿದೆಯೆಂದರೆ ಮನುಷ್ಯನು ಅದರ ಎಲ್ಲಾ ನಕ್ಷತ್ರಗಳನ್ನು ಲೆಕ್ಕಿಸಲಾರಂಭಿಸಲು ಅಸಮರ್ಥನಾಗಿದ್ದಾನೆ. ಅಂಟಾರೀಸ್ನಂತಹ ಅನೇಕ ನಕ್ಷತ್ರಗಳು ನಮ್ಮ ಸೂರ್ಯನಿಗಿಂತಲೂ ಸಾವಿರಾರು ಪಟ್ಟು ದೊಡ್ಡವುಗಳೂ, ಹೆಚ್ಚು ಪ್ರಕಾಶಮಾನವಾದವುಗಳೂ ಆಗಿವೆ. ವಿಶ್ವದ ಎಲ್ಲಾ ನಕ್ಷತ್ರಗಳ ಮಹಾ ನಿರ್ಮಾಣಿಕನು ಎಷ್ಟೊಂದು ಬಲಾಢ್ಯನಾಗಿರಬೇಕು! ನಿಶ್ಚಯವಾಗಿಯೂ ಅವನು “ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ.” (ಯೆಶಾಯ 40:26) ಆದರೂ, ಈ ಭಯಭಕ್ತಿಯನ್ನು ಪ್ರೇರೇಪಿಸುವ ದೇವರು “ವಾತ್ಸಲ್ಯದಲ್ಲಿ ಅತಿ ಕೋಮಲನೂ, ಕನಿಕರನೂ” ಸಹ ಆಗಿದ್ದಾನೆ. ಯೆಹೋವನ ನಮ್ರ ಸೇವಕರಿಗೆ, ವಿಶೇಷವಾಗಿ ಹಿಂಸೆ, ರೋಗ, ಹತಾಶೆ, ಯಾ ಇತರ ತೊಂದರೆಗಳಿಂದ ಕಷ್ಟವನ್ನನುಭವಿಸುತ್ತಿರುವವರಿಗೆ ಇಂತಹ ಜ್ಞಾನವು ಎಷ್ಟು ಚೇತೋಹಾರಿಯಾಗಿದೆ!
2. ಈ ಲೋಕದ ಜನರಿಂದ ಕೋಮಲ ಮನೋಭಾವಗಳನ್ನು ಅನೇಕ ವೇಳೆ ಹೇಗೆ ದೃಷ್ಟಿಸಲಾಗುತ್ತದೆ?
2 ಕ್ರಿಸ್ತನ “ಕೋಮಲ ವಾತ್ಯಲ್ಯಗಳು ಮತ್ತು ಕನಿಕರ” ಗಳಂತಹ ಮೃದು ಮನೋಭಾವಗಳನ್ನು ಅನೇಕರು ಬಲಹೀನತೆಗಳಾಗಿ ವೀಕ್ಷಿಸುತ್ತಾರೆ. (ಫಿಲಿಪ್ಪಿ 2:1, NW) ವಿಕಾಸವಾದದ ತತ್ವಜ್ಞಾನದಿಂದ ಪ್ರಭಾವಿತರಾಗಿ, ಇತರರ ಭಾವನೆಗಳನ್ನು ನೋಯಿಸುವ ಅರ್ಥದಲ್ಲಿದ್ದರೂ ಸಹ ತಮ್ಮನ್ನು ಪ್ರಥಮವಾಗಿ ಇಟ್ಟುಕೊಳ್ಳಲು ಅವರು ಜನರನ್ನು ಪ್ರೋತ್ಸಾಹಿಸುತ್ತಾರೆ. ಮನೋರಂಜನೆಯಲ್ಲಿ ಮತ್ತು ಕ್ರೀಡೆಗಳಲ್ಲಿ ಅನೇಕ ಪಾತ್ರಧಾರಿ ಮಾದರಿಗಳು ಕಣ್ಣೀರನ್ನು ಸುರಿಸದ ಯಾ ಕೋಮಲ ವಾತ್ಸಲ್ಯವನ್ನು ತೋರಿಸದ ಗಂಡುತನದವರಾಗಿರುತ್ತಾರೆ. ಕೆಲವು ರಾಜಕೀಯ ಅಧಿಪತಿಗಳು ತದ್ರೀತಿಯಲ್ಲಿ ವರ್ತಿಸುತ್ತಾರೆ. ಕ್ರೂರಿ ಸಾಮ್ರಾಟ ನೀರೋವಿಗೆ ಶಿಕ್ಷಣವನ್ನಿತ್ತ ಸ್ಟೋಇಕ್ ತತ್ವಜ್ಞಾನಿ ಸೆನಿಕ, “ಕರುಣೆಯು ದೌರ್ಬಲ್ಯವಾಗಿದೆ” ಎಂದು ಒತ್ತಿಹೇಳಿದ್ದಾನೆ. ಮೆಕ್ಲಿಂಟಕ್ ಮತ್ತು ಸ್ಟ್ರಾಂಗ್ಸ್’ ಸೈಕ್ಲೊಪೀಡಿಯ ನಮೂದಿಸುವುದು: “ಸ್ಟೋಇಸಿಸಮ್ ಪ್ರಭಾವಗಳು . . . ಪ್ರಸ್ತುತ ಸಮಯಗಳ ತನಕ ಮನುಷ್ಯರ ಮನಸ್ಸುಗಳ ಮೇಲೆ ಸಹ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ.”
3. ಯೆಹೋವನು ತನ್ನನ್ನು ಮೋಶೆಗೆ ವರ್ಣಿಸಿಕೊಂಡದ್ದು ಹೇಗೆ?
3 ವ್ಯತಿರಿಕ್ತವಾಗಿ, ಮಾನವನ ನಿರ್ಮಾಣಿಕನ ವ್ಯಕ್ತಿತ್ವವು ಹೃದಯವನ್ನು ಬೆಚ್ಚಗೆ ಮಾಡುತ್ತದೆ. ಅವನು ಮೋಶೆಗೆ ತನ್ನನ್ನು ಈ ಮಾತುಗಳಲ್ಲಿ ವರ್ಣಿಸಿಕೊಂಡಿದ್ದನು: “ಯೆಹೋವ, ಯೆಹೋವ ಕನಿಕರವೂ (ಕರುಣಾಭರಿತನು, NW) ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; . . . ದೋಷಾಪರಾಧಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.” (ವಿಮೋಚನಕಾಂಡ 34:6, 7) ಯೆಹೋವನು ತನ್ನ ನ್ಯಾಯವನ್ನು ಎತ್ತಿತೋರಿಸುತ್ತಾ ತನ್ನ ಈ ವರ್ಣನೆಯನ್ನು ಮುಕ್ತಾಯಗೊಳಿಸಿದನೆಂಬುದು ನಿಜ. ಅವನು ಉದ್ದೇಶಪೂರ್ವಕವಾದ ಪಾಪಿಗಳಿಗೆ ತಕ್ಕದಾದ ದಂಡನೆಯಿಂದ ವಿನಾಯಿತಿ ನೀಡುವುದಿಲ್ಲ. ಆದರೂ, ಎಲ್ಲಕ್ಕಿಂತಲೂ ಮೊದಲಾಗಿ ಅವನು ದೇವರೋಪಾದಿ ತನ್ನನ್ನು ಕರುಣಾಭರಿತನು ಅಂದರೆ ಅಕ್ಷರಶಃ “ಕರುಣಾಪೂರ್ಣನು” ಎಂದು ತನ್ನನ್ನು ಸ್ವತಃ ವರ್ಣಿಸಿಕೊಂಡಿದ್ದಾನೆ.
4. “ಕರುಣೆ” ಎಂದು ಕೆಲವೊಮ್ಮೆ ಭಾಷಾಂತರಿಸಲ್ಪಟ್ಟ ಹೀಬ್ರು ಶಬ್ದದ ಹೃದಯ ಉಲ್ಲಾಸಗೊಳಿಸುವ ಅರ್ಥವು ಏನಾಗಿದೆ?
4 ಕೆಲವೊಮ್ಮೆ “ಕರುಣೆ” ಶಬ್ದವು ಕೇವಲ ಜಡ, ದಂಡನೆಯನ್ನು ತಡೆಹಿಡಿಯುವ ನ್ಯಾಯಿಕ ಅರ್ಥವನ್ನು ಕೊಡುತ್ತದೆ ಎಂದು ಎಣಿಸಲಾಗುತ್ತದೆ. ಆದಾಗ್ಯೂ, ಬೈಬಲ್ ಭಾಷಾಂತರಗಳ ಒಂದು ತುಲನೆಯು ಕ್ರಿಯಾಪದ ರಾ-ಕಮ್ ನಿಂದ ಬಂದ ಹೀಬ್ರು ಗುಣವಾಚಕದ ಬಹು ಪರಿಷ್ಕೃತ ಅರ್ಥವನ್ನು ತರುತ್ತದೆ. ಕೆಲವು ವಿದ್ವಾಂಸರಿಗನುಸಾರ, ಅದರ ಮೂಲಾರ್ಥವು “ಮೃದುವಾಗಿರುವುದು” ಎಂದಾಗಿದೆ. “ರಾ-ಕಮ್,” ಸಿನೊನಿಮ್ಸ್ ಆಫ್ ದಿ ಓಲ್ಡ್ ಟೆಸ್ಟಮೆಂಟ್ ಪುಸ್ತಕದಲ್ಲಿ ವಿವರಿಸುವುದು, “ದೌರ್ಬಲ್ಯದ ಯಾ ನಮಗೆ ಪ್ರಿಯರಾಗಿರುವವರ ಕಷ್ಟಾನುಭವದ ಯಾ ನಮ್ಮ ಸಹಾಯದ ಆವಶ್ಯಕತೆಯಿರುವವರ ನೋಟದಿಂದ ಪ್ರಚೋದಿಸಲ್ಪಡುವಂತಹ ಒಂದು ಗಾಢವಾದ ಮತ್ತು ಕನಿಕರದ ಕೋಮಲ ಭಾವನೆಯನ್ನು ವ್ಯಕ್ತಪಡಿಸುತ್ತದೆ.” ಈ ಅಪೇಕ್ಷಣೀಯ ಗುಣದ ಇತರ ಹಾರ್ದಿಕ ಅರ್ಥನಿರೂಪಣೆಗಳನ್ನು ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 375-9 ರಲ್ಲಿ ಕಂಡುಕೊಳ್ಳಸಾಧ್ಯವಿದೆ.
5. ಮೋಶೆಯ ನಿಯಮಶಾಸ್ತ್ರದಲ್ಲಿ ಕರುಣೆಯು ಹೇಗೆ ವ್ಯಕ್ತಪಡಿಸಲ್ಪಟ್ಟಿದೆ?
5 ಇಸ್ರಾಯೇಲ್ ಜನಾಂಗಕ್ಕೆ ಕೊಡಲ್ಪಟ್ಟ ನಿಯಮಶಾಸ್ತ್ರದಿಂದ ದೇವರ ಕೋಮಲ ಕನಿಕರವು ಸ್ಪಷ್ಟವಾಗಿಗಿ ವ್ಯಕ್ತವಾಗುತ್ತದೆ. ವಿಧವೆಯರು, ಅನಾಥರು, ಮತ್ತು ಬಡವರಂತಹ ಅನನುಕೂಲ ಸ್ಥಿತಿಯಲ್ಲಿರುವವರನ್ನು ಅವರು ಕನಿಕರದಿಂದ ಉಪಚರಿಸಬೇಕಿತ್ತು. (ವಿಮೋಚನಕಾಂಡ 22:22-27; ಯಾಜಕಕಾಂಡ 19:9, 10; ಧರ್ಮೋಪದೇಶಕಾಂಡ 15:7-11) ದಾಸರು ಮತ್ತು ಪ್ರಾಣಿಗಳ ಸಹಿತ ಎಲ್ಲರೂ ವಿಶ್ರಾಂತಿಯ ವಾರದ ಸಬ್ಬತಿನ್ತಿಂದಾಗಿ ಪ್ರಯೋಜನ ಹೊಂದಬೇಕಿತ್ತು. (ವಿಮೋಚನಕಾಂಡ 20:10) ಇನ್ನೂ ಹೆಚ್ಚಾಗಿ, ನಿಕೃಷ್ಟರನ್ನು ಕೋಮಲತೆಯಿಂದ ಉಪಚರಿಸುವ ವ್ಯಕ್ತಿಗಳನ್ನು ದೇವರು ಲಕ್ಷಿಸಿದನು. ಜ್ಞಾನೋಕ್ತಿ 19:17 ಹೇಳುವುದು: “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು.”
ದಿವ್ಯ ಕನಿಕರದ ಪರಿಮಿತಿಗಳು
6. ತನ್ನ ಜನರ ಬಳಿಗೆ ಯೆಹೋವನು ಪ್ರವಾದಿಗಳನ್ನೂ ದೂತರನ್ನೂ ಯಾಕೆ ಕಳುಹಿಸಿದನು?
6 ಇಸ್ರಾಯೇಲ್ಯರು ದೇವರ ಹೆಸರನ್ನು ಧರಿಸಿದರು ಮತ್ತು “ಯೆಹೋವನ ಹೆಸರಿಗಾಗಿ ಒಂದು ಆಲಯ” ವಾಗಿದ್ದ ಯೆರೂಸಲೇಮಿನ ದೇವಾಲಯದಲ್ಲಿ ಆರಾಧಿಸಿದರು. (2 ಪೂರ್ವಕಾಲವೃತ್ತಾಂತ 2:4; 6:33) ಆದಾಗ್ಯೂ, ಕಾಲಕ್ರಮೇಣ ಅವರು ಅನೈತಿಕತೆ, ವಿಗ್ರಹಾರಾಧನೆ, ಮತ್ತು ಕೊಲೆಯನ್ನು ಸಹಿಸಿಕೊಂಡು, ಯೆಹೋವನ ನಾಮದ ಮೇಲೆ ಮಹಾ ನಿಂದೆಯನ್ನು ತಂದರು. ಅವನ ಕನಿಕರಿಸುವ ವ್ಯಕ್ತಿತ್ವದೊಂದಿಗೆ ಹೊಂದಿಕೆಯಲ್ಲಿ, ಇಡೀ ಜನಾಂಗದ ಮೇಲೆ ವಿಪತ್ತನ್ನು ತಾರದೆ ದೇವರು ತಾಳ್ಮೆಯಿಂದ ಸನ್ನಿವೇಶವನ್ನು ಸರಿಪಡಿಸಲು ಪ್ರಯತ್ನಿಸಿದನು. ಅವನು “ತನ್ನ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ ಸಾವಕಾಶಮಾಡದೆ ತನ್ನ ದೂತರ ಮುಖಾಂತರವಾಗಿ ಅವರನ್ನು ಎಚ್ಚರಿಸುತ್ತಾ ಇದ್ದರೂ ಅವರು ದೇವರಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದರ್ದಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.”—2 ಪೂರ್ವಕಾಲವೃತ್ತಾಂತ 36:15, 16.
7. ಯೆಹೋವನ ಕನಿಕರವು ಅದರ ಪರಿಮಿತಿಗಳನ್ನು ಮುಟ್ಟಿದಾಗ, ಯೆಹೂದ ರಾಜ್ಯಕ್ಕೆ ಏನು ಸಂಭವಿಸಿತು?
7 ಯೆಹೋವನು ಕನಿಕರವುಳ್ಳವನೂ, ಕೋಪಿಸುವುದರಲ್ಲಿ ನಿಧಾನಿಯೂ ಆಗಿದ್ದಾಗ್ಯೂ, ಅಗತ್ಯಬಿದ್ದಾಗ ತನ್ನ ನೀತಿಯ ಕ್ರೋಧವನ್ನು ಅವನು ಖಂಡಿತವಾಗಿ ವ್ಯಕ್ತಪಡಿಸುತ್ತಾನೆ. ಆ ಕಾಲದಲ್ಲಿ, ದಿವ್ಯ ಕನಿಕರವು ಅದರ ಮಿತಿಯನ್ನು ತಲುಪಿತ್ತು. ಇದರ ಪರಿಣಾಮಗಳ ಕುರಿತು ನಾವು ಓದುವುದು: “ಆತನು [ಯೆಹೋವನು] ಕಸೀಯ್ದರ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೆ ಒಪ್ಪಿಸಿದನು. ಅವನು ಅವರ ಯುವಭಟರನ್ನು ಅವರ ಪವಿತ್ರಾಲಯದಲ್ಲೇ ಕತ್ತಿಯಿಂದ ಸಂಹರಿಸಿ ಯುವಕರನ್ನೂ ಕನ್ಯೆಯರನ್ನೂ ಮುದುಕರನ್ನೂ ಅತಿ ವೃದ್ಧರನ್ನೂ ಕನಿಕರಿಸದೆ ಎಲ್ಲರನ್ನೂ ಕೊಲ್ಲಿಸಿದನು.” (2 ಪೂರ್ವಕಾಲವೃತ್ತಾಂತ 36:17) ಹೀಗೆ ಯೆರೂಸಲೇಮ್ ಮತ್ತು ಅದರ ದೇವಾಲಯ ನಾಶಗೊಳಿಸಲ್ಪಟ್ಟವು, ಮತ್ತು ಜನಾಂಗವು ಬಾಬೆಲಿಗೆ ಸೆರೆಯಾಗಿ ಕೊಂಡೊಯ್ಯಲ್ಪಟ್ಟಿತು.
ಅವನ ನಾಮಕ್ಕಾಗಿ ಕನಿಕರ
8, 9. (ಎ) ತನ್ನ ನಾಮಕ್ಕಾಗಿ ಆತನಿಗೆ ಕನಿಕರವಿರುವುದೆಂದು ಯೆಹೋವನು ಯಾಕೆ ಘೋಷಿಸಿದನು? (ಬಿ) ಯೆಹೋವನ ವೈರಿಗಳು ಹೇಗೆ ಸ್ತಬ್ಧಗೊಳಿಸಲ್ಪಟ್ಟರು?
8 ಆಸುಪಾಸಿನ ಜನಾಂಗಗಳು ಈ ವಿಪತ್ತಿನ ಸಂಬಂಧದಲ್ಲಿ ಆನಂದಿಸಿದರು. ಗೇಲಿಮಾಡುವ ರೀತಿಯಲ್ಲಿ ಅವರು ಅಂದದ್ದು: “ಓಹೋ, ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ.” ಈ ನಿಂದೆಗೆ ಶೀಘ್ರಸಂವೇದಿಯಾಗಿ, ಯೆಹೋವನು ಪ್ರಕಟಿಸಿದ್ದು: “ನನ್ನ ಪರಿಶುದ್ಧನಾಮವನ್ನು ಕುರಿತು ನಾನು ಮರುಗಿದೆನು. . . . ನನ್ನ ಘನನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; . . . ನಾನೇ ಯೆಹೋವನು ಎಂದು ಅವುಗಳಿಗೆ [ಜನಾಂಗಗಳಿಗೆ, NW] ನಿಶ್ಚಿತವಾಗುವುದು.”—ಯೆಹೆಜ್ಕೇಲ 36:20-23.
9 ತನ್ನ ಜನಾಂಗವು 70 ವರುಷಗಳ ತನಕ ಬಂದಿವಾಸದಲ್ಲಿ ಇದ್ದ ನಂತರ, ಕನಿಕರವುಳ್ಳ ದೇವರಾದ ಯೆಹೋವನು ಅವರನ್ನು ವಿಮೋಚಿಸಿದನು ಮತ್ತು ಯೆರೂಸಲೇಮಿಗೆ ಹಿಂದೆರಳುವಂತೆ ಮತ್ತು ದೇವಾಲಯವನ್ನು ಪುನಃ ಕಟ್ಟುವಂತೆ ಅವರನ್ನು ಅನುಮತಿಸಿದನು. ಇದು ಬೆರಗಿನಿಂದ ನೋಡುತ್ತಾ ಇದ್ದ ಆಸುಪಾಸಿನ ಜನಾಂಗಗಳನ್ನು ಸ್ತಬ್ಧಗೊಳಿಸಿತು. (ಯೆಹೆಜ್ಕೇಲ 36:35, 36) ಆದರೂ ದುಃಖಕರವಾಗಿ, ಇಸ್ರಾಯೇಲ್ ಜನಾಂಗವು ಪುನಃ ದುರಾಚಾರಗಳೊಳಗೆ ಬಿದ್ದಿತು. ಒಬ್ಬ ನಂಬಿಗಸ್ತ ಯೆಹೂದ್ಯನಾಗಿದ್ದ ನೆಹೆಮೀಯನು ಸನ್ನಿವೇಶವನ್ನು ಸರಿಪಡಿಸಲು ಸಹಾಯವನ್ನಿತ್ತನು. ಸಾರ್ವಜನಿಕ ಪ್ರಾರ್ಥನೆಯೊಂದರಲ್ಲಿ ಹೀಗನ್ನುತ್ತಾ, ಅವನು ಜನಾಂಗದೊಂದಿಗಿನ ದೇವರ ಕನಿಕರದ ವ್ಯವಹಾರಗಳನ್ನು ಪುನರವಲೋಕಿಸಿದನು:
10. ಯೆಹೋವನ ಕನಿಕರವನ್ನು ನೆಹೆಮೀಯನು ಹೇಗೆ ಎತ್ತಿತೋರಿಸಿದನು?
10 “ಅವರು ಆ ಕಷ್ಟಕಾಲದಲ್ಲಿ ನಿನಗೆ ಮೊರೆಯಿಡಲು ಪರಲೋಕದಿಂದ ನೀನು ಅವರಿಗೆ ಕಿವಿಗೊಟ್ಟು ನಿನ್ನ ಕರುಣಾತಿಶಯದಿಂದ ರಕ್ಷಕರನ್ನು ಕಳುಹಿಸಿ ವಿರೋಧಿಗಳ ಕೈಯಿಂದ ಅವರನ್ನು ಬಿಡಿಸಿದಿ. ಉಪಶಮನವನ್ನು ಪಡೆದ ಮೇಲೆ ಅವರು ತಿರಿಗಿ ದ್ರೋಹಿಗಳಾಗಿ ನಡೆಯುತ್ತಿರುವದನ್ನು ನೀನು ಕಂಡು ಅವರ ಮೇಲೆ ದೊರೆತನನಡಿಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದಿ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿ . . . ನೀನು ಅನೇಕವರ್ಷಗಳ ತನಕ ಅವರ ವಿಷಯದಲ್ಲಿ ತಾಳಿಕೊಂಡು” ಇದ್ದೀ.—ನೆಹೆಮೀಯ 9:26-30; ಯೆಶಾಯ 63:9, 10 ಸಹ ನೋಡಿರಿ.
11. ಯೆಹೋವನ ಮತ್ತು ಮನುಷ್ಯರ ದೇವರುಗಳ ನಡುವೆ ಯಾವ ವೈದೃಶ್ಯವಿದೆ?
11 ಕೊನೆಯಲ್ಲಿ, ದೇವರ ಪ್ರಿಯ ಪುತ್ರನನ್ನು ಕ್ರೂರವಾಗಿ ತೊರೆದಾದನಂತರ, ಯೆಹೂದಿ ಜನಾಂಗವು ನಿತ್ಯಕ್ಕೂ ಅದರ ವಿಶೇಷ ಗೌರವದ ಸ್ಥಾನವನ್ನು ಕಳೆದುಕೊಂಡಿತು. ಅವರೊಂದಿಗಿನ ದೇವರ ನಿಷ್ಠೆಯ ಆಪತ್ತೆಯು ಸುಮಾರು 1,500 ವರುಷಗಳಿಗಿಂತಲೂ ಹೆಚ್ಚು ಕಾಲ ಬಾಳಿತು. ಯೆಹೋವನು ನಿಶ್ಚಯವಾಗಿ ಕರುಣೆಯ ಒಬ್ಬ ದೇವರು ಎಂಬ ವಾಸ್ತವಾಂಶಕ್ಕೆ ಇದು ಒಂದು ನಿತ್ಯ ಸಾಕ್ಷಿಯಾಗಿ ನಿಲ್ಲುತ್ತದೆ. ಪಾಪಭರಿತ ಮಾನವರು ಅನ್ವೇಷಿಸಿದ ಕ್ರೂರ ಮತ್ತು ನಿರ್ಭಾವದ ದೇವರುಗಳಿಗೆ ಎಷ್ಟೊಂದು ಸ್ಫುಟವಾದ ವೈದೃಶ್ಯ!—ಪುಟ 8 ನಲ್ಲಿರುವ ಬಾಕ್ಸ್ ನೋಡಿರಿ.
ಕನಿಕರದ ಅತ್ಯಂತ ಮಹಾ ಅಭಿವ್ಯಕ್ತಿ
12. ದೇವರ ಕನಿಕರದ ಅತಿ ಮಹಾ ಅಭಿವ್ಯಕ್ತಿಯು ಏನಾಗಿತ್ತು?
12 ಭೂಮಿಗೆ ತನ್ನ ಪುತ್ರನನ್ನು ಕಳುಹಿಸಿದ್ದು ದೇವರ ಕನಿಕರದ ಅತ್ಯಂತ ಮಹಾ ಅಭಿವ್ಯಕ್ತಿಯಾಗಿತ್ತು. ನಿಜ, ಯೇಸುವಿನ ಸಮಗ್ರತೆಯ ಜೀವನವು, ಪಿಶಾಚನ ಮಿಥ್ಯಾರೋಪಗಳಿಗೆ ಒಂದು ಪರಿಪೂರ್ಣ ಉತ್ತರವನ್ನು ಯೆಹೋವನಿಗೆ ಒದಗಿಸುತ್ತಾ, ಅವನಿಗೆ ಮಹಾ ಆನಂದವನ್ನು ತಂದಿತು. (ಜ್ಞಾನೋಕ್ತಿ 27:11) ಆದಾಗ್ಯೂ, ಅದೇ ಸಮಯದಲ್ಲಿ ತನ್ನ ಪ್ರಿಯ ಪುತ್ರನು ಕ್ರೂರ ಮತ್ತು ಅವಮಾನಕಾರಿ ಮರಣದ ಬಾಧೆಯನ್ನನುಭವಿಸುವುದನ್ನು ವೀಕ್ಷಿಸಲಿಕ್ಕಿದ್ದದ್ದು, ಯಾವನೇ ಮಾನವ ಹೆತ್ತವರು ಎಂದಾದರೂ ಸಹಿಸಿಕೊಳ್ಳಬೇಕಾಗಿದ್ದುದಕ್ಕಿಂತ ಅತ್ಯಂತ ಹೆಚ್ಚಿನ ನೋವನ್ನು ಯೆಹೋವನಿಗೆ ತಂದಿತು ಎಂಬುದರಲ್ಲಿ ಸಂದೇಹವೇ ಇಲ್ಲ. ಮಾನವಕುಲದ ರಕ್ಷಣೆಗಾಗಿ ದಾರಿಯನ್ನು ತೆರೆದ, ಒಂದು ಅತಿ ಪ್ರೀತಿಯ ತ್ಯಾಗ ಇದಾಗಿತ್ತು. (ಯೋಹಾನ 3:16) ಸ್ನಾನಿಕ ಯೋಹಾನನ ತಂದೆಯಾದ ಜಕರೀಯನು ಮುನ್ನುಡಿದಂತೆ, ಇದು “ನಮ್ಮ ದೇವರ ಕೋಮಲ ಕನಿಕರ” ವನ್ನು ಅತಿಶಯಗೊಳಿಸಿತು.—ಲೂಕ 1:77, 78.
13. ಯೇಸುವು ತನ್ನ ತಂದೆಯ ವ್ಯಕ್ತಿತ್ವವನ್ನು ಯಾವ ಪ್ರಧಾನ ರೀತಿಯಲ್ಲಿ ಪ್ರತಿಬಿಂಬಿಸಿದ್ದಾನೆ?
13 ಭೂಮಿಗೆ ದೇವರ ಪುತ್ರನನ್ನು ಕಳುಹಿಸುವುದು ಯೆಹೋವನ ವ್ಯಕ್ತಿತ್ವದ ಒಂದು ಹೆಚ್ಚು ಸ್ಪಷ್ಟವಾಗಿದ ನೋಟವನ್ನು ಸಹ ಮಾನವಕುಲಕ್ಕೆ ನೀಡಿತು. ಇದು ಹೇಗೆ? ಇದರಿಂದ ಯೇಸುವು ತನ್ನ ತಂದೆಯ ವ್ಯಕ್ತಿತ್ವವನ್ನು, ವಿಶೇಷವಾಗಿ ತಾನು ಕೀಳುಸ್ಥಿತಿಯವರನ್ನು ಕೋಮಲವಾಗಿ ಕನಿಕರಿಸುವ ರೀತಿಯಿಂದ ಉಪಚರಿಸಿದರ್ದಿಂದ ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಯೋಹಾನ 1:14; 14:9) ಈ ವಿಷಯದಲ್ಲಿ, ಸುವಾರ್ತೆ ಪುಸ್ತಕಗಳ ಮೂವರು ಲೇಖಕರಾದ ಮತ್ತಾಯ, ಮಾರ್ಕ, ಮತ್ತು ಲೂಕ ಒಂದು ಗ್ರೀಕ್ ಕ್ರಿಯಾಪದವಾದ ಸ್ಲ್ಪಾಗ್-ಖ್ನಿ’ಜೊಮೈ ಯನ್ನು ಬಳಸುತ್ತಾರೆ. ಇದು “ಕರುಳುಗಳು” ಎಂಬ ಪದಕ್ಕಿರುವ ಗ್ರೀಕ್ ಶಬ್ದದಿಂದ ಬಂದಿರುತ್ತದೆ. “ಅದರ ವ್ಯುತ್ಪತ್ತಿಯಿಂದಲೇ,” ಬೈಬಲ್ ವಿದ್ವಾಂಸ ವಿಲ್ಯಂ ಬಾರ್ಕ್ಲೇ ವಿವರಿಸುವುದು, “ಇದು ಸಾಮಾನ್ಯ ಕರುಣೆ ಯಾ ಕನಿಕರವನ್ನು ವರ್ಣಿಸುವುದಿಲ್ಲ, ಆದರೆ ಅವನ ಜೀವಾಳದ ಅತಿ ಆಳಕ್ಕೆ ಮನುಷ್ಯನೊಬ್ಬನನ್ನು ನಡಿಸುವ ಒಂದು ರಸಭಾವವನ್ನು ವರ್ಣಿಸುತ್ತದೆ. ಕನಿಕರದ ಭಾವನೆಗಾಗಿ ಗ್ರೀಕಿನಲ್ಲಿ ಅದು ಅತಿ ಬಲವಾದ ಶಬ್ದವಾಗಿದೆ.” ಇದು “ಕನಿಕರ ಪಡು” ಯಾ “ಕನಿಕರದಿಂದ ಪ್ರೇರಿಸಲ್ಪಟ್ಟನು” ಎಂದು ವಿವಿಧ ರೀತಿಯಲ್ಲಿ ಭಾಷಾಂತರಿಸಲ್ಪಟ್ಟಿದೆ.—ಮಾರ್ಕ 6:34; 8:2, NW.
ಯೇಸುವು ಕರುಣೆ ಪಟ್ಟಾಗ
14, 15. ಗಲಿಲಾಯದ ಒಂದು ನಗರದಲ್ಲಿ, ಯೇಸುವು ಕರುಣೆಯಿಂದ ಹೇಗೆ ಪ್ರೇರಿಸಲ್ಪಡುತ್ತಾನೆ, ಮತ್ತು ಇದು ಏನನ್ನು ನಿದರ್ಶಿಸುತ್ತದೆ?
14 ದೃಶ್ಯವು ಗಲಿಲಾಯ ನಗರವಾಗಿದೆ. “ಮೈಮೇಲೆಲ್ಲಾ ಕುಷ್ಠರೋಗ ತುಂಬಿದ್ದ” ಮನುಷ್ಯನೊಬ್ಬನು ಪದ್ಧತಿಯ ಪ್ರಕಾರ ಎಚ್ಚರಿಕೆಯನ್ನು ನೀಡದೆ ಯೇಸುವನ್ನು ಸಮೀಪಿಸುತ್ತಾನೆ. (ಲೂಕ 5:12) ದೇವರ ನಿಯಮಶಾಸ್ತ್ರದಂತೆ ಕೇಳಿಕೊಳ್ಳಲ್ಪಟ್ಟಂತೆ “ಅಶುದ್ಧನು, ಅಶುದ್ಧನು” ಎಂದು ಕೂಗಿಕೊಳ್ಳದೆ ಇದ್ದದ್ದಕ್ಕಾಗಿ ಯೇಸುವು ಅವನನ್ನು ಕಠಿನವಾಗಿ ಗದರಿಸುತ್ತಾನೊ? (ಯಾಜಕಕಾಂಡ 13:45) ಇಲ್ಲ. ಬದಲಾಗಿ, ಯೇಸುವು ಈ ಮನುಷ್ಯನ ಹತಾಶೆಯ ವಿನಂತಿಯನ್ನು ಆಲಿಸುತ್ತಾನೆ: “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ.” ಯೇಸುವು “ಕನಿಕರದಿಂದ ಪ್ರೇರಿಸಲ್ಪಟ್ಟು,” ಕೈಚಾಚಿ ಸ್ಪರ್ಶಿಸುತ್ತಾ ಅನ್ನುವುದು: “ನನಗೆ ಮನಸ್ಸುಂಟು; ಶುದ್ಧವಾಗು.” ತಕ್ಷಣ ಆ ಮನುಷ್ಯನ ಆರೋಗ್ಯವು ಪುನಃ ಸ್ಥಾಪಿಸಲ್ಪಡುತ್ತದೆ. ಹೀಗೆ ಯೇಸು ಕೇವಲ ತನ್ನ ಅದ್ಭುತಕರ, ದೇವ ದತ್ತ ಶಕ್ತಿಗಳನ್ನು ಮಾತ್ರವಲ್ಲ, ಅಂತಹ ಶಕ್ತಿಗಳನ್ನು ಬಳಸಲು ಅವನನ್ನು ನಡಿಸುವ ಕೋಮಲ ಭಾವನೆಗಳನ್ನು ಸಹ ಪ್ರದರ್ಶಿಸುತ್ತಾನೆ.—ಮಾರ್ಕ 1:40-42.
15 ಕನಿಕರದ ಅಂತಹ ಭಾವನೆಗಳನ್ನು ಯೇಸುವು ತೋರಿಸುವ ಮೊದಲು ಅವನನ್ನು ಸಮೀಪಿಸಬೇಕಾಗಿದೆಯೊ? ಇಲ್ಲ. ಸ್ವಲ್ಪ ಸಮಯಾನಂತರ, ನಾಯಿನ ನಗರದಿಂದ ಹೊರಬರುತ್ತಿದ್ದ ಶವಯಾತ್ರೆಯೊಂದನ್ನು ಅವನು ಭೇಟಿಯಾಗುತ್ತಾನೆ. ನಿಸ್ಸಂದೇಹವಾಗಿ, ಈ ಮೊದಲು ಯೇಸುವು ಅನೇಕ ಶವಯಾತ್ರೆಗಳನ್ನು ನೋಡಿದ್ದಾನೆ, ಆದರೆ ಇದು ವಿಶೇಷವಾಗಿ ಹೃದಯದ್ರಾವಕವಾಗಿದೆ. ಸತ್ತವನು ವಿಧವೆಯೊಬ್ಬಳ ಏಕೈಕ ಪುತ್ರನಾಗಿದ್ದಾನೆ. ಯೇಸುವು “ಕನಿಕರಿಸಿ,” ಅವಳನ್ನು ಸಮೀಪಿಸಿ, ಅನ್ನುವುದು: “ಅಳಬೇಡ.” ಅನಂತರ ಅವಳ ಮಗನನ್ನು ಪುನಃ ಜೀವಕ್ಕೆ ಎಬ್ಬಿಸುವ ಒಂದು ಎದ್ದುಕಾಣುವ ಅದ್ಭುತವನ್ನು ಜರುಗಿಸುತ್ತಾನೆ.—ಲೂಕ 7:11-15.
16. ಆತನನ್ನು ಹಿಂಬಾಲಿಸುತ್ತಿದ್ದ ದೊಡ್ಡ ಜನಸಮೂಹದೆಡೆಗೆ ಯೇಸುವು ಏಕೆ ಕರುಣೆಯುಳ್ಳವನಾಗುತ್ತಾನೆ?
16 ಮೇಲಿನ ಘಟನೆಗಳಿಂದ ಕಲಿತ, ಗಮನ ಸೆಳೆಯುವ ಪಾಠವೇನಂದರೆ ಯೇಸುವು “ಕನಿಕರದಿಂದ ಪ್ರೇರಿಸಲ್ಪಟ್ಟಾಗ” ಸಹಾಯಿಸಲು ಯಾವುದಾದರೊಂದು ಸಕಾರಾತ್ಮಕವಾದದ್ದನ್ನು ಮಾಡುತ್ತಾನೆ. ಅನಂತರದ ಒಂದು ಸಂದರ್ಭದಲ್ಲಿ, ಅವನನ್ನು ಹಿಂಬಾಲಿಸುತ್ತಿರುವ ಬಹುದೊಡ್ಡ ಜನಸಮೂಹವನ್ನು ವಿವರವಾಗಿ ಪರೀಕ್ಷಿಸುತ್ತಾನೆ. ಮತ್ತಾಯನು ವರದಿಸುವುದೇನಂದರೆ “ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಸಾಧಾರಣ ಜನರ ಆತ್ಮಿಕ ಹಸಿವನ್ನು ನೀಗಿಸಲು ಫರಿಸಾಯರು ಅತಿ ಕೊಂಚವನ್ನೇ ಮಾಡುತ್ತಾರೆ. ಬದಲಾಗಿ, ಅವರು ಅನೇಕ ಅನಾವಶ್ಯಕವಾದ ನಿಯಮಗಳಿಂದ ಈ ನಮ್ರ ಜನರ ಮೇಲೆ ಭಾರಹೊರಿಸುತ್ತಾರೆ. (ಮತ್ತಾಯ 12:1, 2; 15:1-9; 23:4, 23) “ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ” ಎಂದವರು ಯೇಸುವನ್ನು ಆಲಿಸುತ್ತಿದ್ದವರ ಕುರಿತು ಹೇಳಿದಾಗ, ಸಾಧಾರಣ ಜನರ ಕುರಿತಾದ ಅವರ ನೋಟವು ಪ್ರಕಟಗೊಂಡಿತು.—ಯೋಹಾನ 7:49.
17. ಜನಸಮೂಹಕ್ಕಾಗಿರುವ ಯೇಸುವಿನ ಕರುಣೆಯು ಅವನನ್ನು ಹೇಗೆ ಪ್ರೇರಿಸುತ್ತದೆ, ಮತ್ತು ಯಾವ ಬಹುವ್ಯಾಪನೆಯ ಮಾರ್ಗದರ್ಶನವನ್ನು ಅವನು ಅಲ್ಲಿ ಒದಗಿಸುತ್ತಾನೆ?
17 ವ್ಯತಿರಿಕ್ತವಾಗಿ, ಜನಸಮೂಹಗಳ ಆತ್ಮಿಕ ದುರವಸ್ಥೆಯಿಂದ ಯೇಸುವು ಆಳವಾಗಿ ಪ್ರೇರಿಸಲ್ಪಡುತ್ತಾನೆ. ಆದರೆ ಅವರಿಗೆ ವೈಯಕ್ತಿಕ ಲಕ್ಷ್ಯ ಕೊಡಲು ಅಲ್ಲಿ ಬಹಳ ಹೆಚ್ಚು ಮಂದಿ ಆಸಕ್ತ ಜನರು ಇದ್ದಾರೆ. ಆದುದರಿಂದ ಅಧಿಕ ಕೆಲಸಗಾರರಿಗಾಗಿ ಪ್ರಾರ್ಥಿಸುವಂತೆ ಅವನು ತನ್ನ ಶಿಷ್ಯರಿಗೆ ಹೇಳುತ್ತಾನೆ. (ಮತ್ತಾಯ 9:35-38) ಅಂತಹ ಪ್ರಾರ್ಥನೆಗಳ ಸಹಮತದೊಂದಿಗೆ, ಯೇಸುವು “ಪರಲೋಕರಾಜ್ಯವು ಸಮೀಪವಾಯಿತು” ಎಂಬ ಸಂದೇಶದೊಂದಿಗೆ ತನ್ನ ಶಿಷ್ಯರನ್ನು ಕಳುಹಿಸುತ್ತಾನೆ. ಆ ಸಂದರ್ಭದಲ್ಲಿ ನೀಡಲ್ಪಟ್ಟ ಉಪದೇಶಗಳು ನಮ್ಮೀ ದಿನಗಳ ತನಕ ಕ್ರೈಸ್ತರಿಗೆ ಅತ್ಯಮೂಲ್ಯ ಮಾರ್ಗದರ್ಶಿಗಳಾಗಿ ಸೇವೆ ಸಲ್ಲಿಸಿವೆ. ನಿಸ್ಸಂದೇಹವಾಗಿ, ಯೇಸುವಿನ ಕನಿಕರದ ಭಾವನೆಗಳು ಮಾನವಕುಲದ ಆತ್ಮಿಕ ಹಸಿವನ್ನು ತಣಿಸಲು ಅವನನ್ನು ಪ್ರೇರಿಸುತ್ತವೆ.—ಮತ್ತಾಯ 10:5-7.
18. ಆತನ ಏಕಾಂತತೆಯನ್ನು ಗುಂಪುಗಳು ಭಂಗಗೊಳಿಸಿದಾಗ ಯೇಸುವು ಹೇಗೆ ಪ್ರತಿಕ್ರಿಯಿಸುತ್ತಾನೆ, ಮತ್ತು ನಾವು ಇದರಿಂದ ಯಾವ ಪಾಠವನ್ನು ಕಲಿಯುತ್ತೇವೆ?
18 ಇನ್ನೊಂದು ಸಂದರ್ಭದಲ್ಲಿ, ಯೇಸುವು ಜನಸಮೂಹಗಳ ಅಧ್ಯಾತ್ಮಿಕ ಆವಶ್ಯಕತೆಗಳಿಗಾಗಿ ಪುನಃ ಚಿಂತಾಕ್ರಾಂತನಾಗುತ್ತಾನೆ. ಕಾರ್ಯಮಗ್ನ ಸಾರುವಿಕೆಯ ಸಂಚಾರದ ಅನಂತರ ಈ ಸಮಯ ಅವನು ಮತ್ತು ಅವನ ಅಪೊಸ್ತಲರು ದಣಿದಿದ್ದಾರೆ, ಮತ್ತು ವಿಶ್ರಾಂತಿ ಪಡೆಯಲಿಕ್ಕೋಸ್ಕರ ಒಂದು ಸ್ಥಳವನ್ನು ಹುಡುಕುತ್ತಾರೆ. ಆದರೆ ಜನರು ಅವರನ್ನು ಬಲುಬೇಗನೆ ಕಂಡುಕೊಳ್ಳುತ್ತಾರೆ. ತಮ್ಮ ಏಕಾಂತತೆಯನ್ನು ಭಂಗಗೊಳಿಸಿದರ್ದಿಂದ ಯೇಸುವು ರೇಗಿಸಲ್ಪಡುವ ಬದಲಾಗಿ, ಮಾರ್ಕನು ದಾಖಲಿಸುವುದೇನಂದರೆ ಅವನು “ಕನಿಕರಪಟ್ಟನು.” ಮತ್ತು ಯೇಸುವಿನ ಆಳವಾದ ಭಾವನೆಗಳಿಗೆ ಕಾರಣವೇನು? “ಅವರು ಕುರುಬನಿಲ್ಲದ ಕುರಿಗಳ ಹಾಗೆ“ ಇದ್ದಾರೆ. ಪುನಃ ಯೇಸು ತನ್ನ ಭಾವನೆಗಳನ್ನು ಕ್ರಿಯೆಯಿಂದ ವ್ಯಕ್ತಪಡಿಸುತ್ತಾನೆ ಮತ್ತು “ದೇವರ ರಾಜ್ಯದ ವಿಷಯವಾಗಿ” ಜನಸಮೂಹಕ್ಕೆ ಉಪದೇಶಿಸಲು ಆರಂಭಿಸುತ್ತಾನೆ. ಹೌದು, ಅವರ ಆತ್ಮಿಕ ಹಸಿವಿನಿಂದ ಎಷ್ಟೊಂದು ಗಾಢವಾಗಿ ಅವನು ಪ್ರೇರಿಸಲ್ಪಟ್ಟನೆಂದರೆ ಅವರಿಗೆ ಬೋಧಿಸಲಿಕ್ಕಾಗಿ ಆವಶ್ಯಕವಾಗಿದ್ದ ವಿಶ್ರಾಂತಿಯನ್ನು ಅವನು ತ್ಯಾಗಮಾಡಿದನು.
19. ಜನಸಮೂಹದೆಡೆಗಿನ ಯೇಸುವಿನ ಚಿಂತೆಯು ಅವರ ಆತ್ಮಿಕ ಆವಶ್ಯಕತೆಗಳನ್ನು ಸಹ ಮೀರಿದ್ದು ಹೇಗೆ?
19 ಯೇಸು ಪ್ರಾಥಮಿಕವಾಗಿ ಜನರ ಆತ್ಮಿಕ ಆವಶ್ಯಕತೆಗಳ ಕುರಿತು ಚಿಂತಿತನಾಗಿರುವಾಗ, ಅವರ ಮೂಲಭೂತ ಶಾರೀರಿಕ ಆವಶ್ಯಕತೆಗಳನ್ನು ಅವನು ಎಂದಿಗೂ ಉಪೇಕ್ಷಿಸಲಿಲ್ಲ. ಅದೇ ಸಂದರ್ಭದಲ್ಲಿ ಕೂಡ, ಅವನು “ಕ್ಷೇಮಬೇಕಾದವರಿಗೆ ವಾಸಿಮಾಡಿದನು.” (ಲೂಕ 9:11) ಮತ್ತೊಂದು ಸಂದರ್ಭದಲ್ಲಿ, ಜನರ ಗುಂಪು ಅವನೊಂದಿಗೆ ಬಹಳ ಸಮಯ ಇತ್ತು, ಮತ್ತು ಅವರು ತಮ್ಮ ಮನೆಯಿಂದ ಬಹಳ ದೂರ ಬಂದಿದ್ದರು. ಅವರ ಶಾರೀರಿಕ ಜರೂರಿಯನ್ನು ಅರಿತುಕೊಂಡು, ಯೇಸುವು ತನ್ನ ಶಿಷ್ಯರಿಗೆ ಹೇಳಿದ್ದು: “ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಅವರು ನನ್ನ ಬಳಿಗೆ ಬಂದು ಈಗ ಮೂರು ದಿನವಾಯಿತು; ಅವರಿಗೆ ಊಟಕ್ಕೆ ಏನೂ ಇಲ್ಲ; ಅವರನ್ನು ಉಪವಾಸವಾಗಿ ಕಳುಹಿಸಿಬಿಡುವದಕ್ಕೆ ನನಗೆ ಮನಸ್ಸಿಲ್ಲ; ದಾರಿಯಲ್ಲಿ ಬಳಲಿಹೋದಾರು.” (ಮತ್ತಾಯ 15:32) ಅವರ ಸಂಭಾವ್ಯ ಕಷ್ಟವನ್ನು ಹೋಗಲಾಡಿಸಲು ಯೇಸುವು ಏನೋ ಒಂದನ್ನು ಮಾಡುತ್ತಾನೆ. ಅವನು ಸಾವಿರಾರು ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗೆ ಅದ್ಭುತಕರವಾಗಿ ಏಳು ರೊಟ್ಟಿಗಳಿಂದ ಮತ್ತು ಕೆಲವೇ ಮೀನುಗಳಿಂದ ಆಹಾರವನ್ನು ಒದಗಿಸುತ್ತಾನೆ.
20. ಯೇಸುವು ಕರುಣೆಯಿಂದ ಪ್ರೇರಿಸಲ್ಪಟ್ಟ ಕೊನೆಯ ಲಿಖಿತ ಘಟನೆಯಿಂದ ನಾವೇನನ್ನು ಕಲಿಯುತ್ತೇವೆ?
20 ಯೇಸುವು ಕನಿಕರದಿಂದ ಪ್ರೇರಿಸಲ್ಪಟ್ಟ ಕೊನೆಯ ಲಿಖಿತ ಘಟನೆಯು ಅವನು ಯೆರೂಸಲೇಮಿಗೆ ಹೋಗುವ ಅವನ ಕೊನೆಯ ಪ್ರಯಾಣದ್ದಾಗಿತ್ತು. ಪಸ್ಕಹಬ್ಬವನ್ನು ಆಚರಿಸಲು ಜನರ ದೊಡ್ಡ ಗುಂಪು ಅವನೊಂದಿಗೆ ಪ್ರಯಾಣಿಸುತ್ತಿತ್ತು. ಯೆರಿಕೋವಿನ ಸಮೀಪದ ಮಾರ್ಗದ ಮೇಲೆ ಇಬ್ಬರು ಅಂಧ ಭಿಕ್ಷುಕರು ಕೂಗುತ್ತಾ ಇದ್ದರು: “ಸ್ವಾಮೀ . . . ನಮ್ಮನ್ನು ಕರುಣಿಸು.” ಗುಂಪಿನವರು ಅವರನ್ನು ಸುಮ್ಮನಿರಿಸಲು ಪ್ರಯತ್ನಿಸಿದರು, ಆದರೆ ಯೇಸುವು ಅವರನ್ನು ಕರೆದು, ತಾನು ಏನು ಮಾಡಬೇಕೆಂದು ಅವರು ಬಯಸುತ್ತಾರೆಂದು ವಿಚಾರಿಸುತ್ತಾನೆ. “ನಮ್ಮ ಕಣ್ಣುಗಳು ತೆರೆಯಲ್ಪಡಬೇಕು, ಸ್ವಾಮೀ,” ಎಂದವರು ಬೇಡಿಕೊಳ್ಳುತ್ತಾರೆ. ಅವನು “ಕನಿಕರಪಟ್ಟು,” ಅವರ ಕಣ್ಣುಗಳನ್ನು ಮುಟ್ಟುತ್ತಾನೆ, ಮತ್ತು ಅವರು ದೃಷ್ಟಿಯನ್ನು ಪಡೆಯುತ್ತಾರೆ. (ಮತ್ತಾಯ 20:29-34) ಇದರಿಂದ ನಾವು ಎಂತಹ ಪ್ರಾಮುಖ್ಯ ಪಾಠವೊಂದನ್ನು ಕಲಿಯುತ್ತೇವೆ! ತನ್ನ ಐಹಿಕ ಶುಶ್ರೂಷೆಯ ಕೊನೆಯ ವಾರಕ್ಕೆ ಯೇಸುವು ಪ್ರವೇಶಿಸಲಿಕ್ಕಿದ್ದನು. ಸೈತಾನನ ಕಾರ್ಯಭಾರಿಗಳ ಕೈಗಳಿಂದ ಕ್ರೂರ ಮರಣವೊಂದನ್ನು ಅನುಭವಿಸುವ ಮೊದಲು ಬಹಳಷ್ಟು ಕೆಲಸವನ್ನು ಅವನಿಗೆ ಪೂರೈಸಲಿಕ್ಕಿತ್ತು. ಆದರೂ, ಈ ಬಹು ಮುಖ್ಯ ಸಮಯದ ಒತ್ತಡವು ಇತರ ಕಡಿಮೆ ಮಹತ್ವದ ಮಾನವ ಆವಶ್ಯಕತೆಗಳಿಗಾಗಿ ಕನಿಕರದ ತನ್ನ ಕೋಮಲ ಭಾವನೆಗಳನ್ನು ವ್ಯಕ್ತಪಡಿಸಲು ತಡೆಯುವಂತೆ ಅವನು ಅನುಮತಿಸಲಿಲ್ಲ.
ಕನಿಕರವನ್ನು ಎತ್ತಿತೋರಿಸುವ ಉದಾಹರಣೆಗಳು
21. ತನ್ನ ಸೇವಕನ ದೊಡ್ಡ ಮೊತ್ತದ ಸಾಲವನ್ನು ಒಡೆಯನು ರದ್ದುಗೊಳಿಸಿದರ್ದ ಮೂಲಕ ಏನು ನಿದರ್ಶಿಸಲ್ಪಡುತ್ತದೆ?
21 ಯೇಸುವಿನ ಜೀವನದ ಈ ದಾಖಲೆಗಳಲ್ಲಿ ಬಳಸಲ್ಪಟ್ಟ ಸ್ಲ್ಪಾಗ್-ಖ್ನಿ’ಜೊಮೈ ಎಂಬ ಗ್ರೀಕ್ ಕ್ರಿಯಾಪದವನ್ನು ಯೇಸುವಿನ ಮೂರು ಉದಾಹರಣೆಗಳಲ್ಲಿ ಸಹ ಉಪಯೋಗಿಸಲಾಗಿದೆ. ಒಂದು ಕಥೆಯಲ್ಲಿ ಸೇವಕನೊಬ್ಬನು ದೊಡ್ಡ ಮೊತ್ತದ ಸಾಲವನ್ನು ತೀರಿಸಲು ಸಮಯವನ್ನು ಕೊಡುವಂತೆ ಬೇಡಿಕೊಳ್ಳುತ್ತಾನೆ. ಅವನ ಒಡೆಯನು “ಕನಿಕರಪಟ್ಟು” ಸಾಲವನ್ನು ರದ್ದುಗೊಳಿಸುತ್ತಾನೆ. ಯೇಸುವಿನ ವಿಮೋಚನ ಯಜ್ಞದ ಮೇಲೆ ವಿಶ್ವಾಸವನ್ನಿಡುವ ಪ್ರತಿಯೊಬ್ಬ ಪ್ರತ್ಯೇಕ ಕ್ರೈಸ್ತನಿಗಾಗಿ ಪಾಪದ ದೊಡ್ಡ ಮೊತ್ತದ ಒಂದು ಸಾಲವನ್ನು ರದ್ದುಪಡಿಸುವುದರಲ್ಲಿ ಯೆಹೋವ ದೇವರು ಮಹಾ ಕನಿಕರವನ್ನು ತೋರಿಸಿದ್ದಾನೆಂದು ಇದು ಉದಾಹರಿಸುತ್ತದೆ.—ಮತ್ತಾಯ 18:27; 20:28.
22. ಪೋಲಿಹೋದ ಮಗನ ಸಾಮ್ಯದಿಂದ ಏನು ಉದಾಹರಿಸಲಾಗುತ್ತದೆ?
22 ಅನಂತರ ಪೋಲಿಹೋದ ಮಗನ ಕಥೆಯಿದೆ. ಪಥಭ್ರಷ್ಟಗೊಂಡ ಮಗನು ಮನೆಗೆ ಹಿಂದೆರಳಿದಾಗ ಏನು ಸಂಭವಿಸುತ್ತದೆಂದು ಜ್ಞಾಪಕಕ್ಕೆ ತನ್ನಿರಿ. “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು.” (ಲೂಕ 15:20) ಪಥಭ್ರಷ್ಟಗೊಂಡ ಕ್ರೈಸ್ತನೊಬ್ಬನು ಸಾಚ ಪಶ್ಚಾತ್ತಾಪವನ್ನು ತೋರಿಸಿದಾಗ, ಯೆಹೋವನು ಕರುಣೆಯುಳ್ಳವನಾಗಿ, ಅವನನ್ನು ಪುನಃ ಸ್ವೀಕರಿಸುವನು. ಹೀಗೆ ಈ ಎರಡು ಉದಾಹರಣೆಗಳಿಂದ, ನಮ್ಮ ತಂದೆಯಾದ ಯೆಹೋವನು “ವಾತ್ಸಲ್ಯದಲ್ಲಿ ಅತಿ ಕೋಮಲನೂ, ಕನಿಕರನೂ ಆಗಿದ್ದಾನೆ” ಎಂದು ಯೇಸುವು ತೋರಿಸುತ್ತಾನೆ.—ಯಾಕೋಬ 5:11, NW, ಪಾದಟಿಪ್ಪಣಿ.
23. ಯೇಸು ಹೇಳಿದ ನೆರೆಯವನಾದ ಸಮಾರ್ಯದವನ ಉದಾಹರಣೆಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
23 ಸ್ಲ್ಪಾಗ್-ಖ್ನಿ’ಜೊಮೈಯ ಮೂರನೆಯ ಉದಾಹರಣೆಯ ಬಳಕೆಯು ಸೂರೆಗೈಯಲ್ಪಟ್ಟು, ಅರೆಜೀವಮಾಡಿ ಬಿಟ್ಟುಹೋದ ಯೆಹೂದ್ಯನೊಬ್ಬನ ದಾರುಣ ಸ್ಥಿತಿಯ ಕಡೆಗೆ “ಕನಿಕರದಿಂದ ಪ್ರೇರಿಸಲ್ಪಟ್ಟ” ಕನಿಕರಿಸುವ ಸಮಾರ್ಯದವನ ಕುರಿತಾಗಿದೆ. (ಲೂಕ 10:33, NW) ಈ ಭಾವನೆಗಳನುಸಾರ ಕ್ರಿಯೆಗೈಯುತ್ತಾ ಅಪರಿಚಿತನನ್ನು ಸಹಾಯಿಸಲು ತನ್ನ ಶಕಿಯ್ತಿಂದಾಗುವುದೆಲವ್ಲನ್ನು ಸಮಾರ್ಯದವನು ಮಾಡಿದನು. ಕೋಮಲತೆ ಮತ್ತು ಕನಿಕರವನ್ನು ಪ್ರದರ್ಶಿಸುವುದರಲ್ಲಿ ನಿಜ ಕ್ರೈಸ್ತರು ಯೆಹೋವನ ಮತ್ತು ಯೇಸುವಿನ ಮಾದರಿಯನ್ನು ಅನುಕರಿಸುವಂತೆ ಅವರು ನಿರೀಕ್ಷಿಸುತ್ತಾರೆಂದು ಇದು ನಿದರ್ಶಿಸುತ್ತದೆ. ಇದನ್ನು ನಾವು ಮಾಡಸಾಧ್ಯವಿರುವ ಕೆಲವು ವಿಧಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
ಪುನರ್ವಿಮರ್ಶೆಗೆ ಪ್ರಶ್ನೆಗಳು
◻ ಕರುಣಾಭರಿತರಾಗಿರುವುದು ಅಂದರೆ ಅರ್ಥವೇನು?
◻ ಯೆಹೋವನು ತನ್ನ ಹೆಸರಿಗಾಗಿ ಕನಿಕರವನ್ನು ತೋರಿಸಿದ್ದು ಹೇಗೆ?
◻ ಕನಿಕರದ ಅತಿ ಮಹಾ ಅಭಿವ್ಯಕ್ತಿಯು ಏನಾಗಿದೆ?
◻ ತನ್ನ ತಂದೆಯ ವ್ಯಕ್ತಿತ್ವವನ್ನು ಯೇಸುವು ಯಾವ ಪ್ರಧಾನ ರೀತಿಯಲ್ಲಿ ಪ್ರತಿಬಿಂಬಿಸುತ್ತಾನೆ?
◻ ಯೇಸುವಿನ ಕನಿಕರದ ಕ್ರಿಯೆಗಳು ಮತ್ತು ಆತನ ಉದಾಹರಣೆಗಳಿಂದ ನಾವೇನನ್ನು ಕಲಿಯುತ್ತೇವೆ?
[ಪುಟ 12,13ರಲ್ಲಿರುವಚೌಕ]
“ಕೋಮಲ ಪ್ರೀತಿಯ ಪಾಲನೆ” ಗಾಗಿ ಒಂದು ಸುಸ್ಪಷ್ಟ ಪದ
“ಹಾ, ನನ್ನ ಕರುಳು! ನನ್ನ ಕರುಳು!” ಎಂದು ಕೂಗಿದನು ಪ್ರವಾದಿ ಯೆರೆಮೀಯನು. ಅವನು ಏನೋ ಅಹಿತವಾದುದನ್ನು ತಿಂದದರ್ದಿಂದಾಗಿ ಕರುಳಿನ ರೋಗದ ಕುರಿತು ಅವನು ಗೊಣಗುತ್ತಿದ್ದನೊ? ಇಲ್ಲ. ಯೆಹೂದ ರಾಜ್ಯದ ಮೇಲೆ ಬರಲಿರುವ ವಿಪತ್ತಿನ ಕುರಿತಾಗಿ ತನ್ನ ಆಳವಾದ ಚಿಂತೆಯನ್ನು ವ್ಯಕ್ತಪಡಿಸಲು ಯೆರೆಮೀಯನು ಒಂದು ಹೀಬ್ರು ರೂಪಕವನ್ನು ಬಳಸುತ್ತಾನೆ.—ಯೆರೆಮೀಯ 4:19.
ಯೆಹೋವ ದೇವರಿಗೆ ಆಳವಾದ ಭಾವನೆಗಳು ಇರುವುದರಿಂದ, ಅವನ ಕೋಮಲ ಭಾವನೆಗಳನ್ನು ವರ್ಣಿಸಲು “ಅಂತ್ರ,” ಯಾ “ಕರುಳು” (ಮಿ’ಯಿಮ್’) ಗಾಗಿರುವ ಹೀಬ್ರು ಪದವನ್ನು ಸಹ ಬಳಸಲಾಗಿದೆ. ಉದಾಹರಣೆಗೆ, ಯೆರೆಮೀಯನ ದಿನಗಳಿಗಿಂತಲೂ ದಶಕಗಳ ಮೊದಲು, ಹತ್ತು-ಕುಲಗಳ ಇಸ್ರಾಯೇಲ್ ಅಶ್ಶೂರ್ಯದ ಅರಸನಿಂದ ಸೆರೆಹಿಡಿಯಲ್ಪಟ್ಟಿತು. ಅವರ ಅಪನಂಬಿಗಸ್ತಿಕೆಗಾಗಿ ದಂಡನೆಯೋಪಾದಿ ಯೆಹೋವನು ಇದನ್ನು ಅನುಮತಿಸಿದನು. ಆದರೆ ದೇಶಭ್ರಷ್ಟರಾಗಿದ್ದ ಅವರನ್ನು ದೇವರು ಮರೆತನೋ? ಇಲ್ಲ. ಆತನ ಒಡಂಬಡಿಕೆಯ ಜನರ ಭಾಗದೋಪಾದಿ ಅವನು ಇನ್ನೂ ಅವರೊಂದಿಗೆ ಆಳವಾಗಿ ಸೇರಿಕೊಂಡಿದ್ದನು. ಪ್ರಧಾನ ಕುಲವಾಗಿದ್ದ ಎಫ್ರಾಯಿಮ್ನ ಹೆಸರಿನಿಂದ ಅವರನ್ನು ಸಂಬೋಧಿಸುತ್ತಾ, ಯೆಹೋವನು ವಿಚಾರಿಸಿದ್ದು: “ಎಫ್ರಾಯಿಮು ನನಗೆ ಪ್ರಿಯಪುತ್ರನೋ, ಮುದ್ದುಮಗುವೋ, ಏನೋ? ಅವನ ಹೆಸರೆತ್ತಿದಾಗೆಲ್ಲಾ ಅವನನ್ನು ಜ್ಞಾಪಿಸಿಕೊಳ್ಳುತ್ತಲೇ ಬರುತ್ತೇನೆ; ಇದರಿಂದ ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ; ಅವನನ್ನು ಕರುಣಿಸೇ ಕರುಣಿಸುವೆನು.”—ಯೆರೆಮೀಯ 31:20.
“ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ” ಎಂದು ಹೇಳುವುದರಿಂದ, ತನ್ನ ದೇಶಭ್ರಷ್ಟ ಜನರಿಗಾಗಿ ವಾತ್ಸಲ್ಯದ ಅಳವಾದ ತನ್ನ ಭಾವನೆಗಳನ್ನು ವರ್ಣಿಸಲು ಯೆಹೋವನು ಮಾತಿನ ಅಲಂಕಾರವನ್ನು ಬಳಸುತ್ತಾನೆ. ಈ ವಚನದ ಮೇಲಿನ ತನ್ನ ವ್ಯಾಖ್ಯಾನದಲ್ಲಿ, 19 ನೆಯ ಶತಕದ ಬೈಬಲ್ ವಿದ್ವಾಂಸ ಇ. ಹೆಂಡರ್ಸನ್ ಬರೆದದ್ದು: “ಯೆಹೋವನಿಂದ ಇಲ್ಲಿ ಪ್ರಸ್ತುತಪಡಿಸಲ್ಪಟ್ಟ, ಹಿಂದೆರಳುವ ಪೋಲಿಹೋದವನೆಡೆಗೆ ಹೆತ್ತವರ ಕೋಮಲ ಭಾವನೆಯ ಮನತಟ್ಟುವ ಪ್ರದರ್ಶನವನ್ನು ಬೇರೆ ಯಾವುದೇ ಪ್ರದರ್ಶನವು ಮೀರಿಸ ಸಾಧ್ಯವಿಲ್ಲ. . . . [ವಿಗ್ರಹಾರಾಧಕ ಎಫ್ರಾಯಿಮ್ಯರ] ವಿರುದ್ಧ ಅವನು ಈ ರೀತಿ ಮಾತಾಡಿದನು ಮತ್ತು ಅವರನ್ನು ಶಿಕ್ಷಿಸಿದನಾದರೂ . . . ಅವನು ಅವರನ್ನು ಎಂದಿಗೂ ಮರೆಯಲಿಲ್ಲ, ಆದರೆ, ವ್ಯತಿರಿಕ್ತವಾಗಿ ಅವರ ಅಂತಿಮ ವಾಸಿಯಾಗುವಿಕೆಯ ನಿರೀಕ್ಷೆಯಿಂದ ಸಂತೋಷಪಟ್ಟನು.”
“ಅಂತ್ರ,” ಯಾ “ಕರುಳು” ಇದರ ಗ್ರೀಕ್ ಪದವನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ತದ್ರೀತಿಯಲ್ಲಿ ಬಳಸಲಾಗಿದೆ. ಅ. ಕೃತ್ಯಗಳು 1:18 ರಲ್ಲಿ ಇರುವಂತೆ, ಅಕ್ಷರಶಃ ಬಳಸದಿರುವ ವಾತ್ಸಲ್ಯದ ಯಾ ಕನಿಕರಿಸುವ ಕೋಮಲ ಮನೋಭಾವಗಳನ್ನು ಅದು ಸೂಚಿಸುತ್ತದೆ. (ಫಿಲೆಮೋನ 12) ಈ ಪದವು ಕೆಲವೊಮ್ಮೆ “ಒಳ್ಳೇದು” ಯಾ “ಚೆನ್ನಾಗಿ” ಎಂದು ಅರ್ಥವಿರುವ ಗ್ರೀಕ್ ಪದದೊಂದಿಗೆ ಸೇರಿಕೊಂಡಿದೆ. ಕ್ರೈಸ್ತರು “ಕೋಮಲವಾಗಿ ಕನಿಕರಿಸುವವರು ಆಗಿರಬೇಕು,”—ಅಕ್ಷರಶಃ “ಕರುಣೆಗೆ ಅನುಕೂಲ ಮನೋಭಾವದವರು ಆಗಿರಬೇಕು”—ಎಂದು ಪ್ರೋತ್ಸಾಹಿಸುವಾಗ, ಅಪೊಸ್ತಲರಾದ ಪೌಲ, ಪೇತ್ರರು ಸಂಯುಕ್ತ ಅಭಿವ್ಯಕ್ತಿಯನ್ನು ಬಳಸಿದರು. (ಎಫೆಸ 4:32, NW; 1 ಪೇತ್ರ 3:8) “ಕರುಳು” ಗಾಗಿರುವ ಗ್ರೀಕ್ ಶಬ್ದವನ್ನು ಗ್ರೀಕ್ ಪದವಾದ ಪೋಲಿ’ ಇದರೊಂದಿಗೆ ಜೋಡಿಸಸಾಧ್ಯವಿದೆ. ಸಂಯೋಜನೆಯ ಅಕ್ಷರಶಃ ಅರ್ಥವು “ತುಂಬಾ ಕರುಳು ಇರುವುದು” ಆಗಿದೆ. ಈ ಅತಿ ಅಪೂರ್ವದ ಗ್ರೀಕ್ ಅಭಿವ್ಯಕ್ತಿಯು ಬೈಬಲಿನಲ್ಲಿ ಕೇವಲ ಒಮ್ಮೆ ಬಳಸಲ್ಪಟ್ಟಿದೆ, ಮತ್ತು ಅದು ಯೆಹೋವ ದೇವರನ್ನು ಸೂಚಿಸುತ್ತದೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಈ ಭಾಷಾಂತರವನ್ನು ಕೊಡುತ್ತದೆ: “ಯೆಹೋವನು ವಾತ್ಸಲ್ಯದಲ್ಲಿ ಅತಿ ಕೋಮಲನು ಆಗಿದ್ದಾನೆ.”—ಯಾಕೋಬ 5:11, NW.
ವಿಶ್ವದಲ್ಲಿ ಅತಿ ಬಲಾಢ್ಯನಾದ ಯೆಹೋವ ದೇವರು ಕನಿಕರವಿಲ್ಲದ ಮಾನವರಿಂದ ಅನ್ವೇಷಿಸಲ್ಪಟ್ಟ ಕ್ರೂರ ದೇವರುಗಳಿಂದ ಅಷ್ಟೊಂದು ಭಿನ್ನವಾಗಿರುವುದಕ್ಕಾಗಿ ನಾವು ಎಷ್ಟು ಆಭಾರಿಗಳಾಗಿರತಕ್ಕದ್ದು! ತಮ್ಮ “ಕೋಮಲವಾಗಿ ಕನಿಕರಿಸುವ” ದೇವರ ಅನುಕರಣೆಯಲ್ಲಿ ನಿಜ ಕ್ರೈಸ್ತರು ಒಬ್ಬರು ಇನ್ನೊಬ್ಬರೊಂದಿಗೆ ತಮ್ಮ ವ್ಯವಹಾರದಲ್ಲಿ ತದ್ರೀತಿಯಲ್ಲಿ ವರ್ತಿಸುವಂತೆ ಪ್ರೇರಿಸಲ್ಪಡುತ್ತಾರೆ.—ಎಫೆಸ 5:1, NW.
[ಪುಟ 10 ರಲ್ಲಿರುವ ಚಿತ್ರ]
ದಿವ್ಯ ಕನಿಕರವು ಅದರ ಪರಿಮಿತಿಯನ್ನು ಮುಟ್ಟಿದಾಗ, ತನ್ನ ಪಥಭ್ರಷ್ಟ ಜನರನ್ನು ಬಾಬೆಲಿನವರು ಜಯಿಸುವಂತೆ ಯೆಹೋವನು ಅನುಮತಿಸಿದನು
[ಪುಟ 11 ರಲ್ಲಿರುವ ಚಿತ್ರ]
ತನ್ನ ಪ್ರಿಯ ಪುತ್ರನು ಸಾಯುವುದನ್ನು ವೀಕ್ಷಿಸುವುದು ಯೆಹೋವನಿಗೆ ಯಾರೂ ಎಂದೂ ಅನುಭವಿಸಿರುವುದಕ್ಕಿಂತ ಅತಿ ಹೆಚ್ಚಿನ ವೇದನೆಯನ್ನು ಉಂಟುಮಾಡಿರಬೇಕು
[ಪುಟ 15 ರಲ್ಲಿರುವ ಚಿತ್ರ]
ಯೇಸುವು ತನ್ನ ತಂದೆಯ ಕನಿಕರಿಸುವ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು