ಕಾಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲು ಸಿದ್ಧರಿದ್ದೀರಾ?
1. ಲೋಕದಲ್ಲಿ ಬದಲಾವಣೆ ಆಗುತ್ತಿರುವುದರಿಂದ ನಾವು ಏನೆಲ್ಲ ಹೊಂದಾಣಿಕೆ ಮಾಡಿಕೊಳ್ಳಬೇಕು?
1 ಈ ಲೋಕದ ದೃಶ್ಯ ಮಾರ್ಪಡುತ್ತಾ ಇದೆ ಅಂತ ಒಂದನೇ ಕೊರಿಂಥ 7:31 ಹೇಳುತ್ತೆ. ರಂಗವೇದಿಕೆಯಲ್ಲಿ ದೃಶ್ಯಗಳು ನಟರು ಬದಲಾಗುತ್ತಾ ಹೋಗುವಂತೆ ಲೋಕದಲ್ಲೂ ಬದಲಾವಣೆಗಳು ನಿರಂತರ. ಹಾಗಾಗಿ ಬದಲಾವಣೆಗೆ ತಕ್ಕಂತೆ ನಾವು ಸಹ ಸಾರುವ ವಿಧಾನ, ಸಮಯ ಮತ್ತು ನಾವು ಜನರ ಹತ್ತಿರ ಮಾತಾಡುವ ವಿಷಯಗಳನ್ನು ಹೊಂದಿಸಿಕೊಳ್ಳಬೇಕಾಗುತ್ತೆ. ಹೊಂದಿಸಿಕೊಳ್ಳಲು ಸಿದ್ಧರಿದ್ದೀರಾ?
2. ಸಂಘಟನೆಯ ಜತೆ ಹೆಜ್ಜೆ ಇಡಲು ನಾವು ಹೊಂದಾಣಿಕೆ ಮಾಡಿಕೊಳ್ಳಬೇಕು ಏಕೆ?
2 ಸಾರುವ ವಿಧಾನ: ಕ್ರೈಸ್ತ ಸಭೆ ಆಗಾಗ್ಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಮೊದಮೊದಲು ಶಿಷ್ಯರನ್ನು ಸಾರಲು ಕಳುಹಿಸಿದಾಗ ಆಹಾರದ ಚೀಲವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿ ಅಂತ ಯೇಸುವಿನಿಂದ ಆದೇಶ ಸಿಕ್ಕಿತ್ತು. (ಮತ್ತಾ. 10:9, 10) ಆದರೆ ಶಿಷ್ಯರಿಗೆ ಎದುರಾಗಬಹುದಾದ ವಿರೋಧವನ್ನು ಮನಸ್ಸಿನಲ್ಲಿಟ್ಟು ಮತ್ತು ಬೇರೆ ಬೇರೆ ಸೇವಾಕ್ಷೇತ್ರದಲ್ಲಿ ಸಾರುವ ದೃಷ್ಟಿಯಿಂದ ಆ ಆದೇಶದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಲಾಯಿತು. (ಲೂಕ 22:36) ಯೆಹೋವ ದೇವರ ಸಂಘಟನೆಯಲ್ಲಿ ದಶಕಗಳ ಹಿಂದೆ ಕೂಡ ಸಾರುವ ವಿಭಿನ್ನ ವಿಧಾನಗಳನ್ನು ಬಳಸಲಾಯಿತು. ಆ ಕಾಲಕ್ಕೆ ತಕ್ಕಂತೆ ಟೆಸ್ಟಿಮನಿ ಕಾರ್ಡ್ಸ್, ರೇಡಿಯೋ ಬ್ರಾಡ್ಕಾಸ್ಟ್ ಮತ್ತು ಸೌಂಡ್ ಕಾರ್ಸ್ ಅನ್ನೋ ವಿಧಾನಗಳನ್ನು ಬಳಸಲಾಯಿತು. ಈಗಿನ ಕಾಲದಲ್ಲಿ ಜನರು ಹೆಚ್ಚಾಗಿ ಮನೆಯಲ್ಲಿ ಸಿಗದ ಕಾರಣ ಮನೆಮನೆ ಸೇವೆ ಜೊತೆಗೆ ಸಾರ್ವಜನಿಕ ಮತ್ತು ಅನೌಪಚಾರಿಕ ಸಾಕ್ಷಿಕಾರ್ಯಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಅಲ್ಲದೆ ಕೆಲಸಕ್ಕೆ ಹೋಗುವ ಜನರು ಯಾವಾಗ ಮನೆಯಲ್ಲಿರುತ್ತಾರೋ ಆಗ ಅಂದರೆ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮನೆಮನೆ ಸೇವೆ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಯೆಹೋವ ದೇವರ ದಿವ್ಯ ರಥ ಹೊಂದಿಸಿಕೊಳ್ಳುತ್ತಾ ಹೋಗುವಾಗ ನೀವೂ ಅದೇ ವೇಗದಲ್ಲಿ ಸಾಗುತ್ತಿದ್ದೀರಾ?—ಯೆಹೆ. 1:20, 21.
3. ಹೊಂದಾಣಿಕೆ ಮಾಡಿಕೊಳ್ಳೋದಾದರೆ ಹೆಚ್ಚು ಪರಿಣಾಮಕಾರಿಯಾಗಿ ಸಾರಬಹುದು ಹೇಗೆ?
3 ನಿರೂಪಣೆ: ಈಗ ಸದ್ಯಕ್ಕೆ ನಿಮ್ಮ ಸುತ್ತಮುತ್ತಲಿರುವ ಜನರು ಯಾವುದರ ಬಗ್ಗೆ ಚಿಂತಿತರಾಗಿದ್ದಾರೆ? ಹಣಕಾಸು? ಕುಟುಂಬ? ದುಷ್ಕೃತ್ಯ? ನಮ್ಮ ಸೇವಾಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಯಲ್ಲಿರುವ ಸಮಸ್ಯೆ/ವಿಷಯಗಳನ್ನು ತಿಳಿದುಕೊಂಡಿರುವಲ್ಲಿ ಅದಕ್ಕೆ ತಕ್ಕಂತೆ ನಮ್ಮ ನಿರೂಪಣೆಯನ್ನು ಸಿದ್ಧಪಡಿಸಲು ನೆರವಾಗುತ್ತೆ. (1 ಕೊರಿಂ. 9:20-23) ಮನೆಯವರು ಬೇರೊಂದು ವಿಷಯದ ಬಗ್ಗೆ ಮಾತಾಡುವಲ್ಲಿ ನಾವು ಸಿದ್ಧಪಡಿಸಿರುವ ನಿರೂಪಣೆಯನ್ನೇ ಮುಂದುವರಿಸುವ ಬದಲು ನಮ್ಮ ನಿರೂಪಣೆಯನ್ನು ಸ್ವಲ್ಪ ಹೊಂದಿಸಿಕೊಂಡು ಅವರಿಗೆ ಆಸಕ್ತಿಕರವಾಗಿರುವ ವಿಷಯದ ಬಗ್ಗೆ ಸಂಭಾಷಣೆಯನ್ನು ಮುಂದುವರಿಸುವುದು ಒಳ್ಳೇದು.
4. ಹೊಂದಾಣಿಕೆ ಮಾಡಿಕೊಳ್ಳುವ ವಿಷಯದಲ್ಲಿ ನಾವು ಚುರುಕಾಗಿರಬೇಕು ಯಾಕೆ?
4 ಬೇಗನೆ ಈ ಲೋಕದ “ದೃಶ್ಯ” ಮುಕ್ತಾಯವಾಗಿ ಮಹಾ ಸಂಕಟ ಆರಂಭವಾಗಲಿದೆ. “ಉಳಿದಿರುವ ಸಮಯವು ಕೊಂಚ.” (1 ಕೊರಿಂ. 7:29) ಈ ಕೊಂಚ ಕಾಲಾವಕಾಶದಲ್ಲಿ ಬಹಳಷ್ಟನ್ನು ಸಾಧಿಸಬೇಕಾಗಿದೆ. ಹಾಗಾಗಿ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯವಿದ್ದಲ್ಲಿ ತಡಮಾಡದೆ ಹೊಂದಾಣಿಕೆ ಮಾಡಿಕೊಳ್ಳೋದು ಬಲು ಪ್ರಾಮುಖ್ಯ.