-
“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!
-
-
1, 2. (ಎ) ಕ್ರಿ.ಶ. 29 ರಲ್ಲಿ ಯೇಸು ಯೂದಾಯದ ಬರಡು ಪ್ರದೇಶಕ್ಕೆ ಹೇಗೆ ಬಂದನು? (ಬಿ) ಅಲ್ಲಿ ಏನಾಯ್ತು? (ಆರಂಭದ ಚಿತ್ರ ನೋಡಿ.)
ಕ್ರಿಸ್ತ ಶಕ 29 ರ ಶರತ್ಕಾಲ (ಅಕ್ಟೋಬರ್-ನವೆಂಬರ್). ಈಗಾಗ್ಲೇ ಯೇಸುವಿನ ದೀಕ್ಷಾಸ್ನಾನ ಮತ್ತು ಅಭಿಷೇಕ ಆಗಿತ್ತು. ಪವಿತ್ರ ಶಕ್ತಿಯ ಪ್ರೇರಣೆಯಿಂದ ಆತನು ಯೂದಾಯದ ಬರಡು ಪ್ರದೇಶಕ್ಕೆ ಹೋಗಿದ್ದನು. ಅದು ಮೃತ ಸಮುದ್ರದ ಉತ್ತರ ದಿಕ್ಕಿನಲ್ಲಿ ಇತ್ತು. ವಿಸ್ತಾರವಾದ ಈ ಬಂಜರು ಭೂಮಿ ಬಂಡೆ ಮತ್ತು ಕಣಿವೆಗಳಿಂದ ಕೂಡಿತ್ತು. ಇಲ್ಲಿ ಯೇಸು ನಲ್ವತ್ತು ದಿನಗಳನ್ನ ಕಳೆದನು. ಈ ನಿಶ್ಶಬ್ದ ವಾತಾವರಣದಲ್ಲಿ ಯೇಸು ಉಪವಾಸ, ಪ್ರಾರ್ಥನೆ ಮಾಡ್ತಾ ಧ್ಯಾನಿಸುತ್ತಿದ್ದನು. ಬಹುಶಃ ಈ ಸಮಯದಲ್ಲಿ ಯೆಹೋವನು ಯೇಸು ಜೊತೆ ಮಾತಾಡುತ್ತಿದ್ದನು. ಹೀಗೆ ಮುಂದೆ ಆತನು ನಿರ್ವಹಿಸಬೇಕಾಗಿರೋ ಜವಾಬ್ದಾರಿಗಾಗಿ ಯೆಹೋವನು ಆತನನ್ನ ಸಿದ್ಧಮಾಡಿದನು.
-
-
“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!
-
-
3, 4. (ಎ) ಸೈತಾನ ಮೊದಲ ಎರಡು ಪರೀಕ್ಷೆಯ ಆರಂಭದಲ್ಲಿ ಏನು ಹೇಳ್ದ? (ಬಿ) ಹೀಗೆ ಹೇಳೋ ಮೂಲಕ ಅವನು ಯೇಸುವಿನ ಮನಸ್ಸಿನಲ್ಲಿ ಯಾವ ಸಂಶಯದ ಬೀಜವನ್ನು ಬಿತ್ತೋಕೆ ಪ್ರಯತ್ನಿಸಿದ? (ಸಿ) ಈ ರೀತಿಯ ಕುತಂತ್ರಗಳನ್ನ ಸೈತಾನ ಇವತ್ತೂ ಬಳಸುತ್ತಿದ್ದಾನಾ?
3 ಮತ್ತಾಯ 4:1-7 ಓದಿ. ಸೈತಾನನು ಮೊದಲ ಎರಡು ಪರೀಕ್ಷೆಗಳನ್ನು ತಂದಾಗ ಕುತಂತ್ರದಿಂದ ಆರಂಭದಲ್ಲಿ “ನೀನು ದೇವರ ಮಗನಾಗಿದ್ರೆ” ಅಂತ ಹೇಳಿದನು. ಅಂದ್ರೆ ಯೇಸು ನಿಜವಾಗಿಯೂ ದೇವರ ಮಗನಾ ಅನ್ನೋ ಸಂಶಯ ಸೈತಾನನಿಗಿತ್ತಾ? ಇಲ್ಲ. ದೇವರ ವಿರುದ್ಧ ದಂಗೆ ಎದ್ದ ಈ ದೇವದೂತನಿಗೆ ಯೇಸು ಕ್ರಿಸ್ತನು ದೇವರ ಮೊದಲನೇ ಮಗ ಅಂತ ಚೆನ್ನಾಗಿ ಗೊತ್ತಿತ್ತು. (ಕೊಲೊ. 1:15) ಅಷ್ಟೇ ಅಲ್ಲ, ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಸ್ವರ್ಗದಿಂದ ಯೆಹೋವ ದೇವರು ಹೇಳಿದ ಈ ಮಾತುಗಳ ಬಗ್ಗೆನೂ ಅವನಿಗೆ ಗೊತ್ತಿತ್ತು: “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.” (ಮತ್ತಾ. 3:17) ‘ತಂದೆ ಮೇಲೆ ಭರವಸೆ ಇಡಬಹುದಾ ಮತ್ತು ಆತನು ನಿಜವಾಗಿಯೂ ನನ್ನ ಕಾಳಜಿವಹಿಸ್ತಾನಾ’ ಅನ್ನೋ ಸಂಶಯವನ್ನ ಯೇಸುವಿನ ಮನಸ್ಸಲ್ಲಿ ತರೋದೇ ಸೈತಾನನ ಉದ್ದೇಶ ಆಗಿರಬೇಕು. ಉದಾಹರಣೆಗೆ, ಮೊದಲನೇ ಪರೀಕ್ಷೆಯಲ್ಲಿ ಸೈತಾನನು ಕಲ್ಲುಗಳನ್ನ ರೊಟ್ಟಿಗಳನ್ನಾಗಿ ಮಾಡೋಕೆ ಹೇಳಿದಾಗ ಒಂದರ್ಥದಲ್ಲಿ ಈ ರೀತಿ ಹೇಳಿದನು: ‘ನೀನು ದೇವರ ಮಗನಲ್ವಾ? ಹಾಗಿದ್ರೆ ಈ ಬರಡು ಭೂಮಿಯಲ್ಲಿ ದೇವರು ನಿನಗೆ ಯಾಕೆ ಊಟ ಕೊಟ್ಟಿಲ್ಲ?’ ಎರಡನೇ ಪರೀಕ್ಷೆಯಲ್ಲಿ ದೇವಾಲಯದ ಗೋಡೆಯಿಂದ ಹಾರೋಕೆ ಹೇಳಿದಾಗ ಸೈತಾನ ಒಂದರ್ಥದಲ್ಲಿ ಈ ರೀತಿ ಹೇಳಿದನು: ‘ನೀನು ದೇವರ ಮಗನಲ್ವಾ? ನಿನ್ನ ತಂದೆ ನಿಜವಾಗ್ಲೂ ನಿನ್ನನ್ನ ಕಾಪಾಡ್ತಾನೆ ಅನ್ನೋ ಭರವಸೆ ಇದ್ಯಾ?’
-