ಪತಿಯಾಗಿದ್ದು ಪ್ರೀತಿ ಮತ್ತು ಗೌರವವನ್ನು ತೋರಿಸುವುದು
“ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನು ಪ್ರೀತಿಸಬೇಕು.”—ಎಫೆಸ್ಯ 5:33.
1, 2. (ಎ) ಇಂದು ಲೋಕದಲ್ಲಿ ವಿವಾಹ ವಿಚ್ಛೇದವು ಎಷ್ಟು ವ್ಯಾಪಕವಾದ ಸಮಸ್ಯೆಯಾಗಿದೆ? (ಬಿ) ಇದಕ್ಕೆ ವ್ಯತಿರಿಕ್ತವಾಗಿ ಇನ್ನಾವ ಪರಿಸ್ಥಿತಿಯಿದೆ?
1980 ಗಳ ಮಧ್ಯಭಾಗದಲ್ಲಿ ಸೈಕಾಲಜಿ ಟುಡೇ ಪತ್ರಿಕೆ ವರದಿ ಮಾಡಿತು: “[ಅಮೇರಿಕದಲ್ಲಿ] ವರ್ಷಕ್ಕೆ 10 ಲಕ್ಷಕ್ಕೂ ಹೆಚ್ಚು ದಂಪತಿಗಳು ತಮ್ಮ ಪರಮ ಸುಖದ ನಿರೀಕ್ಷೆಯನ್ನು ಈಗ ವಿವಾಹವಿಚ್ಛೇದದಲ್ಲಿ ಮುಕ್ತಾಯಗೊಳಿಸುತ್ತಾರೆ. ಅಮೇರಿಕದಲ್ಲಿ ವಿವಾಹಗಳ ಬಾಳಿಕೆ ಸರಾಸರಿ 9:4 ವರ್ಷಗಳು. . . . ಹೌದು. ಹಲವು ವೇಳೆ, ಅಲ್ಲಿ ಯಾರೂ ಸಂತುಷ್ಟ ವಿವಾಹಿತರೇ ಇಲ್ಲವೆಂದು ಕಾಣುತ್ತದೆ.” (ಜೂನ್ 1985) ವಯಸ್ಕರನ್ನೂ ಮಕ್ಕಳನ್ನೂ ಲೆಕ್ಕಿಸುವಲ್ಲಿ, ಒಂದೇ ದೇಶದಲ್ಲಿ ವರ್ಷಕ್ಕೆ 30 ಲಕ್ಷ ಜನರು ಶಿಥಿಲಗೊಂಡ ವಿವಾಹದಿಂದ ಬಾಧಿಸಲ್ಪಡುತ್ತಾರೆ. ಆದರೆ ವಿವಾಹ ವಿಚ್ಛೇದವು ಲೋಕವ್ಯಾಪಕವಾದ ಸಮಸ್ಯೆ. ಇದು ಪ್ರೀತಿ ಮತ್ತು ಗೌರವವು ಕೋಟ್ಯಾಂತರ ವಿವಾಹಗಳಲ್ಲಿಲ್ಲವೆಂದು ಸೂಚಿಸುತ್ತದೆ.
2 ಇದಕ್ಕೆ ವ್ಯತಿರಿಕ್ತವಾಗಿ, “ಅಲಕ್ಷ ಮಾಡಲ್ಪಡುವ ಇನ್ನೊಂದು ಗುಂಪಿದೆ: ಹೇಗಾದರೂ ಮಾಡಿ ಸಹವಸಿಸುವ, ಮರಣವಿಲ್ಲದೆ ಇನ್ನಾವುದೂ ಅವರನ್ನು ಮುರಿಯುವಂತೆ ಬಿಡದ ದಂಪತಿಗಳೇ ಇವರು.” (ಸೈಕಾಲಜಿ ಟುಡೇ) ಹೀಗೆ, ತಮ್ಮ ವಿವಾಹವನ್ನು ಸುರಕ್ಷಿತವಾಗಿ ಇಡಲು ಶ್ರಮಪಡುವ ಲಕ್ಷಾಂತರ ದಂಪತಿಗಳೂ ಇದ್ದಾರೆ.
3. ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?
3 ನಿಮ್ಮ ವಿವಾಹ ಹೇಗಿದೆ? ಪತಿ, ಪತ್ನಿಯರ ಮಧ್ಯೆ ಪ್ರೇಮ ಮತ್ತು ಗೌರವದ ಸುಖೋಷ್ಣವಿದೆಯೇ? ಹೆತ್ತವರ ಮತ್ತು ಮಕ್ಕಳ ಮಧ್ಯೆ ನಿಮ್ಮ ಕುಟುಂಬದಲ್ಲಿ ಇಂಥ ಪ್ರೀತಿ ಇದೆಯೋ? ಅಥವಾ, ಕೆಲವು ಸಲ ನೀವು ಅಸಮಾಧಾನ ಮತ್ತು ಸಂದೇಹದ ಬಿಗಿಹಗ್ಗದ ಮೇಲೆ ನಡೆದಾಡುವಂತೆ ಕಾಣುತ್ತದೋ? ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲದ ಕಾರಣ, ಯಾವ ಕುಟುಂಬದಲ್ಲಿಯೂ, ಎಲ್ಲರೂ ಕ್ರೈಸ್ತರಾಗಿರಲು ಪ್ರಯತ್ನಿಸುವ ಕುಟುಂಬಗಳಲ್ಲಿಯೂ ಕಷ್ಟಕರವಾದ ಸನ್ನಿವೇಶಗಳು ಎದ್ದು ಬರ ಸಾಧ್ಯವಿದೆ. ಏಕೆಂದರೆ, “ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
4. ಒಂದು ಸಂತುಷ್ಟ ಕುಟುಂಬದಲ್ಲಿ ಮುಖ್ಯ ಪಾತ್ರ ಯಾರದ್ದೆಂದು ಪೌಲ ಮತ್ತು ಪೇತ್ರ ಹೇಗೆ ಸೂಚಿಸುತ್ತಾರೆ?
4 ಕ್ಲೇಶಗಳು ಯಾವ ಕುಟುಂಬದಲ್ಲಿಯೂ ಬರಸಾಧ್ಯವಿರುವುದರಿಂದ ಕುಟುಂಬವನ್ನು ಶಾಂತಿಪೂರ್ಣವಾದ, ಐಕ್ಯ ಪಥದಲ್ಲಿ ಇಡುವ ಮುಖ್ಯ ಪಾತ್ರ ಯಾರಿಗಿದೆ? ಅಪೊಸ್ತಲರಾದ ಪೇತ್ರ ಮತ್ತು ಪೌಲರು ತಮ್ಮ ಪತ್ರಿಕೆಗಳಲ್ಲಿ ಕೊಡುವ ನೇರವಾದ ಸಲಹೆಗಳಲ್ಲಿ ಇದಕ್ಕೆ ಉತ್ತರವು ಅಡಕವಾಗಿದೆ. ಪೌಲನು ಬರೆದನು: “ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” ಅವನು ಇನ್ನೂ ಹೇಳಿದ್ದು: “ಕ್ರಿಸ್ತನ ಭಯದಲ್ಲಿ ಒಬ್ಬರಿಗೊಬ್ಬರು ಅಧೀನರಾಗಿರಿ. ಹೆಂಡತಿಯರು ಕರ್ತನಿಗೆ ಹೇಗೆಯೋ ಹಾಗೆಯೇ ತಮ್ಮ ಗಂಡಂದಿರಿಗೆ ಅಧೀನರಾಗಿರಲಿ. ಏಕೆಂದರೆ ಕ್ರಿಸ್ತನು ಹೇಗೆ ಸಭೆಗೆ ಶಿರಸ್ಸಾಗಿದ್ದಾನೋ ಹಾಗೆಯೇ ಗಂಡನು ತನ್ನ ಹೆಂಡತಿಯ ಶಿರಸ್ಸು.” (1 ಕೊರಿಂಥ 11:3; ಎಫೆಸ್ಯ 5:21-23) ಇದೇ ಧಾಟಿಯಲ್ಲಿ ಪೇತ್ರನು ಬರೆದುದು: “ಅದೇ ರೀತಿಯಾಗಿ [ಕ್ರಿಸ್ತನ ಮಾದರಿಯಂತೆ] ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.”—1 ಪೇತ್ರ 2:21-3:1.
ಕ್ರಿಸ್ತನು—ಚೈತನ್ಯದಾಯಕ ಮಾದರಿ
5, 6. ಶಿರಸ್ಸುತನವನ್ನು ವಹಿಸುವುದರಲ್ಲಿ ಯೇಸು ಕ್ರಿಸ್ತನು ಹೇಗೆ ಮಾದರಿಯಾಗಿದ್ದಾನೆ?
5 ಈ ಮೇಲಿನ ಸಲಹೆಗಳಿಗನುಸಾರವಾಗಿ, ಕುಟುಂಬದ ಶಾಸ್ತ್ರಾಧಾರವುಳ್ಳ ಶಿರಸ್ಸು ಗಂಡನೇ, ಆದರೆ ಇವನು ಶಿರಸ್ಸಾಗಿರುವುದು ಯಾವ ಅರ್ಥದಲ್ಲಿ? ಈ ಶಿರಸ್ಸುತನವನ್ನು ಹೇಗೆ ನಿರ್ವಹಿಸಬೇಕು? ಕೆಲವು ಗಂಡಂದಿರು, ‘ತಾವೇ ಮನೆಯ ಯಜಮಾನರು ಮತ್ತು ಬೈಬಲು ಹಾಗೆನ್ನುತ್ತದೆ’ ಎಂದು ಪಟ್ಟುಹಿಡಿದು ಹೇಳುತ್ತಾ ಗೌರವವನ್ನು ಕೇಳಿಕೊಳ್ಳುವುದು ಸುಲಭವೆಂದು ಎಣಿಸಬಹುದು. ಅದರೆ ಇದು ಕ್ರಿಸ್ತನ ಮಾದರಿಗೆ ಹೇಗೆ ಸರಿಬೀಳುತ್ತದೆ? ಕ್ರಿಸ್ತನು ಜಂಭದಿಂದ ತನ್ನ ಹಿಂಬಾಲಕರ ಗೌರವವನ್ನು ಕೇಳಿಕೊಂಡನೋ? ಅವನು ಅಹಂಕಾರದಿಂದ, “ಇಲ್ಲಿ ದೇವಕುಮಾರನು ಯಾರೆಂದು ನೆನಸುತ್ತೀರಿ? ನೀವು ನನ್ನನ್ನು ಗೌರವಿಸಲೇ ಬೇಕು!” ಎಂದು ಹೇಳಿದ ಯಾವುದೇ ಸಂದರ್ಭವನ್ನು ನಾವು ಕಾಣುತ್ತೇವೂ? ಇದಕ್ಕೆ ಬದಲಾಗಿ ಯೇಸು ಗೌರವವನ್ನು ಗಳಿಸಿದನು. ಹೇಗೆ? ವರ್ತನೆ, ಮಾತು ಮತ್ತು ಇತರರನ್ನು ಕನಿಕರದಿಂದ ಆದರಿಸುವುದರಲ್ಲಿ ಉತ್ತಮ ಮಾದರಿಯನ್ನು ಇಟ್ಟೇ.—ಮಾರ್ಕ 6:30-34.
6 ಹೀಗೆ, ಶಿರಸ್ಸುತನವನ್ನು ಪತಿ ಮತ್ತು ತಂದೆಯಾಗಿ ಯೋಗ್ಯ ರೀತಿಯಲ್ಲಿ ನಿರ್ವಹಿಸುವುದಕ್ಕಿಂತ ಕೀಲಿಕೈಯು ಯೇಸುಕ್ರಿಸ್ತನ ಮಾದರಿಯನ್ನು ಅನುಸರಿಸುವುದೇ. ಯೇಸುವಿಗೆ ವಿವಾಹವಾಗಿರಲಿಲ್ಲವೆಂಬುದು ನಿಜ. ಆದರೆ ಅವನು ತನ್ನ ಶಿಷ್ಯರೊಂದಿಗೆ ವರ್ತಿಸಿದ ವಿಧವೇ ಗಂಡಂದಿರಿಗೆ ಆದರ್ಶವಾಗಿದೆ. ಇದು ಯಾವ ಪತಿಗೂ ಪಂಥಾಹ್ವಾನ ನೀಡುವುದು ನಿಶ್ಚಯ, ಏಕೆಂದರೆ ಯೇಸು ಪರಿಪೂರ್ಣನಾದ ಆದರ್ಶನಾಗಿದ್ದಾನೆ. (ಇಬ್ರಿಯ 4:15; 12:1-3) ಆದರೂ ಒಬ್ಬ ಪತಿಯು ಕ್ರಿಸ್ತನ ಮಾದರಿಗೆ ಎಷ್ಟು ಸಮೀಪವಾಗಿರುತ್ತಾನೋ ಅವನಿಗೆ ಅಷ್ಟು ಆಳವಾದ ಪ್ರೀತಿ ಮತ್ತು ಗೌರವಗಳು ತೋರಿಸಲ್ಪಡುವವು. ಆದುದರಿಂದ, ಕ್ರಿಸ್ತನು ಯಾವ ವಿಧದ ವ್ಯಕ್ತಿಯಾಗಿದ್ದನೆಂದು ನಾವು ಹೆಚ್ಚು ಸೂಕ್ಷ್ಮವಾಗಿ ಪರೀಕ್ಷಿಸೋಣ.—ಎಫೆಸ್ಯ 5:25-29; 1 ಪೇತ್ರ 2:21,22.
7. ಯೇಸು ತನ್ನ ಹಿಂಬಾಲಕರಿಗೆ ಏನು ನೀಡಿದನು ಮತ್ತು ಯಾವ ಮೂಲದಿಂದ?
7 ಒಂದು ಸಂದರ್ಭದಲ್ಲಿ ಜನರ ಗುಂಪಿಗೆ ಯೇಸು ಹೇಳಿದ್ದು: ಎಲೈಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” ಯೇಸು ತನ್ನನ್ನು ಆಲಿಸಿದವರಿಗೆ ಏನು ನೀಡಿದನು? ಆತ್ಮಿಕ ವಿಶ್ರಾಂತಿಯನ್ನೇ! ಆದರೆ ಈ ವಿಶ್ರಾಂತಿ ಯಾವ ಮೂಲದಿಂದ ಬರಲಿಕ್ಕಿತ್ತು? ಅವನು ಆಗಲೇ ಹೀಗೆ ಹೇಳಿದ್ದನು: “ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ.” ಇದು, ತನ್ನ ತಂದೆಯನ್ನು ತನ್ನ ನಿಜ ಹಿಂಬಾಲಕರಿಗೆ ಪ್ರಕಟ ಪಡಿಸುವದರ ಮೂಲಕ ಯೇಸು ಆತ್ಮಿಕ ವಿಶ್ರಾಂತಿಯನ್ನು ನೀಡುವವನೆಂದು ತೋರಿಸಿತು. ಮಾತ್ರವಲ್ಲ, ಯೇಸು “ಸಾತ್ವಿಕನೂ ದೀನ ಮನಸ್ಸುಳ್ಳವನೂ” ಆಗಿದ್ದುದರಿಂದ ಅವನೊಡನೆ ಶಿಷ್ಯರು ಮಾಡುವ ಒಡನಾಟವೂ ಅವರಿಗೆ ವಿಶ್ರಾಂತಿ ತರುವುದೆಂದು ಯೇಸುವಿನ ಮಾತುಗಳು ತಿಳಿಸಿದವು.—ಮತ್ತಾಯ 11:25-30
ಚೈತನ್ಯದಾಯಕ ಪತಿಗಳೂ ತಂದೆಗಳೂ ಆಗುವ ವಿಧ
8. ಪತಿ ಮತ್ತು ತಂದೆಯಾಗಿರುವವನು ಯಾವ ವಿಧಗಳಲ್ಲಿ ಚೈತನ್ಯ ನೀಡಬೇಕು?
8 ಕ್ರೈಸ್ತ ಪತಿಯು ಆತ್ಮಿಕ ಹಾಗೂ ವೈಯಕ್ತಿಕ ವಿಧದಲ್ಲಿ ತನ್ನ ಕುಟುಂಬಕ್ಕೆ ಚೈತನ್ಯ ತರುವವನಾಗಬೇಕೆಂದು ನಾವು ತಿಳಿಯುವಂತೆ ಯೇಸುವಿನ ಮಾತುಗಳು ಸಹಾಯ ಮಾಡುತ್ತವೆ. ಗಂಡನು ತನ್ನ ಮೆತ್ತನೆಯ ಸ್ವಭಾವದ ಮಾದರಿ ಮತ್ತು ಉಪದೇಶದಿಂದ, ಸ್ವರ್ಗೀಯ ಪಿತನನ್ನು ತನ್ನ ಕುಟುಂಬವು ಹೆಚ್ಚು ಪರಿಚಯಿಸಿಕೊಳ್ಳುವಂತೆ ಸಹಾಯ ಮಾಡಬೇಕು. ಅವನ ವರ್ತನೆ ದೇವಕುಮಾರನ ಮನ ಮತ್ತು ವರ್ತನೆಯನ್ನು ಪ್ರತಿಬಿಂಬಿಸಬೇಕು. (ಯೋಹಾನ 15:8-10; 1 ಕೊರಿಂಥ 2:16) ಇಂಥ ಪುರುಷನೊಂದಿಗೆ ಸಹವಸಿಸುವದು ಇಡೀ ಕುಟುಂಬಕ್ಕೆ ಚೈತನ್ಯದಾಯಕ, ಏಕೆಂದರೆ ಅವನು ಪ್ರೀತಿಸುವ ಪತಿ, ಪಿತ ಮತ್ತು ಮಿತ್ರನಾಗಿದ್ದಾನೆ. ಅವನು ಸಮೀಪಿಸಲು ಸುಲಭನಾಗಿರತಕ್ಕದ್ದು ಮತ್ತು ಸಲಹೆಗೆ ಬಿಡುವಿಲ್ಲದಿರುವಷ್ಟು ಕಾರ್ಯಮಗ್ನನಾಗಿರಲೇಬಾರದು. ಅವನು ಕೇಳಲು ಮಾತ್ರವಲ್ಲ, ಕಿವಿಗೊಟ್ಟು ಕೇಳಲು ತಿಳಿದವನಾಗಿತಕ್ಕದ್ದು.—ಯಾಕೋಬ 1:19.
9. ಕೆಲವು ಸಲ ಸಭೆಯಲ್ಲಿ ಹಿರಿಯರನ್ನು ಯಾವ ಸಮಸ್ಯೆ ಬಾಧಿಸುತ್ತದೆ?
9 ಇದು, ಸಭಾ ಹಿರಿಯರನ್ನೂ ಅವರ ಕುಟುಂಬಗಳನ್ನೂ ಕೆಲವು ಸಲ ಬಾಧಿಸುವ ಒಂದು ಸಮಸ್ಯೆಯನ್ನು ಜ್ಞಾಪಕಕ್ಕೆ ತರುತ್ತದೆ. ಸಾಮಾನ್ಯವಾಗಿ ಒಬ್ಬ ಹಿರಿಯನು ಸಭೆಯ ಆತ್ಮಿಕ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಕೆಲಸಮಗ್ನನಾಗಿರುತ್ತಾನೆ. ಕ್ರೈಸ್ತ ಕೂಟ, ಶುಶ್ರೂಷೆ ಮತ್ತು ಪಾಲಿಸುವ ಕೆಲಸದಲ್ಲಿ ಅವನು ಉತ್ತಮ ಮಾದರಿಯನ್ನೀಡಬೇಕಾಗುತ್ತದೆ. (ಇಬ್ರಿಯ 13:7,17) ಆದರೂ ಕೆಲವು ಹಿರಿಯರು ಕಾರ್ಯತಃ ಸಭೆಗಾಗಿ ತಮ್ಮನ್ನು ದುಂದುವ್ಯಯ ಮಾಡಿರುವುದೂ ಉಂಟು. ಹೀಗೆ ಮಾಡುವಾಗ ಅವರು ತಮ್ಮ ಕುಟುಂಬಗಳನ್ನು ಅಸಡ್ಡೆ ಮಾಡಿ, ಹಲವು ಸಲ ಸಂಕಟಕರವಾದ ಪರಿಣಾಮವನ್ನು ತಂದುಕೊಂಡಿದ್ದಾರೆ. ಒಬ್ಬ ಹಿರಿಯನಿಗೆ ತನ್ನ ಮಗನೊಂದಿಗೆ ಅಧ್ಯಯನ ಮಾಡಲೂ ಸಮಯವಿರಲಿಲ್ಲ. ಇನ್ನೊಬ್ಬನು ಅವನೊಂದಿಗೆ ಅಧ್ಯಯನ ಮಾಡುವಂತೆ ಏರ್ಪಡಿಸಲಾಯಿತು.
10. ಹಿರಿಯರು ಸಭೆ ಮತ್ತು ಮನೆಯಲ್ಲಿ ಶಿರಸ್ಸುತನವನ್ನು ವಹಿಸುವುದರಲ್ಲಿ ಹೇಗೆ ಸಮತೆಯಿಂದಿರಬಲ್ಲರು?
10 ಈ ಮಾದರಿ ಯಾವುದನ್ನು ಒತ್ತಿ ಹೇಳುತ್ತದೆ? ಸಭಾ ಕರ್ತವ್ಯ ಮತ್ತು ಪತ್ನಿ ಮತ್ತು ಕುಟುಂಬದ ಕಡೆಗಿರುವ ಕರ್ತವ್ಯಗಳ ಮಧ್ಯೆ ಒಬ್ಬ ಪುರುಷನು ಸಮತೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆಯನ್ನೇ. ಉದಾಹರಣೆಗೆ, ಕೂಟಗಳಾದ ನಂತರ ಅನೇಕ ವೇಳೆ ಹಿರಿಯರು ಸಮಸ್ಯೆ ಮತ್ತು ಚರ್ಚೆಗಳಲ್ಲಿ ಮಗ್ನರಾಗುತ್ತಾರೆ. ಸಾಧ್ಯವಿರುವಲ್ಲಿ ಮತ್ತು ಪ್ರಾಯೋಗಿಕವಾಗಿರುವಲ್ಲಿ, ತನ್ನ ಹೆಂಡತಿ ಮತ್ತು ಮಕ್ಕಳು ತಾಸುಗಟ್ಟಲೆ ಕಿಂಗ್ಡಮ್ ಹಾಲ್ನಲ್ಲಿ ಕಾದು ನಿಲ್ಲುವ ಬದಲು ಇನ್ನಾದರೂ ಅವರನ್ನು ಮನೆಗೊಯ್ಯುವಂತೆ ಹಿರಿಯನು ಏರ್ಪಡಿಸುವುದು ಚೈತನ್ಯದಾಯಕವಾಗಿರಲಿಕ್ಕಿಲ್ಲವೇ? ಬೈಬಲಿನ ಆವಶ್ಯಕತೆಗಳಿಗನುಸಾರವಾಗಿ, ‘ಪಾಲನೆ ಮನೆಯಿಂದ ಪ್ರಾರಂಭವಾಗುತ್ತದೆ’ ಎಂದು ಹೇಳಸಾಧ್ಯವಿದೆ. ಹಿರಿಯನು ತನ್ನ ಕುಟುಂಬವನ್ನು ಅಲಕ್ಷಿಸುವಲ್ಲಿ ತನ್ನ ನೇಮಕವನ್ನೂ ಅಪಾಯಕ್ಕೊಳಪಡಿಸಸಾಧ್ಯವಿದೆ. ಆದುದರಿಂದ, ಹಿರಿಯರೇ, ಚಿಂತಿಸುವವರಾಗಿದ್ದು ನಿಮ್ಮ ಕುಟುಂಬದ ಭಾವೂದ್ರೇಕ ಸಂಬಂಧವಾದ, ಅತ್ಮಿಕ ಮತ್ತು ಇತರ ಅವಶ್ಯಕತೆಗಳನ್ನು ಲೆಕ್ಕಕ್ಕೆ ತಕ್ಕೊಳ್ಳಿರಿ.—1 ತಿಮೊಥಿ 3:4,5; ತೀತ 1:5,6.
11, 12. ಕ್ರೈಸ್ತ ಪತಿಯು ತನ್ನ ಕುಟುಂಬದ ಬೆಂಬಲವನ್ನು ಹೇಗೆ ಪಡೆಯಬಲ್ಲನು, ಮತ್ತು ಗಂಡನು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?
11 ಚೈತನ್ಯದಾಯಕವಾದ ಕ್ರೈಸ್ತ ಪತಿಯು ತನ್ನ ಕುಟುಂಬವನ್ನು ವಿಚಾರಿಸದೆ ನಿರ್ಣಯಗಳನ್ನು ಮಾಡುತ್ತಾ ಕ್ರೂರತೆ ಅಥವಾ ದಬ್ಬಾಳಿಕೆಯನ್ನು ತೋರಿಸನು. ಉದ್ಯೋಗ ಅಥವಾ ಮನೆ ಬದಲಾಯಿಸುವಿಕೆ ಅಥವಾ ಕುಟುಂಬ ವಿನೋದ ವಿಹಾರದಂಥ ಚಿಕ್ಕ ವಿಷಯದಲ್ಲಿ ಅವನು ನಿರ್ಣಯ ಮಾಡಬೇಕಾಗಿ ಬಂದೀತು. ಇದು ಕುಟುಂಬದ ಎಲ್ಲಾ ಸದಸ್ಯರನ್ನು ಬಾಧಿಸುವುದರಿಂದ ಅವರೆಲ್ಲರನ್ನು ವಿಚಾರಿಸುವುದು ವಿವೇಕದ ಮತ್ತು ದಯೆಯ ವಿಷಯವಾಗಿರಲಿಕ್ಕಿಲ್ಲವೇ? ಅವರ ಅಭಿಪ್ರಾಯಗಳಿಂದಾಗಿ ಅವನು ಹೆಚ್ಚು ವಿವೇಕ ಹಾಗೂ ವಿಚಾರಪರತೆಯ ನಿರ್ಣಯಗಳನ್ನು ಮಾಡುವಂತಾದೀತು. ಹೀಗಿರುವಲ್ಲಿ ಇಡೀ ಕುಟುಂಬವು ಅವನಿಗೆ ಬೆಂಬಲ ನೀಡುವದೇ ಹೆಚ್ಚು ಸುಲಭವಾಗಿ ಪರಿಣಮಿಸುವುದು.—ಜ್ಞಾನೋಕ್ತಿ 15:22 ಹೋಲಿಸಿ.
12 ಈ ಮೇಲಿನ ವಿಷಯಗಳಿಂದ, ಕ್ರೈಸ್ತ ಪತಿ ಮತ್ತು ಪಿತನು ಮನೆಯಲ್ಲಿ ಕೇವಲ ಶಿಸ್ತು ನೀಡುವ ವ್ಯಕ್ತಿಯಲ್ಲಿ ಎಂದು ಪ್ರತ್ಯಕ್ಷವಾಗುತ್ತದೆ. ಅವನು ವಿಶ್ರಾಂತಿ ನೀಡುವವನೂ ಆಗಿರಬೇಕು. ಗಂಡಂದಿರೇ, ತಂದೆಗಳೇ, ನೀವು ಕ್ರಿಸ್ತಸದೃಶರೋ? ನೀವು ನಿಮ್ಮ ಕುಟುಂಬಕ್ಕೆ ಚೈತನ್ಯ ನೀಡುತ್ತೀರೋ?—ಎಫೆಸ್ಯ 6:4; ಕೊಲೊಸ್ಸೆ 3:21.
ಜ್ಞಾನಾನುಸಾರವಾಗಿ ಒಗತನ ಮಾಡುವುದು
13. ಪೇತ್ರನು ಗಂಡಂದಿರಿಗೆ ಯಾವ ಉತ್ತಮ ಸಲಹೆಯನ್ನು ನೀಡುತ್ತಾನೆ?
13 ನಾವು ಆಗಲೇ ಗಮನಿಸಿರುವಂತೆ, ಪೇತ್ರ, ಪೌಲರಿಬ್ಬರೂ ವೈವಾಹಿತ ದಂಪತಿಗಳಿಗೆ ಉತ್ತಮ ಬುದ್ಧಿವಾದವನ್ನು ಕೊಡುತ್ತಾರೆ. ಪೇತ್ರನು ವೈವಾಹಿತವಾಗಿದ್ದುದರಿಂದ ಅವನ ಬುದ್ಧಿವಾದದಲ್ಲಿ ಇಮ್ಮಡಿ ಪ್ರಯೋಜನಗಳು ಅಂದರೆ ಅನುಭವ ಮತ್ತು ಪವಿತ್ರಾತ್ಮದ ನಿರ್ದೇಶನಗಳಿವೆ. (ಮತ್ತಾಯ 8:14) ಅವನು ಎಲ್ಲಾ ಗಂಡಂದಿರಿಗೆ ನಾಟುವ ಸಲಹೆಯನ್ನು ಕೊಡುತ್ತಾ ಹೇಳಿದ್ದು: “ಪತಿಗಳೇ ಅವರೊಂದಿಗೆ ಅದೇ ರೀತಿಯಲ್ಲಿ ಜ್ಞಾನಾನುಸಾರವಾಗಿ ಒಗತನ ಮಾಡುತ್ತಾ ಅವರು ಸ್ತ್ರೀ ಸಹಜರಾದ ಅಬಲೆಯರೆಂದು ಅವರಿಗೆ ಗೌರವ ನೀಡಿರಿ.” ಜೆ. ಡಬ್ಲ್ಯು. ಸಿ. ವ್ಯಾಂಡ್ ಅವರ ಭಾವಾನುವಾದ ಭಾಷಾಂತರ ಹೀಗೆ ಒದುತ್ತದೆ: “ಗಂಡಂದಿರು ಅದೇ ರೀತಿಯಾಗಿ ತಮ್ಮ ಹೆಂಡತಿಯರೊಂದಿಗೆ ತಮಗಿರುವ ಸಂಬಂಧಕ್ಕೆ ಕ್ರಿಸ್ತೀಯ ಮೂಲತತ್ವಗಳನ್ನು ಬುದ್ಧಿ ಶಕ್ತಿಯಿಂದ ಅನ್ವಯಿಸತಕ್ಕದ್ದು.”—1 ಪೇತ್ರ 3:7.
14. ಈಗ ಯಾವ ಪ್ರಶ್ನೆಗಳೇಳುತ್ತವೆ?
14 “ಜ್ಞಾನಾನುಸಾರವಾಗಿ” ಹೆಂಡತಿಯೊಡನೆ ಒಗತನ ಮಾಡುವುದರ ಅರ್ಥವೇನು? ಅಥವಾ “ಕ್ರಿಸ್ತೀಯ ಮೂಲತತ್ವಗಳನ್ನು ಬುದ್ಧಿಶಕ್ತಿಯಿಂದ ಅನ್ವಯಿಸುವುದು” ಎಂಬುದರ ಅರ್ಥವೇನು? ಒಬ್ಬ ಗಂಡನು ತನ್ನ ಹೆಂಡತಿಗೆ ಹೇಗೆ ಗೌರವ ನೀಡಬಲ್ಲನು? ಹೌದು, ಕ್ರೈಸ್ತ ಗಂಡನು ಪೇತ್ರನ ಬುದ್ಧಿವಾದವವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
15. (ಎ) ಕೆಲವು ವಿವಾಹಗಳು ವಿಫಲಗೊಳ್ಳುವುದೇಕೆ? (ಬಿ) ವಿವಾಹದಲ್ಲಿ ನಿಜ ಪಂಥಾಹ್ವಾನ ಯಾವುದು?
15 ಅನೇಕ ವಿವಾಹಗಳು ಕೇವಲ ದೈಹಿಕ ಮತ್ತು ಲೈಂಗಿಕ ಆಕರ್ಷಣೆಗಳ ಮೇಲೆ ಆಧರಿಸಿವೆ. ಆದರೂ, ಬಾಳಿಕೆ ಬರುವ ವಿವಾಹವು ಸೌಂದರ್ಯದ ಮೇಲೆ ಮಾತ್ರ ಆಧರಿಸದು, ಏಕೆಂದರೆ ಸೌಂದರ್ಯ ಬಹುಕಾಲ ಬಾಳುವುದಿಲ್ಲ. ಅನೇಕ ವರ್ಷಕಾಲ ವಿವಾಹಿತರಾಗಿರುವವರನ್ನು ಕ್ರಮೇಣ ತಲೆನರೆತ ಮತ್ತು ಸುಕ್ಕು ಬಂದು ಹಿಡಿಯುತ್ತದೆ. ಅದರೆ ವಿವಾಹವು ಎರಡು ಮನಗಳ, ಎರಡು ವ್ಯಕ್ತಿತ್ವಗಳ, ಎರಡು ಹಿನ್ನೆಲೆಗಳ ಮತ್ತು ಆತ್ಮಿಕ ಧ್ಯೇಯಗಳ ಮತ್ತು ಎರಡು ನಾಲಗೆಗಳ ಜೋಡಣೆಯಾಗಿದೆ. ಇದು ದೊಡ್ಡ ಪಂಥಾಹ್ವಾನವನ್ನು ನೀಡುವುದೇನೋ ನಿಶ್ಚಯ! ಆದರೂ ಇದನ್ನು ತಿಳಿದುಕೊಳ್ಳುವುದು ಸಂತುಷ್ಟ ವಿವಾಹಕ್ಕೆ ಅಗತ್ಯ ವಿಷಯ.—ಜ್ಞಾನೋಕ್ತಿ 17:1;21:9.
16. ‘ಜ್ಞಾನಾನುಸಾರವಾಗಿ ಆಕೆಯೊಂದಿಗೆ ಜೀವಿಸುವುದರಲ್ಲಿ’ ಯಾವುದು ಸೇರಿದೆ?
16 ಒಬ್ಬ ಕ್ರೈಸ್ತ ಗಂಡನು ತನ್ನ ಹೆಂಡತಿಯೊಂದಿಗೆ “ಜ್ಞಾನಾನುಸಾರವಾಗಿ” ವಾಸಿಸುವುದೆಂದರೆ ಅವನು ಇತರ ವಿಷಯಗಳೊಂದಿಗೆ ಆಕೆಯ ಅವಶ್ಯಕತೆಗಳನ್ನು ಗ್ರಹಿಸಬೇಕೆಂದು ಅರ್ಥ. ಆಕೆಯ ಶಾರೀರಿಕ ಆವಶ್ಯಕತೆಗಳಷ್ಟೇಯಲ್ಲ, ಹೆಚ್ಚು ಪ್ರಾಮುಖ್ಯವಾಗಿ ಆಕೆಯ ಭಾವಾವೇಶ, ಮನೋಸ್ಥಿತಿ ಮತ್ತು ಆತ್ಮಿಕ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಬೇಕು. ಅವನು ‘ಜ್ಞಾನಾನುಸಾರವಾಗಿ ಅವಳೊಂದಿಗೆ ಒಗತನ ಮಾಡುವಲ್ಲಿ’ ಈ ದೇವ ನಿಯಮಿತ ಪಾತ್ರವನ್ನು ಅವನು ಗ್ರಹಿಸುವನು. ಆಕೆಯ ಸ್ತ್ರೀಸಹಜವಾದ ಗಾಂಭೀರ್ಯವನ್ನು ಅವನು ಗೌರವಿಸುವನೆಂದು ಅರ್ಥ. ಇದು ಪೇತ್ರನ ದಿನಗಳಲ್ಲಿದ್ದ ಅಧ್ಯಾತ್ಮಿಕ ರಹಸ್ಯ ಜ್ಞಾನಿಗಳ ದೃಷ್ಟಿಕೋನಕ್ಕೆ ತೀರಾ ವಿರುದ್ಧವಾಗಿತ್ತು. ಅವರ ಮಧ್ಯೆ, “ಸ್ತ್ರೀಯರು ಕೆಳ ತರಗತಿಯ, ಕಾಮುಕ, ಅಶುದ್ಧ ವ್ಯಕ್ತಿಗಳೆಂದು ಹೀನೈಸಲ್ಪಡುತ್ತಿದ್ದರು. (ದಿ ಆ್ಯಂಕಲ್ ಬೈಬಲ್) ಒಂದು ಆಧುನಿಕ ಸ್ಪ್ಯಾನಿಷ್ ಭಾಷಾಂತರವು ಪೇತ್ರನ ಮಾತುಗಳನ್ನು ಭಾಷಾಂತರಿಸುವುದು’ “ಗಂಡಂದಿರ ಕುರಿತು: ನಿಮ್ಮ ಪಾಲಿಗೆ ಜೀವನದಲ್ಲಿ ಔಚಿತ್ಯ ಜ್ಞಾನವಿರಲಿ. ಸ್ತ್ರೀಯು ಹೆಚ್ಚು ಲಲಿತವಾದ ದೇಹ ಪ್ರಕೃತಿಯವಳಾಗಿರುವುದರಿಂದ ಅವಳಿಗೆ ವಿಚಾರಪರತೆ ತೋರಿಸಿರಿ.” (ನುವೆವ ಬಿಬ್ಲಿಯ ಎಸ್ಪನೋಲ) ಕೆಲವು ಸಲ ಗಂಡಂದಿರು ಮರೆತು ಬಿಡುವ ಚೊಕ್ಕ ವಿಷಯವನು ಇದು ತೋರುತ್ತದೆ.
17. (ಎ) ‘ಅಬಲೆಯ’ ‘ಲಲಿತ ಪ್ರಕೃತಿ’ ಯಲ್ಲಿ ಇತರ ವಿಷಯಗಳಲ್ಲದೆ ಇನ್ನಾವುದು ಸೇರಿದೆ? (ಬಿ) ಹೆಂಡತಿಯ ಗಾಂಭೀರ್ಯಕ್ಕೆ ಗಂಡನು ಗೌರವ ತೋರಿಸುವ ಒಂದು ವಿಧ ಯಾವುದು?
17 ಹೆಂಡತಿಯು “ಹೆಚ್ಚು ಲಲಿತವಾದ ದೇಹಪ್ರಕೃತಿ”ಯವಳಾಗಿರುವುದೇಕೆ? ಬೇರೆ ವಿಷಯಗಳಲ್ಲದೆ ಅವಳಿಗೆ ಜನ್ಮ ನೀಡುವ ವರವಿರುವ ಕಾರಣವೇ. ಆಕೆಯ ಉತ್ಪಾದಕ ಜೀವಿತದಲ್ಲಿ ಆಕೆ ತಿಂಗಳ ಚಕ್ರಗಳಿಗೆ ಅಧೀನಳು. ಆಗ ಅನೇಕ ದಿನ ಅವಳು ಅಶಕ್ತಳೂ ಒತ್ತಡಕ್ಕೊಳಗಾಗುವಳೂ ಆಗಬಹುದು. ಗಂಡನು ಇದನ್ನು ಗಣನೆಗೆ ತಾರದೆ ತಿಂಗಳಲ್ಲಿ ಪ್ರತಿದಿನ ಲೈಂಗಿಕವಾಗಿ ಹಕ್ಕು ಕೇಳಿಕೆ ಮಾಡುವಲ್ಲಿ ಅವನು ಆಕೆಯ ಗಾಂಭೀರ್ಯವನ್ನು ಗೌರವಿಸಲು ತಪ್ಪುತ್ತಾನೆ. ಹೀಗೆ ಮಾಡುವಲ್ಲಿ, ತಾನು ಸ್ವಾರ್ಥದ ಅಜ್ಞಾನಾನುಸಾರವಾಗಿ ಅವಳೊಂದಿಗೆ ಜೀವಿಸುತ್ತಾನೆ. ಜ್ಞಾನಾನುಸಾರವಾಗಿ ಅಲ್ಲ ಎಂದು ಅವನು ತೋರಿಸುತ್ತಾನೆ.—ಯಾಜಕಕಾಂಡ 18:19; 1ಕೊರಿಂಥ 7:5.
ಅಬಲೆಗೆ ಗೌರವ ನೀಡುವುದು
18. (ಎ) ಕೆಲವು ಗಂಡಂದಿರಿಗೆ ಯಾವ ನರಕಾತ್ಮಕ ಅಭ್ಯಾಸವಿದೆ? (ಬಿ) ಕ್ರೈಸ್ತ ಪತಿಯು ಹೇಗೆ ವರ್ತಿಸಬೇಕು?
18 ಗಂಡನು ಹೆಂಡತಿಗೆ ಪ್ರೀತಿ ಮತ್ತು ಗೌರವ ತೋರಿಸುವ ಇನ್ನೊಂದು ವಿಧವು ಅವಳಿಗೆ ಮತ್ತು ಅವಳ ಗುಣಗಳಿಗೆ ಗಣ್ಯತೆಯನ್ನು ತೋರಿಸಿಯೇ ಮತ್ತು ವ್ಯಕ್ತಪಡಿಸಿಯೇ. ಗಂಡನು ಹೆಂಡತಿಯನ್ನು ಹೀನೈಸಿ ಮಾತಾಡುವ ಅಭ್ಯಾಸಕ್ಕೊಳಗಾಗಬಹುದು ಅಥವಾ ಆಕೆಯನ್ನು ತನ್ನ ವಿನೋದಗಳ ಗುರುಹಲಗೆಯಾಗಿ ಮಾಡಬಹುದು. ಪ್ರಾಯಶಃ ಇದು, ತಾನು ಹೆಚ್ಚು ಯೋಗ್ಯನೆಂದು ತೋರಿಸುತ್ತದೆ ಎಂದು ಇಂಥ ಗಂಡನು ನೆನೆಸಬಹುದು. ವಾಸ್ತವವೇನೆಂದರೆ ಇದರ ಪರಿಣಾಮ ಪ್ರತಿಕೂಲವೇ ಸರಿ. ಏಕೆಂದರೆ ತನ್ನ ಹೆಂಡತಿ ಮೂರ್ಖಳೆಂದು ಅವನು ಸದಾ ತೋರಿಸುತ್ತಿರುವುದಾದರೆ, ಅಂಥ ಮೂರ್ಖಳನ್ನು ಅವನು ವಿವಾಹ ಮಾಡಿಕೊಂಡದ್ದು ಏಕೆ ಎಂಬ ಪ್ರಶ್ನೆ ಏಳುವುದು ಸಹಜ. ನಿಜವಾಗಿಯೂ ಒಬ್ಬ ಅರಕ್ಷಿತ ಭಾವನೆಯ ಗಂಡನು ಮಾತ್ರ ಇಂಥ ಉಪಾಯವನ್ನು ಕೈಕೊಳ್ಳಬಹುದೆಂದು ಕಂಡುಬರಬಹುದು. ಪ್ರೀತಿಸುವ ಗಂಡನು ತನ್ನ ಹೆಂಡತಿಯನ್ನು ಗೌರವಿಸುತ್ತಾನೆ.—ಜ್ಞಾನೋಕ್ತಿ 12:18; 1ಕೊರಿಂಥ 13:4-8.
19. ಗಂಡನು ಹೆಂಡತಿಯನ್ನು ಹೀನೈಸುವುದು ಏಕೆ ಯೋಗ್ಯವಲ್ಲ?
19 ಕೆಲವು ದೇಶಗಳಲ್ಲಿ, ಅಭಿಮಾನಮಿತಿಯ ಹೆಸರಿನಲ್ಲಿ ತಮ್ಮ ಹೆಂಡತಿಯನ್ನು ಹೀನೈಸುವ ಪದ್ಧತಿಯೂ ಪುರುಷರಿಗಿದೆ. ದೃಷ್ಟಾಂತಕ್ಕಾಗಿ, ಜಪಾನೀ ಗಂಡನು ತನ್ನ ಹೆಂಡತಿಯನ್ನು ಪರುಚಯ ಮಾಡಿಸುವಾಗ “ಗುಸೈ” ಅಂದರೆ “ಮೂರ್ಖ ಅಥವಾ ಮೂಢ ಹೆಂಡತಿ” ಎಂದು ಹೇಳುವನು. ಆಗ ಪರಿಚಯ ಮಾಡಿಸಲ್ಪಡುವ ವ್ಯಕ್ತಿ ಹೆಂಡತಿಯನ್ನು ಪ್ರಶಂಸಿಸಿ ಮಾತಾಡಿ ವಿಷಯವನ್ನು ಸಮತೆಗೆ ತರಬೇಕೆಂಬುದು ಇದರ ಉದ್ದೇಶ. ಆದರೆ ಕ್ರೈಸ್ತ ಪತಿ ಹೀಗೆ ಪರಿಚಯ ಮಾಡಿಸುವಲ್ಲಿ ಪೇತ್ರನ ಬುದ್ಧಿವಾದದಂತೆ ಅವನು ನಿಜವಾಗಿಯೂ ತನ್ನ ಹೆಂಡತಿಗೆ ‘ಗೌರವ’ ನೀಡುತ್ತಾನೋ? ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ, ಅವನು ತನ್ನ ನೆರೆಯವನಿಗೆ ನಿಜವಾಗಿಯೂ ಸತ್ಯವನ್ನಾಡುತ್ತಿದ್ದಾನೋ? ತನ್ನ ಹೆಂಡತಿ ಮೂರ್ಖಳೆಂದು ಅವನು ನಿಜವಾಗಿ ನಂಬುತ್ತಾನೋ?—ಎಫೆಸ 4:15,25; 5:28,29.
20. (ಎ)ಗಂಡ ಹೆಂಡತಿಯರ ಮಧ್ಯೆ ಯಾವ ವ್ಯತಿರಿಕ್ತ ಪರಿಸ್ಥಿತಿ ಏಳಬಹುದು? (ಬಿ) ಇದನ್ನು ಹೇಗೆ ತಪ್ಪಿಸ ಸಾಧ್ಯವಿದೆ?
20 ಹಲವು ಸಲ ಗಂಡನು ತನ್ನ ಹೆಂಡತಿ ಕಿಂಗ್ಡಮ್ ಹಾಲ್ನಲ್ಲಿ ಮಾತ್ರವಲ್ಲ ಮತ್ತು ಪ್ರತಿ ಸಂದಂರ್ಭಗಲ್ಲಿ ತನ್ನ ಕ್ರೈಸ್ತ ಸಹೋದರಿಯೂ ಆಗಿದ್ದಾಳೆಂಬುದನ್ನು ಮರೆತು ಪ್ರೀತಿ ಮತ್ತು ಗೌರವ ಕೊರತೆ ತೋರಿಸುವನು. ಆದರೆ ಕಿಂಗ್ಡಮ್ ಹಾಲ್ನಲ್ಲಿ ದಯೆ ಮತ್ತು ವಿನಯವನ್ನು ತೋರಿಸುವುದು ಮನೆಯಲ್ಲಿ ಒರಟಾಗಿ ಮತ್ತು ಅಸಭ್ಯತೆಯಿಂದ ವರ್ತಿಸುವುದೂ ಎಷ್ಟು ಸುಲಭ! ಹೀಗಿರುವಾಗ ಪೌಲನ ಬುದ್ಧಿವಾದ ಎಷ್ಟು ಸಮಂಜಸ! ಅವನು ಬರೆದುದು: “ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿ ವೃದ್ಧಿಗೂ ಅನುಕೂಲವಾಗಿರುವುದನ್ನು ಸಾಧಿಸಿಕೊಳ್ಳೋಣ.” “ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ನೆರೆಯವನ ಹಿತವನ್ನು ಭಕ್ತಿವೃದ್ಧಿಯನ್ನೂ” ಅಪೇಕ್ಷಿಸಲಿ. (ರೋಮಾಪುರ 14:19; 15:2) ಗಂಡ ಅಥವಾ ಹೆಂಡತಿಗಿಂತ ಸಮೀಪದ ನೆರೆಯವನಿಲ್ಲ.
21. ಹೆಂಡತಿಯರಿಗೆ ಪ್ರೋತ್ಸಾಹನೆ ನೀಡಲು ಗಂಡಂದಿರು ಏನು ಮಾಡಬಹುದು?
21 ಆದುದರಿಂದ, ಪ್ರೀತಿಸುವ ಕ್ರೈಸ್ತ ಪತಿಯು ನಡೆನುಡಿಗಳಿಂದ ತನ್ನ ಹೆಂಡತಿಗೆ ಗಣ್ಯತೆಯನ್ನು ತೋರಿಸುವನು. ಅನಾಮಧೇಯ ಕವಿಯೊಬ್ಬನು ಹೀಗೆ ಹೇಳಿದನು:
“ವಿವಾಹ ಕಲಹಗಳ ಚಿಂತೆಯ ಮಧ್ಯೆ
ಹೆಣಗಾಟ, ವ್ಯವಹಾರ ಜೀವಿತದ ನಡುವೆ
ನಿಮ್ಮ ಪ್ರಿಯ ಪತ್ನಿಯ ನೀವು ಬಹುಮಾನಿಸುವಲ್ಲಿ
ಹಾಗೆಂದು ಹೇಳಿ! . . .
ನೀವು ಆಕೆಯವರು, ಆಕೆಯೊಬ್ಬಳದೇ ಸೊತ್ತು;
ಆಕೆ ನಿಮ್ಮವಳೆಂದೂ ನಿಮಗೆ ಚೆನ್ನಾಗಿ ಗೊತ್ತು;
ಇದನ್ನು ಕಲ್ಲಲಿ ಕೆತ್ತಲು ಕಾಯಬೇಡಿ—
ಹಾಗೆಂದು ಹೇಳಿ!”
ಈ ಅಭಿಪ್ರಾಯಗಳನ್ನು ಪುರಾತನಕಾಲದ ಲೆಮುವೇಲ್ ರಾಜನ ತಾಯಿಯ ಮಾತುಗಳು ಸ್ಪಷ್ಟವಾಗಿ ಸಮರ್ಥಿಸುತ್ತವೆ. ಒಬ್ಬ ಆದರ್ಶ ಪತ್ನಿಯನ್ನು ವರ್ಣಿಸುತ್ತಾ ಅಂಶಿಕವಾಗಿ ಅವಳಂದದ್ದು: “ಮಕ್ಕಳು ಎದ್ದು ನಿಂತು ಆಕೆಯನ್ನು ಧನ್ಯಳು ಎಂದು ಹೇಳುವರು; ಪತಿಯು ಸಹ-ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ. ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು ಎಂದು ಆಕೆಯನ್ನು ಕೊಂಡಾಡುವನು.” (ಜ್ಞಾನೋಕ್ತಿ 31:1,28,29) ಗಂಡಂದಿರೇ, ನೀವು ಕ್ರಮವಾಗಿ ನಿಮ್ಮ ಹೆಂಡತಿಯನ್ನು ಹೊಗಳುತ್ತಿರೋ? ಅಥವಾ ಅದು ಕೇವಲ ನಿಮ್ಮ ವಿವಾಹಪೂರ್ವದ ಕ್ರಮವಾಗಿತ್ತೋ?
22, 23. ಸಾಫಲ್ಯ ವಿವಾಹವು ಯಾವುದರ ಮೇಲೆ ಹೊಂದಿಕೊಂಡಿದೆ?
22 ಈ ಚಿಕ್ಕ ಚರ್ಚೆಯಿಂದ, ಒಬ್ಬ ಗಂಡನು ವಿವಾಹದಲ್ಲಿ ಪ್ರೀತಿ ಮತ್ತು ಗೌರವ ತೋರಿಸಬೇಕಾದರೆ ಕೇವಲ ವೇತನವನ್ನು ಮನೆಗೆ ತಂದರೆ ಸಾಲದೆಂದು ವ್ಯಕ್ತವಾಗುತ್ತದೆ. ವಿವಾಹ ಸಾಫಲ್ಯವು ಪ್ರೀತಿ, ನಿಷ್ಠೆ ಮತ್ತು ವಿಚಾರಪರ ಸಂಬಂಧದ ಮೇಲೆ ಹೊಂದಿಕೊಂಡಿದೆ. (1 ಪೇತ್ರ 3:8,9) ವರ್ಷಗಳು ಗತಿಸಿದಂತೆ, ಪತಿ, ಪತ್ನಿಯರು ಪರಸ್ಪರವಾಗಿ ಸದ್ಗುಣ ಮತ್ತು ಬಲಗಳನ್ನು ಗಣ್ಯಮಾಡಿ, ಬಲಹೀನತೆಗಳನ್ನು ಅಲಕ್ಷ ಮಾಡುತ್ತಾ ಕ್ಷಮಿಸುತ್ತಾ ಹೋಗುವಲ್ಲಿ ಈ ಸಂಬಂಧವು ಆಳವಾಗಬೇಕು.—ಎಫೆಸ್ಯ 4:32; ಕೊಲೊಸ್ಸೆ 3:12-14.
23 ಪ್ರೀತಿ ಮತ್ತು ಗೌರವ ತೋರಿಸುವುದರಲ್ಲಿ ಗಂಡನು ನಾಯಕತ್ವವಹಿಸುವಲ್ಲಿ ಇಡೀ ಕುಟುಂಬವು ಹರಸಲ್ಪಡುವುದು. ಆದರೆ ಸಂತುಷ್ಟ ಕುಟುಂಬದಲ್ಲಿ ಕ್ರೈಸ್ತ ಪತ್ನಿಯ ಪಾತ್ಪವೇನು? ಇದನ್ನು ಮತ್ತು ಇತರ ಪ್ರಶ್ನೆಗಳನ್ನು ಎಪ್ರಿಲಿನ ಸಂಚಿಕೆಯಲ್ಲಿ ಚರ್ಚಿಸಲಾಗುವುದು. (w89 5/15)
ಜ್ಞಾಪಕವಿದೆಯೇ?
▫ ಸಂತುಷ್ಟ ವಿವಾಹದಲ್ಲಿ ಮುಖ್ಯ ಪಾತ್ರ ಯಾರಿಗಿದೆ, ಮತ್ತು ಏಕೆ?
▫ ಗಂಡಂದಿರು ಕ್ರಿಸ್ತನ ಚೈತನ್ಯದಾಯಕ ಮಾದರಿಯನ್ನು ಹೇಗೆ ಅನುಕರಿಸಬಲ್ಲರು?
▫ ಸಭಾ ಮತ್ತು ಕುಟುಂಬ ಜವಾಬ್ದಾರಿಗಳ ಮಧ್ಯೆ ಯಾವ ಸಮತೆ ಅಗತ್ಯ?
▫ ಗಂಡನು ಹೆಂಡತಿಯೊಂದಿಗೆ “ಜ್ಞಾನಾನುಸಾರವಾಗಿ” ಹೇಗೆ ಜೀವಿಸಬಲ್ಲನು?
▫ ‘ಅಬಲೆಯೆಂದು ಹೆಂಡತಿಯನ್ನು ಗೌರವಿಸುವುದರ’ ಅರ್ಥವೇನು?
[ಪುಟ 22 ರಲ್ಲಿರುವ ಚಿತ್ರ]
This picture is missing in vernacular.