-
“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!
-
-
3, 4. (ಎ) ಸೈತಾನ ಮೊದಲ ಎರಡು ಪರೀಕ್ಷೆಯ ಆರಂಭದಲ್ಲಿ ಏನು ಹೇಳ್ದ? (ಬಿ) ಹೀಗೆ ಹೇಳೋ ಮೂಲಕ ಅವನು ಯೇಸುವಿನ ಮನಸ್ಸಿನಲ್ಲಿ ಯಾವ ಸಂಶಯದ ಬೀಜವನ್ನು ಬಿತ್ತೋಕೆ ಪ್ರಯತ್ನಿಸಿದ? (ಸಿ) ಈ ರೀತಿಯ ಕುತಂತ್ರಗಳನ್ನ ಸೈತಾನ ಇವತ್ತೂ ಬಳಸುತ್ತಿದ್ದಾನಾ?
3 ಮತ್ತಾಯ 4:1-7 ಓದಿ. ಸೈತಾನನು ಮೊದಲ ಎರಡು ಪರೀಕ್ಷೆಗಳನ್ನು ತಂದಾಗ ಕುತಂತ್ರದಿಂದ ಆರಂಭದಲ್ಲಿ “ನೀನು ದೇವರ ಮಗನಾಗಿದ್ರೆ” ಅಂತ ಹೇಳಿದನು. ಅಂದ್ರೆ ಯೇಸು ನಿಜವಾಗಿಯೂ ದೇವರ ಮಗನಾ ಅನ್ನೋ ಸಂಶಯ ಸೈತಾನನಿಗಿತ್ತಾ? ಇಲ್ಲ. ದೇವರ ವಿರುದ್ಧ ದಂಗೆ ಎದ್ದ ಈ ದೇವದೂತನಿಗೆ ಯೇಸು ಕ್ರಿಸ್ತನು ದೇವರ ಮೊದಲನೇ ಮಗ ಅಂತ ಚೆನ್ನಾಗಿ ಗೊತ್ತಿತ್ತು. (ಕೊಲೊ. 1:15) ಅಷ್ಟೇ ಅಲ್ಲ, ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಸ್ವರ್ಗದಿಂದ ಯೆಹೋವ ದೇವರು ಹೇಳಿದ ಈ ಮಾತುಗಳ ಬಗ್ಗೆನೂ ಅವನಿಗೆ ಗೊತ್ತಿತ್ತು: “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.” (ಮತ್ತಾ. 3:17) ‘ತಂದೆ ಮೇಲೆ ಭರವಸೆ ಇಡಬಹುದಾ ಮತ್ತು ಆತನು ನಿಜವಾಗಿಯೂ ನನ್ನ ಕಾಳಜಿವಹಿಸ್ತಾನಾ’ ಅನ್ನೋ ಸಂಶಯವನ್ನ ಯೇಸುವಿನ ಮನಸ್ಸಲ್ಲಿ ತರೋದೇ ಸೈತಾನನ ಉದ್ದೇಶ ಆಗಿರಬೇಕು. ಉದಾಹರಣೆಗೆ, ಮೊದಲನೇ ಪರೀಕ್ಷೆಯಲ್ಲಿ ಸೈತಾನನು ಕಲ್ಲುಗಳನ್ನ ರೊಟ್ಟಿಗಳನ್ನಾಗಿ ಮಾಡೋಕೆ ಹೇಳಿದಾಗ ಒಂದರ್ಥದಲ್ಲಿ ಈ ರೀತಿ ಹೇಳಿದನು: ‘ನೀನು ದೇವರ ಮಗನಲ್ವಾ? ಹಾಗಿದ್ರೆ ಈ ಬರಡು ಭೂಮಿಯಲ್ಲಿ ದೇವರು ನಿನಗೆ ಯಾಕೆ ಊಟ ಕೊಟ್ಟಿಲ್ಲ?’ ಎರಡನೇ ಪರೀಕ್ಷೆಯಲ್ಲಿ ದೇವಾಲಯದ ಗೋಡೆಯಿಂದ ಹಾರೋಕೆ ಹೇಳಿದಾಗ ಸೈತಾನ ಒಂದರ್ಥದಲ್ಲಿ ಈ ರೀತಿ ಹೇಳಿದನು: ‘ನೀನು ದೇವರ ಮಗನಲ್ವಾ? ನಿನ್ನ ತಂದೆ ನಿಜವಾಗ್ಲೂ ನಿನ್ನನ್ನ ಕಾಪಾಡ್ತಾನೆ ಅನ್ನೋ ಭರವಸೆ ಇದ್ಯಾ?’
-
-
“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!
-
-
5. ಸೈತಾನ ಮೊದಲ ಎರಡು ಪರೀಕ್ಷೆಗಳನ್ನು ತಂದಾಗ ಯೇಸು ಹೇಗೆ ಉತ್ತರಕೊಟ್ಟನು?
5 ಸೈತಾನನು ಮೊದಲ ಎರಡು ಪರೀಕ್ಷೆಗಳನ್ನ ತಂದಾಗ ಯೇಸು ಅವನಿಗೆ ಏನು ಉತ್ತರ ಕೊಟ್ಟ ಅಂತ ಗಮನಿಸಿ. ತಂದೆ ತನ್ನನ್ನ ಪ್ರೀತಿಸ್ತಾನಾ ಅಂತ ಯೇಸುಗೆ ಎಳ್ಳಷ್ಟೂ ಸಂಶಯ ಇರಲಿಲ್ಲ. ಆತನಿಗೆ ತನ್ನ ತಂದೆ ಮೇಲೆ ಪೂರ್ತಿ ಭರವಸೆ ಇತ್ತು. ಹಾಗಾಗಿ ಹಿಂದೆ ಮುಂದೆ ಯೋಚಿಸದೆ ಆತನು ಸೈತಾನನ ಪರೀಕ್ಷೆಗಳನ್ನ ತಿರಸ್ಕರಿಸಿದನು. ಹಾಗೆ ಮಾಡುವಾಗ ಆತನು ಯೆಹೋವ ಅಂತ ಹೆಸರಿರೋ ವಚನಗಳನ್ನ ಉಪಯೋಗಿಸಿದನು. (ಧರ್ಮೋ. 6:16; 8:3) ಯೆಹೋವನ ಹೆಸರನ್ನ ಉಪಯೋಗಿಸೋ ಮೂಲಕ ಯೇಸು ತನ್ನ ತಂದೆ ಮೇಲೆ ಪೂರ್ತಿ ಭರವಸೆ ಇದೆ ಅಂತ ತೋರಿಸಿಕೊಟ್ಟನು. ಯಾಕಂದ್ರೆ ಯೆಹೋವನ ಹೆಸರು ತಾನೇ ಆತನು ತಾನು ಹೇಳಿರೋ ಮಾತುಗಳನ್ನ ಖಂಡಿತ ನೆರವೇರಿಸ್ತಾನೆ ಅನ್ನೋದಕ್ಕೆ ಗ್ಯಾರಂಟಿ.a
-