“ಎಲ್ಲಾ ಭಾರವನ್ನು ನಾವು ಸಹಾ ತೆಗೆದು ಹಾಕೋಣ”
“ನಾನೆಷ್ಟೋ ದುಃಖಿತಳೂ ಎದೆಗುಂದಿದವಳೂ ಆಗಿದ್ದೇನೆ” ಎಂದು ಪ್ರಲಾಪಿಸಿದಳು, ಮೇರಿ. ಕ್ರೈಸ್ತ ಜವಾಬ್ದಾರಿಕೆಗಳ ಹೊರೆಗೆ ನಿರ್ದೇಶಿಸುತ್ತಾ, ಈ ಕ್ರೈಸ್ತ ಮಹಿಳೆಯು ಮತ್ತೂ ಅಂದದ್ದು: “ಸ್ನೇಹಿತರು ದಣಿದು, ಬಳಲಿ ಹೋಗುತ್ತಿರುವುದನ್ನು ನಾನು ಕಾಣುತ್ತೇನೆ, ಬಳಲಿಕೆ ಮತ್ತು ಒತ್ತಡಗಳ ಅನುಭವವು ನನಗೂ ಆಗುತ್ತಿದೆ. ಅದೇಕೆಂದು ತಿಳಿಯಲು ನನಗೆ ದಯವಿಟ್ಟು ಸಹಾಯ ಮಾಡಿರಿ.”
ನಿಮಗೆ ಸಹಾ ಒತ್ತಡದ ಕೆಳಗಿರುವ ಅನಿಸಿಕೆಯು, ನಿಮ್ಮ ದೇವಪ್ರಭುತ್ವ ಜವಾಬ್ದಾರಿಕೆಗಳನ್ನು ತಕ್ಕದಾಗಿ ನಿರ್ವಹಿಸಲು ತೀರಾ ಬಳಲಿರುವ ಅನಿಸಿಕೆ ಆಗುತ್ತದೋ? ಅನೇಕ ನಂಬಿಗಸ್ತ ಕ್ರೈಸ್ತರು ನಿರಾಶಜನಕ ಗಡುಗಳನ್ನು ಅನುಭವಿಸುತ್ತಾರೆ, ಯಾಕೆಂದರೆ ನಾವು ಯಾವಾಗಲೂ ನಕಾರಾತ್ಮಕ ಶಕಿಗ್ತಳಿಂದ ಸುತ್ತುವರಿಯಲ್ಪಟಿದ್ಟೇವ್ದೆ, ಇವು ನಮ್ಮ ಸಂತೋಷವನ್ನು ಕುಂದಿಸಬಲ್ಲವು. ಇಂದು ನಿಜ ಕ್ರೈಸ್ತರಾಗಿರುವುದು ನಿಜವಾಗಿಯೂ ಒಂದು ಪಂಥಾಹ್ವಾನ. ಹೀಗೆ ಕೆಲವೊಮ್ಮೆ, ಕ್ರೈಸ್ತ ಶುಶ್ರೂಷೆಯು ಒಂದು ಭಾರವಾದ ಹೊರೆಯೆಂಬ ಅನಿಸಿಕೆ ಕೆಲವರಿಗಾಗುತ್ತದೆ.
ಕಾರಣ ಹುಡುಕುವುದು
ಯೆಹೋವನು ನಮ್ಮ ಮೇಲೆ ಅಸಮಂಜಸವಾದ ಆವಶ್ಯಕತೆಗಳನ್ನು ಹೊರಿಸಿಲ್ಲವೆಂದು ದೇವರ ವಾಕ್ಯವು ಸೃಷ್ಟಗೊಳಿಸುತ್ತದೆ. ದೇವರ “ಆಜ್ಞೆಗಳು ಭಾರವಾದವುಗಳಲ್ಲ” ಎಂದು ಅಪೊಸ್ತಲ ಯೋಹಾನನು ಹೇಳುತ್ತಾನೆ. (1 ಯೋಹಾನ 5:3) ಯೇಸು ತದ್ರೀತಿಯಲ್ಲಿ ತನ್ನ ಹಿಂಬಾಲಕರಿಗೆ ಹೇಳಿದ್ದು: “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:29, 30) ದೇವರಿಗೆ ನಮ್ಮ ಸೇವೆಯು ಒಂದು ಅತಿಭಾರವಾದ ಹೊರೆಯಾಗುವುದು ಅಥವಾ ಆ ಭಾರದಿಂದ ನಾವು ಕುಗ್ಗಿಹೋಗುವುದು ಯೆಹೋವನ ಚಿತ್ತವಲ್ಲವೆಂಬದು ಸ್ಪಷ್ಟ.
ಹಾಗಾದರೆ ಒಬ್ಬ ನಂಬಿಗಸ್ತ ಕ್ರೈಸ್ತನು ತನ್ನ ಕ್ರಿಸ್ತೀಯ ಜವಾಬ್ದಾರಿಕೆಗಳನ್ನು ಒಂದು ಭಾರವಾದ ಹೊರೆಯಾಗಿ ವೀಕ್ಷಿಸುವಂಥಾಗುವುದು ಹೇಗೆ? ಹಲವಾರು ಕಾರಣಗಳು ಅದರಲ್ಲಿ ಕೂಡಿರುವ ಸಂಭವನೀಯತೆ ಇದೆ. ಅಪೊಸ್ತಲ ಪೌಲನ ಈ ಮಾತುಗಳನ್ನು ಗಮನಿಸಿರಿ: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನು ನಾವು ಸಹ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಧಿರಚಿತ್ತದಿಂದ ಓಡೋಣ.” (ಇಬ್ರಿಯ 12:1) ಕ್ರೈಸ್ತನು ಕೆಲವೊಮ್ಮೆ ಅನಾವಶ್ಯಕ ಹೊರೆಯನ್ನು ತನ್ನ ಮೇಲೆ ಹೊತ್ತುಕೊಳ್ಳಬಹುದೆಂದು ಪೌಲನ ಈ ಮಾತುಗಳು ಸೂಚಿಸುತ್ತವೆ. ಇದರಲ್ಲಿ ಗಂಭೀರವಾದ ಪಾಪಗಳು ಒಳಗೂಡಿರುವ ಆವಶ್ಯಕತೆ ಇಲ್ಲ. ಆದರೆ ತನ್ನ ಜೀವನವನ್ನು ತೀವ್ರವಾಗಿ ಜಟಿಲಗೊಳಿಸಬಲ್ಲ ತಪ್ಪುಗಳನ್ನು ಒಬ್ಬ ಕ್ರೈಸ್ತನು ತನ್ನ ತೀರ್ಮಾನದಲ್ಲಿ ಮಾಡಬಹುದು ಮತ್ತು ಇದು ನಮ್ಮ ಮುಂದಿರುವ ಓಟವನ್ನು ಓಡಲು ಅವನಿಗೆ ಅತಿ ಕಷ್ಟಕರವಾಗಿ ಮಾಡಬಹುದು.
ಪ್ರಾಪಂಚಿಕ ವಸ್ತುಗಳೆಡೆಗೆ ಸಮತೆಯ ನೋಟ
ಉದಾಹರಣೆಗಾಗಿ, ಲೌಕಿಕ ಉದ್ಯೋಗವನ್ನು ತಕ್ಕೊಳ್ಳಿರಿ. ಅನೇಕ ದೇಶಗಳಲ್ಲಿ ಆರ್ಥಿಕ ಸ್ಥಿತಿಗತಿಗಳಿಂದಾಗಿ ಕ್ರೈಸನ್ತಿಗೆ ಅಧಿಕ ತಾಸುಗಳ ಕೆಲಸ ಮಾಡದ ಹೊರತು ಬೇರೆ ಮಾರ್ಗವಿರುವುದಿಲ್ಲ. ಆದರೂ ಕೆಲವು ಸಾರಿ ಕೇವಲ ಅನುಕೂಲಸ್ಥರಾಗಲು ಅಥವಾ ಭೋಗವಸ್ತುಗಳನ್ನು ಕೂಡಿಸಿಡಲು ಜನರು ಹೆಚ್ಚು ಕೆಲಸ ತಕ್ಕೊಳ್ಳುತ್ತಾರೆ. ಆದರೆ ತಮ್ಮ ನಿಜವಾದ ಆವಶ್ಯಕತೆಗಳನ್ನು ಪುನಃ ತೂಗಿನೋಡಿದ ಮೂಲಕ, ತಮ್ಮ ಉದ್ಯೋಗದ ಸ್ಥಿತಿಗತಿಗಳನ್ನು ಬದಲಾಯಿಸಿಕೊಳ್ಳುವುದು ವಿವೇಕಪ್ರದವೆಂದು ಕೆಲವು ಕ್ರೈಸ್ತರು ಕಂಡುಕೊಂಡರು. ಯೆಹೋವನ ಸಾಕ್ಷಿಗಳಾಗಿದ್ದ ಡೆಬಿ ಮತ್ತು ಅವಳ ಗಂಡನ ವಿಷಯವು ಹೀಗೆಯೇ ಇತ್ತು. ಅವಳನ್ನುವುದು: “ನಮ್ಮ ಆರ್ಥಿಕ ಪರಿಸ್ಥಿತಿಯು ಬದಲಾಗಿತ್ತು, ಮತ್ತು ಪೂರ್ಣ ಸಮಯದ ಉದ್ಯೋಗವನ್ನು ಮಾಡುತ್ತಾ ಇರುವ ನಿಜವಾದ ಅಗತ್ಯ ನನಗಿರಲಿಲ್ಲ. ಆದರೆ ಅದನ್ನು ಬಿಟ್ಟುಕೊಡುವುದು ಮಾತ್ರ ತುಂಬಾ ಕಷವ್ಟಿತ್ತು.” ಮಾಡಲು ಬಹಳ ಕೆಲಸಗಳಿದ್ದ ಒತ್ತಡವನ್ನು ಅವಳು ಬೇಗನೇ ಅನುಭವಿಸ ತೊಡಗಿದಳು. ಅವಳು ವಿವರಿಸುವುದು: “ಮನೆಗೆಲಸಕ್ಕೆ ಶನಿವಾರ ಒಂದೇ ಅವಕಾಶದ ದಿನ. ಕ್ಷೇತ್ರಸೇವೆಗೆ ಹೋಗಲು ನನಗೆ ಹೆಚ್ಚಾಗಿ ಮನಸ್ಸೇ ಆಗುತ್ತಿರಲಿಲ್ಲ. ಆ ಕುರಿತು ನನಗೆ ಖೇಧವಾಗುತ್ತಿತ್ತು, ನನ್ನ ಮನಸ್ಸಾಕ್ಷಿ ಕೆದಕ ತೊಡಗಿತ್ತು, ಆದರೂ, ನನ್ನ ಉದ್ಯೋಗವನ್ನು ನಾನು ಬಲು ಪ್ರೀತಿಸಿದ್ದೆನು! ಕೊನೆಗೆ, ವಾಸ್ತವಿಕತೆಯನ್ನು ನಾನು ಎದುರಿಸಲೇ ಬೇಕಾಯಿತು. ಒಂದೇ ಒಂದು ಪರಿಹಾರ ಅಲ್ಲಿತ್ತು. ನಾನು ಕೆಲಸ ಬಿಟ್ಟು ಬಿಟ್ಟೆನು.” ಇಂಥ ದೊಡ್ಡ ಬದಲಾವಣೆ ಮಾಡುವುದು ಕೆಲವರಿಗೆ ಶಕ್ಯವಾಗಲಿಕ್ಕಿಲವ್ಲೆಂಬದು ಗ್ರಾಹ್ಯ. ಆದರೂ, ನಿಮ್ಮ ಕೆಲಸದ ಕಾಲತಖೆಯ್ತನ್ನು ನಿಕಟವಾಗಿ ಪರೀಕ್ಷಿಸಿದ್ದಲ್ಲಿ ನಿರ್ದಿಷ್ಟ ಬದಲಾವಣೆಗಳ ಅಗತ್ಯವನ್ನು ಅದು ತೋರಿಸಬಹುದು.
ನಮ್ಮನ್ನು ಅನಾವಶ್ಯಕವಾದ ಭಾರದಿಂದ ನೀಗಿಸಿಕೊಳ್ಳುವ ಬೇರೆ ವಿಧಾನಗಳೂ ಅಲ್ಲಿರಬಹುದು. ಸುಖಸಂಚಾರ, ಕ್ರೀಡಾ ಚಟುವಟಿಕೆಗಳು ಮತ್ತು ಬೇರೆ ಮನೋರಂಜನೆಯನ್ನು—ಟೆಲಿವಿಷನ್ ನೋಡಲು ಕಳೆಯುವ ಸಮಯವನ್ನೂ ಕಡಿಮೆಗೊಳಿಸುವ ಕುರಿತೇನು? ಮತ್ತು ಈ ಕ್ಷೇತ್ರಗಳಲ್ಲಿ ಒಂದು ಅಪೇಕ್ಷಿತ ಸಮತೆಯನ್ನು ಗಳಿಸಿಯಾದ ಬಳಿಕವೂ, ಆ ಸಮತೂಕವನ್ನು ಕಾಪಾಡಲು ಸದಾ ಅಳವಡಿಸುವಿಕೆಯನ್ನು ಮಾಡುವ ಅಗತ್ಯವುಂಟಾಗಬಹುದು.
ಯುಕ್ತ ಪರಿಜ್ಞಾನ ಅತ್ಯಾವಶ್ಯಕ
ಇಂಥ ವಿಷಯಗಳಲ್ಲಿ ಯುಕ್ತ ಪರಿಜ್ಞಾನವು, ಹೊಸ ಪರಿಸ್ಥಿತಿಗಳು ಎದ್ದಂತೆ ಅವುಗಳಿಗೆ ಅಳವಡಿಸಿಕೊಳ್ಳಲು ನಮಗೆ ಸಹಾಯಕಾರಿಯು. ಹೀಗೆ, ನಾವು ನಮ್ಮ ಶುಶ್ರೂಷೆಯ ಒಂದು ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಬಲ್ಲೆವು.—ಎಫೆಸ 5:15-17; ಫಿಲಿಪ್ಪಿಯ 4:5.
ದೇವರ ಸೇವೆಯಲ್ಲಿ ಬೇರೆಯವರು ಎಷ್ಟು ಮಾಡುತ್ತಾರೋ ಅದಕ್ಕೆ ಸಮಗತಿಯಲ್ಲಿ ಮಾಡುವ ಒತ್ತಡಕ್ಕೆ ನೀವು ಗುರಿಯಾಗಿರುವಿರೋ? ಇದು ಕೂಡಾ ನಿಮ್ಮ ಜೀವಿತಕ್ಕೆ ಚಿಂತನೆಗಳನ್ನು ಮತ್ತು ಆಶಾಭಂಗವನ್ನು ಕೂಡಿಸಬಹುದು. ಇತರರ ಒಳ್ಳೇ ಮಾದರಿಯು ಹೆಚ್ಚನ್ನು ಮಾಡಲು ನಿಮ್ಮನ್ನು ಖಂಡಿತವಾಗಿಯೂ ಉತ್ತೇಜಿಸಬಲದ್ಲಾದರೂ, ಯುಕ್ತ ಪರಿಜ್ಞಾನವು ನಿಮ್ಮ ಸ್ವಂತ ಪರಿಸ್ಥಿತಿ ಮತ್ತು ಸಾಮರ್ಥ್ಯಗಳಿಗೆ ಹೊಂದಿಕೆಯಲ್ಲಿ ವಾಸ್ತವಿಕ ಗುರಿಗಳನ್ನಿಡುವಂತೆ ನಿಮಗೆ ಸಹಾಯ ಮಾಡುವುದು. ಶಾಸ್ತ್ರವಚನಗಳು ನಮಗನ್ನುವುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ. ಆಗ ಅವನು ತನ್ನ ನಿಮಿತದ್ತಿಂದ ಹೆಚ್ಚಳಪಡುವುದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ. ಯಾಕಂದರೆ ಪ್ರತಿಯೊಬ್ಬನು ತನ್ನ ಹೊರೆಯನ್ನು ಹೊತ್ತುಕೊಳ್ಳಬೇಕು.”—ಗಲಾತ್ಯ 6:4, 5.
ಸ್ಥಳೀಕ ಪದ್ಧತಿಗಳು ಮತ್ತು ಸಂಪ್ರದಾಯಗಳು ಸಹಾ ನಮ್ಮ ಹೊರೆಗಳನ್ನು ಹೆಚ್ಚಿಸಬಹುದು. ಯೇಸುವಿನ ಕಾಲದಲ್ಲಿ ಜನರು, ಮನುಷ್ಯ ನಿರ್ಮಿತವಾದ ಅನೇಕ ಧಾರ್ಮಿಕ ನಿಯಮ ಮತ್ತು ಸಂಪ್ರದಾಯಗಳಿಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದರ್ದಿಂದ ಬಳಲಿ ಬೇಸತ್ತು ಹೋಗಿದ್ದರು. ಇಂದು ಯೆಹೋವನ ಜನರು, ಸುಳ್ಳು ಧಾರ್ಮಿಕ ಸಂಪ್ರದಾಯಗಳಿಂದ ಪೂರ್ಣ ಸ್ವತಂತ್ರರಾಗಿ ಮಾಡಲ್ಪಟ್ಟಿದ್ದಾರೆ. (ಯೋಹಾನ 8:32ಕ್ಕೆ ಹೋಲಿಸಿ.) ಆದರೂ ಕ್ರೈಸ್ತನೊಬ್ಬನು, ಸ್ಥಳೀಕ ಪದ್ಧತಿಗಳಿಂದ ಅಯುಕ್ತವಾಗಿ ಪೂರ್ವಾಕ್ರಮಣಗೊಳ್ಳಬಹುದು. ಉದಾಹರಣೆಗೆ, ಮದುವೆಗಳಂಥಾ ಸಮಾರಂಭಗಳು ತೀರಾ ಪರಿಷ್ಕಾರವಾದ ಪದ್ಧತಿಗಳಿಂದ ಕೂಡಿರಬಹುದು. ಈ ಪದ್ಧತಿಗಳಲ್ಲೇನೂ ತಪ್ಪಿರಲಿಕ್ಕಿಲ್ಲ ಮತ್ತು ಅವು ಒಂದುವೇಳೆ ಆಕರ್ಷಣೀಯ ಹಾಗೂ ಅಭಿರುಚಿಯುಳ್ಳವುಗಳೂ ಆಗಿರಬಹುದು. ಆದರೂ, ಅವೆಲ್ಲವನ್ನು ಆಚರಿಸಲಿಕ್ಕೆ ಕ್ರೈಸ್ತರಿಗೆ ಸಮಯವಾಗಲಿ, ಆರ್ಥಿಕ ಅನುಕೂಲವಾಗಲಿ ಇಲ್ಲದಿರಬಹುದು. ಆದರೂ ಅದನ್ನು ಮಾಡಲು ಪ್ರಯತ್ನಿಸುವುದಾದರೆ, ಬೇರೆ ಅನಾವಶ್ಯಕವಾದ ಹೊರೆಗಳು ಕೂಡಿಸಲ್ಪಡಬಹುದು.
ಮಾರ್ಥಳೆಂಬ ಹೆಸರಿನ ಸ್ತ್ರೀಯನ್ನು ಯೇಸು ಸಂದರ್ಶಿಸಿದಾಗ ಏನಾಯಿತೆಂಬದನ್ನು ಗಮನಿಸಿರಿ. ಆತನ ದಿವ್ಯ ಜ್ಞಾನದಿಂದ ಪೂರ್ಣ ಪ್ರಯೋಜನ ಹೊಂದುವ ಬದಲಾಗಿ, “ಮಾರ್ಥಳು ಬಹಳ ಕೆಲಸಗಳನ್ನು ಮಾಡುವುದರಲ್ಲಿ ಅಪಕರ್ಷಿತಳಾದಳು.” ಅನೇಕ ಅಪ್ರಧಾನ ವಿಷಯಗಳಿಂದ ಅವಳು ಹೊರೆ ಹೊತ್ತವಳಾಗಿ ಕುಗಿದ್ಗಳ್ದು. (ಲೂಕ 10:40, NW) ಆದರೆ ಯೇಸು, ಆಕೆ ಅವನ ಕಲಿಸುವಿಕೆಯಿಂದ ಪ್ರಯೋಜನ ಹೊಂದುವಂತೆ ತನ್ನ ಊಟದ ಸಿದತ್ಧೆಗಳನ್ನು ಸರಳವಾಗಿಡುವಂತೆ ದಯೆಯಿಂದ ಸೂಚಿಸಿದ್ದನು. (ಲೂಕ 10:41, 42) ಹೀಗೆ ಒಳ್ಳೇ ತೀರ್ಮಾನ ಮತ್ತು ಯುಕ್ತ ಪರಿಜ್ಞಾನವು ನಿಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ಯೋಗ್ಯ ಸಮತೂಕವನ್ನು ಗಳಿಸಲು ನೆರವಾಗುವುದೆಂದು ಇದು ಚೆನ್ನಾಗಿ ಚಿತ್ರಿಸುತ್ತದೆ.—ಯಾಕೋಬ 3:17.
ನಿಮ್ಮ ಸಂಗಾತಿಗಳನ್ನು ಆರಿಸಿಕೊಳ್ಳುವಾಗಲೂ ಒಳ್ಳೇ ತೀರ್ಮಾನವು ಅತ್ಯಾವಶ್ಯಕ. ಜ್ಞಾನೋಕ್ತಿ 27:3 ಎಚ್ಚರಿಸುವುದು: “ಕಲ್ಲು ಭಾರ, ಮರಳು ಭಾರ, ಎರಡಕ್ಕಿಂತಲೂ ಮೂಢನ ಕೋಪ ಬಲು ಭಾರ.” ನಿಮ್ಮ ಆಪ್ತ ಸಂಗಾತಿಗಳು ನಿಮ್ಮ ಯೋಚನಾ ವಿಧಾನದ ಮೇಲೆ ಸದಾ ಬಲವಾದ ಪ್ರಭಾವವನ್ನು ಹಾಕಬಲ್ಲರು. ಸಭೆಯಲ್ಲಿ ಇತರರ ತಪ್ಪುಗಳನ್ನು ಹುಡುಕುವುದರಲ್ಲಿ ಮತ್ತು ಟೀಕಿಸುವುದರಲ್ಲಿ ತೀವ್ರರಾಗಿರುವವರ ಸಹವಾಸವನ್ನಿಡುವದರಿಂದ ನಿಮ್ಮಲ್ಲಿ ನಿರಾಶೆ ಮತ್ತು ನಕಾರಾತ್ಮಕ ವಿಚಾರಗಳ ಬೀಜವು ಬಿತ್ತಲ್ಪಡಬಹುದು. (1 ಕೊರಿಂಥ 15:33) ಇದು ನಿಮ್ಮ ಸಮಸ್ಯೆಯೆಂದು ತಿಳಿದುಬಂದಲ್ಲಿ, ನಿಮ್ಮ ಸಹವಾಸದಲ್ಲಿ ಕೆಲವು ಸುಜ್ಞ ಬದಲಾವಣೆಗಳು ನಿಮ್ಮ ಹೊರೆಯನ್ನು ಹಗುರಗೊಳಿಸಬಲ್ಲದು.
ದೇವರೊಂದಿಗೆ ನಡೆಯವುದರಲ್ಲಿ ಅಭಿಮಾನಮಿತಿಯುಳ್ಳವರಾಗಿರ್ರಿ
ಮೀಕ 6:8ರಲ್ಲಿ ನಾವೀ ವಿಚಾರ ಪ್ರೇರಕ ಪ್ರಶ್ನೆಯನ್ನು ಕಾಣುತ್ತೇವೆ: “ನಿನ್ನ ದೇವರಿಗೆ ನಮ್ರವಾಗಿ (ಅಭಿಮಾನಮಿತಿಯುಳ್ಳವರಾಗಿ, NW) ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುವನು?” ಒಬ್ಬನಿಗೆ ತನ್ನ ಸೀಮಿತಗಳ ಅರುಹು ಇರುವಂಥಾದ್ದೇ ಅಭಿಮಾನಮಿತಿಯ ಅರ್ಥವು. ಯಾರು ತಮ್ಮ ಸೀಮಿತಗಳನ್ನು ಅರಿಯುವುದಿಲ್ಲವೋ ಅವರು ತೀರಾ ಹೆಚ್ಚು ಕಟ್ಟುಪಾಡುಗಳಿಂದ ತಮ್ಮನ್ನು ಮುಳುಗಿಸಿಕೊಳ್ಳುತ್ತಾರೆ. ಇದು ಬಲಿತ ಕ್ರೈಸ್ತರಿಗೆ, ಮೇಲ್ವಿಚಾರಕರಿಗೆ ಸಹಾ ಸಂಭವಿಸಿದೆ, ಫಲಿತಾಂಶವಾಗಿ ನಿರಾಶೆ, ಆಶಾಭಂಗ ಮತ್ತು ಸಂತೋಷ-ನಷ್ಟ ಉಂಟಾಗಿದೆ. ಕೆನತ್ ಎಂಬ ಕ್ರೈಸ್ತ ಹಿರಿಯನು ಒಪ್ಪಿಕೊಂಡದ್ದು: “ನಾನು ಖಿನ್ನತೆಗೆ ಗುರಿಯಾಗುತ್ತಿರುವುದು ನನಗೆ ತಿಳಿದುಬಂತು. ‘ಇದು ನನಗೆ ಸಂಭವಿಸುವಂತೆ ನಾನು ಬಿಡಲಾರೆ’ ಅಂದುಕೊಂಡೆನು. ಆದದರಿಂದ ನನ್ನ ಕಟ್ಟುಪಾಡುಗಳಲ್ಲಿ ಕೆಲವನ್ನು ಕಡಿಮೆ ಮಾಡಿದೆ ಮತ್ತು ನನಗೆ ಮಾಡ ಸಾಧ್ಯವಾದವುಗಳ ಮೇಲೆ ಏಕಾಗ್ರಚಿತವ್ತಿಟ್ಟೆ.”
ದೀನ ಪ್ರವಾದಿ ಮೋಶೆಗೆ ಸಹಾ ತನ್ನ ಸ್ವಂತ ಸೀಮಿತಗಳನ್ನು ಮನಗಾಣುವುದು ಕಷ್ಟವಾಗಿತ್ತು. ಹೀಗೆ ಅವನು ತಾನಾಗಿಯೇ ನಿರ್ವಹಿಸಲು ಪ್ರಯತ್ನಿಸುತ್ತಿದ್ದ ಅತಿರೇಕ ಕೆಲಸದ ಹೊರೆಯ ವಿಷಯದಲ್ಲಿ, ಅವನ ಮಾವನಾದ ಇತ್ರೋವನು ಅವನನ್ನು ಚಿತ್ತ-ಸ್ವಾಸ್ಥ್ಯಕ್ಕೆ ತರಬೇಕಾಯಿತು. “ನೀನು ಯಾತಕ್ಕೆ ಜನರಿಗೋಸ್ಕರ ಇಷ್ಟು ಪ್ರಯಾಸಪಡುತ್ತೀ?,” ಎಂದು ಕೇಳಿದನು ಇತ್ರೋವ. “ನೀನು ಮಾಡುವ ಕಾರ್ಯಕ್ರಮ ಒಳ್ಳೇದಲ್ಲ. ಈ ಕೆಲಸ ಬಹು ಕಷ್ಟವಾದದ್ದು; ನೀನೊಬ್ಬನೇ ಅದನ್ನು ನಡಿಸಲಾರಿ. . . ನೀನು ನಿಶ್ಚಯವಾಗಿ ಬಳಲಿ ಹೋಗುವಿ. . . ನೀನು ಸಮಸ್ತ ಜನರೊಳಗೆ ಸಮರ್ಥರು ಆದ ಪುರುಷರನ್ನು ಆರಿಸಿಕೊಳ್ಳಬೇಕು. . . . ಅವರು ದೊಡ್ಡ ವ್ಯಾಜ್ಯಗಳನ್ನು ನಿನ್ನ ಮುಂದೆ ತರಲಿ; ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಅವರು ನಿನ್ನೊಂದಿಗೆ ಈ ಭಾರವನ್ನು ಹೊರುವದರಿಂದ ನಿನಗೆ ಸುಲಭವಾಗಿರುವುದು.” ಮೋಶೆಯು ಕೂಡಲೇ ತನ್ನ ಕೆಲಸಗಳಲ್ಲಿ ಕೆಲವನ್ನು ಇತರರಿಗೆ ವಹಿಸಿಕೊಟ್ಟನು ಮತ್ತು ಹೀಗೆ ಹೊರಲಾಗದ ಭಾರದಿಂದ ಪರಿಹಾರವನ್ನು ಕಂಡುಕೊಂಡನು.—ವಿಮೋಚನಕಾಂಡ 18:13-26.
ಇನ್ನೊಂದು ಸಂದರ್ಭದಲ್ಲಿ ಮೋಶೆಯು ಯೆಹೋವನಿಗೆ ಹೇಳಿಕೊಂಡದ್ದು: “ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವದು ಅಸಾಧ್ಯ; ಅದು ನನಗೆ ಶಕ್ತಿಗೆ ಮೀರಿದ ಕೆಲಸ.” ಪುನಃ ಉತ್ತರವು, ಇತರರಿಗೆ ವಹಿಸಿಕೊಡುವುದೇ. ತೀರಾ ಹೆಚ್ಚು ಕಟ್ಟುಪಾಡುಗಳಿಂದ ಜಜ್ಜಲ್ಪಟ್ಟ ಅನುಭವವು ನಿಮಗಾಗುವುದಾದರೆ, ಇದು ನಿಮ್ಮ ಸಮಸ್ಯೆಗೂ ಪರಿಹಾರವಾಗಿರಬಲ್ಲದು.—ಅರಣ್ಯಕಾಂಡ 11:14-17.
ಭಾರವನ್ನು ಹೊರಲು ಯೆಹೋವನು ನಮಗೆ ನೆರವಾಗುತ್ತಾನೆ
ತನ್ನ ನೊಗವು ಮೃದುವಾದದ್ದು, ತನ್ನ ಹೊರೆಯು ಹೌರವಾದದ್ದು, ಆದರೆ ಭಾರರಹಿತವಲ್ಲ ಎಂದು ಯೇಸು ಹೇಳಿದ್ದನು. ನಮ್ಮ ಮೇಲೆ ತೆಗೆದುಕೊಳ್ಳುವಂತೆ ಯೇಸು ಹೇಳಿದ್ದ ಆ ನೊಗವು ಆಲಸ್ಯತನದ್ದಲ್ಲ, ಯೇಸು ಕ್ರಿಸ್ತನ ಶಿಷ್ಯರೋಪಾದಿ ದೇವರಿಗೆ ಸಂಪೂರ್ಣ ಸಮರ್ಪಣೆಯ ಒಂದು ನೊಗವು ಅದಾಗಿದೆ. ಆದುದರಿಂದ, ನಿಜ ಕ್ರೈಸ್ತರಾಗಿರುವುದರಲ್ಲಿ ಒಂದು ನಿರ್ದಿಷ್ಟ ಮಟ್ಟದ ಭಾರವು ಅಥವಾ ಒತ್ತಡವು ಅಲ್ಲಿರುವದು. (ಮತ್ತಾಯ 16:24-26; 19:16-29; ಲೂಕ 13:24) ಲೋಕ ಪರಿಸ್ಥಿತಿಗಳು ಹೆಚ್ಚು ಕೆಡುತ್ತಾ ಬರುವಾಗ, ಒತ್ತಡಗಳೂ ಹೆಚ್ಚುತ್ತವೆ. ಆದರೆ ಒಂದು ಸಕಾರಾತ್ಮಕ ಹೊರನೋಟವನ್ನಿಡಲು ನಮಗೆ ಸಕಾರಣವದೆ ಯಾಕಂದರೆ ಇತರರು ಆತನ ನೊಗದ ಕೆಳಗೆ ಆತನೊಂದಿಗೆ ಬರಸಾಧ್ಯವೆಂದೂ ಮತ್ತು ಆತನು ಅವರಿಗೆ ಸಹಾಯ ಮಾಡುವನೆಂದೂ ಯೇಸುವಿನ ಆಮಂತ್ರಣವು ಸೂಚಿಸುತ್ತದೆ.a ಹೀಗೆ, ಎಷ್ಟರ ತನಕ ನಾವು ಕ್ರಿಸ್ತನ ಮಾರ್ಗದರ್ಶನವನ್ನು ಪಾಲಿಸುತೇವ್ತೋ ಆ ತನಕ, ನಮ್ಮ ಹೊರೆಯು ನಿರ್ವಹಿಸಶಕ್ಯವು ಯಾಕೆಂದರೆ ಆತನು ನಮಗೆ ಸಹಾಯ ಮಾಡುವನು.
ಯಾರು ಆತನನ್ನು ಪ್ರೀತಿಸುತ್ತಾರೋ ಅವರನ್ನು ದೇವರು ಪರಾಮರಿಕೆ ಮಾಡುತ್ತಾನೆ ಮತ್ತು ಯಾರು ಪ್ರಾರ್ಥನಾಪೂರ್ವಕವಾಗಿ ತಮ್ಮ ಚಿಂತಾಭಾರವನ್ನು ಆತನ ಮೇಲೆ ಹಾಕುತ್ತಾರೋ ಅವರೆಲ್ಲರ ಹೃದಯಗಳನ್ನು ಮತ್ತು ಮಾನಸಿಕ ಯೋಚನೆಗಳನ್ನು ಆತನು ಕಾಯುತ್ತಾನೆ. (ಕೀರ್ತನೆ 55:22; ಫಿಲಿಪ್ಪಿಯ 4:6, 7; 1 ಪೇತ್ರ 5:6, 7) “ಅನುದಿನವೂ ನಮ್ಮ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ,” ಎಂದಿದ್ದಾನೆ ಕೀರ್ತನೆಗಾರನು. (ಕೀರ್ತನೆ 68:19) ಹೌದು, ನೀವು ಸಹಾ ಎಲ್ಲಾ ಭಾರವನ್ನು ತೆಗೆದಿಟ್ಟು, ನಿಮ್ಮ ಮುಂದಿರುವ ಓಟವನ್ನು ಸ್ಥಿರಚಿತ್ತದಿಂದ ಓಡುವುದಾದರೆ, ನಿಮ್ಮ ಭಾರವನ್ನೂ ದೇವರು ಅನುದಿನವೂ ಹೊರುವನೆಂಬ ಆಶ್ವಾಸನೆ ಉಳ್ಳವರಾಗಿರ್ರಿ. (w91 10/15)
[ಅಧ್ಯಯನ ಪ್ರಶ್ನೆಗಳು]
a ಪಾದಟಿಪ್ಪಣಿ ತರ್ಜುಮೆಯು, “ನನ್ನೊಂದಿಗೆ ನನ್ನ ನೊಗದ ಕೆಳಗೆ ಬನ್ನಿರಿ” ಎಂದಾಗಿದೆ.
[ಪುಟ 28 ರಲ್ಲಿರುವ ಚಿತ್ರ]
ಸುಜ್ಞ ಹಿರಿಯರು ಕೆಲವು ಕೆಲಸಗಳನ್ನು ವಹಿಸಿಕೊಡಲು ಮತ್ತು ತಮ್ಮ ಹೊರೆಗಳನ್ನು ಹಂಚಲು ಸಿದಮ್ಧನಸ್ಕರಾಗಿದ್ದಾರೆ