-
“ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ”ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ!
-
-
11 ಮುಂದಿನ ಕೆಲವು ಶತಮಾನಗಳವರೆಗೆ ಸುಳ್ಳು ಕ್ರೈಸ್ತ ಸಾಮ್ರಾಜ್ಯನೇ ರಾರಾಜಿಸ್ತಾ ಇತ್ತು. ಆ ಸಮಯದಲ್ಲೂ ಕೆಲವು ನಿಜ ಕ್ರೈಸ್ತರು ಅಂದ್ರೆ ಯೇಸುವಿನ ಉದಾಹರಣೆಯಲ್ಲಿ ತಿಳಿಸಿದ ಗೋದಿಯಂಥ ಜನರು ಇದ್ರು. ಯೆಹೆಜ್ಕೇಲ 6:9 ರಲ್ಲಿ ಹೇಳಿರೋ ಯೆಹೂದಿ ಕೈದಿಗಳ ತರನೇ ಇವ್ರು ಸಹ ಸತ್ಯ ದೇವರನ್ನ ನೆನಪಿಸಿಕೊಂಡರು. ಕೆಲವರು ಧೈರ್ಯದಿಂದ ಆ ಕ್ರೈಸ್ತ ಧರ್ಮ ಕಲಿಸುತ್ತಿದ್ದ ಸುಳ್ಳು ಬೋಧನೆಗಳನ್ನು ವಿರೋಧಿಸಿದ್ರು. ಇದ್ರಿಂದ ಅವ್ರು ಗೇಲಿಯನ್ನು, ಹಿಂಸೆಯನ್ನು ಅನುಭವಿಸಿದ್ರು. ಹಾಗಾದ್ರೆ ಯೆಹೋವನು ತನ್ನ ಜನರನ್ನ ಶಾಶ್ವತವಾಗಿ ಸುಳ್ಳು ಧರ್ಮದ ಕೈದಿಗಳಾಗಿರೋಕೆ ಬಿಟ್ಟನಾ? ಇಲ್ಲ. ಯೆಹೋವನು ಇಸ್ರಾಯೇಲ್ಯರಿಗೆ ಶಿಕ್ಷೆ ಕೊಟ್ಟ ಹಾಗೆ ಇವ್ರಿಗೂ ನ್ಯಾಯವಾಗೇ ಶಿಕ್ಷೆ ಕೊಟ್ಟನು. ಅವ್ರಿಗೆ ಎಷ್ಟು ಶಿಕ್ಷೆ ಕೊಡಬೇಕಿತ್ತೋ ಅಷ್ಟನ್ನೇ ಕೊಟ್ಟನು ಮತ್ತು ಎಷ್ಟು ಸಮಯದವರೆಗೂ ಕೊಡಬೇಕಿತ್ತೋ ಅಷ್ಟು ಸಮಯದವರೆಗೆ ಮಾತ್ರ ಕೊಟ್ಟನು. (ಯೆರೆ. 46:28) ಅಷ್ಟೇ ಅಲ್ಲ ಯೆಹೋವನು ತನ್ನ ಜನರಿಗೆ ಒಂದು ನಿರೀಕ್ಷೆಯನ್ನು ಸಹ ಕೊಟ್ಟನು. ಈಗ ನಾವು ಹಿಂದಿನ ಕಾಲದ ಬಾಬೆಲಿನಲ್ಲಿರೋ ಯೆಹೂದಿ ಕೈದಿಗಳ ಸಮಯಕ್ಕೆ ವಾಪಸ್ ಹೋಗೋಣ ಮತ್ತು ಯೆಹೋವನು ಅವ್ರಿಗೆ ಬಿಡುಗಡೆ ಮಾಡ್ತೀನಿ ಅನ್ನೋ ನಿರೀಕ್ಷೆಯ ಮಾತನ್ನು ಹೇಗೆ ಕೊಟ್ಟನು ಅಂತ ನೋಡೋಣ.
-