ಜೋಸೀಫಸನ ಮುಗ್ಧಗೊಳಿಸುವ ವೃತ್ತಾಂತಗಳು
ಇತಿಹಾಸದ ವಿದ್ಯಾರ್ಥಿಗಳು ಜೋಸೀಫಸನ ಮುಗ್ಧಗೊಳಿಸುವ ಬರಹಗಳನ್ನು ದೀರ್ಘವಾಗಿ ಪರ್ಯಾಲೋಚಿಸಿದ್ದಾರೆ. ಯೇಸು ಕ್ರಿಸ್ತನ ಮರಣದ ಕೇವಲ ನಾಲ್ಕು ವರ್ಷಗಳ ಅನಂತರ ಅವನು ಜನಿಸಿ, ಪ್ರಥಮ ಶತಮಾನದ ಯೆಹೂದಿ ಜನಾಂಗದ ಕುರಿತಾದ ಯೇಸುವಿನ ಪ್ರವಾದನೆಯ ಜಡಗೊಳಿಸುವ ನೆರವೇರಿಕೆಯ ಪ್ರತ್ಯಕ್ಷಸಾಕ್ಷಿ ಅವನಾಗಿದ್ದನು. ಜೋಸೀಫಸನು ಒಬ್ಬ ಸೈನ್ಯದ ಸೇನಾನಿಯೂ, ರಾಜತಂತ್ರಜ್ಞನೂ, ಫರಿಸಾಯನೂ, ಮತ್ತು ಒಬ್ಬ ಪಂಡಿತನೂ ಆಗಿದ್ದನು.
ಜೋಸೀಫಸನ ಬರಹಗಳು ಮನಸ್ಸನ್ನು ಸೆರೆಹಿಡಿಯುವ ವಿವರಣೆಗಳಿಂದ ತುಂಬಿವೆ. ಪ್ಯಾಲೆಸ್ತೀನಿನ ಕುರಿತಾದ ನಕ್ಷಾ ನಿರೂಪಣೆ ಮತ್ತು ಭೂಗೋಳ ಶಾಸ್ತ್ರ ವಿಷಯಕ್ಕೆ ಅಕ್ಷರಾರ್ಥಕವಾದ ಒಂದು ಮಾರ್ಗದರ್ಶಕವನ್ನು ಸಜ್ಜುಗೊಳಿಸುವಾಗ ಬೈಬಲ್ನ ಮೂಲಕೃತಿ (ಕ್ಯಾನನ್) ಯನ್ನು ಅವು ಪ್ರಕಾಶಗೊಳಿಸುತ್ತವೆ. ಆತನ ಗ್ರಂಥಗಳು ತಮ್ಮ ಗ್ರಂಥಾಲಯಕ್ಕೆ ಒಂದು ಅಮೂಲ್ಯವಾದ ಸಂಕಲನವೆಂದು ಅನೇಕರು ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ!
ಆತನ ಆರಂಭದ ಜೀವನ
ಜೋಸೆಫ್ ಬೆನ್ ಮತ್ತಾಯಸ್, ಅಥವಾ ಜೋಸೀಫಸ್, ರೋಮನ್ ಚಕ್ರವರ್ತಿ ಕಲಿಗ್ಯೆಲನ ಆಳಿಕ್ವೆಯ ಪ್ರಥಮ ವರ್ಷವಾದ ಸಾ.ಶ. 37 ರಲ್ಲಿ ಜನಿಸಿದನು. ಜೋಸೀಫಸನ ತಂದೆ ಪುರೋಹಿತ ಕುಟುಂಬವೊಂದಕ್ಕೆ ಸೇರಿದವನಾಗಿದ್ದನು. ಆತನ ತಾಯಿ, ಹಾಸ್ಮೊನ್ ವಂಶದ ಮಹಾ ಪುರೋಹಿತ ಜಾನತನನ ವಂಶಸ್ಥಳೆಂದು ಆತನು ವಾದಿಸಿದನು.
ತನ್ನ ಹದಿಪ್ರಾಯದಲ್ಲಿರುವಾಗ, ಜೋಸೀಫಸನು ಮೋಶೆಯ ನಿಯಮ ಶಾಸ್ತ್ರದ ಅತ್ಯಾಸಕ್ತಿಯ ವಿದ್ಯಾರ್ಥಿಯಾಗಿದ್ದನು. ಫರಿಸಾಯರು, ಸದ್ದುಕಾಯರು ಮತ್ತು ಎಸ್ಸೀನರೆಂಬ ಯೆಹೂದ್ಯ ಮತದ ಮೂರು ಪಂಗಡಗಳನ್ನು ಆತನು ಜಾಗರೂಕತೆಯಿಂದ ಪರಿಶೀಲಿಸಿದನು. ಕೊನೆಯದನ್ನು ಮೆಚ್ಚಿಕೊಳ್ಳುತ್ತಾ, ಬಹುಮಟ್ಟಿಗೆ ಎಸ್ಸೀನನಾಗಿದ್ದ, ಬಾನಸ್ ಎಂಬ ಹೆಸರಿನ ಒಬ್ಬ ಮರುಭೂಮಿಯ ಸಂನ್ಯಾಸಿಯೊಂದಿಗೆ ಮೂರು ವರ್ಷಗಳ ಕಾಲ ವಾಸಮಾಡಲು ಆತನು ನಿರ್ಧರಿಸಿದನು. ಇದನ್ನು 19ರ ಪ್ರಾಯದಲ್ಲಿ ತೊರೆಯುತ್ತಾ ಜೋಸೀಫಸನು ಯೆರೂಸಲೇಮಿಗೆ ಹಿಂದಿರುಗಿದನು ಮತ್ತು ಫರಿಸಾಯರ ಜತೆಗೂಡಿದನು.
ರೋಮಿಗೆ ಮತ್ತು ಹಿಂದಕ್ಕೆ
ಸಾ.ಶ. 64 ರಲ್ಲಿ, ಯೂದಾಯದ ಆಡಳಿತಾಧಿಕಾರಿ ಫೆಲಿಕ್ಸನಿಂದ, ವಿಚಾರಣೆಗಾಗಿ ಚಕ್ರವರ್ತಿ ನೀರೋವಿನ ಬಳಿಗೆ ಕಳುಹಿಸಲ್ಪಟ್ಟ ಯೆಹೂದ್ಯ ಯಾಜಕರ ಪರವಾಗಿ ಬಿನ್ನಹ ಮಾಡಲಿಕ್ಕಾಗಿ, ಜೋಸೀಫಸನು ರೋಮಿಗೆ ಪ್ರಯಾಣಿಸಿದನು. ಮಾರ್ಗದಲ್ಲಿ ಹಡಗು ಒಡೆತವನ್ನನುಭವಿಸಿದಾಗ, ಜೋಸೀಫಸನು ಕಷ್ಟದಲ್ಲಿ ಮರಣದಿಂದ ಪಾರಾದನು. ಹಡಗಿನಲ್ಲಿದ್ದ 600 ಪ್ರಯಾಣಿಕರಲ್ಲಿ ಕೇವಲ 80 ಮಂದಿ ಮಾತ್ರ ರಕ್ಷಿಸಲ್ಪಟ್ಟರು.
ಜೋಸೀಫಸನ ರೋಮ್ ಸಂದರ್ಶನದ ಸಮಯದಲ್ಲಿ, ಯೆಹೂದಿ ನಟನೊಬ್ಬನು ನೀರೋವಿನ ಹೆಂಡತಿ, ಚಕ್ರವರ್ತಿನಿ ಪಾಪಿಯಳನ್ನು ಜೋಸೀಫಸನಿಗೆ ಪರಿಚಯಿಸಿದನು. ಆತನ ಧರ್ಮ ಪ್ರಚಾರಕ ಕಾರ್ಯದ ಸಾಫಲ್ಯದಲ್ಲಿ ಅವಳು ಒಂದು ಪ್ರಮುಖ ಪಾತ್ರವನ್ನು ವಹಿಸಿದಳು. ಆ ಪಟ್ಟಣದ ಮಹಾ ವೈಭವವು ಜೋಸೀಫಸನ ಮೇಲೆ ಶಾಶ್ವತವಾದ ಪರಿಣಾಮವನ್ನುಂಟುಮಾಡಿತು.
ಜೋಸೀಫಸನು ಯೂದಾಯಕ್ಕೆ ಹಿಂದಿರುಗಿದಾಗ, ರೋಮಿನ ವಿರುದ್ಧ ದಂಗೆಯು ಯೆಹೂದ್ಯರ ಮನಸ್ಸುಗಳಲ್ಲಿ ದೃಢವಾಗಿ ಬೇರೂರಿತ್ತು. ರೋಮಿನ ವಿರುದ್ಧ ಹೋರಾಟದ ಕುರಿತಾದ ನಿಷ್ಪ್ರಯೋಜನವನ್ನು ತನ್ನ ಸ್ವದೇಶೀಯರಿಗೆ ಮನದಟ್ಟು ಮಾಡಲು ಆತನು ಪ್ರಯತ್ನಿಸಿದನು. ಅವರನ್ನು ನಿಗ್ರಹಿಸಲು ಅಸಮರ್ಥನಾಗಿ ಮತ್ತು ಬಹುಶಃ ತಾನೊಬ್ಬ ದೇಶದ್ರೋಹಿಯೆಂದು ಪರಿಗಣಿಸಲ್ಪಡುವೆನೆಂದು ಹೆದರಿ, ಗಲಿಲಾಯದಲ್ಲಿ ಯೆಹೂದಿ ಸೈನ್ಯದ ಸೇನಾನಿಯಾಗಿ ನೇಮಕವನ್ನು ಸ್ವೀಕರಿಸಿದನು. ಜೋಸೀಫಸನು ಸೈನಿಕರನ್ನು ಜಮಾಯಿಸಿ, ತನ್ನ ಜನರಿಗೆ ತರಬೇತಿ ನೀಡಿದನು ಮತ್ತು ರೋಮನ್ ಸೈನ್ಯಪಡೆಗಳ ವಿರುದ್ಧ ಕದನದ ತಯಾರಿಗಾಗಿ ಅಗತ್ಯವಾದ ಎಲ್ಲಾ ಒದಗಿಸುವಿಕೆಗಳನ್ನು ಮಾಡಿದನು—ಆದರೆ ಪ್ರಯತ್ನವು ನಿಷ್ಫಲವಾಗಿತ್ತು. ಗಲಿಲಾಯವು ವೆಸ್ಪೇಜಿಯನನ ಸೇನೆಯ ವಶವಾಯಿತು. ನಾಲ್ವತ್ತೇಳು ದಿನಗಳ ಮುತ್ತಿಗೆಯ ಅನಂತರ, ಜೋಟಾಪಟದಲ್ಲಿರುವ ಜೋಸೀಫಸನ ಕೋಟೆಯು ವಶಪಡಿಸಿಕೊಳ್ಳಲ್ಪಟ್ಟಿತು.
ತಾನು ಶರಣಾಗತನಾದಾಗ, ವೆಸ್ಪೇಜಿಯನ್ ಶೀಘ್ರದಲ್ಲಿಯೇ ಚಕ್ರವರ್ತಿಯಾಗುವನೆಂದು ಜೋಸೀಫಸನು ವಿವೇಕದಿಂದ ಭವಿಷ್ಯ ನುಡಿದಿದ್ದನು. ಅವನು ಸೆರೆಯಲ್ಲಿ ಹಾಕಲ್ಪಟ್ಟರೂ ಈ ಭವಿಷ್ಯವನ್ನು ನುಡಿದ ಕಾರಣದಿಂದ ಶಿಕ್ಷೆಯಿಂದ ತಪ್ಪಿಸಿಕೊಂಡನು, ಅದು ಸತ್ಯವಾದಾಗ ಜೋಸೀಫಸನು ಬಿಡುಗಡೆಗೊಳಿಸಲ್ಪಟ್ಟನು. ಅದು ಆತನ ಜೀವಿತದಲ್ಲಿ ಬದಲಾವಣೆಯ ಸಮಯವಾಗಿತ್ತು. ಯುದ್ಧದ ಉಳಿದ ಸಮಯದಲ್ಲಿ, ಅರ್ಥವಿವರಣೆ ಮಾಡುವವನಾಗಿ ಮತ್ತು ಒಬ್ಬ ಮಧ್ಯಸ್ಥಗಾರನಾಗಿ ಆತನು ರೋಮನರ ಸೇವೆಮಾಡಿದನು. ವೆಸ್ಪೇಜಿಯನ್ ಮತ್ತು ಟೈಟಸ್ ಹಾಗೂ ಡೊಮಿಶನ್ ಎಂಬ ಗಂಡು ಮಕ್ಕಳ ಬೆಂಬಲವನ್ನು ವ್ಯಕ್ತಪಡಿಸುತ್ತಾ, ಜೋಸೀಫಸನು ಆ ಕುಟುಂಬದ ಫ್ಲೇವಿಯಸ್ ಎಂಬ ಹೆಸರನ್ನು ತನ್ನ ಹೆಸರಿಗೆ ಕೂಡಿಸಿಕೊಂಡನು.
ಫ್ಲೇವಿಯಸ್ ಜೋಸೀಫಸನ ಗ್ರಂಥಗಳು
ಜೋಸೀಫಸನ ಅತ್ಯಂತ ಪ್ರಾಚೀನ ಬರಹಗಳಿಗೆ ದ ಜ್ಯೂವಿಶ್ ವಾರ್ ಎಂದು ಹೆಸರಿಡಲಾಗಿದೆ. ಯೆಹೂದ್ಯರಿಗೆ ಪರಿಚಯಿಸಲಿಕ್ಕಾಗಿ, ರೋಮಿನ ಉತ್ಕೃಷ್ಟ ಬಲದ ಕುರಿತು ಮತ್ತು ಭವಿಷ್ಯತ್ತಿನ ದಂಗೆಗಳ ವಿರುದ್ಧ ತಡೆಯೊಂದನ್ನು ಒದಗಿಸಲಿಕ್ಕಾಗಿ, ರೇಖಾಚಿತ್ರಗಳ ವರ್ಣನೆಯೊಂದಿಗೆ ಈ ಏಳು-ಸಂಪುಟಗಳ ದಾಖಲೆಯನ್ನು ಆತನು ತಯಾರಿಸಿದ್ದಾನೆಂದು ನಂಬಲಾಗುತ್ತದೆ. ಆ್ಯಂಟಿಯೊಕಸ್ ಇಪಿಫೆನೀಸನಿಂದ (ಸಾ.ಶ.ಪೂ. ಎರಡನೆಯ ಶತಮಾನದಲ್ಲಿ) ಯೆರೂಸಲೇಮಿನ ಅಕ್ರಮಣದಿಂದಾರಂಭಿಸಿ, ಸಾ.ಶ. 67ರ ಪ್ರಕ್ಷುಬ್ಧ ಕಲಹದ ವರೆಗಿನ ಯೆಹೂದಿ ಇತಿಹಾಸವನ್ನು ಈ ಬರಹಗಳು ಸೂಕ್ಷವಾಗಿ ಪರಿಶೋಧಿಸುತ್ತವೆ. ತದನಂತರ ಪ್ರತ್ಯಕ್ಷ ಸಾಕ್ಷಿಯೋಪಾದಿ, ಜೋಸೀಫಸನು ಸಾ.ಶ. 73 ರಲ್ಲಿ ಪರಾಕಾಷ್ಠೆಗೆ ತಲಪಿದ ಯುದ್ಧವನ್ನು ಚರ್ಚಿಸುತ್ತಾನೆ.
ದ ಜ್ಯೂವಿಶ್ ಆ್ಯನಿಕ್ಟಿಟ್ವೀಸ್—ಯೆಹೂದ್ಯರ ಕುರಿತಾದ 20 ಸಂಪುಟದ ಇತಿಹಾಸ—ಜೋಸೀಫಸನ ಕೆಲಸಗಳಲ್ಲಿ ಇನ್ನೊಂದಾಗಿತ್ತು. ಅದು ಆದಿಕಾಂಡ ಮತ್ತು ಸೃಷ್ಟಿಯೊಂದಿಗೆ ಆರಂಭಿಸಿ, ರೋಮಿನೊಂದಿಗೆ ಯುದ್ಧದ ತಲೆದೋರುವಿಕೆಯ ವರೆಗೆ ಮುಂದುವರಿಯುತ್ತದೆ. ಸಾಂಪ್ರದಾಯಿಕ ಅರ್ಥವಿವರಣೆಗಳು ಮತ್ತು ಬಾಹ್ಯ ಅವಲೋಕನಗಳನ್ನು ಕೂಡಿಸುವ ಮೂಲಕ, ಜೋಸೀಫಸನು ಬೈಬಲ್ ಕಥನದ ಅನುಕ್ರಮವನ್ನು ನಿಕಟವಾಗಿ ಅನುಸರಿಸಿದ್ದಾನೆ.
ಕೇವಲ ಲೈಫ್ ಎಂದು ಹೆಸರಿಸಲ್ಪಟಿರುವ ವೈಯಕ್ತಿಕ ಕಥನವೊಂದನ್ನು ಜೋಸೀಫಸನು ಬರೆದನು. ಅದರಲ್ಲಿ ಆತನು ಯುದ್ಧದ ಸಮಯದ ತನ್ನ ನಿಲುವನ್ನು ಸಮರ್ಥಿಸಲು ಪ್ರಯತ್ನಿಸುತ್ತಾನೆ ಮತ್ತು ತಿಬೇರಿಯದ ಜಸಸ್ಟ್ನಿಂದ ತನ್ನ ವಿರುದ್ಧವಾಗಿ ತರಲ್ಪಟ್ಟ ಆಪಾದನೆಗಳನ್ನು ಉಪಶಮನಗೊಳಿಸಲು ಯತ್ನಿಸುತ್ತಾನೆ. ನಾಲ್ಕನೆಯ ಗ್ರಂಥವಾದ—ಅಗೇನ್ಸ್ಟ್ ಏಪಿಯಾನ್ ಎಂಬ ಹೆಸರಿನ ಎರಡು ಸಂಪುಟಗಳ ಸಮರ್ಥನೆಯು—ತಪ್ಪು ನಿರೂಪಣೆಗಳ ವಿರುದ್ಧ ಯೆಹೂದ್ಯರನ್ನು ಸಮರ್ಥಿಸುತ್ತದೆ.
ದೇವರ ವಾಕ್ಯದೊಳಗೆ ಒಳನೋಟ
ಜೋಸೀಫಸನ ಇತಿಹಾಸದ ಅಧಿಕಾಂಶ ಭಾಗವು ನಿಷ್ಕೃಷ್ಟವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಅಗೇನ್ಸ್ಟ್ ಏಪಿಯಾನ್ ಎಂಬ ತನ್ನ ಕೃತಿಯಲ್ಲಿ, ಯೆಹೂದ್ಯರು ಅಪಾಕ್ರಿಫ ಅವಿಶ್ವಾಸನೀಯ ಪುಸ್ತಕಗಳನ್ನು ಪ್ರೇರಿತ ಶಾಸ್ತ್ರಗಳ ಭಾಗದೋಪಾದಿ ಎಂದಿಗೂ ಒಳಗೂಡಿಸಲಿಲ್ಲವೆಂದು ಆತನು ತೋರಿಸುತ್ತಾನೆ. ದೈವಿಕ ಬರಹಗಳ ಆಂತರಿಕ ಹೊಂದಿಕೆ ಮತ್ತು ನಿಷ್ಕೃಷ್ಟತೆಗೆ ಆತನು ಪುರಾವೆಯನ್ನೊದಗಿಸುತ್ತಾನೆ. “ಒಂದಕ್ಕೊಂದು ಅಸಮ್ಮತಿಸುವ ಮತ್ತು ಪರಸ್ಪರ ವಿರುದ್ಧವಾದ, ಅಸಂಖ್ಯಾತ ಪುಸ್ತಕಗಳು ನಮ್ಮಲ್ಲಿ ಇಲ್ಲ, . . . ಆದರೆ ಗತಕಾಲದ ದಾಖಲೆಗಳನ್ನು ಹೊಂದಿರುವ, ಮತ್ತು ದೈವಿಕವಾದವುಗಳೆಂದು ಸಂಪೂರ್ಣವಾಗಿ ನಂಬಲ್ಪಟ್ಟಿರುವ ಕೇವಲ ಇಪ್ಪತ್ತೆರಡು ಪುಸ್ತಕಗಳು [39 ಪುಸ್ತಕಗಳ ನಮ್ಮ ಆಧುನಿಕ ವಿಭಜನೆಗೆ ಇದು ಸಮಾನ], ನಮ್ಮಲ್ಲಿವೆ” ಎಂದು ಜೋಸೀಫಸನು ಹೇಳುತ್ತಾನೆ.
ದ ಜ್ಯೂವಿಶ್ ಆ್ಯನಿಕ್ಟಿಟ್ವೀಸ್ ನಲ್ಲಿ, ಜೋಸೀಫಸನು ಬೈಬಲಿನ ದಾಖಲೆಗೆ ಆಸಕ್ತಿಕರವಾದ ವಿವರಣೆಯನ್ನು ಕೂಡಿಸುತ್ತಾನೆ. ಅಬ್ರಹಾಮನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಬಿಗಿದು ಯಜ್ಞವಾಗಿ ಅರ್ಪಿಸಲು ಸನ್ನದ್ಧನಾದಾಗ “ಇಸಾಕನು ಇಪ್ಪತ್ತೈದು ವರ್ಷ ಪ್ರಾಯದವನಾಗಿದ್ದನು.” ಜೋಸೀಫಸನಿಗನುಸಾರ, ಯಜ್ಞ ವೇದಿಯನ್ನು ಕಟ್ಟುವ ಕಾರ್ಯದಲ್ಲಿ ಸಹಾಯ ಮಾಡಿದ ಅನಂತರ, ಇಸಾಕನು ಹೇಳಿದ್ದೇನಂದರೆ “‘ತನ್ನ ತಂದೆಯ ಮತ್ತು ದೇವರ ದೃಢ ಸಂಕಲ್ಪವನ್ನು ತಾನು ತಿರಸ್ಕರಿಸಬೇಕಾದರೆ, ಜೇಷ್ಠ ಪುತ್ರನಾಗಿ ಜನಿಸಲು ತಾನು ಯೋಗ್ಯನಲ್ಲ’ . . . ಆದುದರಿಂದ ಅರ್ಪಿಸಲ್ಪಡಲು ಆತನು ಕೂಡಲೆ ಯಜ್ಞ ವೇದಿಯ ಬಳಿಗೆ ಹೋದನು” ಎಂದು ಆತನು ಹೇಳುತ್ತಾನೆ.
ಪುರಾತನ ಐಗುಪ್ತದಿಂದ ಇಸ್ರಾಯೇಲ್ಯರ ಹೊರಡುವಿಕೆಯ ಶಾಸ್ತ್ರೀಯ ದಾಖಲೆಗೆ, ಈ ವಿವರಣೆಗಳನ್ನು ಜೋಸೀಫಸನು ಕೂಡಿಸುತ್ತಾನೆ: “ಆರುನೂರು ರಥಗಳೂ, ಅವುಗಳೊಂದಿಗೆ ಐವತ್ತು ಸಾವಿರ ರಾಹುತರೂ, ಮತ್ತು ಶಸ್ತ್ರಸಜ್ಜಿತರಾದ ಎರಡು ಲಕ್ಷ ಕಾಲಾಳುಗಳೂ, ಇಸ್ರಾಯೇಲ್ಯರನ್ನು ಬೆನ್ನಟ್ಟಿದ್ದರು.” ಜೋಸೀಫಸನು ಇನ್ನೂ ಹೇಳಿದ್ದೇನಂದರೆ “ಸಮುವೇಲನು ಹನ್ನೆರಡು ವರ್ಷ ಪ್ರಾಯದವನಾಗಿದ್ದಾಗ ಪ್ರವಾದಿಸಲು ಆರಂಭಿಸಿದನು: ಮತ್ತು ಒಮ್ಮೆ ಆತನು ಮಲಗಿದ್ದಾಗ, ದೇವರು ಆತನನ್ನು ಅವನ ಹೆಸರಿನಿಂದ ಕರೆದನು.”—ಹೋಲಿಸಿ 1 ಸಮುವೇಲ 3:2-21.
ಜೋಸೀಫಸನ ಇತರ ಬರಹಗಳು ತೆರಿಗೆಗಳು, ನಿಯಮ ಶಾಸ್ತ್ರಗಳು, ಮತ್ತು ಘಟನೆಗಳ ಒಳನೋಟವನ್ನು ಒದಗಿಸುತ್ತವೆ. ಹೆರೋದನು ಏರ್ಪಡಿಸಿದ ಔತಣದ ಸಮಯದಲ್ಲಿ ನಾಟ್ಯವಾಡಿದ ಮತ್ತು ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೊಂಡ ಸ್ತ್ರೀಯನ್ನು ಅವನು ಸಲೋಮಿಯೆಂದು ಹೆಸರಿಸಿದ್ದಾನೆ. (ಮಾರ್ಕ 6:17-26) ನಾವು ಹೆರೋದನ ಕುರಿತು ತಿಳಿದಂತಹ ಅಧಿಕಾಂಶ ವಿಚಾರವು ಜೋಸೀಫಸನಿಂದ ದಾಖಲಿಸಲ್ಪಟ್ಟಿತ್ತು. “ತನ್ನ ಭಾರಿ ಪ್ರಾಯವನ್ನು ಮುಚ್ಚಲಿಕ್ಕಾಗಿ, [ಹೆರೋದ] ತನ್ನ ಕೂದಲಿಗೆ ಕಪ್ಪು ಬಣ್ಣ ಲೇಪಿಸಿದನು” ಎಂಬುದಾಗಿ ಸಹ ಅವನು ಹೇಳುತ್ತಾನೆ.
ರೋಮನರ ವಿರುದ್ಧ ಮಹಾ ಕ್ರಾಂತಿ
ಯೆರೂಸಲೇಮ್ ಮತ್ತು ಅದರ ಆಲಯಕ್ಕೆ ಸಂಬಂಧಿಸಿದ ತನ್ನ ಪ್ರವಾದನೆಯನ್ನು ಯೇಸು ಕೊಟ್ಟು 33 ವರ್ಷಗಳ ಬಳಿಕ, ಪ್ರವಾದನೆಯ ನೆರವೇರಿಕೆಯು ವಿಸ್ತರಿಸಲಾರಂಭಿಸಿತು. ಯೆರೂಸಲೇಮಿನಲ್ಲಿರುವ ತೀವ್ರಗಾಮಿ ಯೆಹೂದಿ ಪಂಗಡಗಳು ರೋಮನ್ ನೊಗವನ್ನು ತೆಗೆದುಹಾಕಲು ಪಟ್ಟುಹಿಡಿದಿದ್ದವು. ಸಾ.ಶ. 66 ರಲ್ಲಿ, ಇದರ ವಾರ್ತೆಯು ಸಿರಿಯನ್ ರಾಜ್ಯಪಾಲ ಸೆಸೀಯ್ಟಸ್ ಗ್ಯಾಲಸನ ನಾಯಕತ್ವದ ಕೆಳಗೆ ರೋಮನ್ ಸೈನ್ಯದಳಗಳ ಸಜ್ಜುಗೊಳಿಸುವಿಕೆ ಮತ್ತು ಕ್ಷಿಪ್ರನಿರ್ವಹಣೆಯನ್ನು ಪ್ರಚೋದಿಸಿತು. ದಂಗೆಯನ್ನು ಅಡಗಿಸುವುದು ಮತ್ತು ಅಪರಾಧಿಗಳನ್ನು ಶಿಕ್ಷಿಸುವುದು ಅವರ ಧ್ಯೇಯವಾಗಿತ್ತು. ಯೆರೂಸಲೇಮಿನ ಹೊರವಲಯಗಳಲ್ಲಿ ಧ್ವಂಸ ಮಾಡಿದ ಅನಂತರ, ಸೇಸಿಯ್ಟಸನ ಜನರು ಕೋಟೆಯಿಂದ ಆವರಿಸಲ್ಪಟ್ಟ ಪಟ್ಟಣದ ಸುತ್ತಲೂ ಪಾಳೆಯ ಹಾಕಿದರು. ವೈರಿಗಳಿಂದ ರಕ್ಷಣೆ ಪಡೆಯಲಿಕ್ಕಾಗಿ—ಟೆಸ್ಟ್ಯೂಡೊ ಎಂದು ಕರೆಯಲ್ಪಡುವ ವಿಧಾನವನ್ನುಪಯೋಗಿಸಿ—ರೋಮನರು ತಮ್ಮ ಗುರಾಣಿಗಳನ್ನು ಆಮೆಯ ಬೆನ್ನಿನಂತೆ ಸಫಲವಾಗಿ ಸಂಯೋಜಿಸಿದರು. ಈ ವಿಧಾನದ ಸಾಫಲ್ಯವನ್ನು ದೃಢೀಕರಿಸುತ್ತಾ, ಜೋಸೀಫಸನು ಹೇಳುವುದು: “ಎಸೆಯಲ್ಪಟ್ಟ ಈಟಿಗಳು ಬಿದ್ದವು, ಮತ್ತು ಅವರಿಗೆ ಯಾವುದೇ ಹಾನಿಯನ್ನುಂಟುಮಾಡದೆ ಸರಿದುಹೋದವು; ಆದುದರಿಂದ ತಮಗೆ ಯಾವುದೇ ಹಾನಿಯಿಲ್ಲದೆ, ಸೈನಿಕರು ಕೋಟೆಯನ್ನು ಶಿಥಿಲಗೊಳಿಸಿದರು, ಮತ್ತು ದೇವಾಲಯದ ಹೆಬ್ಬಾಗಿಲಿಗೆ ಬೆಂಕಿ ಹೊತ್ತಿಸಲು ಬೇಕಾದ ಸಾಮಗ್ರಿಗಳನ್ನು ಸಿದ್ಧವಾಗಿರಿಸಿಕೊಂಡರು.”
“ಅನಂತರ ಸಂಭವಿಸಿದ್ದೇನಂದರೆ,” ಜೋಸೀಫಸನು ಹೇಳುವುದು, “ಆ ಸೆಸೀಯ್ಟಸನು . . . ತನ್ನ ಸೈನಿಕರನ್ನು ಆ ಸ್ಥಳದಿಂದ ಹಿಂದಕ್ಕೆ ಕರೆದನು . . . ಯಾವುದೇ ಕಾರಣವಿಲ್ಲದೆ, ಆತನು ಪಟ್ಟಣವನ್ನು ಬಿಟ್ಟು ಹೊರಟುಹೋದನು.” ದೇವರ ಕುಮಾರನನ್ನು ಘನತೆಗೇರಿಸಲು ಉದ್ದೇಶಿಸದೆ, ಜೋಸೀಫಸನು ಯೆರೂಸಲೇಮಿನಲ್ಲಿದ್ದ ಕ್ರೈಸ್ತರು ನಿರೀಕ್ಷಿಸುತ್ತಿದ್ದಂತಹದ್ದೇ ಕೃತ್ಯವನ್ನು ದಾಖಲಿಸಿದ್ದಾನೆಂಬುದು ಸ್ಪಷ್ಟ. ಯೇಸು ಕ್ರಿಸ್ತನ ಪ್ರವಾದನೆಯ ನೆರವೇರಿಕೆಯು ಅದಾಗಿತ್ತು! ಅನೇಕ ವರ್ಷಗಳಿಗೆ ಮೊದಲೇ, ದೇವರ ಕುಮಾರನು ಎಚ್ಚರಿಸಿದ್ದನು: “ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. ಯಾಕಂದರೆ ಬರೆದಿರುವದೆಲ್ಲಾ ನೆರವೇರುವದಕ್ಕಾಗಿ ಅವು ದಂಡನೆಯ ದಿವಸಗಳಾಗಿವೆ.” (ಲೂಕ 21:20-22) ಯೇಸು ಬೋಧಿಸಿದಂತೆ, ಆತನ ನಂಬಿಗಸ್ತ ಹಿಂಬಾಲಕರು ಕೂಡಲೆ ಪಟ್ಟಣವನ್ನು ಬಿಟ್ಟು ಓಡಿಹೋದರು, ದೂರ ನೆಲೆಸಿದರು, ಮತ್ತು ಅನಂತರ ಅದಕ್ಕೆ ಸಂಭವಿಸಲಿದ್ದ ಸಂಕಟದಿಂದ ರಕ್ಷಿಸಲ್ಪಟ್ಟರು.
ಸಾ.ಶ. 70 ರಲ್ಲಿ ರೋಮನ್ ಸೈನ್ಯಗಳು ಹಿಂದಿರುಗಿದಾಗ, ಆದ ಪರಿಣಾಮಗಳು ಜೋಸೀಫಸನಿಂದ ಸಜೀವವಾಗಿ ತೋರುವ ವರ್ಣನೆಯಿಂದ ದಾಖಲಿಸಲ್ಪಟ್ಟಿವೆ. ವೆಸ್ಪೇಜಿಯನನ ಹಿರಿಯ ಮಗನಾದ ಜನರಲ್ ಟೈಟಸನು, ಮಹಾ ವೈಭವದ ದೇವಾಲಯವಿದ್ದ ಯೆರೂಸಲೇಮನ್ನು ವಶಪಡಿಸಿಕೊಳ್ಳಲು ಬಂದನು. ಪಟ್ಟಣದೊಳಗೆ, ಕಾದಾಡುತ್ತಿದ್ದ ಪಕ್ಷಗಳು ಹತೋಟಿಯನ್ನು ತೆಗೆದುಕೊಳ್ಳಲು ಯತ್ನಿಸಿದವು. ಹೆಚ್ಚು ರಕ್ತವು ಸುರಿಸಲ್ಪಟ್ಟಿತು. ಕೆಲವರು “ತಮ್ಮ ಸ್ವದೇಶದ ಕ್ಲೇಶಗಳಿಂದ ಬಿಡುಗಡೆಗಾಗಿ” ನಿರೀಕ್ಷಿಸುತ್ತಾ, “ತಮ್ಮ ಆಂತರಿಕ ವಿಪತ್ತುಗಳ ಕಾರಣದಿಂದ ಎಷ್ಟೊಂದು ಬಾಧೆಪಟ್ಟರೆಂದರೆ, ರೋಮನರು ಆಕ್ರಮಣ ಮಾಡುವಂತೆ ಅವರು ಬಯಸಿದರು,” ಎಂದು ಜೋಸೀಫಸನು ಹೇಳುತ್ತಾನೆ. ಅವನು ದಂಗೆಕೋರರನ್ನು, ಧನಿಕರ ಸ್ವತ್ತನ್ನು ನಾಶಮಾಡಿ ಗಣ್ಯ ಪುರುಷರನ್ನು—ರೋಮನರೊಂದಿಗೆ ಸಂಧಾನವನ್ನು ಇಷ್ಟಪಡುವವರೆಂದು ಸಂಶಯಿಸಲ್ಪಟ್ಟವರನ್ನು—ಕೊಲ್ಲುತ್ತಿದ್ದವರನ್ನು “ದರೋಡೆಕೋರರು” ಎಂದು ಕರೆಯುತ್ತಾನೆ.
ಆಂತರಿಕ ಯುದ್ಧದ ಸಂದರ್ಭದಲ್ಲಿ, ಯೆರೂಸಲೇಮಿನಲ್ಲಿ ಜೀವನ ಸ್ಥಿತಿಯು ಊಹಿಸಲಸಾಧ್ಯವಾದ ಆಳಗಳಿಗೆ ಇಳಿಯಿತು, ಮತ್ತು ಸತ್ತವರ ಶವಗಳು ಸಮಾಧಿಮಾಡಲ್ಪಡದೇ ಉಳಿದವು. ರಾಜದ್ರೋಹಿಗಳು ತಮ್ಮಲ್ಲೇ “ಒಂದರ ಮೇಲೊಂದು ರಾಶಿಯಂತೆ ಬಿದ್ದಿರುವ ಶವಗಳ ಮೇಲೆ ತುಳಿದಾಡುತ್ತಾ, ಒಬ್ಬರ ವಿರುದ್ಧವಾಗಿ ಒಬ್ಬರು ಹೋರಾಟ ನಡೆಸಿದರು.” ಅವರು ಸಾಮಾನ್ಯರನ್ನು ಸೂರೆಮಾಡಿ, ಆಹಾರ ಮತ್ತು ಐಶ್ವರ್ಯಕ್ಕಾಗಿ ಕೊಲೆಗಳನ್ನು ಮಾಡಿದರು. ಸಂಕಟಕ್ಕೊಳಗಾದವರ ಬೊಬ್ಬೆಯು ಸಂತತವಾಗಿ ಮುಂದುವರಿದಿತ್ತು.
ಪಟ್ಟಣವನ್ನು ಒಪ್ಪಿಸುವಂತೆ ಮತ್ತು ಹೀಗೆ ತಮ್ಮನ್ನು ರಕ್ಷಿಸಿಕೊಳ್ಳುವಂತೆ ಟೈಟಸನು ಯೆಹೂದ್ಯರನ್ನು ಎಚ್ಚರಿಸಿದನು. ಆತನು “ಅವರ ಸ್ವಂತ ಭಾಷೆಯಲ್ಲಿ ಅವರೊಂದಿಗೆ ಮಾತಾಡಲಿಕ್ಕಾಗಿ ಜೋಸೀಫಸನನ್ನು ಕಳುಹಿಸಿದನು; ಯಾಕೆಂದರೆ ತಮ್ಮ ಸ್ವದೇಶದವನೊಬ್ಬನ ಒತ್ತಾಯಕ್ಕೆ ಅವರು ಮಣಿಯುವರೆಂದು ಆತನು ಊಹಿಸಿದನು.” ಆದರೆ ಜೋಸೀಫಸನನ್ನು ಅವರು ನಿಂದಿಸಿದರು. ತದನಂತರ ಟೈಟಸನು ಇಡೀ ಪಟ್ಟಣದ ಸುತ್ತಲೂ ಚೂಪಾದ ತುದಿಯುಳ್ಳ ಕಂಬಗಳ ಗೋಡೆಯೊಂದನ್ನು ನಿರ್ಮಿಸಿದನು. (ಲೂಕ 19:43) ಪಾರಾಗುವಿಕೆಯ ನಿರೀಕ್ಷೆಗಳೆಲ್ಲವೂ ಅಂತ್ಯಗೊಳಿಸಲ್ಪಟ್ಟಾಗ ಮತ್ತು ಚಲನೆಯು ನಿರ್ಬಂಧಿಸಲ್ಪಟ್ಟಾಗ, ಬರಗಾಲವು “ಇಡೀ ಮನೆಗಳನ್ನು ಮತ್ತು ಕುಟುಂಬಗಳನ್ನು ನುಂಗಿತು.” ಸಂತತವಾದ ಯುದ್ಧವು ಮರಣ ನಷ್ಟಕ್ಕೆ ಕೂಡಿಸಿತು. ಅಜ್ಞಾತನಾಗಿ ಬೈಬಲ್ ಪ್ರವಾದನೆಗಳನ್ನು ನೆರವೇರಿಸುತ್ತಾ, ಟೈಟಸನು ಯೆರೂಸಲೇಮನ್ನು ವಶಪಡಿಸಿಕೊಂಡನು. ತದನಂತರ, ಅದರ ಸ್ಥೂಲವಾದ ಕೋಟೆಗಳನ್ನು ಮತ್ತು ಭದ್ರವಾದ ಬುರುಜುಗಳನ್ನು ಗಮನಿಸುತ್ತಾ, ಆತನು ಉದ್ಗರಿಸಿದ್ದು: “ಈ ಭದ್ರವಾದ ಬುರುಜುಗಳಿಂದ ಯೆಹೂದ್ಯರನ್ನು ಹೊರಡಿಸಿದ್ದು ದೇವರಲ್ಲದೆ ಮತ್ತಾರೂ ಅಲ್ಲ.” ಹತ್ತು ಲಕ್ಷಕ್ಕಿಂತಲೂ ಹೆಚ್ಚು ಯೆಹೂದ್ಯರು ಸತ್ತರು.—ಲೂಕ 21:5, 6, 23, 24.
ಯುದ್ಧಾನಂತರ
ಯುದ್ಧಾನಂತರ ಜೋಸೀಫಸನು ರೋಮಿಗೆ ಹೋದನು. ಫ್ಲೇವಿಯನ್ನರ ಹೊಣೆಗಾರಿಕೆಯನ್ನು ಅನುಭವಿಸುತ್ತಾ, ವೆಸ್ಪೇಜಿಯನನ ಹಿಂದಿನ ಭವನದಲ್ಲಿ, ಒಬ್ಬ ರೋಮನ್ ನಾಗರಿಕನಾಗಿ ಆತನು ಜೀವಿಸಿದನು ಮತ್ತು ಟೈಟಸನ ಕೊಡುಗೆಗಳೊಂದಿಗೆ ಚಕ್ರಾಧಿಪತ್ಯದ ವೇತನವನ್ನು ಪಡೆದನು. ತದನಂತರ ಜೋಸೀಫಸನು ಸಾಹಿತ್ಯಾತ್ಮಕವಾದ ಜೀವನಪಥವನ್ನು ಅನುಸರಿಸಿದನು.
ಜೋಸೀಫಸನು “ದೇವಪ್ರಭುತ್ವ” ಎಂಬ ಪದವನ್ನು ಕಲ್ಪಿಸಿದ ಸ್ಪಷ್ಟತೆಯನ್ನು ಗಮನಿಸುವುದು ಆಸಕ್ತಿಕರವಾದದ್ದಾಗಿದೆ. ಯೆಹೂದಿ ಜನಾಂಗದ ಕುರಿತು, ಆತನು ಬರೆದದ್ದು: “ನಮ್ಮ ಸರಕಾರ . . . ಅಧಿಕಾರ ಮತ್ತು ಶಕ್ತಿಯನ್ನು ದೇವರಿಗೆ ಹೊಣೆಮಾಡುವ ಮೂಲಕ, ಬಹುಶಃ ಒಂದು ದೇವಪ್ರಭುತ್ವವೆಂದು ಕರೆಯಲ್ಪಡಬಹುದು.”
ಜೋಸೀಫಸನು ಒಬ್ಬ ಕ್ರೈಸ್ತನೆಂದು ಎಂದೂ ಹೇಳಿಕೊಂಡದ್ದಿಲ್ಲ. ದೇವರ ಪ್ರೇರಣೆಗೊಳಗಾಗಿ ಆತನು ಬರೆಯಲಿಲ್ಲ. ಆದರೂ, ಜೋಸೀಫಸನ ಮುಗ್ಧಗೊಳಿಸುವ ವೃತ್ತಾಂತಗಳಲ್ಲಿ ಪ್ರಜ್ಞಾಪೂರ್ವಕವಾದ ಜ್ಞಾನೋದಯವನ್ನುಂಟುಮಾಡುವ ಐತಿಹಾಸಿಕ ಮೌಲ್ಯವಿದೆ.
[ಪುಟ 31 ರಲ್ಲಿರುವ ಚಿತ್ರ]
ಜೋಸೀಫಸನು ಯೆರೂಸಲೇಮಿನ ಗೋಡೆಗಳ ಬಳಿಯಲ್ಲಿ