ಯೇಸುವಿನ ಜೀವನ ಮತ್ತು ಶುಶ್ರೂಷೆ
ದೆವ್ವ-ಹಿಡಿದಿದ್ದ ಹುಡುಗ ವಾಸಿಯಾಗುತ್ತಾನೆ
ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನರು, ಪ್ರಾಯಶಃ ಹರ್ಮೋನ್ ಬೆಟ್ಟ ಸಂಚಾರಕ್ಕೆ ಹೋಗಿದ್ದಾಗ, ಬೇರೆ ಶಿಷ್ಯರು ಒಂದು ಸಮಸ್ಯೆಗೆ ಈಡಾಗುತ್ತಾರೆ. ಹಿಂದೆ ಬಂದಾಗ ಯೇಸು ಕೂಡಲೇ ಏನೋ ಪ್ರಮಾದ ನಡೆದಿದೆ ಎಂದು ಕಾಣುತ್ತಾನೆ. ಅವನ ಶಿಷ್ಯರ ಸುತ್ತಲೂ ಒಂದು ಗುಂಪು ನೆರೆದಿದೆ, ಮತ್ತು ಶಾಸ್ತ್ರಿಗಳು ಅವರೊಂದಿಗೆ ವಾದಿಸುತ್ತಿದ್ದರು. ಜನರು ಯೇಸುವನ್ನು ಕಂಡಾಗ ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿಬಂದು ಅವನನ್ನು ವಂದಿಸುತ್ತಾರೆ. “ಇವರ ಸಂಗಡ ಏನು ತರ್ಕ ಮಾಡುತ್ತೀರಿ?” ಎನ್ನುತ್ತಾನೆ ಯೇಸು.
ಜನರ ಗುಂಪಿನಿಂದ ಮುಂದೆಬರುತ್ತಾ ಒಬ್ಬ ಮನುಷ್ಯನು ಯೇಸುವಿಗೆ ಅಡಬ್ಡಿದ್ದು, ವಿವರಿಸಿದ್ದು: “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರಕೊಂಡು ಬಂದೆನು. ಅವನಿಗೊಂದು ಮೂಗ ದೆವ್ವ ಹಿಡಿದದೆ. ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ಕೆಡವುತ್ತದೆ, ಆಗ ಅವನು ನೊರೆ ಸುರಿಸುತ್ತಾ ಕರಕರನೇ ಹಲ್ಲು ಕಡಿಯುತ್ತಾ ಕುಂದಿಹೋಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಕೇಳಿಕೊಂಡೆ. ಅವರ ಕೈಯಿಂದ ಆಗದೆ ಹೋಯಿತು.”
ಹುಡುಗನನ್ನು ವಾಸಿಮಾಡುವುದಕ್ಕೆ ಶಿಷ್ಯರಿಂದ ಆಗದೆ ಹೋದದನ್ನು ಶಾಸ್ತ್ರಿಗಳು ದುರುಪಯೋಗ ಮಾಡ ಬಯಸಿ, ಪ್ರಾಯಶಃ ಅವರ ಪ್ರಯತ್ನಗಳನ್ನು ನಿಂದಿಸುತ್ತಿದ್ದಿರಬೇಕು. ಆ ಸಂದಿಗ್ಧ ಸಮಯದಲ್ಲೀ, ಯೇಸು ಆಗಮಿಸುತ್ತಾನೆ. “ಎಲಾ, ನಂಬಿಕೆ ಇಲ್ಲದಂಥಾ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ?” ಎನ್ನುತ್ತಾನೆ ಆತ.
ಯೇಸು ತನ್ನ ಈ ಹೇಳಿಕೆಯನ್ನು ಹಾಜರಿದ್ದ ಪ್ರತಿಯೊಬ್ಬನಿಗೆ ಉದ್ದೇಶಿಸಿ ನುಡಿದಂತೆ ಕಾಣುತ್ತದೆ, ವಿಶಿಷ್ಟವಾಗಿ ಶಾಸ್ತ್ರಿಗಳಿಗೆ ಸಂಭೋದಿಸಿ ನುಡಿದಿರಬೇಕು ಯಾಕಂದರೆ ಅವರು ಅವನ ಶಿಷ್ಯರಿಗೆ ತೊಂದರೆ ಕೊಡುತ್ತಾ ಇದ್ದರು. ಅನಂತರ ಯೇಸು, ಆ ಹುಡುಗನನ್ನು “ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅನ್ನುತ್ತಾನೆ. ಹುಡುಗನು ಯೇಸುವಿನ ಬಳಿಗೆ ಬಂದೊಡನೇ, ಅವನನ್ನು ಹಿಡಿದಿದ್ದ ದೆವ್ವವು ಅವನನ್ನು ನೆಲಕ್ಕೆ ಉರುಳಿಸಿ ಹಾಕಿ ಉಗ್ರವಾಗಿ ಒದ್ದಾಡಿಸಿತು. ಹುಡುಗನು ನೆಲದಮೇಲೆ ಹೊರಳಾಡುತ್ತಾ ನೊರೆ ಸುರಿಸುತ್ತಾನೆ.
“ಇದು ಇವನಿಗೆ ಬಂದು ಎಷ್ಟು ದಿನವಾಯಿತು?” ಎಂದು ಕೇಳುತ್ತಾನೆ ಯೇಸು.
“ಚಿಕ್ಕಂದಿನಲ್ಲಿಯೇ ಬಂದಿದೆ” ಎಂದು ಹೇಳುತ್ತಾನೆ ಅವನ ತಂದೆ. “ಇವನನ್ನು ಕೊಲ್ಲಬೇಕೆಂದು ಆಗಾಗ್ಯೆ [ದೆವ್ವವು] ಅವನನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು.” ಅನಂತರ ತಂದೆಯು ಬೇಡುತ್ತಾ, ಅನ್ನುವುದು: “ನಿನ್ನ ಕೈಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯ ಮಾಡು.”
ಪ್ರಾಯಶಃ ತಂದೆಯು ಹಲವಾರು ವರ್ಷಗಳಿಂದ ಸಹಾಯವನ್ನು ಹುಡುಕುತ್ತಿದ್ದಿರಬಹುದು. ಮತ್ತು ಈಗ ಶಿಷ್ಯರ ವೈಫಲ್ಯದಿಂದಾಗಿ ಅವನ ಹತಾಶೆಯು ಇನ್ನೂ ಹೆಚ್ಚಿತು. ಆ ಮನುಷ್ಯನ ಆಶಾಭಂಗದ ವಿನಂತಿಯನ್ನು ಕೇಳಿದಾಗ ಯೇಸು, ಪ್ರೋತ್ಸಾಹಿಸುತ್ತಾ ಅನ್ನುವುದು: “ನಿನ್ನ ಕೈಲಿ ಆಗುವ ಹಾಗಿದ್ದರೆ ಅನ್ನುತ್ತಿಯಾ? ನಂಬುವವನಿಗೆ ಎಲ್ಲಾ ಆಗುವದು.”
ಕೂಡಲೇ ಆ ಹುಡುಗನ ತಂದೆ, “ನಂಬುತ್ತೇನೆ” ಎಂದು ಕೂಗಿ ಹೇಳುತ್ತಾನೆ. ಆದರೆ ಅವನು ಬೇಡುವುದು: “ನನಗೆ ನಂಬಿಕೆ ಕಡಿಮೆಯಾಗಿದ್ದರೂ ಸಹಾಯ ಮಾಡು.”
ಜನರ ಗುಂಪು ತಮ್ಮ ಕಡೆಗೆ ಓಡಿಬರುವುದನ್ನು ಕಂಡು ಯೇಸು, ಆ ದೆವವ್ವನ್ನು ಗದರಿಸುತ್ತಾ “ಎಲೇ, ಕಿವುಡಾದ ಮೂಗ ದೆವ್ವವೇ, ಇವನನ್ನು ಬಿಟ್ಟು ಹೋಗು. ಇನ್ನು ಮುಂದೆ ಹಿಡಿಯ ಬೇಡವೆಂದು ನಾನು ನಿನಗೆ ಅಪ್ಪಣೆ ಕೊಡುತ್ತೇನೆ.” ಆ ದೆವ್ವವು ಬಿಟ್ಟುಹೋಗುವಾಗ ಆ ಹುಡುಗನನ್ನು ಪುನಃ ಬಹಳವಾಗಿ ಒದ್ದಾಡಿಸಿದರ್ದಿಂದ ಅವನು ಸತ್ತವರ ಹಾಗೆ ಬಿದ್ದನು. ಬಹು ಜನರು “ಸತ್ತುಹೋದ” ಅಂದರು. ಆದರೆ ಯೇಸು ಅವನ ಕೈ ಹಿಡಿದು ಎಬ್ಬಿಸಲು ಅವನು ಎದ್ದು ನಿಲ್ಲುತ್ತಾನೆ.
ಇದಕ್ಕೆ ಮುಂಚೆ ಶಿಷ್ಯರು ಸಾರಲು ಕಳುಹಿಸಲ್ಪಟ್ಟಾಗ, ದೆವ್ವಗಳನ್ನು ಬಿಡಿಸಿದ್ದರು. ಆದ್ದರಿಂದ ಈಗ, ಅವರೊಂದು ಮನೆಗೆ ಬಂದಾಗ ಶಿಷ್ಯರು ಏಕಾಂತದಲ್ಲಿ ಯೇಸುವನ್ನು ಕೇಳಿದ್ದು: “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಯಾಕೆ ಆಗಲಿಲ್ಲ?”
ಅದು ಅವರ ನಂಬಿಕೆಯ ಕೊರತೆಯಿಂದಾಗಿ ಎಂದು ಸೂಚಿಸುತ್ತಾ, ಯೇಸು ಉತ್ತರಿಸಿದ್ದು: “ಈ ಜಾತಿಯು ದೇವರ ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾತರಿಂದಲೂ ಬಿಟ್ಟು ಹೋಗುವುದಿಲ್ಲ.” ಇಲ್ಲಿ ಒಳಗೂಡಿದ್ದ ಆ ವಿಶೇಷ ಶಕ್ತಿಶಾಲಿ ದೆವವ್ವನ್ನು ಬಿಡಿಸಲಿಕ್ಕೆ ತಯಾರಿಯು ಬೇಕಾಗಿತ್ತೆಂಬದು ವ್ಯಕ್ತ. ಬಲವಾದ ನಂಬಿಕೆ ಹಾಗೂ ದೇವರ ಸಮರ್ಥ ಶಕ್ತಿಯ ಸಹಾಯಕ್ಕಾಗಿ ಪ್ರಾರ್ಥನೆ ಮಾಡುವ ಅಗತ್ಯ ಅಲ್ಲಿತ್ತು.
ಅನಂತರ ಯೇಸು ಮತ್ತೂ ಹೇಳಿದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ. ಸಾಸಿವೆ ಕಾಳಷ್ಟು ನಂಬಿಕೆ ನಿಮಗೆ ಇರುವುದಾದರೆ ನೀವು ಈ ಬೆಟ್ಟಕ್ಕೆ—ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವುದು. ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವುದಿಲ್ಲ.”
ನಂಬಿಕೆಯು ಎಷ್ಟು ಬಲವುಳ್ಳದಾಗಿರಬಲ್ಲದು! ಯೆಹೋವನ ಸೇವೆಯಲ್ಲಿ ಪ್ರಗತಿಯನ್ನು ತಡೆಯುವ ತಡೆಗಟ್ಟುಗಳು ಮತ್ತು ಕಷ್ಟಗಳು ಒಂದು ದೊಡ್ಡ ಅಕ್ಷರಶಃ ಬೆಟ್ಟದಂತೆ ದುಸ್ತರವಾಗಿಯೂ ಅಪರಿಹಾರ್ಯವಾಗಿಯೂ ಕಾಣಬಹುದು. ಆದರೂ ನಾವು, ಹೃದಯದಲ್ಲಿ ನಂಬಿಕೆಯನ್ನು ಬೆಳೆಸುವುದಾದರೆ, ಅದಕ್ಕೆ ನೀರೆರೆಯುತ್ತಾ ಬೆಳೆಯುವಂತೆ ಉತ್ತೇಜಿಸುವುದಾದರೆ ಅದು ಪಕ್ವತೆಯನ್ನು ಪಡೆಯುವದು ಮತ್ತು ಬೆಟ್ಟದಂಥಾ ಅಡ್ಡಿಗಳನ್ನು ಮತ್ತು ಕಷ್ಟಗಳನ್ನು ಪರಿಹರಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುವುದು. ಮಾರ್ಕ 9:14-29; ಮತ್ತಾಯ 17:19, 20; ಲೂಕ 9:37-43.
◆ ಹರ್ಮೋನ್ ಬೆಟ್ಟದಿಂದ ಹಿಂತಿರುಗಿದಾಗ ಯೇಸು ಯಾವ ಪರಿಸ್ಥಿತಿಯನ್ನು ಕಾಣುತ್ತಾನೆ?
◆ ದೆವ್ವ ಹಿಡಿದಿದ್ದ ಹುಡುಗನ ತಂದೆಗೆ ಯೇಸು ಯಾವ ಪ್ರೋತ್ಸಾಹನೆಯನ್ನು ಕೊಡುತ್ತಾನೆ?
◆ ಶಿಷ್ಯರು ಆ ದೆವವ್ವನ್ನು ಬಿಡಿಸಲು ಅಶಕ್ತರಾದದ್ದು ಏಕೆ?
◆ ನಂಬಿಕೆಯು ಎಷ್ಟು ಬಲವಾಗಿರಬಲ್ಲದು ಎಂದು ಯೇಸು ಹೇಗೆ ತೋರಿಸಿದನು? (w88 1/15)