ಯೇಸುವಿನ ಜೀವನ ಮತ್ತು ಶುಶ್ರೂಷೆ
ಯೇಸು ನಮ್ರತೆಯ ಪಾಠ ಕಲಿಸುತ್ತಾನೆ
ಕೈಸರೆಯ ಫಿಲಿಪ್ಪಿ ಪ್ರದೇಶದಲ್ಲಿ ದೆವ್ವ ಹಿಡಿದಿದ್ದ ಹುಡುಗನನ್ನು ವಾಸಿಮಾಡಿದ ಮೇಲೆ ಯೇಸು ಕಪೆರ್ನೌಮಿನ ಮನೆಗೆ ಹಿಂದಿರುಗಲು ಬಯಸುತ್ತಾನೆ. ಆದರೆ ಈ ಪ್ರಯಾಣದಲ್ಲಿ, ತನ್ನ ಶಿಷ್ಯರನ್ನು ತನ್ನ ಮರಣ ಮತ್ತು ಆ ಬಳಿಕ ಅವರ ಜವಾಬ್ದಾರಿಕೆಗೆ ಹೆಚ್ಚು ತಯಾರಿಸುವ ಸಲುವಾಗಿ ಅವನು ಅವರೊಂದಿಗೆ ಏಕಾಂತವಾಗಿ ಇರಲು ಬಯಸುತ್ತಾನೆ. ಅವನು ಅವರಿಗೆ ವಿವರಿಸಿದ್ದು: “ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಿಕೊಡಲ್ಪಡುವನು. ಆವರು ಆತನನ್ನು ಕೊಲ್ಲುವರು; ಸತ್ತ ಮೂರನೆಯ ದಿನದಲ್ಲಿ ಆತನು ಜೀವಿತನಾಗಿ ಎಬ್ಬಿಸಲ್ಪಡುವನು.”
ಯೇಸು ಇದರ ಕುರಿತು ಈ ಮೊದಲೇ ಮಾತಾಡಿದ್ದರೂ ಮತ್ತು ಅವನ ಮೂವರು ಅಪೊಸ್ತಲರು ಪ್ರಕಾಶರೂಪಾಂತರದ ಸಮಯದಲ್ಲಿ ಅವನ “ಮರಣ”ದ ಕುರಿತು ಚರ್ಚಿಸಿದ್ದರೂ ಈ ವಿಷಯದ ಕುರಿತು ಅವನ ಹಿಂಬಾಲಕರಿಗೆ ಇನ್ನೂ ತಿಳುವಳಿಕೆ ಇರುವುದಿಲ್ಲ. ಪೇತ್ರನು ಮೊದಲು ಮಾಡಿರುವಂತೆ ಅವರಲ್ಲಿ ಯಾರೂ ಅವನ ಕೊಲ್ಲಲ್ಪಡುವಿಕೆಯನ್ನು ಅಲ್ಲಗಳೆಯುವುದಿಲ್ಲವಾದರೂ ಅದರ ವಿಷಯ ಹೆಚ್ಚು ಪ್ರಶ್ನಿಸಲು ಅವರಿಗೆ ಭಯವಾಗುತ್ತದೆ.
ಕೊನೆಗೆ ಅವರು ಯಾವುದು ಯೇಸುವಿಗೆ ಒಂದು ರೀತಿಯ ಗೃಹನೆಲೆಯಾಗಿತ್ತೊ ಆ ಕಪೆರ್ನೌಮಿಗೆ ಬರುತ್ತಾರೆ. ಅದು ಪೇತ್ರ ಮತ್ತು ಇತರ ಅನೇಕ ಅಪೊಸ್ತಲರ ಸ್ವಂತ ಊರೂ ಆಗಿದೆ. ಅಲ್ಲಿ ದೇವಾಲಯದ ತೆರಿಗೆ ಸಂಗ್ರಹಿಸುವವರು ಪೇತ್ರನನ್ನು ಸಮೀಪಿಸುತ್ತಾರೆ. ಪ್ರಾಯಶಃ ಒಪ್ಪಿಗೆ ಪಡೆದಿರುವ ವಾಡಿಕೆಯ ಉಲ್ಲಂಘನೆಯಲ್ಲಿ ಸಿಕ್ಕಿಸಿ ಹಾಕುವ ಪ್ರಯತ್ನ ಮಾಡುತ್ತಾ ಅವರು,“ನಿಮ್ಮ ಬೋಧಕನು ದೇವಾಲಯದ ತೆರಿಗೆಯನ್ನು ಸಲ್ಲಿಸುವದಿಲ್ಲವೇ” ಎಂದು ಕೇಳುತ್ತಾರೆ.
“ಹೌದು” ಎನ್ನುತ್ತಾನೆ ಪೇತ್ರನು.
ಆ ಮನೆಗೆ ಆ ಬಳಿಕ ಸ್ವಲ್ಪದರಲ್ಲಿ ಬಂದಿರಬಹುದಾಗಿದ್ದ ಯೇಸುವಿಗೆ ನಡೆದ ಸಂಗತಿ ತಿಳಿದದೆ. ಆದುದರಿಂದ ಪೇತ್ರನು ಈ ಸುದ್ದಿಯನ್ನು ತಿಳಿಸುವ ಮೊದಲೇ ಯೇಸು,“ಸೀಮೋನಾ, ನಿನಗೆ ಹೇಗೆ ತೋರುತ್ತದೆ ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ಮಕ್ಕಳಿಂದಲೋ? ಬೇರೆಯವರಿಂದಲೋ” ಎಂದು ಕೇಳುತ್ತಾನೆ.
“ಬೇರೆಯವರಿಂದ” ಎನ್ನುತ್ತಾನೆ ಪೇತ್ರ.
“ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ” ಎನ್ನುತ್ತಾನೆ ಯೇಸು. ಯೇಸುವಿನ ತಂದೆ ವಿಶ್ವದ ರಾಜನಾಗಿದ್ದು ಆ ದೇವಾಲಯದಲ್ಲಿ ಆರಾಧಿಸಲ್ಪಡುವವನಾದುದರಿಂದ ದೇವಪುತ್ರನು ದೇವಾಲಯದ ತೆರಿಗೆ ಕೊಡಬೇಕೆಂಬುದು ಶಾಸನಬದ್ಧ ಆವಶ್ಯಕತೆಯಲ್ಲ. “ಆದರೂ ನಮ್ಮ ವಿಷಯವಾಗಿ ಅವರು ಬೇಸರಗೊಳ್ಳಬಾರದು” ಎಂದು ಯೇಸು ಹೇಳಿ, “ನೀನು ಸಮುದ್ರಕ್ಕೆ ಹೋಗಿ ಗಾಳಾ ಹಾಕಿ ಮೊದಲು ಸಿಕ್ಕುವ ಮೀನನ್ನು ಎತ್ತು. ಅದರ ಬಾಯಿ ತೆರೆದು ನೋಡಿದರೆ ಒಂದು ರೂಪಾಯಿ[ನಾಲ್ಕು ಡ್ರಾಕ್ಮ] ಸಿಕ್ಕುವದು. ಅದನ್ನು ತೆಗೆದುಕೊಂಡು ನಮ್ಮಿಬ್ಬರದಂತ ಹೇಳಿ ಅವರಿಗೆ ಕೊಡು” ಎಂದು ಹೇಳುತ್ತಾನೆ.
ಕಪೆರ್ನೌಮಿಗೆನ ಹಿಂದೆ ಬಂದು ಶಿಷ್ಯರು ಪಾಯಶಃ ಪೇತ್ರನ ಮನೆಯಲ್ಲಿ ಕೂಡಿಬಂದಾಗ ಅವರು “ಪರಲೋಕರಾಜ್ಯದಲ್ಲಿ ಯಾವನು ಹೆಚ್ಚಿನವನು” ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಕಾರಣ ಯೇಸುವಿಗೆ ತಿಳಿದದೆ. ಕೈಸರೈಯ ಫಿಲಿಪ್ಪಿಯಿಂದ ಹಿಂದಿರುಗುತ್ತಿದ್ದಾಗ ತನ್ನ ಹಿಂದಿನಿಂದ ಬರುತ್ತಿದ್ದ ಶಿಷ್ಯರ ಮಧ್ಯೆ ನಡೆದ ಸಂಗತಿ ಯೇಸುವಿಗೆ ಗೊತ್ತಿದೆ. ಆದುದರಿಂದ ಅವನು, “ನೀವು ದಾರಿಯಲ್ಲಿ ಏನು ಮಾತಾಡಿಕೊಳ್ಳುತ್ತಿದ್ದಿರಿ” ಎಂದು ಕೇಳುತ್ತಾನೆ. ಸಂಕೋಚಪಟ್ಟ ಅವರು ಸುಮ್ಮನಿರುತ್ತಾರೆ. ಏಕೆಂದರೆ ಅವರು ತಮ್ಮಲ್ಲಿ ಯಾರು ಹೆಚ್ಚಿನವರು ಎಂದು ವಾದಿಸಿದ್ದರು.
ಯೇಸು ಅವರಿಗೆ ಕಲಿಸಿ ಸುಮಾರು ಮೂರು ವರ್ಷಗಳ ಬಳಿಕ ಶಿಷ್ಯರ ಮಧ್ಯೆ ಇಂಥ ವಾಗ್ವಾದ ಉಂಟಾಗುತ್ತದೆಂಬುದನ್ನು ನಂಬಲು ಕಷ್ಟವಾಗುತ್ತದೆಯೆ? ಮಾನವ ಅಪೂರ್ಣತೆಯ ಧಾರ್ಮಿಕ ಹಿನ್ನೆಲೆಯ ಬಲಾಢ್ಯ ಪ್ರಭಾವವನ್ನು ಇದು ತೋರಿಸುತ್ತದೆ. ಶಿಷ್ಯ ಬೆಳೆದಿದ್ದ ಯೆಹೂದಿ ಧರ್ಮದಲ್ಲಿ ಸಕಲ ವ್ಯಹಾರಗಳಲ್ಲಿ ಸ್ಥಾನ ಯಾ ಪದವಿಗೆ ಪ್ರಾಮುಖ್ಯತೆಯಿತ್ತು. ಇದಲ್ಲದೆ, ಪಾಯಶಃ ಪೇತ್ರನು, ಯೇಸು ಅವನಿಗೆ ರಾಜ್ಯದ “ಬೀಗದ ಕೈಗಳನ್ನು” ಕೊಡುತ್ತೇನೆಂದು ವಚನಕೊಟ್ಟದ್ದರಿಂದ ತಾನು ಶ್ರೇಷ್ಠನೆಂದು ಎಣಿಸಿದಿರ್ದಬಹುದು. ಯಾಕೋಬ, ಯೋಹಾನರೂ ತಮಗೆ ಯೇಸುವಿನ ಪ್ರಕಾಶರೂಪಾಂತರವನ್ನು ನೋಡುವ ಅನುಗ್ರಹ ಸಿಕ್ಕಿದುದರಿಂದ ಅದೇ ವಿಚಾರಗಳುಳ್ಳವರಾಗಿದ್ದಿರಬಹುದು.
ವಿಷಯ ಏನೇ ಆಗಿದ್ದರೂ, ಅವರ ಮನೋಭಾವವನ್ನು ತಿದ್ದುವ ಪ್ರಯತ್ನದಿಂದ ಯೇಸು ಒಂದು ಪ್ರೇರಿಸುವ ಪ್ರದರ್ಶನವನ್ನು ಮಾಡಿ ತೋರಿಸುತ್ತಾನೆ. ಅವನು ಒಂದು ಮಗುವನ್ನು ಕರೆದು ಅವರ ಮಧ್ಯೆ ನಿಲ್ಲಿಸಿ, ಅಪ್ಪಿಕೊಂಡು, “ನೀವು ತಿರುಗಿಕೊಂಡು ಚಿಕ್ಕಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲ. . . ಹೀಗಿರುವದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು. ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು” ಎಂದು ಹೇಳುತ್ತಾನೆ.
ತನ್ನ ಶಿಷ್ಯರನ್ನು ತಿದ್ದುವ ಎಂಥ ಆಶ್ಚರ್ಯಕರ ವಿಧಾನವಿದು! ಯೇಸು ಅವರ ಮೇಲೆ ಸಿಟ್ಟಾಗುವುದಿಲ್ಲ. ಅವರನ್ನು ಅಹಂಕಾರಿಗಳು, ಲೋಭಿಗಳು, ಹೆಬ್ಬಯಕೆಯವರು ಎಂದು ಕರೆಯುವದಿಲ್ಲ. ಬದಲಿಗೆ, ಅವನು ಚಿಕ್ಕಮಕ್ಕಳನ್ನು, ಸ್ವಾಭಾವಿಕವಾಗಿ ಅಭಿಮಾನಮಿತಿಯವರೂ ಹೆಬ್ಬಯಕೆರಹಿತರೂ, ಸಾಮಾನ್ಯವಾಗಿ ತಮ್ಮೊಳಗೆ ದರ್ಜೆಯ ಯೋಚನೆಯೇ ಇಲ್ಲದವರೂ ಆದ ಮಕ್ಕಳನ್ನು ಉಪಯೋಗಿಸಿ ತನ್ನ ತಿದ್ದುಪಾಟಿನ ಶಿಕ್ಷಣವನ್ನು ಚಿತ್ರಿಸುತ್ತಾನೆ. ಹೀಗೆ ಯೇಸು, ತನ್ನ ಶಿಷ್ಯರು ನಮ್ರರಾದ ಮಕ್ಕಳನ್ನು ಗುರುತಿಸುವ ಗುಣಗಳನ್ನು ಬೆಳೆಸಬೇಕೆಂದು ತೋರಿಸುತ್ತಾನೆ. ಯೇಸು ಮುಗಿಸುವುದು: “ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು.” ಮತ್ತಾಯ 17:22-27; 18:1-5; ಮಾರ್ಕ 9:30-37; ಲೂಕ 9:43-48.
◆ ಕಪೆರ್ನೌಮಿಗೆ ಹಿಂದಿರುಗುವಾಗ ಯೇಸು ಯಾವ ಬೋಧನೆಯನ್ನು ಪುನರಾವೃತ್ತಿಸುತ್ತಾನೆ, ಮತ್ತು ಅದು ಹೇಗೆ ಅಂಗೀಕರಿಸಲ್ಪಡುತ್ತದೆ?
◆ ದೇವಾಲಯದ ತೆರಿಗೆ ನೀಡಲು ಯೇಸು ಏಕೆ ಬದ್ಧನಲ್ಲ, ಆದರೂ ಅವನು ಏಕೆ ಅದನ್ನು ತೆರುತ್ತಾನೆ?
◆ ಶಿಷ್ಯರ ವಿವಾದಕ್ಕೆ ಪ್ರಾಯಶಃ ಯಾವುದು ಸಹಾಯ ಮಾಡಿದಿರ್ದಬೇಕು, ಮತ್ತು ಯೇಸು ಅವರನ್ನು ಹೇಗೆ ತಿದ್ದದನು? (w88 2/1)