ಅಧ್ಯಾಯ 114
ಜಾಪಕಾರ್ಥದ ರಾತ್ರಿಯೂಟ
ಯೇಸುವು ಅವನ ಅಪೊಸ್ತಲರ ಕಾಲುಗಳನ್ನು ತೊಳೆದಾದ ನಂತರ, ಅವನು ಶಾಸ್ತ್ರ ಗ್ರಂಥದಿಂದ ಕೀರ್ತನೆ 41:9 ಉಲ್ಲೇಖಿಸುತ್ತಾನೆ: “ನನ್ನ ಕೂಡ ಊಟ ಮಾಡುವವನೇ ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.” ಅನಂತರ ಆತ್ಮದಲ್ಲಿ ತತ್ತರಗೊಂಡು ಅವನು ವಿವರಿಸಿದ್ದು: “ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು.”
ಅಪೊಸ್ತಲರು ಇದರಿಂದ ದುಃಖಪಟ್ಟು, ಯೇಸುವಿಗೆ ಒಬ್ಬರೊಬ್ಬರಾಗಿ ಹೇಳಿದರು: “ನಾನಲ್ಲವಲ್ಲಾ, ನಾನಲ್ಲವಲ್ಲಾ?” ಇಸ್ಕರಿಯೋತ ಯೂದನು ಕೂಡ ಹೀಗೆ ಕೇಳುವದರಲ್ಲಿ ಜತೆಗೂಡುತ್ತಾನೆ. ಮೇಜಿನಲ್ಲಿ ಯೇಸುವಿನ ಪಕ್ಕದಲ್ಲಿದ್ದ ಯೋಹಾನನು ಅವನ ಎದೆಯ ಕಡೆಗೆ ಬಾಗಿ, ಕೇಳುವದು: “ಸ್ವಾಮೀ, ಅವನು ಯಾರು?”
“ಅವನು ನನ್ನ ಹನ್ನೆರಡು ಮಂದಿಯಲ್ಲಿ ಒಬ್ಬನು, ನನ್ನ ಸಂಗಡ ಬಟ್ಟಲ್ಲಲಿ ಕೈ ಅದ್ದುವವನೇ,” ಯೇಸು ಉತ್ತರಿಸುತ್ತಾನೆ. “ಮನುಷ್ಯ ಕುಮಾರನು ಹೊರಟು ಹೋಗುತ್ತಾನೆ ಸರಿ; ಹಾಗೆ ಆತನ ವಿಷಯವಾಗಿ ಬರೆದದೆಯಲ್ಲಾ. ಆದರೆ ಯಾವನು ಮನುಷ್ಯ ಕುಮಾರನನ್ನು ಹಿಡುಕೊಡುವನೋ ಅವನ ಗತಿಯನ್ನು ಏನು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು.” ಅನಂತರ, ಸೈತಾನನು ಯೂದನ ಕೆಟ್ಟದ್ದಾಗಿ ಪರಿಣಮಿಸಿರುವ ಹೃದಯವು ತೆರೆದಿರುವದನ್ನು ಕಂಡು, ಸ್ವ-ಪ್ರಯೋಜನಕ್ಕಾಗಿ ಬಳಸಿ, ಪುನಃ ಅವನೊಳಗೆ ಹೊಕ್ಕನು. ಸ್ವಲ್ಪ ನಂತರ ಆ ರಾತ್ರಿ ಯೇಸುವು ತಕ್ಕದ್ದಾಗಿಯೇ ಯೂದನನ್ನು “ನಾಶಕ್ಕೆ ಗುರಿಯಾದ ಆ ಮನುಷ್ಯನು” ಎಂದು ಕರೆಯುತ್ತಾನೆ.
ಯೇಸು ಈ ಯೂದನಿಗೆ ಹೇಳುವದು: “ನೀನು ಮಾಡುವದನ್ನು ಬೇಗನೆ ಮಾಡಿಬಿಡು.” ಯೇಸುವು ಹೀಗೆ ಹೇಳಿದ್ದರ ಅರ್ಥವು ಇತರ ಯಾವ ಅಪೊಸ್ತಲರಿಗೂ ಆಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, “ಹಬ್ಬಕ್ಕಾಗಿ ನಮಗೆ ಏನು ಬೇಕೋ ಅದನ್ನು ಕೊಂಡುಕೋ” ಅಥವಾ ಅವನು ಹೋಗಿ ಬಡವರಿಗೆ ಏನಾದರೂ ಕೊಡಬೇಕು ಎಂದು ಯೇಸುವು ಅವನಿಗೆ ಹೇಳುತ್ತಾನೆಂದು ಅವರು ಎಣಿಸಿದರು.
ಯೂದನು ಹೊರಗೆ ಹೋದ ನಂತರ, ಯೇಸುವು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಪೂರ್ಣವಾಗಿ ಹೊಸದಾಗಿರುವ ಒಂದು ಆಚರಣೆಯನ್ನು ಇಲ್ಲವೆ ಜ್ಞಾಪಕಾರ್ಥವನ್ನು ಪ್ರಸ್ತಾಪಿಸುತ್ತಾನೆ. ಅವನು ರೊಟ್ಟಿಯನ್ನು ತೆಗೆದು ಕೊಂಡು ದೇವರ ಸ್ತೋತ್ರ ಮಾಡಿ ಮುರಿದು ಅದನ್ನು ಅವರಿಗೆ ಕೊಟ್ಟು ಹೀಗನ್ನುತ್ತಾನೆ: “ತಕ್ಕೊಳ್ಳಿರಿ, ತಿನ್ನಿರಿ.” ಅವನು ವಿವರಿಸುವದು: “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”
ಪ್ರತಿಯೊಬ್ಬನು ರೊಟ್ಟಿಯನ್ನು ತಿಂದ ಮೇಲೆ, ಯೇಸುವು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಳ್ಳುತ್ತಾನೆ, ಇದು ಪಸ್ಕ ಹಬ್ಬದ ಆಚರಣೆಯಲ್ಲಿ ಬಳಸಿದ ನಾಲ್ಕನೆಯ ಪಾತ್ರೆಯಾಗಿರಬಹುದು. ಅದರ ಮೇಲೆ ದೇವರ ಸ್ತೋತ್ರವನ್ನು ಅವನು ಪುನಃ ಮಾಡಿ, ಅದನ್ನು ಅವರಿಗೆ ದಾಟಿಸುತ್ತಾನೆ, ಅದರಿಂದ ಕುಡಿಯುವಂತೆ ಅವರಿಗೆ ಹೇಳುತ್ತಾ ಅಂದದ್ದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.”
ವಾಸ್ತವದಲ್ಲಿ ಇದು ಯೇಸುವಿನ ಮರಣದ ಜ್ಞಾಪಕಾಚರಣೆಯಾಗಿರುತ್ತದೆ. ಪ್ರತಿ ವರುಷ ನೈಸಾನ್ 14 ರಲ್ಲಿ, ಯೇಸುವು ಹೇಳಿದಂತೆ, ಅವನ ನೆನಪಿಕ್ಕೋಸ್ಕರ ಇದನ್ನು ಪುನರಾವರ್ತಿಸಲಾಗುತ್ತದೆ. ಮರಣದ ಶಾಪದಿಂದ ಮಾನವ ಕುಲವನ್ನು ಪಾರುಗೊಳಿಸಲು ಯೇಸುವು ಮತ್ತು ಅವನ ಸ್ವರ್ಗೀಯ ತಂದೆಯು ಯಾವ ಒದಗಿಸುವಿಕೆಗಳನ್ನು ಮಾಡಿರುತ್ತಾರೆಂದು ಆಚರಿಸುವವರ ಜ್ಞಾಪಕಕ್ಕೆ ಇದು ತರುತ್ತದೆ. ಕ್ರಿಸ್ತನ ಹಿಂಬಾಲಕರಾದ ಯೆಹೂದ್ಯರಿಗೆ ಇದು ಪಸ್ಕ ಹಬ್ಬದ ಬದಲಿಯಾಗಿ ಇರುತ್ತದೆ.
ಯೇಸುವಿನ ಸುರಿದ ರಕ್ತದ ಮೂಲಕ ಕಾರ್ಯರೂಪಕ್ಕೆ ತರಲ್ಪಟ್ಟ ಹೊಸ ಒಡಂಬಡಿಕೆಯು ಹಳೆಯ ನಿಯಮದೊಡಂಬಡಿಕೆಯನ್ನು ಸ್ಥಾನಪಲ್ಲಟಮಾಡುತ್ತದೆ. ಎರಡು ಪಕ್ಷಗಳ ನಡುವೆ—ಒಂದು ಪಕ್ಕದಲ್ಲಿ ಯೆಹೋವ ದೇವರು ಮತ್ತು ಇನ್ನೊಂದು ಪಕ್ಕದಲ್ಲಿ 1,44,000 ಆತ್ಮ-ಜನಿತ ಕ್ರೈಸ್ತರು—ಯೇಸು ಕ್ರಿಸ್ತನ ಮಧ್ಯಸಿಕ್ಥೆಯಲ್ಲಿ ಇದು ಬಂದಿದೆ. ಪಾಪಗಳ ಕ್ಷಮಾಪಣೆಗೆ ಒದಗಿಸುವಿಕೆಯನ್ನು ಮಾಡುವದರ ಹೊರತಾಗಿ, ರಾಜ-ಯಾಜಕರ ಒಂದು ಸ್ವರ್ಗೀಯ ಜನಾಂಗದ ರೂಪಿಸುವಿಕೆಗೆ ಈ ಒಡಂಬಡಿಕೆಯು ಅನುಮತಿಸುತ್ತದೆ. ಮತ್ತಾಯ 26:21-29; ಮಾರ್ಕ 14:18-25; ಲೂಕ 22:19-23; ಯೋಹಾನ 13:18-30; 17:12; 1 ಕೊರಿಂಥ 5:7.
▪ ಒಬ್ಬ ಸಂಗಾತಿಯ ಕುರಿತಾಗಿ ಯೇಸುವು ಯಾವ ಬೈಬಲ್ ಪ್ರವಾದನೆಯನ್ನು ಉಲ್ಲೇಖಿಸುತ್ತಾನೆ, ಮತ್ತು ಅವನು ಅದರ ಯಾವ ಅನ್ವಯವನ್ನು ಮಾಡುತ್ತಾನೆ?
▪ ಅಪೊಸ್ತಲರು ಯಾಕೆ ಬಹಳಷ್ಟು ದುಃಖಿತರಾಗುತ್ತಾರೆ, ಮತ್ತು ಪ್ರತಿಯೊಬ್ಬನು ಏನನ್ನು ಕೇಳುತ್ತಾನೆ?
▪ ಯೂದನಿಗೆ ಯೇಸುವು ಏನನ್ನು ಹೇಳುತ್ತಾನೆ, ಆದರೆ ಇತರ ಅಪೊಸ್ತಲರು ಈ ಅಪ್ಪಣೆಯನ್ನು ಹೇಗೆ ಅರ್ಥೈಸುತ್ತಾರೆ?
▪ ಯೂದನು ಹೊರಟು ಹೋದ ನಂತರ, ಯೇಸುವು ಯಾವ ಆಚರಣೆಯನ್ನು ಪ್ರಸ್ತಾಪಿಸುತ್ತಾನೆ, ಮತ್ತು ಅದು ಯಾವ ಉದ್ದೇಶವನ್ನು ಪೂರೈಸುತ್ತದೆ?
▪ ಹೊಸ ಒಡಂಬಡಿಕೆಯ ಎರಡು ಪಕ್ಷಗಳು ಯಾವವು, ಮತ್ತು ಈ ಒಡಂಬಡಿಕೆಯು ಏನನ್ನು ಪೂರೈಸುತ್ತದೆ?