“ನಮಗೆ ಹೇಳು, ಈ ಸಂಗತಿಗಳು ಯಾವಾಗ ಆಗುವುವು?”
“ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ತಲೆದೋರುವದಕ್ಕೆ ಮುಂಚೆ ಅವುಗಳನ್ನು ನಿಮಗೆ ತಿಳಿಸುತ್ತೇನೆ.” —ಯೆಶಾಯ 42:9.
1, 2. (ಎ) ಭವಿಷ್ಯತ್ತಿನ ಕುರಿತು ಯೇಸುವಿನ ಅಪೊಸ್ತಲರು ಕೇಳಿದ್ದೇನು? (ಬಿ) ಒಂದು ಸಂಘಟಿತ ಸೂಚನೆಯ ಕುರಿತ ಯೇಸುವಿನ ಉತ್ತರವು ನೆರವೇರಿಕೆಯನ್ನು ಪಡೆದದ್ದು ಹೇಗೆ?
ದೈವಿಕ ಬೋಧನೆಯು “ಆರಂಭದಿಂದಲೇ ಅಂತ್ಯವನ್ನು ತಿಳಿಸುವ” ಯೆಹೋವ ದೇವರಿಂದ ಉದ್ಭವಿಸಿ ಬರುತ್ತದೆ. (ಯೆಶಾಯ 46:10) ಹಿಂದಿನ ಲೇಖನವು ತೋರಿಸಿದಂತೆ, ಅಪೊಸ್ತಲರು ಅಂಥ ಬೋಧನೆಯನ್ನು ಯೇಸುವಿನಿಂದ ಕೋರುತ್ತಾ, ಕೇಳಿದ್ದು: “ನಮಗೆ ಹೇಳು, ಈ ಸಂಗತಿಗಳು ಯಾವಾಗ ಆಗುವುವು, ಮತ್ತು ಈ ಸಂಗತಿಗಳೆಲ್ಲಾ ನೆರವೇರಲಿಕ್ಕಿರುವಾಗ ಸೂಚನೆಯು ಏನಾಗಿರುವುದು?”—ಮಾರ್ಕ 13:4, NW.
2 ಅದಕ್ಕುತ್ತರವಾಗಿ, ಯೆಹೂದ್ಯ ವ್ಯವಸ್ಥೆಯ ಬಲುಬೇಗನೆ ಅಂತ್ಯಗೊಳ್ಳಲಿದೆ ಎಂಬುದರ ರುಜುವಾತನ್ನೀಯುವ ಪುರಾವೆಯನ್ನೊಳಗೊಂಡ ಒಂದು ಸಂಘಟಿತ “ಸೂಚನೆ” ಯನ್ನು ಯೇಸು ವರ್ಣಿಸಿದನು. ಇದು ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನದೊಂದಿಗೆ ನೆರವೇರಿತು. ಆದರೆ ಯೇಸುವಿನ ಪ್ರವಾದನೆಗೆ ಒಂದು ಮಹತ್ತರವಾದ ನೆರವೇರಿಕೆಯು ಸಮಯದ ಪ್ರವಾಹದಲ್ಲಿ ಬಹು ಮುಂದಕ್ಕೆ ಸಂಭವಿಸಲಿಕ್ಕಿತ್ತು. ಒಮ್ಮೆ “ಅನ್ಯಜನಾಂಗಗಳ ನೇಮಿತ ಸಮಯಗಳು” 1914ರಲ್ಲಿ ಕೊನೆಗೊಂಡಾಗ, “ಮಹಾ ಸಂಕಟ”ದಲ್ಲಿ ಸದ್ಯದ ದುಷ್ಟ ವ್ಯವಸ್ಥೆಯ ಬಲುಬೇಗನೆ ಅಂತ್ಯಗೊಳ್ಳಲಿದೆ ಎಂದು ತೋರಿಸುವ ಒಂದು ಸೂಚನೆಯು ವಿಸ್ತಾರ್ಯ ಪ್ರಮಾಣದಲ್ಲಿ ದೊರೆಯಲಿಕ್ಕಿತ್ತು.a (ಲೂಕ 21:24) ಈ ಸೂಚನೆಯು ಈ 20 ನೆಯ ಶತಕದ ಲೋಕ ಯುದ್ಧಗಳಲ್ಲಿ ಮತ್ತು ಇತರ ಪ್ರಾಮುಖ್ಯ ಘಟನೆಗಳಲ್ಲಿ ನೆರವೇರಿಕೆಯನ್ನು ಹೊಂದಿದೆಯೆಂದು ಇಂದು ಜೀವಿಸುವ ಲಕ್ಷಾಂತರ ಜನರು ಸಾಕ್ಷ್ಯವನ್ನೀಯಬಲ್ಲರು. ಇವು ಯೇಸುವಿನ ಪ್ರವಾದನೆಯ ಪ್ರಧಾನ ನೆರವೇರಿಕೆಯನ್ನು ಕೂಡ ಗುರುತಿಸುತ್ತವೆ, ಈ ಆಧುನಿಕ ನೆರವೇರಿಕೆಯು ಸಾ.ಶ. 33 ರಿಂದ ಸಾ.ಶ. 70ರ ತನಕ ಏನು ಸಂಭವಿಸಿತೋ ಅದರಿಂದ ಮುನ್ ಸೂಚಿಸಲ್ಪಟ್ಟಿರುತ್ತದೆ.
3. ಇನ್ನೊಂದು ಸೂಚನೆಯನ್ನು ಹೇಳುತ್ತಿರುವಲ್ಲಿ, ಯಾವ ಹೆಚ್ಚಿನ ವಿಕಸನಗಳನ್ನು ಯೇಸು ಮುಂತಿಳಿಸಿದನು?
3 ಲೂಕನ ಸುವಾರ್ತೆಯು ಅನ್ಯಜನಾಂಗಗಳ ನೇಮಿತ ಸಮಯಗಳ ಕುರಿತು ಹೇಳಿದ ನಂತರ, ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಸಂಘಟಿತ ‘ಸೂಚನೆ’ಗೆ ಸೇರಿಸಿದ ಒಂದು ಸೂಚನೆಯು ಒಳಗೂಡಿರುವ ಹೆಚ್ಚಿನ ವಿಕಸನಗಳ ಶ್ರೇಣಿಯೊಂದನ್ನು ಮತ್ತಾಯ, ಮಾರ್ಕ ಮತ್ತು ಲೂಕನ ಸಮಾಂತರ ವೃತ್ತಾಂತಗಳು ವರ್ಣಿಸುತ್ತವೆ. (ಮತ್ತಾಯ 24:3) (ಪುಟ 15 ರಲ್ಲಿ, ವೃತ್ತಾಂತದ ಈ ಬಿಂದುವು ಎರಡು ಗೀಟಿನಿಂದ ಗುರುತಿಸಲ್ಪಟ್ಟಿದೆ.) ಮತ್ತಾಯನು ಹೇಳುವುದು: “ಆ ದಿನಗಳ ಸಂಕಟವು ತೀರಿದ ಕೂಡಲೆ ಸೂರ್ಯನು ಕತ್ತಲಾಗಿಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು. ತದನಂತರ ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ತದನಂತರ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು. ಮತ್ತು ಆತನು ತುತೂರಿಯ ಮಹಾ ಶಬ್ದದಿಂದ ತನ್ನ ದೂತರನ್ನು ಕಳುಹಿಸುವನು. ಅವರು ಆತನು ಆದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು.”—ಮತ್ತಾಯ 24:29-31, NW.
ಸಂಕಟ ಮತ್ತು ಆಕಾಶಸ್ಥ ಉತ್ಪಾತಗಳು
4. ಯೇಸು ತಿಳಿಸಿದ ಆಕಾಶಸ್ಥ ಉತ್ಪಾತಗಳ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?
4 ಅದು ಯಾವಾಗ ನೆರವೇರುವುದು? ಮೂರು ಸುವಾರ್ತಾ ದಾಖಲೆಗಳೂ, ಯಾವುದನ್ನು ನಾವು ಆಕಾಶಸ್ಥ ಉತ್ಪಾತಗಳೆಂದು ಕರೆಯಬಹುದೋ ಅದನ್ನು ಪ್ರಸ್ತಾಪಿಸುತ್ತವೆ—ಸೂರ್ಯನು ಮತ್ತು ಚಂದ್ರನು ಕತ್ತಲಾಗುವುದು ಮತ್ತು ನಕ್ಷತ್ರಗಳು ಉದುರುವುದು. ಇವು ಆ “ಸಂಕಟ” ವನ್ನು ಹಿಂಬಾಲಿಸುವವು ಎಂದು ಯೇಸುವು ಹೇಳಿದನು. ಸಾ.ಶ. 70 ರಲ್ಲಿ ಪರಾಕಾಷ್ಠೆಗೇರಿದ ಸಂಕಟವು ಯೇಸುವಿನ ಮನಸ್ಸಿನಲ್ಲಿತ್ತೋ, ಯಾ ನಮ್ಮ ಆಧುನಿಕ ಕಾಲದಲ್ಲಿ ಇನ್ನೂ ಭವಿಷ್ಯದಲ್ಲಿ ನೆಲೆಸಿರುವ ಮಹಾ ಸಂಕಟವೊಂದರ ಕುರಿತು ಅವನು ಮಾತಾಡುತ್ತಿದ್ದನೋ?—ಮತ್ತಾಯ 24:29; ಮಾರ್ಕ 13:24.
5. ಆಧುನಿಕ ಕಾಲದಲ್ಲಿ ಸಂಕಟದ ಕುರಿತು ಒಮ್ಮೆ ಯಾವ ನೋಟವು ಇತ್ತು?
5 ಅನ್ಯಜನಾಂಗಗಳ ನೇಮಿತ ಸಮಯಗಳು 1914 ರಲ್ಲಿ ಅಂತ್ಯಗೊಂಡಂದಿನಿಂದ, ದೇವಜನರು “ಮಹಾ ಸಂಕಟ” ದಲ್ಲಿ ತೀವ್ರಾಸಕ್ತಿಯುಳ್ಳವರಾಗಿದ್ದಾರೆ. (ಪ್ರಕಟನೆ 7:14) ವರ್ಷಾಂತರಗಳಿಂದ ಅವರು ನೆನಸಿದ್ದೇನಂದರೆ, ಆಧುನಿಕ ದಿನದ ಮಹಾ ಸಂಕಟಕ್ಕೆ 1 ನೆಯ ಲೋಕ ಯುದ್ಧದ ಸಮಯಕ್ಕೆ ಅನುರೂಪಿಸುವ ಒಂದು ಆರಂಭದ ಭಾಗವಿತ್ತು, ಅನಂತರ, ಅಡಯಿಸ್ಡುವ ಒಂದು ವಿರಾಮಕಾಲ, ಮತ್ತು ಕೊನೆಗೆ ಒಂದು ಸಮಾಪ್ತಿಯ ಭಾಗವಾದ “ಸರ್ವಶಕ್ತನಾದ ದೇವರ ಮಹಾದಿನದ ಯುದ್ಧ.” ವಿಷಯಗಳು ಹಾಗಿದದ್ದಾದ್ದರೆ, “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಯ ನಡುವೆ ಇರುವ ದಶಕಗಳ ಅವಧಿಯಲ್ಲಿ ಸಂಭವಿಸಲಿರುವದೇನು?—ಪ್ರಕಟನೆ 16:14; ಮತ್ತಾಯ 13:39; 24:3, NW; 28:20.
6. ಆಕಾಶಸ್ಥ ಉತ್ಪಾತಗಳ ಕುರಿತ ಯೇಸುವಿನ ಪ್ರವಾದನೆಯನ್ನು ಯಾವುದು ನೆರವೇರಿಸುವುದೆಂದು ನೆನಸಲಾಗಿತ್ತು?
6 ಒಳ್ಳೇದು, ಈ ವಿರಾಮ ಕಾಲದಲ್ಲಿ ಸಂಘಟಿತ ಸೂಚನೆಯು ಕಾಣಬರುವುದೆಂದು ನೆನಸಲಾಗಿತ್ತು, ಒಟ್ಟುಗೂಡಿಸಲ್ಪಟ್ಟ ಜನರಿಂದ ದೇವರ ರಾಜ್ಯದ ಸಾರುವ ಕಾರ್ಯವು ಸಹ ಇದರಲ್ಲಿ ಸೇರಿತ್ತು. ಮುಂತಿಳಿಸಲ್ಪಟ್ಟ ಆಕಾಶಸ್ಥ ಉತ್ಪಾತಗಳನ್ನು 1914-18 ರ ಆರಂಭದ ಹಂತದ ಅನಂತರದ ವಿರಾಮಕಾಲದಲ್ಲಿ ನಿರೀಕ್ಷಿಸಬಹುದಿತ್ತೆಂದೂ ತೋರಿತು. (ಮತ್ತಾಯ 24:29; ಮಾರ್ಕ 13:24, 25; ಲೂಕ 21:25) ಆಕಾಶದಲ್ಲಿ ನಡೆದ ಅಕ್ಷರಾರ್ಥಕ ವಿಷಯಗಳ ಮೇಲೆ—ಅಂತರಾಳದ ಶೋಧಗಳು, ಕ್ಷಿಪಣಿಗಳು, ಕಾಜ್ಮಿಕ್ ಯಾ ಗ್ಯಾಮ ಕಿರಣಗಳು, ಮತ್ತು ಚಂದ್ರನ ಮೇಲೆ ಇಳಿದಾಣಗಳು ಯಾ ನಿಲ್ಲೆಡೆಗಳ ಮೇಲೆ ಗಮನವು ಕೇಂದ್ರಿತವಾಗಿತ್ತು.
7. ಮಹಾ ಸಂಕಟದ ಕುರಿತು ಯಾವ ಅಳವಡಿಸಿದ ತಿಳಿವಳಿಕೆಯು ಒದಗಿಸಲ್ಪಟ್ಟಿತು?
7 ಆದರೆ, ಜನವರಿ 15, 1970 ರ ದ ವಾಚ್ಟವರ್, ಯೇಸುವಿನ ಪ್ರವಾದನೆಯನ್ನು, ವಿಶೇಷವಾಗಿ ಬರಲಿರುವ ಮಹಾ ಸಂಕಟವನ್ನು ಪುನಃ ಪರೀಕ್ಷಣೆ ಮಾಡಿತು. ಅದು ತೋರಿಸಿದ್ದೇನಂದರೆ, ಒಂದನೆಯ ಶತಮಾನದಲ್ಲಿ ಏನು ಸಂಭವಿಸಿತೋ ಅದರ ನೋಟದಲ್ಲಿ, ಆಧುನಿಕ ಸಂಕಟಕ್ಕೆ 1914-18 ರಲ್ಲಿ ಒಂದು ಆರಂಭಿಕ ಭಾಗವಿರಲು, ದಶಕಗಳಷ್ಟು ಉದ್ದದ ಒಂದು ವಿರಾಮಕಾಲವಿರಲು, ಮತ್ತು ಅನಂತರ ಒಂದು ಪುನರಾರಂಭವಿರಲು ಸಾಧ್ಯವಿರಲಿಲ್ಲ. ಆ ಪತ್ರಿಕೆಯು ಕೊನೆಗೊಳಿಸಿದ್ದು: “ಇನ್ನು ಮೇಲೆಯೂ ಆಗದಂಥ ಆ ‘ಮಹಾ ಸಂಕಟವು’ ಇನ್ನೂ ಮುಂದೆ ಇದೆ, ಯಾಕಂದರೆ ಅದರ ಅರ್ಥವು (ಕ್ರೈಸ್ತಪ್ರಪಂಚದ ಸಹಿತ) ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ನಾಶನ, ಮತ್ತು ಅದನ್ನು ಹಿಂಬಾಲಿಸಿ ಅರ್ಮಗೆದೋನ್ನಲ್ಲಿ ‘ಸರ್ವಶಕ್ತ ದೇವರ ಮಹಾದಿನದ ಯುದ್ಧವು’ ಬರುವುದು.”
8. ಆಧುನಿಕ ಸಂಕಟದ ಅಳವಡಿಸಲ್ಪಟ್ಟ ನೋಟದೊಂದಿಗೆ, ಮತ್ತಾಯ 24:29 ಹೇಗೆ ವಿವರಿಸಲ್ಪಟ್ಟಿತು?
8 ಆದರೆ ಆಕಾಶಸ್ಥ ಉತ್ಪಾತಗಳು “ಸಂಕಟವು ತೀರಿದ ಕೂಡಲೆ” ಬರುತ್ತವೆಂದು ಮತ್ತಾಯ 24:29 ಹೇಳುತ್ತದೆ. ಅದು ಹೇಗೆ ಸಾಧ್ಯವಾಗಬಲ್ಲದು? ಇಲ್ಲಿ ಸೂಚಿಸಲ್ಪಟ್ಟ ಸಂಕಟವು ಸಾ.ಶ. 70 ರಲ್ಲಿ ಪರಾಕಾಷ್ಠೆಗೇರಿದ ಸಂಕಟವೆಂಬರ್ಥವೆಂದು ಮೇ 1, 1975 ರ ದ ವಾಚ್ಟವರ್ ಸೂಚಿಸಿತ್ತು. ಆದರೂ, ನಮ್ಮ ಸಮಯದ ಆಕಾಶಸ್ಥ ಉತ್ಪಾತಗಳು ಸಾ.ಶ. 70ರ ಘಟನೆಯು ತೀರಿದ “ಕೂಡಲೆ” ಹಿಂಬಾಲಿಸಿ ಸಂಭವಿಸುತ್ತವೆ ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ? ದೇವರ ದೃಷ್ಟಿಯಲ್ಲಿ ನಡುವಿನ ಶತಮಾನಗಳು ಸಂಕ್ಷಿಪ್ತವಾಗಿರುವುವುವೆಂದು ವಿವೇಚಿಸಲಾಗಿತ್ತು. (ರೋಮಾಪುರ 16:20; 2 ಪೇತ್ರ 3:8) ಆದಾಗ್ಯೂ, ಈ ಪ್ರವಾದನೆಯ, ವಿಶೇಷವಾಗಿ ಮತ್ತಾಯ 24:29-31ರ ಆಳವಾದ ಅಧ್ಯಯನವು ಒಂದು ತೀರ ಭಿನ್ನವಾದ ವಿವರಣೆಗೆ ನಿರ್ದೇಶಿಸುತ್ತದೆ. ಇದು ಬೆಳಕು ಹೇಗೆ “ಪೂರ್ಣ ದಿನದ ವರೆಗೂ ಹೆಚ್ಚುತ್ತಾ ಬರುತ್ತದೆ” ಎಂಬದನ್ನು ಚಿತ್ರಿಸುತ್ತದೆ. (ಜ್ಞಾನೋಕ್ತಿ 4:18, ಅಮೆರಿಕನ್ ಸ್ಟ್ಯಾಂಡರ್ಡ್ ವರ್ಷನ್)b ಒಂದು ಹೊಸತಾದ, ಯಾ ಬದಲಾದ ಅರ್ಥ ವಿವರಣೆಯು ಏಕೆ ಯುಕ್ತವಾಗಿದೆ ಎಂಬದನ್ನು ನಾವು ಪರಿಗಣಿಸೋಣ.
9. ಆಕಾಶದಲ್ಲಿನ ವಿಕಸನಗಳ ಕುರಿತ ಯೇಸುವಿನ ಮಾತುಗಳಿಗೆ ಹೀಬ್ರು ಶಾಸ್ತ್ರಗ್ರಂಥವು ಹೇಗೆ ಹಿನ್ನೆಲೆಯನ್ನು ಕೊಡುತ್ತದೆ?
9 ತನ್ನ ಅಪೊಸ್ತಲರಲ್ಲಿ ನಾಲ್ವರಿಗೆ, ‘ಸೂರ್ಯನು ಕತ್ತಲಾಗುವುದು, ಚಂದ್ರನು ಬೆಳಕನ್ನು ಕೊಡದೆ ಇರುವುದು, ಮತ್ತು ನಕ್ಷತ್ರಗಳು ಉದುರುವುದ’ರ ಪ್ರವಾದನೆಯನ್ನು ಯೇಸು ಕೊಟ್ಟನು. ಯೆಹೂದ್ಯರೋಪಾದಿ ಅವರಿಗೆ ಅಂತಹ ಭಾಷೆಯು ಹೀಬ್ರು ಶಾಸ್ತ್ರಗ್ರಂಥದಿಂದ ಅರ್ಥವಾಗುವಂತಿತ್ತು, ಉದಾಹರಣೆಗೆ, ಚೆಫನ್ಯ 1:15 ರಲ್ಲಿ, ದೇವರ ನ್ಯಾಯತೀರ್ಪಿನ ಸಮಯವನ್ನು “ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ದಿನ” ಎಂದು ಕರೆಯಲ್ಪಟ್ಟಿದೆ. ಹಲವಾರು ಹೀಬ್ರು ಪ್ರವಾದಿಗಳು ಸಹ ತದ್ರೀತಿಯಲ್ಲಿ ಸೂರ್ಯನು ಕತ್ತಲಾಗುವುದನ್ನು, ಚಂದ್ರನು ಪ್ರಕಾಶಿಸದೆ ಇರುವುದನ್ನು, ಮತ್ತು ನಕ್ಷತ್ರಗಳು ಬೆಳಕು ಕೊಡದೆ ಇರುವುದನ್ನು ವರ್ಣಿಸಿರುತ್ತಾರೆ. ಬಾಬೆಲ್, ಎದೋಮ್ಯ, ಐಗುಪ್ತ, ಮತ್ತು ಇಸ್ರಾಯೇಲಿನ ಉತ್ತರದ ರಾಜ್ಯಗಳ ವಿರುದ್ಧ ದೈವಿಕ ಸಂದೇಶಗಳಲ್ಲಿ ಅಂತಹ ಭಾಷೆಯನ್ನು ನೀವು ಕಂಡುಕೊಳ್ಳುವಿರಿ.—ಯೆಶಾಯ 13:9, 10; 34:4, 5; ಯೆರೆಮೀಯ 4:28; ಯೆಹೆಜ್ಕೇಲ 32:2, 6-8; ಆಮೋಸ 5:20; 8:2, 9.
10, 11. (ಎ) ಆಕಾಶದಲ್ಲಿನ ವಿಷಯಗಳ ಸಂಬಂಧದಲ್ಲಿ ಯೋವೇಲನು ಏನನ್ನು ಪ್ರವಾದಿಸಿದನು? (ಬಿ) ಸಾ.ಶ. 33 ರಲ್ಲಿ ಯೋವೇಲನ ಪ್ರವಾದನೆಯ ಯಾವ ಭಾಗಗಳು ನೆರವೇರಿದವು, ಮತ್ತು ಯಾವ ಭಾಗಗಳು ನೆರವೇರಲಿಲ್ಲ?
10 ಯೇಸುವು ಏನಂದನೋ ಅದನ್ನು ಅವರು ಕೇಳಿದಾಗ, ಪೇತ್ರನು ಮತ್ತು ಇತರ ಮೂವರು ಯೋವೇಲ 2:28-31 ಮತ್ತು 3:15 ರಲ್ಲಿ ಕಂಡುಬರುವ ಯೋವೇಲನ ಪ್ರವಾದನೆಯನ್ನು ನೆನಪಿಸಿಕೊಂಡಿರಬಹುದು: “ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; . . . ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆ ಭೂಮ್ಯಾಕಾಶಗಳಲ್ಲಿ ರಕ್ತ ಬೆಂಕಿ ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು.” “ಸೂರ್ಯಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ.”
11 ಅ. ಕೃತ್ಯಗಳು 2:1-4 ಮತ್ತು 14-21 ರಲ್ಲಿ ಹೇಳಿರುವಂತೆ, ಸಾ.ಶ. 33 ರ ಪಂಚಾಶತ್ತಮದಲ್ಲಿ, ಪುರುಷರು ಮತ್ತು ಸ್ತ್ರೀಯರು ಸಹಿತ, 120 ಶಿಷ್ಯರುಗಳ ಮೇಲೆ ದೇವರು ಪವಿತ್ರಾತ್ಮವನ್ನು ಸುರಿಸಿದನು. ಯೋವೇಲನು ಮುಂತಿಳಿಸಿದ್ದು ಇದನ್ನೇ ಎಂದು ಅಪೊಸ್ತಲ ಪೇತ್ರನು ತಿಳಿಯಪಡಿಸಿದನು. ಹಾಗಾದರೆ, ‘ಸೂರ್ಯನು ಕತ್ತಲಾಗುವ ಮತ್ತು ಚಂದ್ರನು ರಕ್ತದಂತಾಗುವ ಮತ್ತು ನಕ್ಷತ್ರಗಳು ಅವುಗಳ ಹೊಳಪನ್ನು ಕಳೆದುಕೊಳ್ಳುವ’ ಯೋವೇಲನ ಮಾತುಗಳ ಕುರಿತೇನು? ಇದು ಸಾ.ಶ. 33 ರಲ್ಲಿ ಯಾ ಯೆಹೂದ್ಯ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ 30 ವರ್ಷಗಳಿಗಿಂತಲೂ ಹೆಚ್ಚು ದೀರ್ಘಕಾಲದ ಸಮಯಾವಧಿಯಲ್ಲಿ ನೆರವೇರಿತು ಎಂದು ಯಾವುದೂ ಸೂಚಿಸುವುದಿಲ್ಲ.
12, 13. ಯೋವೇಲನು ಮುಂತಿಳಿಸಿದ ಆಕಾಶಸ್ಥ ಉತ್ಪಾತಗಳು ಹೇಗೆ ನೆರವೇರಿದವು?
12 ಯೋವೇಲನ ಭವಿಷ್ಯದ್ವಾಣಿಯ ಕೊನೆಯ ಭಾಗವು “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವ”—ಯೆರೂಸಲೇಮಿನ ನಾಶನದೊಂದಿಗೆ ಹೆಚ್ಚು ನಿಕಟವಾಗಿ ಸೇರಿಕೊಂಡಿತ್ತು ಎಂದು ವ್ಯಕ್ತವಾಗುತ್ತದೆ. ಸಾ.ಶ. 70 ರಲ್ಲಿ ಯೆರೂಸಲೇಮಿನ ಮೇಲೆ ಬಂದ ಸಂಕಟದ ಕುರಿತಾಗಿ ನವಂಬರ 15, 1966ರ ದ ವಾಚ್ಟವರ್ ಹೇಳಿದ್ದು: “ಯೆರೂಸಲೇಮ್ ಮತ್ತು ಅವಳ ಮಕ್ಕಳ ವಿಷಯದಲ್ಲಿ ಅದು ಖಂಡಿತವಾಗಿಯೂ ‘ಯೆಹೋವನ ದಿನ’ ವಾಗಿತ್ತು. ಮತ್ತು ಆ ದಿನದ ಸಂಬಂಧದಲ್ಲಿ, ಬಹಳಷ್ಟು ‘ರಕ್ತ, ಮತ್ತು ಬೆಂಕಿ ಮತ್ತು ಧೂಮಸ್ತಂಭ’ ಅಲ್ಲಿತ್ತು, ಹಗಲಿನಲ್ಲಿ ಪಟ್ಟಣದ ಮಬ್ಬನ್ನು ಸೂರ್ಯನು ಬೆಳಗಿಸತ್ತಿರಲಿಲ್ಲ, ಮತ್ತು ಚಂದ್ರನು ರಾತ್ರಿಯಲ್ಲಿ ಶಾಂತಿಯುಕ್ತ, ಬೆಳ್ಳಿಯಂಥ ಬೆಳದಿಂಗಳನ್ನಲ್ಲ, ಸುರಿದ ರಕ್ತವನ್ನು ಮನಸ್ಸಿಗೆ ತರುತ್ತಿದ್ದನು.”c
13 ಹೌದು, ನಾವು ಗಮನಿಸಿದ ಇತರ ಪ್ರವಾದನೆಗಳಂತೆಯೇ, ಯೋವೇಲನು ಮುಂತಿಳಿಸಿದ ಆಕಾಶಸ್ಥ ಉತ್ಪಾತಗಳು, ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸಿದಾಗ ನೆರವೇರಲಿಕ್ಕಿದ್ದವು. ಯೆಹೂದ್ಯ ವ್ಯವಸ್ಥೆಯ ಸಮಾಪ್ತಿಯ ಇಡೀ ಸಮಯಾವಧಿಯಲ್ಲಿ ಚಾಚಿಕೊಂಡಿರುವ ಬದಲು, ಸೂರ್ಯನ, ಚಂದ್ರನ, ಮತ್ತು ನಕ್ಷತ್ರಗಳ ಮಬ್ಬಾಗುವಿಕೆಯು ಯೆರೂಸಲೇಮಿನ ವಿರುದ್ಧವಾಗಿ ಸಂಹಾರಕ ಸೇನೆಗಳು ಬಂದಾಗ ಸಂಭವಿಸಿತು. ತಾರ್ಕಿಕವಾಗಿಯೇ, ಸದ್ಯದ ವ್ಯವಸ್ಥೆಯ ದೇವರ ಸಂಹಾರವು ಸಂಭವಿಸಲು ತೊಡಗುವಾಗ, ಯೋವೇಲನ ಪ್ರವಾದನೆಯ ಆ ಭಾಗದ ಮಹತ್ತರವಾದ ಒಂದು ನೆರವೇರಿಕೆಯನ್ನು ನಾವು ನಿರೀಕ್ಷಿಸಬಲ್ಲೆವು.
ಆಕಾಶಸ್ಥ ಉತ್ಪಾತಗಳ ಮುಂಚೆ ಯಾವ ಸಂಕಟ?
14, 15. ಮತ್ತಾಯ 24:29ರ ನಮ್ಮ ತಿಳಿವಳಿಕೆಯ ಮೇಲೆ ಯೋವೇಲನ ಪ್ರವಾದನೆ ಯಾವ ಪ್ರಭಾವ ಬೀರುತ್ತದೆ?
14 ಯೋವೇಲನ ಪ್ರವಾದನೆಯ ನೆರವೇರಿಕೆಯು (ತದ್ರೀತಿಯ ಭಾಷೆಯನ್ನು ಬಳಸುವ ಇತರ ಪ್ರವಾದನೆಗಳಿಗೆ ಹೊಂದಿಕೆಯಲ್ಲಿ) ಮತ್ತಾಯ 24:29 ರಲ್ಲಿನ ಮಾತುಗಳನ್ನು ತಿಳುಕೊಳ್ಳಲು ನಮಗೆ ಸಹಾಯಮಾಡುತ್ತದೆ. ಸ್ಪಷ್ಟವಾಗಿಗಿ, ‘ಸೂರ್ಯನು ಕತ್ತಲಾಗುವುದು, ಚಂದ್ರನು ಬೆಳಕನ್ನು ಕೊಡದೇ ಇರುವುದು, ಮತ್ತು ನಕ್ಷತ್ರಗಳು ಉದುರುವುದು’ ಸದ್ಯದ ವ್ಯವಸ್ಥೆಯ ಸಮಾಪ್ತಿಯ ಅನೇಕ ದಶಕಗಳಲ್ಲಿ ಸಂಭವಿಸುತ್ತಿರುವ, ಅಂತರಾಳ ಕ್ಷಿಪಣೀಕರಣಕ್ಕೆ, ಚಂದ್ರನ ಇಳಿದಾಣಗಳಿಗೆ, ಮತ್ತು ತದ್ರೀತಿಯ ಸಂಗತಿಗಳಿಗೆ ಸೂಚಿಸುವುದಿಲ್ಲ. ಇಲ್ಲ, ಅವನು “ಯೆಹೋವನ ಆಗಮನದ ಭಯಂಕರವಾದ ಮಹಾದಿನ,” ಇನ್ನೂ ಬರಲಿಕ್ಕಿರುವ ನಾಶನದೊಂದಿಗೆ ಜೋಡಿಸಲ್ಪಟ್ಟಿರುವ ಘಟನೆಗಳಿಗೆ ನಿರ್ದೇಶಿಸುತ್ತಿದ್ದನು.
15 “ಸಂಕಟವು ತೀರಿದ ಕೂಡಲೆ” ಆಕಾಶಸ್ಥ ಉತ್ಪಾತಗಳು ಹೇಗೆ ಬರಲಿವೆ ಎಂಬ ನಮ್ಮ ತಿಳಿವಳಿಕೆಗೆ ಇದು ಸಂಬಂಧಿಸಿದೆ. ಸಾ.ಶ. 70 ರಲ್ಲಿ ಪರಾಕಾಷ್ಠೆಗೇರಿದ ಸಂಕಟಕ್ಕೆ ಯೇಸುವು ಇಲ್ಲಿ ಸೂಚಿಸತ್ತಿರಲಿಲ. ಬದಲಾಗಿ, ಅವನ ವಾಗ್ದತ್ತ “ಸಾನ್ನಿಧ್ಯ”ವು ಪರಾಕಾಷ್ಠೆಗೇರುವ, ಭವಿಷ್ಯದಲ್ಲಿ ಲೋಕ ವ್ಯವಸ್ಥೆಯ ಮೇಲೆ ಬೀಳಲಿರುವ ಮಹಾ ಸಂಕಟದ ಆರಂಭಕ್ಕೆ ಅವನು ಸೂಚಿಸುತ್ತಿದ್ದನು. (ಮತ್ತಾಯ 24:3) ಆ ಸಂಕಟವು ಇನ್ನೂ ನಮ್ಮ ಮುಂದೆ ಬರಲಿಕ್ಕಿದೆ.
16. ಮಾರ್ಕ 13:24 ಯಾವ ಸಂಕಟಕ್ಕೆ ನಿರ್ದೇಶಿಸುತ್ತದೆ, ಮತ್ತು ಹಾಗೆ ಏಕೆ?
16 ಮಾರ್ಕ 13:24ರ ಮಾತುಗಳ ಕುರಿತೇನು?: “ಇದಲ್ಲದೆ ಆ (those) ದಿನಗಳಲ್ಲಿ ಆ (that) ಸಂಕಟ ತೀರಿದ ಮೇಲೆ ಸೂರ್ಯನು ಕತ್ತಲಾಗಿ ಹೋಗುವನು; ಚಂದ್ರನು ಬೆಳಕುಕೊಡದೆ ಇರುವನು.” ಇಲ್ಲಿ, “ಆ” (those) ಮತ್ತು “ಆ” (that) ಎಂಬ ಎರಡೂ ಪದಗಳು, ಗ್ರೀಕ್ ಪದವಾದ ಇ-ಕೆಇ’ನೊಸ್ ಎಂಬ ಒಂದು ನಿರ್ದೇಶಕ ಸರ್ವನಾಮದ ಪದರೂಪವಾಗಿದ್ದು, ಸಮಯಾವಧಿಯಲ್ಲಿ ದೂರದಲ್ಲಿರುವ ಯಾವುದನ್ನೋ ಸೂಚಿಸುತ್ತವೆ. ಇ-ಕೆಇ’ನೊಸ್ನ್ನು ಅತಿ ಗತಕಾಲದ (ಯಾ ಹಿಂದೆ ಉಲ್ಲೇಖಿಸಿರುವ) ಯಾವುದಾದರೊಂದರ ಕುರಿತು ಯಾ ಬಹುದೂರದ ಭವಿಷ್ಯದ ಯಾವುದಾದರೊಂದರ ಕುರಿತು ಬಳಸಬಹುದು. (ಮತ್ತಾಯ 3:1; 7:22; 10:19; 24:38; ಮಾರ್ಕ 13:11, 17, 32; 14:25; ಲೂಕ 10:12; 2 ಥೆಸಲೊನೀಕ 1:10) ಹೀಗೆ, ಮಾರ್ಕ 13:24 “ಆ (that) ಸಂಕಟ” ಕ್ಕೆ ನಿರ್ದೇಶಿಸುವಾಗ, ಅದು ರೋಮನರಿಂದ ಕೆರಳಿಸಲ್ಪಟ್ಟ ಸಂಕಟಕ್ಕಲ್ಲ, ಬದಲಿಗೆ ಸದ್ಯದ ವ್ಯವಸ್ಥೆಯ ಅಂತ್ಯದಲ್ಲಿ ಯೆಹೋವನ ಮಹತ್ತಾದ ಕೃತ್ಯಕ್ಕೆ ಸೂಚಿಸುತ್ತದೆ.
17, 18. ಮಹಾ ಸಂಕಟವು ಹೇಗೆ ವಿಕಸನಗೊಳ್ಳುವದೆಂಬದರ ಮೇಲೆ ಪ್ರಕಟನೆ ಯಾವ ಬೆಳಕು ಬೀರುತ್ತದೆ?
17 ಪ್ರಕಟನೆ 17 ರಿಂದ 19 ನೆಯ ಅಧ್ಯಾಯಗಳು ಮತ್ತಾಯ 24:29-31, ಮಾರ್ಕ 13:24-27, ಮತ್ತು ಲೂಕ 21:25-28ರ ಈ ಅಳವಡಿಸಿದ ತಿಳಿವಳಿಕೆಯನ್ನು ಒಪ್ಪುತ್ತದೆ ಮತ್ತು ಸತ್ಯವೆಂದು ದೃಢಪಡಿಸುತ್ತವೆ. ಯಾವ ರೀತಿಯಲ್ಲಿ? ಈ ಮಹಾ ಸಂಕಟವು ಒಮ್ಮೆಲೇ ಒಂದೇ ಪೆಟ್ಟಿನಲ್ಲಿ ಆರಂಭಿಸಿ, ಅಂತ್ಯಗೊಳ್ಳುವುದಿಲ್ಲವೆಂದು ಸುವಾರ್ತೆಗಳು ತೋರಿಸುತ್ತವೆ; ಅದು ಆರಂಭಗೊಂಡ ನಂತರ, “ಮನುಷ್ಯಕುಮಾರನನ್ನು ಸೂಚಿಸುವ ಗುರುತನ್ನು” ನೋಡಲು ಮತ್ತು ಪ್ರತಿಕ್ರಿಯಿಸಲು—ಪ್ರಲಾಪಿಸಲು ಮತ್ತು, ಲೂಕ 21:26 ರಲ್ಲಿ ಹೇಳಲ್ಪಟ್ಟಂತೆ, “ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗಲು” ಮಾನವ ಕುಲದ ಕೆಲವು ಅವಿಧೇಯರು ಇನ್ನೂ ಜೀವಂತರಾಗಿರುವರು. ಆ ಪೂರ್ತಿ ಮುಳುಗಿಸಿಬಿಡುವ ಭಯವು, ಸನ್ನಿಹಿತವಾಗಿರುವ ಅವರ ನಾಶನವನ್ನು ಮುನ್ಸೂಚಿಸುವ ಆ “ಗುರುತನ್ನು” ಅವರು ನೋಡುವುದರ ಕಾರಣದಿಂದಾಗಿದೆ.
18 ಅಂತಾರಾಷ್ಟ್ರೀಯ “ಮೃಗ”ದ ಶಸ್ತ್ರಸನ್ನದ್ಧ “ಕೊಂಬುಗಳು” “ಮಹಾ ಜಾರಸ್ತ್ರೀ” ಯಾದ ಮಹಾ ಬಾಬೆಲಿನ ಮೇಲೆ ತಿರುಗಿಬೀಳುವಾಗ, ಭವಿಷ್ಯದ ಮಹಾ ಸಂಕಟವು ಆರಂಭಗೊಳ್ಳುವುದು ಎಂದು ಪ್ರಕಟನೆಯ ದಾಖಲೆಯು ತೋರಿಸುತ್ತದೆ.d (ಪ್ರಕಟನೆ 17:1, 10-16) ಆದರೆ ಅನೇಕ ಜನರು ಉಳಿಯುವರು, ಏಕೆಂದರೆ, ಸುಳ್ಳು ಧರ್ಮದ ಅಂತ್ಯಕ್ಕಾಗಿ ಅರಸರು, ವರ್ತಕರು, ನೌಕಾಧಿಪತಿಗಳು, ಮತ್ತು ಇತರರು ಗೋಳಾಡುವರು. ತಮ್ಮ ತೀರ್ಪು ಮುಂದಕ್ಕಿದೆ ಎಂದು ಅನೇಕರು ಅರಿತುಕೊಳ್ಳುವರೆಂಬದು ನಿಸ್ಸಂಶಯ.—ಪ್ರಕಟನೆ 18:9-19.
ಬರಲಿಕ್ಕಿರುವುದೇನು?
19. ಮಹಾ ಸಂಕಟವು ಆರಂಭಿಸುವಾಗ ನಾವೇನನ್ನು ನಿರೀಕ್ಷಿಸ ಸಾಧ್ಯವಿದೆ?
19 ಬಲುಬೇಗನೆ ಏನು ಸಂಭವಿಸಲಿದೆ ಎಂಬುದರ ಮೇಲೆ ಗಮನಾರ್ಹವಾದ ಪ್ರಕಾಶವನ್ನು ಬೀರಲು, ಮತ್ತಾಯ, ಮಾರ್ಕ, ಮತ್ತು ಲೂಕನ ಸುವಾರ್ತೆಯ ಭಾಗಗಳು ಪ್ರಕಟನೆ 17-19 ಅಧ್ಯಾಯಗಳೊಂದಿಗೆ ಜತೆಸೇರುತ್ತವೆ. ದೇವರ ನಿರ್ಧರಿತ ಸಮಯದಲ್ಲಿ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯ (ಮಹಾ ಬಾಬೆಲ್) ವಿರುದ್ಧದ ದಾಳಿಯೊಂದಿಗೆ ಮಹಾ ಸಂಕಟವು ಆರಂಭಗೊಳ್ಳುವುದು. ಅಪನಂಬಿಗಸ್ತ ಯೆರೂಸಲೇಮಿನ ಪಡಿರೂಪವಾಗಿರುವ ಕ್ರೈಸ್ತಪ್ರಪಂಚದ ವಿರುದ್ಧ ಇದು ವಿಶೇಷವಾಗಿ ತೀವ್ರವಾಗಿರಲಿರುವುದು. ಸಂಕಟದ ಈ ಹಂತವು “ತೀರಿದಕೂಡಲೆ,” “ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು, ಭೂಮಿಯ ಮೇಲೆ . . . ಜನಗಳಿಗೆ ದಿಕ್ಕುಕಾಣದೆ [ಅಭೂತಪೂರ್ವ] ಸಂಕಟವು ಉಂಟಾಗುವದು.”—ಮತ್ತಾಯ 24:29; ಲೂಕ 21:25.
20. ನಾವಿನ್ನೂ ಯಾವ ಆಕಾಶಸ್ಥ ಉತ್ಪಾತಗಳನ್ನು ನಿರೀಕ್ಷಿಸ ಸಾಧ್ಯವಿದೆ?
20 ‘ಸೂರ್ಯನು ಕತ್ತಲಾಗುವುದು, ಚಂದ್ರನು ಬೆಳಕನ್ನು ಕೊಡದೆ ಇರುವುದು, ನಕ್ಷತ್ರಗಳು ಆಕಾಶದಿಂದ ಉದುರುವುದು, ಮತ್ತು ಆಕಾಶದ ಶಕ್ತಿಗಳು ಕದಲುವುದು’ ಯಾವ ಅರ್ಥದಲ್ಲಿ? ಮಹಾ ಸಂಕಟದ ಆರಂಭದ ಹಂತದಲ್ಲಿ, ನಿಸ್ಸಂದೇಹವಾಗಿ ಅನೇಕ ಜ್ಯೋತಿಗಳು—ಧಾರ್ಮಿಕ ಜಗತ್ತಿನ ಪ್ರಖ್ಯಾತ ವೈದಿಕರು—ಬಯಲುಗೊಳಿಸಲ್ಪಡುವುವು ಮತ್ತು ಪ್ರಕಟನೆ 17:16 ರಲ್ಲಿ ತಿಳಿಸಲ್ಪಟ್ಟ “ಹತ್ತು ಕೊಂಬುಗಳಿಂದ” ನಿರ್ಮೂಲಗೊಳಿಸಲ್ಪಡುವುವು. ರಾಜಕೀಯ ಶಕ್ತಿಗಳು ಕೂಡ ಕದಲಿಸಲ್ಪಡುವುವು ಎಂಬುದರಲ್ಲಿ ಸಂದೇಹವಿಲ್ಲ. ಭೌತಿಕ ಆಕಾಶದಲ್ಲಿ ಭೀತಿಗೊಳಿಸುವ ಘಟನೆಗಳು ಕೂಡ ಇರಬಲ್ಲವೊ? ಪ್ರಾಯಶಃ ಸಂಭವಿಸಲಿರುವುವು, ಮತ್ತು ಯೆಹೂದ್ಯ ವ್ಯವಸ್ಥೆಯ ಅಂತ್ಯದ ಸಮೀಪದಲ್ಲಿ ಸಂಭವಿಸಿರುವುದಾಗಿ ಜೊಸೀಫಸನಿಂದ ವಿವರಸಲ್ಪಟ್ಟದ್ದಕ್ಕಿಂತಲೂ ಎಷ್ಟೋ ಹೆಚ್ಚು ಗಂಭೀರ ಭೀಷಣವಾಗಿರುವುವು. ಪ್ರಾಚೀನ ಕಾಲಗಳಲ್ಲಿ ಅಂತಹ ನಾಶಕಾರಕ ಪರಿಣಾಮಗಳನ್ನುಂಟು ಮಾಡುವುದಕ್ಕೆ ದೇವರು ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದು ನಮಗೆ ತಿಳಿದದೆ ಮತ್ತು ಅವನು ಹಾಗೆ ಪುನಃ ಮಾಡಬಲ್ಲನು.—ವಿಮೋಚನಕಾಂಡ 10:21-23; ಯೆಹೋಶುವ 10:12-14; ನ್ಯಾಯಸ್ಥಾಪಕರು 5:20; ಲೂಕ 23:44, 45.
21. ಭವಿಷ್ಯತ್ತಿನ ಒಂದು “ಸೂಚನೆ” ಯು ಹೇಗೆ ಸಂಭವಿಸುವುದು?
21 ಈ ಬಿಂದುವಿನಲ್ಲಿ ಸುವಾರ್ತೆಯ ಮೂವರು ಲೇಖಕರೂ ಮುಂದಿನ ವಿಕಸನವನ್ನು ಪ್ರಸ್ತಾಪಿಸಲು ಗ್ರೀಕ್ ಶಬ್ದವಾದ ಟೊ’ಟೆ (ತದನಂತರ) ಯನ್ನು ಬಳಸುತ್ತಾರೆ. “ತದನಂತರ ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು.” (ಮತ್ತಾಯ 24:30; ಮಾರ್ಕ 13:26; ಲೂಕ 21:27, NW) ಮೊದಲನೆಯ ಲೋಕ ಯುದ್ಧದಂದಿನಿಂದ, ಯೇಸುವಿನ ನಿಜ ಶಿಷ್ಯರು ಅವನ ಅದೃಶ್ಯ ಸಾನ್ನಿಧ್ಯದ ಸಂಘಟಿತ ಸೂಚನೆಯನ್ನು ವಿವೇಚಿಸಿ ತಿಳಿದಿರುವಾಗ, ಅಧಿಕಾಂಶ ಜನರಾದರೋ ಅದನ್ನು ತಿಳಿಯದೆ ಇದ್ದಾರೆ. ಆದರೆ ಮತ್ತಾಯ 24:30, ಮುಂದೆ ಭವಿಷ್ಯದಲ್ಲಿ ಗೋಚರಿಸುವ ಇನ್ನು ಹೆಚ್ಚಿನ ಒಂದು “ಸೂಚನೆ”ಗೆ ನಿರ್ದೇಶಿಸುತ್ತದೆ, ಅದು “ಮನುಷ್ಯಕುಮಾರ” ನದ್ದು, ಮತ್ತು ಎಲ್ಲಾ ಜನಾಂಗಗಳು ಅದನ್ನು ಗಮನಿಸುವಂತೆ ಬಲಾತ್ಕರಿಸಲ್ಪಡುವರು. ಅದೃಶ್ಯತೆಯ ಮೇಘಗಳೊಂದಿಗೆ ಯೇಸು ಬರುವಾಗ, ವಿರೋಧಿಸುವ ಮಾನವರು ಅವನ ರಾಜವೈಭವದ ಶಕ್ತಿಯ ಒಂದು ಪ್ರಕೃತ್ಯತೀತ ಪ್ರದರ್ಶನದ ಕಾರಣ ಆ “ಬರೋಣ” (ಗ್ರೀಕ್, er’kho-me’non)ವನ್ನು ಗಮನಿಸಲೇ ಬೇಕಾಗುವದು.—ಪ್ರಕಟನೆ 1:7.
22. ಮತ್ತಾಯ 24:30 ರ “ಸೂಚನೆ”ಯನ್ನು ನೋಡುವುದರ ಪರಿಣಾಮವೇನಾಗಲಿದೆ?
22 ಅನಂತರ ಏನು ಬರುತ್ತದೆ ಎಂಬುದನ್ನು ಪ್ರಸ್ತಾಪಿಸಲು ಮತ್ತಾಯ 24:30 ಟೊ’ಟೆ ಯನ್ನು ಇನ್ನೊಂದು ಬಾರಿ ಉಪಯೋಗಿಸುತ್ತದೆ. ಆಗ ಜನಾಂಗಗಳು, ತಮ್ಮ ಪರಿಸ್ಥಿತಿಯ ಅಂತ್ಯಫಲವನ್ನು ತಿಳಿದುಕೊಂಡವರಾಗಿ ತಮ್ಮ ನಾಶನವು ಸನ್ನಿಹಿತವಾಗಿದೆಯೆಂದು ಅವರು ಪ್ರಾಯಶಃ ತಿಳುಕೊಳ್ಳುವುದರಿಂದ, ಎದೆಬಡಕೊಳ್ಳುವರು ಮತ್ತು ಪ್ರಲಾಪಿಸುವರು, ದೇವರ ಸೇವಕರ ವಿಷಯದಲ್ಲೋ ಎಷ್ಟೊಂದು ಭಿನ್ನತೆ, ಯಾಕಂದರೆ ಬಿಡುಗಡೆಯು ಸಮೀಪಿಸಿದೆ ಎಂದು ತಿಳಿದುಕೊಂಡು, ನಾವು ನಮ್ಮ ತಲೆಗಳನ್ನು ಎತ್ತಲು ಶಕ್ತರಾಗುವೆವು! (ಲೂಕ 21:28) ಮಹಾ ಜಾರಸ್ತ್ರೀಯ ಅಂತ್ಯಕ್ಕಾಗಿ ಪರಲೋಕದಲ್ಲಿ ಮತ್ತು ಭೂಮಿಯ ಮೇಲಿರುವ ಸತ್ಯಾರಾಧಕರು ಹರ್ಷಿಸುವುದನ್ನು ಸಹ ಪ್ರಕಟನೆ 19:1-6 ತೋರಿಸುತ್ತದೆ.
23. (ಎ) ಆದುಕೊಂಡವರೆಡೆಗೆ ಯೇಸು ಯಾವ ಕ್ರಿಯೆಯನ್ನು ಕೈಕೊಳ್ಳುವನು? (ಬಿ) ಉಳಿಕೆಯವರು ಪರಲೋಕಕ್ಕೆ ತಕ್ಕೊಳ್ಳಲ್ಪಡುವ ಕುರಿತು ಏನು ಹೇಳಬಹುದು?
23 ಮಾರ್ಕ 13:27 (NW) ರಲ್ಲಿ ಯೇಸುವಿನ ಪ್ರವಾದನೆಯು ಮುಂದರಿಸುತ್ತಾ ಅನ್ನುವುದು: “ತದನಂತರ [ಟೊ’ಟೆ] ಆತನು ತನ್ನ ದೂತರನ್ನು ಕಳುಹಿಸಿ ತಾನು ಆದುಕೊಂಡವರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು.” ಇಲ್ಲಿ ಯೇಸುವು ಭೂಮಿಯ ಮೇಲೆ ಇನ್ನೂ ಬದುಕಿರುವ “ಆದುಕೊಂಡವ” ರಾದ 1,44,000 ಮಂದಿಯಲ್ಲಿ ಉಳಿಕೆಯವರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾನೆ. ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಆರಂಭದಲ್ಲಿ ಯೇಸುವಿನ ಈ ಅಭಿಷಿಕ್ತ ಶಿಷ್ಯರು ದೇವಪ್ರಭುತ್ವ ಐಕ್ಯದೊಳಗೆ ತರಲ್ಪಟ್ಟರು. ಆದಾಗ್ಯೂ, ಪ್ರಯೋಗಿಸಲ್ಪಟ್ಟ ಕ್ರಮಾನುಗತಿಗನುಸಾರ, ಮಾರ್ಕ 13:27 ಮತ್ತು ಮತ್ತಾಯ 24:31 ಇನ್ನೂ ಬೇರೊಂದನ್ನು ವರ್ಣಿಸುತ್ತದೆ. “ತುತೂರಿಯ ಮಹಾ ಶಬ್ದದಿಂದ” “ಆದುಕೊಂಡವ” ರಲ್ಲಿ ಉಳಿದವರು ಭೂಮಿಯ ಕಟ್ಟಕಡೆಗಳಿಂದ ಒಟ್ಟುಗೂಡಿಸಲ್ಪಡುವರು. ಅವರು ಹೇಗೆ ಒಟ್ಟುಗೂಡಿಸಲ್ಪಡುವರು? ನಿಸ್ಸಂದೇಹವಾಗಿ, ಅವರು “ಮುದ್ರೆಒತ್ತಿಸಿಕೊಂಡ” ವರಾಗಿರುವರು ಮತ್ತು “ದೇವರು ಕರೆದವರೂ ದೇವರಾದುಕೊಂಡವರೂ ನಂಬಿಗಸ್ತರೂ” ಆಗಿರುವವರ ಭಾಗದೋಪಾದಿ ಯೆಹೋವನಿಂದ ಸ್ಪಷ್ಟವಾಗಿಗಿ ಗುರುತಿಸಲ್ಪಡುವರು. ಮತ್ತು ದೇವರ ನಿರ್ಧರಿತ ಸಮಯದಲ್ಲಿ, ಅವರು ರಾಜರೂ, ಯಾಜಕರೂ ಆಗಿ ಪರಲೋಕದಲ್ಲಿ ಒಟ್ಟುಗೂಡಿಸಲ್ಪಡುವರು.e ಇದು ಅವರಿಗೆ ಮತ್ತು ಅವರ ನಂಬಿಗಸ್ತ ಸಂಗಾತಿಗಳಾದ “ಮಹಾ ಸಮೂಹ” ದವರಿಗೆ ಆನಂದವನ್ನು ತರಲಿರುವುದು, ಇವರು ಸ್ವತಃ ‘ಮಹಾ ಸಂಕಟವನ್ನು ಅನುಭವಿಸಿ ಬಂದವರಾಗಿ’ ಗುರುತುಮಾಡಲ್ಪಟ್ಟು ಪರದೈಸ ಭೂಮಿಯಲ್ಲಿ ನಿತ್ಯ ಆಶೀರ್ವಾದಗಳಲ್ಲಿ ಆನಂದಿಸುವರು.—ಮತ್ತಾಯ 24:22; ಪ್ರಕಟನೆ 7:3, 4, 9-17; 17:14; 20:6; ಯೆಹೆಜ್ಕೇಲ 9:4, 6.
24. ಬರಲಿರುವ ವಿಕಸನಗಳ ಸಂಬಂಧದಲ್ಲಿ ಮತ್ತಾಯ 24:29-31 ಯಾವ ಕ್ರಮಾನುಗತಿಯನ್ನು ಪ್ರಕಟಿಸುತ್ತದೆ?
24 ಅಪೊಸ್ತಲರು “ನಮಗೆ ಹೇಳು . . .,” ಎಂದು ಹೇಳಿದಾಗ, ಯೇಸುವಿನ ಉತ್ತರವು ಅವರು ಗ್ರಹಿಸ ಸಾಧ್ಯವಿದದ್ದಕ್ಕಿಂತಲೂ ಹೆಚ್ಚಿನದ್ದನ್ನು ಆವರಿಸಿತ್ತು. ಆದರೂ, ಅವರ ಜೀವಮಾನಕಾಲದಲ್ಲಿ, ಅವನ ಪ್ರವಾದನೆಯ ಚಿತ್ರರೂಪದ ನೆರವೇರಿಕೆಯನ್ನು ಕಾಣಲು ಅವರು ಸಂತೋಷಿಸಿದರು. ಯೇಸುವಿನ ಉತ್ತರದ ನಮ್ಮ ಅಧ್ಯಯನವು, ಸಮೀಪ ಭವಿಷ್ಯತ್ತಿನಲ್ಲಿ ನೆರವೇರಲಿರುವ ಅವನ ಪ್ರವಾದನೆಯ ಆ ಭಾಗದ ಮೇಲೆ ಕೇಂದ್ರೀಕರಿಸಿತು. (ಮತ್ತಾಯ 24:29-31; ಮಾರ್ಕ 13:24-27; ಲೂಕ 21:25-28) ನಮ್ಮ ಬಿಡುಗಡೆಯು ಹತ್ತರಿಸುತ್ತಿದೆ ಎಂಬದನ್ನು ನಾವು ಈಗಾಗಲೇ ಕಾಣಬಲ್ಲೆವು. ಮಹಾ ಸಂಕಟದ ಆರಂಭವನ್ನು, ತದನಂತರ ಮನುಷ್ಯಕುಮಾರನ ಸೂಚನೆ, ಮತ್ತು ತದನಂತರ ಆದುಕೊಂಡವರ ದೇವರ ಒಟ್ಟುಗೂಡಿಸುವಿಕೆಯನ್ನು ನಾವು ಮುನ್ನೋಡಬಲ್ಲೆವು. ಕಟ್ಟಕಡೆಗೆ, ನಮ್ಮ ಯೋಧ-ಅರಸ, ಸಿಂಹಾಸನಾಸೀನನಾಗಿರುವ ಯೇಸುವು, ಅರ್ಮಗೆದೋನಿನಲ್ಲಿ ಯೆಹೋವನ ಸಂಹಾರಕನೋಪಾದಿ “ತನ್ನ ವಿಜಯವನ್ನು ಪೂರ್ಣಗೊಳಿಸ” ಲಿರುವನು. (ಪ್ರಕಟನೆ 6:2, NW) ಅವನು ಪ್ರತೀಕಾರವನ್ನು ತೀರಿಸುವಾಗ, ಯೆಹೋವನ ಆ ದಿನವು, 1914 ರಿಂದ ಹಿಡಿದು ಕರ್ತನಾದ ಯೇಸುವಿನ ದಿನವನ್ನು ಗುರುತಿಸಿದ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಮಹಿಮೆಯ ಅಂತ್ಯದೋಪಾದಿ ಬರುವುದು.
25. ಲೂಕ 21:28ರ ಇನ್ನೂ ಭವಿಷ್ಯತ್ತಿನ ನೆರವೇರಿಕೆಯಲ್ಲಿ ನಾವು ಹೇಗೆ ಪಾಲಿಗರಾಗಬಲ್ಲೆವು?
25 “ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ” ಎಂಬ ಯೇಸುವಿನ ಮಾತುಗಳ ಇನ್ನೂ ಭವಿಷ್ಯದ ನೆರವೇರಿಕೆಗೆ ಪ್ರತಿಕ್ರಿಯೆ ನೀಡಲಿಕ್ಕಾಗಿ, ದೈವಿಕ ಬೋಧನೆಯಿಂದ ನೀವು ನಿಮ್ಮನ್ನು ಪ್ರಯೋಜನ ಪಡಿಸುತ್ತಾ ಇರುವಂತಾಗಲಿ. (ಲೂಕ 21:28) ಯೆಹೋವನು ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸಲು ಮುಂದರಿಯುವಾಗ, ಎಂತಹ ಭವ್ಯ ಭವಿಷ್ಯವು ಆದುಕೊಂಡವರ ಮತ್ತು ಮಹಾ ಸಮೂಹದವರ ಮುಂದಿರುತ್ತದೆ!
[ಪಾದಟಿಪ್ಪಣಿಗಳು]
a ನಮ್ಮ ದಿನಗಳ ಭೌತಿಕ ನಿಜತ್ವಗಳು ಬೈಬಲ್ ಪ್ರವಾದನೆಯನ್ನು ಹೇಗೆ ನೆರವೇರಿಸುತ್ತವೆಂದು ತೋರಿಸುತ್ತಾ, ಇದಕ್ಕೆ ರುಜುವಾತನ್ನೊದಗಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ.
b ಅಧಿಕ ಮಾಹಿತಿಯು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1973 ರಲ್ಲಿ ಪ್ರಕಾಶಿತವಾದ ಗಾಡ್ಸ್ ಕಿಂಗ್ಡಮ್ ಆಫ್ ಅ ತೌಸೆಂಡ್ ಇಯರ್ಸ್ ಹ್ಯಾಸ್ ಎಪ್ರೋಚ್ಡ್, ಪುಟ 296-323 ರಲ್ಲಿ, ಮತ್ತು ಸಪ್ಟಂಬರ 15, 1982 ರ ದ ವಾಚ್ಟವರ್, ಪುಟ 17-22 ರಲ್ಲಿ ಕಂಡುಬರುತ್ತದೆ.
c ಯೆರೂಸಲೇಮಿನ ಮೇಲೆ ರೋಮನ್ ಸೇನೆಯ ಆರಂಭಿಕ ದಾಳಿ (ಸಾ.ಶ. 66) ಮತ್ತು ಅದರ ನಾಶನದ ನಡುವಿನ ವಿಕಸನಗಳ ಕುರಿತು ಜೊಸೀಫಸ್ ಬರೆಯುವುದು: “ರಾತ್ರಿಯಲ್ಲಿ ಒಂದು ವಿಧ್ವಂಸಕಾರೀ ಬಿರುಗಾಳಿ ಎದಿತ್ದು; ಚಂಡಮಾರುತವು ಅತ್ಯುಗ್ರಗೊಂಡಿತು, ಧಾರಾಕಾರವಾಗಿ ಮಳೆಯು ಸುರಿಯಿತು, ಮಿಂಚು ಸತತವಾಗಿ ಹೊಳೆಯಿತು, ಸಿಡಿಲುಹೊಡೆತಗಳು ಭಯಹುಟ್ಟಿಸಿದವು, ಭೂಮಿಯು ಕಿವುಡುಗೊಳಿಸುವ ಘರ್ಜನೆಗಳಿಂದ ಕಂಪಿಸಿತು. ವಿಷಯಗಳ ಇಡೀ ರೂಪಚೌಕಟ್ಟಿನ ಈ ಕುಸಿತದಿಂದ ಸರಳವಾಗಿ ಮಾನವ ಕುಲದ ಮೇಲೆ ಆಪತ್ತು ಮುನ್ಚಿತ್ರಿಸಲ್ಪಟ್ಟಿತು, ಮತ್ತು ಈ ಕೆಟ್ಟ ಘಟನೆಗಳು ಸರಿಹೋಲಿಕೆಯಿಲ್ಲದ ವಿನಾಶದ ಮುನ್ನೆಚ್ಚರಿಕೆಯಾಗಿತ್ತೆಂಬುದನ್ನು ಯಾರೊಬ್ಬನೂ ಸಂದೇಹಿಸಲು ಸಾಧ್ಯವಿರಲಿಲ್ಲ.”
d ಯೇಸು ಯಾವುದನ್ನು “ಮಹಾ ಸಂಕಟ” ವಾಗಿ ಮತ್ತು “ಒಂದು ಸಂಕಟ” ವಾಗಿ ಹೇಳಿದನೋ ಅದು ಅದರ ಪ್ರಥಮ ಅನ್ವಯದಲ್ಲಿ ಯೆಹೂದ್ಯ ವ್ಯವಸ್ಥೆಯ ನಾಶನವಾಗಿತ್ತು. ಆದರೆ ನಮ್ಮ ದಿನಕ್ಕೆ ಮಾತ್ರವೇ ಅನ್ವಯಿಸುವ ವಚನಗಳಲ್ಲಿ, ಆತನು ನಿರ್ದೇಶಕ ಗುಣವಾಚಿ “the” ಬಳಸುತ್ತಾ “the tribulation” (ಆ ಸಂಕಟ) ಎಂದು ಹೇಳಿದ್ದಾನೆ. (ಮತ್ತಾಯ 24:21, 29; ಮಾರ್ಕ 13:19, 24) ಪ್ರಕಟನೆ 7:14 ಈ ಭವಿಷ್ಯದ ಘಟನೆಯನ್ನು “ಆ ಮಹಾ ಸಂಕಟ” ವಾಗಿ, ಅಕ್ಷರಶಃ “ಮಹತ್ತಾದ ಆ ಸಂಕಟ” ವಾಗಿ ಹೇಳಿಯದೆ.
e ನೋಡಿರಿ ಆಗಸ್ಟ್ 15, 1990ರ ದ ವಾಚ್ಟವರ್ ನಲ್ಲಿ “ವಾಚಕರಿಂದ ಪ್ರಶ್ನೆಗಳು.”
ಜ್ಞಾಪಕಕ್ಕೆ ತರುತ್ತೀರೋ?
▫ ಯೋವೇಲ 2:28-31 ಮತ್ತು 3:15ರ ವೈಶಿಷ್ಟ್ಯಗಳು ಒಂದನೆಯ ಶತಮಾನದಲ್ಲಿ ನೆರವೇರಿದ್ದು ಹೇಗೆ?
▫ ಮತ್ತಾಯ 24:29 ನಿರ್ದೇಶಿಸುತ್ತಿರುವ ಸಂಕಟವು ಯಾವುದು, ಮತ್ತು ನಾವು ಆ ತೀರ್ಮಾನ ಮಾಡುವುದೇಕೆ?
▫ ಮತ್ತಾಯ 24:29 ಯಾವ ಆಕಾಶಸ್ಥ ಉತ್ಪಾತಗಳಿಗೆ ನಿರ್ದೇಶಿಸುತ್ತದೆ, ಮತ್ತು ಇದು ಸಂಕಟವು ತೀರಿದಕೂಡಲೆ ಹೇಗಾಗಬಲ್ಲದು?
▫ ಲೂಕ 21:26, 28 ಭವಿಷ್ಯತ್ತಿನಲ್ಲಿ ಹೇಗೆ ನೆರವೇರಲಿಕ್ಕಿದೆ?
[Picture on page 16, 17]
ದೇವಾಲಯ ಕ್ಷೇತ್ರ
[ಕೃಪೆ]
Pictorial Archive (Near Eastern History) Est.