ಆ ಸೂಚನ—ನೀವು ನೋಡಿರುವಿರೋ?
“ಸಮುದ್ರದ ಮೇಲ್ನೀರಿನ ಎಷ್ಟೋ ಕೆಳಗಿನ ನಡುನೀರಿನಲ್ಲಿ ಒಂದು ನಿಡಿದಾದ ಉರುಟು ಮೂಗಿನ ಜಲಾಂತರ್ಗಾಮಿ ನಾವೆ ಸಮುದ್ರದ ಮೇಲ್ಮೈಯ ಬಿರುಸಾದ ಅಲೆಗಳಿಂದ ಕದಲದೆ ನಿಶ್ಚಲವಾಗಿ ನಿಂತಿದೆ. ಈ ನಾವೆಯ ಅಟ್ಟದ ಕಂಡಿಯೊಂದು ತೆರೆಯಲಾಗಿ 30ಕ್ಕಿಂತಲೂ ಹೆಚ್ಚು ಅಡಿ ಉದ್ದ, 4 1/2 ಅಡಿ ದಪ್ಪದ ರಾಕೆಟ್ ಥಟ್ಟನೆ ಹೊರಬಂದು ಮೇಲ್ಮೈಗೇರುತ್ತದೆ. ಈ ರಾಕೆಟನ್ನು ಸಂಕುಚಿತ ವಾಯು ಮೇಲೆ ಎತ್ತುವಂತೆ ದೂಡಿದರೂ ಅದು ಸಮುದ್ರದ ಹೊರಮೈಯನ್ನು ತಲುಪಿದೊಡನೆ ಅದರ ಇಂಜಿನು ಉರಿ ಹೊತ್ತಲಾಗಿ ಆ ರಾಕೆಟ್ ಗರ್ಜನೆಯೊಂದಿಗೆ ನೀರಿನಿಂದ ಸಿಡಿಯುತ್ತದೆ.”
ಮಾರ್ಟನ್ ಕೀನ್ ಬರೆದ ರಾಕೆಟ್, ಮಿಸೈಲ್ಸ ಎಂಡ್ ಸ್ಪೇಸ್ ಕ್ರಾಫ್ಟ್ಸ್ ಎಂಬ ಪುಸ್ತಕದಲ್ಲಿ ಕಂಡು ಬರುವ ಜಲಾಂತರ್ಗಾಮಿ ನಾವೆಯಿಂದ ಹೊರಡುವ ಬ್ಯಾಲಿಸ್ಟಿಕ್ ಮಿಸೈಲಿನ ಈ ವರ್ಣನೆ “ಸಮುದ್ರದ. . . ಘೋಷದ ನಿಮಿತ್ತ” ಲೋಕಸಂಕಟದ ಸಮಯವೊಂದನ್ನು ಮುಂತಿಳಿಸಿದ ಪೂರ್ವಕಾಲದ ಒಂದು ಪ್ರವಾದನೆಗೆ ಅರ್ಥಕೊಡುತ್ತದೆ. (ಲೂಕ 21:25) ಈ ಬ್ಯಾಲಿಸ್ಟಿಕ್ ಮಿಸೈಲ್ ಸಬ್ಮೆರಿನ್ಗಳಿಂದ ಎಷ್ಟು ದೊಡ್ಡ ಅಪಾಯ ಬರುವ ಭಯವಿದೆ?
ಜೇನ್ಸ್ ಫೈಟಿಂಗ್ ಶಿಪ್ಸ್, 1986-1987, ಎಂಬ ಪುಸ್ತಕ ಹೇಳುವಂತೆ ಬ್ರಿಟನ್, ಚೈನಾ, ಫ್ರಾನ್ಸ್, ರಷ್ಯಾ ಮತ್ತು ಅಮೇರಿಕಗಳ ಈಗ ಕಾರ್ಯನಡಿಸುತ್ತಿವೆ. ಯಾವ ನಗರವೂ ಅವುಗಳ ಪ್ರಭಾವಕ್ಕೆ ಮೀರುವಷ್ಟು ದೂರವಿರುವುದಿಲ್ಲ. ಅವುಗಳ ಸ್ಪೋಟಕ ಮೂತಿ ಸಾಮಾನ್ಯವಾಗಿ ಗುರಿಯಿಂದ ಒಂದು ಮೈಲಿನೊಳಗೆ ಬಂದು ಬೀಳುತ್ತವೆ. ದ ಗಿನೆಸ್ ಬುಕ್ ಆಫ್ ರೆಕಾರ್ಡ್ಸ್ ಎಂಬ ಪುಸ್ತಕ್ಕನುಸಸಾರವಾಗಿ, ಇವುಗಳಲ್ಲಿ ಕೆಲವು “5,000 ಮೈಲು ದೂರದೊಳಗಿರುವ ಯಾವ ದೇಶವನ್ನು ನಾಶಮಾಡುವಷ್ಟು” ಸ್ಪೋಟಕ ಮೂತಿಗಳನ್ನು ಹೊತ್ತುಕೊಂಡಿರುತ್ತವೆ. ಇದಕ್ಕಿಂತಲೂ ಕೆಟ್ಟದಾಗಿ ಒಂದೇ ಒಂದು ಬ್ಯಾಲಿಸ್ಟಿಕ್ ಮಿಸೈಲ್ ಸಬ್ಮೆರೀನ್ನಲ್ಲಿರುವ ಸ್ಪೋಟಕ ಮೂತಿಗಳು ಇಡೀ ಭೂಮಿಯ ಸರ್ವಜೀವವನ್ನು ಅಪಾಯಕ್ಕೊಳಪಡಿಸುವ ನ್ಯೂಕ್ಲಿಯರ್ ಚಳಿಗಾಲವನ್ನು ತರಬಲ್ಲದೆಂದು ಕೆಲವರ ವಾದ! ದೂರದಲ್ಲಿರುವ ಈ ಜಲಾಂತರ್ಗಾಮಿ ನಾವೆಗಳ ನಿಯಂತ್ರಣವೂ ಒಂದು ಸಬ್ ಮೆರೀನ್ ದುಡುಕಿ ಮಾಡಿದ ವರ್ತನೆಯಿಂದಾಗಿ ಮಾರಕವಾದ ನ್ಯೂಕ್ಲಿಯರ್ ಯುದ್ಧವೇ ಆರಂಭವಾಗಬಹುದೆಂದು ಕೆಲವರು ಭಯಪಡುತ್ತಾರೆ.
ಇಂಥ ಭಯ ಹುಟ್ಟಿಸುವ ಪ್ರತೀಕ್ಷೆಗಳನ್ನು ಅನೇಕರು ಯೇಸುವಿನ ಪ್ರವಾದನಾ ಸೂಚನೆಗೆ ಸಂಬಂಧಿಸಿದ್ದಾರೆ. ನಮ್ಮ ಸಂತತಿ ಆ ಸೂಚನೆಯ ನೆರವೇರಿಕೆಯನ್ನು ಅನುಭವಿಸುತ್ತಿರಬಹುದೋ? ನಿಜತ್ವಗಳು ಹೌದೆನ್ನುತ್ತವೆ. ಮತ್ತು ನ್ಯೂಕ್ಲಿಯರ್ ಯುದ್ಧಾಪಾಯದಿಂದ ಬಿಡುಗಡೆ ನಿಕಟವಾಗಿದೆ ಎಂದೇ ಇದರ ಅರ್ಥ. (ಲೂಕ 21:28, 32) ಇಂಥ ಶುಭ ಪ್ರತೀಕ್ಷೆಯಿರುವುದರಿಂದ ಈ ಸೂಚನೆಯ ನೆರವೇರಿಕೆಯ ರುಜುವಾತನ್ನು ಪರೀಕ್ಷಿಸಿರೆಂದು ನಮ್ಮ ಆಮಂತ್ರಣ. ಆ ಸೂಚನೆಯ ಕೆಲವು ಪ್ರಧಾನ ಲಕ್ಷಣಗಳನ್ನೂ ಅವುಗಳ ಆಧುನಿಕ ನೆರವೇರಿಕೆಯನ್ನೂ ಪಕ್ಕದಲ್ಲಿ ಕೊಡಲಾಗಿದೆ.
“ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವುವು.” (ಲೂಕ 21:10)
1914ರಿಂದ ಹಿಡಿದು 10 ಕೋಟಿಗಿಂತಲೂ ಹೆಚ್ಚು ಜನರು ಯುದ್ಧಗಳಿಂದ ಸತ್ತಿದ್ದಾರೆ. 1ನೇ ಜಾಗತಿಕ ಯುದ್ಧವು 1914ರಲ್ಲಿ ಆರಂಭವಾಗಿ 28 ದೇಶಗಳನ್ನೊಳಗೊಂಡಿತು. ಆ ದಿನಗಳ ಅನೇಕ ಯುರೋಪಿನ ವಸಾಹತುಗಳು ಈ ಸಂಖ್ಯೆಯಲ್ಲಿ ಸೇರಿರುವುದಿಲ್ಲ. ಕೆಲವೇ ರಾಷ್ಟ್ರಗಳು ತಟಸ್ಥವಾಗಿ ನಿಂತವು. 1 ಕೋಟಿ 30 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಪ್ರಾಣನಷ್ಟವಾಗಿ 2 ಕೋಟಿ 10 ಲಕ್ಷಕ್ಕೂ ಹೆಚ್ಚು ಸೈನಿಕರು ಗಾಯಗೊಂಡರು. ಆ ಬಳಿಕ ಇದಕ್ಕಿಂದಲೂ ಎಷ್ಟೋ ಹೆಚ್ಚು ನಾಶಕರವಾದ 2ನೇ ಜಾಗತಿಕ ಯುದ್ಧ ಆರಂಭವಾಯಿತು. ಮತ್ತು ಅಂದಿನಿಂದಲೋ? “ಲೋಕದ ಯುದ್ಧಗಳು” ಎಂಬ ಲೇಖನದಲ್ಲಿ ಲಂಡನಿನ ಸಂಡೇ ಟೈಮ್ಸ್ ಹೀಗೆ ಹೇಳಿತೆಂದು ದಕ್ಷಿಣ ಆಫ್ರಿಕದ ದ ಸ್ಟಾರ್ ಉಲ್ಲೀಖಿಸಿತು: “ಲೋಕದ ರಾಷ್ಟ್ರಗಳಲ್ಲಿ ಕಾಲು ಭಾಗ ಈಗ ಹೋರಾಟಗಳಲ್ಲಿ ಸಿಕ್ಕಿಕೊಂಡಿವೆ.”
“ಮಹಾ ಭೂಕಂಪಗಳಾಗುವವು.” (ಲೂಕ 21:11)
ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರುಗಳಾದ ಜೆರಿ ಮತ್ತು ಷಾ ಎಂಬವರು ಟೆರಾ ನಾನ್ ಫರ್ಮ ಎಂಬ ಪುಸ್ತಕದಲ್ಲಿ ಕಳೆದ ಮೂರು ಸಾವಿರ ವರ್ಷಗಳಲ್ಲಿ ನಡೆದಿದ್ದ “ಲೋಕದ ಗಮನಾರ್ಹವಾದ ಭೂಕಂಪಗಳಲ್ಲಿ” 164 ಭೂಕಂಪಗಳ ವಿವರಣೆಯನ್ನು ಕೊಡುತ್ತಾರೆ. ಈ ಮೊತ್ತದಲ್ಲಿ 89 ಭೂಕಂಪಗಳು 1914 ರಿಂದ ಸಂಭವಿಸಿದ್ದು 10 ಲಕ್ಷ 47 ಸಾವಿರದ 944 ಜೀವಗಳನ್ನು ನಷ್ಟಪಡಿಸಿದೆ ಯೆಂದು ಅಂದಾಜು ಮಾಡಲಾಗಿದೆ. ಈ ಪಟ್ಟಿಯಲ್ಲಿ ದೊಡ್ಡ ಭೂಕಂಪಗಳನ್ನು ಮಾತ್ರ ಸೇರಿಸಲಾಗಿದೆ ಮತ್ತು ಟೆರಾ ನಾನ್ ಫರ್ಮ 1984 ರಲ್ಲಿ ಪ್ರಕಟವಾದಂದಿನಿಂದ ಚಿಲಿ, ರಷ್ಯಾ ಮತ್ತು ಮೆಕ್ಸಿಕೋದಲ್ಲಿ ನಾಶಕರವಾದ ಭೂಕಂಪಗಳುಂಟಾಗಿ ಸಾವಿರಾರು ಹೆಚ್ಚು ಜೀವಗಳು ನಷ್ಟವಾಗಿವೆ.
“ಅಂಟು ರೋಗಗಳು ಬರುವವು.” (ಲೂಕ 21:11)
1918 ರಲ್ಲಿ ಮಾರಕವಾದ ಅಂಟು ರೋಗವೊಂದು ಮಾನವ ಸಂತತಿಯ ಮೇಲೆ ಬಂತು. ಸ್ಪಾನಿಷ್ ಫ್ಲೂ ಎಂದು ಕರೆಯಲ್ಪಟ್ಟ ಇದು ಸೆಂಟ್ ಹೆಲೆನ ದ್ವೀಪವನ್ನು ಬಿಟ್ಟು ಪ್ರತಿಯೊಂದು ನಿವಾಸಿತ ಸ್ಥಳಕ್ಕೆ ಹರಡಿ ನಾಲ್ಕು ವರ್ಷಗಳ ಯುದ್ಧದಲ್ಲಿ ಸತ್ತವರಿಗಿಂತ ಹೆಚ್ಚು ಮಂದಿಯನ್ನು ಕೊಂದಿತು. ಅಂದಿನಿಂದ ವೈದ್ಯಕೀಯ ವಿಜ್ಞಾನವು ತುಂಬಾ ವಿಕಾಸಹೊಂದಿರುವುದಾದರೂ ಅಸಂಗತತೋಕ್ತಿಯೊಂದಿದೆ. ದ ಲ್ಯಾನ್ಸೆಟ್ ಪತ್ರಿಕೆ ಹೇಳುವುದು: “ಲೈಂಗಿಕವಾಗಿ ರವಾನಿಸಲ್ಪಡುವ ರೋಗ (STD)ಗಳ ಅನಿವಾರಣೆಯ ಅಧಿಕಾರಿಗಳಿಗೆ ತಿಳಿಸಲೇ ಬೇಕಾದ ರೋಗಗಳ ಅತಿ ಸಾಮಾನ್ಯ ಗುಂಪಿನಲ್ಲಿರುವುದು ಆಧುನಿಕ ಔಷಧ ಶಾಸ್ತ್ರದ ಅಸಂಗತೋಕ್ತಿಯಾಗಿದೆ. . . . ಲೈಂಗಿಕವಾಗಿ ರವಾನಿಸಲ್ಪಡುವ ರೋಗಗಳ ನಿಯಂತ್ರಣವು ಒಂದು ಕಾಲದಲ್ಲಿ ಹಿಡಿತಕ್ಕೆ ಸಿಕ್ಕುವಷ್ಟು ಹತ್ತಿರದಲ್ಲಿದೆ ಎಂದು ತೋರುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅದು ನಮ್ಮ ಹಿಡಿತವನ್ನು ಮೀರಿದೆ.”
ಕ್ಯಾನ್ಸರ್ ಮತ್ತು ಕಾರೊನರಿ ಆರ್ಟೆರಿ ಹಾರ್ಟ್ ಡಿಸೀಸ್ನಂಥ ಆಧುನಿಕ ವೈದ್ಯಕೀಯ ವಿಜ್ಞಾನವು ನಿಯಂತ್ರಿತ ಸಾಧ್ಯವಾಗದ ಇತರ ರೋಗಗಳೂ ಇವೆ. ಇದರಲ್ಲಿ ಕೊನೆಯದ್ದು ದಕ್ಷಿಣ ಆಫ್ರಿಕದ ಫ್ಯಾಮಿಲಿ ಪ್ರಾಕ್ಟಿಸ್ ಪತ್ರಿಕೆ ಹೇಳುವಂತೆ “ಹೊಸ ಪ್ರಕೃತಿ ಘಟನೆಯಾಗಿದೆ. . . . ಇದು ಒಂದನೆಯ ಲೋಕಯುದ್ಧದ ತರುವಾಯದ ಸಮಾಜದ ಪರಿಣಾಮವಾಗಿದೆ.” ಬ್ರಿಟನ್ನಿನಲ್ಲಿ ಕಾರ್ಡಿಯಾವ್ಯಾಸ್ಕ್ಯುಲರ್ ಅಪ್ಡೇಟ್- ಇನ್ಸೈಟ್ ಇನ್ಟು ಹಾರ್ಟ್ ಡಿಸೀಸ್ ಎಂಬ ಪುಸ್ತಕಕ್ಕನುಸಾರವಾಗಿ, ಹೃದ್ರೋಗ ಮತ್ತು ಅತಿ ಬಿಗಿತ (hypertension)ಗಳು “ಮರಣದ ಮುಖ್ಯ ಕಾರಣಗಳಾಗಿವೆ.” “ಇವುಗಳನ್ನು ನಿಯಂತ್ರಿಸುವ ವಿಷಯದಲ್ಲಿ ತೀರಾ ಕಡಿಮೆ ಪ್ರಗತಿಯಿದೆ.” ಎನ್ನುತ್ತದೆ ಈ ಪುಸ್ತಕ.
ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ಕೋಟಿಗಟ್ಟಲೆ ಜನರು ಮಲೇರಿಯ, ನಿದ್ರಾವಾತ ರೋಗ, ಬಿಲ್ಹಾರ್ಸ್ ಇತರ ರೋಗಗಳಿಂದ ಬಾಧೆಪಡುತ್ತಿದ್ದಾರೆ. ಲೋಕದ ಅತ್ಯಂತ ದೊಡ್ಡ ಕೊಲೆಗಾರರಲ್ಲಿ ಒಂದು ಅತಿಭೇದಿ ರೋಗವಾಗಿದೆ. ಮೆಡಿಸಿನ್ ಇಂಟರ್ನ್ಯಾಶನಲ್ ಪತ್ರಿಕೆ ಹೇಳುವುದು, “ಏಶ್ಯ, ಆಫ್ರಿಕ ಮತ್ತು ಲ್ಯಾಟಿನ್ ಅಮೇರಿಕ ದೇಶಗಳ ಶಿಶು ಮತ್ತು ಚಿಕ್ಕಮಕ್ಕಳಲ್ಲಿ ವರ್ಷಕ್ಕೆ 50 ಕೋಟಿ ಅತಿಭೇಧಿ ರೋಗಗಳು ಬರುತ್ತವೆಂದೂ 50 ಲಕ್ಷದಿಂದ 1 ಕೋಟಿ 80 ಲಕ್ಷ ಮರಣಗಳು ಸಂಭವಿಸುತ್ತದೆಂದೂ ಅಂದಾಜು ಮಾಡಲಾಗಿದೆ.”
“ಆಹಾರದ ಕೊರತೆಗಳು. . . ಬರುವುವು.” (ಲೂಕ 21:11)
ಸಾಮಾನ್ಯವಾಗಿ ಯುದ್ಧಗಳೊಂದಿಗೆ ಆಹಾರದ ಕೊರತೆಗಳು ಬರುತ್ತವೆ. ಒಂದನೆಯ ಲೋಕಯುದ್ಧದಲ್ಲಿಯೂ ಇದು ಸತ್ಯವಾಗಿತ್ತು. ಇದನ್ನನುಸರಿಸಿ ಭಯಂಕರ ಕ್ಷಾಮಗಳು ಬಂದವು. ಅಂದಿನಿಂದಲೋ? ದ ಚ್ಯಾಲೆಂಜ್ ಆಫ್ ಇಂಟರ್ ನ್ಯಾಷನಲಿಸ್ಮ್- ಫಾರ್ಟಿ ಯಿಯರ್ಸ್ ಆಫ್ ದ ಯುನೈಟೆಡ್ ನೇಶನ್ಸ್ (1945-1985) ಎಂಬ ವಿಶೇಷ ಪತ್ರ ವರದಿ ಮಾಡುವುದು. “1914ದಲ್ಲಿ ನ್ಯೂನಪೋಷಿತರಾದ 165 ಕೋಟಿ ವ್ಯಕ್ತಿಗಳಿದ್ದರು. 1983ರಲ್ಲಿ 225 ಕೋಟಿ ವ್ಯಕ್ತಿಗಳಿದ್ದಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಇದರಲ್ಲಿ 60 ಕೋಟಿ ಅಥವಾ ಶೇ.36 ಉನ್ನತಿಯಿದೆ.” ಆಫ್ರಿಕದ ಇತ್ತೀಚೆಗಿನ ಒಣಸ್ಥಿತಿಯನ್ನನುಸರಿಸಿ ಒಂದು ಧ್ವಂಸಕಾರಕ ಕ್ಷಾಮ ಬಂತು. ನ್ಯೂಸ್ ವೀಕ್ ಪತ್ರಿಕೆ ಹೇಳಿದ್ದು, “ಒಂದು ವರ್ಷದಲ್ಲಿ ಇಥಿಯೋಪ್ಯದ 10 ಲಕ್ಷ ರೈತರು ಮತ್ತು ಸುಡಾನಿನ 5 ಲಕ್ಷ ಮಕ್ಕಳು ಸತ್ತರು.” ಇತರ ದೇಶಗಳ ಸಹಸ್ರಾರು ಜನರು ಸತ್ತರು.
“ಭಯಂಕರ ನೋಟಗಳು ಆಕಾಶದಿಂದ ಮಹಾಸೂಚನೆದಳೂ ಕಾಣಿಸುವುವು. ಅಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ಕಂಡುಬರುವವು ಮತ್ತು ಸಮುದ್ರದ ಗರ್ಜನೆ ಮತ್ತು ಅದರ ತದಡುವಿಕೆಯ ಕಾರಣ ಭೂಮಿಯ ಮೇಲೆ ಜನಾಂಗಗಳಿಗೆ ದಿಕ್ಕುಕಾಣದೆ ಸಂಕಟವುಂಟಾಗುವಾಗ ನಿವಾಸಿತ ಭೂಮಿಯ ಮೇಲೆ ಬರುವ ಸಂಗತಿಗಳ ಭಯ ಮತ್ತು ನಿರೀಕ್ಷಣೆಯಿಂದ ಜನರು ಮೂರ್ಛೆ ಹೋಗುವಂತಾಯಿತು.” (ಲೂಕ 21:11,25,26)
ಒಂದನೇ ಲೋಕಯುದ್ಧ ಭಯಂಕರವಾದ ಹೊಸ ಆಯುಧಗಳನ್ನು ಬಳಕೆಗೆ ತಂದಿತು. ಆಕಾಶದಿಂದ ವಿಮಾನಗಳೂ ಆಕಾಶ ನೌಕೆಗಳೂ ಬಾಂಬು ಮತ್ತು ಗುಂಡುಗಳೆನ್ನೆಸೆದವು. ಇದಕ್ಕಿಂತಲೂ ಭಯಂಕರವಾದ ವಿಷಯವು 2ನೇ ಲೋಕಯುದ್ಧದಲ್ಲಿ ಸಹಾಯಶೂನ್ಯರಾದ ಅಯೋಧ ಜನರ ಮೇಲೆ ಎರಡು ಪರಮಾಣು ಬಾಂಬುಗಳ ಸಹಿತ ನಾಶನದ ಮಳೆಯನ್ನು ಸುರಿದದ್ದೇ.
ಸಮುದ್ರವೂ ಅತ್ಯಂತ ಭೀತಿಹುಟ್ಟಿಸುವ ದೃಶ್ಯವಾಗಿ ಪರಿಣಮಿಸಿತು. 1ನೇ ಲೋಕ ಯುದ್ಧ ಆರಂಭವಾದಾಗ ಜಲಾಂತರ್ಗಾಮಿ ನಾವೆಗಳು ಮುಖ್ಯವಲ್ಲದ ವಿಷಯಗಳಿಗಾಗಿದ್ದರೂ 2ನೇ ಲೋಕಯುದ್ಧದ ಅಂತ್ಯದೊಳಗೆ ಹತ್ತು ಸಾವಿರಕ್ಕೂ ಹೆಚ್ಚು ನೌಕೆಗಳನ್ನು ಅವು ಮುಳುಗಿಸಿದ್ದವು. ಸಬ್ ಮೆರಿನ್ ಡಿಸೈನ್ ಎಂಡ್ ಡೆವಲಪ್ಮೆಂಟ್ ಎಂಬ ಪುಸ್ತಕದಲ್ಲಿ ನಾರ್ಮನ್ ಫ್ರಾಯ್ಡ್ಮನ್ ಹೇಳುವುದು: “ವ್ಯಾಪಾರದ ಮತ್ತು (ಪ್ರಯಾಣಿಕರ) ಹಡಗುಗಳನ್ನು ಯಾವ ಮುನ್ನೆಚ್ಚರಿಕೆಯೂ ಇಲ್ಲದೆ ಮುಳುಗಿಸುವುದು ‘ಸಂಪೂರ್ಣ ಯುದ್ಧದ ಹೊಸ ಮತ್ತು ಭೀತಿ ಹುಟ್ಟಿಸುವ ನಡವಳಿಯ ಭಾಗವಾಗಿದ್ದಂತೆ ಕಂಡಿತು.”
ಇಂದು ಅನೇಕರು ಈ ಬ್ಯಾಲಿಸ್ಟಿಕ್ ಮಿಸ್ಸೈಲ್ಸ್ ಸಬ್ಮೆರೀನ್ಗಳನ್ನು ಲೋಕದ ಪ್ರಧಾನ ನೌಕೆಗಳೆಂದೆಣಿಸುತ್ತಾರೆ. ಕ್ರೂಸ್ ಮಿಸ್ಸೈಲ್ಸ್ ಸಬ್ಮೆರೀನ್ ವಿಮಾನವಾಹಕ ನೌಕೆ ಮತ್ತು ಇತರ ಯುದ್ಧ ಹಡಗುಗಳಲ್ಲಿಯೂ ಮಾರಕ ಶಸ್ತ್ರಗಳನ್ನು ಇಡಲಾಗುತ್ತದೆ. ಜೇನ್ಸ್ ಫೈಟಿಂಗ್ ಶಿಪ್ಸ್ 1986-87 ಎಂಬ ಪುಸ್ತಕ್ಕನುಸಾರವಾಗಿ ಈಗ 929 ಸಬ್ಮೆರೀನ್ಗಳು, 30 ವಿಮಾನವಾಹಕ ನೌಕೆಗಳು, 84 ಕ್ರೂಸರ್ ನೌಕೆಗಳು, 367 ಡಿಸ್ಟ್ರಾಯರ್ಗಳು, 765 ಫ್ರೀಗೇಡ್ ಕಾವಲು ಹಡಗುಗಳು, ಸಬ್ಮೆರೀನನ್ನು ತಡೆಯುವ 276 ಕಾರ್ವೆಡ್ ನೌಕೆಗಳು, 2024 ಕ್ಷಿಪ್ರಾಕ್ರಮಣ ಹಡಗುಗಳು ಮತ್ತು ಸಾವಿರಾರು ಇತರ ಮಿಲಿಟರಿ ಹಡಗುಗಳು 52 ರಾಷ್ಟ್ರಗಳ ಕ್ರಿಯಾಶೀಲಸೇವೆಯಲ್ಲಿವೆ. ಇದಕ್ಕೆ ಅಸಂಖ್ಯಾತ, ಚಿಕ್ಕದಾದರೂ ಮಾರಕವಾದ ಸಿಡಿಮದ್ದು ಪಾತ್ರೆಗಳನ್ನು ಕೂಡಿಸಿರಿ. ಮನುಷ್ಯನಿಂದ ಸಮುದ್ರದ ಇಷ್ಟು ಅಪಾಯಕರವಾದ “ಕದಡುವಿಕೆ” ಹಿಂದೆದೂ ಇರಲಿಲ್ಲ.
ಮನುಷ್ಯನು “ಸೂರ್ಯ ಚಂದ್ರ ನಕ್ಷತ್ರಗಳ” ಕ್ಷೇತ್ರವನ್ನೂ ತಲುಪಿದ್ದಾನೆ. ಉತ್ಕ್ಷೇಪಕ್ಷಿಪಣಿಗಳು ರೇಖೆಯಂತೆ ಅಂತರಿಕ್ಷದಲ್ಲಿ ಹಾರಿ ಬಳಿಕ ತಮ್ಮ ಗುರಿ ಹಲಗೆಗೆ ಹೋಗಿ ಅವಳಿಸುತ್ತವೆ. ಅಂತರಿಕ್ಷನೌಕೆಗಳು ಸೌರವ್ಯೂಹವನ್ನು ತೂರಿ ಅದಕ್ಕಿಂತಲೂ ದೂರ ಹೋಗಿವೆ. ರಾಷ್ಟ್ರಗಳು, ಭೂಮಿಯನ್ನು ಸುತ್ತುತ್ತಿರುವ ಮಾನವ ನಿರ್ಮಿತ ಉಪಗ್ರಹಗಳ ಮೇಲೆ ತೀರಾ ಹೊಂದಿಕೊಂಡಿವೆ. ವಾಯುಮಾನ ಮತ್ತು ಪವನ ಶಾಸ್ತ್ರ ಸಂಬಂಧವಾದ ಉಪಗ್ರಹಗಳು ಯುದ್ಧತಂತ್ರದ ಕ್ಷಿಪಣಿಗಳನ್ನು ಜನರು ಮಾರಕ ಗುರಿಯಿಂದ ಹೊಡೆಯುವಂತೆ ಮಾಡುತ್ತವೆ. ವಾರ್ತಾ ಸಂಪರ್ಕ ಉಪಗ್ರಹ ಮತ್ತು ಗುಪ್ತ ಉಪಗ್ರಹಗಳ ವಿಸ್ತಾರವಾದ ಉಪಯೋಗವನ್ನೂ ಮಾಡಲಾಗುತ್ತದೆ. ದಿ ಆರ್ಮ್ಸ್ ರೇಸ್ ಎಂಬ ಪುಸ್ತಕದಲ್ಲಿ ಮೈಕಲ್ ಶೀಹನ ಹೇಳುವುದು: “ಉಪಗ್ರಹಗಳು ಮಹಾಲೋಕಶಕ್ತಿಗಳ ಸೈನ್ಯಗಳ ಕಣ್ಣು, ಕಿವಿ ಮತ್ತು ಸ್ವರವಾಗಿ ಪರಿಣಮಿಸಿವೆ.”
ಇದರ ಇತ್ತೀಚೆಗಿನ ಒಂದು ದೃಷ್ಟಾಂತವು ಲಿಬಿಯದ ಮೇಲೆ ನಡೆಸಿದ ವಿಮಾನ ದಾಳಿಯೇ. ಏವಿಯೇಷನ್ ವೀಕ್ ಎಂಡ್ ಸ್ಪೆಸ್ ಟೆಕ್ನಾಲಜಿ ಪತ್ರಿಕೆ ವರದಿ ಮಾಡುವುದು: “ಅಮೇರಿಕದ ... ಉಪಗ್ರಹಗಳಿಂದ ತೆಗೆದ ಚಿತ್ರಗಳನ್ನು ಆಕ್ರಮಣದ ತಯಾರಿಗೆ ಮತ್ತು ಆಕ್ರಮಣಾನಂತರದ ಅಂದಾಜು ಕಟ್ಟುವಿಕೆಗೆ ಉಪಯೋಗಿಸಲಾಯಿತು. ಸೈನ್ಯಗಳ ಪವನಶಾಸ್ತ್ರ ಉಪಗ್ರಹ ಕಾರ್ಯಕ್ರಮವನ್ನು ಆಕ್ರಮಣ ಮಾಡಲು ಹವಾಮಾನದ ಅಂಕೆಸಂಖ್ಯೆಗಳನ್ನು ಒದಗಿಸುವರೆ ಮತ್ತು ಮಿಲಿಟರಿ ಸಂಪರ್ಕ ಆಕಾಶನೌಕೆಯನ್ನು ಆಧಿಪತ್ಯ ಮತ್ತು ನಿಯಂತ್ರಣವನ್ನು ಒದಗಿಸುವರೆ ಉಪಯೋಗಿಸಲಾಯಿತು.” ಮಿಲಿಟರಿ ಉಪಗ್ರಹಗಳ ಈ ಪ್ರಧಾನ ಪಾಗ್ರದ ಕಾರಣವಾಗಿ ಈಗ ಎರಡು ಮಹಾಲೋಕಶಕ್ತಿಗಳಲ್ಲಿಯೂ ಉಪಗ್ರಹ ವಿರೋಧಿ ಶಸ್ತ್ರಗಳಿವೆ. ಸ್ಟಾರ್ ವಾರ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಒಂದು ಕಾರ್ಯಕ್ರಮದಲ್ಲಿ ಶಸ್ತ್ರಗಳನ್ನು ಅಂತರಿಕ್ಷದಲ್ಲಿ ಸ್ಥಾಪಿಸುವುದು ಒಂದು ಮಹಾ ಶಕ್ತಿಯ ಬಹಿರಂಗ ಉದ್ದೇಶವಾಗಿದೆ. ಈ ಮಹಾಶಕ್ತಿಗಳು ವಾಸ್ತವವಾಗಿ ಅಂತರಿಕ್ಷ ಯುದ್ಧವನ್ನು ಹೂಡುವವೂ ಇಲ್ಲವೂ ಎಂಬುದನ್ನೂ ಕೇವಲ ಸಮಯವೇ ತಿಳಿಸಬಲ್ಲದು.
ಈ ಮಧ್ಯೆ ಮುಂತಿಳಿಸಲ್ಪಟ್ಟಿರುವಂತೆ, “ನಿವಾಸಿತ ಭೂಮಿಯ ಮೇಲೆ ಬರುವ ಸಂಗತಿಗಳ ಭಯ ಮತ್ತು ನಿರೀಕ್ಷಣೆಯಿಂದ ಜನರು ಮೂರ್ಛೆ ಹೋದಂತಾಗುವರು.” ಪಾತಕ, ಭಯವಾದ ಆರ್ಥಿಕ ಪತನ, ರಾಸಾಯನಿಕ ಮಾಲಿನ್ಯ, ನ್ಯೂಕ್ಲಿಯರ್ ಶಕ್ತಿಯ ಕಾರ್ಖಾನೆಗಳಿಂದ ಬರುವ ವಿಕಿರಣ ವಿಷ ಮತ್ತು ನ್ಯೂಕ್ಲಿಯರ್ ಯುದ್ಧದ ಹೆಚ್ಚುತ್ತಿರುವ ಅಪಾಯ-ಇವೆಲ್ಲಾ ಭಯದ ಕಾರಣಗಳಾಗಿವೆ. ಬ್ರಿಟಿಷ್ ಪತ್ರಿಕೆ ನ್ಯೂ ಸ್ಟೇಟ್ಸ್ಮೆನ್ ಹೇಳುವುದೇನೆಂದರೆ ದೇಶದ ಹದಿಹರೆಯದವರಲ್ಲಿ “ಅರ್ಧಾಂಶ ಮಂದಿ ನ್ಯೂಕ್ಲಿಯರ್ ಯುದ್ಧ ತಮ್ಮ ಜೀವನಕಾಲದಲ್ಲಿ ಬರುತ್ತದೆ ಎಂದೂ 70 ಸೇಕಡಾ ಮಂದಿ ಅದು ಒಂದು ದಿನ ಸಂಭವಿಸುವದು ಅನಿವಾರ್ಯವೆಂದೂ ಅಭಿಪ್ರಯಿಸುತ್ತಾರೆ.”
[ಪುಟ 7 ರಲ್ಲಿರುವ ಚೌಕ]
ಆ ಸೂಚನೆ—ಅದರ ಅರ್ಥವೇನು?
ಈ ಇಪ್ಪತ್ತನೆಯ ಶತಮಾನದ ಇತಿಹಾಸದ ಬೆಳಕಿನಲ್ಲಿ ಸೂಚನೆಯನ್ನು ಪರೀಕ್ಷಿಸಿರುವ ಲಕ್ಷಗಟ್ಟಲೆ ಜನರಿಗೆ ಅದರ ನೆರವೇರಿಕೆ ಮಂದಟ್ಟಾಗಿದೆ. (ಮತ್ತಾಯ 24ನೇ ಅಧ್ಯಾಯ ಮತ್ತು ಮಾರ್ಕ 13ನೇ ಅಧ್ಯಾಯವನ್ನು ಸಹ ನೋಡಿ) 1914ರ ಸಂತತಿ ಗುರುತಿಸಲ್ಪಟ್ಟಿರುವ ಸಂತತಿಯೇನೋ ನಿಶ್ಚಯ. “ಎಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ“ ಎಂಬ ಯೇಸುವಿನ ಮಾತುಗಳ ಎರಡನೆಯ ನೆರವೇರಿಕೆ ಈ ಸಂತತಿಯನ್ನೊಳಗೊಂಡಿದೆ. (ಲೂಕ 21:32) ಆ “ಎಲ್ಲಾ” ಎಂಬ ವಿಷಯದಲ್ಲಿ ಮಾನವ ಸಂತತಿಯ ಜಟಿಲ ಸ್ಥಿತಿಯ ಸಮಸ್ಯೆಗಳಿಂದ ಬಿಡುಗಡೆಯು ಸೇರಿದೆ.
ಯೇಸು ತನ್ನ ಹಿಂಬಾಲಕರಿಗೆ ಆಶ್ವಾಸನೆ ಕೊಟ್ಟದ್ದು: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ. ನಿಮ್ಮ ತಲೆ ಎತ್ತಿರಿ. ನಿಮ್ಮ ಬಿಡುಗಡೆಯ ಸಮೀಪವಾಗಿದೆ. . . ನೀವು ಸಹ ಇವುಗಳಾಗುವುದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವಿದೆ ಎಂದು ತಿಳುಕೊಳ್ಳಿರಿ.” ಒಂದು ಅತಿಮಾನುಷ ಲೋಕ ಸರಕಾರವಾದ ದೇವರ ರಾಜ್ಯವು ಈ ಭೂಮಿಯನ್ನು ಒಂದು ಭೂವ್ಯಾಪಕ ಪ್ರಮೋದ ವನವಾಗಿ ರೂಪಾಂತರಿಸುವುದು ಆದುದರಿಂದ ಆ ಸೂಚನೆ ನೆರವೇರಿರುವಷ್ಟೇ ನಿಶ್ಚಯವಾಗಿ ವಿಮೋಚನೆಯೂ ನೆರವೇರುವುದು.—ಲೂಕ 21:28,31: ಕೀರ್ತನೆ 72:1-8.
ಪ್ರಾಯಶಃ ಈ ಮೊದಲು ಈ ಪ್ರವಾದನಾ ಸೂಚನೆಯನ್ನು ನೀವು ಪರಿಗಣಿಸಿದ್ದಿರಲಿಕ್ಕಿಲ್ಲ. ನೀವು ದೇವರ ವಾಕ್ಯವನ್ನು ಪರೀಕ್ಷಿಸುತ್ತಾ ಮುಂದುವರಿಯಿರಿ ಎಂಬುದು ನಮ್ಮ ಪ್ರೋತ್ಸಾಹನೆ. ಹಾಗೆ ಮಾಡುವುದರಿಂದ ಮಾನವ ಸಂತತಿಯ ಕಡೆಗಿರುವ ದೇವರ ಉದ್ದೇಶವನ್ನು ನೀವು ಹೆಚ್ಚು ತಿಳಿಯುವಂತಾಗುವುದು. ಹೀಗೆ ಪ್ರಮೋದವನದೊಳಗೆ ಯೆಹೋವ ದೇವರು ‘ಬಿಡುಗಡೆ’ ಮಾಡುವವನಿಂದ ಆತನು ಏನು ಅಪೇಕ್ಷಿಸುತ್ತಾನೆಂಬುದನ್ನು ನೀವು ಕಲಿಯುವಿರಿ.—ಕೀರ್ತನೆ 37:10,11: ಚೆಫನ್ಯ 2:2,3: ಪ್ರಕಟನೆ 21:3-5.
[Picture Credit Lines on page 5]
Courtesy of German Railroads Information Office, New York
Eric Schwab/WHO
[Picture Credit Lines on page 6]
Jerry Frank/United Nations
U.S. Air Force photo