-
‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲಿಕ್ಕಾಗಿ’ಯೆಹೋವನ ಸಮೀಪಕ್ಕೆ ಬನ್ನಿರಿ
-
-
“ತಂದೆಯೇ, ಅವರಿಗೆ ಕ್ಷಮಿಸು”
16. ಯಾತನಾ ಕಂಬದ ಮೇಲೆ ತೂಗಾಡುತ್ತಿರುವಾಗಲೂ ಕ್ಷಮಿಸಲು ಯೇಸುವಿಗಿದ್ದ ಸಿದ್ಧಮನಸ್ಸು ಹೇಗೆ ಪ್ರತ್ಯಕ್ಷವಾಗಿ ತೋರಿಬಂತು?
16 ಯೇಸು ತನ್ನ ತಂದೆಯ ಪ್ರೀತಿಯನ್ನು ಇನ್ನೊಂದು ಪ್ರಧಾನ ರೀತಿಯಲ್ಲಿಯೂ ಪರಿಪೂರ್ಣವಾಗಿ ಪ್ರತಿಬಿಂಬಿಸಿದನು—ಅವನು ‘ಕ್ಷಮಿಸಲು ಸಿದ್ಧನಾಗಿದ್ದನು.’ (ಕೀರ್ತನೆ 86:5, NW) ಈ ಸಿದ್ಧಮನಸ್ಸು ಅವನು ಯಾತನಾ ಕಂಬದ ಮೇಲೆ ತೂಗಾಡುತ್ತಿರುವಾಗಲೂ ಪ್ರತ್ಯಕ್ಷವಾಗಿ ತೋರಿಬಂತು. ಕೈಕಾಲುಗಳಿಗೆ ಮೊಳೆಗಳು ಜಡಿಯಲ್ಪಟ್ಟಿದ್ದು, ಲಜ್ಜಾಸ್ಪದವಾದ ಮರಣಕ್ಕೆ ಗುರಿಪಡಿಸಲ್ಪಟ್ಟಾಗಲೂ ಯೇಸು ಮಾತಾಡಿದ್ದು ಯಾವುದರ ಕುರಿತಾಗಿ? ತನ್ನ ಹಂತಕರನ್ನು ಶಿಕ್ಷಿಸು ಎಂದು ಅವನು ಯೆಹೋವನಿಗೆ ಮೊರೆಯಿಟ್ಟನೋ? ಅದಕ್ಕೆ ವಿರುದ್ಧವಾಗಿ, ಯೇಸುವಿನ ಕೊನೆಯ ಮಾತುಗಳಲ್ಲಿ ಕೆಲವು ಹೀಗಿದ್ದವು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”—ಲೂಕ 23:34.b
-
-
‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲಿಕ್ಕಾಗಿ’ಯೆಹೋವನ ಸಮೀಪಕ್ಕೆ ಬನ್ನಿರಿ
-
-
b ಕೆಲವು ಪುರಾತನ ಹಸ್ತಪ್ರತಿಗಳಲ್ಲಿ ಲೂಕ 23:34 ರ ಮೊದಲ ಭಾಗವು ಬಿಟ್ಟುಬಿಡಲ್ಪಟ್ಟಿದೆ. ಆದರೂ, ಈ ಮಾತುಗಳು ಬೇರೆ ಅನೇಕ ಅಧಿಕೃತ ಹಸ್ತಪ್ರತಿಗಳಲ್ಲಿ ಕಂಡುಬರುವುದರಿಂದ, ಅವುಗಳನ್ನು ನೂತನ ಲೋಕ ಭಾಷಾಂತರದಲ್ಲಿ (ಇಂಗ್ಲಿಷ್) ಮತ್ತು ಇತರ ಹಲವಾರು ಭಾಷಾಂತರಗಳಲ್ಲಿ ಒಳಗೂಡಿಸಲಾಗಿದೆ. ಯೇಸು ಅಲ್ಲಿ ತನ್ನನ್ನು ಕಂಬಕ್ಕೆ ಜಡಿದಿದ್ದ ರೋಮನ್ ಸೈನಿಕರ ಕುರಿತು ಮಾತಾಡುತ್ತಿದ್ದನೆಂಬುದು ವ್ಯಕ್ತ. ಯೇಸು ನಿಜವಾಗಿ ಯಾರು ಎಂಬ ಅರಿವು ಇಲ್ಲದಿದ್ದ ಅವರಿಗೆ ತಾವೇನು ಮಾಡುತ್ತಿದ್ದೇವೆಂಬುದು ತಿಳಿದಿರಲಿಲ್ಲ. ಆ ವಧೆಯನ್ನು ಚಿತಾಯಿಸಿದ್ದ ಧಾರ್ಮಿಕ ಮುಖಂಡರು ಎಷ್ಟೋ ಹೆಚ್ಚು ದೋಷಪಾತ್ರರಾಗಿದ್ದರು, ಯಾಕಂದರೆ ಅವರು ಬುದ್ಧಿಪೂರ್ವಕವಾಗಿ ಮತ್ತು ಹಗೆಸಾಧನೆಯಿಂದ ಆ ಕೃತ್ಯವೆಸಗಿದ್ದರು. ಅವರಲ್ಲಿ ಹೆಚ್ಚಿನವರಿಗೆ ಕ್ಷಮಾಪಣೆ ನೀಡುವುದು ಅಶಕ್ಯವಾಗಿತ್ತು.—ಯೋಹಾನ 11:45-53.
-