ವಾಚಕರಿಂದ ಪ್ರಶ್ನೆಗಳು
ಕ್ರೈಸ್ತ ದೀಕ್ಷಾಸ್ನಾನಗಳಲ್ಲಿ ಯಾವ ಮನೋಭಾವವು ಪ್ರದರ್ಶಿಸಲ್ಪಡಬೇಕು?
ಇದೊಂದು ಸಾರ್ವಸ್ಯಕರ ಪ್ರಶ್ನೆಯಾಗಿದೆ ಯಾಕಂದರೆ, ನಮ್ಮ ವಾಚಕರಲ್ಲಿ ಹೆಚ್ಚಿನವರು ಈಗಾಗಲೇ ದೀಕ್ಷಾಸ್ನಾನ ಪಡೆದವರಾಗಿದ್ದರೂ, ದೀಕ್ಷಾಸ್ನಾನವಾಗುತ್ತಿರುವವರಂತೆ ಅವರೂ ಅದರಲ್ಲಿ ಒಳಗೂಡಿದ್ದಾರೆ. ಪೂರ್ಣ ನಿಮಜ್ಜನಕ್ಕೆ ಒಳಪಡುತ್ತಾ, ದೀಕ್ಷಾಸ್ನಾನವಾಗುವವರ ಕುರಿತು ನಾವು ಮೊದಲು ಮಾತಾಡೋಣ. ಅವರ ಮನೋಭಾವವು ಏನಾಗಿರತಕ್ಕದ್ದು?
ಮತ್ತಾಯ 28:19, 20 ರಲ್ಲಿ ಯೇಸು ತನ್ನ ಹಿಂಬಾಲಕರಿಗೆ, ಜನರನ್ನು ಶಿಷ್ಯರನ್ನಾಗಿ ಮಾಡಿ, ಬೋಧಿಸಿ, ಅವರಿಗೆ ದೀಕ್ಷಾಸ್ನಾನ ಮಾಡಿಸಲು ಹೇಳಿದನು. ಅವನು ದೀಕ್ಷಾಸ್ನಾನವನ್ನು ಒಂದು ಭಾವಾವೇಶದ ಅನುಭವವಾಗಿ, ಕಣ್ಷಿಕ ಉದ್ರೇಕದಿಂದ ಉದ್ಭವಿಸುವ ಒಂದು ಕ್ರಿಯೆಯಾಗಿ ಪ್ರಸ್ತುತಪಡಿಸಲಿಲ್ಲ. ಯೇಸುವಿನ ಉದಾಹರಣೆಯಿಂದ ನಾವು ನೋಡುವಂತೆ, ಅದೊಂದು ಗಂಭೀರವಾದ ಹೆಜ್ಜೆಯಾಗಿದೆ. ಲೂಕ 3:21 ಹೇಳುವುದು: “ಯೇಸು ಸಹ ಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಲ್ಲಿ ಆಕಾಶವು ತೆರೆಯಿತು.” ಹೌದು, ನಮ್ಮ ಆದರ್ಶಪ್ರಾಯನು ದೀಕ್ಷಾಸ್ನಾನವನ್ನು ಗಂಭೀರವಾಗಿ, ಪ್ರಾರ್ಥನಾಪೂರ್ವಕವಾಗಿ ತೆಗೆದುಕೊಂಡನು. ನೀರಿನಿಂದ ಹೊರ ಬಂದ ಮೇಲೆ ಅವನು ಒಂದು ವಿಜಯದ ಸಂಕೇತವನ್ನು ಮಾಡುತ್ತಾ, ಒಂದು ವಿಜಯೋತ್ಸಾಹದ ಕಿರಿಚುವಿಕೆ ಮಾಡುವುದನ್ನು ಯಾ ಗಾಳಿಯಲ್ಲಿ ತನ್ನ ಬಾಹುಗಳನ್ನು ಮೇಲೆ ಕೆಳಗೆ ಬೀಸುವುದನ್ನು, ನಾವು ಊಹಿಸಸಾಧ್ಯವಿಲ್ಲ, ಆದರೂ ಇಂತಹ ಸಂಗತಿಗಳನ್ನೇ ಕೆಲವರು ಇತ್ತೀಚೆಗೆ ಮಾಡಿದ್ದಾರೆ. ಇಲ್ಲ, ಕೇವಲ ಯೋಹಾನನು ಮಾತ್ರ ಹಾಜರಿದ್ದವನಾಗಿ, ಯೇಸು ಪ್ರಾರ್ಥನೆಯಲ್ಲಿ ತನ್ನ ತಂದೆಯ ಕಡೆಗೆ ತಿರುಗಿದನು.
ಆದರೂ, ಇಂದು ಕ್ರೈಸ್ತಪ್ರಪಂಚದಲ್ಲಿನ ಕೆಲವು ಚರ್ಚುಗಳಿಂದ ಅಪೇಕ್ಷಿಸಲ್ಪಡುವಂತೆ ವಿಶೇಷ ಭಂಗಿ ಯಾ ವಿವರಣಾತ್ಮಕ ಕಥನವನ್ನು ಅವಶ್ಯಪಡಿಸುತ್ತಾ, ದೀಕ್ಷಾಸ್ನಾನವು ಒಂದು ವಿಷಣ್ಣತೆಯ ಯಾ ಉರಿ ಮೋರೆಯ ಘಟನೆಯಾಗಿರಬೇಕೆಂದು ಬೈಬಲು ಸೂಚಿಸುವುದಿಲ್ಲ. ಸಾವಿರಾರು ಮಂದಿ ಯೆಹೂದ್ಯರು ಮತ್ತು ಮತಾಂತರಿಗಳು ಕ್ರೈಸ್ತ ದೀಕ್ಷಾಸ್ನಾನವನ್ನು ಹೊಂದಿದ ಪಂಚಾಶತ್ತಮದ ದಿನದ ಕುರಿತಾಗಿ ಯೋಚಿಸಿರಿ. ಅವರು ಆವಾಗಲೇ ದೇವರ ಧರ್ಮಶಾಸ್ತ್ರವನ್ನು ಕಲಿತಿದ್ದರು ಮತ್ತು ಅವನೊಂದಿಗೆ ಒಂದು ಸಂಬಂಧದೊಳಗೆ ಬಂದಿದ್ದರು. ಆದುದರಿಂದ ಅವರು ಕೇವಲ ಮೆಸ್ಸೀಯನಾದ ಯೇಸುವಿನ ಕುರಿತಾಗಿ ಕಲಿತು ಸ್ವೀಕರಿಸಬೇಕಾಗಿತ್ತು. ಒಮ್ಮೆ ಅವರದನ್ನು ಮಾಡಿದಾಗ, ಅವರು ದೀಕ್ಷಾಸ್ನಾನ ಹೊಂದಬಹುದಿತ್ತು.
ಅ. ಕೃತ್ಯಗಳು 2:41 ವರದಿಸುವುದು: “ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನಮಾಡಿಸಿಕೊಂಡರು.” ವೇಮತ್ರ ಬೈಬಲ್ ಭಾಷಾಂತರವು ಓದುವುದು: “ಆದಕಾರಣ, ಅವನ ಮಾತನ್ನು ಸಂತೋಷದಿಂದ ಸ್ವಾಗತಿಸಿದವರು ದೀಕ್ಷಾಸ್ನಾನಮಾಡಿಸಿಕೊಂಡರು.” ಮೆಸ್ಸೀಯನ ಕುರಿತಾದ ಉತ್ತೇಜಿಸುವ ಸಮಾಚಾರದಲ್ಲಿ ಅವರು ಆನಂದವನ್ನು ಕಂಡುಕೊಂಡರು, ಮತ್ತು ಖಂಡಿತವಾಗಿಯೂ ಆ ಹೃತ್ಪೂರ್ವಕ ಆನಂದವು ದೀಕ್ಷಾಸ್ನಾನಕ್ಕೂ ಪ್ರಸರಿಸಿತೆಂಬುದು ನಿಶ್ಚಯ, ನೂರಾರು ಸಂತೋಷಿತ ಪ್ರೇಕ್ಷಕರ ಮುಂದೆ ಜರುಗಿಸಲ್ಪಟ್ಟ ಒಂದು ದೀಕ್ಷಾಸ್ನಾನ. ಪರಲೋಕದಲ್ಲಿರುವ ದೇವದೂತರು ಸಹ ಅವಲೋಕಿಸುತ್ತಿದ್ದರು ಮತ್ತು ಉಲ್ಲಾಸಿಸುತ್ತಿದ್ದರು. ಯೇಸುವಿನ ಮಾತುಗಳನ್ನು ನೆನಪಿಗೆ ತನ್ನಿರಿ: “ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ.”—ಲೂಕ 15:10.
ನಮ್ಮಲ್ಲಿ ಪ್ರತಿಯೊಬ್ಬನು ದೀಕ್ಷಾಸ್ನಾನವೊಂದರ ಗಂಭೀರತೆಯನ್ನು ಹಾಗೂ ಸಂತೋಷವನ್ನು ಪ್ರತಿಬಿಂಬಿಸಸಾಧ್ಯವಿರುವ ವಿವಿಧ ರೀತಿಗಳಿವೆ. ಕೆಲವು ಚರ್ಚುಗಳಲ್ಲಿ ದೀಕ್ಷಾಸ್ನಾನಪಡೆಯುವವರು ಬಿಳಿ ಯಾ ಕಪ್ಪು ನಿಲುವಂಗಿಗಳನ್ನು ಧರಿಸುತ್ತಾರೆ. ಅಂತಹ ಒಂದು ಆವಶ್ಯಕತೆಗಾಗಿ ಶಾಸ್ತ್ರೀಯ ಬೆಂಬಲವೇ ಇಲ್ಲ. ಆದರೂ, ಬಿಗಿಯಾದ ಯಾ ದೇಹವನ್ನು ಸಮರ್ಪಕವಾಗಿ ಆವರಿಸದ ಸ್ನಾನದ ಉಡುಪುಗಳು ಪುರುಷರಿಗಾಗಲಿ, ಸ್ತ್ರೀಯರಿಗಾಗಲಿ ತಕ್ಕದ್ದಾಗಿರವು. ಮತ್ತು ಗಮನಿಸಲ್ಪಟ್ಟಂತೆ, ನೀರಿನಿಂದ ಹೊರಗೆ ಬರುವಾಗ, ಹೊಸ ಕ್ರೈಸ್ತನೊಬ್ಬನು ವಿಶೇಷ ಹಾವಭಾವಗಳನ್ನು ಮಾಡಕೂಡದು ಯಾ ಮಹಾ ವಿಜಯವನ್ನು ಪಡೆದಿದ್ದಾನೋ ಎಂಬಂತೆ ವರ್ತಿಸಕೂಡದು. ಹೊಸಬನು ದೀಕ್ಷಾಸ್ನಾನ ಪಡೆದುಕೊಂಡನು ಎಂಬದಕ್ಕೆ ಕ್ರೈಸ್ತ ಸಹೋದರತ್ವದಲಿನ್ಲ ಉಳಿದವರು ಸಂತೋಷಿಸುತ್ತಾರೆ. ದೇವರ ಮೆಚ್ಚಿಗೆಯನ್ನು ಪಡೆಯುವ ಸಮಗ್ರತೆಯ ದೀರ್ಘ ಪಥದಲ್ಲಿ ಇದು ನಂಬಿಕೆಯ ಪ್ರದರ್ಶನದ ಕೇವಲ ಒಂದು ಆರಂಭಿಕ ಹೆಜ್ಜೆಯಾಗಿದೆ ಎಂಬುದನ್ನು ಅವನು ಗ್ರಹಿಸತಕ್ಕದ್ದು.—ಮತ್ತಾಯ 16:24.
ದೀಕ್ಷಾಸ್ನಾನ ಪಡೆಯುವವನು ವಿಶೇಷವಾಗಿ, ಸಂಬಂಧಿಕನು ಯಾ ನಾವು ಬೈಬಲನ್ನು ಅಭ್ಯಸಿಸಿದ ಒಬ್ಬ ವ್ಯಕ್ತಿಯಾಗಿರುವುದಾದರೆ, ಈ ಸಂದರ್ಭದ ಸಂತೋಷದಲ್ಲಿ ನಾವು ಪ್ರೇಕ್ಷಕರೋಪಾದಿ ಪಾಲಿಗರಾಗುತ್ತೇವೆ. ಆದಾಗ್ಯೂ, ಇದರಲ್ಲಿ ಪೂರ್ಣವಾಗಿ ಪಾಲಿಗರಾಗಲು, ನಾವು ಅಭ್ಯರ್ಥಿಗಳೊಂದಿಗೆ ಪೂರ್ತಿಯಾಗಿ ಭಾಷಣವನ್ನು ಆಲಿಸತಕ್ಕದ್ದು, ಅವರಿಗೆ ನೀಡಲ್ಪಟ್ಟ ಪ್ರಶ್ನೆಗಳಿಗೆ ಅವರು ಸಾರ್ವಜನಿಕವಾಗಿ ಉತ್ತರಿಸುವದನ್ನು ಕೇಳತಕ್ಕದ್ದು, ಮತ್ತು ಪ್ರಾರ್ಥನೆಯಲ್ಲಿ ಜತೆಗೂಡತಕ್ಕದ್ದು. ಹಾಗೆ ಮಾಡುವುದರಿಂದ ಪ್ರಸ್ತುತ ದೀಕ್ಷಾಸ್ನಾನದ ಸರಿಯಾದ ದೃಷ್ಟಿಕೋನವನ್ನಿಡಲು ನಮಗೆ ಸಹಾಯ ಮಾಡುವುದು; ಅದರ ಕುರಿತು ದೇವರ ನೋಟವು ನಮ್ಮಲ್ಲಿರುವುದು. ದೀಕ್ಷಾಸ್ನಾನದ ಕ್ರಿಯೆಯ ನಂತರ, ದೀಕ್ಷಾಸ್ನಾನ ಹೊಂದಿದವನ ಗೌರವಾರ್ಥವಾಗಿ ವಿಜಯೋತ್ಸಾಹದ ಒಂದು ಮೆರವಣಿಗೆ, ಪುಷ್ಪಗಳ ಒಂದು ತುರಾಯಿ, ಯಾ ಒಂದು ಸಂತೋಷ ಗೋಷ್ಠಿಯನ್ನು ನಮ್ಮ ಆನಂದವು ಆವಶ್ಯಕಪಡಿಸುವುದಿಲ್ಲ. ಆದರೆ ತೆಗೆದುಕೊಂಡ ಅದ್ಭುತವಾದ ಹೆಜ್ಜೆಗಾಗಿ ನಮ್ಮ ಸಂತೋಷವನ್ನು ವ್ಯಕ್ತಪಡಿಸಲು ಮತ್ತು ನಮ್ಮ ಕ್ರೈಸ್ತ ಭ್ರಾತೃತ್ವದೊಳಗೆ ತುಂಬಾ ಆದರದ ಸುಸ್ವಾಗತವನ್ನು ನೀಡಲು ನಮ್ಮ ಹೊಸ ಸಹೋದರ ಯಾ ಸಹೋದರಿಯನ್ನು ನಾವು ಸಮೀಪಿಸಬಲ್ಲೆವು.
ಹಾಗಾದರೆ ಸಾರಾಂಶದಲ್ಲಿ, ನಾವೆಲ್ಲರೂ, ನೀರಿನ ನಿಮಜ್ಜನಕ್ಕೆ ಒಳಪಡುವವರನ್ನು ಒಳಗೂಡಿಸಿ, ದೀಕ್ಷಾಸ್ನಾನದಲ್ಲಿ ತಕ್ಕದಾದ ಗಂಭೀರತೆಯಿಂದ ವರ್ತಿಸಬೇಕು. ಅದು ಆವೇಶಭರಿತ ಅಭಿವ್ಯಕ್ತಿಗಳಿಗೆ, ಗೋಷ್ಠಿಗಳಿಗೆ, ಅಥವಾ ವಿನೋದಕ್ಕಾಗಿ ಒಂದು ಸಮಯವಾಗಿರುವದಿಲ್ಲ. ಆದರೆ ಒಂದು ವಿಷಣ್ಣ ಅಥವಾ ಉರಿ ಮೋರೆಯ ಸಮಯವೂ ಅದಾಗಿರುವದಿಲ್ಲ. ನಿತ್ಯ ಜೀವದ ಮಾರ್ಗದಲ್ಲಿ ಹೊಸಬರು ನಮ್ಮೊಂದಿಗೆ ಜೊತೆಗೂಡಿದ್ದಾರೆಂಬದಕ್ಕೆ ನಾವು ಯೋಗ್ಯವಾಗಿ ಆನಂದಿತರಾಗಿರಬಲ್ಲೆವು. ಮತ್ತು ನಾವು ನಮ್ಮ ಹೊಸ ಸಹೋದರಸಹೋದರಿಯರನ್ನು ಆನಂದಭರಿತರಾಗಿ ಸ್ವಾಗತಿಸಬಲ್ಲೆವು.
ಪುಟ 31 ರಲ್ಲಿರುವಚಿತ್ರ]