ಅಧ್ಯಾಯ 37
ವಿಧವೆಯೊಬ್ಬಳ ದುಃಖವನ್ನು ಯೇಸು ನೀಗಿಸುತ್ತಾನೆ
ಸೇನಾ ಅಧಿಕಾರಿಯ ಸೇವಕನನ್ನು ವಾಸಿಮಾಡಿದ ಸ್ವಲ್ಪಕಾಲದಲ್ಲಿ, ಕಪೆರ್ನೌಮಿನ ನೈಋತ್ಯದ 32 ಕಿಲೊಮೀಟರುಗಳು ದೂರದ ನಾಯಿನ ಊರಿಗೆ ಯೇಸುವು ತೆರಳುತ್ತಾನೆ. ಅವನ ಶಿಷ್ಯರೂ, ಒಂದು ಜನರ ದೊಡ್ಡ ಗುಂಪೂ ಅವನೊಂದಿಗಿತ್ತು. ನಾಯಿನೆಂಬ ಊರ ಬಾಗಲ ಬಳಿಗೆ ಬರುವಾಗ ಸಾಯಂಕಾಲವಾಗಿದ್ದಿರಬಹುದು. ಅವರಿಗೆ ಒಂದು ಶವಯಾತ್ರೆಯ ಭೇಟಿಯು ಅಲ್ಲಿ ಆಯಿತು. ದಫನ ಮಾಡಲು ಯೌವನಸ್ಥನ ಮೃತ ಶರೀರವನ್ನು ಪಟ್ಟಣದ ಹೊರಗೆ ಹೊತ್ತು ಕೊಂಡೊಯ್ಯುತ್ತಿದ್ದರು.
ತಾಯಿಯ ಪರಿಸ್ಥಿತಿಯು ವಿಶೇಷವಾಗಿ ಚಿಂತಾಜನಕ, ಯಾಕಂದರೆ ಅವಳು ವಿಧವೆಯಾಗಿದ್ದಳು ಮತ್ತು ಇವನು ಅವಳ ಒಬ್ಬನೇ ಮಗನು. ಗಂಡನು ಸತ್ತಾಗ, ಮಗನಿದ್ದುದರಿಂದ, ಅವಳು ಸಂತೈಸಿಕೊಳ್ಳಬಹುದಿತ್ತು. ಅವನ ಭವಿಷ್ಯದಲ್ಲಿ ಅವಳ ಆಶೆಗಳು, ನಿರೀಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳು ಸೇರಿದ್ದವು. ಈಗ ಸಾಂತ್ವನ ಕೊಡಬಹುದಾದ ಯಾರೊಬ್ಬನು ಅಲ್ಲಿರಲಿಲ್ಲ. ದಫನ ಸ್ಥಳಕ್ಕೆ ಗ್ರಾಮಸ್ಥರು ಅವಳೊಂದಿಗೆ ಹೋಗುತ್ತಿರುವಾಗ ಅವಳ ದುಃಖವು ಅತೀವವಾಗಿತ್ತು.
ಯೇಸುವು ಸ್ತ್ರೀಯನ್ನು ನೋಡಿದಾಗ, ಅವಳ ಅತೀವ ದುಃಖದಿಂದ ಹೃದಯದಲ್ಲಿ ಪರಿತಪಿಸಿದನು. ಕೋಮಲತೆಯಿಂದ, ಆದರೂ ಭರವಸವನ್ನು ಕೊಡುವ ಸ್ಥಿರತೆಯಿಂದ ಅವನು ಅವಳಿಗಂದದ್ದು: “ಅಳಬೇಡ.” ಅವನ ರೀತಿ ಮತ್ತು ಕೃತ್ಯವು ಜನರ ಗುಂಪಿನ ಗಮನವನ್ನು ಸೆಳೆಯಿತು. ಆದ್ದರಿಂದ ಅವನು ಚಟ್ಟವನ್ನು ಸಮೀಪಿಸಿ, ಮುಟ್ಟಿದಾಗ, ಹೊತ್ತು ಕೊಂಡವರು ನಿಂತರು. ಅವನೇನು ಮಾಡುತ್ತಾನೆ ಎಂದು ಅವರೆಲ್ಲರು ಆಶ್ಚರ್ಯಪಟ್ಟರಬೇಕು.
ಯೇಸುವಿನ ಸಂಗಡವಿದ್ದವರು, ಅನೇಕರನ್ನು ರೋಗಗಳಿಂದ ಅದ್ಭುತಕರವಾಗಿ ಅವನು ವಾಸಿ ಮಾಡಿದ್ದನ್ನು ನೋಡಿದ್ದರು. ಆದರೆ ಸತ್ತ ಯಾರನ್ನೇ ಅವನು ಎಬ್ಬಿಸಿದ್ದನ್ನು ಅವರೆಂದೂ ನೋಡಿರಲಿಲ್ಲ. ಅವನು ಅದನ್ನು ಮಾಡಶಕ್ತನೇ? ಶವವನ್ನು ಸಂಬೋಧಿಸಿ, ಯೇಸು ಅಪ್ಪಣೆಯಿತ್ತದ್ದು: “ಯೌವನಸ್ಥನೇ, ಏಳು! ಎಂದು ನಾನು ನಿನಗೆ ಹೇಳುತ್ತೇನೆ.” ಆಗ ಅವನು ಎದ್ದು ಕೂಡ್ರುತ್ತಾನೆ! ಮಾತಾಡಲು ತೊಡಗುತ್ತಾನೆ. ಮತ್ತು ಯೇಸು ಅವನನ್ನು ಅವನ ತಾಯಿಗೆ ಕೊಡುತ್ತಾನೆ.
ಯೌವನಸ್ಥನು ನಿಜವಾಗಿ ಜೀವಂತನಾದದ್ದನ್ನು ಜನರು ನೋಡಿ, ಅವರು ಹೀಗನ್ನಲು ಆರಂಭಿಸಿದರು: “ನಮ್ಮಲ್ಲಿ ಮಹಾ ಪ್ರವಾದಿಯು ಎದ್ದಿದ್ದಾನೆ.” ಬೇರೆಯವರು ಅಂದದ್ದು: “ದೇವರು ತನ್ನ ಜನರೆಡೆಗೆ ಗಮನ ಹರಿಸಿದ್ದಾನೆ.” ಬೇಗನೇ ಈ ಬೆರಗುಗೊಳಿಸುವ ವಾರ್ತೆಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯಗಳಲ್ಲಿಯೂ ಹಬ್ಬಿತು.
ಸ್ನಾನಿಕನಾದ ಯೋಹಾನನು ಇನ್ನೂ ಸೆರೆಮನೆಯಲ್ಲಿದ್ದನು ಮತ್ತು ಯೇಸು ನಡಿಸಶಕ್ತನಾದ ಕಾರ್ಯಗಳ ಕುರಿತು ಇನ್ನೂ ಹೆಚ್ಚನ್ನು ಅವನು ತಿಳಿಯ ಬಯಸುತ್ತಾನೆ. ಯೋಹಾನನ ಶಿಷ್ಯರು ಈ ಅದ್ಭುತಗಳ ಕುರಿತು ಅವನಿಗೆ ತಿಳಿಸುತ್ತಾರೆ. ಅವನ ಪ್ರತಿಕ್ರಿಯೇನು? ಲೂಕ 7:11-18
▪ ನಾಯಿನ ಊರಿಗೆ ಯೇಸು ಸಮೀಪಿಸಿದಾಗ ಏನು ಸಂಭವಿಸುತ್ತದೆ?
▪ ಅವನು ನೋಡಿದ ಸಂಗತಿಯು ಯೇಸುವಿಗೆ ಹೇಗೆ ತಟ್ಟುತ್ತದೆ, ಮತ್ತು ಅವನೇನು ಮಾಡುತ್ತಾನೆ?
▪ ಯೇಸುವಿನ ಅದ್ಭುತಕ್ಕೆ ಜನರ ಪ್ರತಿವರ್ತನೆಯೇನು?