-
‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’ಕಾವಲಿನಬುರುಜು—2003 | ಫೆಬ್ರವರಿ 1
-
-
16. (ಎ) ಯಾವ ವ್ಯಕ್ತಿಗಳು ಮುಳ್ಳಿನ ನೆಲವನ್ನು ಹೋಲುತ್ತಾರೆ? (ಬಿ) ಮೂರು ಸುವಾರ್ತಾ ವೃತ್ತಾಂತಗಳಿಗನುಸಾರ, ಮುಳ್ಳುಗಿಡಗಳು ಯಾವುದನ್ನು ಪ್ರತಿನಿಧಿಸುತ್ತವೆ?—ಪಾದಟಿಪ್ಪಣಿಯನ್ನು ನೋಡಿ.
16 ಮುಳ್ಳುಗಿಡಗಳಿರುವ ನೆಲದೊಂದಿಗೆ ಯಾವ ರೀತಿಯ ಜನರು ಹೋಲುತ್ತಾರೆ? ಯೇಸು ವಿವರಿಸಿದ್ದು: “ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ.” (ಲೂಕ 8:14) ಬಿತ್ತುವವನ ಬೀಜ ಮತ್ತು ಮುಳ್ಳುಗಿಡಗಳು ನೆಲದಲ್ಲಿ ಏಕಕಾಲದಲ್ಲಿ ಬೆಳೆಯುವಂತೆಯೇ, ಕೆಲವರು ದೇವರ ವಾಕ್ಯಕ್ಕಾಗಿ ಮತ್ತು ಅದೇ ಸಮಯ, ‘ಈ ಜೀವಮಾನದ ಭೋಗ’ಕ್ಕಾಗಿಯೂ ತಮ್ಮ ಜೀವನದಲ್ಲಿ ಸ್ಥಳಾವಕಾಶವನ್ನು ಕೊಡಲು ಪ್ರಯತ್ನಿಸುತ್ತಾರೆ. ದೇವರ ವಾಕ್ಯದ ಸತ್ಯವು ಅವರ ಹೃದಯದಲ್ಲಿ ಬಿತ್ತಲ್ಪಟ್ಟಿದೆ, ಆದರೆ ಅವರ ಗಮನಕ್ಕಾಗಿ ಪೈಪೋಟಿ ನಡೆಸುತ್ತಿರುವ ಇತರ ಬೆನ್ನಟ್ಟುವಿಕೆಗಳಿಂದಾಗಿ ಅದು ಸ್ಪರ್ಧೆಗೊಳಗಾಗುತ್ತದೆ. ಅವರ ಸಾಂಕೇತಿಕ ಹೃದಯವು ವಿಭಾಗಿಸಲ್ಪಡುತ್ತದೆ. (ಲೂಕ 9:57-62) ಇದು ದೇವರ ವಾಕ್ಯವನ್ನು ಪ್ರಾರ್ಥನಾಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ಧ್ಯಾನಿಸಲು ಸಾಕಷ್ಟು ಸಮಯವನ್ನು ಕೊಡುವುದರಿಂದ ಅವರನ್ನು ತಡೆಯುತ್ತದೆ. ಅವರು ದೇವರ ವಾಕ್ಯವನ್ನು ಪೂರ್ತಿಯಾಗಿ ಹೀರಿಕೊಳ್ಳಲು ತಪ್ಪುತ್ತಾರೆ ಮತ್ತು ಹೀಗೆ ಅವರು ತಾಳಿಕೊಳ್ಳಲು ಬೇಕಾಗುವ ಹೃತ್ಪೂರ್ವಕ ಗಣ್ಯತೆಯ ಕೊರತೆಯುಳ್ಳವರಾಗುತ್ತಾರೆ. ಕ್ರಮೇಣ ಅವರ ಆಧ್ಯಾತ್ಮಿಕ ಅಭಿರುಚಿಗಳನ್ನು ಆಧ್ಯಾತ್ಮಿಕವಲ್ಲದ ಬೆನ್ನಟ್ಟುವಿಕೆಗಳು ಎಷ್ಟೊಂದು ಮಬ್ಬುಗವಿಸುತ್ತವೆಂದರೆ, ಅವು ಪೂರ್ಣವಾಗಿ “ಅಡಗಿಸಲ್ಪ”ಡುತ್ತವೆ.c ಯೆಹೋವನನ್ನು ಪೂರ್ಣಹೃದಯದಿಂದ ಪ್ರೀತಿಸದವರಿಗೆ ಎಷ್ಟು ದುಃಖಕರವಾದ ಅಂತ್ಯ!—ಮತ್ತಾಯ 6:24; 22:37.
17. ಯೇಸುವಿನ ಸಾಮ್ಯವು ಹೇಳಿರುವ ಆ ಸಾಂಕೇತಿಕ ಮುಳ್ಳುಗಿಡಗಳಿಂದ ಅಡಗಿಸಲ್ಪಡದೆ ಇರಬೇಕಾದರೆ, ನಾವು ಜೀವನದಲ್ಲಿ ಯಾವ ಆಯ್ಕೆಗಳನ್ನು ಮಾಡುವುದು ಅಗತ್ಯ?
17 ಪ್ರಾಪಂಚಿಕ ಚಿಂತೆಗಳಿಗಿಂತ ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆಯನ್ನು ನೀಡುವುದರಿಂದ, ಈ ಲೋಕದ ಬೇನೆಗಳು ಮತ್ತು ಭೋಗಗಳು ನಮ್ಮನ್ನು ಅಡಗಿಸಿಬಿಡುವುದರಿಂದ ನಾವು ತಪ್ಪಿಸಿಕೊಳ್ಳುವೆವು. (ಮತ್ತಾಯ 6:31-33; ಲೂಕ 21:34-36) ಬೈಬಲ್ ವಾಚನ ಮತ್ತು ನಾವು ಓದಿದ ವಿಷಯದ ಕುರಿತಾದ ಧ್ಯಾನವನ್ನು ಎಂದಿಗೂ ಅಸಡ್ಡೆಮಾಡಬಾರದು. ನಮ್ಮ ಜೀವನವನ್ನು ಸಾಧ್ಯವಾಗುವಷ್ಟು ಸರಳೀಕರಿಸುವಲ್ಲಿ, ನಾವು ಏಕಾಗ್ರತೆಯ ಹಾಗೂ ಪ್ರಾರ್ಥನಾಪೂರ್ವಕವಾದ ಧ್ಯಾನಕ್ಕೆ ಹೆಚ್ಚು ಸಮಯವನ್ನು ಕಂಡುಕೊಳ್ಳುವೆವು. (1 ತಿಮೊಥೆಯ 6:6-8) ಫಲಕೊಡುವ ಸಸಿಗೆ ಹೆಚ್ಚು ಆಹಾರ, ಬೆಳಕು ಮತ್ತು ಜಾಗವನ್ನು ಕೊಡಲಿಕ್ಕಾಗಿಯೊ ಎಂಬಂತೆ ಆ ಮುಳ್ಳುಗಿಡಗಳನ್ನು ನೆಲದಿಂದ ಕಿತ್ತುಹಾಕಿರುವ ದೇವರ ಸೇವಕರು ಯೆಹೋವನ ಆಶೀರ್ವಾದವನ್ನು ಅನುಭವಿಸುತ್ತಿದ್ದಾರೆ. ಸಾಂಡ್ರ ಎಂಬ 26 ವಯಸ್ಸಿನಾಕೆ ಹೇಳುವುದು: “ಸತ್ಯದಲ್ಲಿ ನನಗೆ ಸಿಕ್ಕಿರುವ ಆಶೀರ್ವಾದಗಳ ಕುರಿತು ನಾನು ಧ್ಯಾನಿಸುವಾಗ, ಅದನ್ನು ಹೋಲುವ ಯಾವುದನ್ನೂ ಈ ಲೋಕವು ಕೊಡಲಾರದು ಎಂಬದನ್ನು ನಾನು ಮನಗಂಡಿದ್ದೇನೆ!”—ಕೀರ್ತನೆ 84:11.
-
-
‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’ಕಾವಲಿನಬುರುಜು—2003 | ಫೆಬ್ರವರಿ 1
-
-
c ಯೇಸುವಿನ ಸಾಮ್ಯದ ಮೂರು ಸುವಾರ್ತಾ ವೃತ್ತಾಂತಗಳಿಗನುಸಾರ, ಈ ಲೋಕದ ಬೇನೆಗಳು ಮತ್ತು ಭೋಗಗಳು ಆ ಬೀಜವನ್ನು ಅಡಗಿಸುತ್ತವೆ: “ಪ್ರಪಂಚದ ಚಿಂತೆ,” “ಐಶ್ವರ್ಯದಿಂದುಂಟಾಗುವ ಮೋಸ,” “ಇತರ ವಿಷಯಗಳ ಮೇಲಣ ಆಶೆಗಳು” ಹಾಗೂ ‘ಈ ಜೀವಮಾನದ ಭೋಗಗಳು.’—ಮಾರ್ಕ 4:19; ಮತ್ತಾಯ 13:22; ಲೂಕ 8:14; ಯೆರೆಮೀಯ 4:3, 4.
-