ಬೈಬಲ್ ತನ್ನಲ್ಲಿಯೇ ವಿರೋಧೋಕ್ತಿ ಉಳ್ಳದ್ದೋ?
ಲೇಖಕ ಹೆನ್ರಿ ವಾನ್ ಡೈಕ್ ಒಮ್ಮೆ ಹೀಗೆ ಬರೆದರು: “ಮಧ್ಯಪೂರ್ವದಲ್ಲಿ ಜನಿಸಿ, ಪೌರಸ್ತ್ಯರ ರೂಪ ಮತ್ತು ಶಬ್ದಚಿತ್ರವನ್ನು ಧರಿಸಿಕೊಂಡು, ಬೈಬಲ್ ಲೋಕದ ಎಲ್ಲಾ ಪಥಗಳಲ್ಲಿ ಪರಿಚಿತ ಹೆಜ್ಜೆಯೊಂದಿಗೆ ನಡೆಯುತ್ತದೆ ಮತ್ತು, ಒಂದು ದೇಶದ ನಂತರ ಇನ್ನೊಂದಕ್ಕೆ ಪ್ರವೇಶಿಸುತ್ತದೆ ಮತ್ತು ಎಲ್ಲೆಡೆಗಳಲ್ಲಿ ತನ್ನ ಸ್ವಂತಿಕೆಯನ್ನು ಕಂಡುಹಿಡಿಯುತ್ತದೆ. ಅದು ಮನುಷ್ಯರ ಹೃದಯದೊಡನೆ ನೂರಾರು ಭಾಷೆಗಳಲ್ಲಿ ಮಾತಾಡಲು ಕಲಿತಿದೆ. ಮಕ್ಕಳು ಅದರ ಕಥೆಗಳನ್ನು ವಿಸ್ಮಯದಿಂದ, ಮತ್ತು ಸಂತೋಷದಿಂದ ಕೇಳುತ್ತಾರೆ, ಮತ್ತು ವಿವೇಕಿಗಳು ಅವುಗಳನ್ನು ಜೀವಿತದ ರೂಪಕ ಕಥೆಗಳಾಗಿ ಧ್ಯಾನಿಸುತ್ತಾರೆ. ಅದರ ಎಚ್ಚರಿಕೆಗಳಿಗೆ ದುಷ್ಟರು ಮತ್ತು ಅಹಂಕಾರಿಗಳು ತತ್ತರಿಸುತ್ತಾರೆ, ಆದರೆ ಘಾಸಿಗೊಂಡವರಿಗೆ ಮತ್ತು ಪಶ್ಚಾತ್ತಾಪಿಗಳಿಗೆ ಅದರಲ್ಲಿ ಒಂದು ತಾಯಿಯ ಸರ್ವವಿದೆ. . . . ತನ್ನ ಸ್ವಂತದ್ದಾಗಿ ಈ ನಿಧಿಯಿರುವ ಯಾವನೇ ಮನುಷ್ಯನು ಬಡವನಾಗಿರುವದಿಲ್ಲ ಯಾ ವಿವಿಕ್ತನಾಗಿರುವದಿಲ್ಲ.”
ಬೈಬಲ್ ಖಂಡಿತವಾಗಿಯೂ “ನೂರಾರು ಭಾಷೆಗಳಲ್ಲಿ ಮಾತಾಡಲು ಕಲಿತಿದೆ.” ಅದರ 66 ಪುಸ್ತಕಗಳಲ್ಲಿ ಕಡಿಮೆ ಪಕ್ಷ ಒಂದಾದರೂ 1,970 ರಷ್ಟು ಭಾಷೆಗಳಲ್ಲಿ ತರ್ಜುಮೆಯಾಗಿದೆ. ಲಕ್ಷಾಂತರ ಜನರು ಬೈಬಲ್ ದೇವರ ಒಂದು ವರದಾನವೋ ಎಂಬಂತೆ ವೀಕ್ಷಿಸುತ್ತಾರೆ ಮತ್ತು ಅದನ್ನು ಆನಂದ ಮತ್ತು ಉಪಯುಕ್ತತೆಯಿಂದ ಓದುತ್ತಾರೆ. ಆದಾಗ್ಯೂ, ಅದರಲ್ಲಿ ವಿರೋಧೋಕ್ತಿಗಳು ಇವೆ, ಆದುದರಿಂದ ನಂಬಲರ್ಹವಲ್ಲ ಎಂದು ಇತರರು ಅನ್ನುತ್ತಾರೆ. ಜಾಗರೂಕತೆಯ ಸಂಶೋಧನೆಯು ಏನನ್ನು ಪ್ರಕಟಿಸುತ್ತದೆ?
ನಮ್ಮ ಮುಖಪುಟದ ಚಿತ್ರದಲ್ಲಿ ಸೂಚಿಸಲ್ಪಟ್ಟಂತೆ, ಬೈಬಲನ್ನು ಬರೆಯಲು ದೇವರು ನಂಬಿಗಸ್ತ ಪುರುಷರನ್ನು ಉಪಯೋಗಿಸಿದನು. ನಿಶ್ಚಯವಾಗಿಯೂ, ಬೈಬಲಿನ ಜಾಗ್ರತೆಯ ವಿಶೇಷ್ಲಣವು ತೋರಿಸುವದೇನಂದರೆ ಸುಮಾರು 16 ಶತಕಗಳ ಸಮಯಾವಧಿಯಲ್ಲಿ ಸುಮಾರು 40 ಪುರುಷರುಗಳಿಂದ ಅದು ಬರೆಯಲ್ಪಟ್ಟಿತು. ಅವರು ಕಸುಬಿನ ಬರಹಗಾರರಾಗಿದ್ದರೊ? ಇಲ್ಲ. ಅವರಲ್ಲಿ ಕುರುಬ, ಬೆಸ್ತ, ಸುಂಕ ವಸೂಲಿಗಾರ, ವೈದ್ಯ, ಗುಡಾರಮಾಡುವವ, ಯಾಜಕ, ಪ್ರವಾದಿ, ಮತ್ತು ಅರಸನನ್ನು ಒಬ್ಬನು ಕಂಡುಕೊಳ್ಳಬಹುದು. ಈ 20-ನೆಯ ಶತಮಾನದಲ್ಲಿ ನಮಗೆ ಅಪರಿಚಿತರಾದ ಜನರನ್ನು ಮತ್ತು ಪದ್ಧತಿಗಳನ್ನು ಅವರ ಬರಹಗಳು ಹೆಚ್ಚಾಗಿ ಪ್ರಸ್ತಾಪಿಸುತ್ತವೆ. ವಾಸ್ತವದಲ್ಲಿ, ಅವರೇನು ಬರೆದರೋ ಅದರ ತಾತ್ಪರ್ಯವನ್ನು ಬೈಬಲ್ ಬರಹಗಾರರು ಸ್ವತಃ ಯಾವಾಗಲೂ ಗ್ರಹಿಸಿರಲಿಲ್ಲ. (ದಾನಿಯೇಲ 12:8-10) ಆದುದರಿಂದ ಬೈಬಲನ್ನು ಓದುವಾಗ, ಅರ್ಥೈಸಿಕೊಳ್ಳಲು ಕಷ್ಟವಾಗುವ ನಿರ್ದಿಷ್ಟ ವಿಷಯಗಳನ್ನು ಎದುರಿಸುವುದಾದರೆ ನಾವು ಅಚ್ಚರಿಗೊಳ್ಳಬಾರದು.
ಅಂಥ ಕ್ಲಿಷ್ಟತೆಗಳನ್ನು ಬಗೆಹರಿಸಲು ಸಾಧ್ಯವಿದೆಯೇ? ಬೈಬಲ್ ತನ್ನಲ್ಲಿಯೇ ವಿರೋಧೋಕ್ತಿ ಉಳ್ಳದ್ದೋ? ಕಂಡುಹಿಡಿಯಲು, ನಾವು ಕೆಲವೊಂದು ಉದಾಹರಣೆಗಳನ್ನು ಪರಿಗಣಿಸೋಣ.
ಇವುಗಳು ನಿಜವಾಗಿ ಕ್ಲಿಷ್ಟತೆಗಳಾಗಿವೆಯೇ?
▪ ಕಾಯಿನನು ತನ್ನ ಹೆಂಡತಿಯನ್ನು ಎಲ್ಲಿಂದ ಪಡೆದನು? (ಆದಿಕಾಂಡ 4:17)
ಒಬ್ಬನು ಎಣಿಸಬಹುದೇನಂದರೆ ಹೇಬೆಲನ ಕೊಲೆಯ ನಂತರ, ಭೂಮಿಯ ಮೇಲೆ ಉಳಿದವರೆಂದರೆ ಅವನ ಒಬ್ಬನೇ ಅಪರಾಧಿ ಸಹೋದರ ಕಾಯಿನ ಮತ್ತು ಅವರ ಹೆತ್ತವರು, ಆದಾಮ ಮತ್ತು ಹವ್ವ. ಆದಾಗ್ಯೂ, ಆದಾಮ, ಹವ್ವರಿಗೆ ಒಂದು ದೊಡ್ಡ ಪರಿವಾರವಿತ್ತು. ಆದಿಕಾಂಡ 5:3, 4 ಕ್ಕನುಸಾರ, ಆದಾಮನಿಗೆ ಸೇತನೆಂಬ ಮಗನಿದ್ದನು. ದಾಖಲೆಯು ಕೂಡಿಸುವದು: “ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟು ನೂರು ವರುಷ ಬದುಕಿದನು.” ಹಾಗಾದರೆ, ಕಾಯಿನನು ತನ್ನ ಸಹೋದರಿಯನ್ನು ಯಾ ಸಹೋದರರ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಯಾದನು. ಮಾನವ ಕುಲವು ಆಗ ಮಾನವ ಪರಿಪೂರ್ಣತೆಗೆ ಬಹಳ ಹತ್ತಿರವಾಗಿದ್ದುದರಿಂದ, ಇಂದು ಅಂಥ ಒಂದು ಕೂಡುವಿಕೆಯಿಂದ ಸಂತಾನಕ್ಕೆ ಅಪಾಯತರಬಹುದಾದ ಆರೋಗ್ಯ ಹಾನಿಗಳು ಅಂಥ ಮದುವೆಯನ್ನು ಕೇಡಿಗೆ ಒಡ್ಡಿರಲಿಲ್ಲ ಎಂಬುದು ವ್ಯಕ್ತ.
▪ ಯೋಸೇಫನನ್ನು ಐಗುಪ್ತಕ್ಕೆ ಮಾರಿದವರು ಯಾರು?
ಆದಿಕಾಂಡ 37:27 ಹೇಳುತ್ತದೇನಂದರೆ ಯೋಸೇಫನ ಸಹೋದರರು ಅವನನ್ನು ಕೆಲವು ಇಷ್ಮಾಯೇಲ್ಯರಿಗೆ ಮಾರಲು ನಿರ್ಣಯಿಸಿದ್ದರು. ಆದರೆ ಮುಂದಿನ ವಚನವು ತಿಳಿಸುವದು: “ಅಷ್ಟರಲ್ಲಿ ಮಿದ್ಯಾನ್ಯರಾದ ವರ್ತಕರು ಹಾದು ಹೋಗುತ್ತಿದ್ದರು. ಅವರು [ಯೋಸೇಫನ ಸಹೋದರರು] ಯೋಸೇಫನನ್ನು ಗುಂಡಿಯೊಳಗಿಂದ ಎತ್ತಿ ಆ ಇಷ್ಮಾಯೇಲ್ಯರಿಗೆ ಇಪ್ಪತ್ತು ರೂಪಾಯಿಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಐಗುಪ್ತ ದೇಶಕ್ಕೆ ತೆಗೆದುಕೊಂಡು ಹೋದರು.” ಯೋಸೇಫನನ್ನು ಇಷ್ಮಾಯೇಲ್ಯರಿಗೆ ಮಾರಲಾಯಿತೋ ಅಥವಾ ಮಿದ್ಯಾನ್ಯರಿಗೊ? ಒಳ್ಳೆಯದು, ಮಿದ್ಯಾನ್ಯರನ್ನು ಇಷ್ಮಾಯೇಲ್ಯರೆಂದೂ ಕರೆಯುತ್ತಿದ್ದಿರಬಹುದು, ಅವರ ಪೂರ್ವಜನಾದ ಅಬ್ರಹಾಮನ ಮೂಲಕ ಇವರಿಗೆ ಸಂಬಂಧಿಕರಾಗಿದ್ದರು. ಅಥವಾ, ಇಷ್ಮಾಯೇಲ್ಯರ ಒಂದು ತಂಡದೊಂದಿಗೆ ಮಿದ್ಯಾನ್ಯ ವರ್ತಕರು ಪ್ರಯಾಣಿಸುತಿದ್ದಿರಬಹುದು. ಅಂತೂ, ಯೋಸೇಫನ ಸಹೋದರರು ವಿಕ್ರಯವನ್ನು ಮಾಡಿದರು ಮತ್ತು ಅವನು ಅವರಿಗೆ ಅನಂತರ ಹೀಗೆ ಹೇಳಶಕ್ತನಾದನು: “ಐಗುಪ್ತ ದೇಶಕ್ಕೆ ಸೇರುವಂತೆ ನೀವು ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನೇ ನಾನು.”—ಆದಿಕಾಂಡ 45:4.
▪ ಮೋವಾಬ್ಯ ಸ್ತ್ರೀಯರೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟದ್ದಕ್ಕಾಗಿ ಮತ್ತು ಪೆಗೋರನ ಬಾಳನ ಆರಾಧನೆಯಲ್ಲಿ ತೊಡಗಿದ್ದಕ್ಕಾಗಿ ಸತ್ತ ಇಸ್ರಾಯೇಲ್ಯರು ಎಷ್ಟು?
ಅರಣ್ಯಕಾಂಡ 25:9 ಹೇಳುವದು: “ಆ ವ್ಯಾಧಿಯಿಂದ [ಅವರ ಕೆಟ್ಟ ನಡತೆಗಾಗಿ ದೇವರಿಂದ ಬಂದದ್ದು] ಇಪ್ಪತ್ತನಾಲ್ಕು ಸಾವಿರ ಮಂದಿ ಸತ್ತರು.” ಆದಾಗ್ಯೂ, ಅಪೊಸ್ತಲ ಪೌಲನು ಹೇಳಿದ್ದು: “ಅವರಲ್ಲಿ ಕೆಲವರು [ಅರಣ್ಯದಲ್ಲಿ ಇಸ್ರಾಯೇಲ್ಯರು] ಜಾರತ್ವ ಮಾಡಿ ಇಪ್ಪತ್ತು ಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ.” (1 ಕೊರಿಂಥ 10:8) ಪ್ರಾಯಶಃ ಹತರಾದವರ ಸಂಖ್ಯೆಯು 23,000 ಮತ್ತು 24,000 ರ ನಡುವೆ ಇದ್ದಿರಬೇಕು, ಹೀಗೆ ಇದರಲ್ಲಿ ಯಾವುದೇ ಸಂಖ್ಯೆಯು ತೃಪ್ತಿದಾಯಕವಾಗಿರಬಹುದು. ಇನ್ನೂ, ಅರಣ್ಯಕಾಂಡ ಪುಸ್ತಕವು ವಿಶೇಷವಾಗಿ ಸೂಚಿಸುತ್ತದೇನಂದರೆ ಈ ಪಾಪದಲ್ಲಿ ಒಳಗೂಡಿದ “ಜನರ ಮುಖಂಡರೆಲ್ಲರನ್ನು” ನ್ಯಾಯಾಧಿಪತಿಗಳು ಹತಿಸಿದರು. (ಅರಣ್ಯಕಾಂಡ 25:4, 5) ಈ ಅಪರಾಧಿ “ಮುಖಂಡರುಗಳ” ಸಂಖ್ಯೆಯು 1,000 ವಾಗಿದ್ದಿರಬಹುದು, ಹೀಗೆ ಪೌಲನಿಂದ ತಿಳಿಸಲಾದ 23,000 ಕ್ಕೆ ಕೂಡಿಸಿದಾಗ ಅದು 24,000 ವಾಗುತ್ತದೆ. 23,000 ಮಂದಿ ದೇವರಿಂದ ಬಂದ ವ್ಯಾಧಿಯ ನೇರ ಆಹುತಿಗಳೆಂದು ತೋರಿಬರುವಾಗ, ಎಲ್ಲಾ 24,000 ಮಂದಿ ಯೆಹೋವನ ವ್ಯಾಧಿಯನ್ನು ಅನುಭವಿಸಿದರು, ಯಾಕಂದರೆ ಪ್ರತಿಕೂಲ ನ್ಯಾಯತೀರ್ಪಿನ ಅವನ ವಿಧಿಯ ಕೆಳಗೆ ಅವರಲ್ಲಿ ಪ್ರತಿಯೊಬ್ಬನು ಸತ್ತನು.—ಧರ್ಮೋಪದೇಶಕಾಂಡ 4:3.
▪ ಅಗಾಗನು ಇಸ್ರಾಯೇಲ್ಯ ಅರಸನಾದ ಸೌಲನ ಸಮಕಾಲೀನನಾಗಿದದ್ದರಿಂದ, ಆ ಹೆಸರಿನ ಒಬ್ಬ ಅಮಾಲೇಕ್ಯ ಅಧಿಪತಿಯ ಕುರಿತಾಗಿ ಬಿಳಾಮನ ಬಹಳ ಹಿಂದಿನ ಉಲ್ಲೇಖವು ಒಂದು ಅಸಂಗತತೆಯಲವ್ಲೆ?
ಸುಮಾರು ಸಾ.ಶ.ಪೂ. 1473 ರಲ್ಲಿ, ಬಿಳಾಮನು ಮುಂತಿಳಿಸಿದ್ದೇನಂದರೆ ಇಸ್ರಾಯೇಲಿನ ಒಬ್ಬ ಅರಸನು “ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು.” (ಅರಣ್ಯಕಾಂಡ 24:7) ತದನಂತರ ರಾಜ ಸೌಲನ ಆಳಿಕ್ವೆಯ (ಸಾ.ಶ.ಪೂ. 1117-1078) ತನಕ ಅಗಾಗನ ಕುರಿತಾಗಿ ಯಾವ ಉಲ್ಲೇಖವೂ ಮಾಡಲ್ಪಟ್ಟಿರುವದಿಲ್ಲ. (1 ಸಮುವೇಲ 15:8) ಆದರೆ, ಇದು ಒಂದು ಅಸಂಗತತೆಯಾಗಿರುವದಿಲ್ಲ, ಯಾಕಂದರೆ, ಐಗುಪ್ತದಲ್ಲಿ ಫರೋಹನೆಂದು ಇರುವಂತೆ, “ಅಗಾಗ್” ಎಂಬುದು ಒಂದು ರಾಜ್ಯವೈಭವದ ಬಿರುದು ಆಗಿದ್ದಿರಬಹುದು. ಅಮಾಲೇಕ್ಯ ಅಧಿಪತಿಗಳಿಂದ ಪದೇಪದೇ ಬಳಸಲ್ಪಡುತ್ತಿದ್ದ ವೈಯಕ್ತಿಕ ಹೆಸರಾಗಿಯೂ ಅಗಾಗ್ ಇರುವ ಶಕ್ಯತೆ ಇದೆ.
▪ ದಾವೀದನು ಇಸ್ರಾಯೇಲ್ಯರ ಖಾನೇಷುಮಾರಿಯನ್ನು ಮಾಡುವಂತೆ ಕಾರಣನಾದವನು ಯಾರು?
ಎರಡನೆಯ ಸಮುವೇಲ 24:1 ತಿಳಿಸುವದು: “ಯೆಹೋವನು ತಿರಿಗಿ ಇಸ್ರಾಯೇಲ್ಯರ ಮೇಲೆ ಕೋಪಗೊಂಡು ದಾವೀದನು ಇಸ್ರಾಯೇಲ್ ಯೆಹೂದ ಕುಲಗಳವರ ಖಾನೇಷುಮಾರಿ ಮಾಡುವದಕ್ಕೆ ಪ್ರೇರೇಪಿಸಿದನು.” ಆದರೆ ರಾಜ ದಾವೀದನು ಪಾಪ ಮಾಡುವಂತೆ ಪ್ರೇರೇಪಿಸಿದವನು ಯೆಹೋವನಲ್ಲ, ಏಕೆಂದರೆ 1 ಪೂರ್ವಕಾಲವೃತ್ತಾಂತ 21:1 ಹೇಳುವದು: “ಸೈತಾನನು ಇಸ್ರಾಯೇಲ್ಯರಿಗೆ ವಿರೋಧವಾಗಿ ಎದ್ದು ಇಸ್ರಾಯೇಲ್ಯರ ಖಾನೇಷುಮಾರಿ ಮಾಡುವದಕ್ಕೆ ದಾವೀದನನ್ನು ಪ್ರೇರಿಸಿದನು.” ದೇವರು ಇಸ್ರಾಯೇಲ್ಯರೊಂದಿಗೆ ಅಸಮಾಧಾನಗೊಂಡಿದ್ದನು. ಮತ್ತು ಈ ಕಾರಣದಿಂದ ಪಿಶಾಚನಾದ ಸೈತಾನನು ಅವರ ಮೇಲೆ ಈ ಪಾಪವನ್ನು ತರಲು ಅನುಮತಿಸಿದನು. ಈ ಕಾರಣಕ್ಕಾಗಿ, 2 ಸಮುವೇಲ 24:1, ದೇವರು ತಾನೇ ಅದನ್ನು ಮಾಡಿದಂತೆ ತೋರಿಸುತ್ತದೆ. ಆಸಕ್ತಿಕರವಾಗಿ, ಜೋಸೆಫ್ ಬಿ. ರೊಥರ್ಹಾಮ್ ಭಾಷಾಂತರವು ಹೀಗೆ ಓದುತ್ತದೆ: “ಯಾಹೇಯ್ವ ಕೋಪವು ಇಸ್ರಾಯೇಲ್ಯರ ವಿರುದ್ಧ ಉರಿಯತೊಡಗಿತು, ಆದುದರಿಂದ ಅವರ ವಿರುದ್ಧಹೋಗುವಂತೆ, ‘ಹೋಗು ಇಸ್ರಾಯೇಲ್ಯರ ಮತ್ತು ಯೆಹೂದ್ಯರ ಜನಗಣತಿ ಮಾಡು’ ಎಂದು ಹೇಳುವದರ ಮೂಲಕ ದಾವೀದನನ್ನು ಬಾಧಿಸಿದನು.”
▪ ದಾವೀದನ ಖಾನೇಷುಮಾರಿಯಲ್ಲಿ ಕೊಡಲ್ಪಟ್ಟಿರುವ ಇಸ್ರಾಯೇಲ್ಯರ ಮತ್ತು ಯೆಹೂದ್ಯರ ಭಿನ್ನ ಸಂಖ್ಯೆಗಳನ್ನು ಒಬ್ಬನು ಹೇಗೆ ಹೊಂದಿಸಿಕೊಳ್ಳಬಹುದು?
ಎರಡನೆಯ ಸಮುವೇಲ 24:9 ರಲ್ಲಿ ಇಸ್ರಾಯೇಲ್ಯರ ಸಂಖ್ಯೆಯು 8,00,000 ಮತ್ತು ಯೆಹೂದ್ಯರ ಸಂಖ್ಯೆಯು 5,00,000 ವಾಗಿದ್ದರೆ, 1 ಪೂರ್ವಕಾಲವೃತ್ತಾಂತ 21:5 ರಲ್ಲಿ ಇಸ್ರಾಯೇಲ್ಯ ಸೈನಿಕರ ಸಂಖ್ಯೆಯು 11,00,000 ಮತ್ತು ಯೂದಾಯದವರ ಸಂಖ್ಯೆಯು 4,70,000 ಆಗಿದೆ. ರಾಜನ ಸೇವೆಯಲ್ಲಿ ಕ್ರಮವಾಗಿ ಭರ್ತಿಯಾಗಿರುವವರಲ್ಲಿ 2,88,000 ಸೈನಿಕರಿದ್ದು, ಅವರನ್ನು 24,000 ದ 12 ದಳಗಳಾಗಿ ವಿಭಾಗಿಸಲಾಗಿತ್ತು, ಪ್ರತಿಯೊಂದು ದಳ ವರ್ಷದಲ್ಲಿ ಒಂದು ತಿಂಗಳು ಸೇವೆ ನಡಿಸುತ್ತಿತ್ತು. ಇದಕ್ಕೆ ಕೂಡಿಸಿ, ಕುಲಗಳ 12 ರಾಜಕುವರರ 12,000 ಪರಿಚಾರಕರು ಇದ್ದರು, ಹೀಗೆ ಜುಮ್ಲಾ ಸಂಖ್ಯೆಯು 3,00,000 ಆಗುತ್ತಿತ್ತು. 1 ಪೂರ್ವಕಾಲ 21:5 ರ 11,00,000 ದಲ್ಲಿ ಪ್ರಾಯಶಃ ಈಗಾಗಲೇ ಭರ್ತಿಯಾಗಿರುವ ಈ 3,00,000 ಸೇರಿದಿರ್ದಬಹುದು, ಆದರೆ 2 ಸಮುವೇಲ 24:9 ಇದನ್ನು ಸೇರಿಸಿಲ್ಲ. (ಅರಣ್ಯಕಾಂಡ 1:16; ಧರ್ಮೋಪದೇಶಕಾಂಡ 1:15; 1 ಪೂರ್ವಕಾಲವೃತ್ತಾಂತ 27:1-22) ಯೆಹೂದದ ಕುರಿತಾಗಿ 2 ಸಮುವೇಲ 24:9 ರಲ್ಲಿ ಪ್ರಾಯಶಃ ಫಿಲಿಷ್ಟಿಯರ ಸರಹದ್ದಿನಲ್ಲಿ ಇಡಲ್ಪಟ್ಟಿದ್ದ ಅವಲೋಕನಾ ಸೇನೆಯ 30,000 ಪುರುಷರನ್ನು ಸೇರಿಸಿರಬಹುದು, ಆದರೆ ಈ ಸಂಖ್ಯೆಯು 1 ಪೂರ್ವಕಾಲವೃತ್ತಾಂತ 21:5 ರಲ್ಲಿ ಸೇರದೆ ಇದ್ದಿರಬೇಕು. (2 ಸಮುವೇಲ 6:1) ಎರಡನೆಯ ಸಮುವೇಲ ಮತ್ತು 1 ಪೂರ್ವಕಾಲವೃತ್ತಾಂತಗಳು ಭಿನ್ನವಾದ ನೋಟ ಮತ್ತು ಧ್ಯೇಯಗಳಿದ್ದ ಇಬ್ಬರು ಪುರುಷರಿಂದ ಬರೆಯಲ್ಪಟ್ಟಿದೆ ಎಂಬುದನ್ನು ನೆನಪಿನಲ್ಲಿಡುವದಾದರೆ, ನಾವು ಸುಲಭವಾಗಿಯೇ ಸಂಖ್ಯೆಗಳನ್ನು ಹೊಂದಿಸಿಕೊಳ್ಳಬಹುದಾಗಿದೆ.
▪ ಶೆಯಲೀಯ್ತೇಲನ ತಂದೆ ಯಾರಾಗಿದ್ದನು?
ಶೆಯಲೀಯ್ತೇಲನ ಮಾಂಸಿಕ ತಂದೆ ಯೆಕೊನ್ಯ (ಅರಸನಾದ ಯೆಹೋಯಾಕೀನನು) ಎಂದು ಕೆಲವು ನಿರ್ದಿಷ್ಟ ವಚನಗಳು ಸೂಚಿಸುತ್ತವೆ. (1 ಪೂರ್ವಕಾಲವೃತ್ತಾಂತ 3:16-18; ಮತ್ತಾಯ 1:12) ಆದರೆ ಸುವಾರ್ತೆಯ ಲೇಖಕನಾದ ಲೂಕನು ಶೆಯಲೀಯ್ತೇಲನನ್ನು “ನೇರಿಯ ಮಗನು” ಎಂದು ಕರೆದಿದ್ದಾನೆ. (ಲೂಕ 3:27) ನೇರಿಯು ತನ್ನ ಮಗಳನ್ನು ಶೆಯಲೀಯ್ತೇಲನಿಗೆ ಹೆಂಡತಿಯಾಗಿ ಕೊಟ್ಟನು ಎಂದು ತೋರುತ್ತದೆ. ಇಬ್ರಿಯರು ಅಳಿಯನನ್ನು, ವಿಶೇಷವಾಗಿ ವಂಶಾವಳಿಯ ಪಟ್ಟಿಮಾಡುವಿಕೆಯಲ್ಲಿ, ಸಾಮಾನ್ಯವಾಗಿ ಒಬ್ಬ ಮಗನೋಪಾದಿ ಸೂಚಿಸುತ್ತಿದ್ದುದರಿಂದ, ಲೂಕನು ಶೆಯಲೀಯ್ತೇಲನನ್ನು ನೇರಿಯ ಮಗನೆಂದು ಯೋಗ್ಯವಾಗಿಯೇ ಕರೆಯ ಸಾಧ್ಯವಿದೆ. ತದ್ರೀತಿಯಲ್ಲಿ, ಲೂಕನು ಯೋಸೇಫನನ್ನು ಹೇಲೀಯ ಮಗನೆಂದು ಸೂಚಿಸುತ್ತಾನಾದರೂ, ಹೇಲೀಯು ವಾಸ್ತವದಲ್ಲಿ ಯೋಸೇಫನ ಹೆಂಡತಿಯಾದ ಮರಿಯಳ ತಂದೆಯಾಗಿದ್ದನು.—ಲೂಕ 3:23.
ಯೇಸುವು ಒಳಗೂಡಿರುವ ವಚನಗಳನ್ನು ಹೊಂದಿಸುವದು
▪ ಬಹಳ ಹಂದಿಗಳ ಹಿಂಡನ್ನು ಸೇರಿಕೊಂಡ ದೆವ್ವಗಳನ್ನು ಯೇಸು ಕ್ರಿಸ್ತನು ಎಷ್ಟು ಮನುಷ್ಯರಿಂದ ಬಿಡಿಸಿದ್ದನು?
ಸುವಾರ್ತೆಯ ಬರಹಗಾರನಾದ ಮತ್ತಾಯನು ಇಬ್ಬರು ಪುರುಷರೆಂದು ಹೇಳುವಾಗ, ಮಾರ್ಕ ಮತ್ತು ಲೂಕ ಕೇವಲ ಒಬ್ಬನನ್ನು ಸೂಚಿಸುತ್ತಾರೆ. (ಮತ್ತಾಯ 8:28; ಮಾರ್ಕ 5:2; ಲೂಕ 8:27) ಮಾರ್ಕ ಮತ್ತು ಲೂಕರು ದೆವ್ವ ಹಿಡಿದ ಕೇವಲ ಒಬ್ಬ ಪುರುಷನ ಕುರಿತು ಗಮನ ಸೆಳೆಯುತ್ತಾರೆ ಯಾಕಂದರೆ ಯೇಸುವು ಅವನೊಡನೆ ಮಾತಾಡಿದ್ದನು ಮತ್ತು ಅವನ ವಿದ್ಯಮಾನವು ಹೆಚ್ಚು ಎದ್ದುಕಾಣುವಂಥದ್ದು ಎಂದು ವಿದಿತವಾಗುತ್ತದೆ. ಬಹುಶಃ ಆ ಮನುಷ್ಯನು ಹೆಚ್ಚು ಉಗ್ರತೆಯವನಾಗಿದ್ದನು ಯಾ ದೆವ್ವದ ಹತೋಟಿಯ ಕೆಳಗೆ ಹೆಚ್ಚು ದೀರ್ಘಕಾಲ ಬಾಧಿತನಾಗಿದ್ದನು. ಅನಂತರ, ಪ್ರಾಯಶಃ ಕೇವಲ ಆ ಒಬ್ಬ ಮನುಷ್ಯನು ಮಾತ್ರವೇ ಯೇಸುವಿನೊಂದಿಗೆ ಇರಲು ಬಯಸಿರಬಹುದು. (ಮಾರ್ಕ 5:18-20) ಹೆಚ್ಚುಕಡಿಮೆ ಅದಕ್ಕೆ ಸಮಾನಾಂತರವಾಗಿರುವ ಸನ್ನಿವೇಶವೊಂದರಲ್ಲಿ, ಯೇಸುವಿನಿಂದ ವಾಸಿಮಾಡಲ್ಪಟ್ಟಿದ್ದ ಇಬ್ಬರು ಕುರುಡರ ಕುರಿತು ಮತ್ತಾಯನು ಮಾತಾಡುವಾಗ, ಮಾರ್ಕ ಮತ್ತು ಲೂಕ ಕೇವಲ ಒಬ್ಬನ ಕುರಿತು ಉಲ್ಲೇಖಿಸುತ್ತಾರೆ. (ಮತ್ತಾಯ 20:29-34; ಮಾರ್ಕ 10:46; ಲೂಕ 18:35) ಇದು ಪ್ರತಿಷೇಧವಾಗಿಲ್ಲ, ಯಾಕಂದರೆ ಕಡಿಮೆ ಪಕ್ಷ ಅಲ್ಲಿ ಒಬ್ಬ ಅಂಥ ಮನುಷ್ಯನಾದರೂ ಇದ್ದನು.
▪ ಅವನ ಮರಣದ ದಿನ ಯಾವ ಬಣ್ಣದ ಉಡುಪನ್ನು ಯೇಸು ಧರಿಸಿದ್ದನು?
ಮಾರ್ಕ (15:17) ಮತ್ತು ಯೋಹಾನ (19:2) ನಿಗನುಸಾರ, ಕೆಂಪು (ಪರ್ಪಲ್, ಕೆನ್ನೀಲಿ, NW ) ಒಲ್ಲಿಯನ್ನು ಸಿಪಾಯಿಗಳು ಯೇಸುವಿನ ಮೇಲೆ ಹೊದಿಸಿದರು. ಆದರೆ ಮತ್ತಾಯನು (27:28) “ಕೆಂಪು ಒಲ್ಲಿಯನ್ನು” (ಸ್ಕಾರ್ಲೆಟ್, ಕಡುಕೆಂಪು, NW ) ಎಂದು ಅದನ್ನು ಕರೆಯುವುದರ ಮೂಲಕ ಅದರ ಕೆಂಪು ವರ್ಣದ ಮೇಲೆ ಒತ್ತನ್ನು ಹಾಕಿದ್ದಾನೆ. ಯಾವುದೇ ಕೆನ್ನೀಲಿ (ಪರ್ಪಲ್) ಬಣ್ಣದಲ್ಲಿ ಕೆಂಪು ಮತ್ತು ನೀಲಿ ಘಟಕಗಳು ಸೇರಿರುವದರಿಂದ, ಮಾರ್ಕ ಮತ್ತು ಯೋಹಾನರು ಉಡುಪಿನಲ್ಲಿ ಕೆಂಪು ರಂಗು ಇತ್ತೆಂಬುದನ್ನು ಒಪ್ಪುತ್ತಾರೆ. ಬೆಳಕಿನ ಪ್ರತಿಫಲನ ಮತ್ತು ಹಿನ್ನೆಲೆಯು ಉಡುಪಿಗೆ ಭಿನ್ನವಾದ ವಿನ್ಯಾಸವನ್ನು ಕೊಡಸಾಧ್ಯವಿರುವದರಿಂದ, ಮತ್ತು ಸುವಾರ್ತೆಯ ಲೇಖಕರು ತಮಗೆ ಯಾ ಯಾರಿಂದ ಅವರು ಸಮಾಚಾರವನ್ನು ಪಡೆದರೋ ಅವರಿಗೆ ಹೆಚ್ಚು ಅಧಿಕವೆಂದು ತೋರಿರುವ ಬಣ್ಣವನ್ನು ಉಲ್ಲೇಖಿಸಿರುತ್ತಾರೆ. ಅಲ್ಪವಾದ ವೈವಿಧ್ಯತೆಯು ಲೇಖಕರ ವೈಯಕ್ತಿಕತೆಯನ್ನು ತೋರಿಸುತ್ತದೆ ಮತ್ತು ಅಲ್ಲಿ ಒಳಸಂಚೇನೂ ಇರಲಿಲ್ಲವೆಂದು ಸಾಬೀತುಪಡಿಸುತ್ತದೆ.
▪ ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಹೋದವರು ಯಾರು?
ಯೋಹಾನನು (19:17) ಹೇಳುವದು: “ಆತನು ತನ್ನ ಶಿಲುಬೆಯನ್ನು ತಾನೇ [ಯೇಸು] ಹೊತ್ತುಕೊಂಡು ಕಪಾಲಸ್ಥಳವೆಂಬ ಸ್ಥಾನಕ್ಕೆ ಹೋದನು. ಇದಕ್ಕೆ ಇಬ್ರಿಯ ಮಾತಿನಲ್ಲಿ ಗೊಲ್ಗೊಥಾ ಎಂದು ಹೆಸರು.” ಆದರೆ ಮತ್ತಾಯ (27:32), ಮಾರ್ಕ (15:21), ಮತ್ತು ಲೂಕ (23:26) ಹೇಳುವದೇನಂದರೆ ‘ಅವರು ಆತನನ್ನು ತೆಗೆದುಕೊಂಡು ಹೋಗುತ್ತಿರುವಾಗ ಹೊಲದಿಂದ ಬರುತ್ತಿದ್ದ ಕುರೇನೆಪಟ್ಟಣದ ಸೀಮೋನನೆಂಬವನನ್ನು ಆತನ ಶಿಲುಬೆಯನ್ನು ಹೊರುವದಕ್ಕೆ ಬಿಟ್ಟೀಹಿಡಿದರು.’ ಯೋಹಾನನು ಹೇಳಿದಂತೆ, ಯೇಸುವು ತನ್ನ ಶಿಲುಬೆಯನ್ನು ಹೊತ್ತುಕೊಂಡುಹೋದನು. ಆದಾಗ್ಯೂ, ಅವನ ಸಂಕ್ಷಿಪ್ತ ರೀತಿಯ ದಾಖಲೆಯಲ್ಲಿ, ಶಿಲುಬೆಯನ್ನು ಹೊರಲು ಅನಂತರ ಸೀಮೋನನನ್ನು ಬಿಟ್ಟೀಹಿಡಿದ ವಿಚಾರವನ್ನು ಯೋಹಾನನು ಕೂಡಿಸಲಿಲ್ಲ. ಆದುದರಿಂದ, ಸುವಾರ್ತೆಯ ದಾಖಲೆಗಳು ಈ ವಿಷಯದಲ್ಲಿ ಸಹಮತದಲ್ಲಿವೆ.
▪ ಇಸ್ಕರಿಯೋತ ಯೂದನು ಸತ್ತದ್ದು ಹೇಗೆ?
ಮತ್ತಾಯ 27:5 ರಲ್ಲಿ ಯೂದನು ಸ್ವತಃ ಉರ್ಲುಹಾಕಿ ಸತ್ತನು ಎಂದು ಹೇಳಿರುವಾಗ, “ತಲೆಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು” ಎಂದು ಅ.ಕೃತ್ಯಗಳು 1:18 ಹೇಳುತ್ತದೆ. ಮತ್ತಾಯನು ಯತ್ನೈಸಿದ ಆತ್ಮಹತ್ಯ ವಿಧಾನದೊಂದಿಗೆ ವ್ಯವಹರಿಸುತ್ತಾನೆಂದು ತೋರುವಾಗ, ಅ.ಕೃತ್ಯಗಳು ಫಲಿತಾಂಶಗಳನ್ನು ವರ್ಣಿಸುತ್ತದೆ. ಮರವೊಂದರ ಕೊಂಬೆಗೆ ಯೂದನು ಪ್ರಾಯಶಃ ಹಗ್ಗವೊಂದನ್ನು ಕಟ್ಟಿ, ಉರುಳಿನ ಸರಿಕುಣಿಕೆಯನ್ನು ತನ್ನ ಕೊರಳಿನ ಸುತ್ತಲೂ ಹಾಕಿ, ಬಂಡೆಯ ಕಡಿದಾದ ಮುಖದಿಂದ ಹಾರಿ ಸ್ವತಃ ತನ್ನನ್ನು ನೇತಾಡಿಸಿಕೊಳ್ಳಲು ಪ್ರಯತ್ನಿಸಿದ್ದನು. ಹಗ್ಗವೊ ಯಾ ಮರದ ಕೊಂಬೆಯೊ ತುಂಡಾದುದರಿಂದ ಅವನು ಕೆಳಮುಖವಾಗಿ ಬಿದ್ದಿರಬೇಕು ಮತ್ತು ಕೆಳಗಿರುವ ಬಂಡೆಗಳ ಮೇಲೆ ಬಿದ್ದು ಕರುಳುಗಳೆಲ್ಲಾ ಹೊರಬಿದ್ದಿರಬೇಕು. ಯೆರೂಸಲೇಮಿನ ಸುತ್ತಲಿನ ಪ್ರದೇಶದ ಲಕ್ಷಣಗಳು ಅಂಥ ಒಂದು ತೀರ್ಮಾನಕ್ಕೆ ಬರುವದನ್ನು ತಾರ್ಕಿಕವಾಗಿ ಮಾಡುತ್ತವೆ.
ನೀವು ವಿಷಯಗಳನ್ನು ಹೇಗೆ ವೀಕ್ಷಿಸುವಿರಿ?
ಬೈಬಲಿನಲ್ಲಿ ಅಸಂಬದ್ಧವೆಂದು ತೋರುವದನ್ನು ನಾವು ಎದುರಿಸಿದಾಗ, ಜನರು ಹೆಚ್ಚಾಗಿ ಹೇಳುವ ವಿಷಯಗಳು ವಿರೋಧೋಕ್ತಿಗಳಾಗಿ ತೋರುತ್ತವೆಯಾದರೂ, ಅವುಗಳನ್ನು ಸುಲಭವಾಗಿ ವಿವರಿಸಬಹುದು ಯಾ ಅರ್ಥೈಸಬಹುದು ಎಂದು ಅರಿಯುವದು ಒಳ್ಳೆಯದು. ಉದಾಹರಣೆಗೆ, ವ್ಯಾಪಾರಿಯೊಬ್ಬನು ತನ್ನ ಸೆಕ್ರಿಟರಿಗೆ ಕಾಗದವನ್ನು ಬರೆಯಲು ನಿರ್ದೇಶಿಸುವದರ ಮೂಲಕ ಯಾರಾದರೊಂದಿಗೆ ವ್ಯವಹರಿಸಬಹುದು. ಪ್ರಶ್ನಿಸಲ್ಪಟ್ಟಲ್ಲಿ, ಅವನು ಒಂದು ಕಾಗದವನ್ನು ಕಳುಹಿಸಿದ್ದವನು ತಾನೆಂದು ಅವನನ್ನಬಹುದು. ಆದರೆ ಅವನ ಸೆಕ್ರಿಟರಿಯು ಕಾಗದವನ್ನು ಟೈಪ್ಮಾಡಿ, ಅಂಚೆಯಲ್ಲಿ ಹಾಕಿದರ್ದಿಂದ, ಅದನ್ನು ಕಳುಹಿಸಿದ್ದು ತಾನು ಎಂದು ಅವಳು ಹೇಳಬಹುದು. ತದ್ರೀತಿಯಲ್ಲಿ ಮತ್ತಾಯನು (8:5) ಯೇಸುವಿನಿಂದ ಒಂದು ಅನುಗ್ರಹವನ್ನು ಪಡೆಯಲು ಒಬ್ಬ ಶತಾಧಿಪತಿಯು ಬಂದನು ಎಂದು ಹೇಳುವದು ಮತ್ತು ಲೂಕನು (7:2, 3) ಆ ಮನುಷ್ಯನು ಪ್ರತಿನಿಧಿಗಳನ್ನು ಕಳುಹಿಸಿದನು ಎಂದು ಹೇಳುವದು ವಿರೋಧೋಕ್ತಿಯಲ್ಲ.
ಬೈಬಲಿನ ಅಭ್ಯಂತರಗಳನ್ನು ಪರಿಹರಿಸಸಾಧ್ಯವಿದೆ ಎಂದು ಮೇಲಿನ ಉದಾಹರಣೆಗಳು ತೋರಿಸುತ್ತವೆ. ಆದಕಾರಣ, ಶಾಸ್ತ್ರವಚನಗಳ ಕಡೆಗೆ ಸಕಾರಾತ್ಮಕ ಮನೋಭಾವವನ್ನು ಇಡಲು ಸಕಾರಣವಿದೆ. ಒಂದು 1876 ನೆಯ ವರ್ಷದಲ್ಲಿ ಪ್ರಕಾಶಿತಗೊಂಡ ಕೌಟುಂಬಿಕ ಬೈಬಲ್ನಲ್ಲಿ ತೋರಿಬರುವ ಈ ಮಾತುಗಳಲ್ಲಿ ಅಂಥ ಆತ್ಮವನ್ನು ಶಿಫಾರಸುಮಾಡಲಾಗಿದೆ:
“ಈ ಕ್ಲಿಷ್ಟತೆಗಳನ್ನು ವ್ಯವಹರಿಸುವ ಯೋಗ್ಯವಾದ ಆತ್ಮವು ಯಾವುದೆಂದರೆ ವ್ಯಾವಹಾರ್ಯವಾಗಿರುವಷ್ಟು ಅವುಗಳನ್ನು ನಿವಾರಿಸುವದು, ಮತ್ತು ಅದರಿಂದ ಪ್ರತಿಯೊಂದು ಅಸ್ಪಷ್ಟತೆಯನ್ನು ದೂರಸರಿಸಲು ಸಾಧ್ಯವಿಲ್ಲದಿರುವಾಗಲೂ ಕೂಡ, ಸತ್ಯಕ್ಕೆ ಅಂಟಿಕೊಂಡಿರುವದು ಮತ್ತು ಅಧೀನರಾಗುವದು. ಕ್ರಿಸ್ತನನ್ನು ತ್ಯಜಿಸಲು ಯಾವುದನ್ನು ಶಿಷ್ಯರಲ್ಲಿ ಕೆಲವರು ‘ಕಠಿಣವಾದ ಮಾತು,’ ಎಂದು ಕರೆದು ನೊಂದವರಾದರೋ ಅಂಥ ಪ್ರತಿಯೊಂದು ಅಭ್ಯಂತರವನ್ನು ಇದರ ಮೂಲಕ ನಿಶ್ಶಬಗ್ದೊಳಿಸಿದ ಆ ಅಪೊಸ್ತಲರ ಉದಾಹರಣೆಯನ್ನು ನಾವು ಅನುಕರಿಸತಕ್ಕದ್ದು: ‘ಸ್ವಾಮೀ, ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ಕ್ರಿಸ್ತನು, ಜೀವಂತ ದೇವರ ಮಗನು ಎಂದು ನಮಗೆ ಖಂಡಿತವಾಗಿ ಗೊತ್ತಿದೆ.‘ . . . ಒಂದು ಸತ್ಯವು ಇನ್ನೊಂದು ಸತ್ಯದೊಂದಿಗೆ ಅಸಂಗತವಾಗಿದೆ ಎಂದು ಭಾಸವಾಗುತ್ತಿರುವದನ್ನು ನಾವು ನೋಡುವಾಗ, ನಾವದನ್ನು ಸಮನ್ವಯಗೊಳಿಸಲು ಪ್ರಯತ್ನಿಸೋಣ ಮತ್ತು ಹೀಗೆ ಎಲ್ಲವುಗಳಲ್ಲಿ ಸಮನ್ವಯಗೊಂಡಿವೆ ಎಂದು ಅವುಗಳನ್ನು ತೋರಿಸೋಣ.”—ಯೋಹಾನ 6:60-69.
ನೀವು ಅಂಥ ಒಂದು ಸ್ಥಾನವನ್ನು ತಕ್ಕೊಳ್ಳುವಿರೊ? ಶಾಸ್ತ್ರವಚನಗಳ ಸಾಮರಸ್ಯವನ್ನು ಪ್ರದರ್ಶಿಸುವ ಕೇವಲ ಕೆಲವೇ ಉದಾಹರಣೆಗಳನ್ನು ಪರೀಕ್ಷಿಸಿದ ನಂತರ, ಕೀರ್ತನೆಗಾರನು ದೇವರಿಗೆ ಹೇಳಿರುವದರೊಂದಿಗೆ ನೀವು ಒಪ್ಪುವಿರಿ ಎಂದು ನಿರೀಕ್ಷಿಸಲಾಗಿದೆ: “ನಿನ್ನ ವಾಕ್ಯದ ಸಾರಾಂಶವು ಸತ್ಯವೇ.” (ಕೀರ್ತನೆ 119:160) ಸಮಗ್ರ ಬೈಬಲಿನ ಆ ನೋಟವನ್ನು ಯೆಹೋವನ ಸಾಕ್ಷಿಗಳು ತಕ್ಕೊಳ್ಳುತ್ತಾರೆ ಮತ್ತು ಅದರ ಮೇಲಿನ ಅವರ ನಂಬಿಕೆಗೆ ಕಾರಣಗಳನ್ನು ಸಂತೋಷದಿಂದ ಕೊಡುತ್ತಾರೆ. ಈ ಅತುಲ್ಯವಾದ ಪುಸ್ತಕವನ್ನು ಅವರೊಂದಿಗೆ ಯಾಕೆ ಚರ್ಚಿಸಬಾರದು? ಅದರ ಹುರಿದುಂಬಿಸುವ ಸಂದೇಶವು ನಿಜ ನಿರೀಕ್ಷೆ ಮತ್ತು ಸಂತೋಷದಿಂದ ನಿಮ್ಮನ್ನು ಕೂಡ ತುಂಬಿಸಲೂಬಹುದು.
[ಪುಟ 7 ರಲ್ಲಿರುವ ಚಿತ್ರ]
ಬೈಬಲಿನಲ್ಲಿ ನಂಬಿಕೆ ಯಾಕೆ ಇದೆ ಎಂದು ಯೆಹೋವನ ಸಾಕ್ಷಿಗಳನ್ನು ನೀವು ಕೇಳಿದ್ದೀರೊ?